Tag: Aaradhya

  • ‘ಖುಷಿ’ ಚಿತ್ರದ ಕಥೆ ಕೇಳಿದಾಗ ಸಮಂತಾ ಹೊರತಾಗಿ ಬೇರೆ ನಟಿ ಕಾಣಲಿಲ್ಲ: ವಿಜಯ್

    ‘ಖುಷಿ’ ಚಿತ್ರದ ಕಥೆ ಕೇಳಿದಾಗ ಸಮಂತಾ ಹೊರತಾಗಿ ಬೇರೆ ನಟಿ ಕಾಣಲಿಲ್ಲ: ವಿಜಯ್

    ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ (Vijay Devarakonda) ಮತ್ತು ಸಮಂತಾ (Samantha) ಕಾಂಬಿನೇಷನ್ ನ ‘ಖುಷಿ’ (Khushi) ಸಿನಿಮಾದ ಟ್ರೈಲರ್ (Trailer) ರಿಲೀಸ್ ಕಾರ್ಯಕ್ರಮ ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಂಡರ ವಿಜಯ್ ದೇವರಕೊಂಡ. ಸಮಂತಾ ಈ ಸಿನಿಮಾದಲ್ಲಿ ಆರಾಧ್ಯ ಹೆಸರಿನ ಪಾತ್ರ ಮಾಡಿದ್ದು, ಸಿನಿಮಾ ಕಥೆ ಕೇಳಿದಾಗ ಮೊದಲು ನೆನಪಾಗಿದ್ದ ನಟಿ ಸಮಂತಾ ಎಂದರು ವಿಜಯ್.

    ‘ಖುಷಿ’ ಸಿನಿಮಾದ ಟ್ರೈಲರ್ ಮೆಚ್ಚುಗೆಗೆ ಪಾತ್ರವಾಗಿದ್ದು ಕಾಶ್ಮೀರಕ್ಕೆ ಹೋಗುವ ಕ್ರಿಶ್ಚಿಯನ್ ಯುವಕ ವಿಪ್ಲವ್ ಹಾಗೂ ಮುಸ್ಲಿಂ ಯುವತಿ ಬೇಗಂ ಭೇಟಿಯಾಗುತ್ತದೆ. ಆಕೆಯನ್ನು ನೋಡಿ ನಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಆಕೆ ಮುಸ್ಲಿಂ ಅಲ್ಲ ಬ್ರಾಹ್ಮಣ ಕುಟುಂಬದ ಯುವತಿ ಅನ್ನೋದು ಗೊತ್ತಾಗುತ್ತದೆ. ಅಂದರೆ ಇದು ಕ್ರಿಶ್ಚಿಯನ್ ಯುವಕ ಹಾಗೂ ಹಿಂದೂ ಯುವತಿಯ ಪ್ರೇಮಕಥೆ ಅನ್ನೋದು ಅರ್ಥವಾಗುತ್ತದೆ.

    ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪುವುದಿಲ್ಲ. ನಾಯಕಿಯ ತಂದೆಯಂತೂ ಇವರಿಬ್ಬರು ಮದುವೆ ಆದರೆ ಭಾರೀ ಸಮಸ್ಯೆಗಳಾಗುತ್ತದೆ ಎಂದು ಭವಿಷ್ಯ ನುಡಿಯುತ್ತಾನೆ. ಆದರೆ ಅದನ್ನೆಲ್ಲಾ ಮೀರಿ ಇಬ್ಬರು ಮದುವೆ ಆಗಿ ಒಂದು ವರ್ಷ ನಾವು ಆದರ್ಶ ದಂಪತಿಗಳಾಗಿ ಬದುಕಿ ತೋರಿಸುತ್ತೇವೆ ಎಂದು ಸವಾಲು ಹಾಕಿ ಮದುವೆ ಆಗುತ್ತಾರೆ. ಮದುವೆ ನಂತರ ಇಬ್ಬರ ನಡುವೆ ನಡೆಯುವ  ಜಗಳ ಶುರುವಾಗುತ್ತದೆ. ಆಗಿದ್ದರೆ ಮುಂದೇನಾಗುತ್ತದೆ ಅನ್ನೋವುದನ್ನು ನೀವು ಸಿನಿಮಾದಲ್ಲಿ ನೋಡಬೇಕು. ಇದನ್ನೂ ಓದಿ:ನಾನಿನ್ನೂ ಸಿಂಗಲ್, ದಿಶಾ ಜೊತೆಗಿನ ಬ್ರೇಕಪ್ ಬಗ್ಗೆ ಟೈಗರ್ ಶ್ರಾಫ್ ಸ್ಪಷ್ಟನೆ

    ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾವಾಗಿರುವ ಖುಷಿಗೆ ಶಿವ ನಿರ್ವಣ ಆಕ್ಷನ್ ಕಟ್ ಹೇಳಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಜಯರಾಂ, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಜ್ಯೂಲಿ ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲಾ ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

    ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ‘ಖುಷಿ’ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗಳನ್ನು ಟ್ರೋಲ್ ಮಾಡಿದ್ದಕ್ಕೆ ಖಡಕ್ ಉತ್ತರ ನೀಡಿದ ಅಭಿಷೇಕ್ ಬಚ್ಚನ್!

    ಮಗಳನ್ನು ಟ್ರೋಲ್ ಮಾಡಿದ್ದಕ್ಕೆ ಖಡಕ್ ಉತ್ತರ ನೀಡಿದ ಅಭಿಷೇಕ್ ಬಚ್ಚನ್!

    ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಐಶ್ವರ್ಯ ರೈಗೆ ಒಳ್ಳೆಯ ಗಂಡ ಹಾಗೂ ಆರಾಧ್ಯಗೆ ಒಳ್ಳೆಯ ತಂದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಆರಾಧ್ಯನನ್ನು ಟ್ರೋಲ್ ಮಾಡಿದ್ದಕ್ಕೆ ಅಭಿಷೇಕ್ ಬಚ್ಚನ್ ಖಡಕ್ ಉತ್ತರ ನೀಡಿದ್ದಾರೆ.

    ಇತ್ತೀಚಿಗೆ ನಟಿ ಐಶ್ವರ್ಯ ಪಾಲ್ಗೊಂಡ ಎಲ್ಲಾ ಕಾರ್ಯಕ್ರಮದಲ್ಲಿ ಆರಾಧ್ಯ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಆ ಕಾರ್ಯಕ್ರಮದ ಫೋಟೋಗಳನ್ನು ಐಶ್ವರ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಇದನ್ನು ನೋಡಿ ಶೆರಿನ್ ಬ್ಯಾಟ್ಡಿ ಎಂಬಾಕೆ, ಅಭಿಷೇಕ್ ನಿಮ್ಮ ಮಗಳು ಶಾಲೆಗೆ ಹೋಗುತ್ತಿದ್ದಾಳಾ ಎಂದು ಪ್ರಶ್ನಿಸಿ ಎಂದು ಟ್ವೀಟ್ ಮಾಡಿದ್ದಾರೆ.

    ಅಭಿಷೇಕ್ ನಿಮ್ಮ ಮಗಳು ಸ್ಕೂಲ್ ಗೆ ಹೋಗ್ತಿಲ್ವ? ತಾಯಿಯ ಜೊತೆ ಟ್ರೀಪ್ ಗೆ ಹೋಗಲು ಶಾಲೆ ಅವರು ಹೇಗೆ ಅನುಮತಿ ನೀಡುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ, ಯಾವಾಗ ನೊಡಿದ್ದರು ತನ್ನ ಅಹಂಕಾರದ ತಾಯಿ ಜೊತೆ ಕೈ-ಕೈ ಹಿಡಿದು ತಿರುಗುತ್ತಿರುತ್ತಾಳೆ. ಆಕೆಯ ಬಾಲ್ಯ ಸಾಮಾನ್ಯವಾಗಿಲ್ಲ ಎಂದು ಶೆರಿನ್ ಬ್ಯಾಟ್ಡಿ ಟ್ವೀಟ್ ಮಾಡಿದ್ದರು.

    ಶೆರಿನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್ “ಮೇಡಂ, ನನಗೆ ತಿಳಿದ ಹಾಗೆ ವಾರಾಂತ್ಯದಲ್ಲಿ ಹಲವು ಶಾಲೆಗಳು ಮುಚ್ಚಿರುತ್ತದೆ. ಅವಳು ವಾರದ ದಿನಗಳಲ್ಲಿ ಮಾತ್ರ ಶಾಲೆಗೆ ಹೋಗುತ್ತಾಳೆ. ಬಹುಶಃ ನಿಮ್ಮ ಟ್ವೀಟ್ ನಲ್ಲಿ ನೀವು ನಿಮ್ಮ ಕಾಗುಣಿತವನ್ನು ಪರಿಗಣಿಸಬೇಕು” ಎಂದು ಟ್ವೀಟ್ ಮಾಡಿ ಉತ್ತರ ನೀಡಿದ್ದಾರೆ.

    ಅಭಿಷೇಕ್ ಆ ಟ್ವೀಟ್ ಗೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ಶೆರಿನ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.