Tag: ab de villiers retirement

  • ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ

    ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ

    ದಕ್ಷಿಣ ಆಫ್ರಿಕಾ ತಂಡದ ಮಾಜಿ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

    ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುತ್ತಿದ್ದ ಎಬಿಡಿ ಆರ್‌ಸಿಬಿ ಸಹಿತ ಎಲ್ಲಾ ಮಾದರಿಯ ಕ್ರಿಕೆಟ್ ವಿದಾಯ ಘೋಷಿಸಿದ್ದಾರೆ. ಈ ಬಗ್ಗೆ ಪ್ರಕಟನೆ ಹೊರಡಿಸಿದ ಎಬಿಡಿ, ನಾನು ಅದ್ಭುತವಾದ ಕ್ರಿಕೆಟ್ ಜರ್ನಿ ಕಳೆದಿದ್ದೇನೆ. ಇದೀಗ ಕ್ರಿಕೆಟ್ ಪಯಣಕ್ಕೆ ನಿವೃತ್ತಿ ಘೋಷಿಸಲು ಮುಂದಾಗಿದ್ದೇನೆ. ನಾನು ಪ್ರತಿ ಪಂದ್ಯವನ್ನು ಕೂಡ ತುಂಬಾ ಎಂಜಾಯ್ ಮಾಡಿಕೊಂಡು ಆಡಿದ್ದೇನೆ. ಇದೀಗ ನನ್ನ ವಯಸ್ಸು 37 ಇಲ್ಲಿಗೆ ಆಟ ನಿಲ್ಲಿಸುತ್ತಿದ್ದು, ನನ್ನ ಕ್ರಿಕೆಟ್ ವೃತ್ತಿ ಜೀವನಕ್ಕೆ ಸಹಾಯ ಮಾಡಿದ ನನ್ನ ಕುಟುಂಬದೊಂದಿಗೆ ಮುಂದಿನ ಜೀವನ ಕಳೆಯಲು ಬಯಸುತ್ತೇನೆ ಎಂದು ಭಾವುಕ ವಿದಾಯ ಘೋಷಿಸಿದ್ದಾರೆ.

    ಎಬಿಡಿ 2018ರಲ್ಲಿ ವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ನಂತರ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಫ್ರಾಂಚೈಸಿ ಟಿ20 ಲೀಲ್‍ಗಳಲ್ಲಿ ಆಡುತ್ತಿದ್ದರು ಅದರಲ್ಲೂ ಐಪಿಎಲ್‍ನಲ್ಲಿ ಆರ್‌ಸಿಬಿ ಪರ 2011 ರಿಂದ 10 ಸೀಸನ್‍ಗಳಲ್ಲಿ ಆಡುತ್ತಿರುವ ಎಬಿಡಿ 156 ಪಂದ್ಯಗಳಿಂದ 4,491 ರನ್ ಸಿಡಿಸಿ ಮಿಂಚಿದ್ದರು.

    2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದ ಎಬಿಡಿ, 114 ಟೆಸ್ಟ್‌ಗಳಿಂದ 8,765 ರನ್, 228 ಏಕದಿನ ಪಂದ್ಯಗಳಿಂದ 9,577 ರನ್ ಮತ್ತು 184 ಟಿ20 ಪಂದ್ಯದಿಂದ 5,162 ರನ್ ಸಿಡಿಸಿದ್ದರು. ನಿವೃತ್ತಿ ಬಳಿಕ ಫ್ರಾಂಚೈಸಿ ಲೀಗ್‍ಗಳಲ್ಲಿ ಭರ್ಜರಿ ಪ್ರದರ್ಶನ ಕೊಡುತ್ತಿದ್ದರು. ಇದನ್ನು ಗಮನಿಸಿ 2021 ಟಿ20 ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಪುನಾರಾಗಮನ ಮಾಡುವ ವದಂತಿ ಹರಿದಾಡುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

    ಇದೀಗ ಎಬಿಡಿ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ದೂರ ಸರಿಯುವ ಮೂಲಕ ಇನ್ನೂ ಎಬಿಡಿ ಆಟವನ್ನು ಮೈದಾನದಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.