Tag: aap

  • ಭಯೋತ್ಪಾದಕನಾಗಿ ಅಂಬೇಡ್ಕರ್‌, ಭಗತ್‌ ಸಿಂಗ್‌ ಕನಸು ನನಸು ಮಾಡಿದ್ದೇನೆ: ಕೇಜ್ರಿವಾಲ್‌

    ಭಯೋತ್ಪಾದಕನಾಗಿ ಅಂಬೇಡ್ಕರ್‌, ಭಗತ್‌ ಸಿಂಗ್‌ ಕನಸು ನನಸು ಮಾಡಿದ್ದೇನೆ: ಕೇಜ್ರಿವಾಲ್‌

    ನವದೆಹಲಿ: ಭಯೋತ್ಪಾದಕನಾಗಿ ಬಾಬಾ ಸಾಹೇಬ್‌ ಅಂಬೇಡ್ಕರ್‌, ಭಗತ್‌ ಸಿಂಗ್‌ ಅವರ ಕನಸು ನನಸು ಮಾಡಿದ್ದೇನೆ. ರಾಷ್ಟ್ರ ರಾಜಧಾನಿಯಲ್ಲಿ 12,000 ಸ್ಮಾರ್ಟ್‌ ಶಾಲಾ ಕೊಠಡಿಗಳನ್ನು ರೂಪಿಸಿದ್ದೇನೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

    ಚುನಾವಣೆ ನಡೆಯಲಿರುವ ಪಂಜಾಬ್‌ನಲ್ಲಿ ಪ್ರತ್ಯೇಕತಾವಾದಿ ಎಂದು ವಿರೋಧ ಪಕ್ಷಗಳು ನನ್ನ ಮೇಲೆ ವಾಗ್ದಾಳಿ ನಡೆಸುತ್ತಿವೆ. ನಾನು ಈ ಶಾಲಾ ಕೊಠಡಿಗಳನ್ನು ದೇಶಕ್ಕೆ ಅರ್ಪಿಸಿದ್ದೇನೆ. ಭಯೋತ್ಪಾದಕನೊಬ್ಬ, ಬಡವರು ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಓದುವ ಶಾಲೆಗಳನ್ನು ನಿರ್ಮಿಸಿದ್ದಾನೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ಭಗತ್‌ ಸಿಂಗ್‌ ಅವರ ಕನಸು ನನಸು ಮಾಡಿದ್ದಾನೆ ಎಂದು ಪ್ರತಿಪಕ್ಷಗಳಿಗೆ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆಗೂ ಮುನ್ನಾ ದಿನ 12,430 ಹೊಸ ಸ್ಮಾರ್ಟ್ ತರಗತಿ ಉದ್ಘಾಟಿಸಿದ ಕೇಜ್ರಿವಾಲ್

    ಈಗ ಅಧಿಕಾರಿಗಳು, ನ್ಯಾಯಾಧೀಶರು, ರಿಕ್ಷಾ ಚಾಲಕರು ಮತ್ತು ಕೆಲಸಗಾರರ ಮಕ್ಕಳು ಒಂದೇ ಮೇಜಿನ ಮೇಲೆ ಒಟ್ಟಿಗೆ ಕುಳಿತು ಓದುತ್ತಾರೆ ಎಂದು ಹೇಳಿದ್ದಾರೆ.

    ದೇಶದ ಜನರು ಈ ಭ್ರಷ್ಟರಿಗೆ (ವಿಪಕ್ಷಗಳು) ತಲೆ ಬಾಗುವುದಿಲ್ಲ. ಅಂಬೇಡ್ಕರ್‌ ಮತ್ತು ಭಗತ್‌ ಸಿಂಗ್‌ ಅವರ ಕನಸನ್ನು ನನಸು ಮಾಡುವ ಪ್ರಯತ್ನವನ್ನು ಮುಂದುವರಿಸುತ್ತೇನೆ. ದೇಶದ ಕಲ್ಯಾಣಕ್ಕಾಗಿ ರಾಜಕೀಯ ಸಿದ್ಧಾಂತವನ್ನು ಪಕ್ಕಕ್ಕಿಟ್ಟು ಇತರೆ ರಾಜ್ಯಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗಾಗಿ ಸಹಾಯ ಮಾಡಲು ಬದ್ಧ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್

    ನಾನು ಇಂದು ಒಂದು ಪ್ರಸ್ತಾಪವನ್ನು ಮಾಡುತ್ತಿದ್ದೇನೆ. ಯಾವುದೇ ರಾಜ್ಯ ಸರ್ಕಾರ, ಅದು ಬಿಜೆಪಿ ಅಥವಾ ಕಾಂಗ್ರೆಸ್‌ ಆಗಿರಲಿ. ಶಿಕ್ಷಣ ಮೂಲಸೌಕರ್ಯವನ್ನು ಸುಧಾರಿಸಲು ಬಯಸಿದರೆ, ಅದಕ್ಕಾಗಿ ಶಿಕ್ಷಣ ಸಚಿವ ಮನೀಶ್‌ ಸಿಸೋಡಿಯಾ ಅವರ ಸೇವೆಯನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದ್ದಾರೆ.

    ಅರವಿಂದ್‌ ಕೇಜ್ರಿವಾಲ್‌ ಒಬ್ಬ ಭಯೋತ್ಪಾದಕ ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳ ನಾಯಕರಿಗೆ ಕೇಜ್ರಿವಾಲ್‌ ಟಾಂಗ್‌ ನೀಡಿದ್ದಾರೆ.

  • ಕಾಗ್ರೆಸ್, ಆಪ್ ಅಪರಾಧದ ಪಾಲುದಾರರು: ಮೋದಿ

    ಕಾಗ್ರೆಸ್, ಆಪ್ ಅಪರಾಧದ ಪಾಲುದಾರರು: ಮೋದಿ

    ಚಂಡೀಗಢ: ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಅಪರಾಧದ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಎಪಿ ಕಾಂಗ್ರೆಸ್‍ನ ಫೋಟೋಕಾಪಿಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಸೇರಿದಂತೆ ಸೇನೆಯಲ್ಲಿ ಏನನ್ನಾದರೂ ಸಾಧಿಸದರೂ ಆ ಎರಡು ಪಕ್ಷಗಳಿಗೆ ಸಂತೋಷವಾಗುವುದಿಲ್ಲ ಎಂದ ಅವರು ಒಂದು ಪಕ್ಷ ಪಂಜಾಬ್‍ನ್ನು ಲೂಟಿ ಮಾಡಿದರೆ ಮತ್ತೊಂದು ಪಕ್ಷ ದೆಹಲಿಯಲ್ಲಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಕಿಡಿಕಾರಿದರು.

    2016ರಲ್ಲಿ ಪಠಾಣ್‍ಕೋಟ್ ದಾಳಿಯಲ್ಲಿ ಹುತಾತ್ಮರಾದ ಯೋಧರ ತ್ಯಾಗವನ್ನು ಕಾಂಗ್ರೆಸ್ ಅವಮಾನಿಸಿದೆ. ಕಾಂಗ್ರೆಸ್ ನಾಯಕರು ಸರ್ಕಾರವನ್ನು, ಪಂಜಾಬ್‍ನ ಜನತೆಯನ್ನು ಹಾಗೂ ನಮ್ಮ ಸೈನ್ಯದ ಶೌರ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸೈನಿಕರ ತ್ಯಾಗವನ್ನು ಅವಮಾನಿಸಿದ್ದಾರೆ. 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿಯೂ ಕಾಂಗ್ರೆಸ್ ಅದನ್ನೇ ಮಾಡಿದೆ. ಪುಲ್ವಾಮಾ ವಾರ್ಷಿಕೋತ್ಸವದಂದು ಸಹ ಅವರು ತಮ್ಮ ಬುದ್ಧಿಯನ್ನು ಮುಂದುವರಿಸಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಯುಪಿ, ಬಿಹಾರದ ಜನತೆಗೆ ಪಂಜಾಬ್ ಪ್ರವೇಶಿಸಲು ಬಿಡಬೇಡಿ: ಚನ್ನಿ ವಿರುದ್ಧ ಬಿಜೆಪಿ, ಆಪ್ ಕೆಂಡ

    2019 ಫೆಬ್ರವರಿ 14ರಂದು, ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಗುಂಪು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್‍ನ ಬೆಂಗಾವಲು ಪಡೆ ಮೇಲೆ ದಾಳಿ ಮಾಡಿ 40 ಪಡೆಯ ಸಿಬ್ಬಂದಿ ಹುತಾತ್ಮರಾಗಿದ್ದರು. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್‍ನ ಪುರಾವೆಯನ್ನು ನೀಡಲು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: NSA ಅಜಿತ್ ದೋವಲ್ ನಿವಾಸಕ್ಕೆ ಅಕ್ರಮ ಪ್ರವೇಶ – ವ್ಯಕ್ತಿ ಬಂಧನ

  • ಆಪ್ ನಾಯಕರು ಬಿಜೆಪಿಗೆ ನಿಷ್ಠೆ ತೋರಿಸುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ

    ಆಪ್ ನಾಯಕರು ಬಿಜೆಪಿಗೆ ನಿಷ್ಠೆ ತೋರಿಸುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ

    ಚಂಡೀಗಢ: ಆಮ್ ಆದ್ಮಿ ಪಕ್ಷವು ಆರ್‌ಎಸ್‍ಎಸ್‍ನೊಂದಿಗೆ ಹೊರಹೊಮ್ಮಿದ್ದು, ಆಪ್ ನಾಯಕರು ಬಿಜೆಪಿಗೆ ನಿಷ್ಠೆಯನ್ನು ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದರು.

    ಕೊಟ್ಕಾಪುರದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸೈದ್ಧಾಂತಿಕ ಸಿದ್ಧಾಂತಕ್ಕೆ ಬಿಜೆಪಿ ನಾಯಕರಿಗಿಂತ ಆಪ್ ಪಕ್ಷ ಹೆಚ್ಚು ಹತ್ತಿರವಾಗಿದ್ದೇವೆ ಎಂದು ಎಎಪಿ ನಾಯಕರೇ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

    ದೆಹಲಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಹೆಸರಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ರಾಜಕೀಯ ಪಕ್ಷಗಳು ಮತ್ತು ಅವರ ನಾಯಕರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದ ಅವರು, ಪಂಜಾಬ್‍ನ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ನಿಮ್ಮ ನಡುವಿನ ಸಾಮಾನ್ಯ ವ್ಯಕ್ತಿಯಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

    ಕಳೆದ 5 ವರ್ಷಗಳಿಂದ ಪಂಜಾಬ್‍ನಲ್ಲಿ ನಾವು ಸರ್ಕಾರವನ್ನು ನಡೆಸುತ್ತಿದ್ದೇವೆ. ಇದಕ್ಕೂ ಮೊದಲು ಅಮರೀಂದರ್ ಸಿಂಗ್ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ಮಾಡಿಕೊಂಡಾಗ ಪಂಜಾಬ್‍ನಿಂದ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿತ್ತು. ಬದಲಿಗೆ ದೆಹಲಿಯಿಂದ ಕಾರ್ಯನಿರ್ವಹಿಸಿತ್ತು. ಬಿಜೆಪಿಯ ಗುಪ್ತ ಮೈತ್ರಿ ಈಗ ಸಾರ್ವಜನಿಕವಾಗಿ ಹೊರಬಂದಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್‌ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್

    ಫೆಬ್ರವರಿ 20ರಂದು ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ 2017ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತವನ್ನು ಗಳಿಸಿತ್ತು. 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎಸ್‍ಎಡಿ-ಬಿಜೆಪಿ ಸರ್ಕಾರವನ್ನು ಸೋಲಿಸಿ ಕಾಂಗ್ರೆಸ್ ಸರ್ಕಾರ ರಚಿಸಿತ್ತು.

  • ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

    ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

    ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ತನ್ನ ‘ಸೋದರ ಮಾವ’ ಪಂಜಾಬ್ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಪರ ಪ್ರಚಾರಕ್ಕೆ ನಿಂತಿದ್ದಾರೆ.

    Punjab polls: AAP's CM face Bhagwant Mann files nomination from Dhuri | Deccan Herald

    ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮತ್ತು ಪುತ್ರಿ ಹರ್ಷಿತಾ ಅವರು ಶುಕ್ರವಾರ ಪಂಜಾಬ್‍ಗೆ ಭೇಟಿ ನೀಡಲಿದ್ದು, ಮುಂದಿನ ವಾರ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

    ಈ ಕುರಿತು ಸುನೀತಾ ಅವರು ಟ್ವಟ್ಟರ್‌ನಲ್ಲಿ, ನಾಳೆ ನನ್ನ ಸೋದರ ಮಾವ ಭಗವಂತ್ ಮಾನ್ ಅವರಿಗೆ ಮತ ಕೇಳಲು ನಾನು, ನನ್ನ ಮಗಳೊಂದಿಗೆ ಧುರಿಗೆ ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಮಾನ್ ಅವರು 2022ರ ಪಂಜಾಬ್ ಚುನಾವಣೆಗೆ ಎಎಪಿ ಸಿಎಂ ಅಭ್ಯರ್ಥಿಯಾಗಿದ್ದು, ಧುರಿಯಿಂದ ಸ್ಪರ್ಧಿಸಲಿದ್ದಾರೆ. ಇವರು ಸಂಗ್ರೂರ್‍ನಿಂದ ಎರಡು ಬಾರಿ ಸಂಸದರಾಗಿದ್ದಾರೆ.

    ಕಳೆದ ತಿಂಗಳು ಕೇಜ್ರಿವಾಲ್ ಅವರು, ನಿಮ್ಮ ಸಿಎಂ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಿ ಎಂದು ಫೋನ್ ನಂಬರ್ ಬಿಡುಗಡೆ ಮಾಡಿದ್ದರು. ಫೋನ್ ಮಾಡಿದ ಜನರಲ್ಲಿ 93% ಜನರು ಮಾನ್ ಅವರ ಹೆಸರನ್ನು ಸೂಚಿಸಿದ್ದರು. ಪರಿಣಾಮ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಮುಂದಿನ ಸಿಎಂ ಆಭ್ಯರ್ಥಿಯಾಗಿ ಮಾನ್ ಅವರನ್ನು ಘೋಷಿಸಿದರು. ಈ ವೇಳೆ ಕೇಜ್ರಿವಾನ್ ಅವರು, ಎಎಪಿ ಪಂಜಾಬ್ ಚುನಾವಣೆಯಲ್ಲಿ ಗೆಲ್ಲುವುದು ಸ್ಪಷ್ಟವಾಗಿದೆ ಎಂದಿದ್ದರು.

    ಸೋಮವಾರ ಈ ಕುರಿತು ಮಾತನಾಡಿದ ಮಾನ್ ಅವರು, ಪಂಜಾಬ್‍ನ ಜನರಿಂದ ಬೆಂಬಲ ಸಿಕ್ಕಿದ್ದು ಖುಷಿಯಾಗಿದೆ. ಈ ಮೂಲಕ ಜನರು ಕಾಂಗ್ರೆಸ್‍ಗೆ ಸೋಲಿನ ಮುನ್ಸೂಚನೆ ನೀಡಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿಂದೆ ಫೆಬ್ರವರಿ 14 ರಂದು ಚುನಾವಣೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಗುರು ರವಿದಾಸ್ ಜಯಂತಿ ಆಚರಣೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಪರಿಣಾಮ ಚುನಾವಣೆ ದಿನವನ್ನು ಮುಂದೂಡಲಾಗಿತ್ತು.

  • ದೆಹಲಿ ನಾಯಕರು ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಂಜಿತ್ ಚನ್ನಿ

    ದೆಹಲಿ ನಾಯಕರು ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಂಜಿತ್ ಚನ್ನಿ

    ಚಂಡೀಗಢ: ದೆಹಲಿ ನಾಯಕರು ಪಂಜಾಬ್‍ನ್ನು ಲೂಟಿ ಮಾಡಲು ಬಂದಿದ್ದಾರೆ ಎಂದು ಎಎಪಿ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ವಾಗ್ದಾಳಿ ನಡೆಸಿದರು.

    ವರ್ಚುವಲ್ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‍ಗೆ ಭೇಟಿ ನೀಡಿದಾಗಲೆಲ್ಲಾ ದುಬಾರಿ ಹೋಟೆಲ್‍ಗಳಲ್ಲಿ ತಂಗಿರುತ್ತಾರೆ. ಅವರು ತಮ್ಮನ್ನು ತಾವು ಸಾಮಾನ್ಯ ವ್ಯಕ್ತಿಗಳೆಂದು ಹೇಗೆ ಕರೆದುಕೊಳ್ಳುತ್ತಾರೆ ಎಂದು ಟೀಕಿಸಿದರು.

    ಇತರ ಪಕ್ಷಗಳಿಂದ ಟಿಕೆಟ್ ನಿರಾಕರಿಸಿದ ಕನಿಷ್ಠ 40 ಜನರಿಗೆ ಎಎಪಿ ಟಿಕೆಟ್ ನೀಡಿದೆ. ಅಂಥವರು ಇಲ್ಲಿ ಯಾವ ರೀತಿಯ ಬದಲಾವಣೆಯನ್ನು ತರಲು ಬಯಸುತ್ತಾರೆ ಎಂದು ಪ್ರಶ್ನಿಸಿ, ಅವರು ಪಂಜಾಬ್ ಅನ್ನು ಲೂಟಿ ಮಾಡಲು ಇಲ್ಲಿಗೆ ಬಂದಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ

    ಪಂಜಾಬ್‍ನಲ್ಲಿ ಜಾಹೀರಾತುಗಳಿಗಾಗಿ ಎಎಪಿ 500 ಕೋಟಿ ಖರ್ಚು ಮಾಡಿದೆ. ಈ ಹಣ ಎಲ್ಲಿಂದ ಬಂತು? ಭಗವಂತ್ ಮಾನ್ ಬಳಿ ಅಷ್ಟು ಹಣವಿದೆಯೇ ಎಂದ ಅವರು, ಎಎಪಿ ದೆಹಲಿಯನ್ನು ಲೂಟಿ ಮಾಡಿ ಹಣವನ್ನು ಪಡೆಯುತ್ತಿದ್ದಾರೆ. ಇದೇ ಪರಿಸ್ಥಿತಿ ಪಂಜಾಬ್‍ಗೂ ಬರುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

  • ಕಾಂಗ್ರೆಸ್‌ ಕೆಲಸ ಮಾಡಿದ್ದರೆ, ನಾನು ರಾಜಕೀಯಕ್ಕೆ ಬರುವ ಅಗತ್ಯವಿರುತ್ತಿರಲಿಲ್ಲ: ಕೇಜ್ರಿವಾಲ್‌

    ಕಾಂಗ್ರೆಸ್‌ ಕೆಲಸ ಮಾಡಿದ್ದರೆ, ನಾನು ರಾಜಕೀಯಕ್ಕೆ ಬರುವ ಅಗತ್ಯವಿರುತ್ತಿರಲಿಲ್ಲ: ಕೇಜ್ರಿವಾಲ್‌

    ಪಣಜಿ: ಗೋವಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ನಾಯಕರು ಪರಸ್ಪರ ಕೆಸರೆರೆಚಾಟ ನಡೆಸುತ್ತಿದ್ದಾರೆ. ಅರವಿಂದ್‌ ಕೇಜ್ರಿವಾಲ್‌ ಅವರು ʼಚೋಟಾ ಮೋದಿʼ ಎಂದು ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಂದೀಪ್‌ ಸಿಂಗ್‌ ಸುರ್ಜೇವಾಲ ಟೀಕಿಸಿದ್ದರು. ಅವರ ಟೀಕೆಗೆ ಕೇಜ್ರಿವಾಲ್‌ ಪ್ರತಿದಾಳಿ ನಡೆಸಿದ್ದಾರೆ.

    ಕಾಂಗ್ರೆಸ್‌ ಸರಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ನಾನು ರಾಜಕೀಯಕ್ಕೆ ಬರುವ ಅಗತ್ಯವಿರುತ್ತಿರಲಿಲ್ಲ ಎಂದು ಕೇಜ್ರಿವಾಲ್‌ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣಾ ಅಖಾಡಕ್ಕೆ ಯೋಗಿ – ಮೊದಲ ಬಾರಿ ಆದಿತ್ಯನಾಥ್ ನಾಮಪತ್ರ ಸಲ್ಲಿಕೆ

    ಕನಸಿನಲ್ಲೂ ಸುರ್ಜೇವಾಲ ಅವರು ನನ್ನನ್ನು ದೆವ್ವದಂತೆ ಕಾಣುತ್ತಾರೆ. ದಿನದ 24 ಗಂಟೆಯೂ ನಾನು ಅವರ ಮನಸ್ಸಿನಲ್ಲಿದ್ದೇನೆ. ಅವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

    ರಾಹುಲ್‌ ಗಾಂಧಿ ಅವರು ನಮ್ಮ ಒಳ್ಳೆಯ ಕಾರ್ಯಗಳನ್ನು ಅನುಸರಿಸಲಿ. ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ಜಾರಿಗೊಳಿಸಲಿ. ಕಾಂಗ್ರೆಸ್‌ ಒಳ್ಳೆಯ ಕೆಲಸಗಳನ್ನು ಮಾಡಲಿ. ಆಗ ನಾನು ರಾಜಕೀಯ ಪಕ್ಷವೊಂದನ್ನು ಮುನ್ನಡೆಸುವ ಅಗತ್ಯವಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರತವನ್ನು 2 ವಿಭಾಗವಾಗಿ ವಿಂಗಡಿಸಲಾಗಿದೆ: ರಾಹುಲ್ ಗಾಂಧಿ

    ಅರವಿಂದ್‌ ಕೇಜ್ರಿವಾಲ್‌ ʼಚೋಟಾ ಮೋದಿʼ ಆಗಿದ್ದು, ಬಿಜೆಪಿ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ. ಪ್ರಧಾನಿ ಮೋದಿ ಅವರ ರಾಜಕೀಯ ತದ್ರೂಪಿ ಆಗಿರುವ ಕೇಜ್ರಿವಾಲ್‌, ಅವರದ್ದೇ ನಡವಳಿಕೆ ಹಾಗೂ ಸರ್ವಾಧಿಕಾರ ಧೋರಣೆ ಹೊಂದಿದ್ದಾರೆ ಎಂದು ಸುರ್ಜೇವಾಲ ಟೀಕಿಸಿದ್ದರು.

  • ಸಿದ್ದರಾಮಯ್ಯನವ್ರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ ಪಕ್ಷಾಂತರವೋ: ಬಿಜೆಪಿ ವ್ಯಂಗ್ಯ

    ಸಿದ್ದರಾಮಯ್ಯನವ್ರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ ಪಕ್ಷಾಂತರವೋ: ಬಿಜೆಪಿ ವ್ಯಂಗ್ಯ

    ಬೆಂಗಳೂರು: ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ ಪಕ್ಷಾಂತರವೋ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕುಟುಕಿದೆ.

    ಟ್ವೀಟ್‍ನಲ್ಲಿ ಏನಿದೆ?: ನಿಮ್ಮ ಆಪ್ತ ವಲಯದಲ್ಲಿರುವ ಕೆಲವರು ಈಗ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ. ಸಿದ್ದರಾಮಯ್ಯನವರೇ ನಿಮ್ಮ ಆಪ್ತರು ಆಪ್ ಹಾಗೂ ಸಮಾಜವಾದಿ ಪಕ್ಷದ ನಾಯಕರ ಭೇಟಿ ಮಾಡಿರುವುದು ಆಕಸ್ಮಿಕ ಘಟನೆಯಾಗಿರಲು ಸಾಧ್ಯವಿಲ್ಲ. ಇದೊಂದು ವ್ಯವಸ್ಥಿತ ನಡೆ. ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕದಲ್ಲೂ ಇದರ ಪ್ರತಿಫಲನ ಕಾಣಬಹುದೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

    ನಮ್ಮ ಸಂಪರ್ಕದಲ್ಲಿ ಆ ಪಕ್ಷದವರು ಇದ್ದಾರೆ. ಈ ಪಕ್ಷದವರು ಇದ್ದಾರೆ ಎಂದು ಸಿದ್ದರಾಮಯ್ಯ ಅವರು ಕಳೆದ ಕೆಲ ದಿನಗಳಿಂದ ನಿರಂತರ ಬುರುಡೆ ಬಿಟ್ಟಾಗಲೇ ಅನುಮಾನವಿತ್ತು. ಈಗ ನೋಡಿದರೆ ತಮ್ಮ ಆಪ್ತರನ್ನೇ ಬೇರೆಯವರ ಸಂಪರ್ಕಕ್ಕೆ ಬಿಟ್ಟಿದ್ದಾರೆ. ಸಿದ್ದರಾಮಯ್ಯನವರೇ, ಮತ್ತೊಮ್ಮೆ ವಲಸೆಗೆ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದೀರಾ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ:  ಮುಗಿದ ಅಧ್ಯಾಯ – ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ

  • ಸಾಲ ವಸೂಲಿಯಲ್ಲೂ ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಎಎಪಿ ಆರೋಪ

    ಸಾಲ ವಸೂಲಿಯಲ್ಲೂ ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಎಎಪಿ ಆರೋಪ

    ಬೆಂಗಳೂರು: ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಅವರು ಗ್ರಾಹಕರಿಗೆ ನೀಡಿದ್ದ ಸಾಲದ ಮೊತ್ತಕ್ಕಿಂತ ನೂರು ಪಟ್ಟು ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಎಚ್.ಡಿ.ಬಸವರಾಜು ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ಬಸವರಾಜು, ಗ್ರಾಹಕರೊಬ್ಬರು 2006-07ರಲ್ಲಿ ಕೇವಲ 9 ಲಕ್ಷ ಸಾಲವನ್ನು ಪಡೆದು, ನಂತರ ಅದನ್ನು ಪೂರ್ತಿಯಾಗಿ ಮರುಪಾವತಿಸಿದ್ದರು. ಆದರೂ ಅವರಿಂದ 57.30 ಕೋಟಿ ರೂಪಾಯಿ ಸಾಲ ಬಾಕಿ ಇದೆ ಎಂದು ಸುಳ್ಳು ಆರೋಪ ಹೊರಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿ ಮಾನಸಿಕವಾಗಿ ಕುಗ್ಗಿಸಲು ಹಾಗೂ ಬಲವಂತವಾಗಿ ಹಣ ವಸೂಲಿ ಮಾಡಲು ಯತ್ನಿಸಿದ್ದಾರೆ. ಇಂತಹ ಬಹಳಷ್ಟು ಸುಳ್ಳು ಪ್ರಕರಣಗಳನ್ನು ಬ್ಯಾಂಕ್ ಈವರೆಗೆ ದಾಖಲಿಸಿದೆ. ಬ್ಯಾಂಕ್ ತಾಳಕ್ಕೆ ತಕ್ಕಂತೆ ಪೊಲೀಸರು ಕುಣಿಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕೈ ತಪ್ಪಿದ್ದಕ್ಕೆ ಅಸಮಾಧಾನ ಇಲ್ಲ, ತುಮಕೂರು ಸಿಕ್ಕಿದ್ರೆ ಖುಷಿಯಾಗ್ತಿತ್ತು: ಮಾಧುಸ್ವಾಮಿ

    ಎಎಪಿ ಬೆಂಗಳೂರು ಕಾನೂನು ಘಟಕದ ಅಧ್ಯಕ್ಷ ಮಂಜುನಾಥ್ ಸ್ವಾಮಿ ಅವರು ಮಾತನಾಡಿ, ಸಾಲ ಪಡೆದಿದ್ದ ಗ್ರಾಹಕರಿಗೆ ಈ ರೀತಿ ಕಿರುಕುಳ ನೀಡುತ್ತಿರುವ ಗುರು ರಾಘವೇಂದ್ರ ಬ್ಯಾಂಕ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಲು ನಾವು ಮುಂದಾಗಿದ್ದೆವು. ಆದರೆ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್‍ಐಆರ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿರುವುದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಎಂದು ಹೇಳಿದರು.

    ಬೃಹತ್ ಮೊತ್ತದ ಸಾಲ ಪಡೆದಿರುವುದಕ್ಕೆ ದಾಖಲೆ ಒದಗಿಸಬೇಕೆಂದು ವಕೀಲರ ಮೂಲಕ ನೋಟಿಸ್ ಕೊಟ್ಟು ಒಂದೂವರೆ ತಿಂಗಳಾದರೂ ಬ್ಯಾಂಕ್‍ನಿಂದ ಪ್ರತಿಕ್ರಿಯೆ ಬಂದಿಲ್ಲ. ಸೂಕ್ತ ದಾಖಲೆ ನೀಡಿ, ಅಷ್ಟು ಮೊತ್ತದ ಸಾಲ ಪಡೆದಿರುವುದು ನಿಜವೆಂದು ಬ್ಯಾಂಕ್ ಸಾಬೀತು ಪಡಿಸಬೇಕು. ಸುಖಾಸುಮ್ಮನೆ ಗ್ರಾಹಕರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

    ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಧ್ಯ ಪ್ರವೇಶಿಸಿ, ಗ್ರಾಹಕರಿಗೆ ಆಗುತ್ತಿರುವ ಅನ್ಯಾಯ ತಡೆಯುವಂತೆ ಪೊಲೀಸರಿಗೆ ಸೂಚನೆ ನೀಡಬೇಕು. ತಪ್ಪಿದಲ್ಲಿ, ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಲಾಗುವುದು ಎಂದು ಮಂಜುನಾಥ್ ಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!

    ಎಎಪಿ ಮುಖಂಡರಾದ ಉಷಾ ಮೋಹನ್, ಮಂಜುನಾಥ್ ಪಾಪಣ್ಣ ಹಾಗೂ ಸಂತ್ರಸ್ತ ಕುಟುಂಬಗಳು ಹಾಜರಿದ್ದರು.

  • ಕಾಲೇಜುಗಳಿಗೆ ಹಣ ಬಿಡುಗಡೆ ಮಾಡಿ – ದೆಹಲಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಶಿಕ್ಷಕರು

    ಕಾಲೇಜುಗಳಿಗೆ ಹಣ ಬಿಡುಗಡೆ ಮಾಡಿ – ದೆಹಲಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಶಿಕ್ಷಕರು

    ನವದೆಹಲಿ: ಕಾಲೇಜುಗಳಿಗೆ ಹಣವನ್ನು ಬಿಡುಗಡೆ ಮಾಡದಿದ್ರೆ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ದೆಹಲಿ ವಿಶ್ವವಿದ್ಯಾನಿಲಯ ಶಿಕ್ಷಕರ ಸಂಘ(ಡಿಯುಟಿಎ) ಸರ್ಕಾರಕ್ಕೆ ಬೆದರಿಕೆ ಹಾಕಿದೆ.

    12 ವಿಶ್ವವಿದ್ಯಾಲಯಗಳಿಗೆ ಹಣವನ್ನು ಬಿಡುಗಡೆ ಮಾಡದಿರುವ ಕಾರಣ ಡಿಯುಟಿಎ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಬೆದರಿಕೆ ಹಾಕಿದೆ. ಕಾಲೇಜುಗಳ ಹಣ ಬಳಕೆಯನ್ನು ವಿಶ್ಲೇಷಿಸಲು ಸರ್ಕಾರವು ಸಮಿತಿಯನ್ನು ರಚಿಸಿರುವುದನ್ನು ಡಿಯುಟಿಎ ಪ್ರಶ್ನಿಸಿದೆ. ಇದನ್ನೂ ಓದಿ: ಸರ್ಕಾರ ಕೂಡಲೇ ಶಾಲೆ, ಕಾಲೇಜುಗಳಿಗೆ 15-20 ದಿನ ರಜೆ ಘೋಷಿಸಬೇಕು: ಹೆಚ್‍ಡಿಕೆ

    Delhi University Teachers' Association go on strike over non-payment of salaries

    ಸಮಿತಿ ರಚನೆ ಕುರಿತು ಪ್ರಶ್ನಿಸಿದ ಡಿಯುಟಿಎ ಅಧ್ಯಕ್ಷ ಎಕೆ ಭಾಗಿ, ಸಮಿತಿ ರಚನೆಯ ಉದ್ದೇಶವೇನು? ಆಮ್ ಆದ್ಮಿ ಪಕ್ಷದಿಂದ ಚುನಾಯಿತ ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಗಳು ಈಗಾಗಲೇ ಬಜೆಟ್ ಅನ್ನು ಅನುಮೋದಿಸಿದೆ. ಆದರೆ ಈ ಸಮಿತಿ ಅನುಮೋದಿಸಿದ ಬಜೆಟ್‍ಗಳನ್ನು ಮತ್ತೆ ಪರಿಶೀಲನೆ ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

    ದೆಹಲಿ ಸರ್ಕಾರ 12 ಕಾಲೇಜುಗಳ ಹಣದ ಬಳಕೆ ಮತ್ತು ನಿರ್ವಹಣೆಯನ್ನು ಪರಿಶೀಲಿಸಲು ಸೋಮವಾರ ಏಳು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಹಿನ್ನೆಲೆ ನಾವು ಇದರ ವಿರುದ್ಧ 6,000 ಶಿಕ್ಷಕರಿಂದ ಸಹಿಗಳನ್ನು ಸ್ವೀಕರಿಸಿದ್ದೇವೆ. ಈ ಕುರಿತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಆನ್‍ಲೈನ್ ಅರ್ಜಿಯನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ:  ಕಿಟ್‌ಕ್ಯಾಟ್ ರ‍್ಯಾಪರ್‌ನಲ್ಲಿ ಲಾರ್ಡ್ ಪುರಿ ಜಗನ್ನಾಥ ಫೋಟೋ – ಪ್ಯಾಕ್‌ಗಳನ್ನು ಹಿಂತೆಗೆದುಕೊಂಡ ನೆಸ್ಲೆ ಇಂಡಿಯಾ

    ನಮ್ಮ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಮತ್ತು ನಮ್ಮ ಹೋರಾಟವನ್ನು ತೀವ್ರಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಲು ಶನಿವಾರ ಸಭೆ ಸೇರಲಿದ್ದೇವೆ. ಈ ಸಭೆ ಡಿಯುಟಿಎ ಕಾರ್ಯನಿರ್ವಾಹಕರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ವಿವರಿಸಿದರು.

    12 ಕಾಲೇಜುಗಳು ಹಣ ಬಿಡುಗಡೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಜೊತೆ ದೀರ್ಘಕಾಲದಿಂದ ಜಗಳ ನಡೆಯುತ್ತಿದೆ.

  • ಪರಿಕ್ಕರ್ ಪುತ್ರನನ್ನು ಎಎಪಿಗೆ ಆಹ್ವಾನಿಸಿದ ಕೇಜ್ರಿವಾಲ್

    ಪರಿಕ್ಕರ್ ಪುತ್ರನನ್ನು ಎಎಪಿಗೆ ಆಹ್ವಾನಿಸಿದ ಕೇಜ್ರಿವಾಲ್

    ನವದೆಹಲಿ: ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿ ಅವರನ್ನು ಎಎಪಿಗೆ ಆಹ್ವಾನಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಬಿಜೆಪಿಯು ಪರಿಕ್ಕರ್ ಕುಟುಂಬದೊಂದಿಗೆ ಯೂಸ್ ಅಂಡ್ ಥ್ರೋ ನೀತಿಯನ್ನು ಅನುಸರಿಸುತ್ತಿದೆ. ಇದರಿಂದ ಗೋವಾ ಜನರಿಗೆ ತೀವ್ರ ಬೇಸರ ಉಂಟುಮಾಡಿದೆ. ನಾನು ಮನೋಹರ್ ಪರಿಕ್ಕರ್ ಅವರನ್ನು ಯಾವಾಗಲೂ ಗೌರವಿಸುತ್ತೇನೆ. ಉತ್ಪಲ್ ಅವರಿಗೆ ಗೋವಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಎಎಪಿಯಿಂದ ಟಿಕೆಟ್ ನೀಡುವುದಾಗಿ ಎಂದು ಟ್ವೀಟ್ ಮಾಡಿದ್ದಾರೆ.

    ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿಯು 34 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಉತ್ಪಲ್ ಪರಿಕ್ಕರ್ ಹೆಸರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್, ಉತ್ಪಲ್ ಪರಿಕ್ಕರ್ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು. ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವರು ಒಪ್ಪಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದರು.

    ಟಿಕೆಟ್ ಸಿಕ್ಕಿಲ್ಲ ಯಾಕೆ?: ಪರಿಕ್ಕರ್ ಕುಟುಂಬ ಯಾವಾಗಲೂ ನಮ್ಮ ಕುಟುಂಬವಿದ್ದಂತೆ. ಮನೋಹರ್ ಪರಿಕ್ಕರ್ ಅವರ ಸ್ಥಾನವಾದ ಪಂಜಿಮ್‍ನಿಂದ ಉತ್ಪಾಲ್ ಸ್ಪರ್ಧಿಸಲು ಬಯಸಿದ್ದರು. ಆ ಸ್ಥಾನವನ್ನು ಈಗಾಗಲೇ ಹಾಲಿ ಶಾಸಕರಿಗೆ ನೀಡಲಾಗಿದೆ. ಆದರೆ ಹಾಲಿ ಶಾಸಕರನ್ನು ಕೈಬಿಡುವುದು ಸರಿಯಲ್ಲ. ಆದರೆ, ನಾವು ಅವರಿಗೆ ಆಯ್ಕೆಯನ್ನು ನೀಡಿದ್ದೇವೆ. ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆ ನೀಡಿದ್ದು, ಆ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದರು.

    ಉತ್ಪಾಲ್ ಅವರಿಗೆ ಇದು ರಾಜಕೀಯಕ್ಕಿಂತ ಹೆಚ್ಚು ಭಾವನಾತ್ಮಕ ವಿಷಯವಾಗಿರುವುದರಿಂದ ಬೇರೆ ಯಾವುದೇ ಸ್ಥಾನದಿಂದ ಸ್ಪರ್ಧಿಸಲು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ಕಳೆದ ಒಂದು ತಿಂಗಳಲ್ಲಿ ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಪಕ್ಷದ ಹಲವು ಪ್ರಮುಖ ನಾಯಕರು ಮನವೊಲಿಸಲು ಯತ್ನಿಸಿದ್ದರು.  ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ಶಿವಸೇನೆ ಸಂಸದ ಸಂಜಯ್ ರಾವುತ್ ಮಾತನಾಡಿ, ಮನೋಹರ್ ಪರಿಕ್ಕರ್ ಅವರ ಮಗ ಅವರು ಸ್ವತಂತ್ರವಾಗಿ ಸ್ಪರ್ಧಿಸಿದರೆ ಉತ್ಪಾಲ್ ಅವರ ಅಭ್ಯರ್ಥಿಯನ್ನು ಎಲ್ಲಾ ಬಿಜೆಪಿಯೇತರ ಪಕ್ಷಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಜಾರ್ಖಂಡ್ ಮೂಲದ ಮೂವರು ಸೋಂಕಿತರು ಮಡಿಕೇರಿಯಿಂದ ಪರಾರಿ

    ಉತ್ಪಲ್ ಪರಿಕ್ಕರ್ ಅವರು ಇತ್ತೀಚೆಗೆ ಮಾತನಾಡಿ, 1994ರಿಂದ ತಂದೆಯೊಂದಿಗೆ ಇದ್ದ ಬಿಜೆಪಿ ನಾಯಕರು ಈಗಲೂ ಅವರನ್ನು ಬೆಂಬಲಿಸುತ್ತಿದ್ದಾರೆ. ಅವರು ತಮ್ಮ ತಂದೆಯ ಮರಣದ ನಂತರ ಪಣಜಿಯ ಮತದಾರರನ್ನು ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ದಿವಂಗತ ಮನೋಹರ್ ಪರಿಕ್ಕರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗೆ ಪಕ್ಷ ಟಿಕೆಟ್ ನೀಡುವುದೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

    ಗೋವಾ ಚುನಾವಣೆಗೆ ಕೆಲವೇ ವಾರಗಳಿದ್ದು, ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಾಂಕ್ವೆಲಿಮ್‍ನಿಂದ ಸ್ಪರ್ಧಿಸಿದರೆ, ಉಪಮುಖ್ಯಮಂತ್ರಿ ಮನೋಹರ್ ಅಜಗಾಂವ್‍ಕರ್ ಮಾಗಾರ್ಂವ್‍ನಿಂದ ಸ್ಪರ್ಧಿಸುವುದು ಖಚಿತವಾಗಿದೆ.