Tag: ABD Villiers

  • ಸೂರ್ಯ ಕುಮಾರ್ ಯಾದವ್ ಭಾರತದ ಎಬಿಡಿ ವಿಲಿಯರ್ಸ್: ಹರ್ಭಜನ್ ಸಿಂಗ್

    ಸೂರ್ಯ ಕುಮಾರ್ ಯಾದವ್ ಭಾರತದ ಎಬಿಡಿ ವಿಲಿಯರ್ಸ್: ಹರ್ಭಜನ್ ಸಿಂಗ್

    ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಸೂರ್ಯ ಕುಮಾರ್ ಯಾದವ್ ಭಾರತದ ಎಬಿಡಿ ವಿಲಿಯರ್ಸ್ ಎಂದು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

    ಐಪಿಎಲ್-2020 ಟ್ರೋಫಿಯನ್ನು ಮುಂಬೈ ಇಂಡಿಯನ್ಸ್ ತಂಡ ಗೆದ್ದುಕೊಂಡಿದೆ. ಮುಂಬೈ ಐದನೇ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಸೂರ್ಯಕುಮಾರ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದರು. ಈಗ ಇವರ ಬ್ಯಾಟಿಂಗ್ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, ಆತ ಭಾರತದ ಎಬಿಡಿ ವಿಲಿಯರ್ಸ್ ಎಂದು ಹಾಡಿಹೊಗಳಿದ್ದಾರೆ.

    ಸೂರ್ಯ ಕುಮಾರ್ ಯಾದವ್ ಓರ್ವ ಗೇಮ್ ಚೇಂಜರ್ ಆಗಿ ಬದಲಾವಣೆಯಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಮ್ಯಾಚ್ ವಿನ್ನರ್ ಆಗಿದ್ದಾರೆ. ಅವರ ಬ್ಯಾಟಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಜೊತೆಗೆ ಅವರು ಮೊದಲ ಬಾಲಿನಿಂದಲೇ ಅಬ್ಬರಿಸಲು ಆರಂಭ ಮಾಡುತ್ತಾರೆ. ಮೊದಲ ಬಾಲ್ ನಲ್ಲೇ 100 ಸ್ಟ್ರೈಕ್ ರೇಟಿನಲ್ಲಿ ಬ್ಯಾಟ್ ಬೀಸುವ ಸಾಮರ್ಥ್ಯವನ್ನು ಸೂರ್ಯಕುಮಾರ್ ಹೊಂದಿದ್ದಾರೆ ಎಂದು ಭಜ್ಜಿ ತಿಳಿಸಿದ್ದಾರೆ.

    ಮೈದಾನದಲ್ಲಿ ಸೂರ್ಯ ಎಲ್ಲ ಬಗೆಯ ಹೊಡೆತಗಳನ್ನು ಹೊಡೆಯುತ್ತಾರೆ. ಓವರ್ ಕವರ್, ಸ್ವಿಪ್ ಶಾಟ್‍ಗಳನ್ನು ಉತ್ತಮವಾಗಿ ಆಡುತ್ತಾರೆ. ಜೊತೆಗೆ ಸ್ಪಿನ್‍ಗೆ ಮತ್ತು ವೇಗದ ಬೌಲಿಂಗ್‍ಗೆ ಭರ್ಜರಿಯಾಗಿ ಬ್ಯಾಟ್ ಬೀಸುತ್ತಾರೆ. ಆತ ಒಂದು ರೀತಿಯ ಇಂಡಿಯಾದ ಎಬಿಡಿ ವಿಲಿಯರ್ಸ್. ಯಾದವ್ ಇಂಡಿಯಾ ಟೀಂಗೆ ಆಯ್ಕೆ ಆಗಬೇಕಿತ್ತು. ಒಳ್ಳೆಯ ಆಟಗಾರ ಟಿ-20 ಪಂದ್ಯದಲ್ಲಿ ಉತ್ತಮವಾಗಿ ಆಡಿ ಎಲ್ಲರ ಗಮನ ಸೆಳೆದಿದ್ದಾರೆ. ಮುಂದೆ ಪಕ್ಕ ಟೀಂ ಇಂಡಿಯಾಗೆ ಆಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಯಾದವ್ ಓರ್ವ ಉತ್ತಮ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‍ನಲ್ಲಿ 101 ಪಂದ್ಯಗಳನ್ನು ಆಡಿರುವ ಸೂರ್ಯ 11 ಅರ್ಧಶತಕದ ಸಹಾಯದಿಂದ 2,024 ರನ್ ಸಿಡಿಸಿದ್ದಾರೆ. ಐಪಿಎಲ್-2020ರಲ್ಲಿ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಸೂರ್ಯ, 16 ಪಂದ್ಯಗಳಲ್ಲಿ 480 ರನ್ ಸಿಡಿಸಿ ಮಿಂಚಿದರು. ಜೊತೆಗೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗದ ಕಾರಣಕ್ಕೆ ವಿವಾದವನ್ನು ಮಾಡಿಕೊಂಡಿದ್ದರು.

  • ಎಬಿಡಿ, ಪಡಿಕ್ಕಲ್ ಜೊತೆಗೆ ದಾಖಲೆ ಹಂಚಿಕೊಂಡ ಕೆಎಲ್ ರಾಹುಲ್

    ಎಬಿಡಿ, ಪಡಿಕ್ಕಲ್ ಜೊತೆಗೆ ದಾಖಲೆ ಹಂಚಿಕೊಂಡ ಕೆಎಲ್ ರಾಹುಲ್

    ನವದೆಹಲಿ: ಐಪಿಎಲ್-2020ಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಮತ್ತು ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ದಾಖಲೆಯೊಂದನ್ನು ಸಮನಾಗಿ ಹಂಚಿಕೊಂಡಿದ್ದಾರೆ.

    ಕೊರೊನಾ ನಡುವೆಯೂ ಯುಎಇಯಲ್ಲಿ ನಡೆದ ಐಪಿಎಲ್-2020 ಯಶಸ್ವಿಯಾಗಿ ಮುಗಿದಿದೆ. ಹಲವಾರು ಅಡೆತಡೆಗಳ ನಡುವೆ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಿ ಸಕ್ಸಸ್ ಕಂಡಿದೆ. ಅಂತಯೇ ಟೂರ್ನಿಯುದ್ದಕ್ಕೂ ಭರ್ಜರಿಯಾಗಿ ಆಡಿದ ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಚಾಂಪಿಯನ್ ಆಗಿದೆ. ಶ್ರೇಯಸ್ ಐಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರನ್ನರ್ ಆಫ್ ಆಗಿದೆ.

    ಈ ಬಾರಿಯ ಐಪಿಎಲ್‍ನಲ್ಲಿ ಕರ್ನಾಟಕದ ಆಟಗಾರರದ ಕೆಎಲ್ ರಾಹುಲ್ ಮತ್ತು ಯುವ ಆಟಗಾರ ದೇವದತ್ ಪಡಿಕ್ಕಲ್ ಉತ್ತಮವಾಗಿ ಬ್ಯಾಟ್ ಬೀಸಿದರು. ಜೊತೆಗೆ ಇಬ್ಬರು ಈ ಬಾರಿಯ ಐಪಿಎಲ್‍ನಲ್ಲಿ ಐದು ಅರ್ಧಶತಕ ಸಿಡಿಸಿದ್ದು, ಐಪಿಎಲ್-2020ಯಲ್ಲಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆಯನ್ನು ಎಬಿಡಿ ವಿಲಿಯರ್ಸ್ ಅವರ ಜೊತೆ ಹಂಚಿಕೊಂಡಿದ್ದಾರೆ. ಇದ ಜೊತೆಗೆ ಕರ್ನಾಟದ ಇಬ್ಬರು ಆಟಗಾರರು ಅತೀ ಹೆಚ್ಚು ಅರ್ಧಶತಕ ಸಿಡಿಸಿದಂತಾಗಿದೆ.

    ಐಪಿಎಲ್-2020ಯಲ್ಲಿ ಈ ಬಾರಿ ದೇವದತ್ ಪಡಿಕ್ಕಲ್ ಅವರು ಉತ್ತಮ ಫಾರ್ಮ್ ನಲ್ಲಿದ್ದರು. ಈ ಬಾರಿಯ ಐಪಿಎಲ್‍ನಲ್ಲಿ 15 ಪಂದ್ಯಗಳನ್ನು ಆಡಿದ ಪಡಿಕ್ಕಲ್ ಐದು ಅರ್ಧಶತಕದ ನೆರವಿನಿಂದ 473 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ಐಪಿಎಲ್ ಪಾದಾರ್ಪಣೆ ಟೂರ್ನಿಯಲ್ಲೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ಇದೇ ಮೊದಲ ಬಾರಿಗೆ ಐಪಿಎಲ್‍ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ರಾಹುಲ್, ಕ್ಯಾಪ್ಟನ್ ಆಗಿ ವಿಫಲವಾದರೂ ಆಟಗಾರನಾಗಿ ಒಳ್ಳೆಯ ಲಯದಲ್ಲಿ ಕಾಣಿಸಿಕೊಂಡಿದ್ದರು. ತಾವಾಡಿದ 14 ಪಂದ್ಯಗಳಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕದ ನೆರವಿನಿಂದ ಬರೋಬ್ಬರಿ 670 ರನ್ ಸಿಡಿಸಿ, ಐಪಿಎಲ್-2020ಯ ಆರೆಂಜ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದರು.

    ಎಬಿಡಿ ವಿಲಿಯರ್ಸ್ ಈ ಬಾರಿ ಆರ್‍ಸಿಬಿ ತಂಡಕ್ಕೆ ಆಧಾರ ಸ್ಥಂಭದಂತೆ ಬ್ಯಾಟ್ ಬೀಸಿದರು. ಜೊತೆಗೆ ಬೆಂಗಳೂರು ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಿದ್ದರು. ಐಪಿಎಲ್-2020ಯಲ್ಲಿ 15 ಪಂದ್ಯಗಳನ್ನಾಡಿ ಎಬಿಡಿ ಐದು ಅರ್ಧಶತಕದ ನೆರವಿನಿಂದ 454 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಇದ್ದಾರೆ.

  • ಫೋಟೋ ಹಾಕಿ ಶಾಲಾ ದಿನಗಳನ್ನು ನೆನಪಿಸಿಕೊಂಡ ವಿರಾಟ್

    ಫೋಟೋ ಹಾಕಿ ಶಾಲಾ ದಿನಗಳನ್ನು ನೆನಪಿಸಿಕೊಂಡ ವಿರಾಟ್

    – ಈ ನಾಲ್ವರಲ್ಲಿ ಎಬಿಡಿ ಬೆಸ್ಟ್ ವಿದ್ಯಾರ್ಥಿಯೆಂದ ಕೊಹ್ಲಿ

    ಅಬುಧಾಬಿ: ಕೊಹ್ಲಿ ಸೇರಿದಂತೆ ನಾಲ್ಕು ಆರ್‌ಸಿಬಿ ಆಟಗಾರರಿರುವ ಫೋಟೋವನ್ನು ಹಂಚಿಕೊಂಡಿರುವ ನಾಯಕ ವಿರಾಟ್ ಕೊಹ್ಲಿ ತನ್ನ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಅಬುಧಾಬಿ ಮೈದಾನದಲ್ಲಿ ನಡೆದ ಐಪಿಎಲ್-2020ಯ 39ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಬೆಂಗಳೂರು ಬೌಲರ್ ಗಳ ಮಾರಕ ದಾಳಿಗೆ ತತ್ತರಸಿ ನಿಗದಿತ 20 ಓವರಿನಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 84 ರನ್ ಪೇರಿಸಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಇನ್ನೂ 6.3 ಓವರ್ ಬಾಕಿ ಇರುವಂತೆ 8 ವಿಕೆಟ್‍ಗಳ ಅಂತರದಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ.

    ಪಂದ್ಯ ಗೆದ್ದಿರುವ ಖುಷಿಯಲ್ಲಿರುವ ಕೊಹ್ಲಿ ಇಂದು ಒಂದು ಟ್ವೀಟ್ ಮಾಡಿದ್ದು, ಈ ಫೋಟೋವನ್ನು ನೋಡುತ್ತಿದ್ದರೆ, ನನ್ನ ಶಾಲಾ ದಿನಗಳ ನನಗೆ ನೆನಪಿಗೆ ಬರುತ್ತವೆ. ನಾಲ್ಕು ಹುಡುಗರು ಒಂದೇ ತರಗತಿಯವರು ಮತ್ತು ಎಬಿ ಮನೆಯಲ್ಲೇ ಹೋಂ ವಾರ್ಕ್ ಮಾಡಿಕೊಂಡು ತಯಾರಾಗಿ ಬಂದಿದ್ದಾರೆ. ಇದರ ಜೊತೆಗೆ ಉಳಿದ ಮೂವರು ಹುಡುಗರನ್ನು ತೊಂದರೆಗೆ ಸಿಲುಕಿಸಿದ್ದಾರೆ ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ. ಇದನ್ನು ಓದಿ: 1 ರನ್‌ ಅಗತ್ಯವಿದ್ದಾಗ ಕೊಹ್ಲಿ 2 ರನ್‌ ಓಡಿದ್ದು ಯಾಕೆ?

    ಐಪಿಎಲ್‍ನಲ್ಲಿ ಉತ್ತಮ ಆಟಗಾರನ್ನು ಹೊಂದಿದ್ದರು ಇಲ್ಲಿಯವರೆಗೂ ಆರ್‌ಸಿಬಿ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಆದರೆ ಈ ಬಾರಿಯ ಐಪಿಎಲ್‍ನಲ್ಲಿ ಬೆಂಗಳೂರು ತಂಡ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಉತ್ತಮ ಫಾರ್ಮ್‍ನಲ್ಲಿ ಇದ್ದಾರೆ. ಜೊತೆಗೆ ಬೌಲರ್ ಗಳು ಮಿಂಚುತ್ತಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಮೂರರಲ್ಲಿ ಸೋತು 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

    ಕಳೆದ ಪಂದ್ಯದಲ್ಲಿ ಅದ್ಭುತವಾಗಿ ಬೌಲ್ ಮಾಡಿದ ವೇಗಿ ಮೊಹಮ್ಮದ್ ಸಿರಾಜ್ ಅವರು ಎರಡು ಓವರ್ ಬೌಲ್ ಮಾಡಿ ಒಂದು ರನ್ ನೀಡದೇ ಮೇಡನ್ ಮಾಡಿ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ಐಪಿಎಲ್‍ನ ಒಂದೇ ಪಂದ್ಯದಲ್ಲಿ ಎರಡು ಮೇಡನ್ ಓವರ್ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇವರ ಜೊತೆಗೆ ಐದನೇ ಓವರ್ ಅನ್ನು ಕೂಡ ಕ್ರಿಸ್ ಮೋರಿಸ್ ಮೇಡನ್ ಮಾಡಿದರು. ನಂತರ 12ನೇ ಓವರ್ ಅನ್ನು ವಾಷಿಂಗ್ಟನ್ ಸುಂದರ್ ಅವರು ಮೇಡನ್ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ನಾಲ್ಕು ಮೇಡನ್ ಓವರ್ ಮಾಡಿದ ತಂಡ ಎಂಬ ಹೆಗ್ಗಳಿಕೆ ಆರ್‌ಸಿಬಿ ಪಾತ್ರವಾಗಿದೆ.

  • ಎಬಿ ಸೂಪರ್‌ಹ್ಯೂಮನ್, ಆತ ಮಾತ್ರ ಈ ರೀತಿ ಬ್ಯಾಟ್ ಬೀಸಲು ಸಾಧ್ಯ: ಕೊಹ್ಲಿ

    ಎಬಿ ಸೂಪರ್‌ಹ್ಯೂಮನ್, ಆತ ಮಾತ್ರ ಈ ರೀತಿ ಬ್ಯಾಟ್ ಬೀಸಲು ಸಾಧ್ಯ: ಕೊಹ್ಲಿ

    ಅಬುಧಾಬಿ: ಎಬಿ ಸೂಪರ್‌ಹ್ಯೂಮನ್ ಆತ ಮಾತ್ರ ಈ ರೀತಿ ಬ್ಯಾಟ್ ಬೀಸಲು ಸಾಧ್ಯ ಎಂದು ಹೇಳುವ ಮೂಲಕ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಅವರನ್ನು ಹಾಡಿಹೊಗಳಿದ್ದಾರೆ.

    ಸೋಮವಾರ ಶಾರ್ಜಾದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ 87 ರನ್‍ಗಳ ಭರ್ಜರಿ ಜಯ ಸಾಧಿಸಿದೆ. ಇದರ ಜೊತೆಗೆ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಬೆಂಗಳೂರು ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಎಬಿಡಿ ವಿಲಿಯರ್ಸ್ ಅವರ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ತಲೆಬಾಗಿದೆ.

    ಎಬಿಡಿಯವರ ಇನ್ನಿಂಗ್ಸ್ ಕುರಿತು ಪಂದ್ಯದ ಬಳಿಕ ಮಾತನಾಡಿರುವ ಕೊಹ್ಲಿ, ನಾವೆಲ್ಲರೂ ಶಾರ್ಜಾ ಪಿಚ್‍ನಲ್ಲಿ ಬ್ಯಾಟ್ ಬೀಸಲು ಕಷ್ಟಪಡುತ್ತಿದ್ದವು. ಆದರೆ ಆಗತಾನೇ ಕಣಕ್ಕಿಳಿದ ಸೂಪರ್‌ಹ್ಯೂಮನ್ ಎಬಿ ಚಿತ್ರಣವನ್ನೇ ಬದಲು ಮಾಡಿದರು. ನಾವೆಲ್ಲ 165ರಿಂದ 170 ಟಾರ್ಗೆಟ್ ನೀಡುವ ಬಗ್ಗೆ ಯೋಚಿಸುತ್ತಿದ್ದೆವು. ಆದರೆ ವಿಲಿಯರ್ಸ್ ಅವರ ಅದ್ಭುತ ಆಟ 195 ರನ್‍ಗಳ ಟಾರ್ಗೆಟ್ ನೀಡುವಂತೆ ಮಾಡಿತು. ಎಬಿಡಿ ಮಾತ್ರ ಈ ರೀತಿ ಬ್ಯಾಟ್ ಬೀಸಲು ಸಾಧ್ಯ, ಏಕೆಂದರೆ ಅವರು ಒಳ್ಳೆಯ ಪ್ರತಿಭೆ ಎಂದು ಹೇಳಿದ್ದಾರೆ.

    ನಾನು ಕೂಡ ಆಗ ಸ್ಟ್ರೈಕಿನಲ್ಲಿದ್ದೆ ಆದರೆ ಆ ಮೈದಾನದಲ್ಲಿ ಬಾಲ್, ಬ್ಯಾಟಿಗೆ ಬರುತ್ತಿರಲಿಲ್ಲ. ಬ್ಯಾಟ್ ಮಾಡುವುದೇ ಕಷ್ಟವಾಗಿತ್ತು. ಆದರೆ ಎಬಿಡಿ ವಿಲಿಯರ್ಸ್ ತಾವು ಆಡಿದ ಮೂರನೇ ಬಾಲನ್ನೇ ಬೌಂಡರಿಗೆ ಅಟ್ಟಿದರು. ಈ ಪಂದ್ಯದಲ್ಲಿ ಅವರು ಉತ್ತಮವಾಗಿ ಆಟವಾಡಿದರು. ನಮ್ಮ ತಂಡದ ಎಲ್ಲ ಆಟಗಾರರು ಕೂಡ ವೈಯಕ್ತಿಕವಾಗಿ ಬಹಳ ಚೆನ್ನಾಗಿ ಆಡಿದ್ದೇವೆ. ಬೌಲಿಂಗ್ ವಿಭಾಗದಲ್ಲೂ ಕೂಡ ನಾವು ಬ್ಯಾಲೆನ್ಸ್ ಆಗಿ ಇದ್ದೇವೆ. ನನಗೆ ಬಹಳ ಖುಷಿಯಾಗಿದೆ ಎಂದು ಕೊಹ್ಲಿ ತಿಳಿಸಿದ್ದಾರೆ. ಇದನ್ನು ಓದಿ: 47 ಎಸೆತಕ್ಕೆ 100 ರನ್ ಜೊತೆಯಾಟ – ಐಪಿಎಲ್‍ನಲ್ಲಿ ಎಬಿಡಿ, ಕೊಹ್ಲಿ ದಾಖಲೆ

    ನಿನ್ನೆ ಪಂದ್ಯದಲ್ಲಿ ಟಾಸ್ ಗೆದ್ದ ಆರ್‍ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. 12ನೇ ಓವರಿನ 2ನೇ ಬಾಲಿನಲ್ಲಿ ಫಿಂಚ್ ಅವರು ಔಟ್ ಆದಾಗ ತಂಡ 94 ರನ್ ಸಿಡಿಸಿ ಎರಡು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ನಾಯಕ ಕೊಹ್ಲಿ ಮತ್ತು ಅನುಭವಿ ಆಟಗಾರ ಎಬಿಡಿ ವಿಲಿಯರ್ಸ್ ಆದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಶತಕದ ಜೊತೆಯಾಟವಾಡಿತು. ಈ ಮೂಲಕ 10ನೇ ಶತಕದ ಜೊತೆಯಾಟವಾಡಿ ಐಪಿಎಲ್‍ನಲ್ಲಿ ದಾಖಲೆ ಬರೆಯಿತು.

    ಈ ಪಂದ್ಯನಲ್ಲಿ ಸ್ಫೋಟಕವಾಗಿ ಬ್ಯಾಟ್ ಬೀಸಿದ ಎಬಿಡಿ ವಿಲಿಯರ್ಸ್, ತಾವು ಆಡಿ 33 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್ ಸಮೇತ ಭರ್ಜರಿ 73 ರನ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ವಿರಾಟ್ ಕೊಹ್ಲಿಯವರು 28 ಬಾಲಿಗೆ 33 ರನ್ ಸಿಡಿಸಿದರು. ಈ ಮೂಲಕ ಕೋಲ್ಕತ್ತಾಗೆ 195 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಬೆಂಗಳೂರು ಬೌಲರ್ ಗಳ ದಾಳಿಗೆ ತತ್ತರಿಸಿ 20 ಓವರಿನಲ್ಲಿ ಕೇವಲ 112 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

  • ಆರ್‌ಸಿಬಿಗೆ ಶಾಕ್ – ಎಬಿಡಿ, ಮೋರಿಸ್ ಐಪಿಎಲ್ ಆರಂಭದ ಪಂದ್ಯಗಳನ್ನಾಡುವುದು ಡೌಟ್?

    ಆರ್‌ಸಿಬಿಗೆ ಶಾಕ್ – ಎಬಿಡಿ, ಮೋರಿಸ್ ಐಪಿಎಲ್ ಆರಂಭದ ಪಂದ್ಯಗಳನ್ನಾಡುವುದು ಡೌಟ್?

    ನವದೆಹಲಿ: ಕೊರೊನಾ ವೈರಸ್ ಕಾರಣದಿಂದ ಎಬಿಡಿ ವಿಲಿಯರ್ಸ್ ಸೇರಿದಂತೆ ಸೌತ್ ಆಫ್ರಿಕಾದ ಎಲ್ಲ ಆಟಗಾರರು ಐಪಿಎಲ್ ಆರಂಭದ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ ಎಂದು ವರದಿಯಾಗಿದೆ.

    ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಐಪಿಎಲ್ ಸೆಪ್ಟಂಬರ್ 19ರಿಂದ ಯುಎಇಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಆದರೆ ಇದೇ ಕೊರೊನಾ ವೈರಸ್ ಕಾರಣದಿಂದ ದಕ್ಷಿಣ ಆಫ್ರಿಕಾದ ಹಲವು ಆಟಗಾರರು ಐಪಿಎಲ್ ಆರಂಭದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಬೆಂಗಳೂರು ತಂಡಕ್ಕೆ ಹೆಚ್ಚು ನಷ್ಟವಾಗಲಿದೆ.

    ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ, ದಕ್ಷಿಣ ಆಫ್ರಿಕಾದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಅಲ್ಲಿನ ಸರ್ಕಾರ ಸೆಪ್ಟಂಬರ್ ಅಂತ್ಯದವರೆಗೂ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದೆ. ಜೊತೆಗೆ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ಬಂಧ ಮಾಡಿದೆ. ದಕ್ಷಿಣ ಆಫ್ರಿಕಾದ ತಜ್ಞರು ಸೆಪ್ಟಂಬರ್ ಅಂತ್ಯದವರೆಗೂ ಲಾಕ್‍ಡೌನ್ ತೆರವು ಮಾಡುವುದು ಬೇಡ ಎಂದು ಸರ್ಕಾರ ಸಲಹೆ ನೀಡಿದ್ದಾರೆ. ಈ ಕಾರಣದಿಂದ ಸೆಪ್ಟಂಬರ್ ಮಧ್ಯಭಾಗದಿಂದ ಆರಂಭವಾಗುವ ಐಎಪಿಲ್ ಆರಂಭದ ಪಂದ್ಯಗಳಿಗೆ ಸೌತ್ ಆಫ್ರಿಕಾದ ಆಟಗಾರರು ಅಲಭ್ಯರಾಗಲಿದ್ದಾರೆ.

    ಈ ನಡುವೆ ಐಪಿಎಲ್ ಪ್ರಾಂಚೈಸಿಗಳು ವಿಶೇಷ ವಿಮಾನ ಮೂಲಕ ಆಟಗಾರರನ್ನು ಕರೆಸಿಕೊಳ್ಳುವುದಾಗಿ ಹೇಳಿಕೊಂಡಿವೆ. ಆದರೆ ಸೌತ್ ಆಫ್ರಿಕಾ ಸರ್ಕಾರ ಈ ಬಗ್ಗೆ ಯಾವುದೇ ಅನುಮತಿಯನ್ನು ಈವರೆಗೆ ನೀಡಿಲ್ಲ. ಒಂದು ವೇಳೆ ಅಲ್ಲಿನ ಸರ್ಕಾರ ಅನುಮತಿ ನೀಡದಿದ್ದರೆ ಆರ್ಸಿಬಿ ತಂಡಕ್ಕೆ ಹೆಚ್ಚಿನ ನಷ್ಟವಾಗಲಿದೆ. ಆರ್‌ಸಿಬಿ ಸೌತ್ ಆಫ್ರಿಕಾದ ಮೂರು ಪ್ರಮುಖ ಆಟಗಾರರನ್ನು ಮಿಸ್ ಮಾಡಿಕೊಳ್ಳಲಿದೆ. ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಎಬಿಡಿ ವಿಲಿಯರ್ಸ್, ವೇಗಿ ಡೇಲ್ ಸ್ಟೇನ್ ಹಾಗೂ ಆಲ್‍ರೌಂಡರ್ ಕ್ರಿಸ್ ಮೋರಿಸ್ ಅವರು ಮಿಸ್ ಆಗಲಿದ್ದಾರೆ. ಮೋರಿಸ್ ಅವರನ್ನು ಆರ್ಸಿಬಿ 10 ಕೋಟಿ ಕೊಟ್ಟು ಖರೀದಿ ಮಾಡಿದೆ.

    ಸ್ಪಿನ್ನರ್ ಇಮ್ರಾನ್ ತಹೀರ್ ಹೊರತುಪಡಿಸಿ ಸೌತ್ ಆಫ್ರಿಕಾದ ಎಲ್ಲ ಆಟಗಾರರು ಐಪಿಎಲ್ ಆರಂಭದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಎಬಿ ಡಿವಿಲಿಯರ್ಸ್ (ಆರ್‌ಸಿಬಿ), ಕ್ವಿಂಟನ್ ಡಿ ಕಾಕ್ (ಎಂಐ), ಡೇಲ್ ಸ್ಟೇನ್ (ಆರ್‌ಸಿಬಿ), ಕ್ರಿಸ್ ಮೋರಿಸ್ (ಆರ್‌ಸಿಬಿ), ಕಗಿಸೊ ರಬಾಡಾ (ಡಿಸಿ), ಲುಂಗಿ ಎನ್‍ಜಿಡಿ (ಸಿಎಸ್‍ಕೆ), ಫಾಫ್ ಡು ಪ್ಲೆಸಿಸ್ (ಸಿಎಸ್‍ಕೆ), ಇಮ್ರಾನ್ ತಾಹಿರ್ (ಸಿಎಸ್‍ಕೆ) , ಡೇವಿಡ್ ಮಿಲ್ಲರ್ (ಆರಾರ್), ಹಾರ್ಡಸ್ ವಿಲ್ಜೋಯೆನ್ (ಕೆಎಕ್ಸ್‍ಐಪಿ) ಈ ಎಲ್ಲ ಆಟಗಾರರು ಈ ಬಾರಿಯ ಐಪಿಎಲ್ ಆಡಲು ಸಿದ್ಧರಿದ್ದರು.

  • ಕೊಹ್ಲಿ, ಎಬಿಡಿ ಏಕದಿನ ತಂಡದಲ್ಲಿ ಧೋನಿಯೇ ನಾಯಕ- ಓಪನರ್ಸ್ ಯಾರು?

    ಕೊಹ್ಲಿ, ಎಬಿಡಿ ಏಕದಿನ ತಂಡದಲ್ಲಿ ಧೋನಿಯೇ ನಾಯಕ- ಓಪನರ್ಸ್ ಯಾರು?

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಸೇರಿ ಜಂಟಿ ಏಕದಿನ ತಂಡವನ್ನು ಆಯ್ಕೆ ಮಾಡಿದ್ದು, ಆ ತಂಡಕ್ಕೆ ಧೋನಿಯನ್ನು ನಾಯಕನನ್ನಾಗಿ ಮಾಡಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ಇಡೀ ವಿಶ್ವವೇ ಸ್ತಬ್ಧವಾಗಿದೆ. ಈ ಹಿನ್ನೆಯಲ್ಲಿ ಮನೆಯಲ್ಲೇ ಉಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರರಾದ ಕೊಹ್ಲಿ ಮತ್ತು ಎಬಿಡಿ ಅಭಿಮಾನಿಗಳ ಜೊತೆ ಚಾಟ್ ಮಾಡಲು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದಿದ್ದರು. ಈ ವೇಳೆ ಇಬ್ಬರು ಸೇರಿಕೊಂಡು ಭಾರತ ಮತ್ತು ಸೌತ್ ಅಫ್ರಿಕಾ ಆಟಗಾರರು ಇರುವ ತಮ್ಮ ನೆಚ್ಚಿನ ಏಕದಿನ ತಂಡವನ್ನು ಕಟ್ಟಿದ್ದಾರೆ.

    https://www.instagram.com/p/B_U8grkFx3N/

    ಈ ವೇಳೆ ಆರಂಭಿಕರ ಆಯ್ಕೆ ಬಂದಾಗ ಎಬಿಡಿಯವರು ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿಕೊಂಡರೆ, ಕೊಹ್ಲಿ ಮಾತ್ರ ತನ್ನ ಪ್ರಸ್ತುತ ಏಕದಿನ ತಂಡದ ಆರಂಭಿಕ ಆಟಗಾರ ಹಿಟ್‍ಮ್ಯಾನ್ ರೋಹಿತ್ ಶರ್ಮಾನನ್ನು ಎರಡನೇ ಆರಂಭಿಕನಾಗಿ ಆಯ್ಕೆ ಮಾಡಿದ್ದಾರೆ. ನಂತರ ಮೂರು ನಾಲ್ಕನೇ ಕ್ರಮಾಂಕಕ್ಕೆ ತಮ್ಮಿಬ್ಬರನ್ನೇ ಆಯ್ಕೆ ಮಾಡಿದ್ದು, ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಮತ್ತು ನಾಲ್ಕನೇ ಕ್ರಮಾಂಕಕ್ಕೆ ಎಬಿಡಿ ವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ.

    ಇಬ್ಬರು ಸೇರಿ ಭಾರತ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ಮತ್ತು ಸೌತ್ ಆಫ್ರಿಕಾದ ಮಾಜಿ ಆಟಗಾರ ಜಾಕ್ ಕಾಲಿಸ್ ಅವರನ್ನು ತಮ್ಮ ತಂಡದ ಪ್ರಮುಖ ಆಲ್‍ರೌಂಡರ್ ಆಗಿ ಆಯ್ಕೆ ಮಾಡಿದ್ದಾರೆ. ನಂತರ ಧೋನಿ ಅವರುನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕೊಹ್ಲಿ ಭಾರತದ ಯುಜ್ವೇಂದ್ರ ಚಹಲ್ ಮತ್ತು ಬುಮ್ರಾ ಅವರನ್ನು ಆಯ್ಕೆ ಮಾಡಿಕೊಂಡರೆ, ಎಬಿಡಿ ಸೌತ್ ಆಫ್ರಿಕಾದ ಡೆಡ್ಲಿ ಬೌಲರ್ ಡೇಲ್ ಸ್ಟೇನ್ ಮತ್ತು ಕಗಿಸೊ ರಬಡಾ ಅವರನ್ನು ತಗೆದುಕೊಂಡಿದ್ದಾರೆ.

    ನಂತರ ತಂಡಕ್ಕೆ ನಾಯಕನ ಆಯ್ಕೆ ಪ್ರಕ್ರಿಯೆ ಬಂದಾಗ ಕೊಹ್ಲಿ ಮತ್ತು ಎಬಿಡಿ ಧೋನಿಯವರೇ ಈ ತಂಡದ ನಾಯಕನಾಗಲಿ ಎಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ಇಂಡಿಯಾದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಅವರನ್ನು ತಮ್ಮ ನೆಚ್ಚಿನ ಏಕದಿನ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಿದ್ದಾರೆ. ಧೋನಿ ನಾಯಕನಾಗಿ ಆಯ್ಕೆ ಮಾಡಿದ್ದರ ಬಗ್ಗೆ ಮಾತನಾಡಿದ ಕೊಹ್ಲಿ ನನಗೆ ಧೋನಿಯೇ ಸರಿ, ಎಂಎಸ್ ಬಹುಶಃ ಬಹಳ ಸಮತೋಲಿತ ನಾಯಕ ಎಂದು ಹೇಳಿದ್ದಾರೆ.

    ಈ ವೇಳೆ ಧೋನಿಯ ಬಗ್ಗೆ ಮಾತನಾಡಿದ ವಿಲಿಯರ್ಸ್, ನನಗೆ ಧೋನಿಯನ್ನು ಆಯ್ಕೆ ಮಾಡಿದ್ದಕ್ಕೆ ಖುಷಿಯಿದೆ. ನಾನು ಧೋನಿ ಅವರ ನಾಯಕತ್ವದಲ್ಲಿ ಎಂದು ಆಟವಾಡಿಲ್ಲ. ಆದರೆ ನಾನು ಧೋನಿಯನ್ನು ಗೌರವಿಸುತ್ತೇನೆ. ಅವರು ಮೈದಾನದಲ್ಲಿ ಮತ್ತು ಮೈದಾನದಿಂದ ಆಚೆಗೆ ನಡೆದುಕೊಳ್ಳುವ ರೀತಿ ನನಗೆ ಬಹಳ ಇಷ್ಟ. ಯಾವಾಗಲೂ ಕೂಲ್ ಆಗಿ ಇರುತ್ತಾರೆ ಮತ್ತು ಅವರಿಗೆ ಆಟದ ಬಗ್ಗೆ ತುಂಬಾ ತಿಳಿದಿದೆ. ಹಾಗಾಗಿ ಧೋನಿ ಆಯ್ಕೆ ಸರಿಯಿದೆ ಎಂದು ಹೇಳಿದ್ದಾರೆ.

    ಕೊಹ್ಲಿ ಎಬಿಡಿ ನೆಚ್ಚಿನ ಏಕದಿನ ತಂಡ
    ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಜಾಕ್ ಕಾಲಿಸ್, ಯುವರಾಜ್ ಸಿಂಗ್, ಎಂಎಸ್ ಧೋನಿ (ನಾಯಕ / ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ಡೇಲ್ ಸ್ಟೇನ್, ಜಸ್ಪ್ರೀತ್ ಬುಮ್ರಾ, ಕಗಿಸೊ ರಬಡಾ, ಇವರ ಜೊತೆಗೆ ತಂಡದಲ್ಲಿ ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಮೊರ್ನೆ ಮೊರ್ಕೆಲ್ ಅವರನ್ನೂ ಸಹ ಹೆಚ್ಚುವರಿ ಆಟಗಾರರನ್ನಾಗಿ ಹೆಸರಿಸಲಾಯಿತು.

    ಕೊಹ್ಲಿ ಮತ್ತು ಎಬಿಡಿ ಐಪಿಎಲ್ ತಂಡದಲ್ಲಿ ಆರ್.ಸಿ.ಬಿ ಪರವಾಗಿ ಆಡುತ್ತಾರೆ. ಹೀಗಾಗಿ ಭಾರತದಲ್ಲಿ ವಿರಾಟ್ ಮತ್ತು ಡಿವಿಲಿಯರ್ಸ್ ಗೆ ತನ್ನದೇ ಆದ ಅಭಿಮಾನಿ ವರ್ಗವಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಐಪಿಎಲ್ ಶುರುವಾಗಬೇಕಿತ್ತು. ಈ ಇಬ್ಬರು ಆಟಗಾರರನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಕೊರೊನಾ ವೈರಸ್ ಲಾಕ್‍ಡೌನ್ ನಿಂದ ಐಪಿಎಲ್ ಮುಂದಕ್ಕೆ ಹೋಗಿದೆ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.

  • ಧೋನಿಯನ್ನು ತಂಡದಿಂದ ಕೈಬಿಡಿ ಎಂದವರಿಗೆ ಎಬಿಡಿ ಖಡಕ್ ಮಾತು

    ಧೋನಿಯನ್ನು ತಂಡದಿಂದ ಕೈಬಿಡಿ ಎಂದವರಿಗೆ ಎಬಿಡಿ ಖಡಕ್ ಮಾತು

    ಮುಂಬೈ: ಧೋನಿಗೆ 80 ವರ್ಷ ವಯಸ್ಸಾದ್ರೂ ಅವರು ನನ್ನ ತಂಡದ ಶಾಶ್ವತ ಸದಸ್ಯರಾರುತ್ತಾರೆ ಎಂದು ಹೇಳುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ತಂಡದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದ ಮಂದಿಗೆ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಖಡಕ್ ಉತ್ತರ ನೀಡಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಧೋನಿ ಅವರನ್ನು ತಂಡದಿಂದ ಕೈ ಬಿಡುವ ಕುರಿತು ಪ್ರಶ್ನೆಗೆ ಕೇಳುತ್ತಿದಂತೆ ಪತ್ರಕರ್ತರತ್ತ ನೋಡಿ ನಗೆ ಬೀರಿದ ಎಬಿಡಿ, ಧೋನಿ ಅವರಿಗೆ 80 ವರ್ಷ ವಯಸ್ಸಾಗಿ, ವಿಲ್‍ಚೇರ್ ಮೇಲಿದ್ದರೂ ನನ್ನ ತಂಡದಲ್ಲಿ ಕಾಯಂ ಸ್ಥಾನ ನೀಡುತ್ತೇನೆ. ಧೋನಿ ತಂಡದ ಗೆಲುವಿಗಾಗಿ ಆಡುತ್ತಾರೆ ಎಂಬ ವಿಶ್ವಾಸ ನೀಡುತ್ತೇನೆ. ಅವರ ದಾಖಲೆಗಳು ನೋಡಿದರೆ ಎಲ್ಲವೂ ಆರ್ಥವಾಗುತ್ತದೆ. ಅಂತಹ ಆಟಗಾರರನ್ನು ತಂಡದಿಂದ ಡ್ರಾಪ್ ಮಾಡುತ್ತಾರಾ ಎಂದು ಮರು ಪ್ರಶ್ನೆ ಮಾಡಿದರು.

    ಇತ್ತೀಚೆಗೆ ಧೋನಿ ಅವರು ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿರುವ ಹಿನ್ನೆಲೆಯಲ್ಲಿ ತಂಡದಿಂದ ಅವರನ್ನು ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡುವುದು ಉತ್ತಮ ಎಂಬ ಅಭಿಪ್ರಾಯ ಕ್ರಿಕೆಟ್ ವಿಶ್ಲೇಷಕರಿಂದ ಕೇಳಿಬಂದಿತ್ತು. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಟೂರ್ನಿಯಲ್ಲಿ ಧೋನಿ ಆಡುತ್ತಿದ್ದು, ತಮ್ಮ ವಿರುದ್ಧ ಟೀಕೆಗಳಿಗೆ ಟೂರ್ನಿಯಲ್ಲಿ ಬ್ಯಾಟ್ ಮೂಲಕವೇ ಉತ್ತರ ನೀಡುತ್ತರಾ ಎನ್ನುವುದನ್ನು ಕಾದುನೋಡಬೇಕಿದೆ.

    ಟೀಂ ಇಂಡಿಯಾ ನಾಯಕತ್ವ ವಹಿಸಿ ವಿಶ್ವ ಕ್ರಿಕೆಟ್‍ನ ಪ್ರಮುಖ ಟೂರ್ನಿಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಗರಿಮೆ ಧೋನಿ ಅವರಿಗೆ ಸಲ್ಲುತ್ತದೆ. 2017ರಲ್ಲಿ ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿದು ಕೊಹ್ಲಿ ಅವರಿಗೆ ನಾಯಕತ್ವ ವಹಿಸಿದ್ದರು. ಧೋನಿ ಆಡಿರುವ ಇತ್ತೀಚಿನ 9 ಪಂದ್ಯಗಳಲ್ಲಿ ಕೇವಲ 156 ರನ್ ಮಾತ್ರ ಗಳಿಸಿದ್ದಾರೆ. ಆದರೆ ಸ್ಟಂಪ್ ಹಿಂದೆ ತಂಡಕ್ಕೆ ಬಲ ನೀಡುತ್ತಿರುವ ಧೋನಿ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/cricrohit1/status/1053721494079979520

  • ಕೊಹ್ಲಿ ಓರ್ವ ಶ್ರೇಷ್ಠ ನಾಯಕ, ಅದಕ್ಕಿಂತಲೂ ಹೆಚ್ಚಾಗಿ ಸ್ನೇಹಜೀವಿ: ಎಬಿಡಿ

    ಕೊಹ್ಲಿ ಓರ್ವ ಶ್ರೇಷ್ಠ ನಾಯಕ, ಅದಕ್ಕಿಂತಲೂ ಹೆಚ್ಚಾಗಿ ಸ್ನೇಹಜೀವಿ: ಎಬಿಡಿ

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‍ಶಿಪ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಫಲತೆ ಕಾಣುತ್ತಿದ್ದು, ಅಭಿಮಾನಿಗಳು ಟೀಕೆಗೆ ಗುರಿಯಾಗಿದೆ. ಅಲ್ಲದೇ, ವಿರಾಟ್ ಕೊಹ್ಲಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಡ ಹೆಚ್ಚುತ್ತಿದೆ.

    ಆದರೆ, ಇತ್ತ ಕೊಹ್ಲಿಗೆ ದಕ್ಷಿಣ ಆಫ್ರಿಕಾದ ಖ್ಯಾತ ಬ್ಯಾಟ್ಸ್‍ಮನ್ ಎಬಿಡಿ ವಿಲಿಯರ್ಸ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಓರ್ವ ಶ್ರೇಷ್ಠ ನಾಯಕ. ಅದಕ್ಕಿಂತ ಹೆಚ್ಚಾಗಿ ಅವರು ಉತ್ತಮ ಸ್ನೇಹ ಜೀವಿಯಾಗಿದ್ದಾರೆ. ಕಠಿಣ ಸಮಯದಲ್ಲಿಯೂ ತಂಡವನ್ನು ಮುನ್ನಡೆಸುವ ಕೊಹ್ಲಿ ಅವರು ಇತರರಿಗೆ ಪ್ರೇರಣೆಯಾಗಿದೆ ಎಂದು ಹಾಡಿ ಹೊಗಳಿದ್ದಾರೆ.

    ನಾನು ಕೊಹ್ಲಿ ಜತೆಗೆ ಆಡುವುದನ್ನು ಸದಾ ಇಷ್ಟಪಡುತ್ತೇನೆ. ಪಂದ್ಯದಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಲಿದೆ ಎಂದ ಅವರು, ನನ್ನ ಆಟದ ಬಗ್ಗೆ ನನಗೆ ಸಂತೋಷವಿದೆ. ಹೈದ್ರಾಬಾದ್ ವಿರುದ್ಧದ ಕಳೆದ ಪಂದ್ಯದಲ್ಲಿ ನಾನು ರಶೀದ್ ಖಾನ್ ಎಸೆದ ಬಾಲ್‍ಗೆ ಕ್ಲೀನ್ ಬೌಲ್ಡ್ ಆದೆ. ಖಾನ್ ಒಬ್ಬ ಉತ್ತಮ ಬೌಲರ್, ಅವರ ಬಗ್ಗೆ ನನಗೆ ಗೌರವವಿದೆ ಎಂದು ಹೇಳಿದರು.