Tag: aap

  • ಬಿಜೆಪಿಯಿಂದ ಆಪ್‌ ಅಭ್ಯರ್ಥಿಗಳಿಗೆ 15 ಕೋಟಿ ಆಫರ್‌ – ಕೇಜ್ರಿವಾಲ್‌ ನಿವಾಸಕ್ಕೆ ಎಸಿಬಿ ಭೇಟಿ, ನೋಟಿಸ್‌

    ಬಿಜೆಪಿಯಿಂದ ಆಪ್‌ ಅಭ್ಯರ್ಥಿಗಳಿಗೆ 15 ಕೋಟಿ ಆಫರ್‌ – ಕೇಜ್ರಿವಾಲ್‌ ನಿವಾಸಕ್ಕೆ ಎಸಿಬಿ ಭೇಟಿ, ನೋಟಿಸ್‌

    ನವದೆಹಲಿ: ಬಿಜೆಪಿ (BJP) ತನ್ನ ಅಭ್ಯರ್ಥಿಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ (Arvind Kejriwal) ಆರೋಪ ಮಾಡಿದ ಬೆನ್ನಲ್ಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ(ACB) ತನಿಖೆಗೆ ಆದೇಶಿಸಿದ್ದಾರೆ.

    ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಎಸಿಬಿ ಅಧಿಕಾರಿಗಳು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ನೋಟಿಸ್‌ ನೀಡಿದ್ದಾರೆ.

    ಬಿಜೆಪಿ ಖರೀದಿಗೆ ಪ್ರಯತ್ನಿಸಿದ 16 ಆಪ್‌ ಶಾಸಕರು ಯಾರು? ಆ ಶಾಸಕರ ಫೋನ್‌ ನಂಬರ್‌ ಯಾವುದು? ಆರೋಪಕ್ಕೆ ಸಾಕ್ಷ್ಯ ನೀಡುವಂತೆ ಎಸಿಬಿ ನೋಟಿಸ್‌ನಲ್ಲಿ ತಿಳಿಸಿದೆ.

    ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಸಿಬಿ ತನಿಖೆಗೆ ಆದೇಶಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ. ಇದನ್ನೂ ಓದಿ: USAID| 294 ಮಂದಿ ಬಿಟ್ಟು 13,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್‌ ನೀಡಿದ ಟ್ರಂಪ್‌!


    ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಕೇಜ್ರಿವಾಲ್‌, ವಿಧಾನಸಭಾ ಚುನಾವಣಾ ಫಲಿತಾಂಶ (Delhi Election Results) ಪ್ರಕಟವಾಗುವ ಮುನ್ನ ಬಿಜೆಪಿ 16 ಆಪ್‌ ಅಭ್ಯರ್ಥಿಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

    ಎಎಪಿ ಅಭ್ಯರ್ಥಿಗಳು ಬಿಜೆಪಿ ಸೇರಿದರೆ ಸಚಿವ ಸ್ಥಾನದ ಜೊತೆ 15 ಕೋಟಿ ರೂ.ಗಳ ನೀಡುವ ಆಫರ್‌ ನೀಡಲಾಗಿದೆ ಅವರು ಆರೋಪಿಸಿದ್ದರು.

     

  • Delhi Exit Poll| ಬಿಜೆಪಿಗೆ ದೆಹಲಿ ಗದ್ದುಗೆ – Axis My India

    Delhi Exit Poll| ಬಿಜೆಪಿಗೆ ದೆಹಲಿ ಗದ್ದುಗೆ – Axis My India

    ನವದೆಹಲಿ: 27 ವರ್ಷಗಳ ಬಳಿಕ ದೆಹಲಿಯ (Delhi) ಅಧಿಕಾರದ ಚುಕ್ಕಾಣಿ ಬಿಜೆಪಿ (BJP) ಹಿಡಿಯಲಿದೆ ಎಂದು ಮತ್ತೊಂದು ಸಮೀಕ್ಷೆ ತಿಳಿಸಿದೆ.

    Axis My India ಇಂದು ತನ್ನ ಚುನಾಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ್ದು, ಬಿಜೆಪಿ + 45-55, ಆಪ್‌ 15-25, ಕಾಂಗ್ರೆಸ್‌ 0-1 ಸ್ಥಾನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.

     

    ಬಿಜೆಪಿ+(ಬಿಜೆಪಿ, ಜೆಡಿಯು, ಎಲ್‌ಜೆಪಿ) 48% ಮತ ಪಡೆದರೆ ಆಪ್‌ 42%, ಕಾಂಗ್ರೆಸ್‌ 3% ಮತ ಪಡೆಯಲಿದೆ ಎಂದು ತಿಳಿಸಿದೆ.

    ಇಲ್ಲಿಯವರೆಗೆ ಪ್ರಕಟವಾದ 11 ಸಮೀಕ್ಷೆಗಳಲ್ಲಿ 9 ಸಮೀಕ್ಷೆಗಳು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರೆ 2 ಸಮೀಕ್ಷೆಗಳು ಆಪ್‌ ಜಯಗಳಿಸಲಿದೆ ಎಂದು ತಿಳಿಸಿದೆ.

     

    ಫೆ.8 ರಂದು ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 70 ಸ್ಥಾನಗಳಿದ್ದು ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.

     

  • Delhi Exit Poll| ಇಂದು ಸಮೀಕ್ಷೆ ಇಲ್ಲ, ನಾಳೆ ಪ್ರಕಟಿಸಲಿದೆ ಟುಡೇಸ್‌ ಚಾಣಕ್ಯ

    Delhi Exit Poll| ಇಂದು ಸಮೀಕ್ಷೆ ಇಲ್ಲ, ನಾಳೆ ಪ್ರಕಟಿಸಲಿದೆ ಟುಡೇಸ್‌ ಚಾಣಕ್ಯ

    ನವದೆಹಲಿ: ಇಂದು ದೆಹಲಿ ವಿಧಾನಸಭಾ ಚುನಾವಣೆಯ (Delhi Election) ಚುನಾವಣೋತ್ತರ ಸಮೀಕ್ಷೆಯನ್ನು ( Delhi Exit Poll) ಟುಡೇಸ್‌ ಚಾಣಕ್ಯ ಪ್ರಕಟಿಸುವುದಿಲ್ಲ\

    ನಮ್ಮ ಚುನಾವಣಾ ವಿಶ್ಲೇಷಣೆಯ ವಿವರಗಳನ್ನು ಗುರುವಾರ ಸಂಜೆ 7 ಗಂಟೆಗೆ ಪ್ರಕಟಿಸಲಾಗುವುದು ಎಂದು ಎಕ್ಸ್‌ನಲ್ಲಿ ಟುಡೇಸ್‌ ಚಾಣಕ್ಯ (Todays Chanakya) ಹೇಳಿದೆ.

    ಒಟ್ಟು 70 ಕ್ಷೇತ್ರಗಳಿರುವ ದೆಹಲಿಯಲ್ಲಿ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಫೆ. 8 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: Delhi Exit Poll | 27 ವರ್ಷದ ಬಳಿಕ ಬಿಜೆಪಿಗೆ ಅಧಿಕಾರ!

     

    2020ರ ಚುನಾವಣೆಯಲ್ಲಿ ಆಪ್‌ 62, ಬಿಜೆಪಿ 8 ಸ್ಥಾನಗಳನ್ನು ಗೆದ್ದಿದ್ದವು. 20215 ರ ಚುನಾವಣೆಯಲ್ಲಿ ಆಪ್‌ 67, ಬಿಜೆಪಿ 3 ಸ್ಥಾನಗಳನ್ನು ಗೆದ್ದುಕೊಂಡಿತ್ತು. Delhi Exit Poll | ದೆಹಲಿಯಲ್ಲಿ ಆಪ್‌ ಹ್ಯಾಟ್ರಿಕ್‌ ಸಾಧನೆ: WeePreside ಸಮೀಕ್ಷೆ

    2013 ರ ಚುನಾವಣೆಯಲ್ಲಿ ಬಿಜೆಪಿ 31, ಆಪ್‌ 28, ಕಾಂಗ್ರೆಸ್‌ 08 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಇತರರು ಮೂರು ಸ್ಥಾನ ಗೆದ್ದಿದ್ದರು. ಆಪ್‌ಗೆ ಕಾಂಗ್ರೆಸ್‌ ಬೆಂಬಲ ನೀಡಿದ್ದರಿಂದ ಕೇಜ್ರಿವಾಲ್‌ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.

     

    ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ (BJP) ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.

  • Delhi Exit Poll | ದೆಹಲಿಯಲ್ಲಿ ಆಪ್‌ ಹ್ಯಾಟ್ರಿಕ್‌ ಸಾಧನೆ: WeePreside ಸಮೀಕ್ಷೆ

    Delhi Exit Poll | ದೆಹಲಿಯಲ್ಲಿ ಆಪ್‌ ಹ್ಯಾಟ್ರಿಕ್‌ ಸಾಧನೆ: WeePreside ಸಮೀಕ್ಷೆ

    ನವದೆಹಲಿ: ಬಹುತೇಕ ಸಮೀಕ್ಷೆಗಳು ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದರೆ ಕೆಲ ಸಮೀಕ್ಷೆಗಳು ಆಪ್‌ ಜಯಗಳಿಸಲಿದೆ ಎಂದು ಹೇಳಿದೆ. ಈ ಚುನಾವಣೆಯಲ್ಲೂ ಆಪ್‌ ಜಯಗಳಿಸಿದರೆ ಆಪ್‌ ಹ್ಯಾಟ್ರಿಕ್‌ ಸಾಧನೆ ಮಾಡಿದಂತಾಗುತ್ತದೆ.

    WeePreside ಸಮೀಕ್ಷೆಯ ಪ್ರಕಾರ ಆಪ್‌ 46-52, ಬಿಜೆಪಿ 18-23, ಕಾಂಗ್ರೆಸ್‌ 0-1 ಸ್ಥಾನ ಗೆಲ್ಲಬಹುದು.  ದೈನಿಕ್‌ ಭಾಸ್ಕರ್‌ ಸಮೀಕ್ಷೆ ಆಪ್‌ 43-47, ಬಿಜೆಪಿ 23-27 ಸ್ಥಾನ ಪಡೆದರೆ ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಲಿದೆ ಎಂದು ಹೇಳಿದೆ. ಇದನ್ನೂ ಓದಿ: | 27 ವರ್ಷದ ಬಳಿಕ ಬಿಜೆಪಿಗೆ ಅಧಿಕಾರ! ಸಮೀಕ್ಷೆಗಳು ಹೇಳೋದು ಏನು?

    2020ರ ಚುನಾವಣೆಯಲ್ಲಿ ಆಪ್‌ 62, ಬಿಜೆಪಿ 8 ಸ್ಥಾನಗಳನ್ನು ಗೆದ್ದಿದ್ದವು. 20215 ರ ಚುನಾವಣೆಯಲ್ಲಿ ಆಪ್‌ 67, ಬಿಜೆಪಿ 3 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಒಟ್ಟು 70 ಕ್ಷೇತ್ರಗಳಿರುವ ದೆಹಲಿಯಲ್ಲಿ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಫೆ. 8 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

  • Delhi Election | ಇಂದು 70 ಕ್ಷೇತ್ರಗಳಿಗೆ ಚುನಾವಣೆ

    Delhi Election | ಇಂದು 70 ಕ್ಷೇತ್ರಗಳಿಗೆ ಚುನಾವಣೆ

    ನವದೆಹಲಿ: ಅಸೆಂಬ್ಲಿ ಚುನಾವಣೆಯಿಂದಾಗಿ ಚಳಿಗಾಲದಲ್ಲೂ ದೆಹಲಿ ರಾಜಕೀಯ (Delhi Election) ಬಿಸಿಯೇರಿದ್ದು ಇಂದು 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಆರಂಭಗೊಂಡಿದೆ.

    ಬೆಳಗ್ಗೆ 7 ಗಂಟೆಯಿಂದ ಸಂಜೆ 6:30 ಗಂಟೆವರೆಗೂ ಮತದಾನ ನಡೆಯಲಿದ್ದು 1.56 ಕೋಟಿ ಮತದಾರರು ಮತ (Vote) ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷಿಸಿಕೊಳ್ತಿದ್ದಾರೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ದ್ರಾವಿಡ್‌ ಕಾರಿಗೆ ಗುದ್ದಿದ ಗೂಡ್ಸ್‌ ಆಟೋ

     

    ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ (BJP) ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.

    ಆಯೋಗದ ಪಾವಿತ್ರ್ಯತೆಗೆ ಮಸಿ ಬಳಿಯಲು ಕೇಜ್ರಿವಾಲ್ ಸುಳ್ಳು ಆರೋಪ ಮಾಡ್ತಿದ್ದಾರೆ. ಆಯೋಗವನ್ನು ಒಬ್ಬರು ನಡೆಸುತ್ತಿಲ್ಲ. ಇದು ಮೂವರು ಸದಸ್ಯರು ಇರುವ ಆಯೋಗ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

  • ದೆಹಲಿ ಚುನಾವಣೆಗೆ 4 ದಿನ ಇರುವಾಗಲೇ ಶಾಕ್‌ – ಆಪ್‌ನ 8 ಮಂದಿ ನಿರ್ಗಮಿತ ಶಾಸಕರು ಬಿಜೆಪಿ ಸೇರ್ಪಡೆ

    ದೆಹಲಿ ಚುನಾವಣೆಗೆ 4 ದಿನ ಇರುವಾಗಲೇ ಶಾಕ್‌ – ಆಪ್‌ನ 8 ಮಂದಿ ನಿರ್ಗಮಿತ ಶಾಸಕರು ಬಿಜೆಪಿ ಸೇರ್ಪಡೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ (Delhi Polls) ಇನ್ನೂ ನಾಲ್ಕು ದಿನಗಳು ಬಾಕಿಯಿರುವ ಹೊತ್ತಿನಲ್ಲೇ ಆಮ್‌ ಆದ್ಮಿ ಪಕ್ಷಕ್ಕೆ ದೊಡ್ಡ ಶಾಕ್‌ ಆಗಿದೆ. ಒಂದು ದಿನದ ಹಿಂದೆಯಷ್ಟೇ ಎಎಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ 8 ಮಂದಿ ನಿರ್ಗಮಿತ ಶಾಸಕರು ಶನಿವಾರ (ಇಂದು) ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ.

    ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್‌ ಸಿಗದಿದ್ದಕ್ಕೆ ಕೋಪಗೊಂಡು ರಾಜೀನಾಮೆ ನೀಡಿದ್ದ ವಂದನಾ ಗೌರ್ (ಪಾಲಂ ಕ್ಷೇತ್ರದ ಶಾಸಕ), ರೋಹಿತ್ ಮೆಹ್ರಾಲಿಯಾ (ತ್ರಿಲೋಕಪುರಿ), ಗಿರೀಶ್ ಸೋನಿ (ಮದೀಪುರ), ಮದನ್ ಲಾಲ್ (ಕಸ್ತೂರ್ಬಾ ನಗರ), ರಾಜೇಶ್ ರಿಷಿ (ಉತ್ತಮ ನಗರ), ಬಿ ಎಸ್ ಜೂನ್ (ಬಿಜ್ವಾಸನ್), ನರೇಶ್ ಯಾದವ್ (ಮೆಹ್ರಾಲಿ) ಮತ್ತು ಪವನ್ ಶರ್ಮಾ (ಆದರ್ಶ ನಗರ) ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಎಎಪಿಗೆ ರಾಜೀನಾಮೆ ನೀಡಿದ ನಂತರ, ಸದನದ ಸದಸ್ಯತ್ವವನ್ನು ತ್ಯಜಿಸಿ ವಿಧಾನಸಭೆ ಸ್ಪೀಕರ್‌ಗೆ ರಾಜೀನಾಮೆ ಶುಕ್ರವಾರ ಪತ್ರಗಳನ್ನು ಕಳುಹಿಸಲಾಗಿತ್ತು. ಇದನ್ನೂ ಓದಿ: Union Budget: ಬಜೆಟ್‌ ಮಂಡಿಸಿ ಇತಿಹಾಸ ಬರೆಯಲಿದ್ದಾರೆ ನಿರ್ಮಲಾ ಸೀತಾರಾಮನ್‌

    ಎಎಪಿ ಮಾಜಿ ಶಾಸಕ ವಿಜೇಂದರ್ ಗಾರ್ಗ್ ಮತ್ತು ನಿರ್ಗಮಿತ ಎಎಪಿ ನಾಯಜರು ದೆಹಲಿ ಬಿಜೆಪಿಯ ಉಸ್ತುವಾರಿ ಬೈಜಯಂತ್ ಪಾಂಡಾ ಮತ್ತು ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಹೇಳಿಕೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಗೆ ಘಾಸಿ – ರಾಷ್ಟ್ರಪತಿ ಭವನ ಪ್ರತಿಕ್ರಿಯೆ

  • ದೆಹಲಿ ಚುನಾವಣೆ ಹೊತ್ತಲ್ಲೇ ಎಎಪಿಗೆ ಶಾಕ್‌ – ಟಿಕೆಟ್‌ ಸಿಗದಿದ್ದಕ್ಕೆ ಸಿಟ್ಟಿಗೆದ್ದು 7 ಮಂದಿ ಶಾಸಕರು ರಾಜೀನಾಮೆ

    ದೆಹಲಿ ಚುನಾವಣೆ ಹೊತ್ತಲ್ಲೇ ಎಎಪಿಗೆ ಶಾಕ್‌ – ಟಿಕೆಟ್‌ ಸಿಗದಿದ್ದಕ್ಕೆ ಸಿಟ್ಟಿಗೆದ್ದು 7 ಮಂದಿ ಶಾಸಕರು ರಾಜೀನಾಮೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್‌ ಸಿಗದಿದ್ದಕ್ಕೆ ಕೋಪಗೊಂಡು 7 ಮಂದಿ ಎಎಪಿ ಶಾಸಕರು ರಾಜೀನಾಮೆ ನೀಡಿದ್ದಾರೆ.

    ನರೇಶ್ ಯಾದವ್ (ಮೆಹ್ರೌಲಿ), ರೋಹಿತ್ ಕುಮಾರ್ (ತ್ರಿಲೋಕಪುರಿ), ರಾಜೇಶ್ ರಿಷಿ (ಜನಕಪುರಿ), ಮದನ್ ಲಾಲ್ (ಕಸ್ತೂರ್ಬಾ ನಗರ), ಪವನ್ ಶರ್ಮಾ (ಆದರ್ಶ ನಗರ), ಮತ್ತು ಭಾವನಾ ಗೌಡ್ (ಪಾಲಂ). ಬಿಎಸ್ ಜೂನ್ (ಬಿಜ್ವಾಸನ್) ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

    ಪಾಲಂ ಶಾಸಕಿ ಭಾವನಾ ಗೌರ್ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ‌’ಕೇಜ್ರಿವಾಲ್ ಮತ್ತು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ’ ತಿಳಿಸಿದ್ದಾರೆ.

  • ಚಂಡೀಗಢ ಮೇಯರ್‌ ಚುನಾವಣೆ ಗೆದ್ದ ಬಿಜೆಪಿ; ಎಎಪಿ-ಕಾಂಗ್ರೆಸ್‌ ಮೈತ್ರಿಗೆ ಮುಖಭಂಗ

    ಚಂಡೀಗಢ ಮೇಯರ್‌ ಚುನಾವಣೆ ಗೆದ್ದ ಬಿಜೆಪಿ; ಎಎಪಿ-ಕಾಂಗ್ರೆಸ್‌ ಮೈತ್ರಿಗೆ ಮುಖಭಂಗ

    ಚಂಡೀಗಢ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಎಎಪಿ+ಕಾಂಗ್ರೆಸ್ ಮೈತ್ರಿಕೂಟವನ್ನು ಸೋಲಿಸಿ ಬಿಜೆಪಿ ಗೆಲುವು ದಾಖಲಿಸಿದೆ.

    ಬಿಜೆಪಿಯ ಹರ್‌ಪ್ರೀತ್ ಕೌರ್ ಬಬ್ಲಾ 19 ಮತಗಳಿಂದ ಗೆದ್ದರೆ, ಎಎಪಿ+ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಪ್ರೇಮಲತಾ 17 ಮತಗಳನ್ನು ಪಡೆದರು. ಮೂವರು ಕೌನ್ಸಿಲರ್‌ಗಳು ಅಡ್ಡ ಮತದಾನ ಮಾಡಿದ್ದಾರೆ. ಚುನಾವಣೆಯಲ್ಲಿ ಎಎಪಿಯ ಪ್ರೇಮಲತಾ ವಿರುದ್ಧ ಬಿಜೆಪಿಯ ಕೌರ್‌ ಗೆದ್ದಿದ್ದಾರೆ.

    ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಎಪಿ-ಕಾಂಗ್ರೆಸ್ ಮೈತ್ರಿಕೂಟದ ನಡುವೆ ಪೈಪೋಟಿ ಏರ್ಪಟ್ಟಿತ್ತು. ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್‌ನ ಅಸೆಂಬ್ಲಿ ಹಾಲ್‌ನಲ್ಲಿ ಬೆಳಗ್ಗೆ 11:20 ಕ್ಕೆ ಮತದಾನ ಪ್ರಾರಂಭವಾಗಿ, ಮಧ್ಯಾಹ್ನ 12:19 ಕ್ಕೆ ಮುಕ್ತಾಯವಾಯಿತು.

    ಚಂಡೀಗಢ ಮುನ್ಸಿಪಲ್ ಕಾರ್ಪೋರೇಶನ್ ಚುನಾಯಿತ ಕೌನ್ಸಿಲರ್‌ಗಳು ಮತ್ತು ಚಂಡೀಗಢ ಸಂಸದ ಸೇರಿದಂತೆ 35 ಸದಸ್ಯರನ್ನು ಒಳಗೊಂಡಿದೆ. ಅವರು ಪದನಿಮಿತ್ತ ಸದಸ್ಯರಾಗಿ ಮತದಾನದ ಹಕ್ಕುಗಳನ್ನು ಹೊಂದಿದ್ದಾರೆ.

    ಗುಪ್ತ ಮತದಾನದ ಮೂಲಕ ಚುನಾವಣೆ ನಡೆಸಲಾಯಿತು. ನಾಮನಿರ್ದೇಶಿತ ಕೌನ್ಸಿಲರ್ ರಮ್ನೀಕ್ ಸಿಂಗ್ ಬೇಡಿ ಅವರನ್ನು ಸಭಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ನಿವೃತ್ತ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ಜೈಶ್ರೀ ಠಾಕೂರ್ ಅವರನ್ನು ಚುನಾವಣೆಯ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಸ್ವತಂತ್ರ ವೀಕ್ಷಕರನ್ನಾಗಿ ನೇಮಿಸಿತ್ತು.

  • ದೆಹಲಿ ಸಿಎಂ ಅತಿಶಿಗೆ ರಿಲೀಫ್ – ಬಿಜೆಪಿಯ ಮಾನನಷ್ಟ ಕೇಸ್ ವಜಾಗೊಳಿಸಿದ ಕೋರ್ಟ್

    ದೆಹಲಿ ಸಿಎಂ ಅತಿಶಿಗೆ ರಿಲೀಫ್ – ಬಿಜೆಪಿಯ ಮಾನನಷ್ಟ ಕೇಸ್ ವಜಾಗೊಳಿಸಿದ ಕೋರ್ಟ್

    ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೇನಾ (Atishi) ಅವರಿಗೆ ಜಾರಿ ಮಾಡಲಾದ ಸಮನ್ಸ್ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ರೌಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ಪುರಸ್ಕರಿಸಿದೆ.

    ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹೊರಡಿಸಿದ ಸಮನ್ಸ್ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಧೀಶ ವಿಶಾಲ್ ಗೋಗ್ನೆ ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಖರ್ಗೆ ಕೂಡ ಗಂಗಾ ಸ್ನಾನ ಮಾಡಬೇಕಾಗುತ್ತೆ – ಯೋಗಿ ಆದಿತ್ಯನಾಥ್‌

    ಎಎಪಿ ನಾಯಕರ ಹೇಳಿಕೆಯು ಸಂಘಟನೆಯ ಯಾವುದೇ ಒಬ್ಬ ಸದಸ್ಯರ ವಿರುದ್ಧ ಇಲ್ಲ. ಒಟ್ಟಾರೆಯಾಗಿ ವಿರೋಧ ಪಕ್ಷದ ವಿರುದ್ಧವಾಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

    ರಾಜಕೀಯ ಮಾನನಷ್ಟ ಮೊಕದ್ದಮೆಯಲ್ಲಿ ಸಾಕ್ಷ್ಯಾಧಾರದ ಮಿತಿ ಯಾವಾಗಲೂ ಹೆಚ್ಚಾಗಿರುತ್ತದೆ. ಏಕೆಂದರೆ ಅದು ವಾಕ್ ಸ್ವಾತಂತ್ರ್ಯವನ್ನು ಒಳಗೊಂಡಿರುತ್ತದೆ. ಆದ್ದರಿಂದ, ಸಮನ್ಸ್‌ನಲ್ಲಿ ಗಣನೀಯ ದೋಷ ಮತ್ತು ದೌರ್ಬಲ್ಯ ಇರುವುದರಿಂದ ಅದನ್ನು ರದ್ದುಗೊಳಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಇದನ್ನೂ ಓದಿ: Maha Kumbhamela | ಜ.29 ರಂದು 10 ಕೋಟಿ ಜನರಿಂದ ಅಮೃತ ಸ್ನಾನ – ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲುಗಳ ಓಡಾಟ

    ಕಳೆದ ವರ್ಷ ಏಪ್ರಿಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದಾಗ ಅತಿಶಿ, ‘ಬಿಜೆಪಿಗೆ ಸಂಬಂಧಿಸಿದ ನಾಯಕರು ನನ್ನ ಮತ್ತು ಇತರ ಎಎಪಿ ನಾಯಕರನ್ನು ಸಂಪರ್ಕಿಸಿ, ಪಕ್ಷಕ್ಕೆ ಸೇರಬೇಕೆಂದು ಒತ್ತಾಯಿಸಿದ್ದರು. ಇಲ್ಲದಿದ್ದರೆ ಒಂದು ತಿಂಗಳೊಳಗೆ ಜಾರಿ ನಿರ್ದೇಶನಾಲಯದಿಂದ ಬಂಧನ ಎದುರಿಸಬೇಕಾಗುತ್ತದೆ ಎಂದಿದ್ದರೆಂದು ಆರೋಪಿಸಿದ್ದರು.

  • ಮೆಟ್ರೋ ಟಿಕೆಟ್‌ ದರದಲ್ಲಿ 50% ರಿಯಾಯಿತಿ, ಉಚಿತ ವಿದ್ಯುತ್‌, ನೀರು – ದೆಹಲಿ ಚುನಾವಣೆಗೆ 15 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

    ಮೆಟ್ರೋ ಟಿಕೆಟ್‌ ದರದಲ್ಲಿ 50% ರಿಯಾಯಿತಿ, ಉಚಿತ ವಿದ್ಯುತ್‌, ನೀರು – ದೆಹಲಿ ಚುನಾವಣೆಗೆ 15 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

    ನವದೆಹಲಿ: ಮುಂದಿನ ಫೆ.5ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ (Arvind Kejriwal) ಅವರು 15 ಗ್ಯಾರಂಟಿಗಳನ್ನೊಳಗೊಂಡ ಎಎಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

    ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಮಹಿಳಾ ಸಮ್ಮಾನ್ ಯೋಜನೆ, 24 ಗಂಟೆ ಉಚಿತ ನೀರು, ಉಚಿತ ವಿದ್ಯುತ್‌, ದಲಿತ ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಸ್ಕಾಲರ್‌ ಶಿಪ್, ಯಮುನಾ ನದಿ ಶುದ್ಧೀಕರಣ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುವುದಾಗಿ ʻಕೇಜ್ರವಾಲ್ ಕಿ ಗ್ಯಾರಂಟಿʼ (Kejriwal Ki Guarantee) ಹೆಸರಿನ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

    ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ಮೆಟ್ರೋ ಪ್ರಯಾಣ ದರದಲ್ಲಿ (Metro Ticket Price) ಶೇ.50ರಷ್ಟು ರಿಯಾಯಿತಿ ನೀಡುವುದಾಗಿಯೂ ಭರವಸೆ ನೀಡಿದ ಕೇಜ್ರಿವಾಲ್‌ ಇದು ಮೋದಿ ಅವರ ʻನಕಲಿ ಗ್ಯಾರಂಟಿʼ ಅಲ್ಲ ʻಕೇಜ್ರಿವಾಲ್‌ ಕೀ ಗ್ಯಾರಟಿʼ ಅಂತ ಹೇಳಿದ್ದಾರೆ.

    ಎಎಪಿಯ 15 ಗ್ಯಾರಂಟಿಗಳು ಯಾವುವು?
    * ಉದ್ಯೋಗದ ಖಾತ್ರಿ
    * ಮಹಿಳಾ ಗೌರವ ಯೋಜನೆ – ಪ್ರತಿ ಮಹಿಳೆಗೆ ತಿಂಗಳಿಗೆ 2,100 ರೂ.
    * ಸಂಜೀವನಿ ಯೋಜನೆ – 60 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ
    * ತಪ್ಪಾಗಿ ಬಂದ ನೀರಿನ ಬಿಲ್‌ ಮನ್ನಾ
    * 24 ಗಂಟೆ ನೀರು ಪೂರೈಕೆ
    * ಯುರೋಪ್‌ ಮಾದರಿಯಲ್ಲೇ ರಸ್ತೆ ಅಭಿವೃದ್ಧಿ
    * ಯಮುನಾ ನದಿ ಶುದ್ಧೀಕರಣ
    * ಡಾ.ಅಂಬೇಡ್ಕರ್ ವಿದ್ಯಾರ್ಥಿವೇತನ ಯೋಜನೆ
    * ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ದೆಹಲಿ ಮೆಟ್ರೋದಲ್ಲಿ 50% ರಿಯಾಯಿತಿ
    * ಅರ್ಚಕರಿಗೆ 18,000 ಸಾವಿರ ರೂ.
    * ಬಾಡಿಗೆದಾರರಿಗೆ ಉಚಿತ ವಿದ್ಯುತ್ ಮತ್ತು ನೀರು
    * ಒಳಚರಂಡಿ ಶುದ್ಧೀಕರಣ
    * ಪಡಿತರ ಚೀಟಿ
    * ಆಟೋ, ಟ್ಯಾಕ್ಸಿ ಮತ್ತು ಇ-ರಿಕ್ಷಾ ಚಾಲಕರ ಮಗಳ ಮದುವೆಗೆ 1 ಲಕ್ಷ ರೂ., ಮಕ್ಕಳಿಗೆ ಉಚಿತ ತರಬೇತಿ, ಜೀವ ವಿಮೆ
    * RWA ಗಳಿಗೆ (ವಸತಿ ಕಲ್ಯಾಣ ಸಂಘಗಳು) ಖಾಸಗಿ ಭದ್ರತಾ ಸಿಬ್ಬಂದಿ ಒದಗಿಸಲಾಗುವುದು.