Tag: abducted

  • ಪಾಕ್‍ನಲ್ಲಿ ಹಿಂದೂ ಬಾಲಕಿಯ ಅಪಹರಣ

    ಪಾಕ್‍ನಲ್ಲಿ ಹಿಂದೂ ಬಾಲಕಿಯ ಅಪಹರಣ

    ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಅಪರಹಣ ಮಾಡಿ, ಮತಾಂತರಗೊಳಿಸಿದ ಘಟನೆ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮತ್ತೆ ಹಿಂದೂ ಬಾಲಕಿಯನ್ನು ಅಪಹರಣ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ಘೋಟ್ಕಿ ಜಿಲ್ಲೆಯ 16 ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿದ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಧಾನಿ ಬುಕ್ಷ ಪಿಟಾಫಿ ಗ್ರಾಮದಲ್ಲಿ ಮಾರ್ಚ್ 16 ಮತ್ತು 17ರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

    ನಾಲ್ವರು ದುಷ್ಕರ್ಮಿಗಳು ರಾತ್ರಿ 3 ಗಂಟೆಯ ವೇಳೆಗೆ ಮನೆಯ ಬಾಗಿಲನ್ನು ಮುರಿದು, ಬಾಲಕಿಯನ್ನು ಎತ್ತಿಕೊಂಡು ವಾಹನದಲ್ಲಿ ಹಾಕಿಕೊಂಡು ಹೋದರು ಎಂದು ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

    ಬಾಲಕಿ ಸ್ವಇಚ್ಛೆಯಿಂದ ಓರ್ವ ಯುವಕನ ಜೊತೆಗೆ ಹೋಗಿದ್ದಾಳೆ. ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ವಿವಾಹವಾಗಿದ್ದಾಳೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆಂದು ವರದಿಯಾಗಿದೆ.

    ಈ ಹಿಂದೆ ಆಗಿದ್ದೇನು?:
    ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಹಬ್ಬದ ದಿನದಂದು ಇಬ್ಬರು ಅಪ್ರಾಪ್ತ ಹಿಂದೂ ಸಹೋದರಿಯರನ್ನು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗಿತ್ತು. ಬಳಿಕ ಬಾಲಕಿಯರ ವಿವಾಹದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಇದರಿಂದ ಆಕ್ರೋಶ ಹೊರ ಹಾಕಿದ್ದ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳು ಪ್ರತಿಭಟನೆ ಆರಂಭಿಸಿದ್ದರು.

    ಈ ಪ್ರಕರಣದ ಪ್ರಮುಖ ಆರೋಪಿಗಳನ್ನು ಪಾಕ್ ಪೊಲೀಸರು ಬಂಧಿಸಿದ್ದರು. ಬಳಿಕ ಇಸ್ಲಾಮಾಬಾದ್ ಹೈಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್, ಮತಾಂತರಗೊಂಡ ಸಹೋದರಿಯರನ್ನು ಪಾಕ್ ಸರ್ಕಾರ ತನ್ನ ವಶಕ್ಕೆ ಪಡೆದು ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆದೇಶ ನೀಡಿತ್ತು.

    ಕೋರ್ಟ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದ ಬಾಲಕಿಯರು, `ಇಸ್ಲಾಂ ಧರ್ಮಕ್ಕೆ ಸೇರುವಂತೆ ಯಾರೂ ನಮಗೆ ಬಲವಂತ ಮಾಡಿಲ್ಲ. ಮತಾಂತರವಾಗಲು ಹಾಗೂ ವಿವಾಹವಾಗುಂತೆ ಒತ್ತಡ ಹೇರಿಲ್ಲ’ ಎಂದು ತಿಳಿಸಿದ್ದರು.

  • ಮಗನ ಹತೈಗೈದ ಉಗ್ರರನ್ನು 72 ಗಂಟೆಯೊಳಗೆ ಕೊಲ್ಲಿ: ಮೃತ ಸೈನಿಕನ ತಂದೆ ಆಗ್ರಹ

    ಮಗನ ಹತೈಗೈದ ಉಗ್ರರನ್ನು 72 ಗಂಟೆಯೊಳಗೆ ಕೊಲ್ಲಿ: ಮೃತ ಸೈನಿಕನ ತಂದೆ ಆಗ್ರಹ

    ಶ್ರೀನಗರ: ಮಗನನ್ನು ಅಪಹರಿಸಿ ಕೊಂದ ಉಗ್ರರನ್ನು 72ಗಂಟೆಯೊಳಗೆ ಹತ್ಯೆ ಮಾಡಿ ಎಂದು ಮೃತ ಯೋಧ ಔರಂಗಜೇಬ್‍ನ ತಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಯೋಧನ ಸಾವಿಗೆ ಕಾರಣರಾದವರನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಲು ಸರ್ಕಾರ ತಡಮಾಡುತ್ತಿದೆ ಯಾಕೆ? 72 ಗಂಟೆಯೊಳಗೆ ಸರ್ಕಾರ ಯಾವ ನಿರ್ಧಾರವನ್ನು ಪ್ರಕಟಿಸದಿದ್ದಲ್ಲಿ ನನ್ನ ಮಗನ ಸಾವಿಗೆ ಕಾರಣರಾದವರ ವಿರುದ್ಧ ನಾನೇ ಸೇಡು ತೀರಿಸಿಕೊಳ್ಳುತ್ತೇನೆ ಎಂದು ನಿವೃತ್ತ ಯೋಧ ಮೃತ ಯೋಧನ ತಂದೆ ಹೇಳಿದ್ದಾರೆ.

    ಜಮ್ಮು ಕಾಶ್ಮೀರದಲ್ಲಿ ಯೋಧರ ಸಾವಲ್ಲಿ ರಾಜಕೀಯ ಮಾಡುವವರ ವಿರುದ್ಧ ಹರಿಹಾಯ್ದಿರುವ ಮೃತ ಯೋಧನ ತಂದೆ ಪಾಕಿಸ್ತಾನದ ಬಗ್ಗೆ ಸಹಾನುಭೂತಿ ತೋರಿಸುವ ಪ್ರತ್ಯೇಕತಾವಾದಿಗಳ ವಿರುದ್ಧ ಕಿಡಿಕಾರಿದ್ದಾರೆ.

    ಔರಂಗಜೇಬ್‍ನ ಹತ್ಯೆ ಕೇವಲ ನಮ್ಮ ಕುಟುಂಬಕ್ಕೆ ಅಷ್ಟೆ ಆಘಾತಕಾರಿಯಲ್ಲ ಸೇನೆಗೂ ಕೂಡ ಹಿನ್ನಡೆಯಾಗಿದೆ. ಜಮ್ಮು ಕಾಶ್ಮೀರಕ್ಕೆ ಸೇರಿದವನಾಗಿ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ಎಂದು ಬೇಸರ ವ್ಯಕ್ತಪಡಿಸಿದರು.

    ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು 2003 ರಿಂದ ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪರಿಸ್ಥಿತಿ ಬದಲಾಗಬಹುದು ಎಂದು ಎಣಿಸಿದ್ದೆವು ಆದರೆ ಎಣಿಸಿದಷ್ಟು ಆಗಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುವವರನ್ನ ಹಾಗೂ ಪ್ರತ್ಯೇಕತಾವಾದಿಗಳನ್ನು ಕಾಶ್ಮೀರದಿಂದ ಓಡಿಸಬೇಕು. ಸೇನೆ ಹಾಗೂ ಇತರ ಭದ್ರತಾ ಸಂಸ್ಥೆಗಳು ಉಗ್ರರ ವಿರುದ್ಧ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಂಜಾನ್ ಹಬ್ಬವನ್ನು ಔರಂಗಜೇಬ್‍ನ ಜೊತೆ ಆಚರಿಸುವ ಆಸೆ ಆದರೆ ಅವನಿಲ್ಲ ಎಂದು ನೋವನ್ನು ಹಂಚಿಕೊಂಡರು.

    ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ಮಾಡಿ ಔರಂಗಜೇಬ್ ಹತ್ಯೆ ಮಾಡಿದ್ದರು. ಇದರ ಸೇಡಿನಲ್ಲೇ ಉಗ್ರರು ಔರಂಗಜೇಬ್‍ನನ್ನು ಅಪಹರಿಸಿ ಹತ್ಯೆಗೈದಿದ್ದಾರೆ.ಇದನ್ನೂ ಓದಿ:ಉಗ್ರ ಸಮೀರ್ ನನ್ನು ಎನ್ ಕೌಂಟರ್ ಮಾಡಿದ್ದ ಯೋಧನ ಅಪಹರಣ