Tag: aap

  • ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ: ಮೋಹನ್ ದಾಸರಿ

    ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ: ಮೋಹನ್ ದಾಸರಿ

    ಬೆಂಗಳೂರು: ನಗರದ ಜನರು ಮಳೆಗೆ ತತ್ತರಿಸಿ, ಕೆಲವರು ಪ್ರಾಣ ಕಳೆದುಕೊಂಡಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿಯೇ ಕಾರಣ. ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕಾಲುವೆ ಹೆಸರಿನಲ್ಲಿ ಬಿಜೆಪಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿಯನ್ನು ಲೂಟಿ ಮಾಡಿದ್ದ ಪರಿಣಾಮ, ಜನರು ರಸ್ತೆಗಳಲ್ಲಿ ಓಡಾಡಲು ದೋಣಿಯನ್ನು ಬಳಸಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ತಗ್ಗು ಪ್ರದೇಶದಲ್ಲಿರುವ ಜನರು ಮಳೆಗಾಲ ಬಂತೆಂದರೆ ಜೀವ ಕೈಯಲ್ಲಿಟ್ಟುಕೊಂಡು ಜೀವನ ನಡೆಸುವಂತಾಗಿದೆ. ತಾವಿದ್ದ ಸ್ಥಳದಲ್ಲಿ ನೀರು ತುಂಬಿಕೊಂಡಿದ್ದರಿಂದ ಮಂಗಳವಾರ ರಾತ್ರಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿರುವ ಭ್ರಷ್ಟ ಬಿಜೆಪಿ ನಾಯಕರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು, ಅದನ್ನು ಹರಾಜು ಹಾಕಿ, ಬಂದ ಹಣದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗಮನಿಸಿ, ಮುಂದಿನ 5 ದಿನಗಳ ಕಾಲ ಬೆಂಗ್ಳೂರಲ್ಲಿ ಭಾರೀ ಮಳೆ

    ಸಿಲಿಕಾನ್ ಸಿಟಿಯಲ್ಲಿ ಸಣ್ಣ ಮಳೆಯಾದರೂ ಕಟ್ಟಡಗಳಿಗೆ ನೀರು ನುಗ್ಗಿ ಜಲಪ್ರಳಯವಾಗುವುದು ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ರಾಜಕಾಲುವೆ ಒತ್ತುವರಿ. ರಾಜಕಾಲುವೆ ಒತ್ತುವರಿ ತೆರವು ಎಂಬ ಮಾಯಾಜಾಲವು 2016ರಿಂದಲೂ ನಿಗೂಢವಾಗಿಯೇ ಉಳಿದಿದೆ. 2,626 ಕಟ್ಟಡಗಳ ಪೈಕಿ 1,480 ಕಟ್ಟಡಗಳು ತೆರವಾಗಿದ್ದು, 714 ಕಟ್ಟಡಗಳ ತೆರವಿಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ರಾಜಕಾಲುವೆ ಮೇಲೆ ವಸತಿ ಮತ್ತು ವಾಣಿಜ್ಯ ಕಟ್ಟಡಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವುಗಳನ್ನು ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೇಸಿಗೆಯ ಮಳೆಗೆ ಮುಳುಗಿದ ಬೆಂಗಳೂರು – ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

    ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ತೀರ್ಮಾನ ಮಾಡಿದ್ದು, 714 ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ಪೂರ್ವ ವಲಯದಲ್ಲಿ 110 ಕಟ್ಟಡ, ಪಶ್ಚಿಮ ವಲಯದಲ್ಲಿ 59 ಕಟ್ಟಡ, ದಕ್ಷಿಣ ವಲಯದಲ್ಲಿ 20 ಕಟ್ಟಡ, ಕೋರಮಂಗಲ ವ್ಯಾಲಿ ವಲಯದಲ್ಲಿ 3 ಕಟ್ಟಡ, ಯಲಹಂಕ ವಲಯದಲ್ಲಿ 103 ಕಟ್ಟಡ, ಮಹದೇವಪುರ ವಲಯದಲ್ಲಿ 184 ಕಟ್ಟಡ, ಬೊಮ್ಮನಹಳ್ಳಿ ವಲಯದಲ್ಲಿ 92 ಕಟ್ಟಡ, ಆರ್.ಆರ್. ನಗರ ವಲಯದಲ್ಲಿ 9 ಕಟ್ಟಡ ಹಾಗೂ ದಾಸರಹಳ್ಳಿ ವಲಯದಲ್ಲಿ 134 ಕಟ್ಟಡಗಳನ್ನು ತೆರವು ಮಾಡಲು ಪಟ್ಟಿ ಮಾಡಲಾಗಿದೆ. ಆದರೆ ಕ್ರಮ ಮಾತ್ರ ಕೈಗೊಂಡಿಲ್ಲ ಎಂದು ಟೀಕಿಸಿದರು.

    ನಗರದ ಬಹುತೇಕ ಆಸ್ಪತ್ರೆಗಳು, ಕಮರ್ಷಿಯಲ್ ಬಿಲ್ಡಿಂಗ್‍ಗಳು, ಉದ್ಯಮಿಗಳು, ರಾಜಕಾರಿಣಿಗಳು ಸೇರಿದಂತೆ ಹಲವು ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ತೆರವು ಕಾರ್ಯಾಚಾರಣೆ ಮಾತ್ರ ನಡೆದಿಲ್ಲ. ರಾಜಾಜಿನಗರ, ಕೆ.ಆರ್.ಪುರ, ಕೆಂಗೇರಿ, ಆರ್.ಆರ್.ನಗರ, ಹೆಬ್ಬಾಳ, ಯಲಹಂಕ, ಲಗ್ಗೆರೆ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಜಕಾಲುವೆಗಳ ಒತ್ತುವರಿ ಆಗಿದೆ. ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ, ಸಮೀಕ್ಷೆ ಮಾಡುತ್ತಿದ್ದೇವೆ, ಆದಷ್ಟು ಬೇಗ ವರದಿ ಸಿದ್ಧವಾಗುತ್ತದೆ ಎನ್ನುತ್ತಾರೆ. ಆದರೆ ಬಿಬಿಎಂಪಿ ಮುಖ್ಯ ಕಚೇರಿಯ ಕೂಗಳತೆ ದೂರದಲ್ಲಿರುವ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಕೂಡ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ರಾಜಕಾಲುವೆ ಮೀಸಲು ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ಅಪಾರ್ಟ್‍ಮೆಂಟ್‍ಗಳನ್ನು ತೆರವು ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯೂ ಆದೇಶ ನೀಡಿದೆ. ಆದರೆ ತೆರವು ಕಾರ್ಯಾಚರಣೆ ಮಾತ್ರ ಮುಂದುವರೆದಿಲ್ಲ. ಈ ಸಲವೂ ಬಿಬಿಎಂಪಿಯು ಜೋರು ಮಳೆ ಬಿದ್ದಾಗ ಪ್ರವಾಹ ಪರಿಸ್ಥಿತಿ ಉಂಟಾಗುವ 209 ಪ್ರದೇಶಗಳನ್ನು ಗುರುತಿಸಿದೆ. ಪ್ರತಿ ವರ್ಷವೂ ಮಳೆಯಿಂದ ಕೋಟ್ಯಂತರ ರೂ. ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ಕೆಲವರು ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಪಾಲಿಕೆಯು ಯುದ್ಧ ಕಾಲದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಎಂಬಂತೆ ಮಳೆಗಾಲ ಶುರುವಾದ ಬಳಿಕ ಕೆಲವೊಂದು ಕಾಮಗಾರಿಗಳನ್ನು ಕೈಗೊಂಡು ಜನರ ಕಣ್ಣೊರೆಸುವ ತಂತ್ರವನ್ನು ಅನುಸರಿಸುತ್ತಲೇ ಬರುತ್ತಿದೆ ಎಂದು ಕಿಡಿಕಾರಿದರು.

  • ಎರಡೇ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪೊರಕೆ ಪಕ್ಷ ಇಷ್ಟೊಂದು ಹಾರಾಡುತ್ತಿದೆ: ಸಂದೀಪ್

    ಎರಡೇ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪೊರಕೆ ಪಕ್ಷ ಇಷ್ಟೊಂದು ಹಾರಾಡುತ್ತಿದೆ: ಸಂದೀಪ್

    ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ತಜೀಂದರ್ ಪಾಲ್ ಸಿಂಗ್ ಬಂಧನ ಖಂಡಿಸಿ ಕರ್ನಾಟಕ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ನೇತೃತ್ವದಲ್ಲಿ ಎಂಜಿ ರಸ್ತೆ ಸಮೀಪ ಇರುವ ಆಪ್ ಕಚೇರಿ ಮುಂದೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾತನಾಡಿದ ಸಂದೀಪ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಡಳಿತ ಇಂದಿರಾಗಾಂಧಿಯ ಸರ್ವಾಧಿಕಾರಿ ಧೋರಣೆ, ತುಘಲಕ್ ದರ್ಬಾರ್ ನೆನಪಿಸುವಂತಿದೆ. ದೆಹಲಿಗೆ ಪಂಜಾಬ್ ಪೊಲೀಸ್ ಕಳ್ಸಿ ಅರೆಸ್ಟ್ ಮಾಡಿಸುವ ದುಸ್ಸಾಹಸಕ್ಕೆ ಕೈಹಾಕಿ ಎಎಪಿ ಮುಖಭಂಗ ಅನುಭವಿಸಿದೆ ಎಂದು ಪ್ರತಿಭಟನೆಯಲ್ಲಿ ಫೋಷಣೆಯನ್ನು ಕೂಗಿದರು. ಇದನ್ನೂ ಓದಿ: ಪೊಲೀಸರೇ ಕಳ್ಳರು, ಇನ್ನೂ ಕಳ್ಳತನ ಹೇಗೆ ತಪ್ಪಿಸುತ್ತಾರೆ: ಸಿದ್ದರಾಮಯ್ಯ

    ಎರಡೇ ರಾಜ್ಯದಲ್ಲಿ ಅಧಿಕಾರದಲ್ಲಿರುವ ಈ ಪೊರಕೆ ಪಕ್ಷ ಇಷ್ಟೊಂದು ಹಾರಾಡುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ, ಕೇಂದ್ರದಲ್ಲಿ ಪೂರ್ಣಪ್ರಮಾಣದಲ್ಲಿ ಅಧಿಕಾರದಲ್ಲಿರುವ ನಮ್ಮ ಪಕ್ಷ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡೋದಿಲ್ಲ. ಎಎಪಿ ಕುತಂತ್ರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ಈ ರೀತಿಯಾಗಿ ಹುಚ್ಚಾಟ ಮುಂದುವರೆದರೆ ಬಿಜೆಪಿ ಪಕ್ಷದ 10 ಪಟ್ಟು ಶಾಕ್ ಎಎಪಿಗೆ ಎಲ್ಲ ರೀತಿಯಲ್ಲೂ ಕೊಡುತ್ತೆ ಎಂದರು.

    ತಜೀಂದರ್ ಪಾಲ್ ಸಿಂಗ್ ತಾಯಿ ಹಾಗೂ ತಂದೆಗೆ ಹಲ್ಲೆ ಮಾಡಿರುವ ಪಂಜಾಬ್ ಪೊಲೀಸರ ಕೃತ್ಯ ಖಂಡನೀಯ. ಕೇಜ್ರಿವಾಲ್ ಓರ್ವ ಅರಾಜಕತೆ ಸೃಷ್ಟಿ ಮಾಡುವ ನಾಯಕ. ಪಂಜಾಬ್‍ನಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಇಡೀ ದೇಶ ಗೆದ್ದಂತೆ ಕೇಜ್ರಿವಾಲ್ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕಾನೂನಿನ ಅರಿವಿಲ್ಲದ ಕೇಜ್ರಿವಾಲ್‍ಗೆ ಪಾಠ ಮಾಡಬೇಕಿದೆ. ನಮ್ಮ ಪಕ್ಷದ ತಜೀಂದರ್ ಪಾಲ್ ಸಿಂಗ್ ಮೇಲಿನ ಈ ದ್ವೇಷಪೂರಿತ ವರ್ತನೆ ಕೇಜ್ರಿವಾಲ್ ಎಂತಹ ಕುತಂತ್ರಿ ಅನ್ನೋದನ್ನ ತೋರಿಸುತ್ತೆ ಎಂದು ಆಕ್ರೋಶ ಹೊರಹಾಕಿದರು.

    ಖಲಿಸ್ತಾನಿಗಳ ಸಪೋರ್ಟರ್ ಈ ಕೇಜ್ರಿವಾಲ್ ಈಗಾಗಲೇ ಬಾಲ ಬಿಚ್ಚೋಕೆ ಶುರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನ ಕೇಜ್ರಿವಾಲ್‍ಗೆ ಪಾಠ ಕಲಿಸ್ತಾರೆ. ಈಗ ಹರಿಯಾಣ ಪೊಲೀಸರು ಪಂಜಾಬ್ ಪೊಲೀಸರನ್ನೇ ಬಂಧಿಸಿದ್ದಾರೆ. ಅವಿವೇಕಿ ಸಿಎಂ ಮಾತು ಕೇಳಿ ಪಂಜಾಬ್ ಪೊಲೀಸರು ಮೂರ್ಖರಾಗಿದ್ದಾರೆ ಎಂದರು. ಇದನ್ನೂ ಓದಿ: ಸಿಎಂ ಪೋಸ್ಟ್‌ಗಾಗಿ 2,500 ಕೋಟಿ ರೂ. ಬೇಡಿಕೆ ವಿಚಾರ- ತನಿಖೆಗೆ ಡಿಕೆಶಿ ಒತ್ತಾಯ

  • ಆಪ್ ಪಂಜಾಬ್ ಪೊಲೀಸರನ್ನು ದುರಪಯೋಗಪಡಿಸಿಕೊಂಡಿದೆ: ಬಿಜೆಪಿ ಆರೋಪ

    ಆಪ್ ಪಂಜಾಬ್ ಪೊಲೀಸರನ್ನು ದುರಪಯೋಗಪಡಿಸಿಕೊಂಡಿದೆ: ಬಿಜೆಪಿ ಆರೋಪ

    ನವದೆಹಲಿ: ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಬಂಧಿಸಲು ಪಂಜಾಬ್‍ನ ಆಪ್ ನೇತೃತ್ವದ ಸರ್ಕಾರವು ರಾಜ್ಯ ಪೊಲೀಸ್ ಪಡೆಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಆರೋಪಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜೀಂದರ್ ಪಾಲ್ ಸಿಂಗ್ ವಾಪಸ್ ಮನೆಗೆ ಮರಳಿದ್ದಾರೆ. ಇದು ಪ್ರಜಾಪ್ರಭುತ್ವದ ಮತ್ತು ನ್ಯಾಯದ ವಿಜಯವಾಗಿದೆ. ತಜೀಂದರ್ ಸಿಂಗ್ ಬಿಡುಗೆಡೆಯಿಂದಾಗಿ ಕೇಜ್ರಿವಾಲ್ ಅವರ ದುರಹಂಕಾರ ಮುರಿದಿದೆ. ಅವರು ಬಗ್ಗಾವನ್ನು ಬಂಧಿಸಲು ಪಂಜಾಬ್ ಪೊಲೀಸ್ ಬಲವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರು ತಜೀಂದರ್ ಪಾಲ್ ಸಿಂಗ್‍ರನ್ನು ಬಂಧಿಸುವಾಗ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂದು ಕಿಡಿಕಾರಿದರು.

    ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಮತ್ತು ಕಾಶ್ಮೀರಿ ಪಂಡಿತರಿಗೆ ತೋರಿದ ಅಗೌರವಕ್ಕೆ ಕ್ಷಮೆ ಯಾಚಿಸುವುದು ಅಪರಾಧವಾಗಿದ್ದರೆ, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನು ಈ ಅಪರಾಧವನ್ನು ಮುಂದುವರಿಸುತ್ತಾರೆ ಎಂದರು. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಟೀಕೆ- ಪೊಲೀಸರಿಂದ ದೆಹಲಿ ಬಿಜೆಪಿ ಮುಖಂಡ ಅರೆಸ್ಟ್

    ಯಾವುದೇ ರೀತಿಯ ಕ್ರಮಕ್ಕೂ ಬಿಜೆಪಿ ಕಾರ್ಯಕರ್ತರು ಹೆದರುವುದಿಲ್ಲ. ಕೇಜ್ರಿವಾಲ್ ಅವರ ದುರಹಂಕಾರದ ವಿರುದ್ಧ ನಾವು ಹೋರಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಇದು ಸೇಡಿನ ರಾಜಕಾರಣ: ಬಿಜೆಪಿ ಮುಖಂಡನ ಬಂಧನಕ್ಕೆ ನವಜೋತ್‌ ಸಿಧು ಕಿಡಿ

    ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ ನಂತರ ತಜೀಂದರ್ ಸಿಂಗ್ ಮಧ್ಯ ರಾತ್ರಿ ದೆಹಲಿಯಲ್ಲಿರುವ ಅವರ ನಿವಾಸವನ್ನು ತಲುಪಿದರು. ತಜೀಂದರ್‌ ಸಿಂಗ್ ಅವರ ಕುಟುಂಬದ ಸದಸ್ಯರು ದೆಹಲಿಯಲ್ಲಿರುವ ಅವರ ಮನೆಗೆ ಹಿಂದಿರುಗಿದ ನಂತರ ಸಂಭ್ರಮಿಸಿದ್ದರು. ಇದನ್ನೂ ಓದಿ: ಬಿಜೆಪಿ ನಾಯಕನನ್ನು ದೆಹಲಿ ಪೊಲೀಸರಿಗೆ ಮಾತ್ರ ಹಸ್ತಾಂತರಿಸುತ್ತೇವೆ: ಹರಿಯಾಣ ಗೃಹ ಸಚಿವ

  • ಕೇಜ್ರಿವಾಲ್ ವಿರುದ್ಧ ಟೀಕೆ- ಪೊಲೀಸರಿಂದ ದೆಹಲಿ ಬಿಜೆಪಿ ಮುಖಂಡ ಅರೆಸ್ಟ್

    ಕೇಜ್ರಿವಾಲ್ ವಿರುದ್ಧ ಟೀಕೆ- ಪೊಲೀಸರಿಂದ ದೆಹಲಿ ಬಿಜೆಪಿ ಮುಖಂಡ ಅರೆಸ್ಟ್

    ನವದೆಹಲಿ: ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಪಂಜಾಬ್‍ನ ಪೊಲೀಸರು ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

    ದೆಹಲಿ ಮುಖ್ಯಮಂತ್ರಿ ಅವರಿಗೆ ಜೀವ ಬೆದರಿಕೆ ಹಾಕದ್ದ ಹಿನ್ನೆಲೆಯಲ್ಲಿ ಆಪ್ ನಾಯಕ ಸನ್ನಿಸಿಂಗ್ ಅವರು ತಜೀಂದರ್ ಪಾಲ್ ಸಿಂಗ್ ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ವದಂತಿಗಳನ್ನು ಹರಡುತ್ತಿದ್ದಾರೆ. ಧಾರ್ಮಿಕ ಮತ್ತು ಕೋಮು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಿಸಿ ಸೈಬರ್‍ಸೆಲ್‍ನಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ.

    ಘಟನೆ ಏನು?:
    ಈ ಹಿಂದೆ ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸುಳ್ಳು ಚಿತ್ರ ಎಂದು ಲೇವಡಿ ಮಾಡಿದ್ದರು. ಇದನ್ನೂ ಓದಿ: 47 ಲಕ್ಷ ಜನರ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ: ದಿನೇಶ್ ಗುಂಡೂರಾವ್

    ಈ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ತಜೀಂದರ್ ಪಾಲ್ ಅವರು, ಸ್ವಾತಂತ್ರ್ಯದ ನಂತರ ಭಾರತದ ಇತಿಹಾಸದಲ್ಲಿ ನಡೆದ ಅತಿದೊಡ್ಡ ನರಮೇಧವನ್ನು ದೆಹಲಿ ವಿಧಾನಸಭೆಯಲ್ಲಿ ಲೇವಡಿ ಮಾಡಲಾಗಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾಶ್ಮೀರಿ ಪಂಡಿತರ ನರಮೇಧದ ಕಥೆ ದಿ ಕಾಶ್ಮೀರ ಫೈಲ್ಸ್ ಸಿನಿಮಾವನ್ನು ಟೀಕಿಸಿದ್ದಾರೆ. ಇದರಿಂದಾಗಿ 100 ಕೋಟಿ ಹಿಂದೂಗಳಿಗೆ ಅವಮಾನವಾಗಿದೆ.

    ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಕ್ಷಮೆ ಕೇಳಬೇಕು. ಅವರು ಕ್ಷಮೆ ಕೇಳದಿದ್ದರೆ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಅವರನ್ನು ಬದುಕಲು ಬಿಡುವುದಿಲ್ಲ. ಅವರು ಕ್ಷಮೆ ಕೇಳುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ: 2,500 ಕೋಟಿ ಕೊಡಿ ನಿಮ್ಮನ್ನೂ ಸಿಎಂ ಮಾಡ್ತೀವಿ ಅಂದ್ರು: ಬಾಂಬ್ ಸಿಡಿಸಿದ ಯತ್ನಾಳ್

    ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಪಂಜಾಬ್ ಪೊಲೀಸರು ದೆಹಲಿಯಲ್ಲಿದ್ದ ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ 10-12 ಕಾರುಗಳಲ್ಲಿ 50 ಪೊಲೀಸರು ತಾಜೀಂದರ್ ಬಗ್ಗಾ ಅವರನ್ನು ಬಂಧಿಸಲು ದೆಹಲಿಯಲ್ಲಿರುವ ಅವರ ನಿವಾಸಕ್ಕೆ ಬಂದಿದ್ದರು.

  • ಟ್ವೀಟ್ ಬಯೋದಿಂದ ‘ಕೈ’ ಚಿಹ್ನೆ ಬಿಟ್ಟ ಹಾರ್ದಿಕ್ ಪಟೇಲ್

    ಟ್ವೀಟ್ ಬಯೋದಿಂದ ‘ಕೈ’ ಚಿಹ್ನೆ ಬಿಟ್ಟ ಹಾರ್ದಿಕ್ ಪಟೇಲ್

    ಗಾಂಧಿನಗರ: ಗುಜರಾತ್‍ನಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು ತಮ್ಮ ಟ್ವಿಟ್ಟರ್ ಬಯೋದಿಂದ ಪಕ್ಷದ ಹೆಸರನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಅವರು ಪಕ್ಷದಿಂದ ನಿರ್ಗಮಿಸುವ ಸುಳಿವು ನೀಡಿದ್ದಾರೆ.

    ಕಳೆದ ಕೆಲವು ವರ್ಷಗಳಿಂದ ಪಕ್ಷದಿಂದ ನಿರ್ಗಮಿಸಿದ ಕಾಂಗ್ರೆಸ್ ನಾಯಕರು ಸಾಮಾನ್ಯವಾಗಿ ತಮ್ಮ ಟ್ವಿಟ್ಟರ್ ಬಯೋವನ್ನು ಬದಲಾಯಿಸುವ ಮೂಲಕ ಪಕ್ಷ ಬಿಡುವ ಮೊದಲ ಸುಳಿವು ಬಿಟ್ಟುಕೊಡುತ್ತಾರೆ. ಅದೇ ರೀತಿ ಹಾರ್ದಿಕ್ ಅವರು ರಾಜ್ಯದಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ಇದ್ದು, ಈಗ ಟ್ವೀಟ್ ಬಯೋದಿಂದ ಹೆಸರು ತೆಗೆದಿರುವುದು ಎಲ್ಲರಲ್ಲಿ ಅನುಮಾನ ಮೂಡಿಸಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಬೊಮ್ಮಾಯಿ ನೇತ್ರತ್ವದಲ್ಲಿ ಚುನಾವಣೆ: ನಳಿನ್ 

    2019ರಿಂದಲೂ ಪಕ್ಷಕ್ಕಾಗಿ ದುಡಿಯುತ್ತಿರುವ 28 ವರ್ಷದ ಪಟೇಲ್ ಅವರನ್ನು ಗುಜರಾತ್‍ನಲ್ಲಿ ಕಾಂಗ್ರೆಸ್ ನಾಯಕರು ನಿರ್ಲಕ್ಷಿಸಿದ್ದಾರೆ. ಅದಕ್ಕೆ ಅವರು ಕೈ ಪಕ್ಷ ಬಿಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

    ಅಲ್ಲದೇ ಕಳೆದ ತಿಂಗಳ ಹಿಂದೆ ಹಾರ್ದಿಕ್ ಪಟೇಲ್ ಅವರು, ಬಿಜೆಪಿಯಲ್ಲಿ ಕೆಲವು ವಿಷಯಗಳು ಒಳ್ಳೆಯದು ಇವೆ. ನಾವು ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಲೆ ಬಿಸಿಮಾಡಿಸಿದ್ದರು.

    ರಾಜಕೀಯವಾಗಿ ಬಿಜೆಪಿ ತೆಗೆದುಕೊಂಡ ಇತ್ತೀಚಿನ ನಿರ್ಧಾರಗಳು ಚೆನ್ನಾಗಿವೆ. ಒಳ್ಳೆಯ ಕ್ರಮಗಳನ್ನು ತೆಗೆದುಕೊಳ್ಳುವ ಶಕ್ತಿ ಅವರಿಗಿದೆ ಎಂದು ನಾವು ಒಪ್ಪಿಕೊಳ್ಳಬೇಕು. ಅವರ ಪರವಾಗಿ ನಿಲ್ಲದೆ ಅಥವಾ ಅವರನ್ನು ಹೊಗಳದೆ, ನಾವು ಕನಿಷ್ಠ ಸತ್ಯವನ್ನು ಒಪ್ಪಿಕೊಳ್ಳಬಹುದು ಎಂದು ನಾನು ನಂಬುತ್ತೇನೆ ಎಂದು ಏಪ್ರಿಲ್ 22 ರಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದರು.

    ಬಿಜೆಪಿ ಜೊತೆ ಪಕ್ಷ ಬದಲಾಯಿಸುವ ಕುರಿತು ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ, ನಾನು ಯಾವುದೇ ಮಾತುಕತೆ ಮಾಡಿಲ್ಲ. ನಾನು ಬಿಜೆಪಿಯ ಬಗ್ಗೆ ಯೋಚಿಸುವುದಿಲ್ಲ. ನಾನು ಬಿಜೆಪಿಯೊಂದಿಗೆ ಮಾತನಾಡುವುದಿಲ್ಲ. ಚರ್ಚೆಯು ಗುಜರಾತ್ ಜನರ ಬಗ್ಗೆ ಮತ್ತು ಜನರ ಹಿತಾಸಕ್ತಿಗಳ ಬಗ್ಗೆ ಮಾತ್ರ. ನಾನು ಅವರಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಪೊಲೀಸರೊಂದಿಗೆ ಹಾಡಿ ಕುಣಿದ ಹ್ಯಾಟ್ರಿಕ್ ಹೀರೋ : ‘ಟಗರು-2’ ಸುಳಿವು ಕೊಟ್ಟ ಶಿವಣ್ಣ 

    ಕೆಲವು ವರದಿಗಳ ಪ್ರಕಾರ ಅವರು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ(ಎಎಪಿ)ಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಸೂಚಿಸಲಾಗುತ್ತಿದೆ. ಇದು ಕಾಂಗ್ರೆಸ್‍ಗೆ ಹೋಲಿಸಿದರೆ ಗುಜರಾತ್‍ನಲ್ಲಿ ಉತ್ತಮ ಪ್ರತಿಪಕ್ಷವಾಗಿದೆ.

  • ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವ ದಾಖಲೆ ಮಾಡುತ್ತಿದೆ: ಕೇಜ್ರಿವಾಲ್‌ ಟೀಕೆ

    ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವ ದಾಖಲೆ ಮಾಡುತ್ತಿದೆ: ಕೇಜ್ರಿವಾಲ್‌ ಟೀಕೆ

    ಗಾಂಧೀನಗರ: ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವ ದಾಖಲೆ ಮಾಡುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌

    ಗುಜರಾತ್‌ನಲ್ಲಿ 6,000 ಸರ್ಕಾರಿ ಶಾಲೆಗಳಿದ್ದು, ಬಹುಪಾಲು ಶಾಲೆಗಳನ್ನು ಮುಚ್ಚಲಾಗಿದೆ. ಇನ್ನೂ ಹಲವು ಶಿಥಿಲಾವಸ್ಥೆಯಲ್ಲಿವೆ. ಲಕ್ಷಾಂತರ ಮಕ್ಕಳ ಭವಿಷ್ಯ ಅಸ್ತವ್ಯಸ್ತಗೊಂಡಿದೆ. ದೆಹಲಿಯ ಶಾಲೆಗಳನ್ನು ಬದಲಾಯಿಸಿದ ರೀತಿ ನಾವು ಇಲ್ಲಿಯೂ ಸುಧಾರಣೆ ತರಬಹುದು. ನನಗೆ ಒಂದು ಅವಕಾಶ ಕೊಡಿ. ಗುಜರಾತ್‌ನ ಸರ್ಕಾರಿ ಶಾಲೆಗಳನ್ನು ಸುಧಾರಿಸದಿದ್ದರೆ ನನ್ನನ್ನು ಒದ್ದೋಡಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ದೇಶದಲ್ಲಿ ಅಗತ್ಯವಿಲ್ಲ: ಓವೈಸಿ

    ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವದಾಖಲೆ ಮಾಡುತ್ತಿದೆ. ಗುಜರಾತ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಪರೀಕ್ಷೆ ನಡೆಸುವಂತೆ ನಾನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ ಎಂದಿದ್ದಾರೆ.

    ದೆಹಲಿಯಲ್ಲಿ ಬಡವರು ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಓದುತ್ತಿದ್ದಾರೆ. ದೆಹಲಿಯಲ್ಲಿ ಈ ಬಾರಿ ಶೇ.99.7ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ಶ್ರೀಮಂತರ ಜೊತೆ ನಿಂತು ಅವರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುತ್ತಿವೆ. ಆದರೆ ನಾವು ಬಡವರ ಜೊತೆ ನಿಲ್ಲುತ್ತೇವೆ ಎಂಬುದನ್ನು ನಿಮಗೆ ಹೇಳಲು ನಾನು ಇಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಮಾಲಯ, ಹಿಂದೂ ಮಹಾಸಾಗರದ ನಡುವೆ ವಾಸಿಸುವವರೆಲ್ರೂ ಹಿಂದೂಗಳು: ಕೇಂದ್ರ ಸಚಿವ

    ಆದಿವಾಸಿಗಳು ಹಿಂದಿನಿಂದಲೂ ಶೋಷಣೆಗೆ ಒಳಗಾಗಿದ್ದಾರೆ. ಅವರು ಮೊದಲು ಬ್ರಿಟಿಷರಿಂದ ಶೋಷಣೆಗೆ ಒಳಗಾದರು. ಈಗಲೂ ಅವರು ಶೋಷಣೆಗೆ ಒಳಗಾಗುತ್ತಿದ್ದಾರೆ. ನಮ್ಮದು ಸಾಮಾನ್ಯ ಜನರ ಪಕ್ಷವೇ ಹೊರತು ಶ್ರೀಮಂತರದ್ದಲ್ಲ ಎಂದು ಪ್ರತಿಪಾದಿಸಿದ್ದಾರೆ.

    ದೆಹಲಿಯಲ್ಲಿ ಎರಡನೇ ಬಾರಿ ಹಾಗೂ ಪಂಜಾಬ್‌ನಲ್ಲಿ ಮೊದಲ ಬಾರಿಗೆ ಸರ್ಕಾರವನ್ನು ರಚಿಸಿರುವ ಆಮ್‌ ಆದ್ಮಿ ಪಕ್ಷ ಈಗ ಗುಜರಾತ್‌ ಕಡೆ ಮುಖ ಮಾಡಿದೆ. ಗುಜರಾತ್‌ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರು ರಾಜ್ಯಕ್ಕೆ ಭೇಟಿ ನೀಡಿ ರ‍್ಯಾಲಿಗಳನ್ನು ನಡೆಸುತ್ತಿದ್ದಾರೆ. ದೆಹಲಿ ಮಾದರಿ ಮುಂದಿಟ್ಟುಕೊಂಡು ಎಎಪಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಾತಿ, ಧರ್ಮದ ಹೆಸರಲ್ಲಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯುವ ಯತ್ನ: ಶರದ್ ಪವಾರ್

  • ಬಿಜೆಪಿ ಪ್ರಮುಖರೊಂದಿಗೆ ಆರೋಪಿ ದಿವ್ಯಾ ಹಾಗರಗಿ ಫೋಟೋ ವೈರಲ್

    ಬಿಜೆಪಿ ಪ್ರಮುಖರೊಂದಿಗೆ ಆರೋಪಿ ದಿವ್ಯಾ ಹಾಗರಗಿ ಫೋಟೋ ವೈರಲ್

    ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಮಾಸ್ಟರ್ ಮೈಂಡ್ ಆರೋಪಿ ದಿವ್ಯಾ ಹಾಗರಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    BJP

    ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಪ್ರತಿ ಪಕ್ಷದ ನಾಯಕರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದು, ಟ್ವೀಟ್‌ನಲ್ಲೇ ತಕ್ಕ ಉತ್ತರ ಕೊಟ್ಟಿದ್ದಾರೆ. ದಿವ್ಯಾ ಹಾಗರಗಿ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಸುಧಾಕರ್ ಇನ್ನೂ ಅನೇಕ ಬಿಜೆಪಿ ಮುಖಂಡರೊಂದಿಗೆ ಕ್ಲಿಕ್ಕಿಸಿದ ಫೋಟೋಗಳನ್ನು ಟ್ವೀಟ್ ಮಾಡಿದ್ದು, ಇದಕ್ಕೇನು ಹೇಳುವರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದಿವ್ಯಾ ಹಾಗರಗಿ ಭೇಟಿಯಾಗಿದ್ದು ನಿಜ, ನನಗೂ ನೋಟಿಸ್ ಕೊಡಲಿ: ಡಿ.ಕೆ ಶಿವಕುಮಾರ್

    RAMULU WITH DHIVYA

    ಗೃಹ ಸಚಿವರ ರಾಜೀನಾಮೆಗೆ ಆಗ್ರಹ: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಜಭವನ ಕದ ತಟ್ಟಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆಗೆ ಎಎಪಿ ಆಗ್ರಹಿಸಿದ್ದು, ಎಎಪಿ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

    ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಎಎಪಿ ನಾಯಕ ಭಾಸ್ಕರ್ ರಾವ್ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದ್ದ ಎಎಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿತ್ತು. ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ಗೃಹ ಸಚಿವರ ವೈಫಲ್ಯ ಕಾರಣ ಎಂದು ಆರೋಪಿಸಿದ್ದು, ಸಂಪುಟದಿಂದ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ವಜಾ ಮಾಡಲು ಆಪ್ ಆಗ್ರಹಿಸಿದೆ. ಇದನ್ನೂ ಓದಿ: PSI ನೇಮಕಾತಿಯಲ್ಲಿ ಅಕ್ರಮː ಪ್ರಮುಖ ಆರೋಪಿ ದಿವ್ಯಾ ಹಾಗರಗಿ – ಡಿಕೆಶಿ ಜೊತೆಗಿರುವ ಫೋಟೋ ವೈರಲ್

    ಈ ಪ್ರಕರಣಕ್ಕೆ ಸಂಭಂದಿಸಿದಂತೆ ಆಮ್‌ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ಸಹ ಕಿಡಿ ಕಾರಿದ್ದು, ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅಲ್ಲದೇ, ಇಲ್ಲಿವರೆಗೂ ಮಾಸ್ಟರ್ ಮೈಂಡ್ ಆರೋಪಿ ದಿವ್ಯಾ ಹಾಗರಗಿ ಅವರು ಏಕೆ ಬಂಧನವಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೆ, ಈ ಹಿಂದೆ ಪರೀಕ್ಷೆಯನ್ನು ನಮ್ಮ ಸಹಪಾಠಿಗಳು ಅತ್ಯಂತ ಪಾರದರ್ಶಕತೆಯಿಂದ ಮಾಡ್ತಿದ್ರು. ಈಗ ಪಾರದರ್ಶಕತೆ ಕಳೆದುಕೊಂಡಿದೆ ಅಂತಾ ಆರೋಪಿಸಿದ್ರು. ಸರ್ಕಾರ ನಂಬಿದ ಯುವಕರು ಮೋಸ ಹೋಗಿದ್ದಾರೆ. ತನಿಖೆ ಪಾಡಿಗೆ ತನಿಖೆ ನಡೆಯಲಿ. ಆದರೆ ಅಲ್ಲಿವರೆಗೂ ಕಾಯದೇ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಾಳಿ ಭಾಗ್ಯ, ಅನ್ನ ಭಾಗ್ಯದಂತಹ ದರಿದ್ರ ಭಾಗ್ಯಗಳು ಬೇಡ: ಸಿಎಂ ಮುಂದೆ ಯತ್ನಾಳ್ ಕಿಡಿ

    ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ತನಿಖೆ ಮುಗಿಯುವವರೆಗೂ ಕಾಯದೆ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮಾಡಿಕೊಡಬೇಕು. ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ಅಂತಿದ್ದಾರೆ. ಆದರೆ ಇನ್ನೂ ಅವರ ಬಂಧನ ಆಗಿಲ್ಲ. ಇದನ್ನೆಲ್ಲ ನೋಡ್ತಿದ್ರೆ ಈ ಪ್ರಕರಣದಲ್ಲಿ ಸರ್ಕಾರದ ಪ್ರಭಾವ ಇದೆ ಎಂಬ ಸಂಶಯ ಮೂಡ್ತಿದೆ ಎಂದು ಹೇಳಿದ್ದಾರೆ.

    ಗೃಹ ಸಚಿವರಿಗೆ ಅನುಭವದ ಕೊರತೆ ಇದೆ. ಆಗಸ್ಟ್ ನಿಂದ ಇಲ್ಲಿವರೆಗೂ ಮೆಚ್ಯೂರ್ಡ್ ಆದ ಸ್ಟೆಪ್‌ಗಳನ್ನು ತೆಗೆದುಕೊಂಡಿಲ್ಲ. ಇದರಿಂದ ಪೊಲೀಸ್ ಇಲಾಖೆಯ ನೈತಿಕತೆ ಕುಸಿದಿದೆ ಅಂತಾ ವಾಗ್ದಾಳಿ ನಡೆಸಿದ್ರು.

  • ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು – ರಾಜ್ಯಪಾಲರಿಗೆ ಎಎಪಿ ಮನವಿ

    ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು – ರಾಜ್ಯಪಾಲರಿಗೆ ಎಎಪಿ ಮನವಿ

    ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಜಭವನದ ಕದ ತಟ್ಟಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಎಎಪಿ ಆಗ್ರಹಿಸಿದ್ದು, ಎಎಪಿ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

    ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಎಎಪಿ ನಾಯಕ ಭಾಸ್ಕರ್ ರಾವ್ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದ್ದ ಎಎಪಿ ನಿಯೋಗ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿತ್ತು. ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ಗೃಹ ಸಚಿವರ ವೈಫಲ್ಯವೇ ಕಾರಣ ಎಂದು ಆರೋಪಿಸಿ, ಸಂಪುಟದಿಂದ ಗೃಹ ಸಚಿವ ಅರಗ ಜ್ಞಾನೇಂದ್ರರನ್ನು ವಜಾ ಮಾಡಬೇಕು ಎಂದು ಆಪ್ ಆಗ್ರಹಿಸಿದೆ. ಇದನ್ನೂ ಓದಿ: ದಿವ್ಯಾ ಹಾಗರಗಿ ಭೇಟಿಯಾಗಿದ್ದು ನಿಜ, ನನಗೂ ನೋಟಿಸ್ ಕೊಡಲಿ: ಡಿ.ಕೆ ಶಿವಕುಮಾರ್

    ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಪಿಎಸ್‌ಐ ಪರೀಕ್ಷಾ ಅಕ್ರಮದ ಬಗ್ಗೆ ರಾಜ್ಯಪಾಲರಿಗೆ ಮಧ್ಯಪ್ರವೇಶ ಕೋರಿದ್ದೇವೆ. ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ವಜಾ ಮಾಡಿ, ಸಾಮರ್ಥ್ಯ ಇರುವವರಿಗೆ ಗೃಹ ಸಚಿವರನ್ನಾಗಿ ಮಾಡಿ ಎಂದು ಮನವಿ ಮಾಡಿದ್ದೇವೆ. ಈ ತನಿಖೆ ಕಾಲ ಮಿತಿಯೊಳಗೆ ಮುಗಿಸಬೇಕು. ಬಿಜೆಪಿ ಕಾರ್ಯಕರ್ತೆಯೇ ಇದರಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಸರ್ಕಾರದ ಯಾವುದೇ ಪ್ರಭಾವ ಬೀರದೆ, ತನಿಖೆ ಮಾಡಬೇಕು ಎಂದು ಆಗ್ರಹಿಸಿರುವುದಾಗಿ ಪೃಥ್ವಿ ರೆಡ್ಡಿ ಹೇಳಿದರು.

    ಈ ವೇಳೆ ಎಎಪಿ ನಾಯಕ ಭಾಸ್ಕರ್ ರಾವ್ ಮಾತನಾಡಿ, ತನಿಖೆ ಮುಗಿಯುವವರೆಗೂ ಕಾಯದೇ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮಾಡಿಸಬೇಕು. ದಿವ್ಯಾ ಹಾಗರಗಿ ಈ ಪ್ರಕರಣದ ಆರೋಪಿಯಾಗಿದ್ದಾರೆ. ಆದರೆ ಇನ್ನೂ ಅವರ ಬಂಧನ ಆಗಿಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ, ಈ ಪ್ರಕರಣದಲ್ಲಿ ಸರ್ಕಾರದ ಪ್ರಭಾವ ಇದೆ ಎಂಬ ಸಂಶಯ ಮೂಡುತ್ತಿದೆ ಎಂದರು. ಇದನ್ನೂ ಓದಿ: PSI ನೇಮಕಾತಿಯಲ್ಲಿ ಅಕ್ರಮː ಪ್ರಮುಖ ಆರೋಪಿ ದಿವ್ಯಾ ಹಾಗರಗಿ – ಡಿಕೆಶಿ ಜೊತೆಗಿರುವ ಫೋಟೋ ವೈರಲ್

    ಹಿಂದೆ ಈ ಪರೀಕ್ಷೆಯನ್ನು ನಮ್ಮ ಸಹಪಾಠಿಗಳು ಅತ್ಯಂತ ಪಾರದರ್ಶಕತೆಯಿಂದ ಮಾಡುತ್ತಿದ್ದರು. ಆದರೆ ಈಗ ಪಾರದರ್ಶಕತೆ ಕಳೆದುಕೊಂಡಿದೆ. ಸರ್ಕಾರ ನಂಬಿದ ಯುವಕರು ಮೋಸ ಹೋಗಿದ್ದಾರೆ. ತನಿಖೆಯ ಪಾಡಿಗೆ ತನಿಖೆ ನಡೆಯಲಿ. ಆದರೆ ಅಲ್ಲಿವರೆಗೂ ಕಾಯದೇ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು. ಗೃಹ ಸಚಿವರಿಗೆ ಅನುಭವದ ಕೊರತೆ ಇದೆ ಎಂದು ಭಾಸ್ಕರ್ ರಾವ್ ವಾಗ್ದಾಳಿ ನಡೆಸಿದರು.

  • ದೆಹಲಿ ಮಾದರಿ ಎಂದರೆ ಪ್ರಾಮಾಣಿಕ ಸರ್ಕಾರ: ಕೇಜ್ರಿವಾಲ್

    ದೆಹಲಿ ಮಾದರಿ ಎಂದರೆ ಪ್ರಾಮಾಣಿಕ ಸರ್ಕಾರ: ಕೇಜ್ರಿವಾಲ್

    ನವದೆಹಲಿ: ದೆಹಲಿ ಮಾದರಿ ಎಂದರೆ ಪ್ರಾಮಾಣಿಕ ಸರ್ಕಾರವಾಗಿದೆ. ಇದು ಮುಂದಿನ ದಿನಗಳಲ್ಲಿ ಹಿಮಾಚಲ ಪ್ರದೇಶಕ್ಕೂ ಸಿಗಲಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್‌ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿರುಗೇಟು ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಮಾದರಿ ಎಂದರೆ ಪ್ರಾಮಾಣಿಕ ಸರ್ಕಾರ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳು ವಿಭಿನ್ನವಾಗಿರುವುದರಿಂದ ಹಿಮಾಚಲ ಪ್ರದೇಶದಲ್ಲಿ ಪ್ರಾಮಾಣಿಕ ಸರ್ಕಾರ ಇರಲು ಸಾಧ್ಯವಿಲ್ಲ. ಆದರೆ ಪಂಜಾಬ್ ಹಾಗೂ ದೆಹಲಿಯಂತೆ ಹಿಮಾಚಲ ಪ್ರದೇಶದಲ್ಲೂ ಆಪ್ ಪಕ್ಷ ಪ್ರಾಮಾಣಿಕ ಸರ್ಕಾರವನ್ನು ನೀಡುತ್ತದೆ ಎಂದರು. ಇದನ್ನೂ ಓದಿ: ಇಮ್ಲಿವಾಲಿ ಮಸೀದಿ ಮುಂದೆ ನಮಾಜ್ ಮಾಡಿದ 150 ಮಂದಿ ವಿರುದ್ಧ FIR

    ಈ ಹಿಂದೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮಾತನಾಡಿ, ಅರವಿಂದ್ ಕೇಜ್ರಿವಾಲ್ ಅವರು ಇಲ್ಲಿ ಆಪ್ ಪಕ್ಷವನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಅವರ ಭೇಟಿಯೂ ಚುನಾವಣೆ ಬರುವವರೆಗೂ ಮುಂದುವರೆಯುತ್ತದೆ. ಆದರೆ ಹಿಮಾಚಲ ಪ್ರದೇಶವನ್ನು ದೆಹಲಿ ಮಾದರಿಗೆ ಹೋಲಿಸುವುದು ಸರಿಯಲ್ಲ. ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳು ವಿಭಿನ್ನವಾಗಿವೆ ಎಂದು ಹೇಳಿದ್ದರು. ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕು ಶೇ.50ಕ್ಕೆ ಏರಿಕೆ – ಕಠಿಣ ಕ್ರಮಕ್ಕೂ ಬಗ್ಗದ ಜನ

    ಹಿಮಾಚಲ ಪ್ರದೇಶವು ಮೂರನೇ ವ್ಯಕ್ತಿಗೆ ಸ್ಥಾನ ಅಥವಾ ಗೌರವ ನೀಡಲ್ಲ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

  • ಅಮಿತ್‌ ಶಾ ಮನೆ ಕೆಡವಲು ಬುಲ್ಡೋಜರ್‌ ಬಳಸಿ: ರಾಘವ್‌ ಛಡ್ಡಾ

    ಅಮಿತ್‌ ಶಾ ಮನೆ ಕೆಡವಲು ಬುಲ್ಡೋಜರ್‌ ಬಳಸಿ: ರಾಘವ್‌ ಛಡ್ಡಾ

    ನವದೆಹಲಿ: ಕೇಂದ್ರ ಗೃಹ ಸಚಿವರೇ (ಅಮಿತ್‌ ಶಾ) ಈ ಗಲಭೆಗಳನ್ನು ರೂಪಿಸುತ್ತಿದ್ದಾರೆ. ಬುಲ್ಡೋಜರ್ ಬಳಸುವುದಾದರೆ ಗೃಹ ಸಚಿವರ ಮನೆ ನೆಲಸಮ ಮಾಡಲು ಬಳಸಿ ಎಂದು ಎಎಪಿ ಸಂಸದ ರಾಘವ್‌ ಛಡ್ಡಾ ಕಿಡಿಕಾರಿದ್ದಾರೆ.

    ಜಹಾಂಗೀರ್‌ಪುರಿಯಲ್ಲಿ ದೆಹಲಿ ಉತ್ತರ ಪಾಲಿಕೆ ನಡೆಸಿದ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ಛಡ್ಡಾ ಅವರು, ಕೇಂದ್ರ ಗೃಹ ಸಚಿವರೇ ಗಲಭೆಗಳನ್ನು ರೂಪಿಸುತ್ತಿದ್ದಾರೆ. ಅವರ ಮನೆ ಧ್ವಂಸ ಮಾಡಲು ಬುಲ್ಡೋಜರ್‌ ಬಳಸಿ. ಆಗ ಗಲಭೆಗಳು ನಿಲ್ಲುತ್ತವೆ ಎಂದು ಬಿಜೆಪಿ ನೇತೃತ್ವದ ಪಾಲಿಕೆಗೆ ಕುಟುಕಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹೈಡ್ರಾಮಾ – ಸುಪ್ರೀಂನಿಂದ ತಡೆ ಆದೇಶ ಬಂದ ಬಳಿಕವೂ 2 ಗಂಟೆ ಘರ್ಜಿಸಿದ ಜೆಸಿಬಿ

    ಬಿಜೆಪಿಯು ಕಳೆದ ಎಂಟು ವರ್ಷಗಳಲ್ಲಿ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳಿಗೆ ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಿದೆ. ಅವರನ್ನು ಕೇವಲ ಕೋಮುಗಲಭೆ ಸೃಷ್ಟಿಸಲು ಬಳಸಲಾಗುತ್ತಿದೆ. ಮುಂದಿನ ಗಲಭೆಗಳ ಸ್ಥಳದ ಬಗ್ಗೆ ನಿಮಗೆ ತಿಳಿಯಬೇಕಾದರೆ, ಬಾಂಗ್ಲಾದೇಶಿಗಳು ಮತ್ತು ರೊಹಿಂಗ್ಯಾಗಳನ್ನು ಎಲ್ಲಿ ಸ್ಥಳಾಂತರಿಸಿದ್ದಾರೆ ಎಂಬ ಪಟ್ಟಿಯನ್ನು ಬಿಜೆಪಿಯಿಂದ ಕೇಳಿ ಎಂದು ತಿಳಿಸಿದ್ದಾರೆ.

    ಬಿಜೆಪಿಯವರು 15 ವರ್ಷಗಳ ಕಾಲ ನಗರಸಭೆಯಲ್ಲಿ ಆಡಳಿತ ನಡೆಸಿದ್ದು, ಬಿಜೆಪಿ ನಾಯಕರು ಲಂಚ ಪಡೆದು ಅಕ್ರಮ ಕಟ್ಟಡಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಂದು ಈ ಅಕ್ರಮ ಕಟ್ಟಡಗಳನ್ನು ಕೆಡವಲು ಹೊರಟಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಲು ಲಂಚ ಪಡೆದ ಬಿಜೆಪಿ ನಾಯಕರ ಮನೆಗಳನ್ನೂ ಕೆಡವಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದ್ವೇಷದ ಬುಲ್ಡೋಜರ್‌ಗಳನ್ನು ಆಫ್ ಮಾಡಿ: ರಾಹುಲ್ ಗಾಂಧಿ

    ಹನುಮ ಜಯಂತಿ ವೇಳೆ ಗಲಭೆಗೆ ಕಾರಣವಾದ ಜಹಾಂಗೀರ್‌ಪುರಿಯಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಬಿಜೆಪಿ ನೇತೃತ್ವದ ಉತ್ತರ ದೆಹಲಿ ಪಾಲಿಕೆ ಕ್ರಮಕೈಗೊಂಡಿತ್ತು. ಬುಲ್ಡೋಜರ್‌ ಮೂಲಕ ಬುಧವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿತ್ತು. ಆದರೆ ಸುಪ್ರೀಂ ಕೋರ್ಟ್‌ ಕಾರ್ಯಾಚರಣೆಗೆ ತಡೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ವಿಚಾರಣೆ ನಡೆಸಲಿದೆ.