Tag: Aatmanirbhar Bharat

  • ಪ್ರಧಾನಿ ಮೋದಿ ಆತ್ಮನಿರ್ಭರ ಕನಸು ನನಸು – ಉಡುಪಿಯಿಂದ ನಾರ್ವೆಗೆ ಮೇಕ್ ಇನ್ ಇಂಡಿಯಾ ಹಡಗು

    ಪ್ರಧಾನಿ ಮೋದಿ ಆತ್ಮನಿರ್ಭರ ಕನಸು ನನಸು – ಉಡುಪಿಯಿಂದ ನಾರ್ವೆಗೆ ಮೇಕ್ ಇನ್ ಇಂಡಿಯಾ ಹಡಗು

    – ಭಾರತದ ಹಡಗು ನಿರ್ಮಾಣ ಸಂಸ್ಥೆಯ ಮೈಲಿಗಲ್ಲು

    ಉಡುಪಿ: ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ಉಡುಪಿ (Udupi) ಕೊಚ್ಚಿನ್ ಶಿಪ್ ಯಾರ್ಡ್ (Cochin Shipyard) ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ನಾರ್ವೆ (Norway) ದೇಶಕ್ಕೆ 3,800 ಟಿಡಬ್ಲ್ಯೂಡಿ ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡಿದೆ.

    ನಾರ್ವೆ ಭಾರತದ ಜೊತೆ ಸುಮಾರು 2,000 ಕೋಟಿ ರೂ. ಎಂಒಯು ಮಾಡಿಕೊಂಡಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗಳು ಯಶಸ್ವಿ ಆಗಿರುವುದಕ್ಕೆ ಇದು ಸಾಕ್ಷಿ. ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆ ವಿಲ್ಸನ್ ಕಂಪನಿ ಸಿಬ್ಬಂದಿ ಖರೀದಿ ಪ್ರಕ್ರಿಯೆ ಪೂರೈಸಿದರು. ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಜೊತೆ ಭಾರತೀಯ ಸಂಸ್ಕೃತಿಯ ಪ್ರಕಾರ ಪೂಜೆ ನೆರವೇರಿಸಲಾಯಿತು. ಹಡಗಿಗೆ (Ship) ಕಾಯಿ ಒಡೆದು, ಆರತಿ ಎತ್ತಿ ಪೂಜೆ ಮಾಡಲಾಯಿತು. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಮುಚಖಂಡಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

    ಆತ್ಮನಿರ್ಭರ (Aatmanirbhar Bharat) ಮತ್ತು ಮೇಕ್ ಇನ್ ಇಂಡಿಯಾ (Make In India) ಕಾನ್ಸೆಪ್ಟ್‌ನಲ್ಲಿ ಈ ಬೃಹತ್ ಶಿಪ್ ತಯಾರಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಭಾಗದ 1,000ಕ್ಕೂ ಹೆಚ್ಚು ಜನ ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಕಾರ್ಗೋ ಹಡಗುಗಳ ನಿರ್ಮಾಣದಲ್ಲಿ ಭಾರತ ವಿಶ್ವದಲ್ಲೇ ಸದ್ಯ 17ನೇ ಸ್ಥಾನದಲ್ಲಿದೆ. 2030ರ ವೇಳೆಗೆ ಟಾಪ್ ಟೆನ್ ಆಗುವ ಗುರಿಯನ್ನು ಹೊಂದಿದೆ. 2047ರ ವೇಳೆಗೆ ಟಾಪ್ 5ರ ಗುರಿಮುಟ್ಟುವ ಟಾರ್ಗೆಟ್ ಅನ್ನು ಭಾರತ ಸರ್ಕಾರ ನೀಡಿದೆ. ಇದನ್ನೂ ಓದಿ: Video | ಹೊಸ ವರ್ಷಕ್ಕೆ ದರ ಏರಿಕೆ ಶಾಕ್‌ – ಆಟೋ ದರ ಪ್ರತಿ ಕಿಮೀಗೆ 5 ರೂ. ಏರಿಕೆ ಸಾಧ್ಯತೆ!

  • ಸೆ.2ರಂದು ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ ನೌಕಾಪಡೆಗೆ ಅಧಿಕೃತ ಸೇರ್ಪಡೆ

    ಸೆ.2ರಂದು ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ ನೌಕಾಪಡೆಗೆ ಅಧಿಕೃತ ಸೇರ್ಪಡೆ

    ನವಹದೆಲಿ: ದೇಶವು ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ‘ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ವಿಮಾನವಾಹಕ ಯುದ್ಧನೌಕೆ ‘ವಿಕ್ರಾಂತ್‌’ ಅನ್ನು ಸೆಪ್ಟೆಂಬರ್‌ 2ರಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಿದ್ದಾರೆ.

    ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್‌ಎಲ್) 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾದ ಯುದ್ಧ ನೌಕೆ ವಿಕ್ರಾಂತ್‌ ಅನ್ನು ಈಗಾಗಲೇ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದ್ದು, ಅಂದು ಪ್ರಧಾನಿ ಅಧೀಕೃತವಾಗಿ ಸೇರ್ಪಡೆಗೊಳಿಸಲಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸ್ಥಾನವನ್ನು ಗಮನಾರ್ಹವಾಗಿ ಬಲಪಡಿಸುವ ನಿಟ್ಟಿನಲ್ಲಿ ಈ ನೌಕೆ ಕಾರ್ಯ ನಿರ್ವಹಿಸಲಿದೆ. ವಿಕ್ರಾಂತ್‌ ಕಳೆದ ಜುಲೈನಲ್ಲಿ ತನ್ನ ಅಂತಿಮ ಹಂತದ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

    ವಿಕ್ರಾಂತ್ ನಿರ್ಮಾಣವನ್ನು 2009ರ ಫೆಬ್ರವರಿ 28ರಿಂದ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಪ್ರಾರಂಭಿಸಲಾಯಿತು. 2020ರ ಡಿಸೆಂಬರ್ ನಲ್ಲಿ ಸಿಎಸ್ಎಲ್ ನಡೆಸಿದ ಜಲಾನಯನ ಪ್ರಯೋಗಗಳಲ್ಲಿ ವಿಮಾನವಾಹಕ ನೌಕೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. 40 ಸಾವಿರ ಟನ್ ತೂಕದ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ವಿಕ್ರಾಂತ್ ಎಲ್ಲಾ 4 ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲ ಪರೀಕ್ಷೆಯು ಕಳೆದ ವರ್ಷ ಆಗಸ್ಟ್ 21ರಂದು ಪೂರ್ಣಗೊಂಡಿತು. 2ನೇಯದು ಅಕ್ಟೋಬರ್ 21ರಂದು ಮತ್ತು 3ನೇ ಪರೀಕ್ಷೆಯು ಈ ವರ್ಷ ಜನವರಿ 22 ರಂದು ಪೂರ್ಣಗೊಂಡಿತು. ವಿಕ್ರಾಂತ್ ಕೊನೆಯ ಮತ್ತು 4ನೇ ಸಮುದ್ರ ಪ್ರಯೋಗಗಳು ಮೇ ತಿಂಗಳಲ್ಲಿ ಪ್ರಾರಂಭವಾಗಿದ್ದು ಇದು ಈ ತಿಂಗಳ ಆರಂಭದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.

    ಇದು MiG-29K ಫೈಟರ್ ಜೆಟ್‌ಗಳು, Kamov-31, MH-60R ಬಹು-ಪಾತ್ರ ಹೆಲಿಕಾಪ್ಟರ್‌ಗಳ ಜೊತೆಗೆ ಸ್ಥಳೀಯವಾಗಿ ನಿರ್ಮಿಸಲಾದ ಲಘು ಹೆಲಿಕಾಪ್ಟರ್‌ಗಳು (ALH) ಮತ್ತು ಲಘು ಯುದ್ಧ ವಿಮಾನ (LCA) ಸೇರಿದಂತೆ ಸುಮಾರು 30 ವಿಮಾನಗಳನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದು Kamov Ka-31 ಏರ್‌ಬೋರ್ನ್ ಅರ್ಲಿ ವಾರ್ನಿಂಗ್ ಅನ್ನು ಅಳವಡಿಸಲಾಗಿದೆ. ವಿಕ್ರಾಂತ್‌ ಅನ್ನು ಸೇನೆಗೆ ಸೇರಿಸುವ ಮೂಲಕ ಭಾರತವು ಸ್ಥಳೀಯವಾಗಿ ವಿಮಾನನೌಕೆ ವಿನ್ಯಾಸಗೊಳಿಸುವ ಮತ್ತು ಸ್ಥಾಪಿಸುವ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರಿದೆ.

    ವಿಕ್ರಾಂತ್‌ ವಿಶೇಷತೆ ಏನು?

    • ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಓಆರ್) ಭಾರತದ ಸ್ಥಾನವನ್ನು ಮತ್ತು ನೀಲಿಜಲ ನೌಕಾಪಡೆಯ ಅನ್ವೇಷಣೆಯನ್ನು ಹೆಚ್ಚಿಸಲು‌ ಕಾರ್ಯನಿರ್ವಹಿಸುತ್ತದೆ.
    • 2,300 ವಿಭಾಗಗಳನ್ನು ಹೊಂದಿದ್ದು, ಮಹಿಳಾ ಅಧಿಕಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳನ್ನು ಒಳಗೊಂಡಂತೆ 1,700 ಸಿಬ್ಬಂದಿಗಾಗಿ ವಿನ್ಯಾಸ ಮಾಡಲಾಗಿದೆ.
    • ನೌಕೆಯು 262 ಮೀಟರ್‌ ಉದ್ದ, 62 ಮೀಟರ್‌ ಅಗಲ ಮತ್ತು 59 ಮೀಟರ್ ಎತ್ತರವಿದೆ. ಇದರ ನಿರ್ಮಾಣಕಾರ್ಯ 2009ರಲ್ಲಿ ಆರಂಭಗೊಂಡಿತ್ತು.
    • 8 ಪವರ್‌ ಜನರೇಟರ್‌ಗಳನ್ನು ಒಳಗೊಂಡಿದ್ದು, ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಆಸ್ಪತ್ರೆಯನ್ನೂ ಇದೇ ಸಂಕಿರ್ಣದಲ್ಲಿ ನಿರ್ಮಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಉಡುಪಿಯ ಹೆಜಮಾಡಿ ನಡಿಕುದ್ರುವಿನಲ್ಲಿ ‘ಸೀ ಪ್ಲೇನ್’ ಅನ್ವೇಷಣೆ

    ಉಡುಪಿಯ ಹೆಜಮಾಡಿ ನಡಿಕುದ್ರುವಿನಲ್ಲಿ ‘ಸೀ ಪ್ಲೇನ್’ ಅನ್ವೇಷಣೆ

    – ಏನು ಸೀ ಪ್ಲೇನ್ ವಿಶೇಷತೆ?

    ಉಡುಪಿ: ನಮ್ಮಲ್ಲಿ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರದ ಚರ್ಚೆ ಜೊರಾಗಿ ನಡೆಯುತ್ತಿದೆ. ಇದೇ ಕಲ್ಪನೆಯಲ್ಲಿ ಉಡುಪಿಯ ಯುವಕರು ಸೀ ಪ್ಲೇನ್ ಸಿದ್ಧ ಮಾಡಿದ್ದಾರೆ. ಒಬ್ಬ ವ್ಯಕ್ತಿ ಕುಳಿತು ನೀರಲ್ಲಿ ತೇಲುವ ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀ ಪ್ಲೇನ್ ನ ಯಶಸ್ವಿ ಹಾರಾಟ ಕೂಡಾ ನಡೆದಿದ್ದು, ರಾಜ್ಯ, ಕೇಂದ್ರ ಸರ್ಕಾರದ ಸಹಾಯಕ್ಕೆ ಉತ್ಸಾಹಿ ಎಂಟು ಯುವಕರು ಕಾಯುತ್ತಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಭಾರತದ ಮೊದಲ ಸೀ ಪ್ಲೈನ್ ಉದ್ಘಾಟಿಸಿದ್ದರು. ವಿದೇಶದಿಂದ ಖರೀದಿಸಿದ ವಿಮಾನ ನರ್ಮದಾ ನದಿಯಲ್ಲಿ ಯಶಸ್ವಿಯಾಗಿ ಹಾರಾಟ ಮಾಡಿತ್ತು. ಉಡುಪಿಯ ಹೆಜಮಾಡಿ ಶಾಂಭವಿ ನದಿಯಲ್ಲೂ ಮೈಕ್ರೋಲೈಟ್ ಸೀ ಪ್ಲೈನ್ ಯಶಸ್ವಿಯಾಗಿ ಹಾರಾಟ ನಡೆಸಿದೆ.

    ವಿಮಾನ ತಯಾರಿಸುವ ಕನಸು:
    ಹೆಜಮಾಡಿ ನಡಿಕುದ್ರು ನಿವಾಸಿ ಪುಷ್ಪರಾಜ್ ಅಮೀನ್ ಈ ಅನ್ವೇಷಣೆಯ ಮಾಸ್ಟರ್ ಮೈಂಡ್. ಏರ್ ಮಾಡೆಲಿಂಗ್, ಎನ್ ಸಿಸಿ ಇನ್ ಸ್ಟ್ರಕ್ಟರ್ ಆಗಿರುವ ಪುಷ್ಪರಾಜ್ 15 ವರ್ಷಗಳ ಕಾಲ ಪರಿಶ್ರಮ ಪಟ್ಟು ಮೈಕ್ರೋಲೈಟ್ ಸೀ ಪ್ಲೇನ್ ಸಿದ್ಧಪಡಿಸಿದ್ದಾರೆ. ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನೊಳಗೊಂಡ ”ಧೃತಿ” ಅನ್ನೋ ಸಂಸ್ಥೆ ಹೆಸರಿನಡಿಯಲ್ಲಿ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುವ ವಿಮಾನ ರೆಡಿ ಮಾಡಿದ್ದಾರೆ. ಸದ್ಯ ಪೈಲೆಟ್ ಮಾತ್ರ ಕುಳಿತು ಹಾರುವ ವಿಮಾನ ರೆಡಿಯಾಗಿದ್ದು, ಏರೋನಾಟಿಕಲ್ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ ಕ್ಲಾಸ್ ಕೊಡುವ ಜೊತೆ ಜೊತೆಗೆ ಮುಂದೆ ಏಳು ಜನ ಹಾರುವ ತಾಕತ್ತಿನ ವಿಮಾನ ತಯಾರು ಮಾಡುವ ಕನಸು ಇಟ್ಟುಕೊಂಡಿದ್ದಾರೆ.

    ರಿಮೋಟ್ ಕಂಟ್ರೋಲ್ ವಿಮಾನ, ಏರೋನಾಟಿಕಲ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಮಾಡಿಕೊಡುವ ಪುಷ್ಪರಾಜ್ 190 ಕೆಜಿ ಭಾರ ಹೊತ್ತೊಯ್ಯುವ ವಿಮಾನ ತಯಾರಿಸಿದ್ದಾರೆ. ಏರ್ ಕ್ರಾಫ್ಟ್ ಗ್ರೇಡ್ ಅಲುಮೀನಿಯಂ, ಸ್ಟೀಲ್ ನಿಂತ ಗಟ್ಟಿಯಾಗಿರುವ ಸ್ಪೆಷಲ್ ನೈಲಾನ್ ಬ್ರೈಡೆಡ್ ರೋಪ್, ನೈಲಾನ್ ಫ್ಯಾಬ್ರಿಕ್ ಕ್ಲೋತ್, 33 ಎಚ್ ಪಿ ಪವರ್ ಇರುವ 200 ಸಿಸಿ ಸಿಮೊನಿನಿ ಇಟಾಲಿಯನ್ ಎಂಜಿನ್, 53 ಇಂಚ್‍ನ ಮರದ ಪ್ರೊಫೆಲ್ಲರ್, ಬಳಸಿ ವಿಮಾನ ತಯಾರಿಸಿದ್ದಾರೆ. ಸ್ಪೀಡ್ ಪೆಟ್ರೋಲ್ ಬಳಸಿ ನದಿಯಲ್ಲಿ ಈ ವಿಮಾನ ವೇಗವಾಗಿ ಓಡಿ ಆಗಸದಲ್ಲಿ ಹಾರುತ್ತದೆ.

    ಈ ವಿಮಾನಕ್ಕೆ ಸುಮಾರು ಏಳು ಲಕ್ಷ ರುಪಾಯಿ ಖರ್ಚಾಗಿದೆ. ಮನೆಯ ತೋಟದಲ್ಲೇ ವಿದ್ಯಾರ್ಥಿಗಳ ಜೊತೆಗೂಡಿ ಮೈಕ್ರೋ ಲೈಟ್ ಸೀ ಪ್ಲೈನ್ ರೆಡಿಯಾಗಿದೆ. ಗೆಳೆಯರ ಸಂಬಂಧಿಕರೆ ಸಹಾಯಧನ ನೀಡಿ ಈ ವೆಚ್ಚ ಭರಿಸಿದ್ದಾರೆ. ಈ ನಡುವೆ ಈ ಟೀಂ ನಮ್ಮನ್ನಾಳುವ ಸರ್ಕಾರಗಳಿಗೊಂದು ಮನವಿ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಡಿಕುದ್ರುವಿನಲ್ಲಿ ಒಂದು ವರ್ಕ್ ಶಾಪ್ ವ್ಯವಸ್ಥೆ ಮಾಡಿಕೊಡಬೇಕು. ಸರ್ಕಾರ ಈ ಶೋಧನೆಗೆ, ಯುವಕರ ತಂಡದ ಸಾಧನೆಗೆ ಬೆನ್ನೆಲುವಾಗಿ ನಿಲ್ಲಬೇಕು. ಅನ್ವೇಷಣೆಗೆ ಬೇಕಾದ ಕೆಲ ಟೂಲ್ಸ್ ಗಳಿಗೆ ಸಹಾಯಧನ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

    ಪ್ರವಾಸೋದ್ಯಮ, ನೆರೆ ಸಂದರ್ಭ ಸಾರ್ವಜನಿಕ ರಕ್ಷಣೆ, ದೇಶದ ರಕ್ಷಣೆಗೆ ಸೀ ಪ್ಲೈನ್ ಬಳಕೆಯಾಗಲಿದೆ. ಇಷ್ಟೆಲ್ಲಾ ಮಾಡಬೇಕಾದರೆ ಸರಕಾರ ಆರ್ಥಿಕ ಶಕ್ತಿ ನೀಡಿದರೆ ಆತ್ಮ ನಿರ್ಭರದ ಕನಸಿಗೆ ಒಂದು ಅರ್ಥ ಬರುತ್ತದೆ. ಇಂಡಿಯಾದಲ್ಲೇ ನೀರಿಂದ ನೀರಿಗೆ ಹಾರುವ ವಿಮಾನ ಯಶಸ್ವಿಯಾಗಿ ಸಿದ್ಧವಾಗುತ್ತದೆ.

  • ದೇಶದ ರೈತರಿಗೆ ವರದಾನವಾಗಲಿರುವ ಸಿಎನ್‍ಜಿ ಟ್ರಾಕ್ಟರ್ – ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ

    ದೇಶದ ರೈತರಿಗೆ ವರದಾನವಾಗಲಿರುವ ಸಿಎನ್‍ಜಿ ಟ್ರಾಕ್ಟರ್ – ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ

    – ಸಚಿವ ನಿರಾಣಿ ಸಂಸ್ಥೆಯಿಂದ ಕರ್ನಾಟಕದಲ್ಲಿ ಸಿಎನ್‍ಜಿ ಟ್ರಾಕ್ಟರುಗಳ ಉತ್ಪಾದನೆ
    – ಇದು ಸಂಪೂರ್ಣ ಮಾಲಿನ್ಯ ಮುಕ್ತ ಹಾಗೂ ಪರಿಸರ ಸ್ನೇಹಿ

    ನವದೆಹಲಿ: ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಡೀಸೆಲ್ ಟ್ರಾಕ್ಟರ್ ಅನ್ನು ಎಂಅರ್ ಎನ್ ಸಮೂಹ ಸಂಸ್ಥೆಯು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ವಾಹನವಾಗಿ ಪರಿವರ್ತಿಸುವತ್ತ ದೃಡ ಹೆಜ್ಜೆ ಇಟ್ಟಿದೆ.

    ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಭಾರತದ ಮೊದಲ “ಸಿಎನ್‍ಜಿ ಟ್ರ್ಯಾಕ್ಟರ್” ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಎಂಅರ್ ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕರ ನಿದೇರ್ಶಕರಾದ ವಿಜಯ್ ನಿರಾಣಿ ಅವರು ಲೋಕರ್ಪಾಣೆ ಮಾಡಿದರು.

    ಈಗಾಗಲೇ ಸಕ್ಕರೆ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದರ ಜೊತೆಗೆ ಇತರೆ ಕೃಷಿ ಆಧಾರಿತ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಸಚಿವ ಮುರುಗೇಶ್ ನಿರಾಣಿ ನೇತೃತ್ವದ ಎಂಆರ್ ಎನ್ ಸಮುಹಾ ಸಂಸ್ಥೆಯೂ ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರುಗಳಾಗಿ ಪರಿವರ್ತಿಸಲು ರಾಮ್ಯಾಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

    ಎಂಆರ್ ಎನ್ ಸಮೂಹದ ಭಾಗವಾಗಿರುವ ಲೀಫಿನಿಟಿ ಬಯೋ ಎನರ್ಜಿ ಪ್ರೈವೇಟ್ ಲಿಮಿಟೆಡ್ ಮೊದಲ ಹಂತದಲ್ಲಿ 500 ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಎಂಜಿನ್ ಟ್ರಾಕ್ಟರುಗಳಾಗಿ ಪರಿವರ್ತಿಸುವ ಯೋಜನೆಯನ್ನು ಹಾಕಿಕೊಂಡಿದೆ. 2023 ರ ವೇಳೆಗೆ 1,500 ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರುಗಳಾಗಿ ಪರಿವರ್ತಿಸುವ ಗುರಿಯನ್ನು ಇಟ್ಟುಕೊಂಡಿದೆ. ಸಿಎನ್‍ಜಿ ಟ್ರ್ಯಾಕ್ಟರ್ ನ ಎಂಜಿನ್ 10 ರಿಂದ 15 ವರ್ಷಗಳಷ್ಟು ಬಾಳಿಕೆ ಬರಲಿದೆ. ಎಂಆರ್ ಎನ್ ಸಮೂಹವು ಶೀಘ್ರದಲ್ಲೇ ಸಿಎನ್‍ಜಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಇದರಲ್ಲಿ ಎಂಜಿನ್ ಪರಿವರ್ತನೆ ಮತ್ತು ಸಿಎನ್‍ಜಿ ಅನಿಲ ಕೇಂದ್ರವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಶೀಘ್ರದಲ್ಲೇ ಸ್ಥಾಪಿಸಲು ತೀರ್ಮಾನಿಸಿದೆ.

    ‘ಆತ್ಮನಿರ್ಭರ ಭಾರತ್’ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿಯಂತೆ ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬಿಗಳನ್ನಾಗಿ ಮಾಡುವ ಕನಸನ್ನು ಸಾಕಾರಗೊಳಿಸುವ ಮಹತ್ವದ ಹೆಜ್ಜೆಯಾಗಿ ದೇಶದಲ್ಲಿ ಮೊದಲ ಸಿಎನ್‍ಜಿ ಟ್ರಾಕ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ ಅನಿಲ (ಸಿಎನ್‍ಜಿ) ಟ್ರಾಕ್ಟರ್ ಆಗಿ ಪರಿವರ್ತಿಸಲಾಗಿದೆ. ಇದು ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಬಹಳ ಸಹಾಯ ಮಾಡಲಿದ್ದು, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆಯ ಗುರಿಯನ್ನು ಸಾಧಿಸಲು ಪ್ರಮುಖ ಪಾತ್ರ ವಹಿಸಲಿದೆ.

    ರಾಮ್ಯಾಟ್ ಟೆಕ್ನೋ ಸೊಲ್ಯೂಷನ್ಸ್ ಮತ್ತು ತೋಮಸೆಟ್ಟೊ ಅಚಿಲ್ಲೆ ಇಂಡಿಯಾ ಜಂಟಿಯಾಗಿ ಮಾಡಿದ ಈ ಪರಿವರ್ತನೆಯು ರೈತರು ತಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆಯೇ ವೆಚ್ಚವನ್ನು ಕಡಿಮೆ ಮಾಡಿ ಗ್ರಾಮೀಣ ಭಾರತದಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

    ರೈತರಿಗೆ ಹೆಚ್ಚಿನ ಅನುಕೂಲ:
    ಇದರಿಂದ ರೈತನಿಗೆ ಪ್ರಮುಖ ಲಾಭವೆಂದರೆ ಇಂಧನ ವೆಚ್ಚದಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂ.ಗಿಂತ ಹೆಚ್ಚಿನ ಹಣ ಉಳಿತಾಯ ಅಗಲಿದೆ. ಈ ತಂತ್ರಜ್ಞಾನದ ಮೂಲಕ ರೈತರು ತಮ್ಮ ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರುಗಳಾಗಿ ಪರಿವರ್ತಿಸಿ ಆ ಮೂಲಕ ಇಂಧನ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ದಕ್ಷತೆಯನ್ನು ಹೆಚ್ಚಿಸಲು ಇದು ಅನುಕೂಲವಾಗಲಿದೆ. ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರ್ ಆಗಿ ಪರಿವರ್ತಿಸುವುದರಿಂದ ಮಾಲಿನ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    ಡೀಸೆಲ್ ಚಾಲನೆಯಲ್ಲಿರುವ ಎಂಜಿನ್‍ಗೆ ಹೋಲಿಸಿದರೆ ಈ ವಾಹನ ಹೆಚ್ಚಿನ ಶಕ್ತಿ ಉತ್ಪಾದಿಸುತ್ತದೆ. ಡೀಸೆಲ್‍ಗೆ ಹೋಲಿಸಿದರೆ ಒಟ್ಟಾರೆ ಹೊರಸೂಸುವಿಕೆಯು ಶೇಕಡಾ 70 ರಷ್ಟು ಕಡಿಮೆಯಾಗುತ್ತದೆ. ಮೂರನೆಯದಾಗಿ, ಪ್ರಸ್ತುತ ಡೀಸೆಲ್ ಬೆಲೆ ಲೀಟರ್‍ಗೆ 77.43 ರೂ ಆಗಿದ್ದು, ಸಿಎನ್‍ಜಿ ಕೇವಲ ಕೆಜಿಗೆ 42 ರೂ. ಇದೆ. ಇದರಿಂದ ದರ ವೆಚ್ಚದಲ್ಲಿ ಶೇಕಡಾ 50 ರಷ್ಟು ಉಳಿತಾಯ ಮಾಡಲು ಇದು ರೈತರಿಗೆ ಸಹಾಯಕವಾಗಿದೆ.

    ಸಿಎನ್‍ಜಿ ಶುದ್ಧ ಇಂಧನವಾಗಿದ್ದು, ಇಂಗಾಲ ಮತ್ತು ಇತರ ಮಾಲಿನ್ಯಕಾರಕಗಳ ಕಡಿಮೆ ಅಂಶವನ್ನು ಹೊಂದಿದೆ. ಇದು ಶೂನ್ಯ ಸೀಸವನ್ನು ಹೊಂದಿರುವುದರಿಂದ ನಾಶಕಾರಿಯಲ್ಲ. ಹೀಗಾಗಿ ಎಂಜಿನ್‍ನ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆ ಕಡಿಮೆ ನಿರ್ವಹಣೆ ಇರುತ್ತದೆ. ಸಿಎನ್‍ಜಿ ಟ್ರಾಕ್ಟರುಗಳ ಎಂಜಿನ್ ಸಾಮಾರ್ಥ್ಯವು ಹೆಚ್ಚಾಗಿದ್ದು, ಮಾಲಿನ್ಯ ರಹಿತವಾಗಿದೆ. ಡೀಸೆಲ್ ಟ್ರಾಕ್ಟರುಗಳಿಗಿಂತ ಸಾಮರ್ಥ್ಯ ಹೊಂದಿರುವುದು ಮತ್ತೊಂದು ವಿಶೇಷವಾಗಿರುವುದರಿಂದ ಇದು ರೈತರಿಗೆ ಎಲ್ಲಾ ರೀತಿಯಲ್ಲೂ ಹೆಚ್ಚಿನ ಲಾಭ ಉಂಟು ಮಾಡಲಿದೆ.

    1 ಟ್ರಿಲಿಯನ್ ಉಳಿತಾಯ: ಡೀಸೆಲ್ ಟ್ರಾಕ್ಟರ್ ಅನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ಟ್ರಾಕ್ಟರ್ ಆಗಿ ಪರಿವರ್ತಿಸಲಾಗಿದೆ. ಇದು 1 ಟ್ರಿಲಿಯನ್ (1 ಲಕ್ಷ ಕೋಟಿ) ಯಷ್ಟು ಇಂಧನವನ್ನು ಉಳಿಸಲಿದೆ. ಆ ಮೂಲಕ ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

    ಈ ತಂತ್ರಜ್ಞಾನದ ಮೂಲಕ ರೈತರು ತಮ್ಮ ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರುಗಳಾಗಿ ಪರಿವರ್ತಿಸಿ ಆ ಮೂಲಕ ಇಂಧನ ವೆಚ್ಚವನ್ನು ಕಡಿಮೆ ಮಾಡುಬಹುದು ಎಂದು ಹೇಳಿದರು. ಜೊತೆಗೆ ಇದರ ದಕ್ಷತೆಯನ್ನು ಹೆಚ್ಚಿಸಬಹುದು. ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರ್ ಆಗಿ ಪರಿವರ್ತಿಸುವುದರಿಂದ ಮಾಲಿನ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಪ್ರತಿ ಲೀಟರ್ ಡೀಸೆಲ್‍ಗೆ 77 ರೂ.ಗಿಂತ ಹೆಚ್ಚು ಖರ್ಚು ಮಾಡುವ ರೈತರು ಪ್ರತಿ ಲೀಟರ್ ಸಿಎನ್‍ಜಿಗೆ 42 ರೂ.ಗಿಂತ ಕಡಿಮೆ ಖರ್ಚು ಮಾಡಬಹುದು. ಇದರಿಂದಾಗಿ ಗಮನಾರ್ಹ ಗಣನೀಯವಾಗಿ ಹಣವನ್ನು ಉಳಿಸಬಹುದು.

    ಸಿಎನ್‍ಜಿ ಟ್ರಾಕ್ಟರುಗಳ ಎಂಜಿನ್ ಸಾಮಾರ್ಥ್ಯ 9 ವು ತುಂಬಾ ಉತ್ತಮವಾಗಿದ್ದು, ಮಾಲಿನ್ಯ ರಹಿತವಾಗಿದೆ. ಸಿಎನ್ ಜಿ ಟ್ರಾಕ್ಟರ್ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು, ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಸಿಎನ್‍ಜಿ ಮೂಲಕ ಸಂಪತ್ತನ್ನು ರೈತರು ಪರಿವರ್ತಿಸಬಹುದು. ಇದು ಪರಿಸರ ಆರ್ಥಿಕತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.

    ಡೀಸೆಲ್ ಟ್ರಾಕ್ಟರುಗಳಿಗಿಂತ ಸಾಮರ್ಥ್ಯ. ಇದು ಶೂನ್ಯ ಸೀಸ ಮತ್ತು ನಾಶಕಾರಿ ಅಲ್ಲ. ದುರ್ಬಲಗೊಳಿಸದ ಮತ್ತು ಮಾಲಿನ್ಯಕಾರಕವಲ್ಲದ ಎಂಜಿನ್‍ನ ಜೀವನದಲ್ಲಿ ಸಹಾಯ ಮಾಡುತ್ತದೆ. ಮತ್ತು ಇದಕ್ಕೆ ಕಡಿಮೆ ನಿಯಮಿತ ನಿರ್ವಹಣೆ ಅಗತ್ಯವಿರುತ್ತದೆ.” ಸಿಎನ್‍ಜಿ ಟ್ಯಾಂಕ್‍ಗಳು ಬಿಗಿಯಾದ ಮುದ್ರೆಯೊಂದಿಗೆ ಬರುವುದರಿಂದ ತಜ್ಞರು ತಂತ್ರಜ್ಞಾನವನ್ನು ಸುರಕ್ಷಿತವಾಗಿಸುತ್ತಾರೆ. ಇದು ಇಂಧನ ತುಂಬುವಾಗ ಅಥವಾ ಸೋರಿಕೆಯಾದಾಗ ಸ್ಫೋಟದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

    ಇದರಿಂದಾಗಿ ರೈತರ ಜೀವನ ಮಟ್ಟ ಗಣನೀಯ ಪ್ರಮಾಣದಲ್ಲಿ ಬದಲಾವಣೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಟ್ರಾಕ್ಟರುಗಳಾಗಿ ಪರಿವರ್ತಿಸುವ ಮೂಲಕ ದೇಶದ ಪ್ರತಿಯೊಬ್ಬ ರೈತರ ಜೀವನ ಮಟ್ಟ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಹಾಗೂ ಆದಾಯವನ್ನು ದ್ವಿಗುಣಗೊಳಿಸಿ ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು, ಹಲವಾರು ಕ್ರಮಗಳನ್ನು ಕೈಗೊಂಡಿರುವುದು ನಮ್ಮ ರೈತರ ಸಬಲೀಕರಣದ ಪ್ರಮುಖ ಹೆಜ್ಜೆಯಾಗಿದೆ.

    ಕೇಂದ್ರ ಭೂ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಕೃಷಿ ರಾಜ್ಯ ಸಚಿವ ಪುರಷೋತ್ತಮ್ ರೂಪಾಲ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್, ಕರ್ನಾಟಕದ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಮತ್ತು ಎಂಆರ್‍ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ಸಿಎನ್‍ಜಿ ಟ್ರಾಕ್ಟರ್ ಗೆ ಒಪ್ಪಂದ ಮಾಡಿಕೊಳ್ಳಲಾಯಿತು.

  • ಲಸಿಕೆ ಪಡೆದ ನಂತರ ಕೊರೊನಾ ನಿಯಮಗಳನ್ನ ಮರೀಯಬೇಡಿ: ಪ್ರಧಾನಿ ಮೋದಿ

    ಲಸಿಕೆ ಪಡೆದ ನಂತರ ಕೊರೊನಾ ನಿಯಮಗಳನ್ನ ಮರೀಯಬೇಡಿ: ಪ್ರಧಾನಿ ಮೋದಿ

    – ಕೊರೊನಾ ವಾರಿಯರ್ಸ್ ನೆನೆದು ಮೋದಿ ಭಾವುಕ
    – ನಮ್ಮ ಲಸಿಕೆ ಸುರಕ್ಷಿತ, ಕಡಿಮೆ ಬೆಲೆ

    ನವದೆಹಲಿ: ಕೊರೊನಾ ಲಸಿಕೆ ಕಂಡು ಹಿಡಿಯಲು ನಮ್ಮ ವಿಜ್ಞಾನಿಗಳು ಸತತ ಪರಿಶ್ರಮ ಪಟ್ಟಿದ್ದಾರೆ. ವಿಜ್ಞಾನಿಗಳು ಹಬ್ಬ, ಸಂತೋಷಕೂಟದಲ್ಲಿ ಭಾಗಿಯಾಗದೇ ಲಸಿಕೆಗಾಗಿ ಶ್ರಮ ವಹಿಸಿದ್ದರು ಎಂದು ಲಸಿಕೆ ಸಂಶೋಧಕರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದರು.

    ಮೊದಲ ಡೋಸ್ ತೆಗೆದುಕೊಂಡವರು ಎರಡನೇ ಡೋಸ್ ಪಡೆದುಕೊಳ್ಳುವದನ್ನ ಮರೀಯಬೇಡಿ. ಎರಡನೇ ಡೋಸ್ ಪಡೆದ ನಂತರವೇ ನಿಮ್ಮ ದೇಹದಲ್ಲಿ ಕೊರೊನಾ ವಿರುದ್ಧದ ಶಕ್ತಿ ಹೆಚ್ಚಾಗಲಿದೆ. ಕೊರೊನಾ ಪಡೆದು ನಂತರ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕೊರೊನಾ ನಿಯಮಗಳನ್ನ ಮರೆಯಬೇಡಿ. ಭಾರತ ಸರ್ಕಾರ ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಈ ಸಂಖ್ಯೆ 30ಕೋಟಿ ತಲುಪುವ ಗುರಿಯನ್ನ ಭಾರತ ಹೊಂದಿದೆ. ಎರಡನೇ ಹಂತದಲ್ಲಿ ವೃದ್ಧರು, ರೋಗಿಗಳಿಗೆ ಆದ್ಯತೆ ನೀಡಲಾಗುವುದು.

    ಆತ್ಮನಿರ್ಭರ ಭಾರತದಡಿಯಲ್ಲಿ ಲಸಿಕೆ: ಈ ದೊಡ್ಡ ಅಭಿಯಾನ ಇಡೀ ವಿಶ್ವದ ಗಮನ ಸೆಳೆಯುವ ಮೂಲಕ ನಮ್ಮ ಶಕ್ತಿ ಪ್ರದರ್ಶನವಾಗುತ್ತಿದೆ. ಲಸಿಕೆಗೆ ಸಂಬಂಧಿಸಿದ ಸುಳ್ಳು ಸುದ್ದಿಗಳಿಂದ ದೂರ ಉಳಿದುಕೊಳ್ಳಿ. ನಮ್ಮ ಲಸಿಕೆಯ ವಿಶ್ವಾಸದಿಂದಲೇ ಇತರೆ ದೇಶಗಳು ನಮಗೆ ಬೇಡಿಕೆ ಇಡುತ್ತಿವೆ. ಎರಡು ಲಸಿಕೆಗಳು ಸದ್ಯಕ್ಕೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಸಿಕೆಗಳನ್ನ ನಮ್ಮ ವಿಕ್ಞಾನಿಗಳು ಕಂಡು ಹಿಡಿಯಲಿದ್ದಾರೆ. ಆತ್ಮನಿರ್ಭರ ಭಾರತದಡಿಯಲ್ಲಿ ಸಂಶೋಧನೆ ಆಗುತ್ತಿರುವ ಲಸಿಕೆಗಳ ಕ್ಷಮತೆ ಗುಣಮಟ್ಟವಾದಗಿದ್ದು, ಕಡಿಮೆ ಬೆಲೆಯನ್ನ ಹೊಂದಿವೆ ಎಂದರು.

    ಕೊರೊನಾ ವಿರುದ್ಧ ಹೋರಾಟದಲ್ಲಿ ಆತ್ಮವಿಶ್ವಾಸ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕೊರೊನಾ ಬಂದಾಗ ದೇಶದಲ್ಲಿ ಒಂದೇ ಟೆಸ್ಟಿಂಗ್ ಲ್ಯಾಬ್ ಇತ್ತು. ಇಂದು 23 ಸಾವಿರಕ್ಕೂ ಅಧಿಕ ಲ್ಯಾಬ್ ಗಳಿವೆ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಇನ್ನಿತರ ವೈದ್ಯಕೀಯ ವಸ್ತುಗಳಿಗಾಗಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಇಂದು ಆತ್ಮನಿರ್ಭರ ಭಾರತದಡಿಯಲ್ಲಿ ಸ್ವಾವಲಂಬನೆ ಹೊಂದಿದ್ದು, ನಿರ್ಯಾತ ಸಹ ಮಾಡಲಾಗುತ್ತಿದೆ. ಇದಕ್ಕೆಲ್ಲ ಭಾರತೀಯರ ಆತ್ಮನಿರ್ಭರದ ಆತ್ಮವಿಶ್ವಾಸ ಕಾರಣ.

    ಭಾವುಕರಾದ ಪ್ರಧಾನಿ ಮೋದಿ: ಕೊರೊನಾ ಲಸಿಕೆ ಕಾರ್ಯಕ್ರಮ ಮಾನವೀಯ ಮತ್ತು ಮಹತ್ವದ ಸಿದ್ಧಾಂತಗಳಡಿಯಲ್ಲಿದೆ. ಈ ಕೊರೊನಾ ಎಷ್ಟೋ ಜನರನ್ನ ಏಕಾಂಗಿಯನ್ನಾಗಿ ಮಾಡಿತು. ಮಗುವನ್ನ ತಾಯಿಯಿಂದ ದೂರು ಮಾಡಿತು. ವೃದ್ಧರು ಒಂಟಿಯಾಗಿ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದರು. ಈ ವೈರಸ್ ನಿಂದ ಅಗಲಿದೆ ಜನರಿಗೆ ಸಂಪ್ರದಾಯಬದ್ಧವಾಗಿ ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ. ಇದನ್ನೆಲ್ಲ ನೋಡಿದ ಮನಸ್ಸು ಭಾರವಾಗುತ್ತೆ ಎಂದು ಭಾವುಕರಾದರು.

    ಸರಿಯಾದ ಸಮಯಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರಗಳನ್ನ ತೆಗೆದುಕೊಂಡಿತು. ಜನತಾ ಕಫ್ರ್ಯೂ ಜನರನ್ನ ಲಾಕ್‍ಡೌನ್ ಗೆ ಸಿದ್ಧಗೊಳಿಸಿತು. ಕೊರೊನಾ ಆಕ್ರಮಣ ತಡೆಯಲು ದೊಡ್ಡ ಅಸ್ತ್ರವೇ ಲಾಕ್‍ಡೌನ್ ಆಗಿತ್ತು. ಈ ನಿರ್ಧಾರ ಅಷ್ಟು ಸರಳವಾಗಿರಲಿಲ್ಲ. ಆದರೂ ಭಾರತ ಸರ್ಕಾರ ಕೊರೊನಾ ತಡೆಗಾಗಿ ಲಾಕ್‍ಡೌನ್ ಸೇರಿದಂತೆ ಕಟ್ಟು ನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿತು. ಮೂಲಭೂತ ಸೇವೆಗಳು, ರೇಷನ್, ಔಷಧಿ, ಗ್ಯಾಸ್ ನೀಡುವ ಕೆಲಸ ಮಾಡಲಾಯ್ತು. ವಿದೇಶದಲ್ಲಿ ಸಿಲುಕಿದ ಭಾರತೀಯರನ್ನ ನಾವು ಕರೆ ತಂದಿದ್ದೇವೆ. ವಂದೇ ಭಾರತ್ ಮಿಷನ್ ಅಡಿ ಸುಮಾರು 35 ಲಕ್ಷ ಭಾರತೀಯರು ತಾಯ್ನಾಡಿಗೆ ಮರಳಿದರು. ಭಾರತ ತೆಗೆದುಕೊಂಡ ನಿರ್ಧಾರಗಳನ್ನ ಇಂದು ಇಡೀ ವಿಶ್ವ ಪಾಲನೆ ಮಾಡುತ್ತಿದೆ.

    ಮಾನವ ಸಂಕುಲಕ್ಕೆ ಒಳ್ಳೆಯದಾಗಲಿದೆ: ಕೊರೊನಾ ತಡೆಗಾಗಿ ದೇಶ ಹೇಗೆ ಒಗ್ಗಟ್ಟಾಗಿ ನಿಂತಿತು ಅನ್ನೋದನ್ನ ಇಡೀ ವಿಶ್ವ ಆಶ್ಚರ್ಯಚಕಿತದಿಂದ ನೋಡುತ್ತಿದ್ದೇವೆ. ಕೊರೊನಾ ಮರಣ ಪ್ರಮಾಣ ದರ ಸಹ ಕಡಿಮೆಯಾಗಿದ್ದು, ಸೋಂಕಿತರು ಗುಣಮುಖರಾಗಿ ಮನೆ ಸೇರುತ್ತಿದ್ದಾರೆ. ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರೆವು ನೀಡಿದೆ. ಇಂದು ನಾವು ನನ್ನ ಲಸಿಕೆಯನ್ನ ಕಂಡು ಹಿಡಿದಿದ್ದೇವೆ. ನಮ್ಮ ಲಸಿಕೆ ಇಡೀ ಮಾನವ ಕುಲಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು.

  • ಆತ್ಮವನ್ನೇ ಕಳೆದುಕೊಂಡ ನಿರ್ಜೀವಿ ಸರ್ಕಾರದಿಂದ ಆತ್ಮನಿರ್ಭರ ಮಾತು: ಉಮಾಶ್ರೀ

    ಆತ್ಮವನ್ನೇ ಕಳೆದುಕೊಂಡ ನಿರ್ಜೀವಿ ಸರ್ಕಾರದಿಂದ ಆತ್ಮನಿರ್ಭರ ಮಾತು: ಉಮಾಶ್ರೀ

    ಕೊಪ್ಪಳ: ಆತ್ಮವನ್ನೇ ಕಳೆದುಕೊಂಡ ನಿರ್ಜೀವಿ ಸರ್ಕಾರದಿಂದ ಆತ್ಮನಿರ್ಭರ ಮಾತು ಎಂದು ಮಾಜಿ ಸಚಿವೆ ಉಮಾಶ್ರೀ ವ್ಯಂಗ್ಯ ಮಾಡಿದ್ದಾರೆ.

    ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು ಏನು ಇಲ್ಲ. ಬೆಂಗಳೂರಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ. ಆಸ್ಪತ್ರೆಯವರು ರೋಗಿಗಳನ್ನು ಮುಟ್ಟುವದಿಲ್ಲ. ರಸ್ತೆಯ ಮೇಲೆ ಹೆಣಗಳು ಬೀಳೂತ್ತಿದ್ದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಬಿಜೆಪಿ ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ ಎಂದು ಕಿಡಿಕಾರಿದರು.

    ಕೋವಿಡ್ ಉಪಕರಣಗಳಲ್ಲಿ ದೊಡ್ಡ ಹಗರಣ ನಡೆದಿದ್ದು, ಈ ಸಂಬಂಧ ತನಿಖೆ ಆಗಬೇಕಿದೆ. ತನಿಖೆಗೆ ಒಳಪಡಿಸದಿದ್ರೆ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇವೆ. ಅಧಿವೇಶನದ ಸಂದರ್ಭದಲ್ಲಿ ಇವರ ಮುಖವಾಡವನ್ನು ಕಳಚುತ್ತೇವೆ ಎಂದು ಕಿಡಿಕಾರಿದರು.

  • ಚೀನಾಗೆ ಡಬಲ್ ಶಾಕ್ ನೀಡಲು ಮೋದಿ ಪ್ಲಾನ್- ಯುವಕರಿಗೆ ಪ್ರಧಾನಿ ಚಾಲೆಂಜ್

    ಚೀನಾಗೆ ಡಬಲ್ ಶಾಕ್ ನೀಡಲು ಮೋದಿ ಪ್ಲಾನ್- ಯುವಕರಿಗೆ ಪ್ರಧಾನಿ ಚಾಲೆಂಜ್

    ನವದೆಹಲಿ: ವೈರಿ ಚೀನಾಗೆ ಡಬಲ್ ಶಾಕ್ ನೀಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದು, ದೇಶದ ಯುವಕರಿಗೆ ಚಾಲೆಂಜ್ ನೀಡಿದ್ದಾರೆ.

    ಚೀನಾದ 59 ಆ್ಯಪ್ ಮಾಡುವ ಮೂಲಕ ನೆರೆಯ ವೈರಿ ರಾಷ್ಟ್ರಕ್ಕೆ ಶಾಕ್ ನೀಡಿರುವ ಪ್ರಧಾನಿ ಮೋದಿ, ಮತ್ತೊಂದು ಹೆಜ್ಜೆಯನ್ನು ಇರಿಸಿದ್ದಾರೆ. ದೇಶದ ಯುವ ಪೀಳಿಗೆ ದೇಶಿಯ ಆ್ಯಪ್ ತಯಾರಿಸುವ ಮೂಲಕ ಆತ್ಮನಿರ್ಭರ ಭಾರತದ ಜೊತೆ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ.

    ಟ್ವೀಟ್: ಇಂದು ಮೇಡ್ ಇನ್ ಇಂಡಿಯಾ ಆ್ಯಪ್ ಮತ್ತು ಸ್ಟಾರ್ಟ್ ಅಪ್ ಮಾಡಲು ಯುವ ಸಮುದಾಯದಲ್ಲಿ ಉತ್ಸಾಹವಿದೆ. ಹೀಗಾಗಿ @GoI_MeitY ಮತ್ತು @AIMtoInnovate ಜೊತೆ ಸೇರಿ ಸಂಶೋಧನೆಯ ಚಾಲೆಂಜ್ ಸ್ವೀಕರಿಸಿ. ನಿಮ್ಮ ಸಂಶೋಧನೆಯ ಪ್ರೊಡೆಕ್ಟ್ ಅಥವಾ ಇದರಿಂದ ದೇಶಕ್ಕೆ ಒಳ್ಳೆಯದನ್ನ ಮಾಡೋ ಉದ್ದೇಶವಿದ್ದರೆ ತಂತ್ರಜ್ಞಾನದ ಸೇರಿಕೊಳ್ಳಿ. ಈ ಲಿಂಕ್ ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂದು ಪ್ರಧಾನಿಗಳು ಹೇಳಿದ್ದಾರೆ.

    ಚೀನಾದ 59 ಆ್ಯಪ್‍ಗಳು:
    ಟಿಕ್ ಟಾಕ್, ಶೇರ್ ಇಟ್, ಕ್ವಾಯಿ, ಯುಸಿ ಬ್ರೌಸರ್, ಬೈದು ಮ್ಯಾಪ್, ಶೇನ್, ಕ್ಲ್ಯಾಶ್ ಆಪ್ ಕಿಂಗ್ಸ್, ಡಿಯು ಬ್ಯಾಟರಿ ಸೇವರ್, ಹೆಲೊ, ಲೈಕೀ, ಯೂಕ್ಯಾಮ್ ಮೇಕ್‍ಅಪ್, ಎಂಐ ಕಮ್ಯೂನನಿಟಿ, ಸಿಎಂ ಬ್ರೌಸರ್ಸ್, ವೈರಸ್ ಕ್ಲೀನರ್, ಅಪಸ್ ಬ್ರೌಸರ್, ರೋಮ್‍ವುಯ್, ಕ್ಲಬ್ ಫ್ಯಾಕ್ಟರಿ, ನ್ಯೂಸ್‍ಡಾಗ್, ಬ್ಯೂಟಿ ಪ್ಲಸ್, ವಿಯ್ ಚಾಟ್.

    ಯುಸಿ ನ್ಯೂಸ್, ಕ್ಯೂಕ್ಯೂ ಮೇಲ್, ವೀಬೋ, ಕ್ಸೆಂಡರ್, ಕ್ಯೂಕ್ಯೂ ಮ್ಯೂಸಿಕ್, ಕ್ಯೂಕ್ಯೂ ನ್ಯೂಸ್ ಫೀಡ್, ಬಿಗೊ ಲೈವ್, ಸೆಲ್ಫಿ ಸಿಟಿ, ಮೇಲ್ ಮಾಸ್ಟರ್, ಪ್ಯಾರೆಲ್ಲೆಲ್ ಸ್ಪೇಸ್, ಎಂಐ ವಿಡಿಯೋ ಕಾಲ್-ಕ್ಸಿಯೋಮಿ, ವಿಯ್ ಸಿಂಕ್, ಇಎಸ್ ಫೈಲ್ ಎಕ್ಸ್‍ಪ್ಲೋರರ್, ವಿವಾ ವಿಡಿಯೋ-ಕ್ಯೂಯು ವಿಡಿಯೋ, ಮೀತು, ವಿಗೋ ವಿಡಿಯೋ, ನ್ಯೂ ವಿಡಿಯೋ ಸ್ಟೇಟಸ್, ಡಿಯು ರೆಕಾರ್ಡರ್, ವೀಲ್ಟ್-ಹೈಡ್, ಕ್ಯಾಚೆ ಕ್ಲೀನರ್ ಡಿಯು ಆ್ಯಪ್ ಸ್ಟುಡಿಯೋ.

    ಡಿಯು ಕ್ಲೀನರ್, ಡಿಯು ಬ್ರೌಸರ್, ಹ್ಯಾಗೋ ಪ್ಲೇ ವಿತ್ ನ್ಯೂ ಫ್ರೆಂಡ್ಸ್, ಕ್ಯಾಮ್ ಸ್ಕ್ಯಾನರ್, ಕ್ಲೀನ್ ಮಾಸ್ಟರ್- ಚೀತಾ ಮೊಬೈಲ್, ವಂಡರ್ ಕ್ಯಾಮೆರಾ, ಫೋಟೋ ವಂಡರ್, ಕ್ಯೂಕ್ಯೂ ಪ್ಲೇಯರ್, ವುಯ್ ಮೀಟ್, ಸ್ವೀಟ್ ಸೆಲ್ಫಿ, ಬೈದು ಟ್ರಾನ್ಸ್‍ಲೇಟ್, ವಿಮೇಟ್, ಕ್ಯೂಕ್ಯೂ ಇಂಟರ್‍ನ್ಯಾಷನಲ್, ಕ್ಯೂಕ್ಯೂ ಸೆಕ್ಯೂರಿಟಿ ಸೆಂಟರ್, ಕ್ಯೂಕ್ಯೂ ಲಾಂಚರ್, ಯು ವಿಡಿಯೋ, ವಿ ಫ್ಲೈ ಸ್ಟೇಟಸ್ ವಿಡಿಯೋ, ಮೊಬೈಲ್ ಲೆಜೆಂಡ್ಸ್, ಡಿಯು ಪ್ರೈವೆಸಿ.

  • ಮುಂದಿನ ವರ್ಷದ ಮಾರ್ಚ್ ವರೆಗೆ ಶೇ.25 ಟಿಡಿಎಸ್ ಕಡಿತ

    ಮುಂದಿನ ವರ್ಷದ ಮಾರ್ಚ್ ವರೆಗೆ ಶೇ.25 ಟಿಡಿಎಸ್ ಕಡಿತ

    ನವದೆಹಲಿ: ಸ್ವಾವಲಂಬಿ ಭಾರತಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂದು ಹಲವು ಯೋಜನೆಗಳನ್ನ ಘೋಷಿಸಿ, ಅನುದಾನ ಬಿಡುಗಡೆ ಮಾಡಿದ್ದಾರೆ. ಮುಂದಿನ ವರ್ಷದ ಮಾರ್ಚ್‍ವರೆಗೆ ಟಿಡಿಎಸ್ ಮತ್ತು ಟಿಸಿಎಸ್ ಕಡಿತವನ್ನು ಸದ್ಯ ಇರೋ ದರದಲ್ಲಿ ಶೇ.25ರಷ್ಟು ಕಡಿತಗೊಳಿಸಲಾಗುತ್ತದೆ.

    ಪ್ರಫೋಷನಲ್ ಫೀ, ಕ್ಯಾಂಟ್ರಾಕ್ಟ್ ಪೇಮೆಂಟ್, ಬಡ್ಡಿ, ಬಾಡಿಗೆ, ಡಿವಿಡೆಂಡ್, ಕಮಿಷನ್, ಬ್ರೋಕರೇಜ್ ಸೇರಿದಂತೆ ಎಲ್ಲವೂ ಟಿಡಿಎಸ್ ಕಡಿತಕ್ಕೆ ಅನ್ವಯವಾಗಲಿದೆ. ಈ ಕಡಿತದ ಅನ್ವಯ ನಾಳೆಯಿಂದ ಮಾರ್ಚ್ 31, 2021ರವರೆಗೆ ಇರಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 50 ಸಾವಿರ ಕೋಟಿ ಹೊರೆ ಆಗಲಿದೆ.

    ಇನ್‍ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಗೆ ಈ ಮೊದಲು ಜುಲೈ 31 ರಿಂದ ಅಕ್ಟೋಬರ್ 31ರವರೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಈಗ ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಟ್ಯಾಕ್ಸ್ ಆಡಿಟ್ ಅವಧಿಯನ್ನು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ವಿವಾದ್ ಸೇ ವಿಶ್ವಾಸ್ ಯೋಜನೆಯಡಿಯಲ್ಲಿ ಹೆಚ್ಚುವರಿ ಮೊತ್ತವಿಲ್ಲದೇ ಪಾವತಿಸಲು ಅವಕಾಶ ನೀಡಿದ್ದು, 31ನೇ ಡಿಸೆಂಬರ್ 2020ರವರೆಗೆ ಅವಧಿ ವಿಸ್ತರಿಸಲಾಗಿದೆ.

  • ಕೇಂದ್ರದಿಂದ ಪಿಎಫ್ ಹಣ – 20 ಲಕ್ಷ ಕೋಟಿ ರೂ. ಹಂಚಿಕೆ ಹೇಗೆ?

    ಕೇಂದ್ರದಿಂದ ಪಿಎಫ್ ಹಣ – 20 ಲಕ್ಷ ಕೋಟಿ ರೂ. ಹಂಚಿಕೆ ಹೇಗೆ?

    ನವದೆಹಲಿ: 15 ಸಾವಿರ ರೂ.ಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳ ಸಂಬಳದಲ್ಲಿ ಕಡಿತವಾಗ್ತಿದ್ದ ಪಿಎಫ್ ಮತ್ತು ಇಪಿಎಫ್ ಮೊತ್ತವನ್ನು ಸರ್ಕಾರ ಮೂರು ತಿಂಗಳು ಪಾವತಿಸಲಿದೆ. 72 ಲಕ್ಷ ಉದ್ಯೋಗಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂಧು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಕೋವಿಡ್ 19 ನಿಂದಾಗಿ ದೇಶದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಪ್ರಧಾನಿ ನರೇಂದ್ರಮೋದಿ ಮಂಗಳವಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದರು. ಇಂದು ಈ ಪ್ಯಾಕೇಜಿಗೆ ಸಂಬಂಧಿಸಿದಂತೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ನಡೆಸಿ ಯಾವುದಕ್ಕೆ ಹಣವನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬ ವಿವರವನ್ನು ಪ್ರಕಟಿಸಿದರು.

    ಸ್ವಾವಲಂಬಿ ಭಾರತಕ್ಕೆ ಮತ್ತು ಮೇಕ್ ಇನ್ ಇಂಡಿಯಾ ಉತ್ತೇಜಿಸಲು 200ಕೋಟಿ ರೂ ಕಡಿಮೆ ಸರ್ಕಾರಿ ಖರೀದಿಗಳಿಗೆ ಜಾಗತಿಕ ಟೆಂಡರ್ ಕರೆಯುವುದಕ್ಕೆ ನಿಷೇಧ. ಮುಂದಿನ 45 ದಿನದೊಳಗೆ ಸರ್ಕಾರಿ ಕಚೇರಿಗಳು, ಸಂಸ್ಥೆಗಳಿಂದ ಎಂಎಸ್ ಎಂ ಇ ಗಳಿಗೆ ಬಾಕಿ ಇರುವ ಮೊತ್ತ ಪಾವತಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಸುದ್ದಿಗೋಷ್ಠಿಯ ಮುಖ್ಯಾಂಶಗಳು
    – ಇಪಿಎಫ್ ಮತ್ತು ಪಿಎಫ್‍ಗಾಗಿ ಸರ್ಕಾರದಿಂದ 2500 ಕೋಟಿ ರೂ. ಹಣ ಮೀಸಲು. ಉದ್ಯೋಗಿಗಳ ಸಂಬಳದಲ್ಲಿ ಇಪಿಎಫ್ ಕಡಿತವನ್ನು ಶೇ.12ರಿಂದ ಶೇ.10ಕ್ಕೆ ಇಳಿಕೆ. ಪಿಎಸ್‍ಯುನಲ್ಲಿ ಶೇ.12ರಷ್ಟು ಇಪಿಎಫ್ ಕಡಿತವಾಗಲಿದೆ.

    – ಸಣ್ಣ ಮತ್ತು ಲಘು ಕೈಗಾರಿಕೆಗಳಿಗೆ 3 ಲಕ್ಷ ಕೋಟಿ: ಸಣ್ಣ, ಅತಿ ಸಣ್ಣ ಉದ್ಯಮ ಹೊಸ ವ್ಯವಹಾರಗಳಿಗೆ – ಅಡಮಾನ ರಹಿತ 3 ಲಕ್ಷ ಕೋಟಿ ಸಾಲದ ಮಹತ್ವದ ಘೋಷಣೆ.
    – ಕೋವಿಡ್-19 ನಿಂದ ಬಹುತೇಕ ಮಧ್ಯಮ ಮತ್ತು ಸಣ್ಣ ಉದ್ಯಮಗಳ ಹೊಣೆಗಾರಿಕೆ ಹೆಚ್ಚಾಗುತ್ತಿದೆ. ಕಚ್ಚಾ ವಸ್ತುಗಳು ಖರೀದಿ ಮತ್ತು ವ್ಯವಹಾರಗಳನ್ನು ಪುನಃ ಆರಂಭಿಸಲು ಉತ್ತೇಜನ ನೀಡುವ ಅವಶ್ಯಕತೆ ಇದೆ.

    – ವ್ಯವಹಾರ/ಎಂಎಸ್‍ಎಂಇ ಗಳಿಗೆ ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿಗಳಿಂದ ಅವರ ಔಟ್ ಸ್ಟ್ಯಾಂಡಿಂಗ್ (29.02.2020) ಕ್ರೆಡಿಟ್ ನ ಶೇ.20ರಷ್ಟು ಸಾಲ ಸೌಲಭ್ಯ. ಸಾಲ ಪಡೆಯುವ ವ್ಯವಹಾರದ ಟರ್ನ್ ಓವರ್ 25 ಕೋಟಿಯಿಂದ 100 ಕೋಟಿ ರೂ. ಒಳಗಿರಬೇಕು. ಸಾಲದ ಅವಧಿ 4 ವರ್ಷ ಇರಲಿದ್ದು, ಮೊದಲ 12 ತಿಂಗಳ ಅಸಲು ಪಾವತಿ ಮೇಲೆ ನಿಷೇಧ

    – ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿ ಅಸಲು ಮತ್ತು ಬಡ್ಡಿಯ ಮೇಲೆ ಶೇ.100ರಷ್ಟು ಗ್ಯಾರೆಂಟಿ. ಅಕ್ಟೋಬರ್ 31, 2020ರಿಂದ ಈ ಯೋಜನೆ ಆರಂಭವಾಗಲಿದೆ. ಈ ಯೋಜನೆಯಿಂದ 45 ಲಕ್ಷ ಘಟಕಗಳಿಗೆ ಪ್ರೋತ್ಸಾಹ.

    – ಜಾಗತಿಕ ಟೆಂಡರ್ ಇಲ್ಲ: ಸ್ಥಳೀಯ ಮತ್ತು ಸಣ್ಣ ಹಾಗೂ ಲಘು ಕಂಪನಿಗಳು ಜಾಗತಿಕ ಮಾರುಕಟ್ಟೆಯ ಪೈಪೋಟಿಯಿಂದ ನಷ್ಟಕ್ಕೆ ಒಳಗಾಗಿದ್ದವು. ಹಾಗಾಗಿ ಜಾಗತಿಕ ಟೆಂಡರ್ ನಿಷೇಧಿಸಲಾಗಿದೆ. ಈ ಯೋಜನೆ ಸಂಪೂರ್ಣ ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಬರಲಿದೆ. ಜಾಗತಿಕ ಟೆಂಡರ್ ನಿಷೇಧ ಸಣ್ಣ ಹಾಗೂ ಲಘು ಉದ್ಯಮಗಳ ಚೇತರಿಕೆಗೆ ಕಾರಣವಾಗಲಿದೆ.

    – 30 ಸಾವಿರ ಕೋಟಿ ಅನುದಾನದಲ್ಲಿ ಸ್ಪೆಷಲ್ ಲಿಕ್ವಿಡಿಟಿ ಸ್ಕೀಮ್ ಆರಂಭಿಸಲಾಗುವುದು. ಭಾಗಶಃ ಕ್ರೆಡಿಟ್ ಗ್ಯಾರೆಂಟಿ ಸ್ಕೀಮ್ 2.0 ಮೂಲಕ 45 ಸಾವಿರ ಕೋಟಿ ಬಂಡವಾಳ ಹೂಡಿಕೆ. ವಿದ್ಯುತ್ ಪ್ರಸರಣ ಕಂಪನಿಗಳಿಗಾಗಿ 90 ಸಾವಿರ ಕೋಟಿ ರೂ. ಅನುದಾನದ ಘೋಷಣೆ. ಸರ್ಕಾರಿ ಗುತ್ತಿಗೆಗಳ ಎಲ್ಲ ಅವಧಿಯನ್ನು ಆರು ತಿಂಗಳಿಗೆ ವಿಸ್ತರಣೆಯ ಮಹತ್ವದ ಘೋಷಣೆಯನ್ನು ಮಾಡಿದೆ.