Tag: AB de Villiers

  • 19ನೇ ಓವರಿನಲ್ಲಿ 25 ರನ್, 22 ಬಾಲಿಗೆ ಎಬಿಡಿ ಅರ್ಧ ಶತಕ – ಆರ್‌ಸಿಬಿಗೆ 7 ವಿಕೆಟ್‍ಗಳ ಜಯ

    19ನೇ ಓವರಿನಲ್ಲಿ 25 ರನ್, 22 ಬಾಲಿಗೆ ಎಬಿಡಿ ಅರ್ಧ ಶತಕ – ಆರ್‌ಸಿಬಿಗೆ 7 ವಿಕೆಟ್‍ಗಳ ಜಯ

    – 6 ಸಿಕ್ಸ್, 1 ಫೋರ್ ಮಿಸ್ಟರ್ 360 ಆಟಕ್ಕೆ ರಾಜಸ್ಥಾನ್ ಬೌಲರ್‌ಗಳು ತತ್ತರ

    ದುಬೈ: ಇಂದು ನಡೆದ ಸೂಪರ್ ಶನಿವಾರದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಳು ವಿಕೆಟ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ.

    ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಾಯಕ ಸ್ಟೀವನ್ ಸ್ಮಿತ್ ಮತ್ತು ಇಂದ ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಅವರ ಸ್ಫೋಟಕ ಆಟದಿಂದ ನಿಗದಿತ 20 ಓವರಿನಲ್ಲಿ 177 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡ ಕೊನೆಯಲ್ಲಿ ಎಬಿಡಿ ವಿಲಿಯರ್ಸ್ ಅವರ ಭರ್ಜರಿ ಬ್ಯಾಟಿಂಗ್‍ಯಿಂದ ಇನ್ನು ಎರಡು ಬಾಲ್ ಉಳಿಸಿ 179 ರನ್ ಚಚ್ಚಿತು. ಈ ಮೂಲಕ 7 ವಿಕೆಟ್‍ಗಳ ಜಯದಿಂದ ಅಂಕಪಟ್ಟಿಯಲ್ಲಿ 12 ಅಂಕ ಗಳಿಸಿತು.

    ಎಬಿಡಿ ಆಟಕ್ಕೆ ರಾಯಲ್ಸ್ ಉಡೀಸ್
    12 ಮತ್ತು 13ನೇ ಓವರಿನಲ್ಲಿ ಕೊಹ್ಲಿ ಮತ್ತು ಪಡಿಕಲ್ ಅವರ ಬ್ಯಾಕ್ ಟು ಬ್ಯಾಕ್ ವಿಕೆಟ್ ಬಿದ್ದಾಗ ಬೆಂಗಳೂರು ತಂಡಕ್ಕೆ ಸಂಕಷ್ಟ ಎದುರಾಗಿತ್ತು. ಕೊನೆಯ ನಾಲ್ಕು ಓವರಿನಲ್ಲಿ 54 ರನ್‍ಗಳ ಅವಶ್ಯಕತೆಯಿತ್ತು. ಈ ವೇಳೆ ಗುರ್ಕೀರತ್ ಸಿಂಗ್ ಮನ್ ಒಂದಾದ ಎಬಿಡಿ ವಿಲಿಯರ್ಸ್ ಸಿಕ್ಸರ್ ಗಳ ಸುರಿಮಳೆಗೈದರು. ಕೇವಲ 22 ಬಾಲಿಗೆ ಆರು ಸಿಕ್ಸರ್ ಮತ್ತು ಒಂದು ಬೌಂಡರಿ ಸಮೇತ ಬರೋಬ್ಬರಿ 55 ರನ್ ಸಿಡಿಸಿದರು. ಇವರಿಗೆ ಸಾಥ್ ಕೊಟ್ಟ ಗುರ್ಕೀರತ್ 19 ರನ್ ಸಿಡಿಸಿ ಮಿಂಚಿದರು.

    178 ರನ್ ಬೆನ್ನತ್ತಿದ ಬೆಂಗಳೂರು ತಂಡಕ್ಕೆ ಓಪನರ್ ಫಿಂಚ್ ಸ್ಫೋಟಕ ಆರಂಭ ನೀಡಲು ಮುಂದಾದರು. ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸುತ್ತಿದ್ದರು. ಆದರೆ ಮೂರನೇ ಓವರಿನಲ್ಲಿ ಕನ್ನಡಿಗ ಶ್ರೇಯಾಸ್ ಗೋಪಾಲ್ ಅವರ ಸ್ಪಿನ್ ಮೋಡಿಗೆ ಬಲಿಯಾದ ಫಿಂಚ್ 14 ರನ್ ಸಿಡಿಸಿ ಔಟ್ ಆದರು. ನಂತರ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ತಾಳ್ಮೆಯ ಆಟವಾಡಿ ಆರು ಓವರ್ ಮುಕ್ತಾಯಕ್ಕೆ 47 ರನ್ ಸೇರಿಸಿದರು.

    ಬ್ಯಾಕ್ ಟು ಬ್ಯಾಕ್ ವಿಕೆಟ್ಸ್: ಕೊಹ್ಲಿ ಮತ್ತು ಪಡಿಕಲ್ ಉತ್ತಮವಾಗಿ ಬ್ಯಾಟ್ ಬೀಸಿದರು. ಈ ಜೋಡಿ ಎರಡನೇ ವಿಕೆಟಿಗೆ 40 ಬಾಲಿನಲ್ಲಿ ಅರ್ಧಶತಕದ ಜೊತೆಯಾಟವಾಡಿತು. 12ನೇ ಓವರ್ ಅಂತ್ಯಕ್ಕೆ 92 ರನ್ ಗಳಿಸಿ ಮುನ್ನುಗುತ್ತಿದ್ದ ತಂಡಕ್ಕೆ ತಿವಾಟಿಯಾ 2ನೇ ಎದುರೇಟು ನೀಡಿದರು. ತಿವಾಟಿಯಾ ಓವರಿನಲ್ಲಿ ಭಾರೀ ಹೊಡೆತಕ್ಕೆ ಮುಂದಾದ ಪಡಿಕ್ಕಲ್ ಕ್ಯಾಚ್ ನೀಡಿ ಔಟಾದರು. 37 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನೊಂದಿಗೆ 35 ರನ್ ಗಳಿಸಿದ್ದ ನಿರ್ಗಮಿಸಿದರು. ಇದರ ಬೆನ್ನಲ್ಲೇ ದಾಳಿಗಿಳಿದ ಕಾರ್ತಿಕ್ ತ್ಯಾಗಿ 43 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದರು. ಬೌಂಡರಿ ಗೆರೆಯಂಚಿನಲ್ಲಿ ಅತ್ಯುತ್ತಮ ಕ್ಯಾಚ್ ಪಡೆದ ತಿವಾಟಿಯಾ ಕೊಹ್ಲಿ ವಿಕೆಟ್ ಪಡೆಯಲು ಪ್ರಮುಖ ಕಾರಣವಾದರು. 102 ರನ್ ಗಳಿಸಿದ್ದ ವೇಳೆ ಆರ್‍ಸಿಬಿ ಪ್ರಮುಖ 2 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ನಂತರ ನಾಲ್ಕು ಓವರಿಗೆ 54 ರನ್‍ಗಳ ಅವಶ್ಯಕತೆ ಇದ್ದಾಗ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಮತ್ತು ಗುರ್ಕೀರತ್ ಸಿಂಗ್ ಮನ್ ಕ್ರಿಸಿನಲ್ಲಿ ಇದ್ದರು. ಇದಾದ ನಂತರ ಎಬಿ ಡಿವಿಲಿಯರ್ಸ್ ಅವರು ಹೊಡಿಬಡಿ ಆಟಕ್ಕೆ ಮುಂದಾದರು. 19ನೇ ಓವರಿನಲ್ಲಿ ಜಯದೇವ್ ಉನಾದ್ಕಟ್ ಅವರಿಗೆ ಸತತ ಮೂರು ಬಾಲಿಗೆ ಮೂರು ಸಿಕ್ಸರ್ ಸಿಡಿಸಿದರು. ಈ ಮೂಲಕ 19ನೇ ಓವರಿನಲ್ಲೇ ಬೆಂಗಳೂರು ತಂಡಕ್ಕೆ 25 ರನ್‍ಗಳು ಬಂದಿತು.

  • ‘ಮಿಸ್ಟರ್ 360’ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮತ್ತೆ ರೀ ಎಂಟ್ರಿ ಕೊಡಿ: ರವಿಶಾಸ್ತ್ರಿ

    ‘ಮಿಸ್ಟರ್ 360’ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮತ್ತೆ ರೀ ಎಂಟ್ರಿ ಕೊಡಿ: ರವಿಶಾಸ್ತ್ರಿ

    ಮುಂಬೈ: ಐಪಿಎಲ್ 2020ರ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಮಿಸ್ಟರ್ 360 ಡಿಗ್ರಿ ಎಂದೇ ಖ್ಯಾತಿ ಗಳಿಸಿರುವ ಎಬಿ ಡಿವಿಲಿಯರ್ಸ್, ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಾಪಸ್ ಆಗಬೇಕಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

    ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಳಿಕ ರವಿಶಾಸ್ತ್ರಿ ಈ ಕುರಿತು ಮಾತನಾಡಿದ್ದಾರೆ. ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಡಿವಿಲಿಯರ್ಸ್ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಗಳಿಂದ 73 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಪಂದ್ಯದಲ್ಲಿ ಆರ್ ಸಿಬಿ 82 ರನ್ ಗಳ ಭರ್ಜರಿ ಗೆಲುವು ಪಡೆದಿತ್ತು.

    ಪಂದ್ಯದ ಬಳಿಕ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರವಿಶಾಸ್ತ್ರಿ, ಇನ್ನಿಂಗ್ಸ್ ನಂಬಲಾಗುತ್ತಿಲ್ಲ. ಬೆಳಗ್ಗೆ ಎದ್ದ ಬಳಿಕವೂ ನಿನ್ನ ಬ್ಯಾಟಿಂಗ್ ನೆನಪಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿನ್ನ ಅಗತ್ಯವಿದೆ ಎಂಬುದನ್ನು ಈ ಪಂದ್ಯದಿಂದ ತಿಳಿಯುತ್ತಿದೆ. ನಿವೃತ್ತಿಯ ನಿರ್ಣಯವನ್ನು ನೀನು ಹಿಂಪಡೆ, ನಿನ್ನ ರೀ ಎಂಟ್ರಿಗೆ ಇದು ಸಾಕು ಎಂದು ಹೇಳಿದ್ದಾರೆ.

    2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸುವ ಮೂಲಕ ಎಬಿ ಡಿವಿಲಿಯರ್ಸ್ ಎಲ್ಲರಿಗೂ ಶಾಕ್ ನೀಡಿದ್ದರು. ಆ ಬಳಿಕ 2019ರ ವಿಶ್ವಕಪ್ ಟೂರ್ನಿಗೆ ವಾಪಸ್ ಆಗಲು ಚಿಂತಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲುಂಡ ಬಳಿಕ ಅಲ್ಲಿನ ಕ್ರಿಕೆಟ್ ಬೋರ್ಡ್ ಮುಂದಿನ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಡಿವಿಲಿಯರ್ಸ್ ಅವರನ್ನು ಪರಿಗಣಿಸಲು ಆಸಕ್ತಿ ತೋರಿತ್ತು. ಆದರೆ ಸಂಪೂರ್ಣ ಫಿಟ್ ಎನಿಸದರೆ ಮಾತ್ರ ನಿವೃತ್ತಿ ವಾಪಸ್ ಪಡೆಯುವುದಾಗಿ ಡಿವಿಲಿಯರ್ಸ್ ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರವಿಶಾಸ್ತ್ರಿ ಅವರ ಟ್ವೀಟ್ ಹೆಚ್ಚು ಗಮನಾರ್ಹವಾಗಿದೆ.

  • ಆರ್‌ಸಿಬಿ ಗೆಲುವಿನ ನಂತ್ರ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ ಎಬಿಡಿ

    ಆರ್‌ಸಿಬಿ ಗೆಲುವಿನ ನಂತ್ರ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ ಎಬಿಡಿ

    ಅಬುಧಾಬಿ: ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿದ್ದ ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಎಬಿಡಿ ವಿಲಿಯರ್ಸ್ ಅವರು ಇಂದು ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ್ದಾರೆ.

    ಈಗ ಐಪಿಎಲ್ ಆಟಗಾರರು ತಮ್ಮ ಗಡ್ಡಕ್ಕೆ ಹೊಸ ರೂಪ ಕೊಡುವ ಸಲುವಾಗಿ ಬ್ರೇಕ್ ದಿ ಬಿಯರ್ಡ್ ಎಂಬ ಹೊಸ ಚಾಲೆಂಜ್ ಮಾಡುತ್ತಿದ್ದಾರೆ. ಮೊದಲು ಇದನ್ನು ಹಾರ್ದಿಕ್ ಪಾಂಡ್ಯ ಮಾಡಿದ್ದರು. ನಂತರ ಕೀರನ್ ಪೊಲಾರ್ಡ್ ಅವರು ಇದನ್ನು ಸ್ವೀಕರಿಸಿದ್ದರು. ನಂತರ ದಿನೇಶ್ ಕಾರ್ತಿಕ್ ಅವರು ಕೂಡ ಈ ಚಾಲೆಂಜ್ ಮಾಡಿದ್ದರು. ಇವೆರೆಲ್ಲರ ನಂತರ ಈಗ ಎಬಿಡಿ ಅವರು ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಮಾಡಿದ್ದಾರೆ.

    ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಮಾಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿಕೊಂಡಿರುವ ಎಬಿಡಿ, ಅವರು ಹೇಳಿದಂತೆ ಬದಲಾವಣೆಯನ್ನು ಮಾಡಿದ್ದೇನೆ. ಅವರು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡು ಹೊಸ ಶೈಲಿಯಲ್ಲಿ ನ್ಯೂ ಸ್ಟೈಲ್ ಅನ್ನು ಮಾಡಿದ್ದೇನೆ. ಈ ಹೊಸ ಶೈಲಿ ಮತ್ತು ಸನ್ ಗ್ಲಾಸಸ್ ಹೇಗಿರುತ್ತೆ ಎಂದು ಬರೆದು ದಿನೇಶ್ ಕಾರ್ತಿಕ್ ಮತ್ತು ಕೀರನ್ ಪೊಲಾರ್ಡ್ ಮತ್ತು ಫಾಫ್ ಡು ಪ್ಲೆಸಿಸ್ ಅವರನ್ನು ಟ್ಯಾಗ್ ಮಾಡಿದ್ದಾರೆ.

    https://www.instagram.com/p/CGB2ehXAs6N/

    ಇದರ ಜೊತೆಗೆ ನನ್ನ ನಂತರ ಮುಂದಿನ ವಾರದಲ್ಲಿ ಈ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಯಾರು ಸ್ವೀಕರಿಸುತ್ತಾರೆ ನೋಡಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಕಳೆದ ವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಕೂಡ ಈ ಚಾಲೆಂಜ್ ಮಾಡಿದ್ದರು. ತಮ್ಮ ಗಡ್ಡಕ್ಕೆ ಹೊಸ ರೂಪವನ್ನು ಕೊಟ್ಟು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೊಸ ಸೀಸನ್, ಹೊಸ ಲೆವೆಲಿಗೆ ಹೋಗುವ ಸಮಯವಿದು ಎಂದು ಬರೆದುಕೊಂಡಿದ್ದರು.

    ಕಳೆದ ಪಂದ್ಯನಲ್ಲಿ ಸ್ಫೋಟಕವಾಗಿ ಬ್ಯಾಟ್ ಬೀಸಿದ ಎಬಿಡಿ ವಿಲಿಯರ್ಸ್ ತಾವು ಆಡಿದ 33 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್ ಸಮೇತ ಭರ್ಜರಿ 73 ರನ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ವಿರಾಟ್ ಕೊಹ್ಲಿಯವರು 28 ಬಾಲಿಗೆ 33 ರನ್ ಸಿಡಿಸಿದರು. ಈ ಮೂಲಕ ಕೋಲ್ಕತ್ತಾಗೆ 195 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಬೆಂಗಳೂರು ಬೌಲರ್ ಗಳ ದಾಳಿಗೆ ತತ್ತರಿಸಿ 20 ಓವರಿನಲ್ಲಿ ಕೇವಲ 112 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

  • ಆರ್‌ಸಿಬಿಗೆ 82 ರನ್‍ಗಳ ಭರ್ಜರಿ ಗೆಲುವು – 2013ರ ನಂತರ ವಿಶೇಷ ಸಾಧನೆಗೈದ ಬೆಂಗಳೂರು

    ಆರ್‌ಸಿಬಿಗೆ 82 ರನ್‍ಗಳ ಭರ್ಜರಿ ಗೆಲುವು – 2013ರ ನಂತರ ವಿಶೇಷ ಸಾಧನೆಗೈದ ಬೆಂಗಳೂರು

    ಶಾರ್ಜಾ: ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ನಂತರ ಬೌಲರ್‌ಗಳ ಕಮಾಲ್‍ನಿಂದಾಗಿ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು 82 ರನ್ ಗಳ ಭರ್ಜರಿ ಗೆಲುವು ಪಡೆದಿದೆ.

    ಮೊದಲು ಬ್ಯಾಟಿಂಗ್ ಮಾಡಿ ಬೆಂಗಳೂರು ತಂಡದ ನೀಡಿದ್ದ 195 ರನ್ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡದ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 112 ರನ್ ಗಳಷ್ಟೇ ಶಕ್ತವಾಯಿತು. ಟೂರ್ನಿಯಲ್ಲಿ ಪ್ರಮುಖ ಗೆಲುವು ಪಡೆದ ಆರ್ ಸಿಬಿ 10 ಅಂಕಗಳೊಂದಿಗೆ 3ನೇ ಪಡೆಯಿತು. ಪಂದ್ಯದಲ್ಲಿ ಸೋಲುಂಡ ಕೆಕೆಆರ್ 8 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಜಾರಿದೆ.

    2013ರ ಬಳಿಕ ಟೂರ್ನಿಯಲ್ಲಿ ಆಡಿದ ಆರಂಭದ 7 ಪಂದ್ಯಗಳಲ್ಲಿ ಮೊದಲ ಬಾರಿಗೆ ಆರ್‌ಸಿಬಿ  5 ರಲ್ಲಿ ಜಯಗಳಿಸಿದೆ. ಕಳೆದ ವರ್ಷ ಆರ್‌ಸಿಬಿ ಮೊದಲ 7 ಪಂದ್ಯವಾಡಿ 1 ಪಂದ್ಯ ಮಾತ್ರ ಗೆದ್ದುಕೊಂಡಿತ್ತು.

    195 ರನ್‍ಗಳ ಬೃಹತ್ ರನ್ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಆರಂಭಿಕರಾದ ಗಿಲ್, ಟಾಮ್ ಬ್ಯಾಂಟನ್ ಉತ್ತಮ ಆರಂಭ ನೀಡಲು ವಿಫಲರಾದರು. 4 ಓವರ್ ವೇಳೆಗೆ ಕೆಕೆಆರ್ 23 ರನ್ ಗಳಿಸಿದ್ದ ವೇಳೆ 8 ರನ್ ಗಳಿಸಿದ್ದ ಬ್ಯಾಂಟನ್ ರನೌಟ್ ಆಡುವ ಮೂಲಕ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 9 ರನ್ ಗಳಿಸಿದ್ದ ರಾಣಾ, ಸುಂದರ್‍ಗೆ ವಿಕೆಟ್ ಒಪ್ಪಿಸಿದರು. 51 ರನ್ ಗಳಿಸುವ ವೇಳೆಗೆ ಕೆಕೆಆರ್ ತಂಡದ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿದ್ದರು.

    10ನೇ ಓವರ್ ವೇಳೆಗೆ 55 ರನ್ ಗಳಿಸಿದ್ದ ಕೋಲ್ಕತ್ತಾ ತಂಡ ಶುಭ್‍ಮನ್ ಗಿಲ್‍ರನ್ನು ರನೌಟ್ ಮೂಲಕ ಕಳೆದುಕೊಂಡಿತ್ತು. ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡದ ಗೆಲುವಿಗೆ ಕಾರಣವಾಗಿದ್ದ ದಿನೇಶ್ ಕಾರ್ತಿಕ್ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ಬೆಂಗಳೂರು ವಿರುದ್ಧ ಮಿಂಚಲು ವಿಫಲರಾದರು. ಆ ಬಳಿಕ ಯಾವುದೇ ಹಂತದಲ್ಲಿ ಆರ್ ಸಿಬಿ ಬೌಲಿಂಗ್ ಎದುರು ಪ್ರತಿರೋಧ ತೋರಲು ಕೂಡ ವಿಫಲರಾದ ಕೆಕೆಆರ್ ಬ್ಯಾಟ್ಸ್ ಮನ್ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು. ಮಾರ್ಗನ್ 8, ರಸೇಲ್ 16, ಕಮ್ಮಿನ್ಸ್ 1, ತ್ರಿಪಾಠಿ 16, ನಾಗರ್ಕೋಟಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದದೆ, ವರುಣ್ 7 ರನ್ ಹಾಗೂ ಪ್ರಸಿದ್ಧ ಕೃಷ್ಣ 2 ರನ್ ಗಳಿಸಿ ಅಜೇಯರಾಗಿ ಉಳಿದರು. ನಿಗದಿತ 20 ಓವರ್ ಗಳ ಅಂತ್ಯಕ್ಕೆ 9 ವಿಕೆಟ್ ಕಳೆದು ಕೊಂಡು 112 ರನ್ ಗಳಷ್ಟೇ ಶಕ್ತವಾಯಿತು.

    ಆರ್ ಸಿಬಿ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮೋರಿಸ್ 4 ಓವರ್ ಎಸೆದು 17 ರನ್ ನೀಡಿ 2 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ 4 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಕಿತ್ತರು. ಉಳಿದಂತೆ ಚಹಲ್, ಉದಾನ, ಶಿರಾಜ್, ಸೈನಿ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾಣಿಕೆ ನೀಡಿದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿಗೆ ಆರಂಭಿಕರಾದ ಪಡಿಕ್ಕಲ್ ಹಾಗೂ ಫಿಂಚ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 50 ರನ್ ಗಳ ಜೊತೆಯಾಟವನ್ನು ನೀಡಿತ್ತು. ಇತ್ತ ಕೊಹ್ಲಿ, ಎಬಿಡಿ ಡೆಲಿಯರ್ಸ್ ಜೋಡಿ ಶತಕ ಜೊತೆಯಾಟವಾಡಿ ನಿಗದಿತ 20 ಓವರ್ ಗಳಲ್ಲಿ ತಂಡ 2 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಲು ಕಾರಣವಾಯಿತು. ಪಂದ್ಯದಲ್ಲಿ ಪಡಿಕ್ಕಲ್ 32 ರನ್, ಫಿಂಚ್ 46 ರನ್ ಗಳಿಸಿದರೆ. 28 ಎಸೆತಗಳಲ್ಲಿ ಕೊಹ್ಲಿ 33 ರನ್, ಎಬಿಡಿ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

  • ಆರ್‌ಸಿಬಿ ಫೀಲ್ಡಿಂಗ್‍ನಲ್ಲಿ ತಪ್ಪು ಮಾಡೋದನ್ನು ಬಿಡಬೇಕು: ಎಬಿಡಿ

    ಆರ್‌ಸಿಬಿ ಫೀಲ್ಡಿಂಗ್‍ನಲ್ಲಿ ತಪ್ಪು ಮಾಡೋದನ್ನು ಬಿಡಬೇಕು: ಎಬಿಡಿ

    – ಬೆಂಗಳೂರಿನ ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ

    ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ಷೇತ್ರರಕ್ಷಣೆಯಲ್ಲಿ ತಪ್ಪು ಮಾಡುವುದನ್ನು ಬಿಡಬೇಕು ಎಂದು ತಂಡದ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

    ಸೋಮವಾರ ಐಪಿಎಲ್ ಅಭಿಮಾನಿಗಳಿಗೆ ಹಬ್ಬದ ವಾತವಾರಣ ಸೃಷ್ಟಿಯಾಗಿತ್ತು. ಟೂರ್ನಿಯ ಎರಡು ಬಲಿಷ್ಠ ತಂಡಗಳಾದ  ಆರ್‌ಸಿಬಿ  ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದು, ರನ್ ಹೊಳೆಯನ್ನೇ ಹರಿಸಿದ್ದವು. ಈ ರೋಚಕ ಪಂದ್ಯ ಕೊನೆಯಲ್ಲಿ ಸೂಪರ್ ಓವರ್ ತಲುಪಿದ್ದು, ಈ ಸೂಪರ್ ಓವರಿನಲ್ಲಿ ಆರ್‌ಸಿಬಿ ತಂಡ ಗೆದ್ದು ಅಭಿಮಾನಿಗಳನ್ನು ರಂಜಿಸಿತ್ತು.

    ಈ ಪಂದ್ಯದ ನಂತರ ಮಾತನಾಡಿದ ಆರ್‌ಸಿಬಿ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್, ಇದು ಒಂದು ಅದ್ಭುತ ಪಂದ್ಯ. ನಾವು ಕೂಡ ಮುಂಬೈ ವಿರುದ್ಧ ಪ್ರಬಲವಾಗಿ ಆಡಿದ್ದೇವೆ. ಎರಡನೇ ಇನ್ನಿಂಗ್ಸ್‍ನಲ್ಲಿ ನಾವು ಮುಂಬೈಗೆ ಸ್ವಲ್ಪ ಸುಲಭ ಮಾಡಿಕೊಟ್ಟೆವು. ಫೀಲ್ಡಿಂಗ್‍ನಲ್ಲಿ ಬಹಳ ತಪ್ಪುಗಳನ್ನು ಮಾಡಿದ್ದೇವೆ. ಇದನ್ನು ನಾವು ಇನ್ನು ಮುಂದಿನ ಪಂದ್ಯಗಳಲ್ಲಿ ನಿಲ್ಲಿಸಬೇಕು ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

    ನಮ್ಮ ತಂಡಕ್ಕೆ ಇದು ಟೂರ್ನಿಯ ಮೂರನೇ ಪಂದ್ಯ. ನಮಗೆ ಇನ್ನೂ ಸಮಯವಿದೆ. ನಾವು ನಮ್ಮ ಸ್ಕಿಲ್ ಮತ್ತು ಫೀಲ್ಡಿಂಗ್ ಮೇಲೆ ಗಮನಹರಿಸುತ್ತೇವೆ. ಕಳೆದ ಪಂದ್ಯದಲ್ಲಿ ನಮ್ಮ ತಂಡದ ಆಟಗಾರರು ಅದ್ಭುತವಾಗಿ ಆಡಿದ್ದಾರೆ. ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಎಬಿಡಿ ಮಾತನಾಡಿರುವ ಈ ವಿಡಿಯೋವನ್ನು ಆರ್‌ಸಿಬಿ ತಂಡ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

    ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಎಬಿಡಿ ಬ್ಯಾಟಿಂಗ್ ಜೊತೆ ಕೀಪಿಂಗ್ ಜವಬ್ದಾರಿಯನ್ನು ಹೊತ್ತುಕೊಂಡಿದ್ದರು. ಕಳೆದ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಎಬಿಡಿ ಕೇವಲ 24 ಎಸೆತದಲ್ಲಿ 55 ರನ್ ಸಿಡಿಸಿ ಮಿಂಚಿದ್ದರು. ಈ ಇನ್ನಿಂಗ್ಸ್‍ನಲ್ಲಿ ಎಬಿಡಿ 4 ಫೋರ್ ಮತ್ತು 4 ಸಿಕ್ಸರ್ ಭಾರಿಸಿದ್ದರು. ಜೊತೆಗೆ ಆರ್‌ಸಿಬಿ ಪರ ಸೂಪರ್ ಓವರಿನಲ್ಲಿ ಬ್ಯಾಟಿಂಗ್ ಮಾಡಿದ ಎಬಿಡಿ ಒಂದು ಬೌಂಡರಿ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

  • ಆರ್‌ಸಿಬಿ ಕ್ಯಾಪ್ಟನ್ ಕೊಹ್ಲಿ ಬಳಿ ಎಬಿಡಿ ಸ್ಪೆಷಲ್ ರಿಕ್ವೆಸ್ಟ್

    ಆರ್‌ಸಿಬಿ ಕ್ಯಾಪ್ಟನ್ ಕೊಹ್ಲಿ ಬಳಿ ಎಬಿಡಿ ಸ್ಪೆಷಲ್ ರಿಕ್ವೆಸ್ಟ್

    ಅಬುಧಾಬಿ: ಐಪಿಎಲ್ 2020ರ ಆವೃತ್ತಿ ಆರಂಭಕ್ಕೆ ಕೆಲ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಆರ್‌ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಳಿ ಸಹ ಆಟಗಾರ ಎಬಿ ಡಿವಿಲಿಯರ್ಸ್ ವಿಶೇಷ ಮನವಿ ಮಾಡಿದ್ದಾರೆ.

    ಸೆ.19 ರಿಂದ ನ.10 ವರೆಗೂ ಐಪಿಎಲ್ 2020ರ ಪಂದ್ಯಗಳು ನಡೆಯಲಿದೆ. ಸೆ.21 ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಆರ್‌ಸಿಬಿ ಎದುರಿಸಲಿದೆ. ಕಳೆದ ಎರಡು ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಆರ್‌ಸಿಬಿ ತಂಡ ಸಮತೋಲನದಿಂದ ಕೂಡಿದಂತೆ ಕಾಣಿಸುತ್ತಿದೆ.

    ಇತ್ತೀಚೆಗೆ ತಂಡದ ತರಬೇತಿಯ ವೇಳೆ ಈ ಬಾರಿ ಟೂರ್ನಿಯಲ್ಲಿ ತಮಗೆ ಬೌಲಿಂಗ್ ಮಾಡುವ ಅವಕಾಶ ನೀಡಬೇಕು. ನಾಯಕ ಕೊಹ್ಲಿ ಅಗತ್ಯ ಎನಿಸಿದರೇ 1-2 ಓವರ್ ಬೌಲಿಂಗ್ ಮಾಡಲು ಸಿದ್ಧ. ನಾನು ಉತ್ತಮ ಬೌಲರ್ ಅಲ್ಲದಿದ್ದರೂ, ಹೊಸ ವಿಚಾರಗಳನ್ನು ಕಲಿಯಲು ಇಷ್ಟಪಡುತ್ತೇನೆ ಎಂದು ಎಬಿಡಿ ನಗೆ ಬೀರಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳಿಂದ ಮಿಸ್ಟರ್ 360 ಎಂದು ಕರೆಯಿಸಿಕೊಳ್ಳುವ ಎಬಿಡಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಕೆಲ ಸಮಯ ವಿಕೆಟ್ ಕೀಪರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಟೆಸ್ಟ್, ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಬೌಲಿಂಗ್ ಕೂಡ ಮಾಡಿದ್ದಾರೆ.

    ಇದುವರೆಗೂ ಎಬಿಡಿ ಟಿ20 ಮಾದರಿ ಕ್ರಿಕೆಟ್ ನಲ್ಲಿ ಮಾತ್ರ ಬೌಲಿಂಗ್ ಮಾಡಿಲ್ಲ. ಆದ್ದರಿಂದ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬೌಲಿಂಗ್ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇತ್ತ ಈ ಬಾರಿಯ ಟೂರ್ನಿಯಲ್ಲಿ ಪಾರ್ಥಿವ್ ಪಟೇಲ್ ಬದಲಿಗೆ ಎಬಿಡಿ ಅವರಿಗೆ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ.

  • ಆರ್‌ಸಿಬಿ ಕೊಹ್ಲಿ, ಎಬಿಡಿ ಮೇಲೆ ಅವಲಂಬಿತವಾಗಿಲ್ಲ: ಉಮೇಶ್ ಯಾದವ್

    ಆರ್‌ಸಿಬಿ ಕೊಹ್ಲಿ, ಎಬಿಡಿ ಮೇಲೆ ಅವಲಂಬಿತವಾಗಿಲ್ಲ: ಉಮೇಶ್ ಯಾದವ್

    – ರಣಜಿಯಲ್ಲಿ ಖಾಲಿ ಮೈದಾನದಲ್ಲಿ ಆಡಿ ಅಭ್ಯಾಸವಿದೆ

    ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಅವಲಂಬಿತವಾಗಿದೆ ಎಂಬ ಮಾತನ್ನು ಆರ್‌ಸಿಬಿ  ತಂಡದ ಅನುಭವಿ ವೇಗಿ ಉಮೇಶ್ ಯಾದವ್ ಅವರು ತಳ್ಳಿ ಹಾಕಿದ್ದಾರೆ.

    ಆರ್‌ಸಿಬಿ ತಂಡ ಐಪಿಎಲ್ ಆಡಲು ಈಗಾಗಲೇ ಯುಎಇಗೆ ತೆರಳಿ ಅಭ್ಯಾಸವನ್ನು ಆರಂಭಿಸಿದೆ. ಈ ಬಾರಿ ಕಪ್ ಗೆಲ್ಲುವ ತವಕದಲ್ಲಿ ಭರ್ಜರಿ ಸಿದ್ಧತೆಯನ್ನು ಕೂಡ ನಡೆಸಿದೆ. ಅಂತಯೇ ತಂಡದ ಪ್ರಮುಖ ವೇಗಿ ಉಮೇಶ್ ಯಾದವ್ ಅವರು ಮಾತನಾಡಿ, ರಣಜಿಯಲ್ಲಿ ಖಾಲಿ ಮೈದಾನದಲ್ಲಿ ಆಡಿ ಅಭ್ಯಾಸವಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಆರ್‌ಸಿಬಿ ತಂಡ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಜಾಸ್ತಿ ಅವಲಂಬಿತವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಜನರು ನಾವು ಅವರ ಮೇಲೆ ಅವಲಂಬಿತವಾಗಿದ್ದೇವೆ ಎಂದು ಹೇಳುತ್ತಾರೆ. ಅವರು ಕೆಲ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ನಿಜ. ಆದರೆ ಇಡೀ ತಂಡವೇ ಅವರ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಒಪ್ಪುವುದಿಲ್ಲ. ಒಂದು ಪಂದ್ಯ ಗೆಲ್ಲಬೇಕಾದರೆ ತಂಡದ ಪ್ರತಿಯೊಬ್ಬ ಆಟಗಾರನ ಶ್ರಮವಿರುತ್ತದೆ ಎಂದು ತಿಳಿಸಿದ್ದಾರೆ.

    ತಂಡದಲ್ಲಿ 11 ಜನರು ಒಟ್ಟಿಗೆ ಆಡುತ್ತೇವೆ. ಅದರಲ್ಲಿ ನಾವು ಇಬ್ಬರೇ ಆಟಗಾರರ ಮೇಲೆ ಅವಲಂಬಿತವಾದರೆ, ಇನ್ನುಳಿದ ಆಟಗಾರರು ಏನೂ ಮಾಡುತ್ತಾರೆ. ತಂಡದಲ್ಲಿ ಪ್ರತಿಯೊಬ್ಬ ಆಟಗಾರನೂ ಕೂಡ ಪಂದ್ಯ ಗೆಲ್ಲಲು ತನ್ನದೇ ಆದ ಕೊಡುಗೆ ನೀಡಿರುತ್ತಾನೆ. ಆದರೆ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಉಳಿದ ಆಟಗಾರರಿಗಿಂತ ಜಾಸ್ತಿ ಕೊಡುಗೆ ನೀಡಿದ್ದಾರೆ ಅಷ್ಟೆ. ತಂಡಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅವರು ಜಾಸ್ತಿ ಶ್ರಮಪಟ್ಟಿದ್ದಾರೆ ಎಂದು ಉಮೇಶ್ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಜೊತೆಗೆ ಖಾಲಿ ಮೈದಾನದಲ್ಲಿ ಐಪಿಎಲ್ ಆಡುವ ಬಗ್ಗೆ ಮಾತನಾಡಿರುವ ಅವರು, ಖಾಲಿ ಮೈದಾನದಲ್ಲಿ ಆಡುವುದು ನಮಗೆ ಹೊಸದೇನಲ್ಲ. ನಾವು ಅದನ್ನು ಯುಎಇಯಲ್ಲಿ ನೋಡಿಲ್ಲ. ಆದರೆ ಭಾರತದಲ್ಲಿ ಬಹಳ ರಣಜಿ ಟ್ರೋಫಿ ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ಆಡಿದ್ದೇವೆ. ಹಲವಾರು ರಣಜಿ ಪಂದ್ಯದ ನಂತರ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಬಂದಿದ್ದೇನೆ. ಹೀಗಾಗಿ ಖಾಲಿ ಮೈದಾನದಲ್ಲಿ ನಮ್ಮನ್ನು ನಾವೇ ಹೇಗೆ ಹುರಿದುಂಬಿಸಿಕೊಳ್ಳಬೇಕು ಎಂದು ಗೊತ್ತಿದೆ ಎಂದಿದ್ದಾರೆ.

    ಆರ್‌ಸಿಬಿ ಕಳೆದ ಅಗಸ್ಟ್ 21ರಂದೇ ಯುಎಇಗೆ ಹೋಗಿದ್ದು, ಆರು ದಿನಗಳ ಕ್ವಾಂರಟೈನ್ ಅವಧಿಯನ್ನು ಮುಗಿಸಿ ಅಭ್ಯಾಸವನ್ನು ಆರಂಭ ಮಾಡಿದೆ. ಸೆಪ್ಟಂಬರ್ 19ರಿಂದ ಖಾಲಿ ಮೈದಾನದಲ್ಲಿ ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯ ಮುಂಬೈ ಮತ್ತು ಚೆನ್ನೈ ತಂಡಗಳ ನಡುವೆ ನಡೆಯಬೇಕಿತ್ತು. ಆದರೆ ಚೆನ್ನೈ ತಂಡದಲ್ಲಿ 13 ಮಂದಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಆರ್‌ಸಿಬಿ ಆರಂಭಿಕ ಪಂದ್ಯವನ್ನು ಮುಂಬೈ ಎದುರು ಆಡಲಿದೆ ಎಂದು ಹೇಳಲಾಗಿದೆ.

  • ‘ವಿರಾಟ್ ಬ್ಯಾಟಿಂಗ್‍ಗೆ ಇಳಿದ್ರೆ ಎದುರಾಳಿ ತಂಡದ ಗುರಿ ಉಡೀಸ್’

    ‘ವಿರಾಟ್ ಬ್ಯಾಟಿಂಗ್‍ಗೆ ಇಳಿದ್ರೆ ಎದುರಾಳಿ ತಂಡದ ಗುರಿ ಉಡೀಸ್’

    – ಕೊಹ್ಲಿಯನ್ನ ರೋಜರ್ ಫೆಡರರ್‌ಗೆ ಹೋಲಿಸಿದ ಎಬಿ ಡಿವಿಲಿಯರ್ಸ್

    ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿವಿಲಿಯರ್ಸ್ ಅವರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟೆನಿಸ್ ಆಟಗಾರ ಸ್ವಿಟ್ಜರ್ಲೆಂಡ್‍ನ ರೋಜರ್ ಫೆಡರರ್ ಅವರಿಗೆ ಹೋಲಿಸಿದ್ದಾರೆ.

    ಇನ್‍ಸ್ಟಾಗ್ರಾಮ್ ಲೈವ್ ಚಾಟಿಂಗ್‍ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಎಬಿ ಡಿವಿಲಿಯರ್ಸ್, ಆಸ್ಟ್ರೇಲಿಯಾದ ಬ್ಯಾಟ್ಸ್‍ಮನ್ ಸ್ಟೀವ್ ಸ್ಮಿತ್ ಅವರನ್ನು ಸ್ಪ್ಯಾನಿಷ್ ಟೆನಿಸ್ ತಾರೆ ರಾಫೆಲ್ ನಡಾಲ್ ಎಂದು ಡಿವಿಲಿಯರ್ಸ್ ಬಣ್ಣಿಸಿದ್ದಾರೆ. ವಿರಾಟ್ ಕೊಹ್ಲಿ ವಿವಿಧ ದೇಶಗಳ ಕ್ರಿಕೆಟ್ ಮೈದಾನದಲ್ಲಿ ರನ್ ಮಳೆ ಹರಿಸಿದ್ದಾರೆ. ಆದರೆ ಸ್ಮಿತ್ ಮಾನಸಿಕವಾಗಿ ಬಲಶಾಲಿ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

    ಎಬಿ ಡಿವಿಲಿಯರ್ಸ್ ಮತ್ತು ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನ ಫ್ರ್ಯಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 9 ವರ್ಷಗಳಿಂದ ಆಡುತ್ತಿದ್ದಾರೆ. ಕೊಹ್ಲಿ ಆರ್‍ಸಿಬಿಯ ಕ್ಯಾಪ್ಟನ್ ಕೂಡ ಹೌದು. ಈ ಜೋಡಿ ಮೈದಾನದಲ್ಲಿ ಉತ್ತಮ ಬ್ಯಾಟಿಂಗ್ ಪ್ರರ್ದಶನ ನೀಡಿದ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದ್ದು ಉಂಟು.

    ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದರೆ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇತ್ತ ಟೆನಿಸ್ ಆಟಗಾರರಾದ ಫೆಡರರ್ 20 ಮತ್ತು ನಡಾಲ್ 19 ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿದ್ದಾರೆ. ಡಿವಿಲಿಯರ್ಸ್ 2018ರಲ್ಲಿ ಕ್ರಿಕೆಟ್‍ನಿಂದ ನಿವೃತ್ತಿ ಪಡೆದಿದ್ದಾರೆ.

    ಲೈವ್ ಚಾಟಿಂಗ್‍ನಲ್ಲಿ ಮಾತನಾಡಿದ ಡಿವಿಲಿಯರ್ಸ್, “ಕೊಹ್ಲಿ ನಿಖರವಾಗಿ ಬಾಲ್ ಬೀಟ್ ಮಾಡ್ತಾರೆ. ಹೀಗಾಗಿ ಅವರು ಫೆಡರರ್ ಇದ್ದಂತೆ. ಸ್ಮಿತ್ ಮಾನಸಿಕವಾಗಿ ಬಲಶಾಲಿಯಾಗಿದ್ದು, ರನ್ ಗಳಿಸುವುದು ಹೇಗೆ ಎಂದು ಅವರು ಲೆಕ್ಕಾಚಾರ ಹಾಕುತ್ತಾರೆ. ಅವರ ಆಟವು ನೈಸರ್ಗಿಕವಾಗಿ ಕಾಣುತ್ತಿಲ್ಲ. ಆದರೆ ಅವರು ದಾಖಲೆಗಳನ್ನು ಮುರಿಯುವ ಸಾಮಥ್ರ್ಯ ಹೊಂದಿದ್ದಾರೆ” ಎಂದು ತಿಳಿಸಿದ್ದಾರೆ.

    “ಸಚಿನ್ ತೆಂಡೂಲ್ಕರ್ ಅವರು ಕೊಹ್ಲಿ ಹಾಗೂ ನನಗೆ ಆದರ್ಶ ಕ್ರಿಕೆಟರ್. ಅವರ ಸಾಧನೆಗಳು ನಮಗೆ ಮತ್ತು ಪ್ರತಿಯೊಬ್ಬ ಯುವಕರಿಗೆ ಉದಾಹರಣೆಗಳಾಗಿವೆ. ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟರ್ ಎಂದು ಬಣ್ಣಿಸಿದ್ದಾರೆ. ನನ್ನ ನಂಬಿಕೆ, ಅಭಿಪ್ರಾಯದ ಪ್ರಕಾರ ಕೊಹ್ಲಿ ಅತ್ಯಂತ ಅದ್ಭುತ ಚೇಸಿಂಗ್ ಗುರಿ ಹೊಂದಿದ್ದಾರೆ. ಪ್ರತಿಯೊಂದು ಮಾದರಿ ಕ್ರಿಕೆಟ್‍ನಲ್ಲೂ ಸಚಿನ್ ಅತ್ಯುತ್ತಮ ಪ್ರದರ್ಶ ನೀಡಿದ್ದಾರೆ. ಆದರೆ ಗುರಿಯನ್ನು ಬೆನ್ನಟ್ಟುವ ವಿಚಾರದಲ್ಲಿ ಕೊಹ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ವಿರಾಟ್ ಬ್ಯಾಟಿಂಗ್‍ಗೆ ಇಳಿದರೆ ಯಾವುದೇ ಎದುರಾಳಿ ತಂಡ ನೀಡಿದ ಗುರಿ ಸುರಕ್ಷಿತವಾಗಿರಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಿದ್ದಾರೆ.

  • ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ ಸಾರಥ್ಯ?- ಸ್ಪಷ್ಟನೆ ಕೊಟ್ಟ ಡಿವಿಲಿಯರ್ಸ್

    ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ ಸಾರಥ್ಯ?- ಸ್ಪಷ್ಟನೆ ಕೊಟ್ಟ ಡಿವಿಲಿಯರ್ಸ್

    ನವದೆಹಲಿ: ತಂಡದ ನಾಯಕತ್ವ ವಹಿಸುವಂತೆ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‍ಎ) ಎಬಿ ಡಿವಿಲಿಯರ್ಸ್ ಅವರಿಗೆ ಮನವಿ ಮಾಡಿದೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಬಿಡಿ, ತನಗೆ ಸಿಎಸ್‍ಎಯಿಂದ ಇದುವರೆಗೂ ಅಂತಹ ಯಾವುದೇ ಮನವಿ ಬಂದಿಲ್ಲ ಎಂದು ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.

    ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿಕೊಳ್ಳುವಂತೆ ಬೋರ್ಡ್ ಮನವಿ ಮಾಡಿದೆ ಎಂಬ ಸುದ್ದಿಗಳು ವಾಸ್ತವವಲ್ಲ. ಇಂತಹ ಸುದ್ದಿಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಎಬಿಡಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಮತ್ತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ ಕಮ್‍ಬ್ಯಾಕ್ ಮಾಡಿ ನಾಯಕತ್ವ ವಹಿಸಿಕೊಳ್ಳುತ್ತಾರಾ ಎಂಬ ಅಭಿಮಾನಿಗಳ ಅನುಮಾನಕ್ಕೆ ತೆರೆದಿದ್ದೆ.

    2018ರಲ್ಲಿ ಅಚ್ಚರಿಯಾಗಿ ನಿವೃತ್ತಿ ಘೋಷಣೆ ಮಾಡಿದ್ದ ಎಬಿಡಿ ಆ ಬಳಿಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಕುರಿತು ಮಾತನಾಡಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ವೇಳೆಯೇ ತಂಡಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ನಿವೃತ್ತಿ ಘೋಷಣೆ ಬಳಿಕ ಟಿ20 ಟೂರ್ನಿಗಳಲ್ಲಿ ಆಡುತ್ತಿದ್ದ ಎಬಿಡಿ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್ ಟೂರ್ನಿಯ ವೇಳೆ ಮತ್ತೆ ಕ್ರಿಕೆಟ್‍ಗೆ ಮರಳುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.

    ಇತ್ತ ತಮ್ಮ ಕಮ್‍ಬ್ಯಾಕ್ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಎಬಿಡಿ, ಕೊರೊನಾ ಕಾರಣದಿಂದ ಮುಂದಿನ 1 ವರ್ಷದ ಕ್ರಿಕೆಟ್ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಇದು ನನ್ನ ಕಮ್‍ಬ್ಯಾಕ್ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿರಲು ಪ್ರಮುಖ ಕಾರಣವಾಗಿದೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ ಎಂದು ಎಬಿಡಿ ಹೇಳಿದ್ದಾರೆ.

    ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಿದ್ದ ಎಬಿಡಿ ಕೊನೆಯವರೆಗೂ ತಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವೇ ಆಡುವುದಾಗಿ ಹೇಳಿದ್ದರು. ಅಲ್ಲದೇ ತಮ್ಮ ಭಾರತ, ದಕ್ಷಿಣ ಆಫ್ರಿಕಾ ಸಂಯುಕ್ತ ತಂಡವನ್ನು ಆಯ್ಕೆ ಮಾಡಿ ಧೋನಿಗೆ ತಂಡದ ನಾಯಕತ್ವ ಸ್ಥಾನ ನೀಡಿದ್ದರು.

  • ಎಬಿ ಡಿವಿಲಿಯರ್ಸ್‌ಗೆ ಹೆಡ್ ಕೋಚ್ ಡೆಡ್‍ಲೈನ್!

    ಎಬಿ ಡಿವಿಲಿಯರ್ಸ್‌ಗೆ ಹೆಡ್ ಕೋಚ್ ಡೆಡ್‍ಲೈನ್!

    ಕೇಪ್ ಟೌನ್: ದಕ್ಷಿಣ ಆಫ್ರಿಕಾ ತಂಡಕ್ಕೆ ರೀ ಎಂಟ್ರಿ ಕೊಡಲು ಸಿದ್ಧವಾಗಿರುವ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್‍ಗೆ ತಂಡದ ಹೆಡ್ ಕೋಚ್ ಮಾರ್ಕ್ ಬೌಚರ್ ಅಧಿಕೃತವಾಗಿ ಡೆಡ್‍ಲೈನ್ ನೀಡಿದ್ದಾರೆ. ತಂಡಕ್ಕೆ ಮತ್ತೆ ಸೇರ್ಪಡೆಯಾಗ ಬೇಕಾದರೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಳಿಕ ಜೂನ್‍ನಲ್ಲಿ ತಂಡದ ಆಯ್ಕೆಗೆ ಲಭ್ಯವಿರಬೇಕು ಎಂದು ಬೌಚರ್ ಹೇಳಿದ್ದಾರೆ.

    ಮಾರ್ಚ್ 9ರಿಂದ ಆರಂಭವಾಗಲಿರುವ ಐಪಿಎಲ್ 13ನೇ ಆವೃತ್ತಿಯ ಫೈನಲ್ ಪಂದ್ಯ ಮೇ24 ರಂದು ನಡೆಯಲಿದೆ. ಆರ್ ಸಿಬಿ ಪರ ಟೂರ್ನಿಯಲ್ಲಿ ಎಬಿಡಿ ಆಡುತ್ತಿದ್ದಾರೆ. ಇತ್ತ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಜೂನ್‍ನಿಂದ ಸಿದ್ಧತೆ ಆರಂಭಿಸಲು ದಕ್ಷಿಣ ಆಫ್ರಿಕಾ ತಂಡ ನಿರ್ಧರಿಸಿದೆ. ಐಪಿಎಲ್ ಬಳಿಕ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾಗಿಯಾಗಲಿದೆ. ಈ ಸರಣಿಯಲ್ಲಿ ಆಡುವ ಬಹುತೇಕ ಆಟಗಾರರು ಮುಂದಿನ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾರೆ ಎಂದು ಪರೋಕ್ಷವಾಗಿ ಬೌಚರ್ ತಿಳಿಸಿದ್ದಾರೆ. ಆ ವೇಳೆ ತಂಡದ ಆಯ್ಕೆಗೆ ಲಭ್ಯವಾಗುವ ಆಟಗಾರರನ್ನು ಪರಿಗಣಿಸಲಾಗುವುದು ಎಂದಿದ್ದಾರೆ.

    2018ರ ಐಪಿಎಲ್ ಬಳಿಕ ಸ್ವದೇಶಕ್ಕೆ ತೆರಳಿದ್ದ ಎಬಿ ಡಿವಿಲಿಯರ್ಸ್ ಅಚ್ಚರಿ ಎಂಬಂತೆ ನಿವೃತ್ತಿ ಘೋಷಿಸಿ ಶಾಕ್ ನೀಡಿದ್ದರು. ಆದರೆ 2019ರ ಏಕದಿನ ವಿಶ್ವಕಪ್ ಬಳಿಕ ಮತ್ತೆ ತಾವು ರಾಷ್ಟ್ರೀಯ ತಂಡಕ್ಕೆ ಮರಳುವ ಬಗ್ಗೆ ತಮ್ಮ ಮನಸ್ಸಿನ ಮಾತನ್ನು ತಿಳಿಸಿದ್ದರು. ಅದರಂತೆ ಶ್ರೀಲಂಕಾ ವಿರುದ್ಧದ ಟೂರ್ನಿಗೆ ತಂಡವನ್ನು ಪ್ರಕಟಿಸುವ ಮುನ್ನ ನಿವೃತ್ತಿ ವಾಪಸ್ ಪಡೆದು ಆಯ್ಕೆ ಸಮಿತಿಗೆ ಲಭ್ಯವಾಗುವ ಯೋಚನೆಯಲ್ಲಿ ಎಬಿಡಿ ಇದ್ದರು ಎನ್ನಲಾಗಿದೆ.

    ಎಬಿ ಡಿವಿಲಿಯರ್ಸ್ ಕಳೆದ ವರ್ಷದ ಅಂತ್ಯದ ವೇಳೆಗೆ ಕ್ರಿಕೆಟ್‍ಗೆ ರೀ ಎಂಟ್ರಿ ನೀಡುವ ಕುರಿತು ಚರ್ಚೆ ನಡೆದಿತ್ತು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಸ್ ಹಂತಕ್ಕೂ ತೆರಳದ ದಕ್ಷಿಣ ಆಫ್ರಿಕಾ ಟೂರ್ನಿಯಿಂದ ಬಹುಬೇಗ ನಿರ್ಗಮಿಸಿತ್ತು. ಟೂರ್ನಿಯ ಬಳಿಕ ತಂಡದ ಅನುಭವಿ ಆಟಗಾರರು ಕೂಡ ಎಬಿ ಡಿವಿಲಿಯರ್ಸ್ ರಂತಹ ಆಟಗಾರರ ಅಗತ್ಯ ತಂಡಕ್ಕಿದೆ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಕೆಲ ಕ್ರಿಕೆಟಿಗರು ಎಬಿಡಿ ಅವರ ನಡೆಯನ್ನು ಟೀಕೆ ಮಾಡಿದ್ದರು. ಟಿ20 ಲೀಗ್‍ಗಳಲ್ಲಿ ಆಡಲು ಎಬಿಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇಂತಹ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಬಿಡಿ ರೀಎಂಟ್ರಿ ತಡವಾಯಿತು ಎನ್ನಲಾಗಿದೆ.