Tag: aashiqui 2

  • ಶ್ರದ್ಧಾ ಕಪೂರ್ ಕೊರಳಲ್ಲಿ R ಪೆಂಡೆಂಟ್- ಬಾಯ್‌ಫ್ರೆಂಡ್ ಬಗ್ಗೆ ಗುಟ್ಟು ರಟ್ಟು

    ಶ್ರದ್ಧಾ ಕಪೂರ್ ಕೊರಳಲ್ಲಿ R ಪೆಂಡೆಂಟ್- ಬಾಯ್‌ಫ್ರೆಂಡ್ ಬಗ್ಗೆ ಗುಟ್ಟು ರಟ್ಟು

    ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ (Shraddha Kapoor) ತಮ್ಮ ಸಿನಿಮಾಗಿಂತ ಖಾಸಗಿ ವಿಚಾರವಾಗಿ ಹೆಚ್ಚುಚ್ಚು ಸುದ್ದಿಯಾಗುತ್ತಿದ್ದಾರೆ. ಸದ್ಯ ತಮ್ಮ ಬಾಯ್‌ಫ್ರೆಂಡ್ ಯಾರು? ಎಂಬುದರ ಬಗ್ಗೆ ನಟಿ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇದನ್ನೂ ಓದಿ:ಕಿರುತೆರೆಗೆ ಕಾಲಿಟ್ಟ ‘ಬೆಳ್ಳುಳ್ಳಿ ಕಬಾಬ್’ ಚಂದ್ರು

    ಶ್ರದ್ಧಾ ಕಪೂರ್ ಅವರು ಇತ್ತೀಚೆಗೆ ಹೊಸ ಫೋಟೋವೊಂದನ್ನು ಶೇರ್ ಮಾಡಿದ್ದರು. ಆ ಫೋಟೋದಲ್ಲಿ R ಎಂಬ ಪೆಂಡೆಂಟ್ ಸರವನ್ನು ನಟಿ ಧರಿಸಿದ್ದರು. ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಆರ್ ಅಂದರೆ ಯಾರು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಚರ್ಚೆಗೆ ಶುರುವಾಗಿದೆ.

    R ಎಂದರೆ ಯಾರು ಎಂದು ನೆಟ್ಟಿಗರು ಶ್ರದ್ಧಾಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಆರ್ ಅಂದರೆ ರಾಹುಲ್ ಮೋದಿ ಅಲ್ವಾ? ಎಂದು ಕೇಳಿದ್ದಾರೆ. ಆದರೆ ಹರಿದು ಬರುತ್ತಿರೋ ಪ್ರಶ್ನೆಗೆ ನಟಿ ಮೌನ ವಹಿಸಿದ್ದಾರೆ. ಇದನ್ನೂ ಓದಿ:Kalki 2898 AD: ಪ್ರಭಾಸ್ ಸಿನಿಮಾದಲ್ಲಿ ಹೇಗಿರಲಿದೆ ಕಮಲ್ ಹಾಸನ್ ಪಾತ್ರ?

     

    View this post on Instagram

     

    A post shared by Shraddha ✶ (@shraddhakapoor)

    ‘ಆಶಿಕಿ 2’ ಬೆಡಗಿ ಶ್ರದ್ಧಾ ಕಪೂರ್ (Shradha Kapoor) ಸದ್ಯ ರಾಹುಲ್ ಮೋದಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ ಅಂಬಾನಿ ಕುಟುಂಬದ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಅಂತೆ, ಕಂತೆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತೆ ಆಗಿತ್ತು.

    ಬಾಲಿವುಡ್‌ನಲ್ಲಿ ಇತ್ತೀಚೆಗೆ ಸಾಕಷ್ಟು ಸ್ಟಾರ್ ಜೋಡಿಗಳು ಹಸೆಮಣೆ ಏರಿದ್ದಾರೆ. ರಕುಲ್-ಜಾಕಿ, ಕೃತಿ-ಪುಲ್ಕಿತ್ ಸಾಮ್ರಾಟ್ ಸೇರಿದಂತೆ ಅನೇಕರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮುಂದಿನ ಮದುವೆ ಗುಡ್ ನ್ಯೂಸ್ ಶ್ರದ್ಧಾ ಅವರದ್ದೇ ಅಂತ ಫ್ಯಾನ್ಸ್ ನಟಿಯ ಕಡೆಯ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಹಾಗಾದ್ರೆ ಸದ್ಯದಲ್ಲೇ ಮದುವೆ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ ಕಾಯಬೇಕಿದೆ.

  • ‘ಲೈಗರ್’ ಬ್ಯೂಟಿ ಜೊತೆ ಆದಿತ್ಯ ರಾಯ್ ಲವ್ವಿ-ಡವ್ವಿ: ಲೀಕ್ ಆಯ್ತು ರೊಮ್ಯಾಂಟಿಕ್ ಫೋಟೋ

    ‘ಲೈಗರ್’ ಬ್ಯೂಟಿ ಜೊತೆ ಆದಿತ್ಯ ರಾಯ್ ಲವ್ವಿ-ಡವ್ವಿ: ಲೀಕ್ ಆಯ್ತು ರೊಮ್ಯಾಂಟಿಕ್ ಫೋಟೋ

    ಬಾಲಿವುಡ್‌ನ ‘ಆಶಿಕಿ 2’ (Ashiqui 2) ಹೀರೋ ಆದಿತ್ಯ ರಾಯ್ ಕಪೂರ್ (Aditya Roy Kapoor) ಅವರು ಸಿನಿಮಾಗಿಂತ ಹೆಚ್ಚುಚ್ಚು ಖಾಸಗಿ ವಿಚಾರವಾಗಿಯೇ ಸುದ್ದಿಯಾಗುತ್ತಿದ್ದಾರೆ. ಅನನ್ಯಾ ಪಾಂಡೆ (Ananya Panday) ಜೊತೆ ಆದಿತ್ಯ ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಇಬ್ಬರೂ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿರಲಿಲ್ಲ. ಈಗ ಇಬ್ಬರೂ ಜೊತೆಯಿರುವ ಫೋಟೋ ಲೀಕ್ ಆಗಿದೆ. ಸೋಷಿಯಲ್ ಮೀಡಿಯಾ ತುಂಬೆಲ್ಲಾ ಈ ಜೋಡಿಯ ಫೋಟೋ ಸದ್ದು ಮಾಡುತ್ತಿದೆ.

    ಆದಿತ್ಯ ಕಪೂರ್ ಮತ್ತು ಲೈಗರ್‌ (Liger) ನಟಿ ಅನನ್ಯಾ ಪಾಂಡೆ ಇಬ್ಬರು ಸ್ಟಾರ್ ಕಿಡ್ಸ್ ಆಗಿದ್ದರು ಕೂಡ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಆಶಿಕಿ 2’ ಚಿತ್ರದಲ್ಲಿ ಗಮನ ಸೆಳೆದ ಆದಿತ್ಯ, ತಮ್ಮ ವೃತ್ತಿ ಜೀವನದಲ್ಲಿ ಒಂದೊಳ್ಳೆ ಬ್ರೇಕ್‌ಗಾಗಿ ಕಾಯ್ತಿದ್ದಾರೆ. ಹೀಗಿರುವಾಗ ಲೈಗರ್ ನಟಿ ಜೊತೆ ಆದಿತ್ಯ ಹೆಸರು ಕೇಳಿ ಬರುತ್ತಿದೆ. ಸಾಕಷ್ಟು ವರ್ಷಗಳಿಂದ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಸಾಕಷ್ಟು ವರ್ಷಗಳಿಂದ ಆದಿತ್ಯ- ಅನನ್ಯಾ ಪಾಂಡೆ ಇಬ್ಬರು ಪರಿಚಿತರು. ಹಾಗಾಗಿ ಡೇಟಿಂಗ್ ಸುದ್ದಿಗೆ ಈ ಜೋಡಿಯ ನಯಾ ಪುಷ್ಟಿ ನೀಡುತ್ತಿದೆ. ಇಬ್ಬರೂ ಅವರು ಪ್ರತ್ಯೇಕವಾಗಿ ವಿಮಾನ ಏರಿ ವಿದೇಶಕ್ಕೆ ತೆರಳಿದ್ದಾರೆ. ಆದರೆ ಅವರಿಬ್ಬರೂ ಹೋಗಿರುವುದು ಒಂದೇ ಲೊಕೇಷನ್‌ಗೆ. ಸ್ಪೇನ್‌ನಲ್ಲಿ ಸಂಗೀತ ಕಾರ್ಯಕ್ರಮವೊಂದಕ್ಕೆ ಅವರು ಹಾಜರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಅಪ್‌ಲೋಡ್ ಮಾಡಿಕೊಂಡಿದ್ದಾರೆ. ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇರುವುದರಿಂದ ಅಭಿಮಾನಿಗಳಿಗೆ ಎಲ್ಲವೂ ಸ್ಪಷ್ಟವಾಗಿದೆ. ಇಷ್ಟೇ ಅಲ್ಲ, ಅವರಿಬ್ಬರ ನಡುವಿನ ಆಪ್ತತೆಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಫೋಟೋ ಕೂಡ ವೈರಲ್ ಆಗಿದೆ.

     

    View this post on Instagram

     

    A post shared by Manav Manglani (@manav.manglani)

    ಅನನ್ಯಾರನ್ನು ಆದಿತ್ಯ ಅವರು ಹಿಂಬದಿಯಿಂದ ತಬ್ಬಿಕೊಂಡು ನಿಂತಿರುವ ಫೋಟೋ ಸದ್ದು ಮಾಡುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇಷ್ಟು ದಿನಗಳ ಕಾಲ ಈ ಜೋಡಿ ಹಕ್ಕಿಗಳು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಈಗ ಎಲ್ಲವೂ ಬಟಾಬಯಲಾಗಿದೆ. ಕದ್ದು-ಮುಚ್ಚಿ ಡೇಟಿಂಗ್ ಮಾಡುತ್ತಿರುವ ರಹಸ್ಯ ರಿವೀಲ್ ಆಗಿದೆ. ಫ್ಯಾನ್ಸ್ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.

    ಇನ್ನೂ ಕೆಲವು ತಿಂಗಳುಗಳ ಹಿಂದೆ ಇವೆಂಟ್‌ವೊಂದರಲ್ಲಿ ಇಬ್ಬರು ಜೊತೆಯಾಗಿ ರ‍್ಯಾಂಪ್ ವಾಕ್ ಮಾಡಿದ್ದು. ಜೋಡಿಯಾಗಿ ಹಲವು ಇವೆಂಟ್‌ನಲ್ಲಿ ಭಾಗಿಯಾಗುತ್ತಿದ್ದರು. ಅಂದಿನ ಆದಿತ್ಯ- ಅನನ್ಯಾ ಅವರ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಬಾಲಿವುಡ್‌ನಲ್ಲೂ ಸ್ಟಾರ್ ನಟ-ನಟಿಯರ ಮದುವೆ ಸೀಸನ್ ಶುರುವಾಗಿರೋದ್ರಿಂದ ಈ ಜೋಡಿ ಕೂಡ ಮದುವೆ ಬಗ್ಗೆ ಸಿಹಿಸುದ್ದಿ ಕೊಡ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]