Tag: Aaruru Jagdish

  • ಅನಿರುದ್ಧಗೆ ಮತ್ತೆ ಅವಕಾಶ ಕೊಡಿ, ವಾಹಿನಿ ಮುಂದೆ ಅಭಿಮಾನಿಗಳು ಪ್ರತಿಭಟನೆ

    ಅನಿರುದ್ಧಗೆ ಮತ್ತೆ ಅವಕಾಶ ಕೊಡಿ, ವಾಹಿನಿ ಮುಂದೆ ಅಭಿಮಾನಿಗಳು ಪ್ರತಿಭಟನೆ

    ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಅನಿರುದ್ಧ ಅವರಿಗೆ ಮತ್ತೆ ಅವಕಾಶ ನೀಡಬೇಕು ಎಂದು ಅನಿರುದ್ಧ ಅಭಿಮಾನಿಗಳು ಜೀ ಕನ್ನಡ ವಾಹಿನಿಯ ಮುಂದೆ ಪ್ರತಿಭಟನೆ ನಡೆಸಿದರು. ಏಕಾಏಕಿ ಒಬ್ಬ ನಟನಿಗೆ ಹೀಗೆ ಮಾಡುವುದು ಸರಿಯಲ್ಲ. ನಿರ್ಮಾಪಕರ ಮತ್ತು  ಅನಿರುದ್ಧ ನಡುವಿನ ಸಮರಕ್ಕೆ, ವಾಹಿನಿಯು ಮಧ್ಯಸ್ತಿಕೆ ವಹಿಸಿ ಸರಿ ಮಾಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿದರು. ಆರ್ಯವರ್ಧನ್ ಪಾತ್ರಕ್ಕೆ ಇನ್ನೂ ಯಾರೂ ಆಯ್ಕೆ ಆಗದೇ ಇರುವ ಕಾರಣಕ್ಕಾಗಿ ಮತ್ತೆ ಅನಿರುದ್ಧ ಅವರನ್ನೇ ವಾಪಸ್ಸು ಕರೆಯಿಸಿಕೊಳ್ಳಿ ಎಂಬ ಬೇಡಿಕೆ ಇಟ್ಟರು.

    ಜೊತೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕರಿಗೂ ಮತ್ತು ಅನಿರುದ್ಧ ಅವರಿಗೂ ವೈಮನಸ್ಸಿನ ಕಾರಣದಿಂದಾಗಿ ಅನಿರುದ್ಧ ಅವರನ್ನೂ ಸೀರಿಯಲ್ ನಿಂದ ಕೈ ಬಿಡಲಾಗಿದೆ. ಅನಿರುದ್ಧ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲೇ ಹಾಗೆಯೇ ಜೀವಂತವಾಗಿಟ್ಟು, ಹೊಸ ಪಾತ್ರಗಳ ಮೂಲಕ ಕಥೆಯನ್ನು ಹೇಳಲಾಗುತ್ತಿದೆ. ಹೊಸ ಪಾತ್ರ ಬಂದರೂ, ಆರ್ಯವರ್ಧನ್ ಪಾತ್ರವೂ ಕಥೆಯಲ್ಲಿದೆ. ಹಾಗಾಗಿ ಮತ್ತೆ ಅನಿರುದ್ಧ ಧಾರಾವಾಹಿ ತಂಡ ಸೇರಿಕೊಳ್ಳಲಿ ಎನ್ನುವುದು ಅಭಿಮಾನಿಗಳ ಆಸೆ. ಇದನ್ನೂ ಓದಿ: ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

    ಅನಿರುದ್ಧ ಅವರನ್ನು ಕೇವಲ ಸೀರಿಯಲ್ ನಿಂದ ಮಾತ್ರ ಕೈ ಬಿಟ್ಟಿಲ್ಲ. ಮತ್ತೆ ಅವರೊಂದಿಗೆ ಯಾರೂ ಕೆಲಸ ಮಾಡದಂತೆ, ಟೆಲಿವಿಷನ್ ಅಸೋಷಿಯೇಷನ್ ನಿರ್ಮಾಪಕರ ಸಂಘವು ನಿರ್ಣಯ ತಗೆದುಕೊಂಡಿದೆ. ಒಂದು ರೀತಿಯಲ್ಲಿ ಅದು ಬ್ಯಾನ್ ಎನ್ನಲಾಗುತ್ತಿದೆ. ಹೀಗಾಗಿ ಮತ್ತೆ ಅನಿರುದ್ಧ ಅವರನ್ನು ಸೀರಿಯಲ್ ತಂಡದಲ್ಲಿ ಸೇರಿಸಿಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ. ಮತ್ತೆ ಪಾತ್ರ ಮಾಡಲು ಅನಿರುದ್ಧ ಅವರಿಗೆ ಆಸೆ ಇದ್ದರೂ, ನಿರ್ಮಾಪಕರು ಮಾತ್ರ ಮನಸ್ಸು ಬದಲಾಯಿಸುತ್ತಿಲ್ಲ.

    ಧಾರಾವಾಹಿ ಲೋಕದ ಬಹುತೇಕ ನಿರ್ಮಾಪಕರು ಸೇರಿ, ಮಾಧ್ಯಮಗೋಷ್ಠಿಯಲ್ಲೇ ಅನಿರುದ್ಧ ಅವರ ಜೊತೆ ತಾವ್ಯಾರೂ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಜೀ ಕನ್ನಡ ವಾಹಿನಿಯ ಪ್ರತಿನಿಧಿಯೇ ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಂಡು ತಾವು ನಿರ್ಮಾಪಕರ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಏನೇ ಹೋರಾಟ ನಡೆದರೂ, ಅನಿರುದ್ಧ ಅವರಿಗೆ ಮತ್ತೆ ಆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ಎಲ್ಲ ಬಾಗಿಲುಗಳು ಮುಚ್ಚಿವೆ.

    Live Tv
    [brid partner=56869869 player=32851 video=960834 autoplay=true]

  • ಅನಿರುದ್ಧ ಇಲ್ಲದೇ ಶೂಟಿಂಗ್ ಮುಂದುವರೆಸಿದ ‘ಜೊತೆ ಜೊತೆಯಲಿ’ ಸೀರಿಯಲ್ ಡೈರೆಕ್ಟರ್

    ಅನಿರುದ್ಧ ಇಲ್ಲದೇ ಶೂಟಿಂಗ್ ಮುಂದುವರೆಸಿದ ‘ಜೊತೆ ಜೊತೆಯಲಿ’ ಸೀರಿಯಲ್ ಡೈರೆಕ್ಟರ್

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಟ್ಟು ಶೂಟಿಂಗ್ ಮುಂದುವರೆಸಿದ್ದಾರಂತೆ ನಿರ್ದೇಶಕರು. ಈ ಧಾರಾವಾಹಿಯ ಪ್ರಧಾನ ನಿರ್ದೇಶಕರು ಮತ್ತು ನಿರ್ಮಾಪಕರು ಆಗಿರುವ ಆರೂರು ಜಗದೀಶ್, ಇಂದು ಕೂಡ ಚಿತ್ರೀಕರಣವನ್ನು ಮುಂದುವರೆಸಿದ್ದಾರಂತೆ. ಈ ನಡುವೆ ಅನಿರುದ್ಧ ನಿರ್ವಹಿಸುತ್ತಿದ್ದ ಪಾತ್ರಕ್ಕಾಗಿ ಹೊಸ ಕಲಾವಿದರನ್ನೂ ಹುಡುಕುತ್ತಿದ್ದಾರಂತೆ.

    ಮಾಧ್ಯಮಗಳ ಜೊತೆ ಮಾತನಾಡಿರುವ ಆರೂರು ಜಗದೀಶ್, ‘ಜೊತೆ ಜೊತೆಯಲಿ ಧಾರಾವಾಹಿಗೆ ಕಥೆಯೇ ಹೀರೋ ಹಾಗೂ ಹಿರೋಯಿನ್. ಯಾರೇ ಇರಲಿ, ಇರದೇ ಇರಲಿ ಧಾರಾವಾಹಿ ನಡೆಯಲೇಬೇಕು. ಈ ಧಾರಾವಾಹಿ ನಂಬಿಕೊಂಡು ನನ್ನನ್ನೂ ಸೇರಿದಂತೆ ಹಲವರು ಇದ್ದಾರೆ. ಹಾಗಾಗಿ ಚಿತ್ರೀಕರಣ ಮುಂದುವರೆಸಲೇಬೇಕಿದೆ’ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಅನಿರುದ್ಧ ಅವರು ವಾಪಸ್ಸು ಬರದೇ ಇದ್ದರೂ, ಯಾರೇ ಬಂದರೂ ಶೂಟಿಂಗ್ ನಡೆಯಲಿದೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ನಿನ್ನೆ ನಡೆಯುತ್ತಿದ್ದ ಶೂಟಿಂಗ್ ನಲ್ಲಿ ಅನಿರುದ್ಧ ಅವರೇ ಬಿಟ್ಟು ಹೋಗಿರುವುದರಿಂದ, ಅವರನ್ನು ಧಾರಾವಾಹಿ ತಂಡ ಮತ್ತೆ ಕರೆಯುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ಆರೂರು ಜಗದೀಶ್ ಮತ್ತು ಅನಿರುದ್ಧ ಕೂಡಿಸಿಕೊಂಡು ವಾಹಿನಿಯು ಮಾತನಾಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಾಹಿನಿಯ ಮಧ್ಯಸ್ಥಿಕೆಯಲ್ಲಿ ಈ ಜೋಡಿ ಮತ್ತೆ ಒಂದಾಗಲಿದೆಯಾ ಅನ್ನುವ ಕುತೂಹಲ ಕೂಡ ಮೂಡಿದೆ. ಈಗಾಗಲೇ ಹಲವಾರು ಬಾರಿ ಇದೇ ರೀತಿಯಲ್ಲೇ ಮನಸ್ತಾಪ ಆಗಿರುವುದರಿಂದ ಧಾರಾವಾಹಿ ನಿರ್ಮಾಪಕರು ಇದಕ್ಕೆ ಒಪ್ಪುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ.

    ಇಂದು ಸಂಧಾನ ನಡೆಯುವ ಸಾಧ್ಯತೆಯಿದ್ದು, ಧಾರಾವಾಹಿ ತಂಡದೊಂದಿಗೆ ಮಾತನಾಡುವುದಾಗಿ ಈಗಾಗಲೇ ಅನಿರುದ್ಧ ಹೇಳಿಕೊಂಡಿದ್ದಾರೆ. ಒಂದು ವೇಳೆ ಧಾರಾವಾಹಿಯಿಂದ ಕೈ ಬಿಟ್ಟರೆ, ಪತ್ರಿಕಾಗೋಷ್ಠಿ ಮಾಡುವುದಾಗಿಯೂ ತಿಳಿಸಿದ್ದಾರೆ. ಆದರೆ, ಈ ಕುರಿತು ಮಾತನಾಡಲು ನಿರ್ಮಾಪಕ ಕಂ ನಿರ್ದೇಶಕ ಆರೂರು ಜಗದೀಶ್ ನಿರಾಕರಿಸಿದ್ದಾರೆ. ಅನಿರುದ್ಧ ಅವರ ನಡೆ ನೋಡಿಕೊಂಡು ಪ್ರತಿಕ್ರಿಯೆ ನೀಡಲಿದ್ದೇನೆ ಎಂದೂ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾಮೆರಾಗೆ ಕೈ ಮುಗಿದು ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ನಡೆದ ಅನಿರುದ್ಧ?: ಶೂಟಿಂಗ್ ಸೆಟ್ ನಲ್ಲಿ ಆಗಿದ್ದೇನು?

    ಕ್ಯಾಮೆರಾಗೆ ಕೈ ಮುಗಿದು ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ನಡೆದ ಅನಿರುದ್ಧ?: ಶೂಟಿಂಗ್ ಸೆಟ್ ನಲ್ಲಿ ಆಗಿದ್ದೇನು?

    ಜೊತೆ ಜೊತೆಯಲಿ ಸೀರಿಯಲ್ ನಿಂದ ಅನಿರುದ್ಧ ಹೊರ ನಡೆದ ಸುದ್ದಿ ಧಾರಾವಾಹಿ ಲೋಕದಲ್ಲಿ ಕೋಲಾಹಲ ಉಂಟು ಮಾಡಿದೆ. ಈ ಧಾರಾವಾಹಿ ಅನಿರುದ್ಧ ಅವರಿಗೆ ವೃತ್ತಿ ಜೀವನದಲ್ಲಿ ದೊಡ್ಡದೊಂದು ಬ್ರೇಕ್ ನೀಡಿದ್ದು ಸುಳ್ಳಲ್ಲ. ಅವರ ಮೂಲ ಹೆಸರನ್ನು ಮರೆತು, ಅನಿರುದ್ಧ ಅವರನ್ನು ಆರ್ಯವರ್ಧನ್ ಹೆಸರಿನಿಂದಲೇ ಅಭಿಮಾನಿಗಳು ಕರೆಯುವಷ್ಟು ದೊಡ್ಡ ಮಟ್ಟದಲ್ಲಿ ಅವರಿಗೆ ಹೆಸರು ತಂದುಕೊಟ್ಟಿತ್ತು. ಹೆಸರು ಮಾತ್ರವಲ್ಲ ಕೈ ತುಂಬಾ ಸಂಬಳವನ್ನೂ ಅದು ನೀಡಿತ್ತು.

    ಈ ಮಧ್ಯೆ ಧಾರಾವಾಹಿ ತಂಡಕ್ಕೂ ಮತ್ತು ಅನಿರುದ್ಧ ಅವರಿಗೆ ಮನಸ್ತಾಪವಾಗಿ, ನಿನ್ನೆಯಷ್ಟೇ ಶೂಟಿಂಗ್ ಗೆ ಬಂದಿದ್ದ ಅನಿರುದ್ಧ ಕ್ಯಾಮೆರಾಗೆ ಕೈ ಮುಗಿದು, ಶೂಟಿಂಗ್ ಸ್ಥಳದಿಂದ ಹೊರ ನಡೆದಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಮನಸ್ತಾಪ ನಿನ್ನೆಯಷ್ಟೇ ಆದದ್ದು ಅಲ್ಲವಂತೆ. ಹಲವು ದಿನಗಳಿಂದ ಧಾರಾವಾಹಿ ತಂಡಕ್ಕೂ ಮತ್ತು ಅನಿರುದ್ಧ ಅವರಿಗೂ ಮುಸುಕಿನ ಗುದ್ದಾಟ ನಡೆದೇ ಇತ್ತಂತೆ. ನಿನ್ನೇ ಅದು ಸ್ಪೋಟವಾಗಿ ಧಾರಾವಾಹಿ ಸೆಟ್ ನಿಂದ ಹೊರ ಹೋಗುವಂತೆ ಮಾಡಿದೆ. ಇದನ್ನೂ ಓದಿ:ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?

    ಧಾರಾವಾಹಿಯ ತಂಡದ ಸದಸ್ಯರು ಹೇಳುವಂತೆ, ಅನಿರುದ್ಧ ಅವರು ಹಲವು ತಿಂಗಳಿಂದ ತಂಡದೊಂದಿಗೆ ಕಿರಿಕಿರಿ ಮಾಡುತ್ತಲೇ ಇದ್ದರಂತೆ. ಶೂಟಿಂಗ್ ಗೆ ತಡವಾಗಿ ಬರುವುದು, ಡೇಟ್ ಕೊಡದೇ ಇರುವುದು ಹಾಗೂ ಬರೆದು ಡೈಲಾಗ್ ಅನ್ನು ಹೇಳದೇ ಇರುವುದು ಹೀಗೆ ನಾನಾ ರೀತಿಯ ತೊಂದರೆಗಳನ್ನು ಮಾಡುತ್ತಲೇ ಇದ್ದರಂತೆ. ನಿನ್ನೆ ಕೂಡ ಇದನ್ನೇ ಮಾಡಿದ್ದರಿಂದ, ನಿರ್ಮಾಪಕರಿಗೂ ಮತ್ತು ಅನಿರುದ್ಧ ಮಧ್ಯೆ ಸಣ್ಣದೊಂದು ಗಲಾಟೆ ಕೂಡ ಆಗಿದೆಯಂತೆ.

    ನಿನ್ನೆ ಶೂಟಿಂಗ್ ಸ್ಪಾಟ್ ನಿಂದ ಹೊರ ಹೋದ ಅನಿರುದ್ಧ ಅವರನ್ನು ಮನವೊಲಿಸುವ ಪ್ರಯತ್ನಕ್ಕಿಂತ, ಅವರ ಪಾತ್ರಕ್ಕೆ ಬೇರೆ ಕಲಾವಿದರನ್ನು ಹುಡುಕುವ ಕೆಲಸ ಈಗಾಗಲೇ ನಡೆದಿದೆಯಂತೆ. ಈ ವಿಷಯದ ಕುರಿತು ವಾಹಿನಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗುತ್ತದೆ. ಹೊಸ ಕಲಾವಿದರನ್ನು ಹುಡುಕಲು ವಾಹಿನಿಯೂ ಗ್ನೀನ್ ಸಿಗ್ನಲ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಅನಿರುದ್ಧ ಬದಲಾಗಿ ಬೇರೆ ಕಲಾವಿದರನ್ನೇ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಶೂಟ್ ಮಾಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ ಔಟ್ : ಕೆಟಿವಿಎಗೆ ಕಂಪ್ಲೆಂಟ್ ಬಂದಿಲ್ಲ ಎಂದ ಅಧ್ಯಕ್ಷ ಶಿವಕುಮಾರ್

    ‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ ಔಟ್ : ಕೆಟಿವಿಎಗೆ ಕಂಪ್ಲೆಂಟ್ ಬಂದಿಲ್ಲ ಎಂದ ಅಧ್ಯಕ್ಷ ಶಿವಕುಮಾರ್

    ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರನ್ನು ಕೈ ಬಿಡಲಾಗಿದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಶೂಟಿಂಗ್ ಸ್ಪಾಟ್ ನಲ್ಲೇ ಅವರು ನಿರ್ಮಾಪಕ ಕಂ ನಿರ್ದೇಶಕರ ಜೊತೆ ಕಿರಿಕ್ ಮಾಡಿಕೊಂಡರು ಅನ್ನುವ ಕಾರಣಕ್ಕಾಗಿ ಈ ರೀತಿ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಹಲವು ಬಾರಿ ಇದೇ ರೀತಿ ಅನಿರುದ್ಧ ಅವರು ತಂಡದೊಂದಿಗೆ ನಡೆದುಕೊಂಡಿದ್ದಾರೆ ಅನ್ನುವ ಕಾರಣಕ್ಕಾಗಿಯೇ ಕಿರುತೆರೆಯಿಂದಲೇ ಅವರನ್ನು ಬ್ಯಾನ್ ಮಾಡಲಾಗುತ್ತಿದೆ ಎನ್ನುವ ಸುದ್ದಿಯೂ ಹರಡಿದೆ.

    ಈ ಪ್ರಕರಣದ ಕುರಿತಂತೆ ಈಗಾಗಲೇ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ಗೆ ಕಂಪ್ಲೆಂಟ್ ಕೂಡ ಮಾಡಿದ್ದು ಅನಿರುದ್ಧ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ ಎನ್ನುವ ಮಾತೂ ಕೇಳಿ ಬಂದಿತ್ತು. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ವಿಷಯದ ಕುರಿತು ಯಾವುದೇ ಮಾಹಿತಿ ಕೂಡ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ:ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?

    “ಒಂದು ಸೀರಿಯಲ್ ನಿಂದ ಕಲಾವಿದರು ಬದಲಾಗುವುದು ಕಾಮನ್. ಆದರೆ, ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಏನಾಗಿದೆ ಎನ್ನುವುದು ಗೊತ್ತಿಲ್ಲ. ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಗೂ ಯಾವುದೇ ದೂರು ಕೂಡ ಬಂದಿಲ್ಲ. ಹಾಗೇನಾದರೂ ಬಂದರೆ, ಕೂರಿಸಿ ಮಾತನಾಡುತ್ತೇವೆ. ಉದ್ಯಮದ ಉಳುವಿಗಾಗಿಯೇ ನಮ್ಮ ಸಂಘಟನೆ ಇರುವುದು. ವೈಯಕ್ತಿಕವಾಗಿ ಜೊತೆ ಜೊತೆಯಲಿ ಧಾರಾವಾಹಿಯ ನಿರ್ದೇಶಕರು, ನಿರ್ಮಾಪಕರು ಹಾಗೂ ನಟ ಅನಿರುದ್ಧ ಅವರು ಹಲವು ವರ್ಷಗಳಿಂದ ಪರಿಚಿತರು. ಹಾಗೆ ಆಗಿರಲಿಕ್ಕಿಲ್ಲ ಎಂದು ಭಾವಿಸುವೆ’ ಎಂದಿದ್ದಾರೆ ಎಸ್.ವಿ. ಶಿವಕುಮಾರ್.

    Live Tv
    [brid partner=56869869 player=32851 video=960834 autoplay=true]