Tag: abdul nasser madani

  • ಅನಾರೋಗ್ಯ ಪೀಡಿತ ತಂದೆ ನೋಡಲು ಹೋಗಿ ಅನಾರೋಗ್ಯಕ್ಕೀಡಾದ ಮದನಿ

    ಅನಾರೋಗ್ಯ ಪೀಡಿತ ತಂದೆ ನೋಡಲು ಹೋಗಿ ಅನಾರೋಗ್ಯಕ್ಕೀಡಾದ ಮದನಿ

    ಬೆಂಗಳೂರು: ಪಿಪಲ್ಸ್‌ ಡೆಮಾಕ್ರಟಿಕ್ ಪಾರ್ಟಿ (PDP) ಅಧ್ಯಕ್ಷ, 2008ರ ಬೆಂಗಳೂರು ಸರಣಿ ಬಾಂಬ್ (2008 Bengaluru Serial Blasts) ಸ್ಪೋಟದ ಆರೋಪಿ ಅಬ್ದುಲ್ ನಾಸೀರ್ ಮದನಿ (Abdul Nasser Madani) ತಂದೆ ಭೇಟಿಗೆ ತೆರಳಿ ವಾಪಸ್ ಆಗಿದ್ದಾನೆ. ಅನಾರೋಗ್ಯ ಪೀಡಿತ ತಂದೆ ನೋಡಲು ಕೇರಳಕ್ಕೆ ಹೋಗಿ ತಾನೇ ಅನಾರೋಗ್ಯಕ್ಕೀಡಾಗಿದ್ದಾನೆ.

    ಸುಪ್ರೀಂ ಕೋರ್ಟ್‌ನಿಂದ (Supreme Court) ಪೆರೋಲ್‌ ಪಡೆದು ಜೂನ್‌ 26ರಂದು ಮದನಿ ಕೇರಳಕ್ಕೆ ತೆರಳಿದ್ದ. ಕೇರಳ ತಲುಪಿದ್ದ ಬಳಿಕ ಮದನಿಯ ಬಿಪಿ ಜಾಸ್ತಿಯಾಗಿ ಅಸ್ವಸ್ಥನಾಗಿದ್ದ. ನಂತರ ಕೇರಳ ಆಸ್ಪತ್ರೆಗೆ ದಾಖಲಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ತಂದೆ ವಾಸವಿದ್ದ ಸುಮಾರು 30 ಕಿ.ಮೀ. ದೂರದ ಊರಿನಲ್ಲಿ ಮದನಿ ಆಸ್ಪತ್ರೆಗೆ ದಾಖಲಾಗಿದ್ದ.

    ಜುಲೈ 7 ರವರೆಗೆ ಮದನಿ ಕೇರಳದಲ್ಲಿ (Kerala) ಇರಬೇಕಿತ್ತು. ಆರೋಗ್ಯ ಕೈಕೊಟ್ಟ ಹಿನ್ನೆಲೆಯಲ್ಲಿ ತಂದೆಯನ್ನು ಮದನಿಗೆ ನೋಡಲು ಸಾಧ್ಯವಾಗಲಿಲ್ಲ. ಜುಲೈ ಏಳರವರೆಗೂ ಅಸ್ಪತ್ರೆಯಲ್ಲೇ ಇದ್ದ ಮದನಿಯ ಗಡುವು ಅಂತ್ಯವಾದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಬೆಂಗಳೂರಿಗೆ ವಾಪಸ್ ಕರೆತರಲಾಗಿದೆ. 12 ದಿನದ ಸಿಬ್ಬಂದಿ ಖರ್ಚು ವೆಚ್ಚ ಹಾಗೂ ಸರ್ವೀಸ್ ಶುಲ್ಕಕ್ಕಾಗಿ 6,76,101 ರೂ. ಹಣವನ್ನು ಮದನಿ ಪಾವತಿಸಿದ್ದ.  ಇದನ್ನೂ ಓದಿ: ಜೈನ ಮುನಿ ಹತ್ಯೆ ಹಿಂದೆ ಐಸಿಸ್‌ ಚಿತಾವಣೆಯಿದೆ – ಶಾಸಕ ಸಿದ್ದು ಸವದಿ

    ತಂದೆಯ ಅನಾರೋಗ್ಯದ ನಿಮಿತ್ತ ಕೇರಳಕ್ಕೆ ತೆರಳಲು ಅನುಮತಿ ನೀಡುವಂತೆ ಮದನಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದ. ಈ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್‌ ಕೇರಳಕ್ಕೆ ತೆರಳಲು ಏಪ್ರಿಲ್‌ 17 ರಂದು ಅನುಮತಿ ನೀಡಿತ್ತು. ಸುಪ್ರೀಂ ಕೋರ್ಟ್‌ 3 ತಿಂಗಳ ಅನುಮತಿ ನೀಡಿದ್ದರೂ ಬೊಮ್ಮಾಯಿ ಸರ್ಕಾರ ಒಂದು ತಿಂಗಳಿಗೆ ಭದ್ರತಾ ವೆಚ್ಚವಾಗಿ 60 ಲಕ್ಷ ರೂ ಪಾವತಿಸಬೇಕೆಂದು ಷರತ್ತು ವಿಧಿಸಿತ್ತು.

    ಈ ಶುಲ್ಕ ದುಬಾರಿಯಾಗಿದೆ. ಈ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಕೋರಿ ವಕೀಲ ಕಪಿಲ್‌ ಸಿಬಲ್‌ ಸುಪ್ರೀಂನಲ್ಲಿ ಮನವಿ ಮಾಡಿದ್ದರು. ಮದನಿ ತೆರಳುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳುವ ಸಲುವಾಗಿ ಕೇರಳ ಪೊಲೀಸರಿಗೆ (Kerala Police) ಕರ್ನಾಟಕ ಪೊಲೀಸರು ಮಾಹಿತಿ ರವಾನೆ ಮಾಡಿದ್ದರು.

     

    ಅಬ್ದುಲ್‌ ಮದನಿಯನ್ನು ಅಭಿಮಾನಿಗಳು ಸ್ವಾಗತಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಭಾರೀ ಟೀಕೆ ವ್ಯಕ್ತವಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದು ಕೇರಳಕ್ಕೆ ತೆರಳಲಿದ್ದಾನೆ ಬೆಂಗಳೂರು ಬಾಂಬ್‌ ಸ್ಫೋಟದ ಆರೋಪಿ ಮದನಿ

    ಇಂದು ಕೇರಳಕ್ಕೆ ತೆರಳಲಿದ್ದಾನೆ ಬೆಂಗಳೂರು ಬಾಂಬ್‌ ಸ್ಫೋಟದ ಆರೋಪಿ ಮದನಿ

    ಬೆಂಗಳೂರು: ಪಿಪಲ್ಸ್‌ ಡೆಮಾಕ್ರಟಿಕ್ ಪಾರ್ಟಿ (PDP) ಅಧ್ಯಕ್ಷ, 2008ರ ಬೆಂಗಳೂರು ಸರಣಿ ಬಾಂಬ್ (2008 Bengaluru Serial Blasts) ಸ್ಪೋಟದ ಆರೋಪಿ ಅಬ್ದುಲ್ ನಾಸೀರ್ ಮದನಿ (Abdul Nasser Madani) ಇಂದು ಸಂಜೆ ಕೊಚ್ಚಿನ್‌ಗೆ ಪ್ರಯಾಣ ಬೆಳೆಸಲಿದ್ದಾನೆ.

    ಪೊಲೀಸ್ ಬಂದೋಬಸ್ತ್‌ನಲ್ಲಿ ಇಂದು ಸಂಜೆ ಸಂಜೆ 6:15 ರ ವಿಮಾನದಲ್ಲಿ ಪ್ರಯಾಣ ಬೆಳೆಸಿ ರಾತ್ರಿ 7:20ಕ್ಕೆ ಮದನಿ ಕೊಚ್ಚಿನ್‌ ತಲುಪಲಿದ್ದಾನೆ. ಮದನಿ ಜೊತೆ ಹೆಂಡತಿ ಮತ್ತು ಇತರರು ಪ್ರಯಾಣ ಬೆಳೆಸಲಿದ್ದಾರೆ.

    ಕೊಚ್ಚಿನ್‌ಗೆ ತೆರಳಿದ ಬಳಿಕ ಕೊಲ್ಲಂ ಜಿಲ್ಲೆಯ ಅನ್ವರ್ ಸಿರಿ ಸಸ್ತುಂಮಕುಟ ಎಂಬಲ್ಲಿಗೆ ಮದನಿ ತೆರಳಲಿದ್ದಾನೆ. ಮದನಿ ಭದ್ರತೆಗೆ ಓರ್ವ ಆರ್‌ಎಸ್ಐ, ಮೂವರು ಪಿಸಿಗಳು, ಒಬ್ಬ ಚಾಲಕನನ್ನು ನಿಯೋಜನೆ ಮಾಡಲಾಗಿದೆ.

     

    12 ದಿನದ ಸಿಬ್ಬಂದಿ ಖರ್ಚು ವೆಚ್ಚ ಹಾಗೂ ಸರ್ವೀಸ್ ಶುಲ್ಕಕ್ಕಾಗಿ 6,76,101 ರೂ. ಹಣವನ್ನು ಮದನಿ ಈಗಾಗಲೇ ಕರ್ನಾಟಕ ಪೊಲೀಸ್‌ಗೆ ಪಾವತಿ ಮಾಡಿದ್ದಾನೆ. ಇಂದು ಸೇರಿ 12 ದಿನ ಮದನಿ ಕೇರಳದಲ್ಲಿ ವಾಸ್ತವ್ಯ ಇದ್ದು ಜುಲೈ 7 ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾನೆ. ಇದನ್ನೂ ಓದಿ: ವಿದೇಶ ಪ್ರವಾಸದಿಂದ ವಾಪಸ್ಸಾಗ್ತಿದ್ದಂತೆ ಮೋದಿ ಮಹತ್ವದ ಸಭೆ

    ತಂದೆಯ ಅನಾರೋಗ್ಯದ ನಿಮಿತ್ತ ಕೇರಳಕ್ಕೆ ತೆರಳಲು ಅನುಮತಿ ನೀಡುವಂತೆ ಮದನಿ ಸುಪ್ರೀಂ ಕೋರ್ಟ್‌ಗೆ (Supreme Court) ಮನವಿ ಮಾಡಿದ್ದ. ಈ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್‌ ಕೇರಳಕ್ಕೆ ತೆರಳಲು ಏಪ್ರಿಲ್‌ 17 ರಂದು ಅನುಮತಿ ನೀಡಿತ್ತು. ಸುಪ್ರೀಂ ಕೋರ್ಟ್‌ 3 ತಿಂಗಳ ಅನುಮತಿ ನೀಡಿದ್ದರೂ ಬೊಮ್ಮಾಯಿ ಸರ್ಕಾರ ಒಂದು ತಿಂಗಳಿಗೆ ಭದ್ರತಾ ವೆಚ್ಚವಾಗಿ 60 ಲಕ್ಷ ರೂ ಪಾವತಿಸಬೇಕೆಂದು ಷರತ್ತು ವಿಧಿಸಿತ್ತು.

     

    ಈ ಶುಲ್ಕ ದುಬಾರಿಯಾಗಿದೆ. ಈ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಕೋರಿ ವಕೀಲ ಕಪಿಲ್‌ ಸಿಬಲ್‌ ಸುಪ್ರೀಂನಲ್ಲಿ ಮನವಿ ಮಾಡಿದ್ದರು. ಮದನಿ ತೆರಳುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳುವ ಸಲುವಾಗಿ ಕೇರಳ ಪೊಲೀಸರಿಗೆ (Kerala Police) ಕರ್ನಾಟಕ ಪೊಲೀಸರು ಮಾಹಿತಿ ರವಾನೆ ಮಾಡಿದ್ದಾರೆ.

    ಮದನಿ ತೆರಳುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳುವ ಸಲುವಾಗಿ ಕೇರಳ ಪೊಲೀಸರಿಗೆ (Kerala Police) ಕರ್ನಾಟಕ ಪೊಲೀಸರು ಮಾಹಿತಿ ರವಾನೆ ಮಾಡಿದ್ದಾರೆ.

  • ಅಬ್ದುಲ್ ನಾಸಿರ್ ಮದನಿ ಕೇರಳಕ್ಕೆ ತೆರಳಲು ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್

    ಅಬ್ದುಲ್ ನಾಸಿರ್ ಮದನಿ ಕೇರಳಕ್ಕೆ ತೆರಳಲು ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್

    ನವದೆಹಲಿ: ಕೇರಳಕ್ಕೆ ತೆರಳಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಆರೋಪಿ ಅಬ್ದುಲ್ ನಾಸಿರ್ ಮದನಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್ ನೇತೃತ್ವದ ದ್ವಿ ಸದಸ್ಯ ಪೀಠ ಕೇರಳ ತೆರಳಲು ಅನುಮತಿ ನೀಡಲು ನಿರಾಕರಿಸಿತು.

    ಅಬ್ದುಲ್ ನಾಸಿರ್ ಮದನಿ ಆರೋಗ್ಯ ಹದಗೆಟ್ಟಿದ್ದು ಚಿಕಿತ್ಸೆಗೋಸ್ಕರ ಕೇರಳಕ್ಕೆ ಹೋಗಲು ಅನುಮತಿ ನೀಡಬೇಕು ಎಂದು ವಕೀಲ ಪ್ರಶಾಂತ್ ಭೂಷಣ್ ವಾದಿಸಿದರು. ಕೇರಳದಲ್ಲಿ ಆರ್ಯುವೇದಿಕ್ ಚಿಕಿತ್ಸೆ ಕೊಡಿಸಬೇಕಿದೆ, ಈ ಚಿಕಿತ್ಸೆ ಬೆಂಗಳೂರಿನಲ್ಲಿ ಲಭ್ಯವಿಲ್ಲ ಅಲ್ಲದೇ ಕಳೆದ ಏಳು ವರ್ಷಗಳಿಂದ ಬಾಡಿಗೆ ಪಾವತಿಸಿ ಬೆಂಗಳೂರಿನಲ್ಲಿದ್ದು ಅವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಹಿಂದೆ ಸುಪ್ರೀಂಕೋರ್ಟ್ ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಸಲು ಸೂಚನೆ ನೀಡಿತ್ತು ಆದರೆ ಏಳು ವರ್ಷವಾದರೂ ಪ್ರಕರಣ ವಿಚಾರಣೆ ಅಂತ್ಯವಾಗಿಲ್ಲ. ಈಗಾಗಲೇ ಸಾಕ್ಷ್ಯಧಾರಗಳ ಹೇಳಿಕೆಯನ್ನು ಪಡೆಯಲಾಗಿದ್ದು ಕೇರಳಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ವಾದಿಸಿದರು. ಇದನ್ನೂ ಓದಿ: ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ

    ಪ್ರಶಾತ್ ಭೂಷಣ್ ವಾದಕ್ಕೆ ರಾಜ್ಯ ಸರ್ಕಾರದ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. ಮದನಿ ಕೇರಳದ ಕೊಯಮತ್ತೂರು ಬ್ಲಾಸ್ಟ್ ನ ಪ್ರಮುಖ ಆರೋಪಿಯಾಗಿದ್ದು ಆತನ ವಿರುದ್ಧ ಕೇರಳದಲ್ಲಿ 24 ಕೇಸುಗಳಿವೆ ಹೀಗಾಗಿ ಬೆಂಗಳೂರು ಬಿಟ್ಟು ಹೋಗಲು ಅನುಮತಿ ನೀಡಬಾರದು ಎಂದು ಕರ್ನಾಟಕ ಸರ್ಕಾರ ಪರ ವಕೀಲರು ವಾದಿಸಿದರು. ವಾದ ಪ್ರತಿವಾದ ಆಲಿಸಿದ ಪೀಠ ನ್ಯಾ ಅಬ್ದುಲ್ ನಜೀರ್ ಮತ್ತು ನ್ಯಾ ಕೃಷ್ಣ ಮುರಾರಿ ಒಳಗೊಂಡ ದ್ವಿಸದಸ್ಯ ಪೀಠ ಕೇರಳಕ್ಕೆ ತೆರಳಲು ಅನುಮತಿ ನೀಡಲು ನಿರಾಕರಿಸಿತು. ಅಬ್ದುಲ್ ನಾಸಿರ್ ಮದನಿ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಆರೋಪಿಯಾಗಿದ್ದು 2014ರಲ್ಲಿ ಬೆಂಗಳೂರು ಬಿಟ್ಟು ತೆರಳದಂತೆ ಷರತ್ತುವಿಧಿಸಿ ಜಾಮೀನು ನೀಡಿತ್ತು. ಇದನ್ನೂ ಓದಿ: ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ- ಕೇಂದ್ರದಿಂದ 7,274 ಕೋಟಿ ರೂ. ಬಿಡುಗಡೆ