Tag: Abhay Singh

  • ಐಐಟಿ ಬಾಬಾ ಜೈಪುರದಲ್ಲಿ ಅರೆಸ್ಟ್‌

    ಐಐಟಿ ಬಾಬಾ ಜೈಪುರದಲ್ಲಿ ಅರೆಸ್ಟ್‌

    ಜೈಪುರ: ಪ್ರಯಾಗ್‌ರಾಜ್‌ ಕುಂಭಮೇಳದ ಸಮಯದಲ್ಲಿ ಐಐಟಿ ಬಾಬಾ (IIT Baba) ಎಂದೇ ಪ್ರಸಿದ್ಧಿಪಡೆದ 35 ವರ್ಷದ ಅಭಯ್ ಸಿಂಗ್ (Abhay Singh) ಅವರನ್ನು ಜೈಪುರ ಪೊಲೀಸರು (Jaipur Police) ಬಂಧಿಸಿದ್ದಾರೆ.

    ಜೈಪುರ ನಗರ (ದಕ್ಷಿಣ) ಉಪ ಪೊಲೀಸ್ ಆಯುಕ್ತ ದಿಗಂತ್ ಆನಂದ್ ಪ್ರತಿಕ್ರಿಯಿಸಿ, ಶಿಪ್ರಾ ಪಥ್ ಪೊಲೀಸ್ ಠಾಣೆಗೆ ನಿಯಂತ್ರಣ ಕೊಠಡಿಗೆ ಅಭಯ್ ಸಿಂಗ್ ಎಂಬ ವ್ಯಕ್ತಿ ಪಾರ್ಕ್ ಕ್ಲಾಸಿಕ್ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂಬ ಕರೆ ಬಂದಿತ್ತು.

    ಮಾಹಿತಿಯನ್ನು ಪರಿಶೀಲಿಸಲು ಪೊಲೀಸರು ಸ್ಥಳ ತಲುಪಿದಾಗ ಹರಿಯಾಣದ ಝಜ್ಜರ್ ನಿವಾಸಿ ಅಭಯ್ ಸಿಂಗ್ ಸ್ಥಳದಲ್ಲಿ ಇರುವುದನ್ನು ನೋಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ `ಐಐಟಿ ಬಾಬಾ’ – ಏರೋಸ್ಪೇಸ್ ಎಂಜಿನಿಯರಿಂಗ್ ಪದವಿ ಪಡೆದವ ಈಗ ಸಾಧು

    ಪೊಲೀಸ್ ನಿಯಂತ್ರಣ ಕೊಠಡಿಗೆ ನೀಡಿದ ಮಾಹಿತಿಯ ಬಗ್ಗೆ ಕೇಳಿದಾಗ, ಆ ವ್ಯಕ್ತಿ ತನ್ನ ಬಳಿ ಇದ್ದ ಗಾಂಜಾ ಪ್ಯಾಕೆಟ್ ಅನ್ನು ಹೊರತೆಗೆದಿದ್ದಾನೆ. ನಾನು ಗಾಂಜಾ ಸೇವಿಸಿದ್ದೇನೆ ಮತ್ತು ನಾನು ಗಾಂಜಾ ಪ್ರಭಾವದಲ್ಲಿ ಯಾವುದೇ ಮಾಹಿತಿ ನೀಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಸಿಂಗ್‌ ಬಳಿ 1.50 ಗ್ರಾಂ ತೂಕದ ಗಾಂಜಾ ಪ್ಯಾಕೆಟ್ ಪತ್ತೆಯಾಗಿದ್ದು, ಅದನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಸ್ಥಳದಲ್ಲೇ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಪ್ರಮಾಣ ಕಡಿಮೆ ಇದ್ದ ಕಾರಣ ಅಭಯ್ ಸಿಂಗ್ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಅಭಯ್ ಸಿಂಗ್ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

     

  • ಸುಳ್ಳಾಯ್ತು ಐಐಟಿ ಬಾಬಾ ಭವಿಷ್ಯ – ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

    ಸುಳ್ಳಾಯ್ತು ಐಐಟಿ ಬಾಬಾ ಭವಿಷ್ಯ – ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

    ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ ಫೇಮಸ್ ಆಗಿದ್ದ ಐಐಟಿ ಬಾಬಾ (IIT Baba) ಹೇಳಿದ್ದ ಭಾರತ- ಪಾಕಿಸ್ತಾನ ಪಂದ್ಯದ ಫಲಿತಾಂಶ ಇದೀಗ ಉಲ್ಟಾ ಆಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತವನ್ನು (Team India) ಸೋಲಿಸಲಿದೆ. ಇದೇ ನಿಜ ಎಂದು ಅವರು ಭವಿಷ್ಯ ನುಡಿದಿದ್ದರು. ಅವರ ಈ ಹೇಳಿಕೆ ವೈರಲ್ ಆಗಿತ್ತು. ಆದರೀಗ ಅವರ ಭವಿಷ್ಯವಾಣಿ ಸಂಪೂರ್ಣ ಸುಳ್ಳಾಗಿದೆ.

    ಹೀಗಾಗಿ ಅವರು ಮತ್ತೆ ಗೂಗಲ್ ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಹಿಮಾಚಲದಲ್ಲಿ ಶೇ.100, ಹರಿಯಾಣದಲ್ಲಿ ಶೇ.73 ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 71 ರಷ್ಟು ಅವರ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಆಗಿದೆ. ಇದನ್ನೂ ಓದಿ: ಪಾಕ್‌ ತಂಡದ ನಸೀಮ್‌ ಷಾ ಶೂ ಲೇಸ್‌ ಕಟ್ಟಿದ ಕಿಂಗ್‌ ಕೊಹ್ಲಿ – ವಿರಾಟ್‌ ಸರಳತೆಗೆ ಸಲಾಂ ಹೊಡೆದ ಫ್ಯಾನ್ಸ್‌

    ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 6 ವಿಕೆಟ್ ಗಳಿಂದ ಭರ್ಜರಿಯಾಗಿ ಬಗ್ಗು ಬಡಿದಿದೆ. ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದ ರಮ್‌ ಮಿಷಿನ್‌ ವಿರಾಟ್ ಕೊಹ್ಲಿ ಅವರು ಶತಕ ಬಾರಿಸುವ ಮೂಲಕ ಮತ್ತೊಮ್ಮೆ ತಮ್ಮ ಫಾರ್ಮ್‌ ಪ್ರದರ್ಶಿಸಿದ್ದಾರೆ. ಇದೀಗ ನೆಟ್ಟಿಗರು ಐಐಟಿ ಬಾಬಾ ನ ಭವಿಷ್ಯದ ಬಗ್ಗೆ ಅಪಹಾಸ್ಯ ಮಾಡಲು ಪ್ರಾರಂಭಿಸಿದ್ದಾರೆ.

    ಯಾರು ಐಐಟಿ ಬಾಬಾ?
    ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಕುಂಭಮೇಳದಲ್ಲಿ ಅಚ್ಚರಿಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದ ಸನ್ಯಾಸಿಯೇ ಐಐಟಿ ಬಾಬಾ. ಅವರ ನಿಜನಾಮಧೇಯ ಅಭಯ್ ಸಿಂಗ್. ಅವರು ಬಾಂಬೆ ಐಐಟಿ ಪದವೀಧರ ಎಂಬುದಾಗಿ ತಿಳಿಸಿದ್ದರು. ಮಾತ್ರವಲ್ಲದೇ ಕೆನಡಾದಲ್ಲಿ ದೊಡ್ಡ ವೇತನ ಪಡೆಯತ್ತಿದ್ದರು. ಆದರೆ ಆಧ್ಯಾತ್ಮಿಕ ಸಾಧನೆಗಾಗಿ ಅವರು ಹೈ ಪ್ರೊಫೈಲ್ ಜಾಬ್ ಅನ್ನು ತೊರೆದು ಬಂದುದಾಗಿ ಹೇಳಿದ್ದರು. ಇದರಿಂದಾಗಿ ಅವರು ಭಾರತಾದ್ಯಂತ ಹೆಸರುವಾಸಿಯಾಗಿದ್ದರು. ಅವರು ಮಾತನಾಡುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಈತ್ತೀಚೆಗೆ ಜುನಾ ಅಖಾಡದಲ್ಲಿದ್ದ ಅವರನ್ನು ದುರ್ನಡೆಯ ಆಧಾರದಲ್ಲಿ ಹೊರಹಾಕಲಾಗಿತ್ತು. ಆ ಬಳಿಕ ಅವರು ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡರು. ಇದನ್ನೂ ಓದಿ: ಶಹಬ್ಬಾಶ್ ಹುಡುಗ್ರಾ: ಪಾಕ್‌ ವಿರುದ್ಧ ಗೆದ್ದ ಟೀಂ ಇಂಡಿಯಾಗೆ ಡಿಕೆಶಿ ಅಭಿನಂದನೆ

    ಇಂಡೋ ಪಾಕ್‌ ಕದನದ ಬಗ್ಗೆ ಹೇಳಿದ್ದೇನು?
    ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆ ಐಐಟಿ ಬಾಬಾ ಅವರನ್ನು ಭಾರತ vs ಪಾಕಿಸ್ತಾನ ಪಂದ್ಯದ ಫಲಿತಾಂಶಧ ಬಗ್ಗೆ ಪ್ರಶ್ನಿಸಿದಾಗ ಈ ಬಾರಿ ಭಾರತ ಗೆಲ್ಲುವುದಿಲ್ಲ, ಪಾಕಿಸ್ತಾನವೇ ಗೆಲ್ಲುತ್ತದೆ ಎಂದು ತಿಳಿಸಿದ್ದರು. ಈ ಬಗ್ಗೆ ಇತ್ತೀಚೆಗೆ ಮತ್ತೆ ಪ್ರಶ್ನಿಸಿದಾಗಲೂ ನಾನು ನಿಮಗೆ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಈ ಬಾರಿ ಗೆಲ್ಲುವುದಿಲ್ಲ ಎಂದು. ಭಾರತೀಯ ಕ್ರಿಕೆಟ್ ಆಭಿಮಾನಿಗಳಿಗೆ ಈ ಹೇಳಿಕೆಯಿಂದ ಅಕ್ಷರಶಃ ಆಘಾತ ಆಗಿತ್ತು. ಏಕೆಂದರೆ 2024ರ ಟಿ20 ವಿಶ್ವಕಪ್ ವೇಳೆ ಅವರು ಹೇಳಿದ್ದ ಭವಿಷ್ಯವಾಣಿ ನಿಜವಾಗಿತ್ತು. ಹೀಗಾಗಿಯೇ ಅವರು ಈ ಬಾರಿಯೂ ಹೇಳಿದ ಭವಿಷ್ಯವಾಣಿ ನಿಜವಾಗಲಿದೆ ಎಂದು ಅನೇಕರು ನಂಬಿದ್ದರು.

    https://youtu.be/9aRZwimkiN0?si=W_AUfa8XZH-ogl2y

    ಆದ್ರೆ ಭವಿಷ್ಯಕ್ಕೆ ಸೆಡ್ಡು ಹೊಡೆದ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದೆ.