Tag: AB deVilliers

  • 29 ಎಸೆತದಲ್ಲಿ 50 ರನ್‌ ಚಚ್ಚಿದ ಎಬಿಡಿ

    29 ಎಸೆತದಲ್ಲಿ 50 ರನ್‌ ಚಚ್ಚಿದ ಎಬಿಡಿ

    ದುಬೈ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಐಪಿಎಲ್‌ ಮೊದಲ ಪಂದ್ಯದಲ್ಲೇ ಮಿಂಚಿದ್ದಾರೆ. 29 ಎಸೆತದಲ್ಲಿ 50 ರನ್‌ ಸಿಡಿಸಿ ಮತ್ತೆ ನಾನೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್‌ ಎಂಬುದನ್ನು ನಿರೂಪಿಸಿದ್ದಾರೆ.

    30 ಎಸೆತದಲ್ಲಿ 51 ರನ್‌ ಹೊಡೆದ ಎಬಿಡಿ ಕೊನೆಯ ಓವರ್‌ನಲ್ಲಿ ರನೌಟ್‌ ಆದರು. ಈ ಸುಂದರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ, 2 ಸಿಕ್ಸ್‌ ಚಚ್ಚಿದ್ದರು.

    ಎಬಿಡಿ ಮತ್ತು ಕರ್ನಾಟಕದ ರಣಜಿ ಆಟಗಾರ ದೇವದತ್‌ ಪಡಿಕ್ಕಲ್‌ ಅವರ ಸೊಗಸಾದ ಅರ್ಧಶತಕದಿಂದ ಆರ್‌ಸಿಬಿ ಹೈದರಾಬಾದ್‌ ತಂಡಕ್ಕೆ 164 ರನ್‌ಗಳ ಗುರಿಯನ್ನು ನೀಡಿದೆ. ಇದನ್ನೂ ಓದಿ: ಭಾರತದ ಕ್ರಿಕೆಟ್‌ನಲ್ಲಿ ಪಡಿಕ್ಕಲ್‌ ಅಪರೂಪದ ಸಾಧನೆ

    ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಬೆಂಗಳೂರು ಪರ ಪಡಿಕ್ಕಲ್‌ ಮತ್ತು ಫಿಂಚ್‌ ಉತ್ತಮ ಆರಂಭ ನೀಡಿದರು. ಇವರಿಬ್ಬರು 67 ಎಸೆತಗಳಲ್ಲಿ 90 ರನ್‌ ಜೊತೆಯಾಟವಾಡಿದರು. ಪಡಿಕ್ಕಲ್‌ ಔಟಾದ ಬೆನ್ನಲ್ಲೇ 29 ರನ್‌(27 ಎಸೆತ, 2 ಬೌಂಡರಿ) ಹೊಡೆದಿದ್ದ ಫಿಂಚ್‌ ಎಲ್‌ಬಿಗೆ ಔಟಾದರು. ಕೊಹ್ಲಿ 13 ಎಸೆತಕ್ಕೆ 14 ರನ್‌ ಹೊಡೆದು ಔಟಾದರು.

    ಶಿವಂ ದುಬೆ 7 ರನ್‌ ಹೊಡೆದು ಔಟಾದರು. ಅಂತಿಮವಾಗಿ ಬೆಂಗಳೂರು ತಂಡ 5 ವಿಕೆಟ್‌ ಕಳೆದುಕೊಂಡು 163 ರನ್‌ ಗಳಿಸಿತು.