Tag: aap

  • ಆಪ್ ಶಾಸಕ ಅಮಾನತುಲ್ಲಾ ಖಾನ್‌ಗೆ ಜಾಮೀನು

    ಆಪ್ ಶಾಸಕ ಅಮಾನತುಲ್ಲಾ ಖಾನ್‌ಗೆ ಜಾಮೀನು

    ನವದೆಹಲಿ: ದೆಹಲಿ ವಕ್ಫ್ ಬೋರ್ಡ್ ( Delhi Waqf Board) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಆಮ್ ಆದ್ಮಿ ಪಕ್ಷದ (AAP) ಶಾಸಕ ಅಮಾನತುಲ್ಲಾ ಖಾನ್‌ಗೆ (Amanatullah Khan) ಬಿಗ್ ರಿಲೀಫ್ ಸಿಕ್ಕಿದೆ. ಅಮಾನತುಲ್ಲಾ ಖಾನ್ ವಿರುದ್ಧ ದಾಖಲಾಗಿದ್ದ ಇ.ಡಿ (E.D) ಪ್ರಕರಣದಲ್ಲಿ ದೆಹಲಿ ರೋಸ್ ಅವೆನ್ಯೂ ಕೋರ್ಟ್ ಜಾಮೀನು (Bail) ಮಂಜೂರು ಮಾಡಿದೆ. ಇಂದು ಜಾಮೀನು ನೀಡಿದ ಕೋರ್ಟ್ 15,000 ರೂ. ವೈಯಕ್ತಿಕ ಬಾಂಡ್ ನೀಡುವಂತೆ ಸೂಚಿಸಿದೆ.

    ಅಮಾನತುಲ್ಲಾ ಖಾನ್ ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದಾಗ ಅಕ್ರಮ ಹಣ ವರ್ಗಾವಣೆ ನಡೆದಿದೆ. ವಕ್ಫ್ ಮಂಡಳಿಯ ಹಲವು ಆಸ್ತಿಗಳನ್ನು ಅಕ್ರಮವಾಗಿ ಬಾಡಿಗೆಗೆ ನೀಡಲಾಗಿದೆ. ದೆಹಲಿ ಸರ್ಕಾರದಿಂದ ಸಹಾಯಧನ ಸೇರಿದಂತೆ ಮಂಡಳಿಯು ವಿವಿಧ ಅನುದಾನ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ಪುಲ್ವಾಮಾ ದಾಳಿಯಲ್ಲಿ ಸೈನಿಕರು ಸತ್ತಾಗ ಮಂಗಳಸೂತ್ರ ಕಿತ್ತುಕೊಂಡಿದ್ಯಾರು: ಬಿ.ಕೆ ಹರಿಪ್ರಸಾದ್ ಪ್ರಶ್ನೆ

    ಈ ಆರೋಪಗಳ ಬೆನ್ನಲ್ಲೇ ದೂರು ದಾಖಲಿಸಿಕೊಂಡಿದ್ದ ಇ.ಡಿ ವಿಚಾರಣೆಗೆ ಹಾಜರಾಗುವಂತೆ ಅಮಾನತುಲ್ಲಾ ಖಾನ್‌ಗೆ ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗದ ಅಮಾನತುಲ್ಲಾ ಖಾನ್ ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂಬುದು ದೇಶದ ಕರೆಯಾಗಿದೆ: ರಾಬರ್ಟ್ ವಾದ್ರಾ

  • ಜೈಲಿನಲ್ಲಿ ಕೇಜ್ರಿವಾಲ್‌ರನ್ನ ನಿಧಾನಗತಿಯಲ್ಲಿ ಸಾವಿನತ್ತ ತಳ್ಳಲಾಗ್ತಿದೆ: ಆಪ್ ಆರೋಪ

    ಜೈಲಿನಲ್ಲಿ ಕೇಜ್ರಿವಾಲ್‌ರನ್ನ ನಿಧಾನಗತಿಯಲ್ಲಿ ಸಾವಿನತ್ತ ತಳ್ಳಲಾಗ್ತಿದೆ: ಆಪ್ ಆರೋಪ

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಲ್ಲಿ (Tihar Jail) ನಿಧಾನಗತಿಯಲ್ಲಿ ಸಾವಿನತ್ತ ತಳ್ಳಲಾಗುತ್ತಿದೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ. ಜೈಲಿನೊಳಗೆ ಇನ್ಸುಲಿನ್ ಮತ್ತು ಕೇಜ್ರಿವಾಲ್ ಅವರ ವೈದ್ಯರ ಸಮಾಲೋಚನೆಗೆ ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದ ಮರುದಿನವೇ ಈ ಆರೋಪ ಮಾಡಲಾಗಿದೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಟೈಪ್ -2 ಮಧುಮೇಹದಿಂದ ಬಳಲುತ್ತಿರುವ ಅರವಿಂದ್ ಕೇಜ್ರಿವಾಲ್‌ (Arvind Kejriwal) ಅವರಿಗೆ ಜೈಲು ಆಡಳಿತವು ಇನ್ಸುಲಿನ್ ನೀಡಲು ನಿರಾಕರಿಸುತ್ತಿದೆ. ಈ ಮೂಲಕ ಕೇಜ್ರಿವಾಲ್ ಅವರ ನಿಧಾನಗತಿಯ ಸಾವಿಗೆ ಪಿತೂರಿ ನಡೆಯುತ್ತಿದೆ ಎಂದು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳಲು ಬಯಸುತ್ತೇನೆ ಎಂದರು.

    ಈ ಮೊದಲು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ವಾದ ಮಂಡಿಸಿದ್ದ ಇಡಿ (ED) ಪರ ವಕೀಲರು, ಜಾಮೀನು ಪಡೆಯುವ ಉದ್ದೇಶದಿಂದ ಕೇಜ್ರಿವಾಲ್ ಅವರು ಮಾವು, ಸಿಹಿ ತಿನಿಸು ಸೇವಿಸಿ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿತ್ತು. ಇದಕ್ಕೆ ಉತ್ತರಿಸಿದ ಕೇಜ್ರಿವಾಲ್ ಪರ ವಕೀಲರು, ಕ್ಷುಲ್ಲಕ ಆರೋಪ ಮಾಡಲಾಗುತ್ತಿದೆ. ಜಾಮೀನಿಗಾಗಿ ದೆಹಲಿ ಸಿಎಂ ಪಾರ್ಶ್ವವಾಯು ಅಪಾಯಕ್ಕೆ ಒಳಗಾಗಲು ಬಯಸುವುದಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಮನೆಯಿಂದ ಕಳುಹಿಸಿದ 48 ಊಟಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಮಾವಿನ ಹಣ್ಣಿತ್ತು – ಇಡಿ ಆರೋಪಕ್ಕೆ ಕೇಜ್ರಿವಾಲ್‌ ತಿರುಗೇಟು

  • ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು: ಆಪ್ ಸಚಿವೆ ಅತಿಶಿ ಗಂಭೀರ ಆರೋಪ

    ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು: ಆಪ್ ಸಚಿವೆ ಅತಿಶಿ ಗಂಭೀರ ಆರೋಪ

    ನವದೆಹಲಿ: ಬಂಧನದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಜೈಲಿನಲ್ಲಿ ಬಿಜೆಪಿ (BJP) ಹತ್ಯೆಯ ಸಂಚು ರೂಪಿಸಿದೆ ಎಂದು ಆಪ್‍ನ (AAP) ಸಚಿವೆ ಅತಿಶಿ (Atishi) ಗಂಭೀರ ಆರೋಪ ಮಾಡಿದ್ದಾರೆ.

    ನ್ಯಾಯಾಲಯದ ಮುಂದೆ ಇಡಿ ಅಧಿಕಾರಿಗಳು ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಸಕ್ಕರೆ ಪ್ರಮಾಣವನ್ನು (Sugar Level) ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ ಬಳಿಕ ಅತಿಶಿ ಈ ಆರೋಪ ಮಾಡಿದ್ದಾರೆ. ಕೇಜ್ರಿವಾಲ್ ಟೈಪ್ 2 ಡಯಾಬಿಟಿಸ್ ರೋಗಿಯಾಗಿದ್ದಾರೆ. ಪದೇ ಪದೇ ಮನವಿ ಮಾಡಿದರೂ ಅವರಿಗೆ ಇನ್ಸುಲಿನ್ ನೀಡುತ್ತಿಲ್ಲ. ವೈದ್ಯರೊಂದಿಗೆ ವಿಡಿಯೋ ಸಮಾಲೋಚನೆಗೆ ಮಾಡಲಾದ ವಿನಂತಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಾವಿನಹಣ್ಣು, ಸಿಹಿತಿಂಡಿ ಸೇವಿಸಿ ಕೇಜ್ರಿವಾಲ್ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ತಿದ್ದಾರೆ- ಇಡಿ ಆರೋಪ

    ಚುನಾವಣೆಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಅವರನ್ನು ಜೈಲಿನಲ್ಲಿಟ್ಟು ಕೊಲ್ಲಲು ಯೋಜನೆ ರೂಪಿಸಲಾಗುತ್ತಿದೆ. ಕೇಜ್ರಿವಾಲ್ ಅವರು ತೀವ್ರ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಅವರು ಕಳೆದ 30 ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಅವರು ಪ್ರತಿದಿನ 54 ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಾರೆ ಎಂದರು.

    ಯಾವುದೇ ವೈದ್ಯರಲ್ಲಿ ಕೇಳಿ, ಅಂತಹ ತೀವ್ರ ಮಧುಮೇಹ ಇರುವವರು ಮಾತ್ರ ಇಷ್ಟು ಇನ್ಸುಲಿನ್ ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ನ್ಯಾಯಾಲಯ ಅರವಿಂದ್ ಕೇಜ್ರಿವಾಲ್ ಅವರಿಗೆ ಮನೆಯಲ್ಲಿ ಬೇಯಿಸಿದ ಆಹಾರ ಮತ್ತು ವೈದ್ಯರು ಹೇಳಿದ ಆಹಾರವನ್ನು ತಿನ್ನಲು ಸೂಚಿಸಿದೆ ಎಂದರು.

    ಇಂದು ಭಾರತೀಯ ಜನತಾ ಪಕ್ಷವು ತನ್ನ ಅಂಗಸಂಸ್ಥೆ ಇಡಿ ಮೂಲಕ ಕೇಜ್ರಿವಾಲ್ ಆರೋಗ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಇಂದು ಇಡಿ ಪದೇ ಪದೇ ಸುಳ್ಳು ಹೇಳುತ್ತಿದೆ ಎಂದು ಇಡಿಯ ವಾದಗಳಿಗೆ ಅವರು ತಿರುಗೇಟು ನೀಡಿದರು. ಇದನ್ನೂ ಓದಿ: ಅಣಕು ಮತ ಎಣಿಕೆ ವೇಳೆ ಬಿಜೆಪಿಗೆ ಹೆಚ್ಚುವರಿ ಮತ – ವರದಿ ಸುಳ್ಳೆಂದ ಚುನಾವಣಾ ಆಯೋಗ

  • ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ

    ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ

    ನವದೆಹಲಿ: ಹೊಸ ಮದ್ಯ ನೀತಿಯಲ್ಲಿ (Delhi Liquor Policy Case) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕೊಳ್ಳಪಟ್ಟಿರುವ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ನ್ಯಾಯಾಂಗ ಬಂಧನವನ್ನು ಏ.26 ರವರೆಗೆ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶ ಹೊರಡಿಸಿದೆ.

    ಸಿಸೋಡಿಯಾ ಪರ ವಾದ ಮಂಡಿಸಿದ ವಕೀಲ ಮೋಹಿತ್ ಮಾಥುರ್, ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ವಿಳಂಬವಾಗಿದೆ. ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಬೆನೊಯ್ ಬಾಬುಗೆ ಜಾಮೀನು ನೀಡಿರುವುದನ್ನು ಉಲ್ಲೇಖಿಸಿ, ಸಿಸೋಡಿಯಾ ಕೂಡಾ ಪ್ರಭಾವಿ ಸ್ಥಾನದಲ್ಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಣಕು ಮತದಾನದಲ್ಲಿ ಬಿಜೆಪಿಗೆ ಅಧಿಕ ಮತ – ಇವಿಎಂ ಪರಿಶೀಲನೆಗೆ ಸುಪ್ರೀಂ ಸೂಚನೆ

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇ.ಡಿ ಪರ ವಕೀಲರು, ಈ ಪ್ರಕರಣದಲ್ಲಿ ಪ್ರಮುಖ ಸಂಚುಕೋರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆಗೆ ಹಲವು ಎಎಪಿ ನಾಯಕರು ಮತ್ತು ಸಚಿವರು ಭಾಗಿಯಾಗಿದ್ದಾರೆ. ಪ್ರಕರಣದ ಪೂರ್ಣ ತನಿಖೆವರೆಗೂ ಜಾಮೀನು ನೀಡಬಾರದು ಎಂದು ವಾದಿಸಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ಏಪ್ರಿಲ್ 26 ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆ ಮುಂದೂಡಿತು.

  • ಕೇಜ್ರಿವಾಲ್‍ರನ್ನು ಭಯೋತ್ಪಾದಕನಂತೆ ನಡೆಸಿಕೊಳ್ಳಲಾಗುತ್ತಿದೆ: ಪಂಜಾಬ್ ಸಿಎಂ

    ಕೇಜ್ರಿವಾಲ್‍ರನ್ನು ಭಯೋತ್ಪಾದಕನಂತೆ ನಡೆಸಿಕೊಳ್ಳಲಾಗುತ್ತಿದೆ: ಪಂಜಾಬ್ ಸಿಎಂ

    ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಭಯೋತ್ಪಾದಕನಂತೆ ನಡೆಸಿಕೊಳ್ಳಲಾಗುತ್ತಿದ್ದು, ಅಗತ್ಯ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಆರೋಪಿಸಿದ್ದಾರೆ.

    ದೆಹಲಿಯ ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ (BJP) ಈ ಚುನಾವಣೆಯಲ್ಲಿ ಆಪ್‍ನ (AAP) ತನ್ನ ರಾಜಕೀಯ ಪ್ರತಿಸ್ಪರ್ಧಿಯನ್ನು ಇರದಂತೆ ನೋಡಿಕೊಳ್ಳುತ್ತಿದೆ. ಅವರನ್ನು ಉಗ್ರನಂತೆ ಬಂಧಿಸಲಾಗಿದೆ. ಅವರು ಮಾಡಿದ ತಪ್ಪೇನು ಎಂದು ಮಾನ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂನಿಂದ ಸದ್ಯಕ್ಕಿಲ್ಲ ರಿಲೀಫ್ – ಏ.29 ರಂದು ಕೇಜ್ರಿವಾಲ್ ಅರ್ಜಿ ವಿಚಾರಣೆ

    ಜೈಲಿನ ಒಳಗಿನ ಗಾಜಿನ ಕೋಣೆಯಲ್ಲಿ ಕೇಜ್ರಿವಾಲ್ ಅವರನ್ನು ಮಾನ್ ಭೇಟಿಯಾದರು. ಬಳಿಕ ಇಬ್ಬರು ವಿರೋಧ ಪಕ್ಷದ ನಾಯಕರು ದೂರವಾಣಿ ಸಂಪರ್ಕದ ಮೂಲಕ 30 ನಿಮಿಷಗಳ ಕಾಲ ಮಾತನಾಡಿದರು. ಅವರನ್ನು ನೋಡಿ ನಾನು ಭಾವುಕನಾದೆ ಎಂದು ಮಾನ್ ಹೇಳಿದ್ದಾರೆ.

    ಜೈಲಿನೊಳಗೂ ಕೇಜ್ರಿವಾಲ್ ದೆಹಲಿಯ ಜನರ ಬಗ್ಗೆ ಕಾಳಜಿ ವಹಿಸಿದ್ದಾರೆ. ಮುಂದಿನ ವಾರ ಇಬ್ಬರು ಸಚಿವರನ್ನು ತಿಹಾರ್ ಜೈಲಿಗೆ ಕರೆಸಿಕೊಂಡು ಆಡಳಿತದ ಕುರಿತು ಚರ್ಚಿಸಲು ಕೇಜ್ರಿವಾಲ್ ಯೋಜಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಭೇಟಿಯ ಬಳಿಕ ಮಾನ್ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಬಿಜೆಪಿಯ ರಾಜಕೀಯ ತಂಡ – ಇಡಿ, ಕೇಜ್ರಿವಾಲ್ ಅವರ ಚಿಂತನೆಯನ್ನು ಬಂಧಿಸಲು ಸಾಧ್ಯವಿಲ್ಲ. ಎಎಪಿ ಮಾತ್ರ ಬಿಜೆಪಿಯನ್ನು ತಡೆಯಬಹುದು ಎಂದು ಬರೆದುಕೊಂಡಿದ್ದಾರೆ.

    ಮದ್ಯ ನೀತಿ ಹಗರಣಕ್ಕೆ (Liquor policy scam) ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿಯನ್ನು ಕಳೆದ ತಿಂಗಳು ಜಾರಿ ನಿರ್ದೇಶನಾಲಯ ಬಂಧಿಸಿದೆ. ಒಂದು ವಾರಕ್ಕೂ ಹೆಚ್ಚು ಕಾಲ ಇಡಿ ತನ್ನ ಕಸ್ಟಡಿಯಲ್ಲಿ ವಿಚಾರಣೆ ನಡೆಸಿದ ನಂತರ ಜೈಲಿಗೆ ಕಳುಹಿಸಲಾಯಿತು. ಅವರ ಬಂಧನವನ್ನು ಏಪ್ರಿಲ್ 23ಕ್ಕೆ ವಿಸ್ತರಿಸಲಾಗಿದೆ. ಅವರ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಏ.29ಕ್ಕೆ ಮುಂದೂಡಿದೆ. ಇದನ್ನೂ ಓದಿ: ಭಾರತೀಯ ಸಿಬ್ಬಂದಿ ಭೇಟಿಗೆ ಅಧಿಕಾರಿಗಳಿಗೆ ಇರಾನ್‌ ಅವಕಾಶ

  • ಕೇಜ್ರಿವಾಲ್ ನೇರ ಭೇಟಿಗೆ ಪತ್ನಿ ಸುನಿತಾಗೆ ಅನುಮತಿ ನಿರಾಕರಿಸಿದೆ: ತಿಹಾರ್ ಅಧಿಕಾರಿಗಳ ವಿರುದ್ಧ ಆಪ್ ಆರೋಪ

    ಕೇಜ್ರಿವಾಲ್ ನೇರ ಭೇಟಿಗೆ ಪತ್ನಿ ಸುನಿತಾಗೆ ಅನುಮತಿ ನಿರಾಕರಿಸಿದೆ: ತಿಹಾರ್ ಅಧಿಕಾರಿಗಳ ವಿರುದ್ಧ ಆಪ್ ಆರೋಪ

    ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ (Liquor Policy Case) ಬಂಧನಕ್ಕೊಳಗಾಗಿ ಸದ್ಯ ನ್ಯಾಯಂಗ ಬಂಧನದಡಿ ತಿಹಾರ್ ಜೈಲಿನಲ್ಲಿರುವ (Tihar Jail) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ನೇರ ಭೇಟಿ ಮಾಡಲು ಪತ್ನಿ ಸುನೀತಾ (Sunita) ಅವರಿಗೆ ಅನುಮತಿ ನಿರಾಕರಿಸಲಾಗಿದೆ. ಕೇವಲ ಕಿಟಕಿಯ ಮೂಲಕ ಭೇಟಿಗೆ ಅವಕಾಶ ನೀಡಲಾಗಿದೆ. ಇದು ಅಮಾನವೀಯ ನಡೆ ಎಂದು ಆಮ್ ಆದ್ಮಿ ಪಕ್ಷದ (AAP) ನಾಯಕ ಸಂಜಯ್ ಸಿಂಗ್ ಶನಿವಾರ ಆರೋಪಿಸಿದ್ದಾರೆ.

    ಕಳೆದ ಅಕ್ಟೋಬರ್‌ನಲ್ಲಿ ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ತಿಹಾರ್‌ನಲ್ಲಿ ಆರು ತಿಂಗಳು ಕಳೆದು ಈ ತಿಂಗಳ ಆರಂಭದಲ್ಲಿ ಜಾಮೀನು ಪಡೆದ ಸಂಜಯ್ ಸಿಂಗ್ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಅಪರಾಧಿಗಳು ಕುಟುಂಬಸ್ಥರನ್ನು ಭೇಟಿಯಾಗಲು ಜೈಲಿನಲ್ಲಿ ಅನುಮತಿ ಇದೆ. ಆದರೆ ಕೇಜ್ರಿವಾಲ್ ಭೇಟಿಗೆ ಅನುಮತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅರ್ಜಿ – ಸೋಮವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

    ಅರವಿಂದ್ ಕೇಜ್ರಿವಾಲ್ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದವರು ತಮ್ಮ ಪತ್ನಿಯನ್ನು ನಡುವೆ ಗಾಜಿನಿಂದ ಕಿಟಕಿಯ ಮೂಲಕ ಭೇಟಿಯಾಗುವಂತೆ ಮಾಡುತ್ತಿದ್ದಾರೆ. ಇಂತಹ ಅಮಾನವೀಯ ವರ್ತನೆ ಏಕೆ? ಎಂದು ಸಂಜಯ್ ಸಿಂಗ್ ಪ್ರಶ್ನಿಸಿದರು. ನಮ್ಮನ್ನು ಅವಮಾನಿಸಲು ಮತ್ತು ನೈತಿಕತೆ ಸ್ಥೈರ್ಯ ಕುಗ್ಗಿಸಲು ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಬೇಕರಿಯಲ್ಲಿ ಗುಲಾಬ್ ಜಾಮೂನು ಖರೀದಿಸಿದ ರಾಹುಲ್ ಗಾಂಧಿ

    ಕೇಂದ್ರ ಸರ್ಕಾರ ಮತ್ತು ಪ್ರಧಾನಿಯವರ ಒತ್ತಾಯದ ಮೇರೆಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಜೈಲಿನಲ್ಲಿ ಅವರು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಂಜಾಬ್ ಸಿಎಂ ಭಗವಂತ್ ಮಾನ್ ನಡುವಿನ ಸಭೆಯನ್ನು ಕೊನೆಯ ಕ್ಷಣದಲ್ಲಿ ಅಧಿಕಾರಿಗಳು ರದ್ದುಗೊಳಿಸಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ

    ಸಹಾರಾ ಇಂಡಿಯಾದ ದಿವಂಗತ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಬ್ರತಾ ರಾಯ್ ಅವರು ತಿಹಾರ್‌ನಲ್ಲಿ ಇಂಟರ್‌ನೆಟ್, ಫೋನ್ ಮತ್ತು ಕಚೇರಿ ಸೌಲಭ್ಯಗಳನ್ನು ಹೊಂದಿದ್ದರು. ಚಂದ್ರ ಬ್ರದರ್ಸ್ಗೆ ಜೈಲು ಆವರಣದಲ್ಲಿ ನಿಯಮಿತ ಸಭೆಗಳನ್ನು ನಡೆಸಲು ಮತ್ತು ಫೈಲ್‌ಗಳಿಗೆ ಸಹಿ ಹಾಕಲು ಅವಕಾಶವಿದೆ. ಆದರೆ ಅರವಿಂದ್ ಕೇಜ್ರಿವಾಲ್ ಬಗ್ಗೆ ನೀವು ಯಾಕೆ ಹೆದರುತ್ತೀರಿ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್‌ ತೊರೆದ 400 ಕಾರ್ಯಕರ್ತರು

  • ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅರ್ಜಿ – ಸೋಮವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

    ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅರ್ಜಿ – ಸೋಮವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

    ನವದೆಹಲಿ: ಇಡಿ ಬಂಧನ ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.

    ನ್ಯಾ. ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠದ ಮುಂದೆ ಈ ಅರ್ಜಿಯನ್ನು ಪಟ್ಟಿ ಮಾಡಲಾಗಿದೆ. ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿ ವಿಚಾರಣೆ ಬಳಿಕ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದೆ.

    ಈ ಮೊದಲು ತಮ್ಮ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರವಿಂದ್ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾ. ಸ್ವರಣಾ ಕಾಂತ ಶರ್ಮಾ, ಇಡಿ ಬಂಧನ ಕಾನೂನು ಬದ್ಧವಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದ್ದರು. ಇದಾದ ಒಂದು ದಿನದ ನಂತರ ಕೇಜ್ರಿವಾಲ್ ಅವರು ಬುಧವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೆ ತಮ್ಮ ಮೇಲ್ಮನವಿಯನ್ನು ಆದಷ್ಟು ಬೇಗ ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಮಾರ್ಚ್ 21 ರ ರಾತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಿದ್ದರು. ಮಾರ್ಚ್ 22 ರಂದು ವಿಚಾರಣಾ ನ್ಯಾಯಾಲಯವು ಅವರನ್ನು ಆರು ದಿನಗಳ ಇಡಿ ಕಸ್ಟಡಿಗೆ ನೀಡಿತು. ಅದನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಲಾಯಿತು. ಏಪ್ರಿಲ್ 1 ರಂದು ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

  • ಬಿಆರ್‌ಎಸ್‌ ನಾಯಕಿ 3 ದಿನ ಸಿಬಿಐ ಕಸ್ಟಡಿಗೆ

    ಬಿಆರ್‌ಎಸ್‌ ನಾಯಕಿ 3 ದಿನ ಸಿಬಿಐ ಕಸ್ಟಡಿಗೆ

    ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ (Delhi Liquor Policy Case) ಬಂಧನಕ್ಕೊಳಗಾಗಿರುವ ಭಾರತೀಯ ರಾಷ್ಟ್ರ ಸಮಿತಿ (BRS) ನಾಯಕಿ ಕೆ.ಕವಿತಾ (K.Kavitha) ಅವರನ್ನು 3 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಕಳುಹಿಸಲಾಗಿದೆ.

    ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈಚೆಗೆ ದೆಹಲಿಯ ತಿಹಾರ್‌ ಜೈಲಿನಿಂದಲೇ ಕೆ.ಕವಿತಾ ಅವರನ್ನು ಸಿಬಿಐ ವಶಕ್ಕೆ ಪಡೆದಿತ್ತು. ನಂತರ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿತ್ತು. ಕವಿತಾ ಅವರನ್ನು ಏ.15 ರ ವರೆಗೆ ಸಿಬಿಐ ಕಸ್ಟಡಿಗೆ ವಹಿಸಿ ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯ ಆದೇಶ ಹೊರಡಿಸಿದೆ. ಇದನ್ನೂ ಓದಿ: ಜೈಲಿನಿಂದಲೇ ಬಿಆರ್‌ಎಸ್‌ ನಾಯಕಿಯನ್ನು ಬಂಧಿಸಿದ ಸಿಬಿಐ

    46 ವಯಸ್ಸಿನ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿತ್ತು. ಅವರ ಸಹೋದರ ಹಾಗೂ ತೆಲಂಗಾಣ ಮಾಜಿ ಸಚಿವ ಕೆ.ಟಿ.ರಾಮರಾವ್ ಅವರು ಇಡಿ ಅಧಿಕಾರಿಗಳ ವಿರುದ್ಧ ವಾದ ಮಂಡಿಸಿದ್ದರು.

    ನಂತರ ಕವಿತಾರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ತಿಹಾರ್‌ ಜೈಲಿನಲ್ಲಿರುವಾಗಲೇ ಮತ್ತೊಂದು ಪ್ರಕರಣದಲ್ಲಿ ಗುರುವಾರ ಸಂಜೆ ಸಿಬಿಐ ಅವರನ್ನು ಬಂಧಿಸಿತು. ಮದ್ಯದ ಪರವಾನಿಗೆಗಾಗಿ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರೂ. ಲಂಚ ನೀಡುವ ಸಂಬಂಧ ಸಾಕ್ಷಿ ಹೇಳಿಕೆಗಳು, ವಾಟ್ಸಾಪ್ ಚಾಟ್‌ಗಳು ಮತ್ತು ಹಣಕಾಸಿನ ದಾಖಲೆಗಳು ಅವರನ್ನು ಸಂಚು ರೂಪಿಸಿದವರಲ್ಲಿ ಪ್ರಮುಖರೆಂದು ವಾದಿಸಿ, ಐದು ದಿನಗಳ ಕಾಲ ಕವಿತಾ ಅವರನ್ನು ಸಿಬಿಐ ಕಸ್ಟಡಿಗೆ ಕೋರಿತ್ತು. ಇದನ್ನೂ ಓದಿ: 370 ವಿಧಿಯನ್ನು ರದ್ದುಪಡಿಸಿದ್ದಕ್ಕೆ ಅಂಬೇಡ್ಕರ್ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು: ಮೋದಿ

  • ಕೇಜ್ರಿವಾಲ್‌ ಬಂಧನ ಬಳಿಕ ಎಎಪಿಗೆ ಮತ್ತೊಂದು ಶಾಕ್‌ – ಸಚಿವ ರಾಜ್‌ಕುಮಾರ್‌ ಆನಂದ್‌ ರಾಜೀನಾಮೆ

    ಕೇಜ್ರಿವಾಲ್‌ ಬಂಧನ ಬಳಿಕ ಎಎಪಿಗೆ ಮತ್ತೊಂದು ಶಾಕ್‌ – ಸಚಿವ ರಾಜ್‌ಕುಮಾರ್‌ ಆನಂದ್‌ ರಾಜೀನಾಮೆ

    ನವದೆಹಲಿ: ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಬಂಧನ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷಕ್ಕೆ (AAP) ಮತ್ತೊಂದು ಶಾಕ್‌ ಎದುರಾಗಿದೆ.

    ಎಎಪಿಯ ದೆಹಲಿ ಸಚಿವ ರಾಜ್ ಕುಮಾರ್ ಆನಂದ್ (Raaj Kumar Anand) ಸರ್ಕಾರ ಮತ್ತು ಪಕ್ಷವನ್ನು ತೊರೆದಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಕೇಜ್ರಿವಾಲ್ ಮೇಲ್ಮನವಿ ಸಲ್ಲಿಕೆ

    ಭ್ರಷ್ಟಾಚಾರ ವಿರುದ್ಧ ಹೋರಾಡುವ ಕುರಿತು ಎಎಪಿಯ ಬಲವಾದ ಸಂದೇಶವನ್ನು ನೋಡಿದ ನಂತರ ನಾನು ಎಎಪಿಗೆ ಸೇರಿದ್ದೆ. ಇಂದು ಪಕ್ಷ ಭ್ರಷ್ಟತೆ ಮಧ್ಯೆ ಸಿಲುಕಿದೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಸಮಾಜ ಕಲ್ಯಾಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಚಿವರಾಗಿದ್ದ ಆನಂದ್ ಸ್ಪಷ್ಟಪಡಿಸಿದ್ದಾರೆ.

    ಕೇಜ್ರಿವಾಲ್ ಅವರ ಬಂಧನ ಮತ್ತು ಮದ್ಯ ನೀತಿಯ ಪ್ರಕರಣದಿಂದ ಪಕ್ಷದ ಮೇಲಾದ ಪರಿಣಾಮದಿಂದಾಗಿ ರಾಜ್‌ಕುಮಾರ್‌ ಆನಂದ್‌ ಅವರು, ತಮ್ಮ ಸಚಿವ ಸ್ಥಾನ ಮತ್ತು ಎಎಪಿಗೆ ರಾಜೀನಾಮೆ ನೀಡಿದ್ದಾರೆ. ಹೀಗೆ ರಾಜೀನಾಮೆ ನೀಡಿದ ದೆಹಲಿ ಸರ್ಕಾರದ ಮೊದಲ ಮಂತ್ರಿಯಾಗಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ಇತರರೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ – ಜಾಮೀನು ಅರ್ಜಿ ವಜಾ

    ದೆಹಲಿ ಮದ್ಯ ನೀತಿ ಪ್ರಕರಣ ಮತ್ತು ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೇರಿದಂತೆ ಪ್ರಮುಖ ನಾಯಕರ ಬಂಧನ ಬಳಿಕ ಪಕ್ಷದಲ್ಲಿ ಅಚ್ಚರಿದಾಯಕ ಬೆಳವಣಿಗೆಗಳು ನಡೆಯುತ್ತಿವೆ.

  • ಸಿಎಂ ಸ್ಥಾನದಿಂದ ಕೇಜ್ರಿವಾಲ್ ವಜಾ ಕೋರಿ ಮೂರನೇ ಅರ್ಜಿ – ಅರ್ಜಿದಾರರನ್ನು ತರಾಟೆ ತೆಗೆದುಕೊಂಡ ಕೋರ್ಟ್; ದಂಡದ ಎಚ್ಚರಿಕೆ

    ಸಿಎಂ ಸ್ಥಾನದಿಂದ ಕೇಜ್ರಿವಾಲ್ ವಜಾ ಕೋರಿ ಮೂರನೇ ಅರ್ಜಿ – ಅರ್ಜಿದಾರರನ್ನು ತರಾಟೆ ತೆಗೆದುಕೊಂಡ ಕೋರ್ಟ್; ದಂಡದ ಎಚ್ಚರಿಕೆ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲದಿಂದ ಬಂಧನಕ್ಕೊಳ್ಳಪಟ್ಟಿರುವ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ದೆಹಲಿಯ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಲು ನಿರ್ದೇಶನಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದ ಆಮ್ ಆದ್ಮಿ ಪಕ್ಷದ (AAP) ಮಾಜಿ ಶಾಸಕರನ್ನು ದೆಹಲಿ ಹೈಕೋರ್ಟ್ (Delhi High Court) ಸೋಮವಾರ ಟೀಕಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸುಬ್ರಮೋನಿಯಂ ಪ್ರಸಾದ್ ನೇತೃತ್ವದ ಪೀಠ ಅರ್ಜಿದಾರರಾದ ಸಂದೀಪ್ ಕುಮಾರ್ ಅವರನ್ನ ತರಾಟೆಗೆ ತೆಗೆದುಕೊಂಡಿತು. ಈ ಹಿಂದೆ ಇಂತಹ ಎರಡು ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ. ಅದಾಗ್ಯೂ ನೀವು ಅರ್ಜಿ ಸಲ್ಲಿಸಿದ್ದೀರಿ. ಹೀಗಾಗಿ ನಿಮ್ಮ ಮೇಲೆ ಭಾರೀ ವೆಚ್ಚವನ್ನು ವಿಧಿಸಬೇಕು ಎಂದು ಕೋರ್ಟ್ ಹೇಳಿತು. ಇದನ್ನೂ ಓದಿ: ಕೇಂದ್ರ, ರಾಜ್ಯದ ನಡುವೆ ಸ್ಪರ್ಧೆ ಬೇಡ – ಬರ ಪರಿಹಾರ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಸಲಹೆ

    Delhi High Court

    ಪ್ರಚಾರ ಹಿತಾಸಕ್ತಿ ಅರ್ಜಿಯಲ್ಲದೆ ಬೇರೇನೂ ಅಲ್ಲ ಎಂದ ಪೀಠ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರ ಪೀಠವು ಇದೇ ರೀತಿಯ ವಿಷಯಗಳನ್ನು ಆಲಿಸಿದೆ ಮತ್ತು ತಿರಸ್ಕರಿಸಿದೆ‌. ಇದೇ ರೀತಿಯ ಅರ್ಜಿಗಳನ್ನು ಆಲಿಸಿದ್ದರಿಂದ ಅಂತಿಮವಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಈ ಅರ್ಜಿಯನ್ನು ವರ್ಗಾಯಿಸಲಾಯಿತು.

    ಮಾರ್ಚ್ 28 ರಂದು, ಸುರ್ಜಿತ್ ಸಿಂಗ್ ಯಾದವ್ ಎಂಬಾತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ತಿರಸ್ಕರಿಸಿತ್ತು. ಕಾರ್ಯಾಂಗ ಮತ್ತು ಅಧ್ಯಕ್ಷರು ಸಮಸ್ಯೆಯನ್ನು ಪರಿಶೀಲಿಸಬೇಕು ಮತ್ತು ನ್ಯಾಯಾಲಯವು ಅದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆಗ ಹೇಳಿತ್ತು. ಏಪ್ರಿಲ್ 4 ರಂದು, ಹಿಂದೂ ಸೇನೆಯ ಅಧ್ಯಕ್ಷರಾದ ವಿಷ್ಣು ಗುಪ್ತಾ ಅವರ ಮತ್ತೊಂದು ಪಿಐಎಲ್ ಅನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು. ಸಿಎಂ ಆಗಿ ಮುಂದುವರಿಯುವುದು ಕೇಜ್ರಿವಾಲ್ ಅವರ ವೈಯಕ್ತಿಕ ಕರೆ ಎಂದು ಕೋರ್ಟ್ ಹೇಳಿತ್ತು. ಇದನ್ನೂ ಓದಿ: ಈ ಬಾರಿ ಅಯೋಧ್ಯೆಯಲ್ಲಿ ರಾಮನವಮಿ ಅದ್ಧೂರಿ ಆಚರಣೆ- ಸೂರ್ಯ ತಿಲಕಕ್ಕೆ ಸಿದ್ಧತೆ