Tag: abdevilliers

  • ಸಿಕ್ಸರ್‌ ವೀರ ಸೂರ್ಯ Vs ಎಬಿಡಿ – ಇಬ್ಬರಲ್ಲಿ ಯಾರು ಬೆಸ್ಟ್‌? – ಟ್ವಿಟ್ಟರ್‌ನಲ್ಲಿ ಟ್ರೆಂಡ್‌

    ಸಿಕ್ಸರ್‌ ವೀರ ಸೂರ್ಯ Vs ಎಬಿಡಿ – ಇಬ್ಬರಲ್ಲಿ ಯಾರು ಬೆಸ್ಟ್‌? – ಟ್ವಿಟ್ಟರ್‌ನಲ್ಲಿ ಟ್ರೆಂಡ್‌

    ವೆಲ್ಲಿಂಗ್ಟನ್: ಟಿ20 ಸ್ಪೆಷಲಿಸ್ಟ್ ಆಗಿರುವ ಟೀಂ ಇಂಡಿಯಾ (Team India) ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನ ಅಭಿಮಾನಿಗಳು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್‌ಗೆ (Ab de Villiers) ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಶುರು ಮಾಡಿದ್ದಾರೆ.

    ಪ್ರತಿ ಇನ್ನಿಂಗ್ಸ್‌ನಲ್ಲೂ ಒಂದಿಲ್ಲೊಂದು ದಾಖಲೆ ಬರೆಯುತ್ತಿರುವ ಸೂರ್ಯಕುಮಾರ್ ಯಾದವ್ ಈ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ ಬ್ಯಾಟ್ಸ್‌ಮನ್‌ ಸಹ ಆಗಿದ್ದಾರೆ. ಭಾರತದ ಮಿಸ್ಟರ್ 360 ಎಂದೇ ಕರೆಯುವ ಸೂರ್ಯಕುಮಾರ್ ಯಾದವ್‌ನನ್ನು ಅಭಿಮಾನಿಗಳು ಎಬಿಡಿಗೆ (Ab de Villiers) ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಶುರು ಮಾಡಿದ್ದಾರೆ. ಅಲ್ಲದೇ ಇಬ್ಬರಲ್ಲಿ ಯಾರು ಬೆಸ್ಟ್‌? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅಭಿಮಾನಿಗಳು ಸೂರ್ಯ ಟಿ20 (T20) ಸ್ಪೆಷಲಿಸ್ಟ್‌ ಆದ್ರೆ, ಎಬಿಡಿ ಎಲ್ಲ ಆವೃತ್ತಿಗಳಲ್ಲೂ ಬೆಸ್ಟ್‌ ಬ್ಯಾಟ್ಸ್‌ಮನ್‌ ಅವರ ಆಟ ಅವರವರಿಗೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  11 ಬೌಂಡರಿ, 7 ಸಿಕ್ಸ್ – ಶತಕ ಸಿಡಿಸಿದ ದಾಖಲೆ ವೀರ ಸೂರ್ಯ

    ಕೀವಿಸ್ (New Zealand) ವಿರುದ್ಧ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಸೂರ್ಯ ಕೇವಲ 49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ, 51 ಎಸೆತಗಳಲ್ಲಿ ಅಜೇಯ 111 ರನ್ ಚಚ್ಚಿ ಮಿಂಚಿದ್ದಾರೆ. ಈ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಂತರ ಸ್ಪೋಟಕ ಶತಕ ಸಿಡಿಸಿದ 2ನೇ ಆಟಗಾರರಾಗಿದ್ದರು. ಇದು ಟಿ20 ನಲ್ಲಿ ಸೂರ್ಯಕುಮಾರ್ ಸಿಡಿಸಿದ 2ನೇ ಶತಕವಾಗಿದೆ. ಇದನ್ನೂ ಓದಿ: ಶತಕ ಸಿಡಿಸಿ ಮೆರೆದ ಸೂರ್ಯ – ಕೀವಿಸ್ ಕಿವಿ ಹಿಂಡಿದ ಭಾರತ

    ಸೂರ್ಯ ಈಗ ಸಿಕ್ಸರ್ ವೀರ:
    ಸ್ಫೋಟಕ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಈ ವರ್ಷದ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪರ್ ಆಗಿದ್ದಾರೆ. ಈ ಆವೃತ್ತಿಯಲ್ಲಿ ಒಟ್ಟು 60 ಸಿಕ್ಸರ್ ಸಿಡಿಸಿದ ಸೂರ್ಯ ಮೊದಲ ಸ್ಥಾನದಲ್ಲಿದ್ದರೆ 43 ಸಿಕ್ಸರ್ ಸಿಡಿಸಿದ ಎಂ.ಡಿ ವಸೀಮ್ 2ನೇ ಸ್ಥಾನದಲ್ಲಿ ಹಾಗೂ 39 ಸಿಕ್ಸರ್ ಸಿಡಿಸಿದ ವೆಸ್ಟ್ ಇಂಡೀಸ್‌ನ ರೋವ್ಮನ್ ಪೋವೆಲ್ ನಂತರದ ಸ್ಥಾನದಲ್ಲಿದ್ದಾರೆ.

    ಭಾನುವಾರ ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 18.5 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕೆಳದುಕೊಂಡು 65 ರನ್‌ಗಳ ಅಂತರದಲ್ಲಿ ಹೀನಾಯ ಸೋಲನುಭವಿಸಿತು.

    Live Tv
    [brid partner=56869869 player=32851 video=960834 autoplay=true]

  • ಎಬಿಡಿ ಸ್ಫೋಟಕ ಆಟ – ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ರೋಚಕ ಜಯ

    ಎಬಿಡಿ ಸ್ಫೋಟಕ ಆಟ – ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ರೋಚಕ ಜಯ

    – 5 ವಿಕೆಟ್ ಕಿತ್ತು ಹರ್ಷಲ್ ಪಟೇಲ್ ಇತಿಹಾಸ ಸೃಷ್ಟಿ

    ಚೆನ್ನೈ: ಹರ್ಷಲ್ ಪಟೇಲ್ ಭರ್ಜರಿ ಬೌಲಿಂಗ್,  ಎಬಿಡಿ ವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಮುಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಬೆಂಗಳೂರು ತಂಡ ಜಯವನ್ನು ಸಾಧಿಸಿ ಶುಭಾರಂಭ ಮಾಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು 20ನೇ ಓವರಿನ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಪಂದ್ಯವನ್ನು 2 ವಿಕೆಟ್‍ಗಳಿಂದ ಗೆದ್ದುಕೊಂಡಿತು.

    ಗೆದ್ದದ್ದು ಹೇಗೆ?
    14 ಓವರ್ ಅಂತ್ಯಕ್ಕೆ ಜಯಗಳಿಸಲು  36 ಎಸೆತಕ್ಕೆ 57 ರನ್ ಬೇಕಿತ್ತು. 18ನೇ ಓವರ್‌ನಲ್ಲಿ 1 ಸಿಕ್ಸ್, 1 ಬೌಂಡರಿ ಸೇರಿದಂತೆ 15 ರನ್ ಬಂದ ಕಾರಣ ಕೊನೆಯ 12 ಎಸೆತದಲ್ಲಿ 19 ರನ್ ಬೇಕಿತ್ತು. ಬುಮ್ರಾ ಎಸೆದ 19ನೇ ಓವರ್‌ನಲ್ಲಿ ಎಬಿಡಿ ವಿಲಿಯರ್ಸ್ 2 ಬೌಂಡರಿ ಹೊಡೆದ ಪರಿಣಾಮ 12 ರನ್ ಬಂತು. ಕೊನೆಯ 6 ಬಾಲಿಗೆ 7 ರನ್ ಬೇಕಿತ್ತು. ಈ ವೇಳೆ ಜನ್‍ಸೇನ್ ಎಸೆದ ಮೊದಲ ಮೂರು ಎಸೆತಕ್ಕೆ 1, 2, 1 ರನ್ ಬಂತು. 4ನೇ ಎಸೆತದಲ್ಲಿ ಎಬಿಡಿ 2 ರನ್ ಓಡಲು ಹೋಗಿ ರನೌಟ್ ಆದರು. ಕೊನೆಯ 2 ಎಸೆತದಲ್ಲಿ 2 ರನ್ ಬೇಕಿತ್ತು. 5ನೇ ಎಸೆತದಲ್ಲಿ ಲೆಗ್‍ಬೈ ಮೂಲಕ 1 ರನ್ ಬಂದರೆ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್ ಶಾರ್ಟ್ ಫೈನ್ ಕಡೆಗೆ ಬಾಲ್ ತಳ್ಳಿ 1 ರನ್ ಗಳಿಸಿ ಆರ್‌ಸಿಬಿ  ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಎಬಿಡಿ ವಿಲಿಯರ್ಸ್ 48 ರನ್(27 ಎಸೆತ, 4 ಬೌಂಡರಿ, 2 ಸಿಕ್ಸರ್), ಗ್ಲೇನ್ ಮ್ಯಾಕ್ಸ್‌ವೆಲ್ 39 ರನ್(28 ಎಸೆತ, 3 ಬೌಂಡರಿ, 2 ಸಿಕ್ಸರ್) ನಾಯಕ ವಿರಾಟ್ ಕೊಹ್ಲಿ 33 ರನ್(29 ಎಸೆತ, 4 ಬೌಂಡರಿ) ಹೊಡೆದು ಔಟಾದರು.

    ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಕ್ರಿಸ್ ಲೀನ್ ಉತ್ತಮ ಆರಂಭ ಒದಗಿಸಿದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕ್ರಿಸ್ ಲೀನ್ 49 ರನ್(35 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ 1 ರನ್ ನಿಂದ ಅರ್ಧಶತಕ ವಂಚಿತರಾಗಿ ಔಟ್ ಆದರು.

    ಈ ಮೊದಲೇ ರೋಹಿತ್ ಶರ್ಮಾ 19 ರನ್(15 ಎಸೆತ, 1 ಬೌಂಡರಿ ಮತ್ತು 1 ಸಿಕ್ಸರ್) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ನಡೆಸಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 31 ರನ್‍ಗೆ ಔಟಾದರು.

    ಬಳಿಕ ಬಂದ ಯಾವ ಬ್ಯಾಟ್ಸ್‍ಮ್ಯಾನ್ ಕೂಡ ಹೆಚ್ಚುಹೊತ್ತು ಕ್ರಿಸ್‍ನಲ್ಲಿ ಅಬ್ಬರಿಸಲಿಲ್ಲ. ಇಶಾನ್ ಕಿಶನ್ ಸ್ವಲ್ಪ ಹೊತ್ತು ಬ್ಯಾಟಿಂಗ್ ಪರಾಕ್ರಮ ತೋರಿಸಿದರು ಕೂಡ 28 ರನ್(19 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಆಡುತ್ತಿದ್ದಾಗ ಹರ್ಷಲ್ ಪಟೇಲ್ ಬೌಲಿಂಗ್‍ನಲ್ಲಿ ಎಲ್‍ಬಿ ಬಲೆಗೆ ಬಿದ್ದರು.

    ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಹಾರ್ದಿಕ್ ಪಾಂಡ್ಯ 13ರನ್, ಕೀರನ್ ಪೋಲಾರ್ಡ್ 7 ರನ್, ಕೃಣಲ್ ಪಾಂಡ್ಯ 7 ರನ್ ಮತ್ತು ಮಾರ್ಕೊ ಜಾನ್ಸೆನ್ ಮತ್ತು ರಾಹುಲ್ ಚಹಾರ್ ಕ್ರಮವಾಗಿ ಸೊನ್ನೆ ಸುತ್ತಿದರು.

    ಆರ್‍ಸಿಬಿ ಪರ ಉತ್ತಮ ದಾಳಿ ಸಂಘಟಿಸಿದ ಹರ್ಷಲ್ ಪಟೇಲ್ 4 ಓವರ್ ಎಸೆದು 27 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರೆ, ಕೈಲ್ ಜಾಮೀಸನ್ ಮತ್ತು ವಾಷಿಂಗ್ಟ್‍ನ್ ಸುಂದರ್ ತಲಾ ಒಂದು ವಿಕೆಟ್ ಕಿತ್ತರು.