Tag: AB de Villiers

  • Test Twenty | ಟೆಸ್ಟ್‌ನಲ್ಲೂ ಚುಟುಕು ಕ್ರಿಕೆಟ್ ಶುರು – ಏನಿದು ಟೆಸ್ಟ್ ಟ್ವೆಂಟಿ? ಯಾವಾಗ ಶುರು? ಸ್ವರೂಪ ಹೇಗಿದೆ?

    Test Twenty | ಟೆಸ್ಟ್‌ನಲ್ಲೂ ಚುಟುಕು ಕ್ರಿಕೆಟ್ ಶುರು – ಏನಿದು ಟೆಸ್ಟ್ ಟ್ವೆಂಟಿ? ಯಾವಾಗ ಶುರು? ಸ್ವರೂಪ ಹೇಗಿದೆ?

    2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ (T20 World Cup) ಟೂರ್ನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ನೆನಪಿನಲ್ಲಿಡಬೇಕಾದ ವರ್ಷ. ಏಕೆಂದರೆ ಆಗಷ್ಟೇ ಮಹತ್ವ ಪಡೆದುಕೊಳ್ಳುತ್ತಿದ್ದ ಮೊಟ್ಟ ಮೊದಲ ಚುಟುಕು ಕ್ರಿಕೆಟ್‌ಗೆ ಬುನಾದಿ ಹಾಕಿಕೊಟ್ಟ ಟೂರ್ನಿ ಅದಾಗಿತ್ತು. ಆಗ ಚುಟುಕು ಕ್ರಿಕೆಟ್‌ ಮಾದರಿಯನ್ನ ಬಹಳಷ್ಟು ಜನ ಟೀಕಿಸುತ್ತಿದ್ರು. ಭಾರತ ಚೊಚ್ಚಲ ಟಿ20 ವಿಶ್ವಕಪ್‌ ಮುಡಿಗೇರಿಸಿಕೊಂಡ ಬಳಿಕ ಜನಪ್ರಿಯತೆ ಪಡೆದುಕೊಂಡಿತು. 2008ರಲ್ಲಿ ಪದಾರ್ಪಣೆ ಮಾಡಿದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ಚುಟುಕು ಕ್ರಿಕೆಟ್‌ ಮಹತ್ವವನ್ನ ಜಗತ್ತಿಗೇ ಸಾರಿತು. ಇದೀಗ ಟೆಸ್ಟ್‌ ಕ್ರಿಕೆಟ್‌ (Test Cricket) ಸ್ವರೂಪಕ್ಕೂ ಟಿ20 ಸ್ಪರ್ಶ ನೀಡಲು ಕ್ರಿಕೆಟ್‌ ತಜ್ಞರು ಮುಂದಾಗಿದ್ದಾರೆ.

    ಕ್ರಿಕೆಟ್‌ ದಿಗ್ಗಜರಾದ ಎಬಿ ಡಿವಿಲಿಯರ್ಸ್ (AB De Villiers), ಸರ್ ಕ್ಲೈವ್ ಲಾಯ್ಡ್, ಮ್ಯಾಥ್ಯೂ ಹೇಡನ್ ಮತ್ತು ಹರ್ಭಜನ್ ಸಿಂಗ್ ಅವರನ್ನೊಳಗೊಂಡ ಸಲಹಾ ಮಂಡಳಿಯು ಈ ನಾಲ್ಕನೇ ಸ್ವರೂಪದ ಟೆಸ್ಟ್‌ ಕ್ರಿಕೆಟ್‌ನ್ನು ಅನುಮೋದಿಸಿದ್ದಾರೆ. ಈ ಸ್ವರೂಪದ ಟೂರ್ನಿ 2026ರ ಜನವರಿಯಿಂದಲೇ ಅನುಷ್ಠಾನಕ್ಕೆ ತರಲು ದಿ ಒನ್ ಒನ್ ಸಿಕ್ಸ್ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಕ್ರೀಡಾ ಉದ್ಯಮಿ ಗೌರವ್ ಬಹಿರ್ವಾನಿ ಮುಂದಾಗಿದ್ದಾರೆ.

    ಏನಿದು ಟೆಸ್ಟ್‌ ಟ್ವೆಂಟಿ? ಹೇಗಿರಲಿದೆ ಸ್ವರೂಪ?
    13 ರಿಂದ 19 ವರ್ಷದೊಳಗಿನವರಿಗಾಗಿ ಟೆಸ್ಟ್‌ 20 (Test Twenty) ಕ್ರಿಕೆಟ್‌ ಮಾದರಿಯನ್ನ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಸಹ ರೆಡ್‌ ಬಾಲ್‌ ಕ್ರಿಕೆಟ್‌ ಆಗಿರಲಿದ್ದು, 80 ಓವರ್‌ಗಳ ಪಂದ್ಯವಾಗಿರಲಿದೆ. ಉಭಯ ತಂಡಗಳು ಒಂದು ಪಂದ್ಯದಲ್ಲಿ ತಲಾ 20 ಓವರ್‌ನಂತೆ 2 ಇನ್ನಿಂಗ್ಸ್‌ಗಳನ್ನು ಟೆಸ್ಟ್‌ ಮಾದರಿಯಲ್ಲೇ ಆಡಲಿವೆ. 4 ವಿರಾಮಗಳು ಇರಲಿದ್ದು, ಒಂದು ದಿನದಲ್ಲೇ ಮುಕ್ತಾಯಗೊಳ್ಳುವ ಟೆಸ್ಟ್‌ ಸ್ವರೂಪದ ಕ್ರಿಕೆಟ್‌ ಆಗಿರಲಿದೆ.

    ನಿಯಮ ಹೇಗೆ ಅನ್ವಯ?
    ಪ್ರತಿ ತಂಡವು ಪಂದ್ಯದಲ್ಲಿ ಒಮ್ಮೆಗೆ 4 ಓವರ್‌ ಪವರ್‌ ಪ್ಲೇ ತೆಗೆದುಕೊಳ್ಳಬಹುದಾಗಿದೆ. ಅಲ್ಲದೇ ಮೊದಲ ಇನ್ನಿಂಗ್ಸ್‌ನಲ್ಲಿ 75 ರನ್‌ ಅಥವಾ ಅದಕ್ಕಿಂತಲೂ ಹೆಚ್ಚು ರನ್‌ಗಳಿಂದ ಮುನ್ನಡೆ ಸಾಧಿಸಿದ್ರೆ, ಎದುರಾಳಿ ತಂಡ ಫಾಲೋ ಆನ್‌ ಹೇರಬಹುದಾಗಿದೆ. ಪಂದ್ಯದುದ್ದಕ್ಕೂ ಗರಿಷ್ಠ 5 ಬೌಲರ್‌ಗಳನ್ನ ಬಳಸಬಹುದಾಗಿದೆ. ಪ್ರತಿ ಬೌಲರ್‌ಗೆ ಗರಿಷ್ಠ 8 ಓವರ್‌ ಬೌಲಿಂಗ್‌ ಮಾಡಲು ಅವಕಾಶ ಇರಲಿದೆ.

    ಮೊದಲ ಸೀಸನ್‌ ಯಾವಾಗ?
    ಟೆಸ್ಟ್‌ ಟ್ವೆಂಟಿಯ ಮೊದಲ ಸೀಸನ್‌ 2026ರ ಜನವರಿಯಲ್ಲಿ ಶುರುವಾಗಲಿದೆ. ಮೊದಲ ಟೂರ್ನಿ 6 ಜಾಗತಿಕ ಫ್ರಾಂಚೈಸಿಗಳನ್ನು ಒಳಗೊಂಡಿರಲಿದೆ. ಭಾರತರಿಂದ ಮೂರು ತಂಡಗಳು ಹಾಗೂ ದುಬೈ, ಲಂಡನ್ ಮತ್ತು ಯುನೈಟೆಡ್ ಸ್ಟೇಟ್ಸ್ ಪ್ರತಿನಿಧಿಸುವ ಮೂರು ತಂಡಗಳು ಪಾಲ್ಗೊಳ್ಳಲಿವೆ. ಪ್ರತಿ ತಂಡವು 16 ಆಟಗಾರರನ್ನ ಒಳಗೊಂಡಿರಲಿದ್ದು, 8 ಭಾರತೀಯರು 8 ವಿದೇಶಿ ಆಟಗಾರರು ತಂಡದಲ್ಲಿರಲಿದ್ದಾರೆ.

    ಎಬಿಡಿ ಹೇಳಿದ್ದೇನು?
    ಟೆಸ್ಟ್‌ ಟ್ವೆಂಟಿ ಕುರಿತು ಮಾತನಾಡಿರುವ ಕ್ರಿಕೆಟ್‌ ದಿಗ್ಗಜ ಎಬಿಡಿ ವಿಲಿಯರ್ಸ್‌, ಭವಿಷ್ಯದ ದೃಷ್ಟಿಯಿಂದ ಆಟದ ಸ್ವರೂಪಗಳನ್ನ ನಾವು ಗೌರವಿಸಬೇಕು. ಇದು ಯುವ ಆಟಗಾರರ ಮುಂದಿನ ಭವಿಷ್ಯಕ್ಕೆ ದೊಡ್ಡ ವೇದಿಕೆಯಾಗಲಿದೆ. ಜೊತೆಗೆ ಅಭಿಮಾನಿಗಳಿಗೂ ಹೊಸತನದ ಅನುಭವ ನೀಡುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

  • WCL 2025 | ನೋವಿನಲ್ಲೂ ದೇಶಕ್ಕಾಗಿ ಎಬಿಡಿ ಕಟ್ಟಿದ ಇನ್ನಿಂಗ್ಸ್‌ – ದಕ್ಷಿಣ ಆಫ್ರಿಕಾ ಚಾಂಪಿಯನ್‌

    WCL 2025 | ನೋವಿನಲ್ಲೂ ದೇಶಕ್ಕಾಗಿ ಎಬಿಡಿ ಕಟ್ಟಿದ ಇನ್ನಿಂಗ್ಸ್‌ – ದಕ್ಷಿಣ ಆಫ್ರಿಕಾ ಚಾಂಪಿಯನ್‌

    – ಮತ್ತೊಮ್ಮೆ ತೂಫಾನ್‌ ಶತಕ, 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಎಬಿಡಿ

    South Africa Vs Pakistan – ಎಬಿ ಡಿ ವಿಲಿಯರ್ಸ್ ಅವರ ಅಭೂತಪೂರ್ವ ಬ್ಯಾಟಿಂಗ್‌ನಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡ ವಿಶ್ವ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ (WCL 2025) ಟ್ರೋಫಿಯನ್ನು ಗೆದ್ದುಕೊಂಡಿದೆ. ಸ್ನಾಯು ಸೆಳೆತದ ಸಮಸ್ಯೆಯ ಮಧ್ಯೆಯೂ 48 ಎಸೆತಗಳಲ್ಲಿ ಶತಕ ಸಿಡಿಸಿದ ಅವರು, ಅಜೇಯ 120 ರನ್ ಗಳಿಸುವ ಮೂಲಕ ಏಕಾಂಗಿಯಾಗಿ ತಂಡವನ್ನು ದಡ ಸೇರಿಸಿದರು.

    ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂ ನಗರದ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳ ಅಂತರದಿಂದ ಜಯಿಸುವ ಮೂಲಕ ಹಿರಿಯರ ಲೀಗ್‌ನ ಟೂರ್ನಿಯಲ್ಲಿ ಜಯಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು. ಗೆಲುವಿಗೆ ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 3.1 ಓವರ್‌ಗಳು ಬಾಕಿ ಇರುಬಾಗಲೇ ಈ ಗುರಿ ತಲುಪಿತು. ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ವಿಲಿಯರ್ಸ್ ಅವರ ಅದ್ಭುತ ಫೀಲ್ಡಿಂಗ್‌ನಿಂದ ದಕ್ಷಿಣ ಆಫ್ರಿಕಾ 1 ರನ್‌ನಿಂದ ರೋಚಕ ಜಯ ಗಳಿಸಿತ್ತು.

    ಎಬಿಡಿ ಅಬ್ಬರ ಹೀಗಿತ್ತು
    ದಕ್ಷಿಣ ಆಫ್ರಿಕಾದ ವೈಟ್ ಬಾಲ್ ಕ್ರಿಕೆಟ್ ದಂತಕತೆಯಾಗಿರುವ ಎಬಿ ಡಿ ವಿಲಿಯರ್ಸ್ ಪಾಕ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 60 ಎಸೆತಗಳಲ್ಲಿ ಅಜೇಯ 120 ರನ್ ಗಳಿಸಿದರು. ಇದಕ್ಕೂ ಮೊದಲು ಅವರು ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಸ್ಫೋಟಕ ಇನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ಗಳಿದ್ದವು.

    ಡಿ ವಿಲಿಯರ್ಸ್ ಆಟದ ನಡುವೆ ನೋವಿನಿಂದ ಬಳಲುತ್ತಿದ್ದು ಸ್ಫಷ್ಟವಾಗಿ ಗೋಚರಿಸಿತ್ತು. ಆದರೂ ಧೃತಿಗೆಡದ ಅವರು ವೈದ್ಯಕೀಯ ಸಹಾಯವನ್ನು ಪಡೆದು ಆಟವನ್ನು ಮುಂದುವರಿಸಿದರು. ಅವರೊಂದಿಗೆ ಕಣಕ್ಕಿಳಿದ ಮತ್ತೊಬ್ಬ ಆರಂಭಿಕ ಆಟಗಾರ ಹಶೀಂ ಆಮ್ಲ 14 ಎಸೆತಗಳಲ್ಲಿ 18 ರನ್ ಗಳಿಸಿ ಸ್ಪಿನ್ನರ್ ಸಯೀದ್ ಅಜ್ಮಲ್ ಗೆ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂದಲ್ಲಿ ಕ್ರೀಸಿಗೆ ಆಗಮಿಸಿದ ಜೆಪಿ ಡುಮಿನಿ 28 ಎಸೆತಗಳಲ್ಲಿ 50 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ವಿಲಿಯರ್ಸ್ ಮತ್ತು ಡುವಿಮಿ 125 ರನ್ ಗಳ ಜೊತೆಯಾಟವಾಡಿದರು.

    ಸಂಕ್ಷಿಪ್ತ ಸ್ಕೋರ್
    ಪಾಕಿಸ್ತಾನ ಚಾಂಪಿಯನ್ಸ್ 20 ಓವರ್ ಗಳಲ್ಲಿ 195/5, ಶಾರ್ಜಿಲ್ ಖಾನ್ 76(44), ಉಮರ್ ಅಮೀನ್ 36(19), ಆಲಿಫ್ ಅಲಿ 28(15), ವಿಜೋಯಿನ್ 38ಕ್ಕೆ 2, ಪಾರ್ನೆಲ್ 32ಕ್ಕೆ 2.

    ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ 16.5 ಓವರ್ ಗಳಲ್ಲಿ 197, ಎಬಿ ಡಿ ವಿಲಿಯರ್ಸ್ ಅಜೇಯ 120(60), ಜೆಪಿ ಡುಮಿನಿ ಅಜೇಯ 50(28) ಹಾಶಿಂ ಆಮ್ಲಾ 18(14).

  • ಈಗಲೂ ಅದೇ ಖದರ್‌ – 15 ಫೋರ್‌, 8 ಸಿಕ್ಸ್‌, ಆಸೀಸ್‌ ವಿರುದ್ಧ ತೂಫಾನ್‌ ಶತಕ ಸಿಡಿಸಿದ ಎಬಿಡಿ

    ಈಗಲೂ ಅದೇ ಖದರ್‌ – 15 ಫೋರ್‌, 8 ಸಿಕ್ಸ್‌, ಆಸೀಸ್‌ ವಿರುದ್ಧ ತೂಫಾನ್‌ ಶತಕ ಸಿಡಿಸಿದ ಎಬಿಡಿ

    ಯಾರು ಹೇಳಿದ್ದು ಎಬಿ ಡಿವಿಲಿಯರ್ಸ್‌ ಗೆ (AB de Villiers) ವಯಸ್ಸಾಗಿದೆ ಅಂತ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದು 7-8 ವರ್ಷಗಳೇ ಕಳೆದರೂ ಅವರ ಆಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ (WCL 2025) ಟೂರ್ನಿಯಲ್ಲೂ ಅಂತಹದ್ದೇ ಬ್ಯಾಟಿಂಗ್ ಪ್ರದರ್ಶನ ತೋರಿ ಮಿಂಚುತ್ತಿದ್ದಾರೆ. ಲೆಕ್ಕವಿಲ್ಲದಂತೆ ಸಿಕ್ಸರ್‌, ಬೌಂಡರಿಗಳನ್ನು ಬಾರಿಸುತ್ತಾ ಯುವಕರನ್ನು ನಾಚಿಸುವಂತೆ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಎಬಿಡಿ ಅಬ್ಬರಿಸಿದ ಎಲ್ಲ ಪಂದ್ಯಗಳಲ್ಲೂ ದಕ್ಷಿಣ ಆಫ್ರಿಕಾ ತಂಡಕ್ಕೆ ಜಯ ಒಲಿದುಬಂದಿದೆ.

    ಕಳೆದ ಪಂದ್ಯಗಳಲ್ಲಿ 41 ವರ್ಷದ ಎಬಿಡಿ 41 ಎಸೆತಗಳಲ್ಲಿ ಶತಕ ಸಿಡಿಸಿದ್ದ ಎಬಿಡಿ ಹಿರಿಯರ ಕ್ರಿಕೆಟ್ ನಲ್ಲಿ ಶತಕ ಗಳಿಸಿದ ಅತ್ಯಂತ ಹಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಟೀಂ ಇಂಡಿಯಾ ಚಾಂಪಿಯನ್ಸ್‌ ತಂಡದ ವಿರುದ್ಧ ಮಿಂಚಿನ ಅರ್ಧಶತಕ, ಇಂಗ್ಲೆಂಡ್‌ ವಿರುದ್ಧ 41 ಎಸೆತಗಳಲ್ಲಿ ಶತಕ ಸಿಡಿಸಿ ಗೆಲುವು ತಂದುಕೊಟ್ಟಿದ್ದ ಎಬಿಡಿ ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲೂ ತೂಫಾನ್‌ ಶತಕದ ಮೂಲಕವೇ ಗೆಲುವು ತಂದುಕೊಟ್ಟಿದ್ದಾರೆ. ಇದರೊಂದಿಗೆ ಈ ಬಾರಿ ಚಾಂಪಿಯನ್‌ ಪಟ್ಟ ಗೆಲ್ಲಿಸಿಕೊಡುವ ಭರವಸೆ ಮೂಡಿಸಿದ್ದಾರೆ. ಇದನ್ನೂ ಓದಿ: ಒಂದೇ ಶತಕ, ಹಲವು ದಾಖಲೆ – ಡಾನ್‌ ಬ್ರಾಡ್ಮನ್, ಗವಾಸ್ಕರ್‌ ದಾಖಲೆ ಸರಿಗಟ್ಟಿದ ಗಿಲ್‌

    ಆಸ್ಟ್ರೇಲಿಯಾ ಚಾಂಪಿಯನ್ಸ್‌ ತಂಡದ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ನಷ್ಟಕ್ಕೆ 241 ರನ್‌ ಸಿಡಿಸಿತು. ಆರಂಭಿಕನಾಗಿ ಕಣಕ್ಕಿಳಿದ ಎಬಿಡಿ ಕೇವಲ 39 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಒಟ್ಟು ಎದುರಿಸಿದ 46 ಎಸೆತಗಳಲ್ಲಿ 8 ಸಿಕ್ಸರ್‌, 15 ಬೌಂಡರಿ ಸಹಿತ ಬರೋಬ್ಬರಿ 123 ರನ್‌ ಬಾರಿಸಿ ಔಟಾದರು. ಈ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ 15 ಓವರ್‌ಗಳಲ್ಲಿ 137 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು ಸೋಲಿನ ಅಂಚಿಗೆ ತಲುಪಿದೆ.

    ಈಗಲೂ ಯಾರೂ ಮುರಿಯದ ದಾಖಲೆ
    ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಎಬಿಡಿ ಗುಡ್‌ಬೈ ಗೇಳಿ 7-8 ವರ್ಷಗಳೇ ಕಳೆದಿವೆ. ಆದ್ರೆ ಅವರ ಹೆಸರಿನಲ್ಲಿರುವ ದಾಖಲೆಯೊಂದು ಅಚ್ಚಳಿಯದೇ ಉಳಿದಿದೆ. ಹೌದು. 2015ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಎಬಿಡಿ 31 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅಂತಾರಾಷ್ಟ್ರೀಯ ಏಕದುನ ಕ್ರಿಕೆಟ್‌ನಲ್ಲಿ ಇದು ಸಾರ್ವಕಾಲಿಕ ವೇಗ ಶತಕವಾಗಿ ಉಳಿದಿದೆ. ಇದನ್ನೂ ಓದಿ: Asia Cup T20 | ಏಷ್ಯಾ ಕಪ್‌ ಟೂರ್ನಿಗೆ ದಿನಾಂಕ ಪ್ರಕಟ; ಭಾರತ – ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್!

  • ನೀನು ಸಾಧಿಸಿಬಿಟ್ಟೆ ಮಚ್ಚಾ: ಕೊಹ್ಲಿ ತಬ್ಬಿಕೊಂಡು ಎಬಿಡಿ ಭಾವುಕ

    ನೀನು ಸಾಧಿಸಿಬಿಟ್ಟೆ ಮಚ್ಚಾ: ಕೊಹ್ಲಿ ತಬ್ಬಿಕೊಂಡು ಎಬಿಡಿ ಭಾವುಕ

    ಅಹಮದಾಬಾದ್: ವಿರಾಟ್‌ ಕೊಹ್ಲಿ (Virat Kohli) ಮತ್ತು ಎಬಿ ಡಿವಿಲಿಯರ್ಸ್‌ (AB de villiers) ಇಬ್ಬರದ್ದೂ ಬಿಡಿಸಲಾರದ ನಂಟು. ಕುಚಿಕು ಗೆಳೆಯರಿಗಿಂತ ಹೆಚ್ಚು. ಆರ್‌ಸಿಬಿ (RCB) ತಂಡದಲ್ಲಿ ಇವರಿಬ್ಬರ ಸ್ನೇಹದ ಬಗ್ಗೆ ಮಾತನಾಡದವರಿಲ್ಲ. ಆರ್‌ಸಿಬಿ ಟ್ರೋಫಿ ಗೆಲುವಿನ ಖುಷಿಯಲ್ಲಿ ಇವರಿಬ್ಬರು ಸಂಧಿಸಿದ ಸಂದರ್ಭ ನಿಜಕ್ಕೂ ಭಾವುಕ ಕ್ಷಣವಾಗಿತ್ತು.

    ರೋಚಕ ಪಂದ್ಯದ ಗೆಲುವಿಗೆ ಎಬಿಡಿ ಕಾತರದಿಂದ ಕಾದು ಕುಳಿತಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಡಿವಿಲಿಯರ್ಸ್‌ ಕೈ ಕೈ ಹಿಸುಕಿಕೊಳ್ಳುತ್ತಿದ್ದ ದೃಶ್ಯವೂ ಕಂಡುಬಂತು. ಇದನ್ನು ಕಂಡು ಅಭಿಮಾನಿಗಳು ಕೂಡ ಗೆಲುವನ್ನು ಹಂಬಲಿಸಿದ್ದರು. ಕೊನೆಗೆ ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಎಬಿಡಿ ಸಂಭ್ರಮಿಸಿದರು. ಇದನ್ನೂ ಓದಿ: 18 ವರ್ಷ, 18 ಆವೃತ್ತಿ, ನಂ.18 ಜೆರ್ಸಿ – ಹೇಗಿದೆ ಆರ್‌ಸಿಬಿಯ ರೋಚಕ ಇತಿಹಾಸ..?

    ಮೈದಾನಕ್ಕೆ ಧಾವಿಸಿ ವಿರಾಟ್‌ ಕೊಹ್ಲಿಯನ್ನು ಎಬಿ ಡಿವಿಲಿಯರ್ಸ್‌ ಅಪ್ಪಿಕೊಂಡು ಕಣ್ಣೀರಿಟ್ಟರು. ನಂತರ ಕೊಹ್ಲಿ ಮುಖವನ್ನು ನೋಡುತ್ತ ‘ನೀನು ಸಾಧಿಸಿಬಿಟ್ಟೆ ಮಚ್ಚ’ ಎಂಬಂಥ ಭಾವನೆಯನ್ನು ತೋರಿದರು. ಈ ಇಬ್ಬರ ನಡುವಿನ ಮನದ ಮಾತು ಕಂಡು ಆರ್‌ಸಿಬಿ ಅಭಿಮಾನಿಗಳು ಕೂಡ ಅರೆ ಕ್ಷಣ ಭಾವುಕರಾದರು. ಇದಪ್ಪಾ ಸ್ನೇಹ ಎನ್ನುವಂತೆ ಮಾತನಾಡಿಕೊಂಡರು.

    ಐಪಿಎಲ್‌ ಇತಿಹಾಸದಲ್ಲೇ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಜೋಡಿಯ ಆಟ ಇತಿಹಾಸ ಸೃಷ್ಟಿಸಿದೆ. 2016 ರ ಋತುವಿನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎರಡನೇ ವಿಕೆಟ್‌ಗೆ 229 ರನ್‌ಗಳ ಬೃಹತ್ ಜೊತೆಯಾಟ ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಪಾಲುದಾರಿಕೆ ದಾಖಲೆಯನ್ನು ಹೊಂದಿದ್ದಾರೆ. ಇದನ್ನೂ ಓದಿ: ಕೊನೆಗೂ ಆರ್‌ಸಿಬಿಗೆ ಸಿಕ್ತು ಕಪ್‌ – ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕೊಹ್ಲಿ

    2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ಗೆ ಎಂಟ್ರಿ ಆಗುತ್ತಿದ್ದಂತೆ ಭಾರತಕ್ಕೆ ಎಬಿಡಿ ಬಂದಿದ್ದರು. ಫೈನಲ್‌ನಲ್ಲಿ ಆರ್‌ಸಿಬಿ ಗೆಲ್ಲಲಿ ಎಂದು ಹಾರೈಸಿದ್ದರು.

  • ಮ್ಯಾಥ್ಯೂ ಫೋರ್ಡ್ ಸ್ಫೋಟಕ ಫಿಫ್ಟಿ – ಎಬಿಡಿ ವಿಶ್ವದಾಖಲೆ ಸರಿಗಟ್ಟಿದ ವಿಂಡೀಸ್‌ ಬ್ಯಾಟರ್

    ಮ್ಯಾಥ್ಯೂ ಫೋರ್ಡ್ ಸ್ಫೋಟಕ ಫಿಫ್ಟಿ – ಎಬಿಡಿ ವಿಶ್ವದಾಖಲೆ ಸರಿಗಟ್ಟಿದ ವಿಂಡೀಸ್‌ ಬ್ಯಾಟರ್

    ಡಬ್ಲಿನ್‌: ವಿಂಡೀಸ್‌ ಆಟಗಾರ ಮ್ಯಾಥ್ಯೂ ಫೋರ್ಡ್ (Matthew Forde) 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 10 ವರ್ಷಗಳ ಹಿಂದೆ ಎಬಿ ಡಿ ವಿಲಿಯರ್ಸ್ (AB de Villiers) ಮಾಡಿದ್ದ ವಿಶ್ವದಾಖಲೆಯೊಂದನ್ನ ಸರಿಗಟ್ಟಿದ್ದಾರೆ.

    ಹೌದು. ಡಬ್ಲಿನ್‌ ಕ್ರೀಡಾಂಗಣದಲ್ಲಿ ಐರ್ಲೆಂಡ್‌ (Ireland) ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿರುವ ವೆಸ್ಟ್‌ ಇಂಡೀಸ್‌ (West Indies) ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 352 ರನ್‌ ಗಳಿಸಿದೆ. ಇದನ್ನೂ ಓದಿ: ಇಶಾನ್‌ ಕಿಶನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ

    ಆದ್ರೆ ಈ ಇನ್ನಿಂಗ್ಸ್‌ನಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಫೋರ್ಡ್‌ 16 ಎಸೆತಗಳಲ್ಲಿ 1 ಬೌಂಡರಿ, 8 ಸಿಕ್ಸರ್‌ ಸಹಿತ 50 ರನ್‌ ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ್ದ ಲೆಜೆಂಡ್‌ ಎಬಿ ಡಿ ವಿಲಿಯರ್ಸ್‌ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. 2015ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧವೇ ಡಿವಿಲಿಯರ್ಸ್‌ 16 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ ಸಿಡಿಸಿದ ಸಾಧನೆ ಮಾಡಿದ್ದರು.

    ಈ ಪಂದ್ಯದಲ್ಲಿ ಒಟ್ಟು 19 ಎಸೆತಗಳನ್ನು ಎದುರಿಸಿದ ಫೋರ್ಡ್‌ 8 ಸಿಕ್ಸರ್‌, 2 ಬೌಂಡರಿ ಸಹಿತ 58 ರನ್‌ ಚಚ್ಚಿ ಔಟಾದರು. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಏಂಜೆಲೊ ಮ್ಯಾಥ್ಯೂಸ್

    ODI ಸ್ಫೋಟಕ ಫಿಫ್ಟಿ ಬಾರಿಸಿದ ಟಾಪ್‌-5 ಬ್ಯಾಟರ್ಸ್‌
    * ಎಬಿ ಡಿ ವಿಲಿಯರ್ಸ್‌ – 16 ಎಸೆತ
    * ಮ್ಯಾಥ್ಯೂ ಫೋರ್ಡ್ – 16 ಎಸೆತ
    * ಸನತ್‌ ಜಯಸೂರ್ಯ – 17 ಎಸೆತ
    * ಪೆರೇರಾ – 17 ಎಸೆತ
    * ಮಾರ್ಟಿನ್‌ ಗಪ್ಟಿಲ್‌ – 17 ಎಸೆತ

  • ಸಿಎಸ್‌ಕೆ ವಿರುದ್ಧ ಭರ್ಜರಿ ಜಯಗಳಿಸಿದ ಆರ್‌ಸಿಬಿ ಹಾಡಿಹೊಗಳಿದ ಡಿವಿಲಿಯರ್ಸ್‌

    ಸಿಎಸ್‌ಕೆ ವಿರುದ್ಧ ಭರ್ಜರಿ ಜಯಗಳಿಸಿದ ಆರ್‌ಸಿಬಿ ಹಾಡಿಹೊಗಳಿದ ಡಿವಿಲಿಯರ್ಸ್‌

    ಮುಂಬೈ: ಸಾಂಪ್ರದಾಯಿಕ ಎದುರಾಳಿ ಸಿಎಸ್‌ಕೆ (CSK) ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಆರ್‌ಸಿಬಿ (RCB) ತಂಡವನ್ನು ದಕ್ಷಿಣ ಆಫ್ರಿಕಾ ದಂತಕಥೆ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ (AB de Villiers) ಹಾಡಿಹೊಗಳಿಸಿದ್ದಾರೆ.

    ಐಪಿಎಲ್‌ 2025ರ ಋತುವಿನಲ್ಲಿ ಆರ್‌ಸಿಬಿ ಉತ್ತರ ಆರಂಭ ಪಡೆದುಕೊಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಂಡವು ಗಮನಾರ್ಹವಾಗಿ ಸುಧಾರಿಸಿದೆ ಎಂದು ಆರ್‌ಸಿಬಿ ಮಾಜಿ ಆಟಗಾರರೂ ಆದ ಡಿವಿಲಿಯರ್ಸ್‌ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸಿಎಸ್‌ಕೆ ಸೋಲಿಸಿ ಬೆಂಗಳೂರಿಗೆ ಆರ್‌ಸಿಬಿ ಟೀಂ ಗ್ರ್ಯಾಂಡ್‌ ಎಂಟ್ರಿ – ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಜಯಘೋಷ

    ಶುಕ್ರವಾರ ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಆರ್‌ಸಿಬಿ 50 ರನ್‌ಗಳ ಅಂತರದ ಗೆಲುವು ಸಾಧಿಸಿದೆ. 2008 ರ ನಂತರ ಚೆನ್ನೈ ನೆಲದಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿದೆ. ಈ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಎಬಿಡಿ, ಆರ್‌ಸಿಬಿ ತಂಡವನ್ನು ಮೆಚ್ಚಿ ಮಾತನಾಡಿದ್ದಾರೆ.

    ಹಿಂದಿನ ಋತುಗಳಿಗೆ ಹೋಲಿಸಿದರೆ ಆರ್‌ಸಿಬಿ ತಂಡದ ಸಮತೋಲನ 10 ಪಟ್ಟು ಉತ್ತಮವಾಗಿದೆ ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ. ಒಬ್ಬ ಆಟಗಾರನ ಸಾಧನೆ ಎಂಬುದು ಇಲ್ಲಿ ಕಾಣುತ್ತಿಲ್ಲ. ಒಟ್ಟಾರೆ, ತಂಡದ ಸಾಧನೆಯನ್ನು ಗುರುತಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ತುಂಬಾ ಬೇಗ ಬ್ಯಾಟಿಂಗ್‌ಗೆ ಬಂದ್ರಿ – ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಕಾಲೆಳೆದ ಸೆಹ್ವಾಗ್

    ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ವೇಗಿ ಭುವನೇಶ್ವರ್‌ ಕುಮಾರ್‌ನನ್ನು ಕರೆತಂದ ಬಗ್ಗೆಯೂ ಎಬಿಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಕೆಆರ್‌ ವಿರುದ್ಧದ ಪಂದ್ಯಕ್ಕೆ ಭುವಿ ಇರಲಿಲ್ಲ. ಆದರೆ, ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆತನನ್ನು ಆಡಿಸಿದ್ದಾರೆ. ತಂಡಕ್ಕೆ ಬೇಕಿರುವುದು ಈ ರೀತಿಯ ಸಮತೋಲದ, ಸೂಕ್ಷ್ಮ ಆಲೋಚನೆಯ ನಿರ್ಧಾರ ಎಂದು ತಿಳಿಸಿದ್ದಾರೆ. ಭುವನೇಶ್ವರ್ ಕುಮಾರ್ ಪ್ರಮುಖ ಬ್ಯಾಟರ್‌ ದೀಪಕ್ ಹೂಡಾ ಅವರನ್ನು ಬೇಗನೆ ಔಟ್ ಮಾಡಿದರು. ಪವರ್ ಪ್ಲೇನಲ್ಲಿ CSK ಅನ್ನು 26/3 ಕ್ಕೆ ಇಳಿಸಿದರು. ಇದು ಅಂತಿಮವಾಗಿ 197 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆಯನ್ನು 146/8 ಕ್ಕೆ ಕಟ್ಟಿಹಾಕಲು ನೆರವಾಯಿತು. ಇದನ್ನೂ ಓದಿ: 17 ವರ್ಷಗಳ ಬಳಿಕ ಚೆನ್ನೈ ಕೋಟೆಗೆ ಆರ್‌ಸಿಬಿ ‘ರಾಯಲ್‌’ ಎಂಟ್ರಿ

  • IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

    IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

    ಯಾವುದೇ ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡುವ ತಂಡವು ಬೃಹತ್‌ ಮೊತ್ತ ಬಾರಿಸಬೇಕಾದ್ರೆ, ಸ್ಫೋಟಕ ಬ್ಯಾಟಿಂಗ್‌ ಮಾಡುವ ಹೊರತಾಗಿ ಉತ್ತಮ ಪಾಲುದಾರಿಕೆಯೂ ಮುಖ್ಯವಾಗುತ್ತದೆ. ಐಪಿಎಲ್‌ ಟೂರ್ನಿಗೂ (IPL 2025) ಇದು ಅನ್ವಯಿಸುತ್ತದೆ.

    ಮೊದಲು ಬ್ಯಾಟಿಂಗ್‌ ಮಾಡುವ ತಂಡದ ಪರ ಬ್ಯಾಟಿಂಗ್‌ ಜೋಡಿಯು ಕ್ರೀಸ್‌ ಮೇಲೆ ಭದ್ರವಾಗಿ ನೆಲೆಯೂರಿದರೆ, ದೊಡ್ಡ ಹೊಡೆತ ನೀಡಲು ಮುಂದಾದ್ರೆ, ಕನಿಷ್ಠ 200 ರನ್‌ಗಳನ್ನು ಕಲೆಹಾಕುವುದು ಖಚಿತ. ಕೆಲವೊಮ್ಮೆ ಅಧಿಕ ರನ್‌ ಗಳಿಸಿದ ತಂಡವು ಬೌಲಿಂಗ್‌ನಲ್ಲಿ ಕೊಂಚ ಎಡವಿದರೂ ಎದುರಾಳಿ ತಂಡಕ್ಕೆ ಗೆಲುವು ತಂದುಕೊಡಬಹುದು. ಉದಾಹರಣೆಗೆ 2023ರ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ (CSK vs RCB) ನಡುವಿನ ಪಂದ್ಯ ಸಾಕ್ಷಿಯಾಗಿದೆ. ಅಂದು ಚೆನ್ನೈ 226 ರನ್‌ ಪೇರಿಸಿದ್ದರೂ, ಕೇವಲ 9 ರನ್‌ಗಳಿಂದ ಗೆಲುವು ಸಾಧಿಸಿತ್ತು. 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಸಮೀಪಿಸುತ್ತಿರುವ ಕಾರಣ ಈ ಹಿಂದಿನ ಅತ್ಯುತ್ತಮ ಜೊತೆಯಾಟವನ್ನು ಮೆಲುಕು ಹಾಕುಬೇಕಾಗಿದ್ದು, ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಜೊತೆಯಾಟ ನೀಡಿದ ಟಾಪ್‌ ಜೋಡಿಗಳನ್ನು ಇಲ್ಲಿ ಕಾಣಬಹುದು.

    RCB 11

    ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
    ಐಪಿಎಲ್‌ ಇತಿಹಾಸದಲ್ಲಿ ಅತ್ಯುತ್ತಮ ಜೊತೆಯಾಟ ನೀಡಿದ ಟಾಪ್‌-5 ಪಟ್ಟಿಯಲ್ಲಿ ಕೊಹ್ಲಿ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ಆರ್‌ಸಿಬಿ ತಂಡ ಮೂವರು ಆಟಗಾರರು ಈ ಪಟ್ಟಿಲ್ಲಿರುವುದು ವಿಶೇಷ. 2016ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್ (AB de Villiers) ಅವರೊಂದಿಗೆ 2ನೇ ವಿಕೆಟ್​ಗೆ ವಿರಾಟ್​ ಕೊಹ್ಲಿ (Virat Kohli) 229 ರನ್​​ಗಳನ್ನು ಸೇರಿಸಿದ್ದರು. ಈ ಪಂದ್ಯದಲ್ಲಿ ಇಬ್ಬರೂ ಶತಕಗಳನ್ನು ಸಿಡಿಸಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟರ್ ಮಿಸ್ಟರ್‌-360, ಕೇವಲ 52 ಎಸೆತಗಳಲ್ಲಿ 12 ಸಿಕ್ಸರ್​ಗಳು ಮತ್ತು 10 ಬೌಂಡರಿಗಳ ಸಹಾಯದಿಂದ 129 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 109 ರನ್ ಗಳಿಸುವುದರೊಂದಿಗೆ ಆರ್​ಸಿಬಿ 3 ವಿಕೆಟ್ ನಷ್ಟಕ್ಕೆ 248 ರನ್ ಪೇರಿಸಿತ್ತು. ಪಂದ್ಯದಲ್ಲಿ ಆರ್​​ಸಿಬಿ ಗೆದ್ದಿತ್ತು.

    RCB 2 3

    ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
    2015ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2ನೇ ವಿಕೆಟ್​ಗೆ ಕೊಹ್ಲಿ ಮತ್ತು ವಿಲಿಯರ್ಸ್ 215 ರನ್​ಗಳ ಜೊತೆಯಾಟವಾಡಿದ್ದರು. ಆ ಪಂದ್ಯದಲ್ಲಿ ಎಬಿಡಿ ಕೇವಲ 59 ಎಸೆತಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 133 ರನ್ ಚಚ್ಚಿದ್ದರು. ವಿರಾಟ್ 50 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಮೊದಲ ಇನ್ನಿಂಗ್ಸ್​​ನಲ್ಲಿ 235/1 ಸ್ಕೋರ್ ಮಾಡಿದ್ದ ಆರ್​ಸಿಬಿ ಈ ಪಂದ್ಯವನ್ನು 39 ರನ್​ಗಳಿಂದ ಗೆದ್ದುಕೊಂಡಿತ್ತು.

    GTvsLSG 4

    ಕ್ವಿಂಟನ್‌ ಡಿ ಕಾಕ್‌ & ಕೆ.ಎಲ್‌ ರಾಹುಲ್‌
    2022ರ ಐಪಿಎಲ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಕೆ.ಎಲ್ ರಾಹುಲ್ ಅಬ್ಬರದ ಪ್ರದರ್ಶನ ನೀಡಿದ್ದರು. ಕೆಕೆಆರ್ ವಿರುದ್ಧ ರಾಹುಲ್ ಹಾಗೂ ಡಿ ಕಾಕ್ ಜೋಡಿ 210 ರನ್​ಗಳ ಜೊತೆಯಾಟ ದಾಖಲಿಸಿದ್ದರು. ಇದು ಟಿ20 ಲೀಗ್‌ನಲ್ಲಿ 3ನೇ ಅತ್ಯುತ್ತಮ ಜೊತೆಯಾಟವಾಗಿ ದಾಖಲಾಯಿತು.

    ಶುಭಮನ್‌ ಗಿಲ್‌ & ಸಾಯಿ ಸುದರ್ಶನ್‌:
    2024ರ ಐಪಿಎಲ್‌ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌, ಆರಂಭಿಕ ಆಟಗಾರ ಸಾಯಿ ಸುದರ್ಶನ್‌ ಮೊದಲ ವಿಕೆಟ್‌ಗೆ 210 ರನ್‌ಗಳ ಜೊತೆಯಾಟ ನೀಡಿದ್ದರು. ಈ ಪಂದ್ಯದಲ್ಲಿ ಆರಂಭಿಕರಿಬ್ಬರೂ ಶತಕ ಸಿಡಿಸಿ ಮಿಂಚಿದ್ದರು. ಇದು ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ರನ್‌ಗಳ ನಾಲ್ಕನೇ ಜೊತೆಯಾಟವಾಗಿದೆ.

    ಗಿಲ್​ಕ್ರಿಸ್ಟ್​​ & ಶಾನ್​ ಮಾರ್ಷ್​​
    2011ರ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ, ಪಂಜಾಬ್ ನಾಯಕ ಆಡಂ ಗಿಲ್​​ಕ್ರಿಸ್ಟ್​​ 55 ಎಸೆತಗಳಲ್ಲಿ 106 ರನ್ ಗಳಿಸುವ ಮೂಲಕ ಅದ್ಭುತ ಶತಕ ಗಳಿಸಿದ್ದರು. ಶಾನ್ ಮಾರ್ಷ್ ಜೊತೆಗೂಡಿ 2ನೇ ವಿಕೆಟ್ ಗೆ 206 ರನ್ ಪೇರಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿನ 4ನೇ ಅತಿ ದೊಡ್ಡ ಜೊತೆಯಾಟವಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಪಂಜಾಬ್ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು. ಅಂತಿಮವಾಗಿ ಆರ್​ಸಿಬಿ 111 ರನ್ ಗಳ ಸೋಲು ಅನುಭವಿಸಿತ್ತು.

    ದಾಖಲೆ ಜೊತೆಯಾಟ ನೀಡಿದ ಟಾಪ್‌-5 ಜೋಡಿಗಳು:
    * ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ, 229 ರನ್​, ಗುಜರಾತ್​ ಲಯನ್ಸ್​ ವಿರುದ್ಧ (2016)
    * ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ 215 ರನ್​, ಮುಂಬೈ ಇಂಡಿಯನ್ಸ್ ವಿರುದ್ಧ (2015)
    * ಕ್ವಿಂಟನ್ ಡಿ ಕಾಕ್ & ಕೆಎಲ್ ರಾಹುಲ್ – ಮೊದಲ ವಿಕೆಟ್​ಗೆ, 210 ರನ್​, ಕೆಕೆಆರ್ ವಿರುದ್ಧ (2022)
    * ಶುಭಮನ್‌ ಗುಲ್‌ & ಸಾಯಿ ಸುದರ್ಶನ್‌ – ಮೊದಲ ವಿಕೆಟ್‌ಗೆ, 210 ರನ್‌, ಸಿಎಸ್‌ಕೆ ವಿರುದ್ಧ (2024)
    * ಆಡಮ್ ಗಿಲ್ಕ್ರಿಸ್ಟ್ & ಶಾನ್ ಮಾರ್ಷ್ – 2ನೇ ವಿಕೆಟ್‌ಗೆ 206 ರನ್‌, ಆರ್​​ಸಿಬಿ ವಿರುದ್ಧ (2011)

  • ಮತ್ತೆ ಕ್ರಿಕೆಟ್‌ಗೆ ಮರಳ್ತಿದ್ದಾರೆ ಎಬಿ ಡಿವಿಲಿಯರ್ಸ್ – ಯಾವ ತಂಡದ ಕ್ಯಾಪ್ಟನ್ ಆಗ್ತಿದ್ದಾರೆ ಎಬಿಡಿ?

    ಮತ್ತೆ ಕ್ರಿಕೆಟ್‌ಗೆ ಮರಳ್ತಿದ್ದಾರೆ ಎಬಿ ಡಿವಿಲಿಯರ್ಸ್ – ಯಾವ ತಂಡದ ಕ್ಯಾಪ್ಟನ್ ಆಗ್ತಿದ್ದಾರೆ ಎಬಿಡಿ?

    ಮುಂಬೈ: ದಕ್ಷಿಣ ಆಫ್ರಿಕಾದ ಐಕಾನ್ ಎಬಿ ಡಿವಿಲಿಯರ್ಸ್ (AB De Villiers) ಸುಮಾರು ನಾಲ್ಕು ವರ್ಷಗಳ ನಂತರ ಕ್ರೀಡೆಗೆ ಮರಳುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ಕೇಳಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

    ಸಾರ್ವಕಾಲಿಕ ಮತ್ತು ಉತ್ಸಾಹಭರಿತ ಕ್ರಿಕೆಟಿಗರಲ್ಲಿ ಒಬ್ಬರೆಂದು ಕರೆಯಲ್ಪಡುವ ಡಿವಿಲಿಯರ್ಸ್, ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL)ನ 2ನೇ ಆವೃತ್ತಿಯಲ್ಲಿ ಗೇಮ್ ಚೇಂಜರ್ಸ್ ಸೌತ್ ಆಫ್ರಿಕಾ ಚಾಂಪಿಯನ್ಸ್ ಅನ್ನು ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಮುಡಿಗೇರಿಸಿಕೊಂಡ ಬುಮ್ರಾ

    ನಿವೃತ್ತ ಮತ್ತು ಗುತ್ತಿಗೆ ಪಡೆಯದ ಕ್ರಿಕೆಟ್ ದಂತಕಥೆಗಳನ್ನು ಒಳಗೊಂಡ ಈ ಪ್ರಮುಖ ಟಿ20 ಪಂದ್ಯಾವಳಿಯು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಕಿಕ್‌ ನೀಡಲಿದೆ.

    ತಮ್ಮ ತಂಡಕ್ಕೆ ಮರಳುವ ಬಗ್ಗೆ ಡಿವಿಲಿಯರ್ಸ್ ಮಾತನಾಡಿದ್ದಾರೆ. ‘ನಾಲ್ಕು ವರ್ಷಗಳ ಹಿಂದೆ ನಾನು ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದೇನೆ. ಏಕೆಂದರೆ ಇನ್ಮುಂದೆ ಆಡಬೇಕೆಂಬ ಹಂಬಲ ನನಗಿರಲಿಲ್ಲ. ಸಮಯ ಕಳೆದಿದೆ. ನನ್ನ ಚಿಕ್ಕ ಮಕ್ಕಳು ಆಟವನ್ನು ಆಡಲು ಪ್ರಾರಂಭಿಸಿದ್ದಾರೆ. ನಾವು ಉದ್ಯಾನದಲ್ಲಿ ಆಡುತ್ತಿದ್ದೇವೆ. ಒಂದು ರೀತಿಯ ಜ್ವಾಲೆ ಮತ್ತೆ ಬೆಳಗಿದಂತೆ ಭಾಸವಾಗುತ್ತಿದೆ’ ಎಂದು WCL ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

    ನಾನು ಜಿಮ್ ಮತ್ತು ನೆಟ್‌ಗಳಿಗೆ ಹಿಂತಿರುಗುತ್ತಿದ್ದೇನೆ. ಜುಲೈನಲ್ಲಿ WCLಗೆ ಸಿದ್ಧನಾಗುತ್ತೇನೆ ಎಂದು ಡಿವಿಲಿಯರ್ಸ್‌ ತಿಳಿಸಿದ್ದಾರೆ. ಇದನ್ನೂ ಓದಿ: ತಿಲಕ್‌ ವರ್ಮಾ ಜವಾಬ್ದಾರಿಯುತ ಆಟ – ಆಂಗ್ಲರ ವಿರುದ್ಧ ಟೀಂ ಇಂಡಿಯಾಗೆ 2 ವಿಕೆಟ್‌ಗಳ ಜಯ

    ಅಪ್ರತಿಮ ಬಹುಮುಖ ಪ್ರತಿಭೆ ಮತ್ತು ನಿರ್ಭೀತ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಡಿವಿಲಿಯರ್ಸ್ ಅವರ ಪುನರಾಗಮನವು ಕ್ರಿಕೆಟ್ ವಲಯದಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ. ಉದ್ಘಾಟನಾ ಋತುವಿನಲ್ಲಿ ಜಾಕ್ವೆಸ್ ಕಾಲಿಸ್, ಹರ್ಷೆಲ್ ಗಿಬ್ಸ್, ಡೇಲ್ ಸ್ಟೇನ್ ಮತ್ತು ಇಮ್ರಾನ್ ತಾಹಿರ್ ಅವರಂತಹ ದಂತಕಥೆಗಳನ್ನು ಒಳಗೊಂಡಿದ್ದ ಗೇಮ್ ಚೇಂಜರ್ಸ್ ತಂಡವು ಈಗ ಡಿವಿಲಿಯರ್ಸ್ ನಾಯಕತ್ವದಲ್ಲಿ ಇನ್ನಷ್ಟು ಉಜ್ವಲ ಭವಿಷ್ಯವನ್ನು ಹೊಂದಿದೆ.

  • ನನ್ನ ಜೆರ್ಸಿ ನಂ.17, ಇದು 17ನೇ ಆವೃತ್ತಿ – ಈ ಸಲ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎಂದ ಎಬಿಡಿ

    ನನ್ನ ಜೆರ್ಸಿ ನಂ.17, ಇದು 17ನೇ ಆವೃತ್ತಿ – ಈ ಸಲ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎಂದ ಎಬಿಡಿ

    ಚೆನ್ನೈ: ನನ್ನ ಜೆರ್ಸಿ ಸಂಖ್ಯೆ 17 (Jersey No.17), ಇದು 17ನೇ ಆವೃತ್ತಿ. ಖಂಡಿತಾ ಈ ಸಲ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್‌ (AB De Villiers) ಭವಿಷ್ಯ ನುಡಿದರು.

    ಐಪಿಎಲ್‌ (IPL 2024) ಉದ್ಘಾಟನೆ ವೇಳೆ ಪ್ರಿಡಿಕ್ಷನ್‌ ಬಾಕ್ಸ್‌ನಲ್ಲಿ ಮಾತನಾಡಿದ ಎಬಿಡಿ, ಈ ಸಲ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎಂದು ಹೇಳಿದರು. ಇದನ್ನೂ ಓದಿ: ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲು – ಶ್ರವಣದೋಷಿತರಿಗಾಗಿ ಸಂಕೇತ ಭಾಷೆಯಲ್ಲಿ ಕಾಮೆಂಟ್ರಿ!

    ಧೋನಿ ದೊಡ್ಡ ತಪ್ಪು ಮಾಡಿದ್ರು:
    ಮುಂದುವರಿದು ಮಾತನಾಡಿದ ಎಬಿಡಿ, ನಾನು ಪ್ರಾಮಾಣಿಕವಾಗಿ ಹೇಳ್ತೀನಿ, ಎಂ.ಎಸ್‌ ಧೋನಿ (MS Dhoni) ನಾಯಕತ್ವದಿಂದ ಕೆಳಗಿಳಿದು ದೊಡ್ಡ ತಪ್ಪು ಮಾಡಿದ್ದಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: IPL 2024: ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಲಿಸ್ಟ್‌ – ಶಾನ್‌ ಮಾರ್ಷ್‌ನಿಂದ ಗಿಲ್‌ ವರೆಗೆ

    2024ರ ಐಪಿಎಲ್‌ ಟೂರ್ನಿ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಧೋನಿ ನಾಯಕ ಸ್ಥಾನದಿಂದ ಕೆಳಗಿಳಿದು, ಋತುರಾಜ್‌ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿದರು. 2019ರಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿರುವ ಋತುರಾಜ್‌ ಗಾಯಕ್ವಾಡ್ 52‌ ಪಂದ್ಯಗಳು 51 ಇನ್ನಿಂಗ್ಸ್‌ಗಳಲ್ಲಿ 1,797 ರನ್‌ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, 14 ಅರ್ಧಶತಕ, 159 ಬೌಂಡರಿ, 73 ಸಿಕ್ಸರ್‌ಗಳನ್ನ ಒಳಗೊಂಡಿದೆ.

    17ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಅದ್ಧೂರಿ ಚಾಲನೆ ದೊರೆತಿದೆ. ಬಾಲಿವುಡ್‌ ಖ್ಯಾತ ನಟರಾದ ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌, ಹಿನ್ನೆಲೆ ಗಾಯಕ ಸೋನು ನಿಗಂ, ಎ.ಆರ್‌ ರೆಹಮಾನ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: IPL 2024: ಟಾಪ್‌ ಟು ಬಾಟಮ್‌ ದಾಖಲೆ ಇರೋದು ಆರ್‌ಸಿಬಿ ಹೆಸರಲ್ಲೇ – ಇದು ಅಭಿಮಾನಿಗಳಿಗೆ ಹೆಗ್ಗಳಿಕೆ

    ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೆಣಸುತ್ತಿವೆ.

  • IPL 2024: ಅತ್ಯುತ್ತಮ ಜೊತೆಯಾಟದಲ್ಲೂ ಆರ್‌ಸಿಬಿ ಆಟಗಾರರೇ ಟಾಪ್‌!

    IPL 2024: ಅತ್ಯುತ್ತಮ ಜೊತೆಯಾಟದಲ್ಲೂ ಆರ್‌ಸಿಬಿ ಆಟಗಾರರೇ ಟಾಪ್‌!

    ಬೆಂಗಳೂರು: ಯಾವುದೇ ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡುವ ತಂಡವು ಬೃಹತ್‌ ಮೊತ್ತ ಬಾರಿಸಬೇಕಾದ್ರೆ, ಸ್ಫೋಟಕ ಬ್ಯಾಟಿಂಗ್‌ ಮಾಡುವ ಹೊರತಾಗಿ ಉತ್ತಮ ಪಾಲುದಾರಿಕೆಯೂ ಮುಖ್ಯವಾಗುತ್ತದೆ. ಐಪಿಎಲ್‌ ಟೂರ್ನಿಗೂ (IPL 2024) ಇದು ಅನ್ವಯಿಸುತ್ತದೆ.

    ಮೊದಲು ಬ್ಯಾಟಿಂಗ್‌ ಮಾಡುವ ತಂಡದ ಪರ ಬ್ಯಾಟಿಂಗ್‌ ಜೋಡಿಯು ಕ್ರೀಸ್‌ ಮೇಲೆ ಭದ್ರವಾಗಿ ನೆಲೆಯೂರಿದರೆ, ದೊಡ್ಡ ಹೊಡೆತ ನೀಡಲು ಮುಂದಾದ್ರೆ, ಕನಿಷ್ಠ 200 ರನ್‌ಗಳನ್ನು ಕಲೆಹಾಕುವುದು ಖಚಿತ. ಕೆಲವೊಮ್ಮೆ ಅಧಿಕ ರನ್‌ ಗಳಿಸಿದ ತಂಡವು ಬೌಲಿಂಗ್‌ನಲ್ಲಿ ಕೊಂಚ ಎಡವಿದರೂ ರನ್‌ ತಂಡಕ್ಕೆ ಗೆಲುವು ತಂದುಕೊಡಬಹುದು. ಉದಾಹರಣೆಗೆ ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ (CSK vs RCB) ನಡುವಿನ ಪಂದ್ಯ ಸಾಕ್ಷಿಯಾಗಿದೆ. ಅಂದು ಚೆನ್ನೈ 226 ರನ್‌ ಪೇರಿಸಿದ್ದರು, ಕೇವಲ 9 ರನ್‌ಗಳಿಂದ ಗೆಲುವು ಸಾಧಿಸಿತ್ತು. 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಸಮೀಪಿಸುತ್ತಿರುವ ಕಾರಣ ಈ ಹಿಂದಿನ ಅತ್ಯುತ್ತಮ ಜತೆಯಾಟವನ್ನು ಮೆಲುಕು ಹಾಕುಬೇಕಾಗಿದ್ದು, ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಜೊತೆಯಾಟ ನೀಡಿದ ಟಾಪ್‌ ಜೋಡಿಗಳನ್ನು ಇಲ್ಲಿ ಕಾಣಬಹುದು.

    ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
    ಐಪಿಎಲ್‌ ಇತಿಹಾಸದಲ್ಲಿ ಅತ್ಯುತ್ತಮ ಜೊತೆಯಾಟ ನೀಡಿದ ಟಾಪ್‌-5 ಪಟ್ಟಿಯಲ್ಲಿ ಕೊಹ್ಲಿ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ಆರ್‌ಸಿಬಿ ತಂಡ ಮೂವರು ಆಟಗಾರರು ಈ ಪಟ್ಟಿಲ್ಲಿರುವುದು ವಿಶೇಷ. 2016ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್ (AB de Villiers) ಅವರೊಂದಿಗೆ 2ನೇ ವಿಕೆಟ್​ಗೆ ವಿರಾಟ್​ ಕೊಹ್ಲಿ (Virat Kohli) 229 ರನ್​​ಗಳನ್ನು ಸೇರಿಸಿದ್ದರು. ಈ ಪಂದ್ಯದಲ್ಲಿ ಇಬ್ಬರೂ ಶತಕಗಳನ್ನು ಸಿಡಿಸಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟರ್ ಮಿಸ್ಟರ್‌-360, ಕೇವಲ 52 ಎಸೆತಗಳಲ್ಲಿ 12 ಸಿಕ್ಸರ್​ಗಳು ಮತ್ತು 10 ಬೌಂಡರಿಗಳ ಸಹಾಯದಿಂದ 129 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 109 ರನ್ ಗಳಿಸುವುದರೊಂದಿಗೆ ಆರ್​ಸಿಬಿ 3 ವಿಕೆಟ್ ನಷ್ಟಕ್ಕೆ 248 ರನ್ ಪೇರಿಸಿತ್ತು. ಪಂದ್ಯದಲ್ಲಿ ಆರ್​​ಸಿಬಿ ಗೆದ್ದಿತ್ತು.

    AB de Villiers

    ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
    2015ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2ನೇ ವಿಕೆಟ್​ಗೆ ಕೊಹ್ಲಿ ಮತ್ತು ವಿಲಿಯರ್ಸ್ 215 ರನ್​ಗಳ ಜೊತೆಯಾಟವಾಡಿದ್ದರು. ಆ ಪಂದ್ಯದಲ್ಲಿ ಎಬಿಡಿ ಕೇವಲ 59 ಎಸೆತಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 133 ರನ್ ಚಚ್ಚಿದ್ದರು. ವಿರಾಟ್ 50 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಮೊದಲ ಇನ್ನಿಂಗ್ಸ್​​ನಲ್ಲಿ 235/1 ಸ್ಕೋರ್ ಮಾಡಿದ್ದ ಆರ್​ಸಿಬಿ ಈ ಪಂದ್ಯವನ್ನು 39 ರನ್​ಗಳಿಂದ ಗೆದ್ದುಕೊಂಡಿತ್ತು.

    ಕ್ವಿಂಟನ್‌ ಡಿ ಕಾಕ್‌ & ಕೆ.ಎಲ್‌ ರಾಹುಲ್‌
    2022ರ ಐಪಿಎಲ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಕೆ.ಎಲ್ ರಾಹುಲ್ ಅಬ್ಬರದ ಪ್ರದರ್ಶನ ನೀಡಿದ್ದರು. ಕೆಕೆಆರ್ ವಿರುದ್ಧ ರಾಹುಲ್ ಹಾಗೂ ಡಿ ಕಾಕ್ ಜೋಡಿ 210 ರನ್​ಗಳ ಜೊತೆಯಾಟ ದಾಖಲಿಸಿದ್ದರು. ಇದು ಟಿ20 ಲೀಗ್‌ನಲ್ಲಿ 3ನೇ ಅತ್ಯುತ್ತಮ ಜೊತೆಯಾಟವಾಗಿ ದಾಖಲಾಯಿತು.

    ಗಿಲ್​ಕ್ರಿಸ್ಟ್​​ & ಶಾನ್​ ಮಾರ್ಷ್​​
    2011ರ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ, ಪಂಜಾಬ್ ನಾಯಕ ಆಡಮ್ ಗಿಲ್​​ಕ್ರಿಸ್ಟ್​​ 55 ಎಸೆತಗಳಲ್ಲಿ 106 ರನ್ ಗಳಿಸುವ ಮೂಲಕ ಅದ್ಭುತ ಶತಕ ಗಳಿಸಿದ್ದರು. ಶಾನ್ ಮಾರ್ಷ್ ಜೊತೆಗೂಡಿ 2ನೇ ವಿಕೆಟ್ ಗೆ 206 ರನ್ ಪೇರಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿನ 4ನೇ ಅತಿ ದೊಡ್ಡ ಜೊತೆಯಾಟವಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಪಂಜಾಬ್ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು. ಅಂತಿಮವಾಗಿ ಆರ್​ಸಿಬಿ 111 ರನ್ ಗಳ ಸೋಲು ಅನುಭವಿಸಿತ್ತು.

    ಗೇಲ್ & ವಿರಾಟ್​
    ಐಪಿಎಲ್ 2012ರ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ವಿರಾಟ್ ಮತ್ತು ಕ್ರಿಸ್ ಗೇಲ್ 2ನೇ ವಿಕೆಟ್​​ಗೆ 204 ರನ್​​ಗಳ ಜೊತೆಯಾಟ ಪೇರಿಸಿದ್ದರು. ಗೇಲ್ 62 ಎಸೆತಗಳಲ್ಲಿ 128 ರನ್ ಗಳಿಸಿದ್ದರೆ ವಿರಾಟ್ 53 ಎಸೆತಗಳಲ್ಲಿ 73 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ 21 ರನ್​ಗಳ ಭರ್ಜರಿ ಜಯ ಸಾಧಿಸಿತ್ತು.

    ದಾಖಲೆ ಜೊತೆಯಾಟ ನೀಡಿದ ಟಾಪ್‌-5 ಜೋಡಿಗಳು:
    * ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ, 229 ರನ್​, ಗುಜರಾತ್​ ಲಯನ್ಸ್​ ವಿರುದ್ಧ (2016)
    * ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ 215 ರನ್​, ಮುಂಬೈ ಇಂಡಿಯನ್ಸ್ ವಿರುದ್ಧ (2015)
    * ಕ್ವಿಂಟನ್ ಡಿ ಕಾಕ್ & ಕೆಎಲ್ ರಾಹುಲ್ – ಮೊದಲ ವಿಕೆಟ್​ಗೆ, 210 ರನ್​, ಕೆಕೆಆರ್ ವಿರುದ್ಧ (2022)
    * ಆಡಮ್ ಗಿಲ್ಕ್ರಿಸ್ಟ್ & ಶಾನ್ ಮಾರ್ಷ್ – 2ನೇ ವಿಕೆಟ್‌ಗೆ 206 ರನ್‌, ಆರ್​​ಸಿಬಿ ವಿರುದ್ಧ (2011)
    * ವಿರಾಟ್ ಕೊಹ್ಲಿ & ಕ್ರಿಸ್ ಗೇಲ್, 2ನೇ ವಿಕೆಟ್‌ಗೆ 204 ರನ್​, ಡೆಲ್ಲಿ ವಿರುದ್ಧ ವಿರುದ್ಧ, (2012)