Tag: aap

  • Punjab Election Results 2022: ರಾಷ್ಟ್ರೀಯ ಕಚೇರಿ ಎದುರು ಬ್ಯಾನರ್, ಜಿಲೇಬಿ ರೆಡಿ – ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡ AAP

    Punjab Election Results 2022: ರಾಷ್ಟ್ರೀಯ ಕಚೇರಿ ಎದುರು ಬ್ಯಾನರ್, ಜಿಲೇಬಿ ರೆಡಿ – ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡ AAP

    ಚಂಡೀಗಢ: ಪಂಚರಾಜ್ಯಗಳ ಮತ ಎಣಿಕೆ ಆರಂಭವಾಗಿದೆ. ಇತ್ತ ಪಂಜಾಬ್‍ನಲ್ಲಿ ಗೆಲುವಿನ ವಿಶ್ವಾಸದಲ್ಲಿರುವ ಆಮ್ ಆದ್ಮಿ ಪಕ್ಷ ಗೆಲುವಿನ ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

    ಪಂಜಾಬ್‍ನಲ್ಲಿ 117 ಕ್ಷೇತ್ರಕ್ಕೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ ಎಎಪಿ ಪಕ್ಷದ ರಾಷ್ಟ್ರೀಯ ಕಚೇರಿಯ ಹೊರಗೆ ಮತದಾರರಿಗೆ ಧನ್ಯವಾದ ಎಂಬ ಬ್ಯಾನರ್ ಅಳವಡಿಸಿಕೊಂಡಿರುವುದು ಕಂಡುಬಂದಿದೆ. ಪಂಜಾಬ್‍ನಲ್ಲಿ ಎಎಪಿಯಿಂದ ಸಿಎಂ ಅಭ್ಯರ್ಥಿಯಾಗಿರುವ ಭಗವಂತ್ ಮಾನ್ ಅವರ ಚಿತ್ರವಿರುವ ಧನ್ಯವಾದಗಳ ಬ್ಯಾನರ್ ಹಾಕಲಾಗಿದ್ದು, ಆದರೆ, ಅದನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಆಪ್‍ಗೆ ಸಿಗುತ್ತಾ ಅಧಿಕಾರ..?- ಉತ್ತರಾಖಂಡ್, ಮಣಿಪುರ ಕತೆಯೇನು..?

    ಎಕ್ಸಿಟ್ ಪೋಲ್‍ನಲ್ಲಿ ಈ ಬಾರಿ ಎಎಪಿ ಪಂಜಾಬ್‍ನಲ್ಲಿ ಗೆಲುವಿನ ನಗೆ ಬೀರಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಎಎಪಿ ಗೆಲುವಿನ ವಿಶ್ವಾಶದೊಂದಿಗೆ ಕಚೇರಿಯ ಒಳಗೆ ಹೂ, ಬಲೂನ್‍ಗಳಿಂದ ಸಿಂಗರಿಸಲಾಗಿದೆ. ಅಲ್ಲದೆ ಸಂಗ್ರೂರಿನಲ್ಲಿರುವ ಭಗವಂತ್ ಮಾನ್ ಅವರ ನಿವಾಸವನ್ನು ಹೂವುಗಳಿಂದ ಅಲಂಕರಿಸಲಾಗಿದ್ದು, ಬೆಳಗ್ಗೆಯಿಂದಲೇ ಅಲ್ಲಿ ಜಿಲೇಬಿ ತಯಾರಿ ಕೂಡ ನಡೆಯುತ್ತಿದೆ. ಆರಂಭದ ಮತ ಎಣಿಕೆಯಲ್ಲಿ ಎಎಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

  • ಪಂಜಾಬ್‌ ಚುನಾವಣೆ : ಆರಂಭದ ಮತ ಎಣಿಕೆಯಲ್ಲಿ ಆಪ್‌ ಮುನ್ನಡೆ

    ಪಂಜಾಬ್‌ ಚುನಾವಣೆ : ಆರಂಭದ ಮತ ಎಣಿಕೆಯಲ್ಲಿ ಆಪ್‌ ಮುನ್ನಡೆ

    ಲಕ್ನೋ: ಪಂಜಾಬ್‌ ಮತ ಎಣಿಕೆ ಆರಂಭಗೊಂಡಿದ್ದು ಆರಂಭದ ಅಂಚೆ ಮತ ಎಣಿಕೆಯಲ್ಲಿ ಆಪ್‌ ಮುನ್ನಡೆ ಸಾಧಿಸಿದೆ.

    ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಪಡೆದರೂ ಮಧ್ಯಾಹ್ನದ ವೇಳೆ ಫಲಿತಾಂಶ ಸ್ಪಷ್ಟವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳು ಆಪ್‌ ಏಕಾಂಗಿಯಾಗಿ ಸರ್ಕಾರ ರಚಿಸಲಿದೆ ಎಂದು ಎಂದು ಭವಿಷ್ಯ ನುಡಿದಿವೆ.

    ಒಟ್ಟು 117 ಸ್ಥಾನಗಳ ಪೈಕಿ ಬಹುಮತಕ್ಕೆ 59 ಅಗತ್ಯವಿದೆ. 2017ರ ಫಲಿತಾಂಶದಲ್ಲಿ ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ 18, ಇತರರು 02 ಸ್ಥಾನವನ್ನು ಗೆದ್ದಿದ್ದರು.

  • ಪಂಜಾಬ್‍ನಲ್ಲಿ ಆಪ್‍ಗೆ ಸಿಗುತ್ತಾ ಅಧಿಕಾರ..?- ಉತ್ತರಾಖಂಡ್, ಮಣಿಪುರ ಕತೆಯೇನು..?

    ಪಂಜಾಬ್‍ನಲ್ಲಿ ಆಪ್‍ಗೆ ಸಿಗುತ್ತಾ ಅಧಿಕಾರ..?- ಉತ್ತರಾಖಂಡ್, ಮಣಿಪುರ ಕತೆಯೇನು..?

    ಚಂಡೀಗಢ: ಪಂಜಾಬ್‍ನಲ್ಲಿ ಆಮ್ ಆದ್ಮಿ (Aam Aadmi) ಪಕ್ಷ ಅಧಿಕಾರಕ್ಕೆ ಏರಲಿದೆ, ಕಾಂಗ್ರೆಸ್ (Congress) ಧೂಳೀಪಟವಾಗಲಿದೆ ಎಂದು ಎಲ್ಲಾ ಎಕ್ಸಿಟ್ ಪೋಲ್‍ (Exit Poll) ಗಳು ಹೇಳಿವೆ. ಆದರೆ ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡಂತೆ ಕಾಣುತ್ತಿಲ್ಲ. 2017ರಲ್ಲಿಯೂ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದು ಕೂಡ ಎಎಪಿ (AAP) ಬರುತ್ತೆ ಎಂದು. ಆದರೆ ಗೆದ್ದಿದ್ದು ಮಾತ್ರ ಕಾಂಗ್ರೆಸ್ ಆಗಿತ್ತು. ಹೀಗಾಗಿ ಈ ಬಾರಿಯೂ ಅದೇ ಮ್ಯಾಜಿಕ್ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ.

    Exit Poll- ಪಂಜಾಬ್‍ನಲ್ಲಿ ಆಪ್ ಸರ್ಕಾರ 
    ಪೋಲ್ ಆಫ್ ದಿ ಪೋಲ್ಸ್ ಪ್ರಕಾರ ಆಪ್‍ಗೆ ಸ್ಪಷ್ಟ ಬಹುಮತ ಬರುತ್ತದೆ. ಸರ್ವೇ ಪ್ರಕಾರ ಆಪ್- 68, ಕಾಂಗ್ರೆಸ್ 28 ಸ್ಥಾನ ಸಿಗಲಿದ್ದು, ಅಕಾಲಿದಳ 19, ಬಿಜೆಪಿ (BJP)ಗೆ 4 ಸ್ಥಾನ ಸಾಧ್ಯತೆ ಇದೆ. ಕಾಂಗ್ರೆಸ್ ಒಳಜಗಳದಿಂದ ಅಧಿಕಾರ ನಷ್ಟವಾಗಬಹುದು. ಇಲ್ಲಿ ಬಿಜೆಪಿಗೆ ಕ್ಯಾಪ್ಟನ್ ಮೈತ್ರಿ ವರ್ಕೌಟ್ ಆಗಿಲ್ಲ. ಅತಂತ್ರವಾದಲ್ಲಿ ಅಕಾಲಿಗಳ ಜೊತೆ ಆಪ್ ಮೈತ್ರಿ ಸಾಧ್ಯತೆ ಇದೆ. ಇದನ್ನೂ ಓದಿ: ಗುರುವಾರ ಪಂಚರಾಜ್ಯ ಚುನಾವಣಾ ಫಲಿತಾಂಶ- ಯುಪಿಯಲ್ಲಿ ಯಾರಿಗೆ ಒಲಿಯುತ್ತೆ ಅದೃಷ್ಟ..?

    ಒಟ್ಟು ಸ್ಥಾನಗಳು 117, ಬಹುಮತಕ್ಕೆ 59
    ಇಂಡಿಯಾ ಟುಡೇ:
    ಆಪ್‌ 76-90, ಕಾಂಗ್ರೆಸ್‌ 19-31, ಅಕಾಲಿ ದಳ 7-11, ಬಿಜೆಪಿ + 1-4, ಇತರರು 01

    ರಿಪಬ್ಲಿಕ್‌:
    ಆಪ್‌ 62-70, ಕಾಂಗ್ರೆಸ್‌ 23-31, ಅಕಾಲಿ ದಳ 16-24, ಬಿಜೆಪಿ+ 1-3,ಇತರರು 1-3

    ಟೈಮ್ಸ್‌ ನೌ:
    ಆಪ್‌ 70, ಕಾಂಗ್ರೆಸ್‌ 22, ಅಕಾಲಿ ದಳ 19, ಬಿಜೆಪಿ 05, ಇತರರು 0-1

    ಟುಡೇಸ್ ಚಾಣಕ್ಯ
    ಆಪ್‌ 100, ಕಾಂಗ್ರೆಸ್‌ 10, ಅಕಾಲಿ ದಳ 06, ಬಿಜೆಪಿ 01, ಇತರರು 00

    ಜನ ಕೀ ಬಾತ್‌
    ಆಪ್‌ 72, ಕಾಂಗ್ರೆಸ್‌ 24, ಅಕಾಲಿ ದಳ 15, ಬಿಜೆಪಿ + 05, ಇತರರು 01

    2017ರ ಫಲಿತಾಂಶ:
    ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ  18, ಇತರರು 02

    ಉತ್ತರಾಖಂಡ್ ಮತ್ತು ಮಣಿಪುರದ ಕತೆ ಏನು ಎಂಬುದನ್ನು ಸಂಕ್ಷಿಪ್ತವಾಗಿ ನೋಡೋದಾದ್ರೆ
    Exit Poll- ಬಿಜೆಪಿಗೆ ‘ಮಣಿ'(60)… ಅತಂತ್ರ ‘ಖಂಡ`!(70)
    ಪೋಲ್ ಆಫ್ ದಿ ಪೋಲ್ಸ್ ಪ್ರಕಾರ ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಇದೆ. ಬಿಜೆಪಿ- 30, ಕಾಂಗ್ರೆಸ್- 13, ಇತರರಿಗೆ 17 ಸ್ಥಾನಗಳು ಬರಬಹುದು. ಅತಂತ್ರವಾದಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಂಭವವೂ ಇದೆ.

    ಒಟ್ಟು ಸ್ಥಾನಗಳು 70, ಬಹುಮತಕ್ಕೆ 36
    ಇಂಡಿಯಾ ಟುಡೇ
    ಬಿಜೆಪಿ + 41, ಕಾಂಗ್ರೆಸ್‌ 25, ಆಪ್ 0, ಬಿಎಸ್‌ಪಿ 3, ಇತರರು 4

    ರಿಪಬ್ಲಿಕ್‌
    ಬಿಜೆಪಿ+ 35-39, ಕಾಂಗ್ರೆಸ್‌ 28-24, ಆಪ್‌ 0-3, ಬಿಎಸ್‌ಪಿ 0, ಇತರರು 0

    ಟೈಮ್ಸ್‌ ನೌ
    ಬಿಜೆಪಿ+ 37, ಕಾಂಗ್ರೆಸ್‌ 31, ಆಪ್‌ 01, ಬಿಎಸ್‌ಪಿ, ಇತರರು 0

    ಟುಡೇಸ್‌ ಚಾಣಕ್ಯ
    ಬಿಜೆಪಿ 43, ಕಾಂಗ್ರೆಸ್‌ 24, ಇತರರು 3

    ಜನ ಕೀ ಬಾತ್‌
    ಬಿಜೆಪಿ 32 -41, ಕಾಂಗ್ರೆಸ್‌ 27-35, ಆಪ್‌ 0-1, ಇತರರು 0

    ಒಟ್ಟು ಸ್ಥಾನ 70 ಬಹುಮತಕ್ಕೆ 36
    2017ರ ಫಲಿತಾಂಶ ಬಿಜೆಪಿ 57, ಕಾಂಗ್ರೆಸ್ 11, ಇತರರು 2

    ಪೋಲ್ ಆಫ್ ದಿ ಪೋಲ್ಸ್ ಪ್ರಕಾರ ಉತ್ತರಾಖಂಡ (Uttarakhand) ಅತಂತ್ರವಾಗಲಿದೆ. ಸರ್ವೇ ಪ್ರಕಾರ ಬಿಜೆಪಿ 35, ಕಾಂಗ್ರೆಸ್ 32, ಎಎಪಿ 1, ಇತರೆ 2 ಸ್ಥಾನಗಳು ಬರಲಿದೆ. ಸಮೀಕ್ಷೆ ನಿಜವಾದ್ರೆ ಎರಡೂ ಪಕ್ಷಗಳಿಗೂ ಸರ್ಕಾರ ರಚನೆ ಸಮಾನ ಅವಕಾಶ ಇರಲಿದೆ. ಇಲ್ಲಿಯೂ ಕುದುರೆ ವ್ಯಾಪಾರ ಸಾಧ್ಯತೆ, ಕಾಂಗ್ರೆಸ್-ಬಿಜೆಪಿ ರಣತಂತ್ರ ಹೂಡುವ ಸಾಧ್ಯತೆಗಳಿವೆ.

    ಒಟ್ಟು ಸ್ಥಾನಗಳು 60, ಬಹುಮತಕ್ಕೆ 31
    ಇಂಡಿಯಾ ಟುಡೇ
    ಬಿಜೆಪಿ 33-43, ಕಾಂಗ್ರೆಸ್‌ 4-8, ಎನ್‌ಪಿಎಫ್‌ 0, ಎನ್‌ಪಿಪಿ 4-8, ಇತರರು 6-15

    ರಿಪಬ್ಲಿಕ್‌
    ಬಿಜೆಪಿ 27-31, ಕಾಂಗ್ರೆಸ್‌ 11-17, ಎನ್‌ಪಿಎಫ್‌ 6-10, ಎನ್‌ಪಿಪಿ 2-6, ಇತರರು 3-7

    ಟೈಮ್ಸ್‌ ನೌ
    ಬಿಜೆಪಿ 32-38, ಕಾಂಗ್ರೆಸ್‌ 12-17, ಎನ್‌ಪಿಎಫ್‌ 3-5, ಎನ್‌ಪಿಪಿ 2-5, ಇತರರು 0

    ಜನಕೀ ಬಾತ್‌
    ಬಿಜೆಪಿ 23-28, ಕಾಂಗ್ರೆಸ್‌ 14-10, ಎನ್‌ಪಿಎಫ್‌ 8-5, ಎನ್‌ಪಿಪಿ 7-8, ಇತರರು 0

    2017ರ ಫಲಿತಾಂಶ
    ಬಿಜೆಪಿ 21, ಕಾಂಗ್ರೆಸ್ 28, ಇತರರು 11

  • ದಲಿತ ನಾಯಕ ಎಂ.ಅರವಿಂದ್ AAP ಸೇರ್ಪಡೆ

    ದಲಿತ ನಾಯಕ ಎಂ.ಅರವಿಂದ್ AAP ಸೇರ್ಪಡೆ

    ಬೆಂಗಳೂರು: ದಲಿತ ನಾಯಕ ಎಂ.ಅರವಿಂದ್‌ ಅವರು ಆಮ್‌ ಆದ್ಮಿ ಪಕ್ಷವನ್ನು (AAP) ಸೇರ್ಪಡೆಯಾದರು.

    ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಅರವಿಂದ್‌ರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಮೂರು ದಶಕಗಳಿಂದ ದಲಿತರು ಹಾಗೂ ಶೋಷಿತರ ಧ್ವನಿಯಾಗಿ ಹೋರಾಡುತ್ತಿರುವ ಎಂ.ಅರವಿಂದ್‌ ಅವರ ಸೇರ್ಪಡೆಯಿಂದ ರಾಜ್ಯದಲ್ಲಿ ಆಮ್‌ ಆದ್ಮಿ ಪಾರ್ಟಿಯು ಮತ್ತಷ್ಟು ಸದೃಢಗೊಂಡಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಕೆಲವು ಜಾತಿಗಳು ಹಾಗೂ ಧರ್ಮಗಳಿಗೆ ಸೀಮಿತವಾಗಿವೆ. ಆದರೆ ಎಎಪಿ ಜಾತಿ, ಧರ್ಮಗಳ ಭೇದವಿಲ್ಲದೇ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಒಬ್ಬ ಬಡ ದಲಿತನ ಮಗ ಹಾಗೂ ಉನ್ನತ ಅಧಿಕಾರಿಯ ಮಗ ಒಂದೇ ಶಾಲೆಯಲ್ಲಿ ಅಕ್ಕಪಕ್ಕ ಕುಳಿತು ಪಾಠ ಕಲಿಯುವಂತಾಗಬೇಕು ಎಂದು ಬಾಬಾಸಾಹೇಬ್‌ ಅಂಬೇಡ್ಕರ್‌ ಕನಸು ಕಂಡಿದ್ದರು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಅಂಬೇಡ್ಕರ್‌ ಕನಸನ್ನು ದೆಹಲಿಯ ಎಎಪಿ ಸರ್ಕಾರ ನನಸು ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಗೋವಾ ಮತದಾರರು ಕಾಂಗ್ರೆಸ್ ಸರ್ಕಾರ ತರಲು ಇಚ್ಛಿಸಿದ್ದಾರೆ: ಡಿ.ಕೆ ಶಿವಕುಮಾರ್

    ಎಂ.ಅರವಿಂದ್‌ ಮಾತನಾಡಿ, ಪಾರದರ್ಶಕತೆ, ಜನಪರ ಕಾಳಜಿ, ಸಮಾನತೆಯಲ್ಲಿ ನಂಬಿಕೆ ಹೊಂದಿರುವ ಹಾಗೂ ಇದನ್ನು ದೆಹಲಿಯಲ್ಲಿ ಸಾಧಿಸಿ ತೋರಿಸಿರುವ ಆಮ್‌ ಆದ್ಮಿ ಪಾರ್ಟಿಯಿಂದ ಮಾತ್ರ ದಲಿತರ ಪ್ರಗತಿ ಸಾಧ್ಯ. ಪಕ್ಷವು ಕರ್ನಾಟಕದಲ್ಲಿ ಬಲಗೊಂಡು ಶೀಘ್ರವೇ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇಲ್ಲದಿದ್ದರೆ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಮಾಡಿ ದಲಿತರು, ಬಡವರು, ಶೋಷಿತರು ಕಷ್ಟದಲ್ಲಿಯೇ ಬದುಕುವಂತೆ ಮಾಡುತ್ತವೆ ಎಂದು ತಿಳಿಸಿದರು.

    ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷರಾದ ಮೋಹನ್‌ ದಾಸರಿ ಮಾತನಾಡಿ, ರಾಜ್ಯವನ್ನಾಳಿದ ಮೂರೂ ಪಕ್ಷಗಳಿಂದ ದಲಿತರು ಸೇರಿದಂತೆ ಯಾರಿಗೂ ಏನೂ ಲಾಭವಿಲ್ಲ. ಅವೆಲ್ಲವೂ ತಮ್ಮ ನಾಯಕರ ಜೇಬು ತುಂಬಿಸಿಕೊಳ್ಳುವುದಕ್ಕಾಗಿಯೇ ಇರುವ ಪಕ್ಷಗಳು. ಇದನ್ನು ಅರ್ಥ ಮಾಡಿಕೊಂಡು ಎಲ್ಲ ವರ್ಗಗಳ ಜನರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರ ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಎಂದಿದ್ದೆ: ಎಚ್‍ಡಿಕೆ

    1990ರ ದಶಕದಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷರಾಗಿ ಸಮಾಜಮುಖಿ ಕೆಲಸ ಆರಂಭಿಸಿದ ಎಂ.ಅರವಿಂದ್‌ ಅವರು ನಂತರ ಭೀಮ್‌ ಮಾರ್ಚ್ ಸಂಘಟನೆ ಹಾಗೂ ಸಮತಾ ಸೈನಿಕ ದಳದ ಉನ್ನತ ಹುದ್ದೆ ಅಲಂಕರಿಸಿ ದಲಿತರ ಹಕ್ಕುಗಳಿಗಾಗಿ ಹೋರಾಡಿದ್ದರು. 1996ರಲ್ಲಿ ರಾಮ್ ವಿಲಾಸ್‌ ಪಾಸ್ವಾನ್‌ ಜೊತೆ ಗುರುತಿಸಿಕೊಂಡು, ಅವರ ನೇತೃತ್ವದ ದಲಿತ ಸೇನಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಭೂಮಿಯಿಲ್ಲದವರಿಗೆ ಭೂಮಿ ಕೊಡಿಸುವ ಹೋರಾಟಗಾರರಾಗಿ, ಎಸ್‌ಸಿ-ಎಸ್‌ಟಿ ವಿಚಕ್ಷಣಾ ಸಮಿತಿಯ ಸದಸ್ಯರಾಗಿ, ರೈಲ್ವೆ ನೇಮಕಾತಿ ಮಂಡಳಿಯ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಕೊರೊನಾ ಸಮಯದಲ್ಲಿ ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕುಗಳಲ್ಲಿ ಉಚಿತ ವೈದ್ಯಕೀಯ ನೆರವು ಕಲ್ಪಿಸಿ ನೆರವಾಗಿದ್ದರು.

    ಎಎಪಿಯ ಮುಖಂಡರಾದ ನಂಜಪ್ಪ ಕಾಳೇಗೌಡ, ಜಗದೀಶ್‌ ವಿ ಸದಂ, ವಿಜಯ್‌ ಶಾಸ್ತ್ರಿಮಠ್‌, ದರ್ಶನ್‌ ಜೈನ್‌, ಬಿ.ಟಿ.ನಾಗಣ್ಣ ಮತ್ತಿತರ ನಾಯಕರು, ಅರವಿಂದ್‌ ಅವರ ಆಪ್ತರು ಹಾಗೂ ಎಎಪಿ ಕಾರ್ಯಕರ್ತರು ಭಾವಹಿಸಿದ್ದರು. ಇದನ್ನೂ ಓದಿ: ಕನ್ನಡದಲ್ಲಿ ಮಾತಾಡೋಕೆ ಹೇಳಿ, ನಮಗೆ ಏನೂ ಅರ್ಥ ಆಗ್ತಿಲ್ಲ: ಪರಿಷತ್‌ ಕಲಾಪದಲ್ಲಿ ಗಲಾಟೆ

  • ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಪ್‌ – ಯಾವ ಸಮೀಕ್ಷೆ ಏನು ಹೇಳಿವೆ?

    ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಪ್‌ – ಯಾವ ಸಮೀಕ್ಷೆ ಏನು ಹೇಳಿವೆ?

    ನವದೆಹಲಿ: ಪಂಚರಾಜ್ಯಗಳ ಚುನಾವಣೆ ಮುಕ್ತಾಯಗೊಂಡಿದ್ದು ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಭವಿಷ್ಯ ಮಾ.10 ರಂದು ನಿಜವಾದರೆ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಏರುವ ಮೂಲಕ ಬಿಜೆಪಿ ದಾಖಲೆ ಸೃಷ್ಟಿಸಲಿದೆ.

    ಪಂಜಾಬ್‌ನಲ್ಲಿ ಆಪ್‌ ಭರ್ಜರಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಈ ಮೂಲಕ ದೆಹಲಿ ಬಿಟ್ಟು ಮತ್ತೊಂದು ರಾಜ್ಯವನ್ನು ಆಪ್‌ ಹಿಡಿದಂತಾಗಿದೆ. ಗೋವಾ, ಉತ್ತರಾಖಂಡ್‌, ಮಣಿಪುರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

    ಉತ್ತರ ಪ್ರದೇಶ:
    ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಅದರಲ್ಲೂ ಉತ್ತರ ಪ್ರದೇಶದ ಎಲೆಕ್ಷನ್ ರಿಸಲ್ಟ್, ಮುಂದಿನ ಸಾರ್ವತ್ರಿಕ ಚುನಾವಣೆ, ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಈ ಮತ ಸಮರವನ್ನು ಪ್ರಮುಖ ಪಕ್ಷಗಳು ಪ್ರತಿಷ್ಠೆಯಾಗಿ ಪರಿಣಮಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳ್ತಿವೆ. ಆದರೆ ಸಮಾಜವಾದಿ ಪಕ್ಷದ ತೀವ್ರ ಪೈಪೋಟಿ ಕಾರಣ ಸರಳ ಬಹುಮತಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿವೆ. ಪ್ರಿಯಾಂಕಾ ಗಾಂಧಿ ಪ್ರಚಾರ ಕಾಂಗ್ರೆಸ್‍ಗೆ ಫಲಕೊಟ್ಟಿಲ್ಲ. ಬಿಎಸ್‍ಪಿಯ ಮಾಯಾವತಿ ಮ್ಯಾಜಿಕ್ ಮಾಡಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದನ್ನೂ ಓದಿ: ಸಮೀಕ್ಷೆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, 300ಕ್ಕಿಂತ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ: ಅಖಿಲೇಶ್ ಯಾದವ್

    ಒಟ್ಟು ಸ್ಥಾನಗಳು 403, ಬಹುಮತಕ್ಕೆ 203
    ಇಂಡಿಯಾ ಟುಡೇ:
    ಬಿಜೆಪಿ 288-326, ಎಸ್‍ಪಿ+ 71-101, ಬಿಎಸ್‌ಪಿ 03-09, ಕಾಂಗ್ರೆಸ್‌ 01-03 ಇತರರು 2-3

    ರಿಪಬ್ಲಿಕ್:
    ಬಿಜೆಪಿ 262-277, ಎಸ್‌ಪಿ + 119-134, ಬಿಎಸ್‌ಪಿ 7-15, ಕಾಂಗ್ರೆಸ್‌ 3-08, ಇತರರು 00

    ಟೈಮ್ಸ್ ನೌ:
    ಬಿಜಪಿ 225, ಎಸ್‌ಪಿ 151, ಬಿಎಸ್‌ಪಿ 14, ಕಾಂಗ್ರೆಸ್‌ 04, ಇತರರು 00

    ಟುಡೇಸ್‌ ಚಾಣಕ್ಯ
    ಬಿಜೆಪಿ 294, ಎಸ್‌ಪಿ 105, ಬಿಎಸ್‌ಪಿ 2, ಕಾಂಗ್ರೆಸ್‌ 1, ಇತರರು 1

    ಜನ್‍ಕೀ ಬಾತ್:
    ಬಿಜೆಪಿ 222-260, ಎಸ್‌ಪಿ 135-165, ಬಿಎಸ್‌ಪಿ 04-09, ಕಾಂಗ್ರೆಸ್‌ 01-03, ಇತರರು 3-4

    2017 ಫಲಿತಾಂಶ:
    ಬಿಜೆಪಿ 312, ಬಿಎಸ್‌ಪಿ 19, ಎಸ್‌ಪಿ+ಕಾಂಗ್ರೆಸ್ 54, ಇತರರು- 18

    ಪಂಜಾಬ್:
    ತೀವ್ರ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯ ಅಂದ್ರೆ ಪಂಜಾಬ್. ಇಲ್ಲಿ ನಾಯಕತ್ವದ ಕಿತ್ತಾಟದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ದೆಹಲಿ ಬಳಿಕ ಪಂಜಾಬ್‍ನಲ್ಲಿ ಎಎಪಿ ಅಧಿಕಾರ ಹಿಡಿಯಲಿದೆ. ಎಲ್ಲಾ ಎಕ್ಸಿಟ್ ಪೊಲ್‍ಗಳು ಎಎಪಿಗೆ ಗದ್ದುಗೆ ಏರಲಿವೆ ಎಂದಿದೆ. ಶಿರೋಮಣಿ ಅಕಾಲಿ ದಳ ಸ್ವಲ್ಪಮಟ್ಟಿಗೆ ಮಾತ್ರ ಪ್ರಭಾವ ಬೀರಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಸೇರಿದ್ದಕ್ಕೂ ಬಿಜೆಪಿಗೆ ಇಲ್ಲಿ ಪ್ರಯೋಜನವಾಗಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.

    ಒಟ್ಟು ಸ್ಥಾನಗಳು 117, ಬಹುಮತಕ್ಕೆ 59
    ಇಂಡಿಯಾ ಟುಡೇ:
    ಆಪ್‌ 76-90, ಕಾಂಗ್ರೆಸ್‌ 19-31, ಅಕಾಲಿ ದಳ 7-11, ಬಿಜೆಪಿ + 1-4, ಇತರರು 01

    ರಿಪಬ್ಲಿಕ್‌:
    ಆಪ್‌ 62-70, ಕಾಂಗ್ರೆಸ್‌ 23-31, ಅಕಾಲಿ ದಳ 16-24, ಬಿಜೆಪಿ+ 1-3,ಇತರರು 1-3

    ಟೈಮ್ಸ್‌ ನೌ:
    ಆಪ್‌ 70, ಕಾಂಗ್ರೆಸ್‌ 22, ಅಕಾಲಿ ದಳ 19, ಬಿಜೆಪಿ 05, ಇತರರು 0-1

    ಟುಡೇಸ್ ಚಾಣಕ್ಯ
    ಆಪ್‌ 100, ಕಾಂಗ್ರೆಸ್‌ 10, ಅಕಾಲಿ ದಳ 06, ಬಿಜೆಪಿ 01, ಇತರರು 00

    ಜನ ಕೀ ಬಾತ್‌
    ಆಪ್‌ 72, ಕಾಂಗ್ರೆಸ್‌ 24, ಅಕಾಲಿ ದಳ 15, ಬಿಜೆಪಿ + 05, ಇತರರು 01

    2017ರ ಫಲಿತಾಂಶ:
    ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ  18, ಇತರರು 02

    ಗೋವಾ:
    ಹಾರುವ ಶಾಸಕರು ಖ್ಯಾತಿಯ ಗೋವಾದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದು ಅನುಮಾನ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಕಳೆದ ಬಾರಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರಕ್ಕೇರುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ, ಈ ಚುನಾವಣೆ ಬರುವ ಹೊತ್ತಿಗೆ ಕೇವಲ ಒಬ್ಬ ಶಾಸಕ ಉಳಿದುಕೊಂಡಿದ್ದರು.

    ಸ್ಥಳೀಯ ನಾಯಕರು ಇಲ್ಲದೇ ಹೋದ್ರೂ, ಈ ಬಾರಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಿಟ್ಟಿಸಲಿದೆ.. ಕಾಂಗ್ರೆಸ್ ಸರಿಸಮನಾಗಿ ಬಿಜೆಪಿ ಫೈಟ್ ಕೊಟ್ಟಿದೆ. ಇಲ್ಲಿ ಯಾವುದೇ ಪಕ್ಷ ಗೆದ್ರೂ ಮೂರ್ನಾಲ್ಕು ಸೀಟುಗಳ ಅಂತರ ಅಷ್ಟೇ ಇರಲಿದೆ.. ಎಎಪಿ-ಟಿಎಂಸಿ ಪಕ್ಷಗಳು ಖಾತೆ ತೆರೆಯಲಿವೆ ಎಂಬ ಲೆಕ್ಕಗಳು ಈ ಎಕ್ಸಿಟ್ ಪೋಲ್‍ನಲ್ಲಿ ಸಿಕ್ಕಿವೆ.  ಇದನ್ನೂ ಓದಿ: ಗೋವಾದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ: ಪ್ರಮೋದ್ ಸಾವಂತ್

    ಒಟ್ಟು ಸ್ಥಾನಗಳು 40, ಬಹುಮತಕ್ಕೆ 21
    ಇಂಡಿಯಾ ಟುಡೇ
    ಬಿಜೆಪಿ 14-18, ಕಾಂಗ್ರೆಸ್‌+ 15-20, ಆಪ್‌ – 0, ಟಿಎಂಸಿ 2-5, ಇತರರು 0-4

    ರಿಪಬ್ಲಿಕ್‌
    ಬಿಜೆಪಿ 13-17, ಕಾಂಗ್ರೆಸ್‌+ 13-17, ಆಪ್‌ 2-6, ಟಿಎಂಸಿ 2-4, ಇತರರು 0-4

    ಟೈಮ್ಸ್‌ ನೌ
    ಬಿಜೆಪಿ 14, ಕಾಂಗ್ರೆಸ್‌+ 16, ಆಪ್‌ 0, ಟಿಎಂಸಿ 0, ಇತರರು 10

    ಜನ್‍ ಕೀ ಬಾತ್
    ಬಿಜೆಪಿ 14-19, ಕಾಂಗ್ರೆಸ್+‌ 13-19, ಆಪ್‌ 2-1, ಟಿಎಂಸಿ 5-2 ಇತರರು 1-3

    2017 ಫಲಿತಾಂಶ
    ಕಾಂಗ್ರೆಸ್ 17, ಬಿಜೆಪಿ 13, ಆಪ್ 0, ಇತರರು 10

    ಉತ್ತರಾಖಂಡ
    ದೇವಭೂಮಿ ಖ್ಯಾತಿಯ ಉತ್ತರಾಖಂಡದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಬಿಜೆಪಿ ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆಯಿದೆ.

    ಒಟ್ಟು ಸ್ಥಾನಗಳು 70, ಬಹುಮತಕ್ಕೆ 36
    ಇಂಡಿಯಾ ಟುಡೇ
    ಬಿಜೆಪಿ + 41, ಕಾಂಗ್ರೆಸ್‌ 25, ಆಪ್ 0, ಬಿಎಸ್‌ಪಿ 3, ಇತರರು 4

    ರಿಪಬ್ಲಿಕ್‌
    ಬಿಜೆಪಿ+ 35-39, ಕಾಂಗ್ರೆಸ್‌ 28-24, ಆಪ್‌ 0-3, ಬಿಎಸ್‌ಪಿ 0, ಇತರರು 0

    ಟೈಮ್ಸ್‌ ನೌ
    ಬಿಜೆಪಿ+ 37, ಕಾಂಗ್ರೆಸ್‌ 31, ಆಪ್‌ 01, ಬಿಎಸ್‌ಪಿ, ಇತರರು 0

    ಟುಡೇಸ್‌ ಚಾಣಕ್ಯ
    ಬಿಜೆಪಿ 43, ಕಾಂಗ್ರೆಸ್‌ 24, ಇತರರು 3

    ಜನ ಕೀ ಬಾತ್‌
    ಬಿಜೆಪಿ 32 -41, ಕಾಂಗ್ರೆಸ್‌ 27-35, ಆಪ್‌ 0-1, ಇತರರು 0

    ಒಟ್ಟು ಸ್ಥಾನ 70 ಬಹುಮತಕ್ಕೆ 36
    2017ರ ಫಲಿತಾಂಶ ಬಿಜೆಪಿ 57, ಕಾಂಗ್ರೆಸ್ 11, ಇತರರು 2

    ಮಣಿಪುರ
    ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಸಿಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕೆಲ ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂದು ಭವಿಷ್ಯ ನುಡಿದಿವೆ

    ಒಟ್ಟು ಸ್ಥಾನಗಳು 60, ಬಹುಮತಕ್ಕೆ 31
    ಇಂಡಿಯಾ ಟುಡೇ
    ಬಿಜೆಪಿ 33-43, ಕಾಂಗ್ರೆಸ್‌ 4-8, ಎನ್‌ಪಿಎಫ್‌ 0, ಎನ್‌ಪಿಪಿ 4-8, ಇತರರು 6-15

    ರಿಪಬ್ಲಿಕ್‌
    ಬಿಜೆಪಿ 27-31, ಕಾಂಗ್ರೆಸ್‌ 11-17, ಎನ್‌ಪಿಎಫ್‌ 6-10, ಎನ್‌ಪಿಪಿ 2-6, ಇತರರು 3-7

    ಟೈಮ್ಸ್‌ ನೌ
    ಬಿಜೆಪಿ 32-38, ಕಾಂಗ್ರೆಸ್‌ 12-17, ಎನ್‌ಪಿಎಫ್‌ 3-5, ಎನ್‌ಪಿಪಿ 2-5, ಇತರರು 0

    ಜನಕೀ ಬಾತ್‌
    ಬಿಜೆಪಿ 23-28, ಕಾಂಗ್ರೆಸ್‌ 14-10, ಎನ್‌ಪಿಎಫ್‌ 8-5, ಎನ್‌ಪಿಪಿ 7-8, ಇತರರು 0

    2017ರ ಫಲಿತಾಂಶ
    ಬಿಜೆಪಿ 21, ಕಾಂಗ್ರೆಸ್ 28, ಇತರರು 11

  • ಅಕ್ರಮದಲ್ಲಿ ಸಚಿವರು, ಶಾಸಕರ ಪಾತ್ರದ ಬಗ್ಗೆ ತನಿಖೆಯಾಗಲಿ: ಎಎಪಿ

    ಬೆಂಗಳೂರು: ಎಸಿಬಿ ಪತ್ತೆ ಮಾಡಿರುವ ಬಿಬಿಎಂಪಿಯ ಅಕ್ರಮಗಳಲ್ಲಿ ಪ್ರಭಾವಿ ಸಚಿವರು ಹಾಗೂ ಬೆಂಗಳೂರಿನ ಶಾಸಕರುಗಳ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಕೇವಲ ಅಧಿಕಾರಿಗಳನ್ನು ಬಲಿಪಶು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಕಿಡಿಕಾರಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಟಿ.ನಾಗಣ್ಣ ಅವರು, ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ 27 ಕಚೇರಿಗಳ ಮೇಲೆ ದಾಳಿ ಮಾಡಿ, ಸುಮಾರು 300 ಕೋಟಿ ರೂ. ಗಿಂತಲೂ ಹೆಚ್ಚಿನ ಮೊತ್ತದ ಹಲವು ಅಕ್ರಮಗಳನ್ನು ಬಯಲು ಮಾಡಿರುವುದು ಶ್ಲಾಘನೀಯ. ಆದರೆ ಈ ಎಲ್ಲ ಅಕ್ರಮಗಳು ಬೆಂಗಳೂರಿನ ಶಾಸಕರು ಹಾಗೂ ಸಚಿವರ ಅಣತಿಯ ಮೇರೆಗೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಎಸಿಬಿಯು ಕಾಟಾಚಾರಕ್ಕೆಂಬಂತೆ ಕೇವಲ ಅಧಿಕಾರಿಗಳನ್ನು ಹೊಣೆ ಮಾಡಿ, ಶಾಸಕರು ಹಾಗೂ ಸಚಿವರನ್ನು ಪಾರು ಮಾಡುತ್ತಿದೆ. ಭ್ರಷ್ಟ ಅಧಿಕಾರಿಗಳ ಜೊತೆ ಶಾಮೀಲಾಗಿ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಕ್ರಮಕ್ಕೆ ಕಾರಣರಾದ ಜನಪ್ರತಿನಿಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

    ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳಿಗೆ ಕಾನೂನುಬಾಹಿರವಾಗಿ ಅನುಮತಿ ನೀಡುವುದು ಸಾಮಾನ್ಯವಾಗಿದೆ. ಕಾಮಗಾರಿಗಳಿಗೆ ಸಂಬಂಧಿಸಿ ಒಂದೇ ಕೆಲಸಕ್ಕೆ ಎರಡೆರಡು ಬಿಲ್ ಮಾಡಿ ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಲಾಗುತ್ತಿದೆ. ಕಮರ್ಷಿಯಲ್ ಕಟ್ಟಡಗಳನ್ನು ರೆಸಿಡೆನ್ಸಿಯಲ್ ಕಟ್ಟಡವೆಂದು ತೋರಿಸಿ ತೆರಿಗೆ ವಂಚನೆ ಮಾಡಲು ಬಿಬಿಎಂಪಿಯ ಭ್ರಷ್ಟ ಅಧಿಕಾರಿಗಳು ಪೆÇ್ರೀತ್ಸಾಹ ನೀಡುತ್ತಿದ್ದಾರೆ. ಇವೆಲ್ಲದರಲ್ಲಿ ಶಾಸಕರು ಹಾಗೂ ಸಚಿವರಿಗೆ ಕಮಿಷನ್ ಹೋಗುತ್ತಿದ್ದು, ಅವರ ವಿರುದ್ಧವೂ ತನಿಖೆ ನಡೆದರೆ ಸತ್ಯ ಹೊರಬರಲಿದೆ ಎಂದು ಹೇಳಿದರು. ಇದನ್ನೂ ಓದಿ: ಯುದ್ಧ ಬೇಡ: ತನ್ನ ದೇಶಕ್ಕೆ ರಷ್ಯಾ ಟೆನಿಸ್‌ ತಾರೆ ಮನವಿ

    ಬೆಂಗಳೂರಿನ ಅದೂರು, ರಾಂಪುರ, ಸೀಗೆಹಳ್ಳಿ, ವೈಟ್‍ಫೀಲ್ಡ್ ಮುಂತಾದ ಕಡೆಗಳಲ್ಲಿ ಟಿಡಿಆರ್‌ಗೆ ಸಂಬಂಧಿಸಿ ತಮ್ಮ ಸಂಬಂಧಿಕರು ಹಾಗೂ ಪ್ರಭಾವಿಗಳ ಜೊತೆ ಕೈಜೋಡಿಸಿ ಬಿಬಿಎಂಪಿ ಅಧಿಕಾರಿಗಳು ಭಾರೀ ಅಕ್ರಮ ಎಸಗಿದ್ದಾರೆ. ಜಾಹೀರಾತು ಪ್ರದರ್ಶನವು ದೊಡ್ಡ ದಂಧೆಯಾಗಿದ್ದು, ಸಚಿವರು ಹಾಗೂ ಶಾಸಕರ ಒತ್ತಡಕ್ಕೆ ಮಣಿದು ಪ್ರಭಾವಿಗಳಿಂದ ಶುಲ್ಕ ಪಡೆಯದೇ ಜಾಹೀರಾತು ಪ್ರದರ್ಶಿಸಲಾಗುತ್ತಿದೆ. ಇವೆಲ್ಲದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಕೇವಲ ದಾಳಿ ನಡೆಸಿ ಸುಮ್ಮನಾಗುವ ಎಸಿಬಿ ಅಧಿಕಾರಿಗಳ ನಡೆಯು ಅಕ್ರಮ ಎಸಗುವವರಿಗೆ ವರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಮಹಾ ಶಿವರಾತ್ರಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗಾಗಿ ಹೊಸ ಆ್ಯಪ್ ಬಿಡುಗಡೆ

    ಮಹಾ ಶಿವರಾತ್ರಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗಾಗಿ ಹೊಸ ಆ್ಯಪ್ ಬಿಡುಗಡೆ

    ಲಕ್ನೋ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ನಿಂದ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.

    ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಕಾಶಿ ವಿಶ್ವನಾಥನ ದರ್ಶನ ಪಡೆಯಲು ಹಲವು ಭಕ್ತಾದಿಗಳು ತುಂಬಾ ದಿನದಿಂದ ಕಾಯುತ್ತಿರುತ್ತಾರೆ. ಭಕ್ತರಿಗಾಗಿ ದೇವಸ್ಥಾನ ಟ್ರಸ್ಟ್ ಒಂದು ಹೊಸ ಅಪ್ಲಿಕೇಶನ್ ಬಿಟ್ಟಿದೆ. ಈ ಅಪ್ಲಿಕೇಶನ್ ನಲ್ಲಿ ಭಕ್ತರು ನೋಂದಾಯಿಸಿಕೊಳ್ಳುವ ಮೂಲಕ ದರ್ಶನವನ್ನು ಪಡೆಯಬಹುದು. ಈ ಆ್ಯಪ್ ಮೂಲಕ ಯಾವ ವೇಳೆ ಕಾಶಿ ದರ್ಶನ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಬಹುದು. ಆ್ಯಪ್ ನಲ್ಲಿ ದರ್ಶನಕ್ಕೆ ಸರಿಯಾದ ಮಾರ್ಗ ಮತ್ತು ಸಮಯದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತೆ. ಇದನ್ನೂ ಓದಿ: ಈ ಅಪರೂಪದ ಕೃತಿಯ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟ ದೂರ!

    ಆ್ಯಪ್‍ನಲ್ಲಿ ಭಕ್ತರು ನೋಂದಾಯಿಸಿಕೊಂಡರೆ ದೇವಾಲಯದ ಆಡಳಿತವು ಅವರಿಗೆ ಒಂದು ನಿರ್ದಿಷ್ಟ ಸಮಯ ಕೊಟ್ಟು ದೇವರ ದರ್ಶನ ಪಡೆಯುವಂತೆ ಸೂಚಿಸುತ್ತೆ. ಈ ಮೂಲಕ ದೇವಾಲಯದ ಆಡಳಿತ ಮಂಡಳಿಯು ಜನಸಂದಣಿಯನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

    ಡೌನ್‍ಲೋಡ್ ಮಾಡುವುದು ಹೇಗೆ!
    ಮಾಹಿತಿಗಳ ಪ್ರಕಾರ, ಆ್ಯಪ್ ಸದ್ಯಕ್ಕೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಲಿದೆ. ಇದನ್ನು ಪ್ಲೇ ಸ್ಟೋರ್‌ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್‍ನ ವೈಶಿಷ್ಟ್ಯವೆಂದರೆ ಇದು ಹಿಂದಿ, ಇಂಗ್ಲಿಷ್ ಮತ್ತು ದಕ್ಷಿಣ ಭಾರತದ ಹಲವು ಭಾಷೆಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

    ಯಾವ ರೀತಿ ಇರುತ್ತೆ?
    ಶಿವರಾತ್ರಿ(ಮಾರ್ಚ್ 1) ದಿನ ಗಂಗಾನದಿಯ ಕಡೆಯಿಂದಲೂ ಹಲವು ಭಕ್ತರು ಬರತ್ತಾರೆ. ಅದಕ್ಕೆ ಭಕ್ತರಿಗಾಗಿ ಹೊಸ ಮಾರ್ಗವನ್ನು ತೆರೆಯಲಾಗುತ್ತಿದೆ ಎಂದು ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ತಿಳಿಸಿದ್ದಾರೆ. ಅಲ್ಲದೆ ಎಲ್ಲ ಪ್ರವೇಶ ದ್ವಾರಗಳಿಂದ ಗರ್ಭಗುಡಿ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ.

    ವಿವಿಧೆಡೆ LED ಅಳವಡಿಸುವ ಮೂಲಕ ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯ ನೇರ ದರ್ಶನವನ್ನು ಭಕ್ತರಿಗೆ ಮಾಡಿಲಾಗುತ್ತಿದೆ. ವಿವಿಐಪಿಗಳು ಜಲಮಾರ್ಗದ ಮೂಲಕ ಬರುವಂತೆ ಮನವಿ ಮಾಡಲಾಗಿದೆ. ಮೈದಾಗಿನ್ ಮತ್ತು ಗೋಡೋಲಿಯಾದಿಂದ ಯಾವುದೇ ದೊಡ್ಡ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ವಿಕಲಚೇತನರು ಮತ್ತು ವೃದ್ಧರಿಗಾಗಿ ದೇವಾಲಯದ ಆಡಳಿತ ಮಂಡಳಿಯಿಂದ ಇ-ರಿಕ್ಷಾಗಳನ್ನು ನಡೆಸಲಾಗುವುದು.

    ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ವಿವಿಧೆಡೆ ನೀರಿಗಾಗಿ ಹಾಗೂ ರಾತ್ರಿ ವೇಳೆ ನಡೆಯುವ ಕಾರ್ಯಕ್ರಮಗಳಿಗೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಲ್ಲಲು ಆವರಣದಲ್ಲಿ ಸ್ಟೀಲ್ ರೇಲಿಂಗ್‍ಗಳನ್ನು ಅಳವಡಿಸಲಾಗುವುದು. ದೇವಾಲಯದಲ್ಲಿ ಟ್ಯಾಬ್ಲೋ ದರ್ಶನದ ವ್ಯವಸ್ಥೆಯು ಮುಂದುವರಿಯುತ್ತದೆ. ಈ ಮೂಲಕ ಭಕ್ತರಿಗೆ ದರ್ಶನ ಸುಲಭವಾಗಲಿದೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

    ಶ್ರೀ ಕಾಶಿ ವಿಶ್ವನಾಥ ಧಾಮದ ನಿರ್ಮಾಣದ ನಂತರ, ಇದು ಮಹಾ ಶಿವರಾತ್ರಿಯ ಮೊದಲ ಆಚರಣೆಯಾಗಿದೆ. ವಿವಿಧ ಆಚರಣೆಗಳು ಮತ್ತು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿ ಬಿಗಿ ಭದ್ರತೆ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.

  • ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

    ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

    ಚಂಡೀಗಢ: ಈ ಬಾರಿಯ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಿಂದ ನಿರ್ನಾಮವಾಗಲಿದೆ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭವಿಷ್ಯ ನುಡಿದರು.

    ಪಟಿಯಾಲಾದಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿಭಿನ್ನ ಜಗತ್ತಿನಲ್ಲಿ ವಾಸಿಸುತ್ತಿದೆ. ಇದರಿಂದಾಗಿ ಈ ಬಾರಿ ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಟೀಕಿಸಿದ ಅವರು, ತಾವು ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

    ಇದೇ ವೇಳೆ ಎಎಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಗವಂತ್ ಮಾನ್ ದೇಶ ವಿರೋಧಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ತಮ್ಮ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯದಲ್ಲಿ ಸಕಾರಾತ್ಮಕ ವರದಿಗಳು ಬರುತ್ತಿವೆ ಎಂದರು. ಇದನ್ನೂ ಓದಿ:  ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

    ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿದಳ-ಬಹುಜನ ಸಮಾಜ ಪಕ್ಷ ಮೈತ್ರಿ, ಮತ್ತು ಬಿಜೆಪಿ ಹಾಗೂ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಮೈತ್ರಿ ಈ ಬಾರಿ ಪ್ರಮುಖ ಪಕ್ಷಗಳಾಗಿ ಸ್ಪರ್ಧಿಸಲಿದೆ. ಇಂದು ಎಲ್ಲಾ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

  • ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಚಂಡೀಗಢ: ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಇತರ ಪಕ್ಷಗಳ ವಿರುದ್ಧ ಕ್ಷುಲ್ಲಕವಾಗಿ ಆರೋಪಗಳನ್ನು ಮಾಡಿದ್ದ ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಂಜಾಬ್ ಮುಖ್ಯ ಚುನಾವಣಾಧಿಕಾರಿ ಅವರು ಸಾಹಿಬ್ಜಾದಾ ಅಜಿತ್ ಸಿಂಗ್ ನಗರದ ಹಿರಿಯ ಎಸ್‌ಪಿಗೆ ಆದೇಶ ಹೊರಡಿಸಿದ್ದಾರೆ.

    ಶಿರೋಮಣಿ ಅಕಾಲಿ ದಳದ ದೂರಿನನ್ವಯ ಕೇಜ್ರಿವಾಲ್ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಹಾಗೂ ಇತರೆ ಪಕ್ಷಗಳ ವಿರುದ್ಧ ಕ್ಷುಲ್ಲಕವಾಗಿ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರು ಚುನಾವಣಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ದಂಡದ ಕ್ರಮಕ್ಕೆ ಕೋರಿ ಆಮ್ ಆದ್ಮಿ ಪಕ್ಷ (ಎಎಪಿ) ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನ ನಂತರ ಈ ಘಟನೆ ನಡೆದಿದೆ. ಇದನ್ನೂ ಓದಿ: ದೇಶದ ಮೊದಲ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳು ಮೋದಿ ಸರ್ಕಾರದಿಂದ ಪೂರ್ಣ: ಅಮಿತ್ ಶಾ

    ಪ್ರಚಾರ ಮುಗಿದ ನಂತರವೂ ಮಾನಸಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿಧು ಮೂಸ್ ವಾಲಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎಎಪಿ ದೂರಿನ ಆಧಾರದ ಮೇಲೆ ಮಾನ್ಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೂಚ್ ಬೆಹಾರ್ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವವರ ಮೊಣಕಾಲು ಮುರಿಯುತ್ತೇವೆ: ಉದಯನ್ ಗುಹಾ

  • ಕೇಜ್ರಿವಾಲ್‌ ವಿರುದ್ಧ ಹೇಳಿಕೆ – ಎಎಪಿ ಮಾಜಿ ನಾಯಕನಿಗೆ ʼವೈʼ ಶ್ರೇಣಿ ಭದ್ರತೆ

    ಕೇಜ್ರಿವಾಲ್‌ ವಿರುದ್ಧ ಹೇಳಿಕೆ – ಎಎಪಿ ಮಾಜಿ ನಾಯಕನಿಗೆ ʼವೈʼ ಶ್ರೇಣಿ ಭದ್ರತೆ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಪ್ರತ್ಯೇಕತಾವಾದಿ ಎಂದು ಹೇಳಿಕೆ ನೀಡಿದ್ದ ಆಮ್‌ ಆದ್ಮಿ ಪಕ್ಷದ (ಎಎಪಿ) ಕುಮಾರ್‌ ವಿಶ್ವಾಸ್‌ ಅವರಿಗೆ ʼವೈʼ ಶ್ರೇಣಿ ಭದ್ರತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಿಶ್ವಾಸ್‌ ಅವರಿಗೆ ಬೆದರಿಕೆ ಇದೆ ಎಂದು ಭದ್ರತೆ ಮತ್ತು ಗುಪ್ತಚರ ಮಾಹಿತಿ ಆಧರಿಸಿ ಭದ್ರತೆ ಒದಗಿಸಲು ಮುಂದಾಗಿದೆ. ಇದನ್ನೂ ಓದಿ: ಕೇಜ್ರಿವಾಲ್‍ಗೆ ಖಾಲಿಸ್ತಾನ್ ಉಗ್ರರ ನಂಟು – ತನಿಖೆ ನಡೆಸುತ್ತೇವೆ ಎಂದ ಅಮಿತ್ ಶಾ

    ಪರಿಶೀಲನೆಯ ನಂತರ, ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಮೂಲಕ ವಿಶ್ವಾಸ್‌ ಅವರಿಗೆ ʼವೈʼ ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

    ಪಂಜಾಬ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೇಜ್ರಿವಾಲ್‌ ಅವರು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ್‌ ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಕೇಜ್ರಿವಾಲ್‌ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್

    ಪಂಜಾಬ್‌ ವಿಧಾನಸಭಾ ಚುನಾವಣೆಗೆ ಫೆ.20 ರಂದು ಮತದಾನ ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರ ಬೀಳಲಿದೆ.