Tag: Abbi Falls

  • ಶಿವಮೊಗ್ಗ | ಅಬ್ಬಿ ಫಾಲ್ಸ್‌ನಲ್ಲಿ ಬೆಂಗಳೂರಿನ ಯುವಕ ನೀರುಪಾಲು – ವಿಡಿಯೋ ವೈರಲ್‌

    ಶಿವಮೊಗ್ಗ | ಅಬ್ಬಿ ಫಾಲ್ಸ್‌ನಲ್ಲಿ ಬೆಂಗಳೂರಿನ ಯುವಕ ನೀರುಪಾಲು – ವಿಡಿಯೋ ವೈರಲ್‌

    ಶಿವಮೊಗ್ಗ: ಹೊಸನಗರ (Hosanagar) ತಾಲೂಕಿನ ಅಬ್ಬಿ ಫಾಲ್ಸ್‌ನಲ್ಲಿ (Abbi Falls) ಫೋಟೋ ತೆಗೆಸಿಕೊಳ್ಳಲು ಹೋಗಿ ಬೆಂಗಳೂರು ಮೂಲದ ಪ್ರವಾಸಿಗನೊಬ್ಬ ನೀರುಪಾಲಾಗಿದ್ದಾನೆ.

    ಮೃತನನ್ನು ಬೆಂಗಳೂರಿನ (Bengaluru) ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ರಮೇಶ್ (35) ಎಂದು ಗುರುತಿಸಲಾಗಿದೆ. ತಮ್ಮ ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಅಬ್ಬಿ ಫಾಲ್ಸ್‌ನಲ್ಲಿ ಫೋಟೋಗೆ ಪೋಸ್ ನೀಡುವಾಗ ಫಾಲ್ಸ್‌ಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

    ಫಾಲ್ಸ್‌ನಲ್ಲಿ ರಮೇಶ್‌ ಕಣ್ಮರೆಯಾಗುವ 20 ಸೆಕೆಂಡ್‌ನ ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ ರಮೇಶ್‌ ಬಂಡೆ ಮೇಲೆ ಕುಳಿತಿರುತ್ತಾರೆ. ವಿಡಿಯೋದ ಆರಂಭದಲ್ಲಿ ತಮ್ಮ ಎರಡು ಕೈಗಳನ್ನು ಮೇಲೆತ್ತಿ ಸಂಭ್ರಮಿಸುತ್ತಾರೆ. ನಂತರ ತಾನು ಕುಳಿತಿದ್ದ ಬಂಡೆಯಿಂದ ಕೆಳಗಿಳಿಯುತ್ತಾರೆ. ಈ ವೇಳೆ, ನೀರಿನ ರಭಸಕ್ಕೆ ರಮೇಶ್‌ ತೇಲಿ ಹೋಗಿದ್ದಾರೆ. ಕೊಚ್ಚಿಹೋಗುತ್ತಿದ್ದಂತೆ ಸ್ನೇಹಿತರು ಕೂಗಿಕೊಳ್ಳುವುದು ವಿಡಿಯೋ ರೆಕಾರ್ಡ್‌ ಆಗಿದೆ.

    ಘಟನೆಯ ಬಳಿಕ ರಮೇಶ್ ಮೃತದೇಹವು ಫಾಲ್ಸ್‌ನ ಕೆಳಭಾಗದಲ್ಲಿ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಬ್ಬಿ ಫಾಲ್ಸ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ನೀರುಪಾಲದ ಯುವಕ

    ಅಬ್ಬಿ ಫಾಲ್ಸ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ನೀರುಪಾಲದ ಯುವಕ

    ಶಿವಮೊಗ್ಗ: ಸೆಲ್ಫಿ ಕ್ರೇಜ್‍ಗೆ ಯುವಕನೊಬ್ಬ ಬಲಿಯಾದ ಘಟನೆ ಹೊಸನಗರ (Hosanagara) ತಾಲೂಕಿನ ಯಡೂರು ಸಮೀಪದ ಅಬ್ಬಿ ಜಲಪಾತದಲ್ಲಿ (Abbi Falls) ನಡೆದಿದೆ.

    ಮೃತ ಯುವಕನನ್ನು ಬಳ್ಳಾರಿ ಮೂಲದ ವಿನೋದ್ (26) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ 12 ಮಂದಿ ಯುವಕರು ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಯುವಕ ಫಾಲ್ಸ್ ಬಳಿ ಸೆಲ್ಫಿ ತೆಗೆಯಲು ಹೋಗಿದ್ದಾಗ ಈ ಅವಘಡ ನಡೆದಿದೆ. ಇದನ್ನೂ ಓದಿ: ಬಿಯರ್ ಬಾಟಲಿಯಿಂದ ಹಲ್ಲೆಗೈದು ಎಸ್ಕೇಪ್ ಆಗಲು ಯತ್ನ – ಆರೋಪಿ ಕಾಲಿಗೆ ಗುಂಡೇಟು

    ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: 1 ಲಕ್ಷ ರೂ. ವ್ಯವಹಾರಕ್ಕೆ 1 ಸಾವಿರ ರೂ. ಕಮಿಷನ್‌ – ವಂಚನೆಗಾಗಿ ಬಾಡಿಗೆಗೆ ಸಿಗುತ್ತೆ ಬ್ಯಾಂಕ್‌ ಖಾತೆ!

  • ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

    ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

    ಮಡಿಕೇರಿ: ಪ್ರವಾಸಕ್ಕೆಂದು ಬಂದ ಪ್ರವಾಸಿಗರ (Tourists) ಮೇಲೆ ಕ್ಷುಲ್ಲಕ ಕಾರಣಕ್ಕೆ ಪಾರ್ಕಿಂಗ್ ಸುಂಕ ವಸೂಲಿಗಾರರು (Customs Collectors) ದೊಣ್ಣೆಯಿಂದ ಹೊಡೆದು ಹಲ್ಲೆ (Attack) ಮಾಡಿರುವ ಘಟನೆ ಮಡಿಕೇರಿಯ ಅಬ್ಬಿ ಫಾಲ್ಸ್‌ನಲ್ಲಿ (Abbi Falls) ನಡೆದಿದೆ.

    ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಒಂದು ವಾರದ ಹಿಂದೆ ಆಟೋ  ಡ್ರೈವರ್‌ ಒಬ್ಬರಿಗೆ ಇದೇ ರೀತಿ ಹಲ್ಲೆ ನಡೆಸಲಾಗಿತ್ತು. ಹೀಗೇ ಹಲವು ಬಾರಿ ಪ್ರವಾಸಿಗರ ಮೇಲೆ ಇಲ್ಲಿನ ಸುಂಕ ವಸೂಲಿಗಾರರು ಹಲ್ಲೆ ನಡೆಸುತ್ತಿದ್ದಾರೆ ಎಂಬ ಆರೋಪ ಆಗಾಗ ಕೇಳಿ ಬರುತ್ತಿದೆ. ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಪ್ರವಾಸಿ ತಾಣವಾದ ಕೊಡಗಿಗೆ (Kodagu) ಯಾವುದೇ ಪ್ರವಾಸಿಗರು ಬರದಂತೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್‌ ಬಂಕ್‌ನಲ್ಲಿ ಅಗ್ನಿ ದುರಂತ – ತುಮಕೂರು ಯುವತಿ ಬಲಿ

    ದೂರದ ಊರಿನಿಂದ ಬರುವ ಪ್ರವಾಸಿಗರು ಹಲ್ಲೆಗೊಳಗಾದರೂ ಯಾವುದೇ ದೂರು ನೀಡದೇ ವಾಪಸ್ ತೆರಳುತ್ತಾರೆ. ದೂರು ನೀಡಿದರೆ ಮತ್ತೆ ಪುನಃ ಇಲ್ಲಿಯ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗಬೇಕಾದ ಕಷ್ಟದಿಂದ ಇದುವರೆಗೂ ಹಲ್ಲೆಗೊಳಗಾದ ಪ್ರವಾಸಿಗಳು ನೇರವಾಗಿ ದೂರು ನೀಡಿಲ್ಲ. ಇದರ ಲಾಭವನ್ನು ಪಡೆದ ವಸೂಲಿಗಾರರು ದುಪ್ಪಟ್ಟು ಬೆಲೆಗೆ ಸಾಮಗ್ರಿಗಳನ್ನು ಮಾರಾಟ ಮಾಡಿ ಪ್ರವಾಸಿಗರು ಪ್ರಶ್ನಿಸಿದಾಗ ಅವರ ಮೇಲೆ ನೇರವಾಗಿ ಹಲ್ಲೆ ನಡೆಸಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ. ಇದನ್ನೂ ಓದಿ: ಪ್ರಮಾಣವಚನ ಕಾರ್ಯಕ್ರಮದಲ್ಲಿ ಸರಗಳ್ಳರ ಕೈ ಚಳಕ!

    ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿದೆ. ಪೊಲೀಸ್ ಇಲಾಖೆ ನಮಗೆ ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ಈ ರೀತಿಯಾದ ಪ್ರಕರಣಗಳು ಹೀಗೇ ಮುಂದುವರಿದರೆ ಕೊಡಗು ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವ ಸಂಭವವಿದೆ. ಈಗಾಗಲೇ ಇಂತಹ ಪ್ರಕರಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರವಾಸಿಗರಲ್ಲಿ ಭೀತಿಯ ವಾತಾವರಣ ನಿರ್ಮಿಸುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಪೊಲೀಸರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಯುವಕನ ಹತ್ಯೆ ಪ್ರಕರಣ – ಇಬ್ಬರ ಬಂಧನ

  • ವೋಟ್ ಹಾಕಿ, ಶಾಯಿ ಗುರುತು ತೋರಿಸಿದ್ರೆ ಮಾತ್ರ ಪ್ರವಾಸಿತಾಣಗಳಿಗೆ ಎಂಟ್ರಿ – ಕೊಡಗು ಡಿಸಿ

    ವೋಟ್ ಹಾಕಿ, ಶಾಯಿ ಗುರುತು ತೋರಿಸಿದ್ರೆ ಮಾತ್ರ ಪ್ರವಾಸಿತಾಣಗಳಿಗೆ ಎಂಟ್ರಿ – ಕೊಡಗು ಡಿಸಿ

    ಮಡಿಕೇರಿ: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election) ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಮೂಡಿಸಲು ಕೊಡಗು ಜಿಲ್ಲಾಧಿಕಾರಿ (Kodagu DC) ವಿಶೇಷ ಕ್ರಮ ಅನುಸರಿಸಿದ್ದಾರೆ.

    ಅಂದು ಪ್ರವಾಸಿತಾಣಗಳಿಗೆ ಭೇಟಿ ನೀಡುವ ರಾಜ್ಯದ ಪ್ರವಾಸಿಗರು ಮತದಾನದ ಮಾಡಿ ಬಂದ್ರೆ ಮಾತ್ರ ಕೊಡಗಿನ ಪ್ರವಾಸಿತಾಣಗಳಿಗೆ (Kodagu Tourist Place) ಎಂಟ್ರಿ, ಇಲ್ಲದಿದ್ದರೆ ಪ್ರವೇಶಕ್ಕೆ ಅವಕಾಶ ಇರೋದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸೋ ಮುನ್ನ NEET ವಿದ್ಯಾರ್ಥಿನಿಯರಿಗೆ ಬ್ರಾ, ನಿಕ್ಕರ್ ತೆಗೆಲು ಸೂಚನೆ- ಭಾರೀ ಆಕ್ರೋಶ

    5 ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಬೇಕು. ಅದಕ್ಕಾಗಿ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಬೇಕು ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಮಂತಾಗೆ ‘ನನ್ನ ರೋಜಾ ನೀನೇ’ ಎಂದ ವಿಜಯ್ ದೇವರಕೊಂಡ

    ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಂಡಿರುವ ಕೊಡಗು ಜಿಲ್ಲೆಗೆ ದೇಶ-ವಿದೇಶದ ಪ್ರವಾಸಿಗರು ಬರುತ್ತಾರೆ. ಅಂದು ಹೊರರಾಜ್ಯ, ವಿದೇಶಿ ಪ್ರವಾಸಿಗರಿಗೆ ಪ್ರವಾಸಕ್ಕೆ ಅವಕಾಶವಿರುತ್ತದೆ. ಆದ್ರೆ ರಾಜ್ಯದ ಜನರಿಗೆ ಮತದಾನ ಮಾಡಿಬಂದವರಿಗೆ ಮಾತ್ರ ಪ್ರವೇಶವಿರುತ್ತದೆ. ಭದ್ರತಾ ಸಿಬ್ಬಂದಿ ದ್ವಾರದಲ್ಲೇ ನಿಂತು ವೋಟ್ ಮಾಡಿದ ಶಾಯಿ ಗುರುತನ್ನ ಪರಿಶೀಲಿಸಿ ನಂತರ ಪ್ರವೇಶಕ್ಕೆ ಅನುಮತಿ ನೀಡಲಿದ್ದಾರೆ.

    ಒಟ್ಟಿನಲ್ಲಿ ಕೊಡಗು ಜಿಲ್ಲೆಯ ರಾಜಾಸೀಟ್, ಅಬ್ಬಿ ಫಾಲ್ಸ್, ಕಾವೇರಿ ನಿಸರ್ಗಧಾಮ, ದುಬಾರೆ ಸಾಕಾನೆ ಶಿಬಿರಗಳಿಗೆ ಬರುವ ರಾಜ್ಯದ ಪ್ರವಾಸಿಗರು ಮತದಾನ ಮಾಡಿ ಬಂದ್ರೆ ಎಂಜಾಯ್ ಮಾಡಬಹುದು.

  • ಕೊಡಗಿನಲ್ಲಿ ಪ್ರವಾಸಿಗರಿಂದ ಕೋವಿಡ್ ನಿಯಮ ಉಲ್ಲಂಘನೆ

    ಕೊಡಗಿನಲ್ಲಿ ಪ್ರವಾಸಿಗರಿಂದ ಕೋವಿಡ್ ನಿಯಮ ಉಲ್ಲಂಘನೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿದ್ದ ವೀಕೆಂಡ್ ಕರ್ಫ್ಯೂನ್ನು ಕಳೆದ ವಾರದಿಂದ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗಿನೆಡೆಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಬಹುತೇಕ ಪ್ರವಾಸಿತಾಣದಲ್ಲಿ ಇದೀಗ ಪ್ರವಾಸಿಗರೇ ತುಂಬಿದ್ದು, ಪ್ರವಾಸೋದ್ಯಮದಲ್ಲಿ ತುಸು ಚೇತರಿಕೆ ಕಂಡು ಬಂದಿದೆ. ಆದರೆ ಕೊರೊನಾ ನಿಯಮಗಳನ್ನು ಮಾತ್ರ ಪ್ರವಾಸಿಗರು ಪಾಲಿಸುತ್ತಿಲ್ಲ.

    ಕೊಡಗಿನ ದುಬಾರೆ, ಕಾವೇರಿ ನಿಸರ್ಗ ಧಾಮ, ಮಡಿಕೇರಿ ರಾಜಾಸೀಟು, ಅಬ್ಬಿ ಫಾಲ್ಸ್, ಮಾಂದಲ್ ಪಟ್ಟಿ, ಮಲ್ಲಳ್ಳಿ ಜಲಪಾತಗಳ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಿದ್ದಾರೆ. ಇದೀಗ ಮಳೆ ಕೂಡ ಇಳಿಕೆಯಾಗಿರುವ ಕಾರಣ ಮಳೆ ಅವಾಂತರದ ಆತಂಕವೂ ದೂರವಾಗಿದೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿನ ಕಡೆ ಧಾವಿಸುತ್ತಿದ್ದಾರೆ. ಜಿಲ್ಲೆಗೆ ಬರುವ ಪ್ರವಾಸಿಗರು ಕೋವಿಡ್ ನಿಯಮಗಳನ್ನು ಮರೆತು ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿಗರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವುದು ನಿಜ: ಯಡಿಯೂರಪ್ಪ

    ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡದೆ ಫೋಟೋಗಳನ್ನು ಕ್ಲೀಕಿಸುತ್ತ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಪ್ರವಾಸಿಗರಿಗೆ ಕೋವಿಡ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಅಥವಾ ಪೊಲೀಸರು ಇಲ್ಲದೇ ಇರುವುದರಿಂದ ಜಿಲ್ಲೆಯ ಬಹುತೇಕ ಪ್ರವಾಸಿ ತಾಣದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಅಗುತ್ತಿದೆ. ಇದನ್ನೂ ಓದಿ: ಭಕ್ತರಿಗೆ ಘಾಸಿಯಾಗಿದೆ, ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ: ಬೊಮ್ಮಾಯಿ

    ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ಪ್ರವಾಸಿಗರಿಗೆ ಸ್ಥಳೀಯ ಗ್ರಾಮ ಪಂಚಾಯತಿಗಳ ಸಿಬ್ಬಂದಿ ಸಹ ತಿಳಿ ಹೇಳಬೇಕಿದೆ. ಸಿಬ್ಬಂದಿ ಇಲ್ಲದಿರುವುದರಿಂದ ಹೋರ ರಾಜ್ಯ, ಹೋರ ಜಿಲ್ಲೆಯಿಂದ ಬರುವ ಪ್ರವಾಸಿಗರು ನಿಯಮಗಳನ್ನು ಮರೆತು ಮನಸೋಇಚ್ಛೆ ವರ್ತಿಸುತ್ತಾರೆ. ಇದೇ ರೀತಿ ಪ್ರವಾಸಿಗರು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ.

  • ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗಿದ್ದ ಪ್ರವಾಸಿಗರ ರಕ್ಷಣೆ: ತಪ್ಪಿದ ಭಾರೀ ಅನಾಹುತ

    ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗಿದ್ದ ಪ್ರವಾಸಿಗರ ರಕ್ಷಣೆ: ತಪ್ಪಿದ ಭಾರೀ ಅನಾಹುತ

    ಶಿವಮೊಗ್ಗ: ಜಲಪಾತ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದು ಪ್ರವಾಸಿಗರನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ಘಟನೆ ಹೊಸನಗರ ತಾಲೂಕಿನ ಅಬ್ಬಿ ಫಾಲ್ಸ್ ಬಳಿ ನಡೆದಿದೆ.

    ಕೆಲ ಪ್ರವಾಸಿಗರು ಶನಿವಾರ ಮಧ್ಯಾಹ್ನ ಯಡೂರಿನ ಅಬ್ಬಿ ಫಾಲ್ಸ್ ವೀಕ್ಷಣೆಗೆ ತೆರಳಿದ್ದರು. ಅಬ್ಬಿ ಫಾಲ್ಸ್ ನಲ್ಲಿ ಸುಮಾರು 200 ಅಡಿ ಆಳಕ್ಕೆ ನೀರು ಜಿಗಿಯುತ್ತದೆ. ಫಾಲ್ಸ್ ವೀಕ್ಷಣೆ ವೇಳೆ ಐವರು ಕಾಲು ಜಾರಿ ಬಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಈ ಐವರ ಪೈಕಿ ಒಬ್ಬರು ಸುಮಾರು 20 ಅಡಿ ಆಳಕ್ಕೆ ಹೋಗಿದ್ದರು.

    ನೀರಿನಲ್ಲಿ ಕೊಚ್ಚಿ ಹೋಗಿ ಕಲ್ಲಿನ ಆಸರೆ ಪಡೆದಿದ್ದ ಪ್ರವಾಸಿಗರು ಯಾರಾದರು ಬಂದು ನಮ್ಮನ್ನು ರಕ್ಷಣೆ ಮಾಡಿ ಎಂದು ಕೂಗುತ್ತಿದ್ದರು. ಇದನ್ನು ಕೇಳಿಸಿಕೊಂಡ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಗ್ಗದ ಸಹಾಯದಿಂದ ಐವರನ್ನೂ ಸ್ಥಳೀಯರು ರಕ್ಷಿಸಿದ್ದಾರೆ.

    ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಲ್ಲು ಬಂಡೆಯ ನಡುವೆ ಕೊಚ್ಚಿ ಹೋಗಿದ್ದ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಕೂದಲೆಳೆ ಅಂತರದಲ್ಲಿ ದೊಡ್ಡ ಅಪಾಯ ತಪ್ಪಿದೆ. ರಕ್ಷಣಾ ಕಾರ್ಯಾಚಣೆ ಕೈಗೊಂಡ ಯುವಕರು ಹಾಗೂ ಸ್ಥಳೀಯರ ಸಮಯ ಪ್ರಜ್ಞೆ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

  • ಕರುನಾಡಿನ ಕಾಶ್ಮೀರದಲ್ಲಿ ಬಿಸಿಯೇರಿಸಿದೆ ಪಾಲಿಟಿಕ್ಸ್..!

    ಕರುನಾಡಿನ ಕಾಶ್ಮೀರದಲ್ಲಿ ಬಿಸಿಯೇರಿಸಿದೆ ಪಾಲಿಟಿಕ್ಸ್..!

    ಕಾಫಿ ಘಮದ ನಡುವೆ ಕರಿ ಮೆಣಸಿನ ಘಾಟು. ಮಡಿಕೇರಿಯ ಚಳಿಗೆ ಇವೆರಡು ಡೆಡ್ಲಿ ಕಾಂಬಿನೇಶನ್ನು..! ಅರೆ ಮಲೆನಾಡು ಹಾಗೂ ಮಲೆನಾಡು ಪ್ರದೇಶ ಹೊಂದಿರೋ ಕೂರ್ಗ್ ಪ್ರವಾಸಿಗರ ಎವರ್ ಗ್ರೀನ್ ಹಾಟ್ ಸ್ಪಾಟ್..!ಎತ್ತ ನೋಡಿದ್ರೂ ಸದಾ ಹಿಮದ ಹೊದಿಕೆಯೇ ಆವರಿಸಿ ಶ್ವೇತ ಸುಂದರಿಯಂತೆ ಕಾಣೋ ಕರುನಾಡ ಕಾಶ್ಮೀರ ನಿತ್ಯ ಸುಮಂಗಲೆ. ಚುಮು ಚುಮು ಚಳಿ. ಅದಕ್ಕೆ ಹಿತವಾದ ಅನುಭವ ನೀಡೋ ಕಾಫಿ ವಾಹ್, ಸ್ವರ್ಗ ಅಂತೇನಾದ್ರೂ ಇದ್ರೆ ಇದೇ ಕಣ್ರೀ..ಮಡಿಕೇರಿಯ ಸೌಂದರ್ಯ ಒಂದು ರೀತಿಯಲ್ಲಿ ವರ್ಣನಾತೀತ ಅನುಭವ ಕೊಡುತ್ತೆ. ಇಂತಿಪ್ಪ ಮಡಿಕೇರಿಯಲ್ಲಿ ಈಗ ಚುನಾವಣೆಯಿಂದಾಗಿ ಬಿಸಿ ಏರಿದೆ.

    ಕೆಚ್ಚೆದೆಯ ಸಿಪಾಯಿಗಳಿಗೆ ಜನ್ಮವಿತ್ತ ವೀರಭೂಮಿ ಮಡಿಕೇರಿ..!
    ಮುತ್ತಿನ ಹಾರ ಸಿನಿಮಾದ ಮಡಿಕೇರಿ ಸಿಪಾಯಿ ಅನ್ನೋ ಹಾಡನ್ನು ಕೇಳದೇ ಇದ್ದವರು ಬಹಳ ವಿರಳ ಅನ್ಸುತ್ತೆ. ಇದೇ ಕೊಡಗಿನ ವೀರ ಯೋಧನ ಸುತ್ತ ಸುತ್ತೋ ಕಥೆ ಹೃದಯ ಕಲಕಿ ಬಿಡುತ್ತೆ. ಹೌದು.. ಕೊಡಗು ಅನ್ನೋ ಕರ್ನಾಟಕದ ಕಾಶ್ಮೀರದಲ್ಲಿ ಇಂದಿಗೂ ಮನೆ ಮನೆಗೊಬ್ಬರಂತೆ ಸೇನೆ ಸೇರುವವರನ್ನು ಕಾಣಬಹುದು. ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯ ಹೀಗೆ ಅನೇಕ ವೀರರನ್ನ ಕೊಟ್ಟ ಕೊಡಗು ದೇಶ ರಕ್ಷಣೆಯ ವಿಚಾರ ಬಂದಾಗ ಸದಾ ಸಿದ್ಧ.

    ರಾಷ್ಟ್ರ ಕ್ರೀಡೆ ಹಾಕಿಯೇ ಕೊಡವರ ಹಾಟ್ ಫೇವರೇಟ್..!
    ನಮ್ಮ ದೇಶದ ಕ್ರೀಡೆ ಆಗಿದ್ರೂ ಕ್ರಿಕೆಟ್ ಬಗ್ಗೆಯೇ ನಮ್ಮ ಜನಕ್ಕೆ ಒಲವು ಜಾಸ್ತಿ. ಆದ್ರೆ, ಕೊಡವರು ಮಾತ್ರ ಇದ್ರಲ್ಲೂ ತಮ್ಮ ದೇಶಭಕ್ತಿಯನ್ನ ಮೆರೆದಿದ್ದಾರೆ. ಕ್ರಿಕೆಟ್‌, ವಾಲಿಬಾಲ್‌ ಟೂರ್ನಮೆಂಟ್ ಗಳು ಹೇಗೆ ನಡೆಯುತ್ವೋ ಕೊಡಗಿನಲ್ಲಿ ಮಾತ್ರ ಕೊಡವ ಮನೆತನಗಳ ನಡುವೆ ಹಾಕಿ ಟೂರ್ನಮೆಂಟ್ ಗಳು ನಡೆಯುತ್ತವೆ.

    ಚಾರಣಿಗರ ಪಾಲಿನ ಅಗಣಿತ ರಹಸ್ಯಗಳ ಹೂರಣ..ಪ್ರವಾಸಿಗರಿಗೆ ಇದು ನಿತ್ಯ ನೂತನ..!
    ಹನಿ ಮೂನ್ ಅಂದ್ರೆ ಇವತ್ತಿಗೂ ಕೊಡಗು ನವ ದಂಪತಿಗಳ ನೆಚ್ಚಿನ ತಾಣ. ಅದ್ರ ಹೊರತಾಗಿಯೂ ಚಾರಣಿಗರ, ಪ್ರವಾಸಿಗರ ಎಂದೂ ಮರೆಯಲಾಗದ ನೆನಪುಗಳ ಕಟ್ಟಿ ಕೊಡೋ ಸುಂದರ ಸ್ಥಳ. ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಎಂಟು ಕಿಲೋ ಮೀಟರ್ ದೂರದಲ್ಲಿದೆ ಅಬ್ಬಿ ಜಲಪಾತ. ಏಲಕ್ಕಿಯ ಹಾಗೂ ಕಾಫಿಯ ನವಿರಾದ ಘಮವನ್ನ ಆಸ್ವಾದಿಸುತ್ತಾ ಸ್ವಲ್ಪವೇ ದೂರ ನಡೆದರೆ ಸಿಗುತ್ತಾಳೆ ಹಾಲಿನ ಬಣ್ಣದ ಸುಂದರಿ ಅಬ್ಬಿ. ಬಿರು ಬೇಸಿಗೆಯಲ್ಲೂ ಅಬ್ಬಿ ಮಾತ್ರ ಸದಾ ತುಂಬಿ ಹರಿಯುತ್ತಾಳೆ.

    ಕೊಡಗಿನ ಮತ್ತೊಂದು ಅಟ್ರಾಕ್ಟಿವ್ ಜಾಗ ಅಂದ್ರೆ ರಾಜಾ ಸೀಟ್. ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿರೋ ಕಥೆಯ ಪ್ರಕಾರ ರಾಜ ಮಹಾರಾಜರುಗಳು ಇಲ್ಲಿ ಸಂಜೆಯ ವಾಯುವಿಹಾರಕ್ಕೆ ಅಂತಾ ಬರ್ತಿದ್ರಂತೆ. ಹೀಗಾಗಿ ಇದಕ್ಕೆ ಮುಂದೆ ರಾಜಾಸ್ ಸೀಟ್ ಅನ್ನೋ ಹೆಸರು ಬಂತು. ಅದುವೇ ಮುಂದೆ ರಾಜಾ ಸೀಟ್ ಆಗಿದ್ದು ಈಗ ಇತಿಹಾಸ. ಇಲ್ಲಿನ ಸೂರ್ಯಾಸ್ತವನ್ನು ನೋಡೋದೇ ಮನಸ್ಸಿಗೆ ಮುದ ಕೊಡುತ್ತದೆ.

    ಕನ್ನಡನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ. ಏಳು ಪವಿತ್ರ ನದಿಗಳಲ್ಲಿ ಕಾವೇರಿಯ ಹೆಸರೂ ಉಲ್ಲೇಖವಾಗಿದೆ. ಬ್ರಹ್ಮಗಿರಿ ಬೆಟ್ಟ ಸಮುದ್ರ ಮಟ್ಟದಿಂದ 4500 ಅಡಿ ಎತ್ತರವಿದ್ದು ಇಲ್ಲೇ ಕಾವೇರಿ ಉಗಮವಾಗುತ್ತಾಳೆ. ತಲಕಾವೇರಿ ಉಗಮಸ್ಥಾನದ ದೊಡ್ಡ ಕೊಳದಲ್ಲಿ ಭಕ್ತರು ತೀರ್ಥ ಸ್ನಾನ ಮಾಡೋದು ಸರ್ವೇ ಸಾಮಾನ್ಯ. ತುಲಾ ಸಂಕ್ರಮಣದಂದು ತೀರ್ಥೋದ್ಭವವಾಗುತ್ತೆ. ಇನ್ನು, ಕಾವೇರಿ ಹುಟ್ಟಿದ ಜಾಗ ಬ್ರಹ್ಮಗಿರಿ, ಇಲ್ಲೇ ಸಪ್ತ ಋಷಿಗಳು ಯಜ್ಞ ಮಾಡಿದ್ರು ಅನ್ನೋ ಉಲ್ಲೇಖಗಳಿವೆ.

    ಮಡಿಕೇರಿಯ ಮಧ್ಯಭಾಗದಲ್ಲಿರೋ ಪ್ರಮುಖ ಆಕರ್ಷಣೆ ಅಂದ್ರೆ 19ನೇ ಶತಮಾನದ ಕೋಟೆ. ಒಂದು ಮಂದಿರ ಹಾಗೂ ಕಾರಾಗೃಹ ಈ ಕೋಟೆಯ ಒಳಗಿದೆ. 1814ರಲ್ಲಿ ಲಿಂಗರಾಜೇಂದ್ರ ಒಡೆಯರ್‌ ಈ ಕೋಟೆಯನ್ನು ಕಟ್ಟಿಸಿದರು. ಈ ಕೋಟೆಯ ಮೇಲೆ ನಿಂತು ನೋಡಿದ್ರೆ ಮಡಿಕೇರಿಯ ಸೌಂದರ್ಯ ಗೋಚರಿಸುತ್ತೆ.

    ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ಅನ್ನೋ ಮೂರು ನದಿಗಳು ಸಂಧಿಸೋ ಜಾಗ ಭಾಗಮಂಡಲ. ಈ ತ್ರಿವೇಣಿ ಸಂಗಮದಲ್ಲಿ ಕೇರಳ ಮಾದರಿಯ ಆಕರ್ಷಕ ದೇವಸ್ಥಾನವಿದೆ. ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ಕೇರಳೀಯ ಶೈಲಿಯ ಆಕರ್ಷಕ ದೇವಸ್ಥಾನವಿದೆ. ಇನ್ನು, ಕುಶಾಲನಗರ ಸಮೀಪ ಕಾವೇರಿ ನದಿಗೆ ಕಟ್ಟಲಾದ ಹಾರಂಗಿ ಜಲಾಶಯವು ಮತ್ತೊಂದು ಪ್ರವಾಸಿ ಸ್ಥಳ.

    ಕಾವೇರಿ ನದಿ ತಟದಲ್ಲಿರೋ ದುಬಾರೆ ಆನೆಗಳ ತರಬೇತಿ ಕೇಂದ್ರ ಬಹಳ ಆಕರ್ಷಿಸುತ್ತೆ. ಕಾಡಿನಿಂದ ನಾಡಿಗೆ ಬಂದು ತೊಂದರೆ ಕೊಡೋ ಆನೆಗಳನ್ನು ಇಲ್ಲಿಗೆ ಕರೆತಂದು ಪಳಗಿಸಲಾಗಿಸುತ್ತದೆ. ಪ್ರವಾಸೋಧ್ಯಮ ನಿಟ್ಟಿನಿಂದ ಇಲ್ಲಿ ಮಾವುತರ ಸಹಾಯದಿಂದ ಆನೆ ಸವಾರಿಗೂ ಕೂಡ ಸರ್ಕಾರ ಅನುಮತಿ ನೀಡಿದೆ. ಬೋಟಿಂಗ್‌ ಇಲ್ಲಿನ ವಿಶೇಷ. ಸಂಜೆ ವೇಳೆ ಆನೆಗಳು ಸ್ನಾನಕ್ಕೆ ಬರೋದನ್ನ ನೋಡೋದೇ ಚೆಂದ. ಅಂದ ಹಾಗೆ ಇದು ಸಿದ್ದಾಪುರ-ಕುಶಾಲನಗರ ರಸ್ತೆಯಲ್ಲಿದೆ.

    ಕೊಡವರ ಆಚರಣೆ, ಭಾಷೆ, ವೇಷ ಭೂಷಣ ಸಖತ್ ಡಿಫರೆಂಟ್..!
    ಕೊಡವರದ್ದು ಕ್ಷಾತ್ರ ಧರ್ಮ. ಹೀಗಾಗಿ ಧೈರ್ಯ ಅನ್ನೋದು ರಕ್ತದಲ್ಲೇ ಬಂದಿದೆ. ಪ್ರಕೃತಿ ಹಾಗೂ ಪೂರ್ವಜರನ್ನು ಪೂಜೆ ಮಾಡೋದನ್ನ ಇವರು ಪಾಲಿಸಿಕೊಂಡು ಬಂದಿರೋದು. ಮಾತೃ ಭಾಷೆ ಕೊಡವ ತಕ್ಕ್. ಕೈಲ್‌ ಪೊಳ್ದ್, ಕಾವೇರಿ ಸಂಕ್ರಮಣ ಹಾಗೂ ಪುತ್ತರಿ ಹಬ್ಬವನ್ನು ಇಲ್ಲಿ ಕೊಡವರು ಬಹಳ ಸಂಭ್ರಮದಿಂದ ಆಚರಿಸ್ತಾರೆ. ಕುಪ್ಯ, ಚೇಲೆ, ಪೀಚೆಕತ್ತಿ, ಮಂಡೆ ತುಣಿ ಅನ್ನೋ ವಿಭಿನ್ನ ಸಾಂಪ್ರದಾಯಿಕ ವಸ್ತ್ರವನ್ನ ಪುರುಷರು ತೊಡ್ತಾರೆ. ಮಹಿಳೆಯರು ಸೀರೆ ಉಡುವ ಶೈಲಿಗೆ ಕೊಡವ ಪೊಡೆಯ ಅನ್ನೋದಾಗಿ ಕರೆಯಲಾಗುತ್ತೆ. ಪತ್ತಾಕ್, ಜೋಮಾಲೆ, ಕೊಕ್ಕೆತತ್ತಿ, ಪೊಮ್ಮಾಲೆ, ಅಡ್ಡಿಗೆ ಹೀಗೆ ವಿವಿಧ ರೀತಿಯ ಆಭರಣಗಳಿಂದ ತಮ್ಮನ್ನ ತಾವು ಸಿಂಗರಿಸಿಕೊಳ್ತಾರೆ.

    ಬಾಯಲ್ಲಿ ನೀರೂರಿಸುತ್ವೆ ಕೊಡವರ ತಿಂಡಿ ತಿನಿಸುಗಳು
    ಅನ್ನ, ಗಂಜಿ, ಹಿಟ್ಟಿನಿಂದ ರೊಟ್ಟಿ ಮತ್ತು ನೂಪುಟ್ಟ್, ತರಿಯಿಂದ ಪಾಪುಟ್ಟ್ ಮತ್ತು ಕಡಂಬುಟ್ಟ್, ಇತ್ಯಾದಿಗಳಲ್ಲದೆ, ವಿಶೇಷ ಸಂದರ್ಭಗಳಲ್ಲಿ ತುಪ್ಪದನ್ನ ಮಾಡುತ್ತಾರೆ. ತಳಿಯಪುಟ್ಟ್ ಮತ್ತು ದೋಸೆ ಕೊಡವರ ಸಾಂಪ್ರದಾಯಿಕ ಸೈಡ್ ಢಿಶ್ ಜೊತೆ ಆಸ್ವಾದಿಸ್ಲೇಬೇಕು. ಇವರು ಶುದ್ಧ ಮಾಂಸಾಹಾರಿಗಳು. ಕೊಡವ ಶೈಲಿಯ ಪಂದಿಕರಿ ಹಾಗೂ ಅಕ್ಕಿ ರೊಟ್ಟಿ ಒಳ್ಳೇ ಕಾಂಬಿನೇಷನ್.

    ಕರ್ನಾಟಕದ ಕಾಶ್ಮೀರದಲ್ಲಿ ಬೊಂಬಾಟ್ ರಾಜಕೀಯ..!
    ಕಳೆದ ಹಲವಾರು ದಶಕಗಳಿಂದ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಅನ್ನೋ ಕೂಗು ಕೇಳ್ತಾನೇ ಇದೆ. ಇದಕ್ಕೆ ಸಂಬಂಧ ಪಟ್ಟಂತೆ ಹಲವಾರು ಹೋರಾಟಗಳೂ ನಡೆದು ಹೋಗಿವೆ. ಇದೂ ಕೂಡಾ ಇಲ್ಲಿ ರಾಜಕೀಯದ ಅಸ್ತ್ರವಾಗಿ ದಶಕಗಳೇ ಕಳೆದಿವೆ. ಅಂದ ಹಾಗೆ, ಕೊಡಗಿನಲ್ಲಿ ಕಾಫಿ ಹಾಗೂ ಕಾಳು ಮೆಣಸು ಪ್ರಧಾನ ಬೆಳೆ. ಆದ್ರೆ, ಇವೆಲ್ಲದ್ರ ನಡುವೆ ಅನೇಕ ಸಮಸ್ಯೆಗಳು ಇಲ್ಲಿ ಬಾಧಿಸ್ತಿವೆ. ಕಾಡಾನೆ ಹಾವಳಿ, ಬೇಸಿಗೆಯಲ್ಲಿ ಕುಡಿಯೋ ನೀರಿನ ಸಮಸ್ಯೆ, ಮಲ್ಲಳ್ಳಿ ಜಲಪಾತದ ತೂಗು ಸೇತುವೆ ಬೇಡಿಕೆ,

    ಕೊಡಗಿನಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿವೆ. ಮಡಿಕೇರಿ ಹಾಗೂ ವಿರಾಜ ಪೇಟೆ. ಮಾಜಿ ಮುಖ್ಯಮಂತ್ರಿ ದಿ. ಆರ್ ಗುಂಡೂರಾವ್ ಇಲ್ಲಿಂದ ಗೆದ್ದು ಮುಂದೆ ಸಿಎಂ ಆಗಿದ್ದು ಇತಿಹಾಸ. ಇಲ್ಲಿ ಅರೆ ಒಕ್ಕಲಿಗ ಗೌಡ್ರು ಪ್ರಾಬಲ್ಯ ಹೊಂದಿದ್ರೂ ಕೊಡವ, ಬ್ರಾಹ್ಮಣ ಹಾಗೂ ಇತರರೇ ಗೆದ್ದಿದ್ದಾರೆ.

    ಮಡಿಕೇರಿಯ ಕೇರಿ ಏರೋ ದಿಲ್ ದಾರ್ ಯಾರು..?
    2013ರಲ್ಲಿ ಬಿಜೆಪಿಯಿಂದ ಕಂಟೆಸ್ಟ್ ಮಾಡಿದ್ದ ಅಪ್ಪಚ್ಚು ರಂಜನ್ 56,696 ಮತಗಳನ್ನು ಗಳಿಸಿ ಮಡಿಕೇರಿ ಜನರ ಕೃಪೆಗೆ ಪಾತ್ರರಾಗಿದ್ರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಜೀವಿಜಯ 4000 ಮತಗಳ ಅಂತರದಿಂದ ಸೋತರೂ ಟಫ್ ಫೈಟ್ ಕೊಟ್ಟಿದ್ರು. ಕಾಂಗ್ರೆಸ್ ನ ಕೆ.ಎಂ ಲೋಕೇಶ್ 21% ವೋಟು ಗಳಿಸಿದ್ರು. ಈ ಬಾರಿ ಬಿಜೆಪಿ ಗೆಲ್ಲೋ ಲಕ್ಷಣಗಳಿದ್ರೂ ಜೆಡಿಎಸ್ ನಿಂದ ಮತ್ತೆ ಬಲವಾದ ಸ್ಪರ್ಧೆ ಒಡ್ಡೋ ಎಲ್ಲಾ ನಿರೀಕ್ಷೆಗಳೂ ಕಾಣಿಸ್ತಿವೆ. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಟಿಪ್ಪು ಜಯಂತಿ ಆಚರಣೆ ವಿವಾದಗಳು ತನಗೆ ಪ್ಲಸ್ ಆಗಬಹುದು ಅನ್ನೋ ನಿರೀಕ್ಷೆ ಬಿಜೆಪಿಯದ್ದು. ಹಾಗಾಗಿ ಈ ಬಾರಿ ಬಿಜೆಪಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದೆ. ಈ ಬಾರಿ ಕಾಂಗ್ರೆಸ್ ನಿಂದ  ಕೆಪಿ ಚಂದ್ರಕಲಾ ಅಖಾಡದಲ್ಲಿದ್ದಾರೆ.

    ವಿರಾಜಪೇಟೆಯಲ್ಲಿ ರಾರಾಜಿಸೋರು ಯಾರು..?
    ವಿರಾಜಪೇಟೆಯಿಂದ ಈ ಬಾರಿ ಜೆಡಿಎಸ್ ಮೊದಲೇ ಟಿಕೆಟ್ ಘೋಷಣೆ ಮಾಡಿಯಾಗಿತ್ತು. ರೈತ ಪರ ಹೋರಾಟಗಾರ ಸಂಕೇತ್ ಪೂವಯ್ಯ ಕಣದಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಾದಪ್ಪ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯ್ತು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ಕೆಜಿ ಬೋಪಯ್ಯ 67,250 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿದ್ರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿಟಿ ಪ್ರದೀಪ್ ಎರಡನೇ ಸ್ಥಾನ ಪಡೆಯಲಷ್ಟೇ ಶಕ್ತರಾದ್ರು. ಈ ಬಾರಿ ಕಾಂಗ್ರೆಸ್ ನಿಂದ ಅರುಣ್ ಮಾಚಯ್ಯ ಸ್ಪರ್ಧಿಸ್ತಾ ಇದ್ದಾರೆ. ಹಾಗಾದ್ರೆ, ಈ ಬಾರಿ ವಿರಾಜ ಪೇಟೆಯ ಗದ್ದುಗೆಯಲ್ಲಿ ವಿರಾಜಮಾನರಾಗೋಕೆ ಯಾರಿಗೆ ಅವಕಾಶ ಮಾಡಿಕೊಡ್ತಾರೆ ಅನ್ನೋದಷ್ಟೇ ಕುತೂಹಲ.