Tag: Abdul Razak

  • ನಾಯಿ ಸ್ವಲ್ಪ ಟಚ್‌ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ, ಅಂತಹದ್ದರಲ್ಲಿ ಮಾಂಸ ತರೋಕಾಗುತ್ತಾ? – ಅಬ್ದುಲ್‌ ರಜಾಕ್‌

    ನಾಯಿ ಸ್ವಲ್ಪ ಟಚ್‌ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ, ಅಂತಹದ್ದರಲ್ಲಿ ಮಾಂಸ ತರೋಕಾಗುತ್ತಾ? – ಅಬ್ದುಲ್‌ ರಜಾಕ್‌

    ಬೆಂಗಳೂರು: ನಾವು ನಾಯಿಯನ್ನೇ ಮುಟ್ಟಲ್ಲ, ನಾಯಿ ಸ್ವಲ್ಪ ಟಚ್‌ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ. ಸ್ನಾನ ಮಾಡಿಕೊಂಡು ಹೋಗ್ತೀವಿ ಅಂತಹದ್ದರಲ್ಲಿ ನಾಯಿ ಮಾಂಸ (Dog Meat) ತಂದು ತಿನ್ನಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ ಎಂದು ಮುಸ್ಲಿಂ ಮುಖಂಡ ಅಬ್ದುಲ್‌ ರಜಾಕ್‌ (Abdul Razak) ಆಕ್ರೋಶ ಹೊರಹಾಕಿದ್ದಾರೆ.

    ರಾಜಸ್ಥಾನದ ಜೈಪುರದಿಂದ (Rajasthan Jaipur) ಬೆಂಗಳೂರಿಗೆ ಬಂದ 90 ಬಾಕ್ಸ್‌ಗಳಲ್ಲಿ ನಾಯಿ ಮಾಂಸ ತರಲಾಗಿದೆ. ಜೊತೆಗೆ ಬೆಂಗಳೂರಿನ ಹೋಟೆಲ್‌ಗಳಿಗೆ ನಾಯಿ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಮುಸ್ಲಿಂ ಮುಖಂಡ ಅಬ್ದುಲ್‌ ರಜಾಕ್‌ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಂದು ಶಾಕ್‌ – ಬಸ್‌ ಪ್ರಯಾಣ ದರ ಹೆಚ್ಚಿಸಲು KSRTCಯಿಂದ ಪ್ರಸ್ತಾವನೆ ಸಲ್ಲಿಕೆ

    ಎರಡು ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತೆ. ಇವತ್ತು 2,000 ಕೆಜಿ ಮಾಂಸ ಬಂದಿದೆ. 10-12 ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿದೆ. ರಾಜಸ್ಥಾನದ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ, ಅದನ್ನ ನಾಯಿ ಅನ್ನುತ್ತಿದ್ದಾರೆ. ಈ ವ್ಯವಹಾರವನ್ನ ನಂಬಿಕೊಂಡು ಸಾವಿರಾರು ಜನ ಜೀವನ ನಡೆಸುತ್ತಿದ್ದಾರೆ. ಪುನೀತ್‌ ಕೆರೆಹಳ್ಳಿ ರೋಲ್‌ಕಾಲ್‌ ಸಿಗಲಿಲ್ಲ ಅಂತ ಈ ರೀತಿ ಆರೋಪ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಿಜೆಪಿ ಶಾಸಕರಿಗೆ ಅನುದಾನ ಕೊಟ್ಟಿಲ್ಲ: ಎಸ್.ಆರ್.ವಿಶ್ವನಾಥ್

    ಶಶಿ, ರಿಜ್ವಾನ್‌, ಹಿಲಾಲ್‌ ಅನ್ನುವವರು ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಹಿಂದೆ ಬಿದ್ದಿದ್ದರು. ಮಾಂಸ ಸಾಗಿಸುತ್ತಿರುವ ವಿಚಾರವನ್ನ ಪುನೀತ್‌ ಕೆರೆಹಳ್ಳಿಗೆ ತಿಳಿಸಿ, ರೋಲ್‌ಕಾಲ್‌ ಮಾಡೋದಕ್ಕೆ ಮುಂದಾಗಿದ್ದರು. ಈ ಬಗ್ಗೆ ನಾನು ಕಳೆದ ಜೂನ್‌ 26ರಂದೇ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದೆ, ಎನ್‌ಸಿಆರ್‌ ಕೂಡ ಆಗಿದೆ. ನಮಗೆ ಹಿಂಸೆ ಕೊಡ್ತಿದ್ದಾರೆ ಅಂತಾ ಪೊಲೀಸರಿಗೆ ದೂರಿನ ಮೂಲಕ ತಿಳಿಸಿದ್ದೆ. ನಾವು ರೋಲ್‌ಕಾಲ್‌ಗೆ ಆಸ್ಪದ ನೀಡದೇ ಇದ್ದಿದ್ದರಿಂದ ಕುರಿ ಮಾಂಸವನ್ನು ನಾಯಿ ಮಾಂಸ ಅಂತ ಸುಳ್ಳು ಹಬ್ಬಿಸಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ – ಆಹಾರ ಸುರಕ್ಷತಾ ಅಧಿಕಾರಿಗಳಿಂದ ಸ್ಯಾಂಪಲ್ಸ್‌ ಸಂಗ್ರಹ

    ಬೆಂಗಳೂರಲ್ಲಿ ಸುಮಾರು 2 ಕೋಟಿ ಜನ ವಾಸ ಮಾಡ್ತಿದ್ದಾರೆ. ನಮ್ಮ ಬಳಿಕ 2 ಸ್ಲಾಟ್‌ಗಳಿವೆ. ಸುಮಾರು 3 ಸಾವಿರ ಛತ್ರಗಳಿಗೆ ಪ್ರತಿದಿನ ಮಾಂಸ ಬೇಕು. ನಾವು ಎಷ್ಟು ಪೂರೈಸಿದರೂ ಸಾಕಾಗಲ್ಲ. ಅದಕ್ಕಾಗಿ ರಾಜಸ್ಥಾನದ ಜೈಪುರದಿಂದ ಮಾಂಸ ತರಿಸುತ್ತಿದ್ದೇವೆ. ಅಲ್ಲಿನ ಕುರಿಗಳಿಗೆ ಬಾಲ ಉದ್ದವಾಗಿಯೇ ಇರುತ್ತದೆ. ನಾವು ನಾಯಿಯನ್ನೇ ಮುಟ್ಟಲ್ಲ. ಅಪ್ಪಿ ತಪ್ಪಿ ಸ್ವಲ್ಪ ನಾಯಿ ಟಚ್‌ ಆದ್ರೂ ಮಸೀದಿ ಒಳಕ್ಕೇ ಹೋಗಲ್ಲ. ಸ್ನಾನ ಮಾಡಿ, ಬಟ್ಟೆ ಬದಲಿಸಿ ಆಮೇಲೆ ಮಸೀದಿಗೆ ಹೋಗ್ತೀವಿ. ಅಂತಹದ್ದರಲ್ಲಿ ನಾಯಿ ಮಾಂಸ ತಿನ್ನಿಸುತ್ತಿದ್ದಾರೆ ಅಂತ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಈ ವ್ಯವಹಾರವನ್ನು ಸುಮಾರು 20 ಜನ ನಿರ್ವಹಿಸುತ್ತಿದ್ದಾರೆ. ನಾನು ಡಿಸ್ಟ್ರಿಬ್ಯೂಟರ್‌ ಬರುವ ಮಾಂಸವನ್ನ ನಾನು ಆಯಾ ಮಾಲೀಕರಿಗೆ ಡಿಸ್ಟ್ರಿಬ್ಯೂಟ್‌ ಮಾಡ್ತೀನಿ. ರಾಜಸ್ಥಾನದಿಂದ ತರಿಸಿದ್ದ ಮಾಂಸವನ್ನ ಸಂಪೂರ್ಣ ಐಸ್‌ನಲ್ಲಿ ಇಡಲಾಗಿತ್ತು. ಆದ್ರೆ ರೋಲ್‌ಕಾಲ್‌ ಸಿಗಲಿಲ್ಲ ಅಂತ ಇಲ್ಲಿ ಬಂದು ಗಲಾಟೆ ಮಾಡಿದ್ದಾರೆ. ಪುನೀತ್‌ ಕೆರೆಹಳ್ಳಿ ಅಧಿಕಾರಿಯೂ ಅಲ್ಲ. ಈಗ ಅಧಿಕಾರಿಗಳು ಕೇಳಿದ ಪ್ರಶ್ನೆಗೆಲ್ಲಾ ಉತ್ತರ ಕೊಟ್ಟಿದ್ದೇವೆ. ಅಗತ್ಯ ದಾಖಲಾತಿಗಳನ್ನೂ ತೋರಿಸಿದ್ದೇವೆ. ಲ್ಯಾಬ್‌ ವರದಿ ಬಂದ ಬಳಿಕ ಪುನೀತ್‌ ಕೆರೆಹಳ್ಳಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.

  • ಒಬ್ಬ ಹೇಡಿ ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನು ವಿರೋಧಿಸುವುದು ಸರಿಯಲ್ಲ: ಅಬ್ದುಲ್ ರಜಾಕ್

    ಒಬ್ಬ ಹೇಡಿ ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನು ವಿರೋಧಿಸುವುದು ಸರಿಯಲ್ಲ: ಅಬ್ದುಲ್ ರಜಾಕ್

    ಬೆಂಗಳೂರು: ಒಬ್ಬ ಹೇಡಿ ಮಾಡಿದ ಕೃತ್ಯದಿಂದ ಇಡೀ ಸಮುದಾಯವನ್ನು ವಿರೋಧಿಸುವುದು ಸರಿಯಲ್ಲ. ನಮ್ಮ ಧರ್ಮದಲ್ಲಿ ಇಂತಹ ಕೃತ್ಯ ಮಾಡಿ ಎಂದು ಎಲ್ಲಿಯೂ ಹೇಳಿಲ್ಲ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಹೇಳಿಕೆ ನೀಡಿದ್ದಾರೆ.

    ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದ ಟೈಲರ್‌ನನ್ನು ಬರ್ಬರವಾಗಿ ಹತ್ಯೆಗೈದ ಘಟನೆಗೆ ಜನರು ಮುಸ್ಲಿಂ ಸಮುದಾಯವನ್ನು ದೂಷಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ ರಜಾಕ್, ಈ ಕೃತ್ಯ ಮಾಡಿದವರು ಹೇಡಿಗಳು. ಇವರ ಹಿಂದೆ ಯಾರೋ ಇದ್ದಾರೆ. ಎಲ್ಲಾ ಮುಗಿದು ಸಮಾಧಾನವಾಗಿದ್ದ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದೆ ಎಂದು ಹೇಳಿದರು. ಇದನ್ನೂ ಓದಿ: ನೂಪುರ್‌ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಮುಸ್ಲಿಂ ಯುವಕರಿಂದ ಟೈಲರ್‌ ಶಿರಚ್ಛೇದ

    ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಅವರ ಹಿಂದೆ ಯಾರೋ ಇದ್ದಾರೆ ಎನ್ನುವುದು ಸತ್ಯ. ಘಟನೆ ಬಗ್ಗೆ ಸರ್ಕಾರ ತಕ್ಷಣ ತನಿಖೆ ನಡೆಸಿ, ಅವರನ್ನು ಗಲ್ಲಿಗೇರಿಸಬೇಕು. ನೂಪುರ್ ಶರ್ಮಾರನ್ನು ಕೂಡಾ ಬಿಡದೇ ಬಂಧಿಸಬೇಕು. ಅವರನ್ನೂ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಘಟನೆಗಳಿಂದ ಒಂದೇ ಸಮುದಾಯವನ್ನು ಟಾರ್ಗೆಟ್ ಮಾಡಬೇಡಿ ಎಂದು ಅಬ್ದುಲ್ ರಜಾಕ್ ಮನವಿ ಮಾಡಿಕೊಂಡರು. ಇದನ್ನೂ ಓದಿ: ಟೈಲರ್‌ ಶಿರಚ್ಛೇದನ ಮಾಡಿದ ಮುಸ್ಲಿಂ ಯುವಕರು ಕೆಲವೇ ಗಂಟೆಗಳಲ್ಲಿ ಅರೆಸ್ಟ್‌

    Live Tv

  • ಮುಸ್ಲಿಂ ದೇಶಗಳ ಪೆಟ್ರೋಲ್ ಡೀಸೆಲ್ ಬಳಸಬೇಡಿ, ಗೋಮೂತ್ರ ಹಾಕ್ಕೊಂಡು ವಾಹನ ಓಡಿಸಿ: ಅಬ್ದುಲ್ ರಜಾಕ್ ಕಿಡಿ

    ಮುಸ್ಲಿಂ ದೇಶಗಳ ಪೆಟ್ರೋಲ್ ಡೀಸೆಲ್ ಬಳಸಬೇಡಿ, ಗೋಮೂತ್ರ ಹಾಕ್ಕೊಂಡು ವಾಹನ ಓಡಿಸಿ: ಅಬ್ದುಲ್ ರಜಾಕ್ ಕಿಡಿ

    ಬೆಂಗಳೂರು: ಮುಸ್ಲಿಂ ಅರಬ್ ದೇಶಗಳ ಪೆಟ್ರೋಲ್ ಬಳಸಬೇಡಿ. ಬದಲಿಗೆ ಗೋಮೂತ್ರ ಹಾಕಿಕೊಂಡು ವಾಹನ ಓಡಿಸಿಕೊಂಡು ಹೋಗಿ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಕಿಡಿಯಾಗಿದ್ದಾರೆ.

    ದೇವಾಲಯಗಳಿಗೆ ತೆರಳುವ ಹಿಂದೂಗಳು ಹಿಂದೂ ಚಾಲಕರ ವಾಹನಗಳನ್ನು ಬಳಸಬೇಕು ಎಂಬ ಅಭಿಯಾನಕ್ಕೆ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದರು.

    ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂದೂ-ಮುಸ್ಲಿಂ ವಿವಾದದ ಕುರಿತಾಗಿ ಸಿಡಿದೆದ್ದ ರಜಾಕ್ ಕರ್ನಾಟಕ ಎಲ್ಲಿಗೆ ಹೋಗುತ್ತಿದೆ? ಮುಸ್ಲಿಮರಿಗೆ ನೆಮ್ಮದಿಯಿಂದ ರಂಜಾನ್ ಆಚರಿಸಲು ಬಿಡಿ. ದಿನಬೆಳಗಾದಂತೆ ಟೆನ್ಶನ್ ಕೊಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

    ಹಿಂದೂ-ಮುಸ್ಲಿಂ ಎಂದು ವಿವಾದ ಎಬ್ಬಿಸುತ್ತಿರುವವರ ಬಾಯಿ ಮುಚ್ಚಿಸಬೇಕು. ಇವರಿಗೆಲ್ಲ ಬುದ್ದಿ ಇಲ್ವಾ? ಇದರಿಂದಾಗಿ ಕರ್ನಾಟಕದ ಆರ್ಥಿಕ ಸ್ಥಿತಿ ಕುಸಿತವಾಗುತ್ತಿದೆ. ಶ್ರೀಲಂಕಾದಲ್ಲಿ ಆಗುತ್ತಿರುವ ಸ್ಥಿತಿ ಎಂದಿಗೂ ಕರ್ನಾಟಕಕ್ಕೆ ಬರಬಾರದೆಂದು ಬೇಡಿಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ

    ಇಷ್ಟೆಲ್ಲಾ ರಾಜ್ಯದಲ್ಲಿ ನಡೆಯುತ್ತಿದ್ದರೂ ಸಿಎಂ ಏನು ಮಾಡುತ್ತಿದ್ದಾರೆ? ರಾಜ್ಯದ ಅಭಿವೃದ್ಧಿಗೆ ಇದೆಲ್ಲ ಮಾರಕವಾಗುತ್ತಿದೆ. ಈ ವಿಚಾರದಲ್ಲಿ ಕರ್ನಾಟಕಕ್ಕೆ 5 ಪೈಸೆ ಲಾಭ ಇಲ್ಲ. ಹೀಗೇ ಆದರೆ ಐಟಿ ಬಿಟಿಯವರು ಓಡಿ ಹೋಗುತ್ತಾರೆ. ಸರ್ಕಾರ ಹಿಂದೂ ಜನರ ವಾಹನಕ್ಕೆ ಕೇಸರಿ ಹಾಗೂ ಮುಸ್ಲಿಮರಿಗೆ ಹಸಿರು ನಂಬರ್ ಪ್ಲೇಟ್ ಹಾಕಲಿ ಎಂದು ಆಕ್ರೋಶ ಹೊರ ಹಾಕಿದರು.