Tag: Aarti

  • ಆರತಿ ನನ್ನನ್ನು ಗಂಡನಾಗಿ ಅಲ್ಲ, ಚಿನ್ನದ ಮೊಟ್ಟೆಯಿಡುವ ಕೋಳಿಯಂತೆ ನಡೆಸಿಕೊಂಡಳು: ರವಿ ಮೋಹನ್

    ಆರತಿ ನನ್ನನ್ನು ಗಂಡನಾಗಿ ಅಲ್ಲ, ಚಿನ್ನದ ಮೊಟ್ಟೆಯಿಡುವ ಕೋಳಿಯಂತೆ ನಡೆಸಿಕೊಂಡಳು: ರವಿ ಮೋಹನ್

    ತ್ನಿ ಆರತಿ (Aarti) ತನ್ನನ್ನು ಚಿನ್ನದ ಮೊಟ್ಟೆ ಇಡುವ ಕೋಳಿ ರೀತಿ ನಡೆಸಿಕೊಂಡಳು. ಅವಳು ನನ್ನ ಮಕ್ಕಳನ್ನು ಸಹ ನೋಡದಂತೆ ತಡೆಯುತ್ತಾಳೆ. ಈ ದುಸ್ಥಿತಿ ಯಾವ ತಂದೆಗೆ ಬರಬಾರದು ಎಂದು ನಟ ರವಿ ಮೋಹನ್ (Ravi Mohan) ಅಳಲನ್ನು ತೋಡಿಕೊಂಡಿದ್ದಾರೆ.

    ರವಿ ಮೋಹನ್ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಆರತಿ, ಇತ್ತೀಚೆಗೆ ರವಿ ಮೋಹನ್ ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ರವಿ ಮೋಹನ್‌ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ. ಹೇಳಿಕೆಯಲ್ಲಿ ಆರತಿಯ ಹೆಸರನ್ನು ಉಲ್ಲೇಖಿಸದೆ, ಮಾಜಿ ಪತ್ನಿ ಎಂದು ಮಾತ್ರ ಹೇಳಿದ್ದಾರೆ. ಇದು ಮೊದಲ ಮತ್ತು ಕೊನೆಯ ಹೇಳಿಕೆ ಎಂದೂ ಸಹ ರವಿ ಹೇಳಿಕೊಂಡಿದ್ದಾರೆ.

    ಹೆಂಡತಿಯಿಂದ ದೂರ ಆಗಿದ್ದೇನೆ, ಮಕ್ಕಳಿಂದ ಅಲ್ಲ. ಮಕ್ಕಳನ್ನ ಬಳಸಿಕೊಂಡು ಹಣ ಮಾಡಲು ನೋಡ್ತಿದ್ದಾರೆ. ಆರತಿ ಜೊತೆ ಜೀವನ ಮುಂದುವರಿಸಲು ಪ್ರಯತ್ನಿಸಿದೆ. ಆದರೆ ನನ್ನನ್ನು ಹಣ ಮಾಡುವ ಯಂತ್ರದಂತೆ ನೋಡಿದ್ರು. ಗಂಡನಾಗಿ ಗೌರವ ಕೊಡಲಿಲ್ಲ. ಮಕ್ಕಳನ್ನ ನೋಡಲು ಬಿಡುತ್ತಿಲ್ಲ. 5 ವರ್ಷದಿಂದ ನನ್ನ ದುಡಿಮೆಯನ್ನೆಲ್ಲಾ ಆರತಿ ಮತ್ತು ಅವರ ಕುಟುಂಬ ಉಪಯೋಗಿಸಿಕೊಂಡಿದೆ ಎಂದು ರವಿ ಮೋಹನ್‌ ಹೇಳಿದ್ದಾರೆ.

    ಮೇ 8ರಂದು ರವಿ ಮತ್ತು ಕೆನಿಶಾ ಚೆನ್ನೈನಲ್ಲಿ ನಡೆದ ನಿರ್ಮಾಪಕ ಇಶಾರಿ ಗಣೇಶ್ ಅವರ ಮಗಳ ಮದುವೆಗೆ ಹಾಜರಾಗಿದ್ದರು. ಅಲ್ಲಿಂದ ಮತ್ತಷ್ಟು ನಟನ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಬೆನ್ನಲ್ಲೇ ಪತ್ನಿ ಆರತಿ ಪೋಸ್ಟ್‌ ಹಂಚಿಕೊಂಡಿದ್ದರು. ಇದೀಗ ಇದರ ಬೆನ್ನಲ್ಲೇ ಮತ್ತೊಮ್ಮೆ ರವಿ , ಗಾಯಕಿ ಆರತಕ್ಷತೆಯಲ್ಲಿ (Ravi Mohan-Kenishaa Francis) ಒಟ್ಟಿಗೆ ಕಾಣಿಸಿಕೊಂಡಿದ್ದರು. ಆರತಿ ಮಾಡಿದ ಆರೋಪಗಳಿಂದ ವಿಚಲಿತರಾಗದ ರವಿ ಮೋಹನ್, ಕೆನಿಶಾ ಫ್ರಾನ್ಸಿಸ್ ಜೊತೆಗೆ ಮೇ 10 ರಂದು ನಡೆದ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.

    ಆರತಿ ಪೋಸ್ಟ್‌ನಲ್ಲಿ ಇದ್ದಿದ್ದೇನು?
    ನನ್ನ ಮಕ್ಕಳು 10 ಮತ್ತು 14 ವರ್ಷ ವಯಸ್ಸಿನವರು. ಅವರಿಗೆ ಭದ್ರತೆ ಬೇಕು, ಅವರು ಕಾನೂನು ಷರತ್ತುಗಳನ್ನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವರು, ನಾನು ಇಂದು ಹೆಂಡತಿಯಾಗಿ ಮಾತನಾಡುವುದಿಲ್ಲ. ಅನ್ಯಾಯಕ್ಕೊಳಗಾದ ಮಹಿಳೆಯಾಗಿಯೂ ಅಲ್ಲ. ತಂದೆ ಕೇವಲ ಬಿರುದಲ್ಲ. ಅದು ಒಂದು ಜವಾಬ್ದಾರಿ. ನಾನು ಮತ್ತು ಕಾನೂನು ಇಬ್ಬರೂ ಬೇರೆ ರೀತಿಯಲ್ಲಿ ನಿರ್ಧರಿಸುವವರೆಗೆ ನಾನು ಆರತಿ ರವಿಯಾಗಿಯೇ ಇರುತ್ತೇನೆ. ಮಾಧ್ಯಮಗಳು, ಕಾನೂನು ಪ್ರಕ್ರಿಯೆ ಮುಗಿಯುವವರೆಗೆ ನನ್ನನ್ನು ಮಾಜಿ ಪತ್ನಿ ಎಂದು ಕರೆಯಬಾರದು ಎಂದು ಮನವಿ ಮಾಡಿದ್ದರು.

  • ವೇಶ್ಯಾವಾಟಿಕೆ ದಂಧೆ: ಕಿರುತೆರೆ ನಟಿ ಆರತಿ ಅರೆಸ್ಟ್

    ವೇಶ್ಯಾವಾಟಿಕೆ ದಂಧೆ: ಕಿರುತೆರೆ ನಟಿ ಆರತಿ ಅರೆಸ್ಟ್

    ಕಿರುತೆರೆಯ ಖ್ಯಾತ ನಟಿ ಆರತಿ ಹರೀಶ್ ಚಂದ್ರ ಮಿತ್ತಲ್ (Aarti Harish Chandra Mittal) ಅವರನ್ನು ವೇಶ್ಯಾವಾಟಿಕೆ (Prostitution) ಆರೋಪದ ಅಡಿ ಪೊಲೀಸರು (Police)ಬಂಧಿಸಿದ್ದಾರೆ . ಮಾಡೆಲ್ ಗಳನ್ನು ಬಳಕೆ ಮಾಡಿಕೊಂಡು ಆರತಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಗೊತ್ತಾಗಿದೆ. ಮಾಹಿತಿ ಸಿಗುತ್ತಿದ್ದಂತೆಯೇ ಆರತಿಯನ್ನು ಬೆನ್ನತ್ತಿದ್ದ ಪೊಲೀಸರು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ.

    ಅಪ್ನಾಪನ್ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಆರತಿ, ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಗುರುತಿಸಿಕೊಂಡವರು. ಇವುಗಳ ಜೊತೆಗೆ ಮುಂಬೈನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಗ್ರಾಹಕರ ಮಾರುವೇಶದಲ್ಲಿ ಆರತಿಯನ್ನು ಸಂಪರ್ಕಿಸಿರುವ ಪೊಲೀಸರು ನಂತರ ಆರತಿಯನ್ನು ಬಂಧಿಸಿದ್ದಾರೆ. ಇವರ ಜೊತೆ ರಾಕೆಟ್ ನಲ್ಲಿ ಇಬ್ಬರು ಮಾಡೆಲ್ ಗಳು ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪೊಲೀಸ್ ಅಧಿಕಾರಿ ಮನೋಜ್ ಸುತಾರ್ ಅವರಿಗೆ ಆರತಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಬಗ್ಗೆ ಸುಳಿವು ಸಿಕ್ಕಿತ್ತು. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿ ತಮಗೆ ಇಬ್ಬರು ಹುಡುಗಿಯನ್ನು ಕಳುಹಿಸುವಂತೆ ಆರತಿಯನ್ನು ಸಂಪರ್ಕಿಸಿದ್ದಾರೆ. 60 ಸಾವಿರ ಬೇಡಿಕೆ ಇಟ್ಟು, ಹುಡುಗಿಯರನ್ನು ಕಳುಹಿಸುವುದಾಗಿ ಆರತಿ ತಿಳಿಸಿದ್ದರು. ಹಣ ಕೊಡುವುದಾಗಿಯೂ ಅಧಿಕಾರಿ ತಿಳಿಸಿದ್ದರು.

    ಹೋಟೆಲ್ ರೂಮ್ ಗೆ ತೆರಳುವ ಮುನ್ನ ಸ್ವತಃ ಆರತಿಯೇ ಅಧಿಕಾರಿಗಳಿಗೆ ಕಾಂಡೋಮ್ ನೀಡಿದ್ದಾರೆ. ಇವೆಲ್ಲವನ್ನೂ ಪೊಲೀಸರು ರೆಕಾರ್ಡ್ ಮಾಡಿಕೊಂಡೇ ಆರತಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆರತಿ ಜೊತೆ ಯಾರೆಲ್ಲ ಇದ್ದಾರೆ ಎನ್ನುವುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

  • ನರ್ಮದಾ ಘಾಟ್‍ನಲ್ಲಿ ಪ್ರಿಯಾಂಕಾ ಗಾಂಧಿ ಜೊತೆ ಆರತಿ ಬೆಳಗಿದ ರಾಹುಲ್ ಗಾಂಧಿ

    ನರ್ಮದಾ ಘಾಟ್‍ನಲ್ಲಿ ಪ್ರಿಯಾಂಕಾ ಗಾಂಧಿ ಜೊತೆ ಆರತಿ ಬೆಳಗಿದ ರಾಹುಲ್ ಗಾಂಧಿ

    ಭೋಪಾಲ್: ಕಾಂಗ್ರೆಸ್‍ನ (Congress) ಭಾರತ್ ಜೋಡೋ ಯಾತ್ರೆ (Bharat Jodo Yatra) ಮಧ್ಯಪ್ರದೇಶಕ್ಕೆ ತಲುಪಿದ್ದು, ಸಂಸದ ರಾಹುಲ್ ಗಾಂಧಿ (Rahul Gandhi) ಸಹೋದರಿ ಪ್ರಿಯಾಂಕಾ ಗಾಂಧಿ (Priyanka Gandhi) ಜೊತೆ ಸೇರಿ ನರ್ಮದಾ (Narmada) ನದಿಗೆ (River) ಆರತಿ (Aarti) ಬೆಳಗಿದ್ದಾರೆ.

    ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬ್ರಹ್ಮಪುರಿ ಘಾಟ್‍ನಲ್ಲಿರುವ ನರ್ಮದಾ ನದಿಗೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಆರತಿ ಬೆಳಗಿ ಬಳಿಕ ಬೆಟ್ಟದ ಮೇಲಿರುವ ಪ್ರಸಿದ್ಧ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇವರಿಗೆ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್, ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಮತ್ತು ಅವರ ಮಗ ರೈಹಾನ್ ವಾದ್ರಾ ಸಾಥ್ ನೀಡಿದರು. ಇದನ್ನೂ ಓದಿ: ಕುಕ್ಕೆಯ ಬಳಿಕ ಬೆಂಗಳೂರಿಗೆ ತಟ್ಟಿದ ಧರ್ಮ ದಂಗಲ್

    ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಭಾರತ್ ಜೋಡೋ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ದೇಶದಲ್ಲಿ ಶಾಂತಿ ಮತ್ತು ಏಕತೆ ನೆಲೆಸಲಿ. ತಾಯಿ ನರ್ಮದಾ ಎಲ್ಲರಿಗೂ ಶುಭವನ್ನು ತರಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಹಲವು ಫೋಟೋಗಳನ್ನು ಪೋಸ್ಟ್ ಮಾಡಿದೆ. ಇದನ್ನೂ ಓದಿ: ಈಗಲೂ ಮೋದಿ ನಂ.1 ಜನಪ್ರಿಯ ನಾಯಕ

    ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದು, ಕಳೆದೆರಡು ದಿನಗಳಿಂದ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ನಿನ್ನೆ ರಾಹುಲ್ ಗಾಂಧಿ ಜೊತೆ ಬಾಕ್ಸರ್ ವಿಜೇಂದರ್ ಸಿಂಗ್ (Vijender Singh) ಕೂಡ ಪಾಲ್ಗೊಂಡಿದ್ದರು. ಇದೀಗ ಯಾತ್ರೆ ಮಧ್ಯಪ್ರದೇಶದಲ್ಲಿ ಸಾಗುತ್ತಿದ್ದು, ಮುಂದೆ ರಾಜಸ್ಥಾನಕ್ಕೆ ಪ್ರವೇಶ ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಉದ್ಯಮ ಪಾಲುದಾರರಿಂದ 4.5 ಕೋಟಿ ವಂಚನೆ – ಸೆಹ್ವಾಗ್ ಪತ್ನಿ ಆರತಿ ದೂರು

    ಉದ್ಯಮ ಪಾಲುದಾರರಿಂದ 4.5 ಕೋಟಿ ವಂಚನೆ – ಸೆಹ್ವಾಗ್ ಪತ್ನಿ ಆರತಿ ದೂರು

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಸೆಹ್ವಾಗ್ ಅವರು ತಮ್ಮ ಉದ್ಯಮ ಪಾಲುದಾರರ ವಿರುದ್ಧ ದೂರು ನೀಡಿದ್ದು, 4.5 ಕೋಟಿ ರೂ. ಸಾಲ ಪಡೆಯಲು ನಕಲು ಸಹಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

    ಅಂದಹಾಗೇ ಆರತಿ ಅವರು ಕೃಷಿ ಆಧಾರಿತ ಕಂಪನಿಯಲ್ಲಿ ಪಾಲುದಾರರಾಗಿದ್ದು, ಸಂಸ್ಥೆಯ ಇತರೇ ಪಾಲುದಾರರು ತಮ್ಮ ಅರಿವಿಗೆ ಬಾರದೆಯೇ ತಮ್ಮ ಸಹಿಯನ್ನು ನಕಲು ಮಾಡಿದ್ದಾರೆ. ಆ ಮೂಲಕ 4.5 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

    ಸಾಲ ಪಡೆಯಲು ತಮ್ಮ ಪತಿ ಸೆಹ್ವಾಗ್ ಅವರ ಹೆಸರನ್ನು ಇಬ್ಬರು ಆರೋಪಿಗಳು ಬಳಸಿಕೊಂಡಿದ್ದಾರೆ. ಸಾಲ ನೀಡಿದವರಿಗೆ ಎರಡು ಪೋಸ್ಟ್ ಡೇಟೆಡ್ ಚೆಕ್ ನೀಡಿದ್ದಾರೆ. ಆದರೆ ಅವರು ಸಾಲ ಮರು ಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಿವರಿಸಿದ್ದಾರೆ.

    ಸಾಲ ಪಡೆದು ಮರುಪಾವತಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸಾಲಗಾರರು ಕೋರ್ಟಿಗೆ ಅರ್ಜಿ ಸಲ್ಲಿದ್ದು, ಈ ವೇಳೆ ವಿಚಾರ ತಿಳಿದು ಬಂದಿದೆ. ಆದರೆ ಎಂದೂ ನಾನು ಅವರಿಗೆ ಯಾವುದೇ ದಾಖಲೆ ಮೇಲೆ ಸಹಿ, ಒಪ್ಪಂದ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಆರತಿಯವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ), 468 (ನಕಲಿ ದಾಖಲೆ ಸೃಷ್ಟಿಸಿ ವಂಚನೆ), 471 (ಫೋರ್ಜರಿ) ಮತ್ತು 34ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.