Tag: aap

  • ಹರಿಯಾಣದಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಗೆ ಬ್ರೇಕ್‌? – 20 ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌

    ಹರಿಯಾಣದಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಗೆ ಬ್ರೇಕ್‌? – 20 ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌

    ಚಂಡೀಗಢ: ಆಮ್‌ ಆದ್ಮಿ ಪಕ್ಷ (AAP) ಸೋಮವಾರ ಹರಿಯಾಣ ವಿಧಾನಸಭಾ ಚುನಾವಣೆಗೆ (Haryana Assembly Elections) 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಈ ಕುರಿತು ಮಾತನಾಡಿರುವ ಎಎಪಿ ಹರಿಯಾಣ ಘಟಕದ ಮುಖ್ಯಸ್ಥ ಸುಶೀಲ್ ಗುಪ್ತಾ (Sushil Gupta), ಕಾಂಗ್ರೆಸ್‌ ಸೀಟು ಹಂಚಿಕೆಯನ್ನು ಅಂತಿಮಗೊಳಿಸದೇ ಇದ್ದರೆ, ಎಲ್ಲಾ 90 ಕ್ಷೇತ್ರಗಳಿಗೆ ಎಎಪಿ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ.

    ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿ (AAP-Congress Alliance) ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗುಪ್ತಾ, ಆಮ್ ಆದ್ಮಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ದರಾಗಿದ್ದಾರೆ. ಕಾಂಗ್ರೆಸ್‌ ಸೀಟು ಹಂಚಿಕೆಯನ್ನು ಅಂತಿಮಗೊಳಿಸದೇ ಇದ್ದರೆ ಎಲ್ಲಾ 90 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಉಭಯ ಪಕ್ಷಗಳ ನಡುವೆ ಮಾತುಕತೆ ಸ್ಥಗಿತಗೊಂಡಿದೆ. ಎಎಪಿ 10 ಕ್ಷೇತ್ರಗಳಿಗೆ ಬೇಡಿಕೆ ಇಟ್ಟರೆ, ಕಾಂಗ್ರೆಸ್ 5 ಕ್ಷೇತ್ರಗಳನ್ನು ಬಿಟ್ಟು ಕೊಡುವುದಾಗಿ ಹೇಳಿದೆ. ಈ ಕುರಿತು ಕಾಂಗ್ರೆಸ್ ಅಂತಿಮ ಪ್ರತಿಕ್ರಿಯೆಗಾಗಿ ಆಪ್ ಕಾಯುತ್ತಿದೆ. ಚುನಾವಣೆಗೆ ಬಹಳ ಕಡಿಮೆ ಸಮಯವಿದೆ. ಪ್ರತಿ ವಿಧಾನಸಭೆಯಲ್ಲೂ ಆಪ್‌ ಸಂಘಟನೆ ಬಲಿಷ್ಠವಾಗಿದ್ದು, ಪ್ರಾಮಾಣಿಕ ಮೈತ್ರಿಗಾಗಿ ತಾಳ್ಮೆಯಿಂದ ಕಾದಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

    90 ಸದಸ್ಯ ಬಲದ ಹರಿಯಾಣ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನವಾಗಿದೆ. ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

  • ಹರಿಯಾಣ ವಿಧಾನಸಭೆ ಚುನಾವಣೆ – ಆಪ್, ಕಾಂಗ್ರೆಸ್‌ ಮೈತ್ರಿ ಹಿಂದಿನ ಲೆಕ್ಕಾಚಾರ ಏನು?

    ಹರಿಯಾಣ ವಿಧಾನಸಭೆ ಚುನಾವಣೆ – ಆಪ್, ಕಾಂಗ್ರೆಸ್‌ ಮೈತ್ರಿ ಹಿಂದಿನ ಲೆಕ್ಕಾಚಾರ ಏನು?

    ನವದೆಹಲಿ: ಲೋಕಸಭೆ ಚುನಾವಣೆ ಬಳಿಕ ಹರಿಯಾಣ ವಿಧಾನಸಭೆ ಚುನಾವಣೆಯಲ್ಲೂ ಆಪ್ (AAP) ಜೊತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. 90 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಬೇಡಿಕೆ ಇಟ್ಟಿದ್ದು, ಕಾಂಗ್ರೆಸ್‌ ನಾಯಕರು (Congress Leaders) ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿ ಅಂತಿಮ ಮಾತುಕತೆ ನಡೆಯುವ ಸಾಧ್ಯತೆಗಳಿವೆ.

    ಲೋಕಸಭೆ ಚುನಾವಣೆ ವೇಳೆ ಹರಿಯಾಣದಲ್ಲಿ (Haryana Polls) ಆಪ್, ಕಾಂಗ್ರೆಸ್‌ ಮೈತ್ರಿಗೆ ಗೆಲುವು ಸಿಗದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಮತ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿಯೂ ಮತ ವಿಭಜನೆ ತಡೆಯಲು ಮೈತ್ರಿ ಮಾತುಕತೆ ನಡೆಯುತ್ತಿದೆ, ಎರಡು ಪಕ್ಷದಲ್ಲಿ ಓರ್ವ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಚಾರಗಳಿವೆ. ಹರಿಯಾಣದಲ್ಲಿ ಮೂರನೇ ಬಾರಿಗೆ ಬಿಜೆಪಿಗೆ ಅಧಿಕಾರ ನೀಡದೇ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ನಿರ್ಧರಿಸಿದ್ದು ಇದಕ್ಕಾಗಿ ಸಾಕಷ್ಟು ತಯಾರಿ ಮಾಡುತ್ತಿದೆ. ಇದನ್ನೂ ಓದಿ: ʻಕೈʼ ಹಿಡಿಯುತ್ತಾರಾ ಕುಸ್ತಿಪಟು ವಿನೇಶ್, ಬಜರಂಗ್ ಪುನಿಯಾ – ತೀವ್ರ ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ಭೇಟಿ

    ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ, ಉಭಯ ಪಕ್ಷಗಳ ನಡುವಿನ ಈ ಮಾತುಕತೆಯನ್ನು ಅದರ ನಾಯಕರಾದ ಕೆ.ಸಿ ವೇಣುಗೋಪಾಲ್ (KC Venugopal) ಮತ್ತು ದೀಪಕ್ ಬಬಾರಿಯಾ ನಡೆಸಲಿದ್ದಾರೆ. ಆಪ್ ಕಡೆಯುಂದ ಸಂದೀಪ್ ಪಾಠಕ್ ಮತ್ತು ರಾಘವ್ ಚೆಡ್ಡಾ ಮೈತ್ರಿ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ತಾಯಿಯಾಗಿ ಪಡೆದಿರುವುದು ನನ್ನ ಪುಣ್ಯ- ಜೈಲಿನಲ್ಲಿರುವ ಪವಿತ್ರಾರನ್ನು ನೆನೆದು ಮಗಳು ಭಾವುಕ ಪೋಸ್ಟ್

    ಎರಡು ದಿನಗಳ ಹಿಂದೆ ಹರಿಯಾಣ ಕಾಂಗ್ರೆಸ್‌ನ ಕೆಲವು ನಾಯಕರು ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು. ಈ ಸಭೆಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಒಟ್ಟಾಗಿ ಚುನಾವಣೆಗೆ ಸ್ಪರ್ಧಿಸುವ ಅಥವಾ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆಯೂ ಚರ್ಚಿಸಿದ್ದಾರೆ. ಪರಸ್ಪರ ಚರ್ಚೆಯ ನಂತರ ಈ ವಿಷಯದ ಬಗ್ಗೆ ಅಂತಿಮ ಅಭಿಪ್ರಾಯ ನೀಡುವಂತೆ ರಾಹುಲ್ ಗಾಂಧಿ ನಾಯಕರನ್ನು ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಎಲ್ಲ ಉನ್ನತ ನಾಯಕರ ಜತೆ ಮಾತುಕತೆ ನಡೆಸಿದ ಬಳಿಕವಷ್ಟೇ ಕೆ.ಸಿ.ವೇಣುಗೋಪಾಲ್ ಹಾಗೂ ದೀಪಕ್ ಬಬಾರಿಯಾ ಮೈತ್ರಿಗೆ ಸೂತ್ರ ರೂಪಿಸುವಂತೆ ಹೇಳಲಾಗಿದೆ.

    ಮಾಹಿತಿಯ ಪ್ರಕಾರ, ಆಮ್ ಆದ್ಮಿ ಪಕ್ಷವು ಹತ್ತು ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬೇಡಿಕೆಯನ್ನು ಕಾಂಗ್ರೆಸ್ ನಾಯಕತ್ವದ ಮುಂದೆ ಇರಿಸಿದೆ. ಐದರಿಂದ ಏಳು ಸೀಟು ನೀಡಲು ಕಾಂಗ್ರೆಸ್ ಒಪ್ಪಿಗೆ ನೀಡಬಹುದು ಎಂಬ ಮಾತು ಕೇಳಿಬರುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಎರಡು ಪಕ್ಷಗಳು ಸಮನ್ವಯ ಸಾಧಿಸುವ ಅನಿವಾರ್ಯತೆ ಎದುರಾಗಬಹುದು ಎನ್ನಲಾಗಿದೆ. ಇದನ್ನೂ ಓದಿ: 3,991 ಪುಟ, 231 ಸಾಕ್ಷಿ, 5 ವ್ಯಾಲ್ಯೂಂ – ದರ್ಶನ್ & ಗ್ಯಾಂಗ್ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಏನಿದೆ?

     

  • ವಕ್ಫ್ ಬೋರ್ಡ್ನಲ್ಲಿ ಅಕ್ರಮ – ಆಪ್ ಶಾಸಕ ಅರೆಸ್ಟ್

    ವಕ್ಫ್ ಬೋರ್ಡ್ನಲ್ಲಿ ಅಕ್ರಮ – ಆಪ್ ಶಾಸಕ ಅರೆಸ್ಟ್

    ನವದೆಹಲಿ : ದೆಹಲಿ (Dehli) ವಕ್ಫ್ ಬೋರ್ಡ್ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಸೋಮವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.

    ದೆಹಲಿಯ ಓಖ್ಲಾ ವಿಧಾನಸಭೆ ಕ್ಷೇತ್ರವನ್ನು ಅಮಾನತುಲ್ಲಾ ಖಾನ್ (AmanatullahKhan) ಪ್ರತಿನಿಧಿಸಿತ್ತಿದ್ದು, ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೇಮಕಾತಿ ಮತ್ತು ಹಣಕಾಸಿನ ಅವ್ಯವಹಾರದಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿದ್ದು, ಬಂಧನಕ್ಕೂ ಮುನ್ನ ಇಂದು ಬೆಳಗ್ಗೆ ಆರು ಗಂಟೆಗಳ ಕಾಲ ಅವರ ಮನೆಯಲ್ಲಿ ತಪಾಸಣೆ ನಡೆಸಲಾಯಿತು. ಇದನ್ನೂ ಓದಿ: ಉಡುಪಿ ಕೃಷ್ಣನ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

    ಇಡಿ ದಾಳಿ ವೇಳೆ ಮಾತನಾಡಿದ್ದ ಅಮಾನತುಲ್ಲಾ ಖಾನ್ “ನನ್ನನ್ನು ಬಂಧಿಸಲು ಇಡಿ ಜನರು ಈಗಷ್ಟೇ ನನ್ನ ಮನೆಗೆ ಬಂದಿದ್ದಾರೆ” ನನಗೆ ಮತ್ತು ಆಪ್ (APP) ನಾಯಕರಿಗೆ ಕಿರುಕುಳ ನೀಡಲು ಸರ್ವಾಧಿಕಾರಿ ಯಾವುದೇ ಕಾರಣ ಬಿಡುತ್ತಿಲ್ಲ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ಅಪರಾಧವೇ? ಈ ಸರ್ವಾಧಿಕಾರ ಎಷ್ಟು ದಿನ ಉಳಿಯುತ್ತದೆ ಎಂದು ಹೇಳಿದ್ದರು. ಬಂಧನದ ಬಳಿಕ ಮನೆಯಿಂದ ಹೊರಗೆ ಅವರನ್ನು ಕರೆದೊಯ್ದಯುವಾಗ ಮಾತನಾಡಿ “ನಾನು ನಿರಪರಾಧಿ” ಎಂದು ಹೇಳಿದರು. ಇದನ್ನೂ ಓದಿ: ಜಾತಿ ಗಣತಿ ಸೂಕ್ಷ್ಮ ವಿಚಾರ, ಚುನಾವಣಾ ಉದ್ದೇಶಕ್ಕೆ ಬಳಸಬಾರದು: ಆರ್‌ಎಸ್‌ಎಸ್

    ಅಮಾನತುಲ್ಲಾ ಖಾನ್ ಬಂಧನವನ್ನು ರಾಜ್ಯಸಭೆ ಸಂಸದ ಸಂಜಯ್ ಸಿಂಗ್ ವಿರೋಧಿಸಿದ್ದಾರೆ. ಬಿಜೆಪಿಯು (BJP) ರಾಜಕೀಯ ದ್ವೇಷದ ಕಾರಣದಿಂದಾಗಿ ಖಾನ್ ಅವರನ್ನು ಬಂಧಿಸಿದೆ. ಅಮಾನತುಲ್ಲಾ ವಿರುದ್ಧ ಯಾವುದೇ ಪುರಾವೆಗಳಿಲ್ಲ ಆದರೆ ಮೋದಿಯವರ (Narendra Modi) ಸರ್ವಾಧಿಕಾರ ಮತ್ತು ಇಡಿ ಗೂಂಡಾಗಿರಿ ಎರಡೂ ಮುಂದುವರೆದಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವಕ್ಫ್ ಬೋರ್ಡ್ನಲ್ಲಿ ಅಕ್ರಮ – ಆಪ್ ಶಾಸಕ ಅರೆಸ್ಟ್

    ಇತ್ತೀಚೆಗಷ್ಟೇ ಮದ್ಯ ನೀತಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದು, ಇಡಿಗೆ ಇದೊಂದೇ ಕೆಲಸ, ಬಿಜೆಪಿ ವಿರುದ್ಧ ಎದ್ದ ಪ್ರತಿ ದನಿಯನ್ನೂ ದಮನ ಮಾಡುವುದು, ಬಂಧಿಸಿ ಜೈಲಿಗೆ ಹಾಕುವುದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ – ಹಾರಂಗಿ ಜಲಾಶಯದಿಂದ 11,800 ಕ್ಯುಸೆಕ್ ನೀರು ಹೊರಕ್ಕೆ

    ಖಾನ್ ಮೇಲಿರುವ ಆರೋಪ ಏನು?
    2018 ಮತ್ತು 2022 ರ ನಡುವೆ ವಕ್ಫ್ ಬೋರ್ಡ್ ನೇಮಕಾತಿ ಮತ್ತು ಆಸ್ತಿಯಲ್ಲಿ ಅಕ್ರಮ ವ್ಯವಹಾರ ಮಾಡಿದ್ದಾರೆ, ಕಾನೂನುಬಾಹಿರ ವಿಧಾನಗಳ ಮೂಲಕ ಹಣಕಾಸಿನ ಲಾಭವನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಖಾನ್ ಅವರನ್ನು ಈ ಹಿಂದೆ 12 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

    ವಿಚಾರಣೆ ಬಳಿಕ ಕಾನೂನುಬಾಹಿರ ಚಟುವಟಿಕೆಗಳ ಮೂಲಕ ಖಾನ್ “ಅಪಾರದ ಆದಾಯವನ್ನು” ನಗದು ರೂಪದಲ್ಲಿ ಗಳಿಸಿದ್ದಾರೆ ಮತ್ತು ತನ್ನ ಸಹಚರರ ಹೆಸರಿನಲ್ಲಿ ಸ್ಥಿರ ಆಸ್ತಿಗಳನ್ನು ಖರೀದಿಸಲು ಹೂಡಿಕೆ ಮಾಡಿದ್ದಾರೆ ಎಂದು ಇಡಿ ಹೇಳಿತ್ತು. ಕಳೆದ ಮಾರ್ಚ್ನಲ್ಲಿ ಖಾನ್‌ಗೆ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ತನಿಖಾ ಸಂಸ್ಥೆಗಳಿಂದ ಸಮನ್ಸ್ನಿಂದ ಪದೇ ಪದೇ ತಪ್ಪಿಸಿಕೊಳ್ಳುವುದನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಕೂಡ ಬಂಧನದಿಂದ ರಕ್ಷಣೆ ನಿರಾಕರಿಸಿತ್ತು. ಇದನ್ನೂ ಓದಿ: ಗೌರಿ ಹಬ್ಬದ ದಿನ ಸಿಎಂ ಗಂಗೆ ಪೂಜೆ, ಎತ್ತಿನಹೊಳೆ ಯೋಜನೆ ನೀರು ಬಿಡುಗಡೆ: ಡಿಕೆಶಿ

  • ನನ್ನ ಬಂಧನಕ್ಕೆ ಇಡಿ ಬಂದಿದೆ – ದೆಹಲಿ ಆಪ್ ಶಾಸಕ ಕಿಡಿ

    ನನ್ನ ಬಂಧನಕ್ಕೆ ಇಡಿ ಬಂದಿದೆ – ದೆಹಲಿ ಆಪ್ ಶಾಸಕ ಕಿಡಿ

    ನವದೆಹಲಿ: ವಕ್ಫ್ ಬೋರ್ಡ್‍ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳ ತಂಡ ಆಮ್ ಆದ್ಮಿ ಪಕ್ಷದ (AAP) ಶಾಸಕ ಅಮಾನತುಲ್ಲಾ ಖಾನ್ (Amanatullah Khan) ಅವರ ಮನೆಯ ಮೇಲೆ ದಾಳಿ ನಡೆಸಿದೆ.

    ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರು ಅಕ್ರಮ ನೇಮಕಾತಿ ಮತ್ತು ಹಣಕಾಸಿನ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

    ಇಡಿ ದಾಳಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನನ್ನು ಬಂಧಿಸಲು ಇಡಿ ಅಧಿಕಾರಿಗಳು ನನ್ನ ಮನೆಗೆ ಬಂದಿದ್ದಾರೆ. ಸರ್ವಾಧಿಕಾರಿಯ ಆದೇಶದ ಮೇರೆಗೆ ಆತನ ಕೈಗೊಂಬೆ ಇಡಿ ನನ್ನ ಮನೆಗೆ ಬಂದಿದೆ. ನನಗೆ ಮತ್ತು ಆಪ್ ನಾಯಕರಿಗೆ ಕಿರುಕುಳ ನೀಡಲು ಸರ್ವಾಧಿಕಾರಿ ಯಾವುದೇ ಅವಕಾಶವನ್ನೂ ಬಿಡುತ್ತಿಲ್ಲ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ಅಪರಾಧವೇ? ಈ ಸರ್ವಾಧಿಕಾರ ಎಷ್ಟು ದಿನ ಉಳಿಯುತ್ತದೆ? ಎಂದು ಅಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಬಳಿಕ ಹಲವು ಕೈ ನಾಯಕರಿಗೆ ಪ್ರಾಸಿಕ್ಯೂಷನ್‌ ಭೀತಿ

    ಎಎಪಿ ಸಂಸದ ಸಂಜಯ್ ಸಿಂಗ್ ಅವರು ಎಕ್ಸ್‌ನಲ್ಲಿ ಜೆಪಿಯ ರಾಜಕೀಯ ದ್ವೇಷದ ಕಾರಣದಿಂದಾಗಿ ಖಾನ್ ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಖಾನ್ ಮನೆಯ ಬಳಿ ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳ ತುಕುಡಿಯನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ದಾಖಲೆಗಳು ಸೇರಿದಂತೆ ಮನೆಯ ಎಲ್ಲೆಡೆ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಪರಾಧಿಗಳು ನಿರ್ಭೀತಿಯಿಂದ ಓಡಾಟ, ಸಂತ್ರಸ್ತರ ಪರದಾಟ: ದ್ರೌಪದಿ ಮುರ್ಮು ಕಳವಳ

  • ವೈದ್ಯೆ ಜೊತೆ ಅನುಚಿತ ವರ್ತನೆ – ವಿವಾದಿತ ಆಪ್ ಶಾಸಕಿ ರಾಖಿ ಬಿರ್ಲಾ ತಂದೆ ವಿರುದ್ಧ ಎಫ್‍ಐಆರ್

    ವೈದ್ಯೆ ಜೊತೆ ಅನುಚಿತ ವರ್ತನೆ – ವಿವಾದಿತ ಆಪ್ ಶಾಸಕಿ ರಾಖಿ ಬಿರ್ಲಾ ತಂದೆ ವಿರುದ್ಧ ಎಫ್‍ಐಆರ್

    ನವದೆಹಲಿ: ವೈದ್ಯೆಯೊಬ್ಬರ (Woman Doctor) ಜೊತೆ ಅನುಚಿತವಾಗಿ ವರ್ತಿಸಿದ ಆಪ್ (AAP) ಶಾಸಕಿ ರಾಖಿ ಬಿರ್ಲಾ (Rakhi Birla) ಅವರ ತಂದೆ ಭೂಪೇಂದ್ರ ಸಿಂಗ್ ಬಿದ್ಲಾನ್ (72) ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಯ ಮಹಿಳಾ ವೈದ್ಯರೊಬ್ಬರು ಶಾಸಕರ ತಂದೆ ವಿರುದ್ಧ ದೂರು ದಾಖಲಿಸಿದ್ದಾರೆ.

    ಬುಧವಾರ ಬಿರ್ಲಾ ಅವರ ತಂದೆ ಸಂಜಯ್ ಗಾಂಧಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಅವರು ಮಹಿಳಾ ವೈದ್ಯರೊಂದಿಗೆ ಜಗಳವಾಡಿದ್ದಾರೆ. ಈ ಬಗ್ಗೆ ಎಫ್‍ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಸ್ಪತ್ರೆಯಲ್ಲಿ ನಡೆದ ಅಹಿತಕರ ಘಟನೆಯ ನಂತರ ರಾಖಿ ಬಿರ್ಲಾ ಮತ್ತು ವೈದ್ಯರನ್ನು ಖುದ್ದಾಗಿ ಭೇಟಿ ಮಾಡಿ ಸಭೆ ನಡೆಸಿದರು.

    ವೈದ್ಯಾಧಿಕಾರಿಗಳ ರಕ್ಷಣೆಗಾಗಿ ಕಠಿಣ ಕಾನೂನಿಗಾಗಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವ ಈ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ.

  • 530 ದಿನಗಳ ಬಳಿಕ ಜೈಲಿನಿಂದ ಹೊರಬಂದ AAP ನಾಯಕ ಮನೀಶ್‌ ಸಿಸೋಡಿಯಾ

    530 ದಿನಗಳ ಬಳಿಕ ಜೈಲಿನಿಂದ ಹೊರಬಂದ AAP ನಾಯಕ ಮನೀಶ್‌ ಸಿಸೋಡಿಯಾ

    ನವದೆಹಲಿ: 530 ದಿನಗಳ ಬಳಿಕ ಎಎಪಿ (AAP) ನಾಯಕ ಮನೀಶ್‌ ಸಿಸೋಡಿಯಾ (Manish Sisodia) ಶುಕ್ರವಾರ ಸಂಜೆ ದೆಹಲಿಯ ತಿಹಾರ್‌ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

    ಹೊಸ ಮದ್ಯ ನೀತಿ ಹಗರಣದ ಆರೋಪ ಎದುರಿಸುತ್ತಿದ್ದ ಮಾಜಿ ಡಿಸಿಎಂಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿತು. ಜೈಲಿನಿಂದ ಹೊರಬಂದ ಸಿಸೋಡಿಯಾರನ್ನು ಎಎಪಿ ಬೆಂಬಲಿಗರು ಸಂಭ್ರಮದಿಂದ ಬರಮಾಡಿಕೊಂಡರು.‌ ಇದನ್ನೂ ಓದಿ: ಜಾಮೀನು ನಿರಾಕರಿಸುವ ಮೂಲಕ ಕೆಳ ಹಂತದ ನ್ಯಾಯಲಯಗಳು ಸುರಕ್ಷಿತ ಆಟವಾಡುತ್ತಿವೆ: ಸುಪ್ರೀಂ ಆಕ್ರೋಶ

    ನಿಮ್ಮ ಪ್ರೀತಿ, ದೇವರ ಆಶೀರ್ವಾದ ಮತ್ತು ಸತ್ಯದ ಶಕ್ತಿಯಿಂದ, ಎಲ್ಲಕ್ಕಿಂತ ಮುಖ್ಯವಾಗಿ ಬಾಬಾಸಾಹೇಬರ ಕನಸಿನಿಂದಾಗಿ ನಾನು ಜೈಲಿನಿಂದ ಹೊರಬಂದಿದ್ದೇನೆ. ಯಾವುದೇ ಸರ್ವಾಧಿಕಾರಿ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತು ಸರ್ವಾಧಿಕಾರದ ಕಾನೂನುಗಳನ್ನು ರಚಿಸಿ ವಿರೋಧ ಪಕ್ಷದ ನಾಯಕರನ್ನು ಕಂಬಿ ಹಿಂದೆ ಹಾಕಿದರೆ, ಆಗ ದೇಶದ ಸಂವಿಧಾನವು ಅವರನ್ನು ರಕ್ಷಿಸುತ್ತದೆ ಎಂದು ಸಿಸೋಡಿಯಾ ಭರವಸೆ ವ್ಯಕ್ತಪಡಿಸಿದ್ದಾರೆ.

    ಸಂವಿಧಾನದ ಈ ಶಕ್ತಿಯೊಂದಿಗೆ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ಹೊರಬರುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಸಿಸೋಡಿಯಾ ಅವರ ಎಂಟನೇ ಮೇಲ್ಮನವಿ ಬಳಿಕ ಜಾಮೀನು ನೀಡಲಾಯಿತು. ಈ ನಡುವೆ, ಕಳೆದ ವರ್ಷ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: Bangladesh Violence | 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್

  • ಕೇಜ್ರಿವಾಲ್ ಜೈಲಿನಲ್ಲಿ ಕಡಿಮೆ ಕ್ಯಾಲರಿ ಆಹಾರ ಸೇವಿಸುತ್ತಿದ್ದಾರೆ: ದೆಹಲಿ ಸಿಎಸ್‌ಗೆ ಲೆಫ್ಟಿನೆಂಟ್ ಗರ್ವನರ್ ವಿ.ಕೆ ಸಕ್ಸೇನಾ ಪತ್ರ

    ಕೇಜ್ರಿವಾಲ್ ಜೈಲಿನಲ್ಲಿ ಕಡಿಮೆ ಕ್ಯಾಲರಿ ಆಹಾರ ಸೇವಿಸುತ್ತಿದ್ದಾರೆ: ದೆಹಲಿ ಸಿಎಸ್‌ಗೆ ಲೆಫ್ಟಿನೆಂಟ್ ಗರ್ವನರ್ ವಿ.ಕೆ ಸಕ್ಸೇನಾ ಪತ್ರ

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಉದ್ದೇಶಪೂರ್ವಕವಾಗಿ ಜೈಲಿನಲ್ಲಿ ಕಡಿಮೆ ಕ್ಯಾಲರಿ ಇರುವ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಲೆಫ್ಟಿನೆಂಟ್ ಗರ್ವನರ್ ವಿ.ಕೆ ಸಕ್ಸೇನಾ (V.K.Saxena) ಹೇಳಿದ್ದಾರೆ.

    ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರ ಪ್ರಧಾನ ಕಾರ್ಯದರ್ಶಿ ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ಪ್ರಸ್ತಾಪಿಸಲಾಗಿದೆ. ತೂಕ ಕಳೆದುಕೊಳ್ಳಲು ಕಾರಣಗಳೇನು ಎಂದು ವಿವರಿಸಲಾಗಿದೆ. ಕಡಿಮೆ ಕ್ಯಾಲರಿಗಳ ಕಾರಣದಿಂದಾಗಿ ಕೇಜ್ರಿವಾಲ್ ಅವರು ತೂಕವನ್ನು ಕಳೆದುಕೊಳ್ಳುತ್ತಾರೆ. ಜೂನ್ 6 ರಿಂದ ಜುಲೈ 13 ರ ನಡುವೆ ಅವರು ಸರಿಯಾದ ಆಹಾರ ಸೇವಿಸಿಲ್ಲ. ಇದರಿಂದಾಗಿ ತೂಕ ಕಳೆದುಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ದೆಹಲಿ ಸಿಎಂ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು – ಆದರೂ ಇಲ್ಲ ಬಿಡುಗಡೆ ಭಾಗ್ಯ

    ಪತ್ರದಲ್ಲಿ ಜೈಲು ಅಧೀಕ್ಷಕರ ವರದಿಯನ್ನು ಉಲ್ಲೇಖಿಸಿದ್ದು, ಮುಖ್ಯಮಂತ್ರಿಗಳು ವೈದ್ಯರು ಸೂಚಿಸಿದ ಆಹಾರ ಮತ್ತು ಔಷಧಿಗಳನ್ನು ಸೇವಿಸದಿರುವ ಬಗ್ಗೆ ಎಲ್‌ಜಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಬರೆಯಲಾಗಿದೆ. ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ಕಡಿಮೆ ಕ್ಯಾಲರಿ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ವೈದ್ಯರು ನೀಡುವ ಡಯಟ್ ಚಾರ್ಟ್ ಪಾಲಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.

    ಎಲ್‌ಜಿ ಕಚೇರಿ ಬರೆದಿರುವ ಪತ್ರಕ್ಕೆ ಆಮ್ ಆದ್ಮಿ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಇದೇನು ತಮಾಷೆ ಎಲ್‌ಜಿ ಸಾಹೇಬರೇ! ಯಾರಾದರೂ ರಾತ್ರಿಯಲ್ಲಿ ಸಕ್ಕರೆಯನ್ನು ಕಡಿಮೆ ಮಾಡುತ್ತಾರೆಯೇ? ಯಾವುದು ತುಂಬಾ ಅಪಾಯಕಾರಿ. ಎಲ್ಜಿ ಸರ್, ನಿಮಗೆ ಕಾಯಿಲೆಯ ಬಗ್ಗೆ ತಿಳಿದಿಲ್ಲದಿದ್ದರೆ. ನೀವು ಅಂತಹ ಪತ್ರವನ್ನು ಬರೆಯಬಾರದು ಎಂದು ಕುಟುಕಿದ್ದಾರೆ.

    ದೆಹಲಿ ಸರ್ಕಾರದ ಸಚಿವೆ ಅತಿಶಿ ಮಾತನಾಡಿ, ಬಿಜೆಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಕ್ಕರೆ ಮಟ್ಟ ಎಂಟು ಬಾರಿ 50ಕ್ಕಿಂತ ಕಡಿಮೆಯಾಗಿದೆ. ಕೋಮಾಕ್ಕೆ ಹೋಗಬಹುದು ಅಂತಹ ಪರಿಸ್ಥಿತಿಯಲ್ಲಿ, ಮಿದುಳಿನ ಸ್ಟ್ರೋಕ್ ಅಪಾಯವೂ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ – ಅರವಿಂದ್ ಕೇಜ್ರಿವಾಲ್‍ಗೆ ಮಧ್ಯಂತರ ಜಾಮೀನು

    ಈ ಬಗ್ಗೆ ಬಿಜೆಪಿ ನಾಯಕ ವೀರೇಂದ್ರ ಸಚ್‌ದೇವ್ ಪ್ರತಿಕ್ರಿಯಿಸಿ, ತಿಹಾರ್ ಜೈಲಿನ ಅಧೀಕ್ಷಕರ ಪತ್ರ ಸಾರ್ವಜನಿಕವಾಗಿದೆ. ನ್ಯಾಯಾಲಯದ ಆದೇಶದ ನಂತರ ಅರವಿಂದ್ ಕೇಜ್ರಿವಾಲ್ ಅವರಿಗೆ ಮನೆಯಲ್ಲೇ ತಯಾರಿಸಿದ ಆಹಾರವನ್ನು ನೀಡಲಾಗುತ್ತದೆ. ಜೂನ್ 6 ಮತ್ತು ಜುಲೈ 13 ರ ನಡುವೆ ಉದ್ದೇಶಪೂರ್ವಕವಾಗಿ ಕಡಿಮೆ ಕ್ಯಾಲರಿ ಆಹಾರ ಸೇವಿಸಿದ್ದಾರೆ. ಇದರಿಂದ ಅವರ ತೂಕ ಕಡಿಮೆಯಾಗುತ್ತದೆ. ಸಹಾನುಭೂತಿಗಾಗಿ ಅವರು ಜೈಲಿನಲ್ಲಿ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  • ದೆಹಲಿಯಂತೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ

    ದೆಹಲಿಯಂತೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ

    – ವರ್ಗಾವಣೆ, ನೇಮಕಾತಿ, ಯೋಜನೆಗಳ ಜಾರಿಗೆ ಸರ್ಕಾರಕ್ಕೆ ಬೇಕು ಅನುಮತಿ

    ನವದೆಹಲಿ: ಲೆಫ್ಟಿನೆಂಟ್ ಗವರ್ನರ್‌ಗೆ (Lt Governor) ಹೆಚ್ಚಿನ ಅಧಿಕಾರವನ್ನು ನೀಡಲು ಗೃಹ ವ್ಯವಹಾರಗಳ ಸಚಿವಾಲಯ ಜಮ್ಮು ಮತ್ತು ಕಾಶ್ಮೀರ (Jammu And Kashmir) ಮರುಸಂಘಟನೆ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕೂಡ ಈಗ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ನಂತೆ ಆಡಳಿತಾತ್ಮಕ ಅಧಿಕಾರವನ್ನು ಪಡೆಯಲಿದ್ದಾರೆ.

    ಹೊಸ ತಿದ್ದುಪಡಿ ಅನ್ವಯ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಅನುಮತಿಯಿಲ್ಲದೆ ವರ್ಗಾವಣೆ, ನೇಮಕಾತಿ ಅಥವಾ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. 2019ರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಯ ಸೆಕ್ಷನ್ 55ರ ಅಡಿಯಲ್ಲಿ ತಿದ್ದುಪಡಿ ಮಾಡಿದ ನಿಯಮಗಳನ್ನು ಗೃಹ ಇಲಾಖೆ ಸೂಚಿಸಿದೆ. ಇದರಲ್ಲಿ ಎಲ್‌ಜಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಹೊಸ ವಿಭಾಗಗಳನ್ನು ಸೇರಿಸಿದೆ. ಇದನ್ನೂ ಓದಿ: ಆಟೋ ಚಕ್ರದಿಂದ ಮೈಗೆ ಚಿಮ್ಮಿದ ಕೆಸರು – ಮರಳಿ ಬರುವವರೆಗೂ ಕಾದು ಚಾಲಕನಿಗೆ ಚಾಕು ಇರಿತ

    ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ಅಲ್ಲಿ ಚುನಾವಣೆ ನಡೆದಿಲ್ಲ. ಆದರೆ ಕೇಂದ್ರ ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣೆ ನಡೆಸಬಹುದಾಗಿದ್ದು, ಅಲ್ಲಿ ಸರ್ಕಾರ ರಚನೆಯಾಗಲಿದೆ. ಸರ್ಕಾರ ರಚನೆಗೂ ಮುನ್ನ ಲೆಫ್ಟಿನೆಂಟ್ ಗವರ್ನರ್‌ಗೆ ಚುನಾಯಿತ ಸರ್ಕಾರಕ್ಕಿಂತ ಹೆಚ್ಚಿನ ಅಧಿಕಾರವನ್ನು ಕೇಂದ್ರ ಸರ್ಕಾರ ನೀಡಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಭೂಕುಸಿತ – ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಕನ್ನಡಿಗರು ಪಾರು

    ಈ ನಿಯಮದಿಂದ ದೆಹಲಿಯಲ್ಲಿ ಆಪ್ ಸರ್ಕಾರ ಮತ್ತು ಲೆಫ್ಟಿನೆಂಟ್ ಗರ್ವನರ್ ನಡುವೆ ಆಗಾಗ ಸಮರ ನಡೆಯುತ್ತಲೇ ಇರುತ್ತದೆ. ಲೆಫ್ಟಿನೆಂಟ್ ಗರ್ವನರ್ ಬದಲು ಜನರಿಂದ ಆಯ್ಕೆಯಾಗಿ ಬಂದ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು. ನೇಮಕಾತಿ, ವರ್ಗಾವಣೆ ಮತ್ತು ಯೋಜನೆಗಳ ಜಾರಿ ವಿಚಾರದಲ್ಲಿ ವಿಧಾನಸಭೆಗೆ ಹೆಚ್ಚು ಮಾನ್ಯತೆ ನೀಡಬೇಕು ಎಂದು ಈಗಾಗಲೇ ಆಪ್ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುತ್ತಿದೆ. ಇದನ್ನೂ ಓದಿ: 6 ತಿಂಗಳ ಹಿಂದೆ ಮೃತಪಟ್ಟಿದ್ದ ಅಧಿಕಾರಿಗೆ ವರ್ಗಾವಣೆ – ಪೌರಾಡಳಿತ ಇಲಾಖೆ ಯಡವಟ್ಟು

  • ದೆಹಲಿ ಸಿಎಂ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು – ಆದರೂ ಇಲ್ಲ ಬಿಡುಗಡೆ ಭಾಗ್ಯ

    ದೆಹಲಿ ಸಿಎಂ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು – ಆದರೂ ಇಲ್ಲ ಬಿಡುಗಡೆ ಭಾಗ್ಯ

    ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ (Delhi Liquor Policy Case) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇಡಿ ದಾಖಲಿಸಿದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ದೊರಕಿದ್ದು, ಸಿಬಿಐ ಪ್ರಕರಣ ಬಾಕಿ ಇರುವ ಹಿನ್ನೆಲೆ ಕೇಜ್ರಿವಾಲ್‌ಗೆ ಸದ್ಯ ಬಿಡುಗಡೆ ಭಾಗ್ಯವಿಲ್ಲ.

    ಇಡಿ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಶುಕ್ರವಾರ ಆದೇಶ ನೀಡಿತು. ಮಧ್ಯಂತರ ಜಾಮೀನು ನೀಡಿದ ಪೀಠ, ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯಲ್ಲಿ ಪಿಎಂಎಲ್‌ಎ ಸೆಕ್ಷನ್ 19 ರ ಅಡಿಯಲ್ಲಿ ‘ಬಂಧನದ ಅಗತ್ಯತೆ’ ಕುರಿತ ಕಾನೂನು ಪ್ರಶ್ನೆಯನ್ನು ಎತ್ತಿರುವ ಹಿನ್ನೆಲೆ ಇದನ್ನು ವಿಸ್ತೃತ ಪೀಠವು ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು. ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ – ಅರವಿಂದ್ ಕೇಜ್ರಿವಾಲ್‍ಗೆ ಮಧ್ಯಂತರ ಜಾಮೀನು

    ಬಂಧನ ಪ್ರಶ್ನಿಸಿರುವುದು ಜೀವನದ ಹಕ್ಕಿಗೆ ಸಂಬಂಧಿಸಿದೆ. ಇದನ್ನು ನಾವು ದೊಡ್ಡ ಪೀಠಕ್ಕೆ ವರ್ಗಾಯಿಸುತ್ತೇವೆ. ಮಧ್ಯಂತರ ಜಾಮೀನಿನ ಮೇಲೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತು.

    2021-22ರ ದೆಹಲಿ ಅಬಕಾರಿ ನೀತಿಯಲ್ಲಿ ಲೋಪದೋಷಗಳನ್ನು ಸೃಷ್ಟಿಸಲು ಮನೀಶ್ ಸಿಸೋಡಿಯಾ ಮತ್ತು ಇತರರು ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿತ್ತು. ಇದಕ್ಕಾಗಿ ನೂರು ಕೋಟಿ ಕಿಕ್ ಬ್ಯಾಕ್ ಪಡೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಆರೋಪಿಸಿತ್ತು. ಇದನ್ನೂ ಓದಿ: ನೇಪಾಳದ ಹೆದ್ದಾರಿಯಲ್ಲಿ ಭೂಕುಸಿತ – ಬಸ್‍ಗಳಲ್ಲಿದ್ದ 6 ಮಂದಿ ಭಾರತೀಯರು ಸೇರಿ 65 ಪ್ರಯಾಣಿಕರು ಕಣ್ಮರೆ

    ಕೇಜ್ರಿವಾಲ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೇಜ್ರಿವಾಲ್ ಅವರ ಬಂಧನವನ್ನು ಸಮರ್ಥಿಸಲು ಇಡಿ ಈಗ ಉಲ್ಲೇಖಿಸಿರುವ ಮಾಹಿತಿ ಅವರ ಬಂಧನದ ಸಮಯದಲ್ಲಿ ಇರಲಿಲ್ಲ ಮತ್ತು ನಂತರ ಹಾಜರುಪಡಿಸಲಾಗಿದೆ ಎಂದು ವಾದಿಸಿದರು. ಇಡಿ ಪರ ವಾದಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು, ಬಂಧನದ ಸಮಯದಲ್ಲಿ ಆರೋಪಿಯ ವಿರುದ್ಧ ಇಡಿ ಹೊಂದಿರುವ ದೋಷಾರೋಪಣೆ ವಸ್ತುಗಳನ್ನು ಪೂರೈಸುವ ಅಗತ್ಯವಿಲ್ಲ ಎಂದಿದ್ದರು‌.

  • ಉಪವಾಸ ಸತ್ಯಾಗ್ರಹದ ವೇಳೆ ಹದಗೆಟ್ಟ ಆರೋಗ್ಯ – ಆಪ್‌ ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲು

    ಉಪವಾಸ ಸತ್ಯಾಗ್ರಹದ ವೇಳೆ ಹದಗೆಟ್ಟ ಆರೋಗ್ಯ – ಆಪ್‌ ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲು

    ನವದೆಹಲಿ: ಸಮರ್ಪಕ ನೀರಿನ ಪೂರೈಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿಗೆ ಉಪವಾಸ ಸತ್ಯಾಗ್ರಹ (Hunger Strike0 ಆರಂಭಿಸಿರುವ ಸಚಿವೆ ಅತಿಶಿ (Minister Atishi) ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಮಂಗಳವಾರ ನಸುಕಿನ ಜಾವ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಂದು (ಮಂಗಳವಾರ) ಮುಂಜಾನೆ ಅತಿಶಿ ಅವರನ್ನು ರಾಷ್ಟ್ರ ರಾಜಧಾನಿಯ ಲೋಕನಾಯಕ ಜೈ ಪ್ರಕಾಶ್ (LNJP) ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿಶಿ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಂಗಳವಾರ 5ನೇ ದಿನಕ್ಕೆ ಕಾಲಿಟ್ಟಿದೆ. ಹರಿಯಾಣ ದೆಹಲಿಯ ಪಾಲಿನ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

    ವೈದರ ಸಲಹೆ ತಿರಸ್ಕಾರ:
    ಉಪವಾಸ ಸತ್ಯಾಗ್ರಹ ಹಿನ್ನೆಲೆಯಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದರು. ಆದರೂ ವೈದ್ಯರ ಸಲಹೆ ತಿರಸ್ಕರಿಸಿದ ಸಚಿವೆ ಅತಿಶಿ ಆರೋಗ್ಯ (Health) ಹದಗೆಟ್ಟಿದ್ದರೂ, ಹರಿಯಾಣವು (Haryana) ದೆಹಲಿಯ ನ್ಯಾಯಯುತವಾದ ನೀರನ್ನು (Delhi Water Crisis) ಬಿಡುಗಡೆ ಮಾಡುವವರೆಗೆ ಅನಿರ್ದಿಷ್ಟ ಉಪವಾಸ ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದರು. ನನ್ನ ದೇಹವು ಎಷ್ಟೇ ನರಳಿದರೂ ಹರಿಯಾಣ ನೀರು ಬಿಡುವವರೆಗೆ ನಾನು ಉಪವಾಸ ಮುಂದುವರಿಸುತ್ತೇನೆ ಎಂದು ಅತಿಶಿ ಕಳೆದ ಒಂದು ದಿನದ ಹಿಂದೆಯಷ್ಟೇ ಕೂಗಿ ಹೇಳಿದ್ದರು.

    ಈ ನಡುವೆ ದೆಹಲಿ ಕ್ಯಾಬಿನೆಟ್ ಮಂತ್ರಿಗಳು ಜಂಗ್ಪುರದ ಉಪವಾಸ ಸತ್ಯಾಗ್ರಹ ಸ್ಥಳದಲ್ಲಿ ಸಭೆ ನಡೆಸಿದ್ದರು ಮತ್ತು ಪರಿಹಾರ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ನಿರ್ಧರಿಸಿದ್ದರು. ಎಎಪಿ ಅತಿಶಿ ಅವರ ಉಪವಾಸ ಬೆಂಬಲಿಸಿ ಕ್ಯಾಂಡಲ್‌ಲೈಟ್ ಮೆರವಣಿಗೆ ಮಾಡಲು ಘೋಷಿಸಲಾಗಿದೆ.

    ಬೇಡಿಕೆಯೇನು?
    ರಾಷ್ಟ್ರ ರಾಜಧಾನಿಗೆ ಸಮರ್ಪಕ ನೀರಿನ ಪೂರೈಸುವಂತೆ ಆಗ್ರಹಿಸಿ ಇದೇ ತಿಂಗಳ ಜೂನ್‌ 22ರಂದು ಸಚಿವೆ ಅತಿಶಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ದೆಹಲಿಗೆ ಒಟ್ಟು 1005 MGD ನೀರಿನ ಅಗತ್ಯವಿದೆ, ಅದರಲ್ಲಿ 613 MGD ಹರಿಯಾಣದ ಮೂಲವಾಗಿದೆ. ಕಳೆದ ಕೆಲ ವಾರಗಳಲ್ಲಿ ಈ ಮಟ್ಟದ ನೀರಿನ ಪೂರೈಕೆಯು ಗಣನೀಯವಾಗಿ ಕಡಿಮೆಯಾಗಿದೆ. ಕೇವಲ 513 MGD ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದು MGD ನೀರು 28,500 ಜನರ ಬಳಕೆಗೆ ಬರಲಿದೆ. ಹರಿಯಾಣ 100 MGD ಕಡಿಮೆ ನೀರನ್ನು ನೀಡಿದರೆ 28 ಲಕ್ಷಕ್ಕೂ ಹೆಚ್ಚು ಜನರಿಗೆ ದಿನದ ನೀರಿನ ಕೊರತೆಯಾಗಲಿದೆ ಹಾಗಾಗಿ ಸಮರ್ಪಕವಾಗಿ ನೀರು ಪೂರೈಕೆ ಆಗಬೇಕು ಎಂಬುದು ಅವರ ಆಗ್ರಹವಾಗಿದೆ.

    ಕಳೆದ ಶುಕ್ರವಾರವೂ ಸಹ ಹರಿಯಾಣವು ದೆಹಲಿಗೆ 110 ಎಂಜಿಡಿ ಕಡಿಮೆ ನೀರನ್ನು ಕಳುಹಿಸಿದೆ, ನಾನು ದೆಹಲಿಯ ನೀರಿನ ಸರಿಯಾದ ಪಾಲನ್ನು ಪಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ. ಆದರೆ ಹರಿಯಾಣದ ಬಿಜೆಪಿ ಸರ್ಕಾರವು ದೆಹಲಿಯ ಜನರನ್ನು ನಿರ್ಲಕ್ಷಿಸಿದೆ. ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು ನನಗೆ ಬೇರೆ ದಾರಿಯೇ ಇಲ್ಲ ಎಂದು ಅತಿಶಿ ಹೇಳಿದ್ದರು.