Tag: aap

  • ಭಾರತ-ಪಾಕ್‌ ಪಂದ್ಯ ಬಾಯ್ಕಾಟ್‌ಗೆ ಕರೆ – ಪಾಕ್‌ ಜೆರ್ಸಿ ಇರುವ ಪ್ರತಿಕೃತಿ ದಹಿಸಿ ಎಎಪಿ ಪ್ರತಿಭಟನೆ

    ಭಾರತ-ಪಾಕ್‌ ಪಂದ್ಯ ಬಾಯ್ಕಾಟ್‌ಗೆ ಕರೆ – ಪಾಕ್‌ ಜೆರ್ಸಿ ಇರುವ ಪ್ರತಿಕೃತಿ ದಹಿಸಿ ಎಎಪಿ ಪ್ರತಿಭಟನೆ

    ನವದೆಹಲಿ: ಏಷ್ಯಾ ಕಪ್‌ನಲ್ಲಿ ನಾಳೆ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಪ್ರತಿಭಟನೆಗಳು ರಾಜಕೀಯ ತಿರುವು ಪಡೆದುಕೊಂಡಿವೆ.

    ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಉಭಯ ದೇಶಗಳ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಘಟನೆಯಾದ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ದಾಳಿಯಲ್ಲಿ ಮೃತಪಟ್ಟ ತಮ್ಮ ಪುತ್ರರ ಬಗ್ಗೆ ಕುಟುಂಬಗಳು ಇನ್ನೂ ಶೋಕದಲ್ಲಿದ್ದಾವೆ. ಹಲವಾರು ರಾಜಕೀಯ ನಾಯಕರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಿ ಕ್ರಿಕೆಟಿಗರೊಂದಿಗೆ ಆಟವಾಡುವುದು ತಪ್ಪು ಎಂದು ಹೇಳಿದ್ದಾರೆ. ಈ ಹೊತ್ತಲ್ಲಿ ಏಷ್ಯಾ ಕಪ್‌ನಲ್ಲಿ ಎರಡೂ ತಂಡಗಳು ಆಡಲು ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.‌ ಇದನ್ನೂ ಓದಿ: ಭಾರತ ತಂಡವನ್ನೂ ಸೋಲಿಸುವಷ್ಟು ಸಮರ್ಥರಿದ್ದೇವೆ – ಪಂದ್ಯಕ್ಕೂ ಮುನ್ನ ಪಾಕ್‌ ಕ್ಯಾಪ್ಟನ್‌ ವಾರ್ನಿಂಗ್‌

    ಭಾರತ-ಪಾಕ್‌ ಆಟಕ್ಕೆ ವಿರೋಧ ವ್ಯಕ್ತವಾಗಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ. ರಾಜಕೀಯ ನಾಯಕರು ಮತ್ತೊಮ್ಮೆ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ಒತ್ತಾಯಿಸಿದ್ದಾರೆ. ಟೀಕೆಗಳು ಹೆಚ್ಚಾಗಿ ವಿರೋಧ ಪಕ್ಷಗಳಿಂದಲೇ ಕೇಳಿಬರುತ್ತಿವೆ. ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಪಂದ್ಯವನ್ನು ವಿರೋಧಿಸಿವೆ.

    ಎಎಪಿ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಕಚೇರಿಯ ಹೊರಗೆ ಪಾಕಿಸ್ತಾನ ಲೇಬಲ್ ಹೊಂದಿರುವ ಪ್ರತಿಕೃತಿಯನ್ನು ದಹಿಸಿದ್ದಾರೆ. ಮಾಜಿ ಸಚಿವ ಸೌರಭ್ ಭಾರದ್ವಾಜ್ ಪಂದ್ಯದ ನೇರ ಪ್ರಸಾರ ಮಾಡುವ ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಬಹಿಷ್ಕರಿಸುವಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ. ‘ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸುವ ಇಂತಹ ಅಸಹ್ಯಕರ ಜನರೊಂದಿಗೆ ಭಾರತ ಸರ್ಕಾರ ಕ್ರಿಕೆಟಿಗರನ್ನು ಆಡುವಂತೆ ಮಾಡುತ್ತಿದೆ. ಭಾರತ-ಪಾಕಿಸ್ತಾನ ಪಂದ್ಯಗಳನ್ನು ಪ್ರಸಾರ ಮಾಡುವ ದೆಹಲಿಯಲ್ಲಿರುವ ಎಲ್ಲಾ ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ನಾವು ಬಹಿರಂಗಪಡಿಸುತ್ತೇವೆ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇದು ಮ್ಯಾಚ್‌ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

    ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದ ಬಗ್ಗೆ ಪ್ರಧಾನಿಯವರ ‘ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ನೆನಪಿಸಿಕೊಂಡು ಟ್ವೀಟ್‌ ಮಾಡಿದ್ದಾರೆ. ‘ರಕ್ತ ಮತ್ತು ಕ್ರಿಕೆಟ್’ ಹೇಗೆ ಒಟ್ಟಿಗೆ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ. ‘ಯುದ್ಧ ಮತ್ತು ಕ್ರಿಕೆಟ್ ಒಂದೇ ಸಮಯದಲ್ಲಿ ಹೇಗೆ ಇರಲು ಸಾಧ್ಯ? ಅವರು ದೇಶಭಕ್ತಿಯ ವ್ಯವಹಾರವನ್ನು ಮಾಡಿದ್ದಾರೆ. ಅವರಿಗೆ ಕೇವಲ ಹಣ ಬೇಕು’ ಎಂದು ಠಾಕ್ರೆ ಟೀಕಿಸಿದ್ದಾರೆ.

    ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ತಮ್ಮ ಗಂಡಂದಿರನ್ನು ಕಳೆದುಕೊಂಡ ಸಹೋದರಿಯರನ್ನು ನೋಡಿಕೊಳ್ಳದೆ ಕೆಲ ಜನರು ಹಣ ಸಂಪಾದಿಸುವುದರಲ್ಲಿ ನಿರತರಾಗಿದ್ದಾರೆ. ಇದು ವ್ಯವಹಾರ. ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಉತ್ಸಾಹವಿದೆ. ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ನಮ್ಮ ಸಹೋದರಿಯರ ಸಿಂಧೂರ ಅಳಿಸಿದ್ದಾರೆಂದು ಅವರು ಬೇಸರಗೊಂಡಿಲ್ಲ. ಈ ಜನರು ಕ್ರಿಕೆಟ್ ಹೆಸರಿನಲ್ಲಿ ಹಣ ಸಂಪಾದಿಸುವಲ್ಲಿ ನಿರತರಾಗಿದ್ದಾರೆ. ನಮ್ಮ ಸಹೋದರಿಯರ ಕುಟುಂಬಗಳು ನಾಶವಾದವು. ಆದರೆ, ಇವರು ಪಾಕಿಸ್ತಾನಿಗಳೊಂದಿಗೆ ಕ್ರಿಕೆಟ್ ಆಡಲು ಹೊರಟಿದ್ದಾರೆ. ಸರ್ಕಾರ ನಾಚಿಕೆಪಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

  • ಇಂಡಿಯಾ ಒಕ್ಕೂಟದಿಂದ ಹೊರಬಂದ ಆಪ್‌ – ಎಎಪಿ ನಾಯಕ ಸಂಜಯ್‌ ಸಿಂಗ್‌ ಹೇಳಿಕೆ

    ಇಂಡಿಯಾ ಒಕ್ಕೂಟದಿಂದ ಹೊರಬಂದ ಆಪ್‌ – ಎಎಪಿ ನಾಯಕ ಸಂಜಯ್‌ ಸಿಂಗ್‌ ಹೇಳಿಕೆ

    ನವದೆಹಲಿ: ಇಂಡಿಯಾ ಒಕ್ಕೂಟದಿಂದ ಆಮ್‌ ಆದ್ಮಿ ಪಕ್ಷ (Aam Admi Party) ಹೊರ ಬಂದಿದೆ ಎಂದು ಎಎಪಿ ನಾಯಕ ಸಂಜಯ್‌ ಸಿಂಗ್‌ (Sanjay Singh) ತಿಳಿಸಿದ್ದಾರೆ.

    ಆಪ್ ಇಂಡಿಯಾ ಒಕ್ಕೂಟದ ಭಾಗವಾಗಿಲ್ಲ. ಇದನ್ನು ನಮ್ಮ ನಾಯಕ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ ಎಂದು ಒಕ್ಕೂಟದಿಂದ ಎಎಪಿ ಹೊರ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರ ಬಂಧನ

    ಈ ಹಿಂದೆ 2024 ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಭಾರತ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿವೆ. ಆದರೆ, ಹರಿಯಾಣ ಮತ್ತು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದವು.

    ಇಂದು ಮುಂಗಾರು ಅಧಿವೇಶನ ಹಿನ್ನೆಲೆ ಸಂಜೆ ಏಳು ಗಂಟೆಗೆ ಇಂಡಿಯಾ ಒಕ್ಕೂಟದ (INDIA Bloc) ಸಭೆ ಕರೆಯಲಾಗಿತ್ತು. ಸಭೆಗೂ ಮುನ್ನ ಇಂಡಿಯಾ ಒಕ್ಕೂಟಕ್ಕೆ ಆಪ್‌ ಶಾಕ್‌ ಕೊಟ್ಟಿದೆ. ಇದನ್ನೂ ಓದಿ: ದೆಹಲಿಯ 50, ಬೆಂಗ್ಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

  • ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು

    ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು

    – ಹಿಂದೂಗಳಿಂದಲೇ ಹೆಚ್ಚು ಮತ ಪಡೆದಿದ್ದೇವೆ: ಟಿಎಂಸಿ ಅಭ್ಯರ್ಥಿ ಆಲಿಫಾ ಅಹ್ಮದ್‌
    – ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಕಚ್ಛಾ ಬಾಂಬ್ ಸ್ಫೋಟ; 9ರ ಬಾಲಕಿ ಸಾವು

    ನವದೆಹಲಿ: ದೇಶದ 5 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ (Bypoll) 2 ಆಪ್, ಬಿಜೆಪಿ, ಕಾಂಗ್ರೆಸ್, ಟಿಎಂಸಿ (TMC) ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆದ್ದುಕೊಂಡಿವೆ.

    ದೆಹಲಿಯ (Delhi) ಸೋಲಿನ ನಂತರ ತನ್ನ ರಾಜಕೀಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಎದುರಿಸುತ್ತಿದ್ದ ಎಎಪಿ ಪಂಜಾಬ್‌ನ ಲೂಧಿಯಾನ ಪಶ್ಚಿಮ ಮತ್ತು ಗುಜರಾತ್‌ನ ವಿಸಾವದರ್ ಕ್ಷೇತ್ರಗಳಲ್ಲಿ ಜಯಿಸಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಕೇರಳದ ವಯನಾಡು ಜಿಲ್ಲೆಯ ನಿಲಂಬೂರ್‌ನಲ್ಲಿ ನಿರ್ಣಾಯಕ ಗೆಲುವು ಸಾಧಿಸಿದ್ದರೆ, ಎಲ್ಲಾ 5 ಕಡೆ ಸ್ಪರ್ಧಿಸಿದ್ದರೂ ಬಿಜೆಪಿ ಗುಜರಾತ್‌ನ ಕಾಡಿಯಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇದನ್ನೂ ಓದಿ: Israel-Iran tensions: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

    ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದ (West Bengal) ಕಾಲಿಗಂಜ್ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ತೃಣಮೂಲ ಕಾಂಗ್ರೆಸ್ ಸಫಲವಾಗಿದೆ. ಇದನ್ನೂ ಓದಿ: 16ನೇ ಜನಗಣತಿ – 2027ರಲ್ಲಿ ನಡೆಯಲಿರುವ ಈ ಗಣತಿಯಲ್ಲಿ ಹೊಸದೇನು?

    ಗುಜರಾತ್‌ನಲ್ಲಿ ಬಿಜೆಪಿ, ಎಎಪಿಗೆ ತಲಾ ಒಂದು ಕ್ಷೇತ್ರ
    ಗುಜರಾತ್‌ನ 2 ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಎಎಪಿ, ಬಿಜೆಪಿ ತಲಾ ಒಂದೊಂದು ಕ್ಷೇತ್ರ ಗೆದ್ದುಕೊಂಡಿವೆ. ವಿಸಾವದರ ಕ್ಷೇತ್ರದಿಂದ ಎಎಪಿ ನಾಯಕ ಗೋಪಾಲ್‌ ಇಟಾಲಿಯಾ ಗೆಲುವು ಸಾಧಿಸಿದ್ರೆ, ಕಾಡಿ ಕ್ಷೇತ್ರದಲ್ಲಿ ಬಿಜೆಪಿ ರಾಜೇಂದ್ರ ಛಾವಡ ಜಯ ಕಂಡಿದ್ದಾರೆ.

    ಇಟಾಲಿಯಾ ಅವರು ಎಎಪಿ ಗುಜರಾತ್ ಘಟಕದ ಮಾಜಿ ಅಧ್ಯಕ್ಷರಾಗಿದ್ದಾರೆ. ಇವರು, ಪ್ರತಿಸ್ಪರ್ಧಿ ಬಿಜೆಪಿಯ ಕಿರಿಟ್ ಪಟೇಲ್ ಎದುರು 17,554 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಟಾಲಿಯಾ 75,942 ಮತಗಳನ್ನು ಹಾಗೂ ಪಟೇಲ್ ಅವರು 58,388 ಮತಗಳನ್ನು ಪಡೆದುಕೊಂಡಿದ್ದರು. 21 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ನೀನು ಚಪ್ಪಲಿ ಹೊಲಿಯಲು ಯೋಗ್ಯ: ನಿಂದಿಸಿದ್ದ ಮೂವರು ಇಂಡಿಗೋ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್‌

    ಎಸ್‌ಸಿ ಮೀಸಲು ಕ್ಷೇತ್ರ ಕಾಡಿಯಲ್ಲಿ ಬಿಜೆಪಿಯ ಅಭ್ಯರ್ಥಿ ರಾಜೇಂದ್ರ ಛಾವಡ ಅವರು ಎದುರಾಳಿಯಾಗಿದ್ದ ಕಾಂಗ್ರೆಸ್‌ನ ರಮೇಶ್ ಛಾವಡ ಅವರ ವಿರುದ್ಧ 39,452 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. 22 ಸುತ್ತುಗಳ ಮತ ಎಣಿಕೆಯಲ್ಲಿ ರಾಜೇಂದ್ರ ಅವರು 99,742 ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದರಾಗಿದ್ದ ರಮೇಶ್ ಅವರು 60,290 ಮತಗಳನ್ನು ಪಡೆದಿದ್ದಾರೆ. ಜೂನ್ 19ರಂದು ನಡೆದ ಉಪಚುನಾವಣೆಯಲ್ಲಿ ಕಾಡಿ ಕ್ಷೇತ್ರದಲ್ಲಿ ಶೇ.57.90 ಹಾಗೂ ವಿಸಾವದಾರ ಕ್ಷೇತ್ರದಲ್ಲಿ ಶೇ 56.89 ಮತದಾನವಾಗಿತ್ತು.

    ಬಂಗಾಳದಲ್ಲಿ ಟಿಎಂಸಿ ಪ್ರಾಬಲ್ಯ
    ಪಶ್ಚಿಮ ಬಂಗಾಳ ಕಾಲಿಗಂಜ್‌ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಆಲಿಫಾ ಅಹ್ಮದ್‌ ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಆಶಿಶ್ ಫೋಷ್ ಅವರ ವಿರುದ್ಧ ಅಲಿಫಾ ಅವರು 50,049 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಅಲಿಫಾ ಅವರು ಒಟ್ಟು 1,02,759 ಮತಗಳನ್ನು ಪಡೆದಿದ್ದು, ಫೋಷ್ ಅವರು 52,710 ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು

    ಎಡಪಂಥೀಯ ಬೆಂಬಲಿಗ ಕಾಂಗ್ರೆಸ್‌ನ ಕಾಬಿಲ್ ಉದ್ದೀನ್ ಶೇಖ್ 28,348 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಬಳಿಕ ಪ್ರತಿಕ್ರಿಯಿಸಿರುವ ಅಲಿಫಾ ಹಿಂದೂಗಳು ನಮಗೆ ಮತ ಹಾಕಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಹಿಂದೂಗಳಿದ್ದ ಪ್ರದೇಶದಲ್ಲಿಯೂ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಯಾವುದೇ ಒಂದು ಸಮುದಾಯದ ಮತಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ, ಎಲ್ಲರ ಬಳಿಯೂ ಮತಯಾಚಿಸಿದ್ದೇವೆ. ಬಂಗಾಳದಲ್ಲಿ ಕೋಮು ವಿಭಜನೆ ಮಾಡುವ ಉದ್ದೇಶವನ್ನು ನಮ್ಮ ಪಕ್ಷ ಹೊಂದಿಲ್ಲ ಎನ್ನುವುದನ್ನು ಫಲಿತಾಂಶ ಸಾಬೀತುಪಡಿಸಿದೆ ಎಂದಿದ್ದಾರೆ.

    ಈ ಮಧ್ಯೆ ಮತ ಎಣಿಕೆ ವೇಳೆ ಕಚ್ಚಾಬಾಂಬ್ ಸ್ಫೋಟಗೊಂಡು 9 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಸಿಎಂ ಮಮತಾ ಬ್ಯಾನರ್ಜಿ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.

  • Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

    Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

    – ಯಾರಿಗೂ ವೈಯಕ್ತಿಕವಾಗಿ ಹಣ ನೀಡದ ಕಾಂಗ್ರೆಸ್‌
    – ಕೇಜ್ರಿವಾಲ್‌ಗೆ ಆಪ್‌ನಿಂದ 10 ಲಕ್ಷ ರೂ.

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Election) ಸ್ಪರ್ಧಿಸಿದ ತನ್ನ 68 ಅಭ್ಯರ್ಥಿಗಳಿಗೆ ಬಿಜೆಪಿ (BJP) ತಲಾ 25 ಲಕ್ಷ ರೂ.ಗಳಂತೆ ಒಟ್ಟು 17 ಕೋಟಿ ರೂ.ಗಳನ್ನು ನೀಡಿದರೆ ಆಪ್‌ (AAP) ತನ್ನ 70 ಅಭ್ಯರ್ಥಿಗಳ ಪೈಕಿ 23 ಜನರಿಗೆ ಒಟ್ಟು 2.23 ಕೋಟಿ ರೂ.ಗಳನ್ನು ನೀಡಿದೆ.

    ಕಾಂಗ್ರೆಸ್ (Congress) ತನ್ನ 70 ಅಭ್ಯರ್ಥಿಗಳ ಪೈಕಿ ಯಾರಿಗೂ ವೈಯಕ್ತಿಕವಾಗಿ ಹಣವನ್ನು ನೀಡಿಲ್ಲ. ಆಪ್‌ 10 ಲಕ್ಷ ರೂ.ಗಳನ್ನು ತನ್ನ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿದೆ.

    ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿದ ವೆಚ್ಚದ ವಿವರಗಳು ಪ್ರಕಟವಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಆಪ್‌ ಒಟ್ಟು 14.51 ಕೋಟಿ ರೂ.ಗಳನ್ನು ಖರ್ಚು ಮಾಡಿದರೆ ಕಾಂಗ್ರೆಸ್‌ ಪ್ರಚಾರಕ್ಕಾಗಿ 46.18 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.

    ಬಿಜೆಪಿ ಇನ್ನೂ ತನ್ನ ಪೂರ್ಣ ವೆಚ್ಚದ ವರದಿಯನ್ನು ಸಲ್ಲಿಸಿಲ್ಲ. ವೆಚ್ಚದ ವರದಿಯಲ್ಲಿ ತನ್ನ ಎಲ್ಲಾ ಅಭ್ಯರ್ಥಿಗಳಿಗೆ ಸಮಾನವಾಗಿ ಹಣವನ್ನು ನೀಡಿದ್ದನ್ನು ಮಾತ್ರ ಉಲ್ಲೇಖಿಸಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ ಬುಡಕ್ಕೆ ಬಂತು ನ್ಯಾಷನಲ್‌ ಹೆರಾಲ್ಡ್‌ ಕೇಸ್‌

    ದೆಹಲಿಯಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಠ 40 ಲಕ್ಷ ರೂ.ಗಳನ್ನು ಖರ್ಚು ಮಾಡಬಹುದು. ಆದರೆ ಪಕ್ಷಗಳು ಮಾಡುವ ಖರ್ಚಿಗೆ ಯಾವುದೇ ಮಿತಿ ಇಲ್ಲ. ಒಂದು ಪಕ್ಷವು ಒಂದು ಕ್ಷೇತ್ರದಲ್ಲಿ ಎಷ್ಟು ಬೇಕಾದರೂ ಹಣವನ್ನು ಖರ್ಚು ಮಾಡಬಹುದು. ಪಕ್ಷಗಳು ಸಲ್ಲಿಸಿದ ವೆಚ್ಚದ ವಿವರಗಳು ಪಕ್ಷದ ಅಭ್ಯರ್ಥಿಗಳು ಖರ್ಚು ಮಾಡಿದ ಹಣವನ್ನು ಪ್ರತಿಬಿಂಬಿಸುವುದಿಲ್ಲ.

    ಆಪ್‌ ಮಾಧ್ಯಮ ಜಾಹೀರಾತುಗಳು, ಪೋಸ್ಟರ್‌ಗಳು ಮತ್ತು ನೋಟಿಸ್‌ಗಳಿಗಾಗಿ 12.12 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ತನ್ನ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ಜಾಹೀರಾತುಗಳಿಗೆ 16 ಲಕ್ಷ ರೂ., ಗೂಗಲ್‌ ಜಾಹೀರಾತುಗಳಿಗಾಗಿ 2.24 ಕೋಟಿ ರೂ., ಫೇಸ್‌ಬುಕ್‌ನಲ್ಲಿ ಪ್ರಚಾರಕ್ಕಾಗಿ 73.57 ಲಕ್ಷ ರೂ.ಗಳನ್ನು ವೆಚ್ಚ ಮಾಡಿದೆ.

    ಬಿಜೆಪಿಯ ಹರೀಶ್ ಖುರಾನಾ ವಿರುದ್ಧ ಸೋತ ತನ್ನ ಮೋತಿ ನಗರ ಅಭ್ಯರ್ಥಿ ಶಿವ ಚರಣ್ ಗೋಯೆಲ್ ಅವರಿಗೆ ಪಕ್ಷವು ಅತಿ ಹೆಚ್ಚು 39 ಲಕ್ಷ ರೂ.ಗಳನ್ನು ನೀಡಿದೆ. ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೇವಲ 10 ಲಕ್ಷ ರೂ.ಗಳನ್ನು ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಅತಿಶಿ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಲಾ 20 ಲಕ್ಷ ರೂ.ಗಳನ್ನು ಪಡೆದರೆ, ಗೋಪಾಲ್ ರೈ 24.75 ಲಕ್ಷ ರೂ.ಗಳನ್ನು, ಸೌರಭ್ ಭಾರದ್ವಾಜ್ 22.8 ಲಕ್ಷ ರೂ.ಗಳನ್ನು ಮತ್ತು ಸತ್ಯೇಂದರ್ ಜೈನ್ 23 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ – ನಂಗೆ ಮದ್ವೆ ಬೇಡ ಎಂದ ವಧು, ವರ ಶಾಕ್‌

    ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಪ್ರಚಾರಕ್ಕಾಗಿ ಸುಮಾರು 5.94 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೆ, ಮಾಧ್ಯಮ ಜಾಹೀರಾತು ಮತ್ತು ಪಠ್ಯ ಸಂದೇಶಗಳಿಗಾಗಿ 17.93 ಕೋಟಿ ರೂ.ಗಳನ್ನು ಮತ್ತು ಪೋಸ್ಟರ್‌ಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳಿಗಾಗಿ 18 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಸಾರ್ವಜನಿಕ ಸಭೆಗಳನ್ನು ನಡೆಸಲು 4.85 ಕೋಟಿ ರೂ. ಮತ್ತು ಸ್ಟಾರ್ ಪ್ರಚಾರಕರ ವೆಚ್ಚಕ್ಕಾಗಿ 37,104 ರೂ.ಗಳನ್ನು ಖರ್ಚು ಮಾಡಿದೆ.

    ಗ್ಯಾರಂಟಿ ಕಾರ್ಡ್‌ಗಳನ್ನು ಮುದ್ರಿಸಲು 2.79 ಕೋಟಿ ರೂ., ಲೈವ್ ಸ್ಟ್ರೀಮಿಂಗ್ ಕಾರ್ಯಕ್ರಮಗಳಿಗಾಗಿ 20.11 ಲಕ್ಷ ರೂ., ಪತ್ರಿಕಾಗೋಷ್ಠಿಗಳಿಗಾಗಿ 33,500 ರೂ.ಗಳನ್ನು ಖರ್ಚು ಮಾಡಿದೆ.

    ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ AIMIM ತನ್ನ ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಮುದ್ರಿಸಲು ಕೇವಲ 1.86 ಲಕ್ಷ ರೂ.ಗಳನ್ನು ಖರ್ಚು ಮಾಡಿದರೆ, ಸಿಪಿಐ(ಎಂ) ತನ್ನ ಇಬ್ಬರು ಅಭ್ಯರ್ಥಿಗಳಿಗೆ 3.20 ಲಕ್ಷ ರೂ.ಗಳನ್ನು ನೀಡಿದೆ.

    ಸಿಪಿಐ ತನ್ನ ಅಭ್ಯರ್ಥಿಗಳಲ್ಲಿ ಒಬ್ಬರಿಗೆ 5,000 ರೂ.ಗಳನ್ನು ಮತ್ತು ಇನ್ನೊಬ್ಬರಿಗೆ 15,000 ರೂ.ಗಳನ್ನು ನೀಡಿದೆ. ಸಿಪಿಐ(ಎಂಎಲ್)ಎಲ್ ಅಭ್ಯರ್ಥಿಗಳೇ ಪ್ರಚಾರ ನಡೆಸುತ್ತಿದ್ದರಿಂದ ಪ್ರಚಾರಕ್ಕೆ ಯಾವುದೇ ವೆಚ್ಚ ಮಾಡಲಿಲ್ಲ. ಬಿಎಸ್‌ಪಿ ಯಾವುದೇ ಅಭ್ಯರ್ಥಿಗೆ ಹಣಕಾಸು ನೆರವು ನೀಡದೇ ಪ್ರಚಾರಕ್ಕೆ 1.79 ಕೋಟಿ ರೂ. ಖರ್ಚು ಮಾಡಿದೆ.

    ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಒಂದು ಸ್ಥಾನದಲ್ಲಿ ಸ್ಪರ್ಧಿಸಿದ್ದ ಎಲ್‌ಜೆಪಿ (ರಾಮ್ ವಿಲಾಸ್) ಚುನಾವಣೆಗೆ ಸಂಬಂಧಿಸಿದ ಕಚೇರಿ ವೆಚ್ಚವಾಗಿ 39,770 ರೂ. ಖರ್ಚು ಮಾಡಿರುವುದಾಗಿ ಹೇಳಿದೆ.

  • ವಕ್ಫ್‌ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಎಎಪಿ

    ವಕ್ಫ್‌ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಎಎಪಿ

    ನವದೆಹಲಿ: ಸಂಸತ್‌ನ ಉಭಯ ಸದನಗಳಲ್ಲಿ ಅನುಮೋದನೆಗೊಂಡ ವಕ್ಫ್‌ ತಿದ್ದುಪಡಿ ಮಸೂದೆ (Waqf Amendment Bill) ವಿರುದ್ಧ ಆಮ್‌ ಆದ್ಮಿ ಪಕ್ಷ (AAP) ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

    ಆಪ್ ಶಾಸಕ, ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷ ಅಮಾನತ್‌-ಉಲ್ಲಾ-ಖಾನ್‌ ಅವರು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ, ಅಹಮದಾಬಾದಲ್ಲಿ ವಕ್ಫ್ ಮಸೂದೆ ವಿರುದ್ಧ ಭಾರೀ ಪ್ರತಿಭಟನೆ – ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

    ಮಸೂದೆಯು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಮೊಟಕುಗೊಳಿಸುತ್ತದೆ. ಅನಿಯಂತ್ರಿತ ಕಾರ್ಯಾಂಗ ಹಸ್ತಕ್ಷೇಪಕ್ಕೆ ಅನುವು ಮಾಡಿಕೊಡುತ್ತದೆ. ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳನ್ನು ನಿರ್ವಹಿಸಲು ಅಲ್ಪಸಂಖ್ಯಾತರ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ವಕ್ಫ್‌ ತಿದ್ದುಪಡಿ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು. ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆ ಮೂಲಕ ಮಸೂದೆ ಪಾಸ್‌ ಆಯಿತು. ಮಸೂದೆಯನ್ನು ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಇದು ಸಂವಿಧಾನಬಾಹಿರ ಎಂದು ವಿಪಕ್ಷಗಳು ಬಿಲ್‌ಗೆ ವಿರೋಧ ವ್ಯಕ್ತಪಡಿಸಿವೆ. ಇದನ್ನೂ ಓದಿ: ʻವಕ್ಫ್‌ ವಾರ್‌ʼ – ಸೋನಿಯಾ ಗಾಂಧಿ ಕ್ಷಮೆ ಯಾಚಿಸಲಿ: ಬಿಜೆಪಿ ಪಟ್ಟು

  • ಮಹಿಳೆಯರಿಗೆ ತಿಂಗಳಿಗೆ 1,000 ರೂ. ಗ್ಯಾರಂಟಿ ಕಟ್ – ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

    ಮಹಿಳೆಯರಿಗೆ ತಿಂಗಳಿಗೆ 1,000 ರೂ. ಗ್ಯಾರಂಟಿ ಕಟ್ – ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

    ಚಂಢೀಗಡ: ಪಂಜಾಬ್ (Punjab) ರಾಜ್ಯದ ಹಣಕಾಸು ಸಚಿವ ಹರ್ಪಲ್ ಸಿಂಗ್ ಚೀಮಾ (Harpal Singh Cheema) ಬುಧವಾರ 2.36 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ಇದೇ ಮೊದಲ ಬಾರಿಗೆ `ಡ್ರಗ್ಸ್ ಸೆನ್ಸಸ್’ (ಮಾದಕದ್ರವ್ಯ ಜನಗಣತಿ) ನಡೆಸಲಾಗುವುದು ಎಂದು ಘೋಷಿಸಿದರು.

    ಬಜೆಟ್ ಭಾಷಣದಲ್ಲಿ ಮಾತನಾಡಿದ ಅವರು, ಎಎಪಿ (AAP) ನೇತೃತ್ವದ ಪಂಜಾಬ್ ಸರ್ಕಾರ ಮಾದಕ ದ್ರವ್ಯ ವಿರೋಧಿ ಅಭಿಯಾನ ನಡೆಸಲಿದೆ. ಇದರ ಜೊತೆಗೆ ಆರೋಗ್ಯ ಕ್ಷೇತ್ರಕ್ಕೂ ವಿಶೇಷ ಒತ್ತು ನೀಡಲಾಗುವುದು ಎಂದರಲ್ಲದೇ ವಾರ್ಷಿಕ ವಿಮಾ ರಕ್ಷಣೆ 10 ಲಕ್ಷ ರೂ.ಗಳಿಗೆ ದ್ವಿಗುಣ ಮತ್ತು ಸಮಗ್ರ ಅಭಿವೃದ್ಧಿಗಾಗಿ `ರಂಗ್ಲಾ ಪಂಜಾಬ್ ವಿಕಾಸ್’ ಯೋಜನೆಯನ್ನು ಪ್ರಾರಂಭಿಸುವಾಗಿ ತಿಳಿಸಿದರು.ಇದನ್ನೂ ಓದಿ: ಜಾರಕಿಹೊಳಿ ಸಿಎಂ ಆಗಲು ಹೆಚ್‍ಡಿಕೆ ಭೇಟಿ: ಜಿಟಿಡಿ ಬಾಂಬ್

    ಆದ್ರೆ ತಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲು ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಮಹಿಳೆಯರಿಗೆ ಮಾಸಿಕ 1,000 ರೂ. ನೀಡುವ ಗ್ಯಾರಂಟಿ ಯೋಜನೆಯನ್ನು ಕೈಬಿಟ್ಟಿರುವುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

    ರಾಜ್ಯದಲ್ಲಿ ಎಎಪಿ ಪಕ್ಷ ಸರ್ಕಾರಕ್ಕೆ ಬರುವ ಮೊದಲು ಮಹಿಳೆಯರಿಗೆ ಮಾಸಿಕ 1,000 ರೂ. ನೀಡುವುದಾಗಿ ಚುನಾವಣಾ ಪೂರ್ವ ಭರವಸೆ ನೀಡಿದ್ದರು. ಆದ್ರೆ ಇದೀಗ ಬಜೆಟ್ ವೇಳೆ ಮಾಸಿಕ 1,000 ರೂ. ನೀಡಲು ಅನುದಾನ ಮೀಸಲಿಡದೇ ಯೋಜನೆಯನ್ನು ಮೊಟಕುಗೊಳಿಸಲಾಗಿದೆ. ಹೀಗಾಗಿ ಸಿಎಂ ಭಗವಂತ್ ಮಾನ್ (CM Bhagwant Mann) ಸರ್ಕಾರದ ವಿರುದ್ಧ ಕಾಂಗ್ರೆಸ್, ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಂಜಾಬ್ ಬಜೆಟ್ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ (Tarun Chugh) ಮಾತನಾಡಿ, ರಾಜ್ಯದ ಅಭಿವೃದ್ಧಿಗೆ ಸರ್ಕಾರ ಯಾವುದೇ ಭರವಸೆಯನ್ನು ನೀಡಿಲ್ಲ. ತಾವು ನೀಡಿದ್ದ ಚುನಾವಣಾ ಪೂರ್ವ ಭರವಸೆಯನ್ನೇ ಈ ಸರ್ಕಾರ ಈಡೇರಿಸಿಲ್ಲ. ಈ ಮೂಲಕ ರಾಜ್ಯದ ಮಹಿಳೆಯರನ್ನು ನಿರಾಶೆಗೊಳಿಸಿದ್ದಾರೆ. ಇನ್ನೂ ರೈತರು ಹಾಗೂ ಕೈಗಾರಿಕೋದ್ಯಮಿಗಳಿಗಾಗಿ ಯಾವುದೇ ಹೊಸ ಉಪಕ್ರಮಗಳನ್ನು ಘೋಷಿಸಿಲ್ಲ. ಜೊತೆಗೆ ರೈತರ ಕುಂದುಕೊರತೆಗಳ ಪರಿಹರಿಸುವ ಬಗ್ಗೆಯೂ ಮಾತನಾಡಿಲ್ಲ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆ ಹಾಗೂ ಇತರ ಹೊಸ ಉದ್ಯೋಗ ಸೃಷ್ಟಿಗೆ ಸಂಪೂರ್ಣವಾಗಿ ಮೌನವಹಿಸಿದೆ. ರಾಜ್ಯದ ಲಕ್ಷಾಂತರ ನಿರುದ್ಯೋಗಿಗಳಿಗೆ ಈ ಬಜೆಟ್ ಯಾವುದೇ ಪ್ರೋತ್ಸಾಹ ನೀಡುವುದಿಲ್ಲ. ಈ ಮೂಲಕ ಸರ್ಕಾರ ಆರ್ಥಿಕತೆಯನ್ನು ಎಷ್ಟು ಕಳಪೆಯಾಗಿ ನಿರ್ವಹಿಸುತ್ತಿದೆ ಎಂದು ಎತ್ತಿ ತೋರಿಸಿದ್ದಾರೆ ಎಂದರು.

    ಇದೇ ವೇಳೆ ಕಾಂಗ್ರೆಸ್ (Congress) ನಾಯಕ ಪ್ರತಾಪ್ ಸಿಂಗ್ ಬಜ್ವಾ ಮಾತನಾಡಿ, ಇದು ವಂಚನೆಯ ಬಜೆಟ್ ಆಗಿದ್ದು, ಅತ್ಯಂತ ನಿರಾಶಾದಾಯಕವಾಗಿದೆ. ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ಮಹಿಳೆಯರು, ರೈತರು, ಸೇವಾ ವರ್ಗ, ವಿದ್ಯಾರ್ಥಿಗಳು ಮತ್ತು ವ್ಯಾಪಾರ ಸಮುದಾಯ ಸೇರಿದಂತೆ ರಾಜ್ಯದ ಎಲ್ಲಾ ವರ್ಗಗಳನ್ನು ಕಡೆಗಣಿಸಿದ್ದಾರೆ. ಎಎಪಿ ಆಡಳಿತದ ಮೂರು ವರ್ಷಗಳಲ್ಲಿ ಪಂಜಾಬ್ ದೇಶದಲ್ಲಿ ಎರಡನೇ ಅತಿ ಹೆಚ್ಚು ಸಾಲದ ರಾಜ್ಯವಾಗಿದೆ. ಮುಂಬರುವ ಹಣಕಾಸು ವರ್ಷದಲ್ಲಿ, ಎಎಪಿ ಸರ್ಕಾರವು 49,900 ಕೋಟಿ ರೂ. ಸಾಲವನ್ನು ಸಂಗ್ರಹಿಸಲಿದೆ. ಪರಿಣಾಮವಾಗಿ, ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ರಾಜ್ಯದ ಬಾಕಿ ಸಾಲವು 3.96 ಲಕ್ಷ ಕೋಟಿ ರೂ.ಗಳಾಗಲಿದೆ. ಮಾರ್ಚ್ 2022ರಲ್ಲಿ ಎಎಪಿ ಅಧಿಕಾರಕ್ಕೆ ಬಂದಾಗ, ಪಂಜಾಬ್‌ನಲ್ಲಿ ಬಾಕಿ ಸಾಲವು 2.73 ಲಕ್ಷ ಕೋಟಿ ರೂ.ಗಳಷ್ಟಿತ್ತು ಎಂದು ಒತ್ತಿ ಹೇಳಿದರು.

    ಕೃಷಿ (Agriculture) ಕ್ಷೇತ್ರವು ಪಂಜಾಬ್‌ನ ಅತ್ಯಂತ ನಿರ್ಣಾಯಕ ವಲಯವಾಗಿದ್ದು, ಈ ಕ್ಷೇತ್ರಕ್ಕೆ 14,524 ಕೋಟಿ ರೂ.ಗಳನ್ನು ನೀಡಿರುವುದು, ಪಂಜಾಬ್‌ನ ರೈತರೊಂದಿಗಿನ ಮಾಡುತ್ತಿರುವ ತಮಾಷೆಯಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡಿರುವ ಬಜೆಟ್‌ನಿಂದಾಗಿ ದುರ್ಬಲ ವರ್ಗಕ್ಕೆ ಸೇರಿದ ಜನರು ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಂದ ವಂಚಿತರಾಗುತ್ತಾರೆ. ಇನ್ನೂ ಕೈಗಾರಿಕಾ ವಲಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಹೇಳಿದರು.

    ರಾಜ್ಯ ಬಜೆಟ್‌ಗೆ ವಿರೋಧ ಪಕ್ಷಗಳ ಟೀಕೆ ಜೋರಾಗಿದ್ದು, ಸುಳ್ಳುಗಳ ಮಹಾಪೂರವನ್ನೇ ಸುರಿಸಿದ್ದಾರೆ ಎಂದಿದ್ದಾರೆ. ಜೊತೆಗೆ ಸಮಾಜದ ಎಲ್ಲಾ ವರ್ಗಗಳನ್ನು ನಿರಾಶೆಗೊಳಿಸುವ ಬಜೆಟ್ ಮಂಡಿಸಿದ್ದಾರೆ ಎಂದಿವೆ.ಇದನ್ನೂ ಓದಿ: ಸಂಕ್ರಾಂತಿಗೆ ಸ್ಟಾರ್ ವಾರ್- ವಿಜಯ್ ನಟನೆಯ ‘ಜನ ನಾಯಗನ್’ ಎದುರು ಅಬ್ಬರಿಸಲಿದೆ ಜ್ಯೂ.ಎನ್‌ಟಿಆರ್ ಸಿನಿಮಾ

  • ಹೋಳಿ ಹಬ್ಬಕ್ಕೆ ಉಚಿತ ಸಿಲಿಂಡರ್ ನೀಡದ ಬಿಜೆಪಿ: ಜುಮ್ಲಾ ಪಾರ್ಟಿ ಎಂದು ಕುಟುಕಿದ ಆಪ್

    ಹೋಳಿ ಹಬ್ಬಕ್ಕೆ ಉಚಿತ ಸಿಲಿಂಡರ್ ನೀಡದ ಬಿಜೆಪಿ: ಜುಮ್ಲಾ ಪಾರ್ಟಿ ಎಂದು ಕುಟುಕಿದ ಆಪ್

    ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರ ಖಾತೆಗೆ 2500 ರೂ. ಹಾಗೂ ಹೋಳಿಯಂದು ಉಚಿತ ಸಿಲಿಂಡರ್ ನೀಡುವ ಭರವಸೆ ನೀಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮಾತು ಮರೆತಿದ್ದು ಮಹಿಳೆಯರ ಖಾತೆಗೆ ಹಣವೂ ಹಾಕಿಲ್ಲ. ಇತ್ತ ಹೋಳಿ ಹಬ್ಬಕ್ಕೆ ಉಚಿತ ಸಿಲಿಂಡರ್ ಕೂಡಾ ನೀಡಿಲ್ಲ. ಬಿಜೆಪಿಯು ಜುಮ್ಲಾ ಪಾರ್ಟಿ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

    ಉಚಿತ ಸಿಲಿಂಡರ್ ನೀಡದ ವಿಚಾರವನ್ನು ಮುಂದಿಟ್ಟುಕೊಂಡು ದೆಹಲಿಯ 40ಕ್ಕೂ ಅಧಿಕ ಸ್ಥಳಗಳಲ್ಲಿ ಆಪ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಐಟಿಒದಲ್ಲಿ ಬ್ಯಾನರ್‌ಗಳನ್ನು ಹಾಕಿ, ಪ್ರತಿಭಟಿಸಿದರು. ಸಂಚಾರಕ್ಕೆ ಸಮಸ್ಯೆಯಾದ ಹಿನ್ನೆಲೆ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಇದನ್ನೂ ಓದಿ: ನನ್ನ ಹತ್ರ ಇಂಟೆಲಿಜೆನ್ಸ್ ಇಲ್ಲ, ಗೃಹ ಸಚಿವರು, ಸಿಎಂ ಸಾಹೇಬ್ರಿಗೆ ಗೊತ್ತು – ಲಕ್ಷ್ಮೀ ಹೆಬ್ಬಾಳ್ಕರ್

    ಹೋಳಿಯಂದು ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವ ಭರವಸೆಯನ್ನು ಈಡೇರಿಸದ ಬಿಜೆಪಿ ನೇತೃತ್ವದ ದೆಹಲಿ ಸರ್ಕಾರವನ್ನು ಎಎಪಿ ನಾಯಕ ಪ್ರವೀಣ್ ಕುಮಾರ್ ತರಾಟೆಗೆ ತೆಗೆದುಕೊಂಡರು. ಬಿಜೆಪಿಯ ಪ್ರತಿಯೊಂದು ಭರವಸೆಯನ್ನು ಜುಮ್ಲಾವಾಗಿದೆ. ಬಿಜೆಪಿಗೆ ಮತ ಹಾಕಿದ ಮಹಿಳೆಯರು ಉಚಿತ ಸಿಲಿಂಡರ್‌ಗಳು ಸಿಗುತ್ತವೆ. ಆದರೆ ಇನ್ನೂ ಸಿಲಿಂಡರ್‌ಗಳು ಸಿಕ್ಕಿಲ್ಲ ಎಂಬುದು ತುಂಬಾ ದುಃಖಕರ ಎಂದು ಹೇಳಿದರು. ಇದನ್ನೂ ಓದಿ: ರನ್ಯಾರಾವ್ ಕೇಸ್; ಸಿಬಿಐ ತನಿಖೆ ಮುಗಿಯುವ ತನಕ ಬಿಜೆಪಿಯವರು ಕಾಯಬೇಕು: ಸತೀಶ್ ಜಾರಕಿಹೊಳಿ

    ಗುರುವಾರ ಹೋಳಿ ಹಬ್ಬವಾಗಿದೆ ಆದರೆ ಜನರಿಗೆ ಇನ್ನೂ ಉಚಿತ ಸಿಲಿಂಡರ್‌ಗಳು ಸಿಕ್ಕಿಲ್ಲ. ಅವರು ಇನ್ನೂ 1000 ರೂ. ಪಾವತಿಸಬೇಕಾಗಿದೆ. ಬಿಜೆಪಿಯ ಪ್ರತಿಯೊಂದು ಭರವಸೆಯೂ ಮಹಿಳೆಯರಿಗೆ 2500 ರೂ. ನೀಡುವುದಾಗಲಿ ಅಥವಾ ಉಚಿತ ಸಿಲಿಂಡರ್‌ಗಳನ್ನು ನೀಡುವುದಾಗಲಿ `ಜುಮ್ಲಾ’ ಆಗಿ ಬದಲಾಗುತ್ತಿದೆ. ಈ ಎರಡೂ ಭರವಸೆಗಳು `ಜುಮ್ಲಾ’ ಆಗಿ ಮಾರ್ಪಟ್ಟಿವೆ ಎಂದು ಹೇಳಿದರು. ಇದನ್ನೂ ಓದಿ: ಡೆಲ್ಲಿ ಅಂಗಳ ತಲುಪಿದ ನಟಿ ರನ್ಯಾ ರಾವ್ ಕೇಸ್: ಇಬ್ಬರು ಸಚಿವರು ಸೇಫ್

    ವಿರೋಧ ಪಕ್ಷದ ನಾಯಕಿ ಅತಿಶಿ ಮಾತನಾಡಿ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಮುನ್ನ ದೆಹಲಿಯ ಮಹಿಳೆಯರಿಗೆ ಹಲವು ಭರವಸೆಗಳನ್ನು ನೀಡಿದ್ದರು. ಮಾ. 8ರೊಳಗೆ ಮಹಿಳೆಯರಿಗೆ 2500 ರೂ. ನೀಡುವ ಭರವಸೆ ಕೇವಲ ಘೋಷಣೆ ಹಾಗೂ ವಂಚನೆಯಾಗಿ ಉಳಿದಿದೆ. ಹೋಳಿ, ದೀಪಾವಳಿಯಂದು ಪ್ರತಿ ಮಹಿಳೆಗೆ ಉಚಿತ ಸಿಲಿಂಡರ್ ನೀಡುವುದಾಗಿ ಮತ್ತೊಂದು ಭರವಸೆ ನೀಡಲಾಗಿತ್ತು. ದೆಹಲಿಯ ಮಹಿಳೆಯರು ಉಚಿತ ಸಿಲಿಂಡರ್‌ಗಳಿಗಾಗಿ ಕಾಯುತ್ತಿದ್ದಾರೆ ಎಂದರು. ಇದನ್ನೂ ಓದಿ: ‘ಟಾಕ್ಸಿಕ್’ ಅದ್ಭುತವಾಗಿದೆ: ಯಶ್ ಕುರಿತು ಹಾಲಿವುಡ್ ಸ್ಟಂಟ್ ಮಾಸ್ಟರ್ ಗುಣಗಾನ

    ರಾಜ್ಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಪ್ರತಿಕ್ರಿಯಿಸಿ, ಆಪ್ ಪತನದತ್ತ ಸಾಗುತ್ತಿದೆ. ಮುಂದೆ ಅದು ವಿರೋಧ ಪಕ್ಷದ ಸ್ಥಾನಮಾನವನ್ನೂ ಕಳೆದುಕೊಳ್ಳುವ ದಿನ ದೂರವಿಲ್ಲ. ಮಹಿಳಾ ಸಮೃದ್ಧಿ ಯೋಜನೆಯ ಬಗ್ಗೆ ಅವರು ದೆಹಲಿಯ ಜನರ ದಾರಿ ತಪ್ಪಿಸುತ್ತಿದ್ದಾರೆ. ಮಾ. 8ರಂದು ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಈ ಯೋಜನೆಯ ಕುರಿತು ಬಜೆಟ್ ಮತ್ತು ಕಾಲಮಿತಿಯ ಘೋಷಣೆ ಮಾಡಿದ್ದರು ಎಂದು ಆಮ್ ಆದ್ಮಿ ಹೋರಾಟಕ್ಕೆ ತಿರುಗೇಟು ನೀಡಿದರು. ಇದನ್ನೂ ಓದಿ: ಉಪಗ್ರಹಗಳ ಅನ್‌ಡಾಕ್ ಕಾರ್ಯ ಯಶಸ್ವಿ – ಇಸ್ರೋ ಮತ್ತೊಂದು ಸಾಧನೆ; ಚಂದ್ರಯಾನ-4ಕ್ಕೆ ದಾರಿ

    ಇದರ ಬಳಿಕ ಈಗ ಹೋಳಿಯಂದು ಗ್ಯಾಸ್ ಸಿಲಿಂಡರ್‌ಗಳ ಬಗ್ಗೆ ದಾರಿತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಉಚಿತ ಅನಿಲ ಸಿಲಿಂಡರ್‌ನಂತಹ ದೊಡ್ಡ ಯೋಜನೆಯನ್ನು ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆಗಳು ಮತ್ತು ನಿಯಮಗಳನ್ನು ರೂಪಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಬಿಜೆಪಿ ಆಡಳಿತವಿರುವ ಇತರೇ ರಾಜ್ಯಗಳಲ್ಲಿ ನಿಯಮಿತವಾಗಿ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲಾಗುತ್ತಿದ್ದು, ಶೀಘ್ರದಲ್ಲೇ ದೆಹಲಿಯಲ್ಲೂ ನೀಡಲಾಗುವುದು ಎಂದರು.

  • ದೆಹಲಿ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಆಪ್‌ ನಾಯಕನ ಕಾರಿನ 4 ಚಕ್ರಗಳು ಮಾಯ!

    ದೆಹಲಿ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಆಪ್‌ ನಾಯಕನ ಕಾರಿನ 4 ಚಕ್ರಗಳು ಮಾಯ!

    ನವದೆಹಲಿ: ಆಪ್ (AAP) ನಾಯಕ ಅವಧ್ ಓಜಾ (Avadh Ojha) ಅವರ ಕಾರಿನ ನಾಲ್ಕು ಚಕ್ರಗಳನ್ನು ಕಳ್ಳರು ಕದ್ದೋಯ್ದ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ನಾಲ್ಕು ಚಕ್ರಗಳಿಲ್ಲದೆ ನಿಂತಿರುವ ಓಜಾ ಅವರ ಕಾರಿನ ವಿಡಿಯೋ ಹಾಗೂ ಫೋಟೋಗಳು ವೈರಲ್‌ ಆಗಿವೆ.

    ದೆಹಲಿಯ ಪತ್ಪರ್ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿರುವ ಅವಧ್ ಓಜಾ, ಜನನಿಬಿಡ ರಸ್ತೆಯಲ್ಲಿ ಹಾಡಹಗಲೇ ಚಕ್ರಗಳನ್ನು ಕದಿಯಲಾಗಿದೆ ಎಂದು ಆರೋಪಿಸಿದ್ದಾರೆ. ಅತಿ ಹೆಚ್ಚು ಜನ ಓಡಾಡುವ ಪ್ರದೇಶದಲ್ಲಿ ಇಂತಹ ಕೃತ್ಯ ಹೇಗೆ ನಡೆಯಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

    ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪತ್ಪರ್ಗಂಜ್ ಕ್ಷೇತ್ರದಿಂದ ಓಜಾ ಅವರು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಅವರು ಬಿಜೆಪಿಯ ರವೀಂದರ್ ಸಿಂಗ್ ನೇಗಿ ವಿರುದ್ಧ ಸೋತಿದ್ದರು. ಸೋಲಿನ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.

  • ರಾಜ್ಯಸಭಾ ಸಂಸದನಿಗೆ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ – ಪಂಜಾಬ್‌ನಿಂದ ಸಂಸತ್‌ಗೆ ಕೇಜ್ರಿವಾಲ್?

    ರಾಜ್ಯಸಭಾ ಸಂಸದನಿಗೆ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ – ಪಂಜಾಬ್‌ನಿಂದ ಸಂಸತ್‌ಗೆ ಕೇಜ್ರಿವಾಲ್?

    ಲುಧಿಯಾನ: ಆಮ್ ಆದ್ಮಿ ಪಕ್ಷ ಪಂಜಾಬ್‌ನ ಲುಧಿಯಾನ ಪಶ್ಚಿಮ ವಿಧಾನಸಭಾ ಉಪಚುನಾವಣೆಗೆ ತನ್ನ ರಾಜ್ಯಸಭಾ ಸಂಸದ ಸಂಜೀವ್ ಅರೋರಾ (Sanjeev Arora) ಅವರನ್ನು ಕಣಕ್ಕಿಳಿಸಿದೆ. ಈ ಬೆಳವಣಿಗೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ರಾಜ್ಯಸಭೆ ಪ್ರವೇಶದ ವದಂತಿಗೆ ಇನ್ನಷ್ಟು ಪುಷ್ಠಿ ನೀಡಿದೆ.

    ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಅರವಿಂದ್ ಕೇಜ್ರಿವಾಲ್ ರಾಜ್ಯಸಭೆ ಪ್ರವೇಶ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಈ ವದಂತಿಯನ್ನು ಪಕ್ಷ ತಳ್ಳಿ ಹಾಕಿತ್ತು. ಆದರೀಗ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಅವರನ್ನು ಉಪ ಚುನಾವಣೆಗೆ ಕಣಕ್ಕಿಳಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್

    ಚುನಾವಣಾ ಆಯೋಗವು ಲುಧಿಯಾನ ಪಶ್ಚಿಮ (Ludhiana West) ಉಪಚುನಾವಣೆಯ ದಿನಾಂಕಗಳನ್ನು ಇನ್ನೂ ಘೋಷಿಸಿಲ್ಲ. ನವೆಂಬರ್‌ನಲ್ಲಿ ನಡೆಯುವ ಬಿಹಾರ ವಿಧಾನಸಭಾ ಚುನಾವಣೆಯ ಜೊತೆಗೆ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಮುಟ್ಟಿದ್ರೆ ಭಸ್ಮ ಆಗ್ತಾರೆ – ಸಚಿವ ಜಮೀರ್ ಬ್ಯಾಟಿಂಗ್‌

    ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಎಪಿ ನಾಯಕ ನೀಲ್ ಗರ್ಗ್, ಸಂಜೀವ್ ಅರೋರಾ ಅವರ ಉತ್ತಮ ಕೆಲಸಗಳನ್ನು ಪರಿಗಣಿಸಿ ಲುಧಿಯಾನ ಪಶ್ಚಿಮ ಉಪಚುನಾವಣೆಗೆ ಟಿಕೆಟ್ ನೀಡಲಾಗಿದೆ. ಕೇಜ್ರಿವಾಲ್ ರಾಜ್ಯಸಭೆಗೆ ಹೋಗುತ್ತಾರೆ ಎಂಬ ಊಹಾಪೋಹಗಳು ಸುಳ್ಳು ಮತ್ತು ಬಿಜೆಪಿ ಕಾರ್ಖಾನೆಯಿಂದ ಬಂದಿವೆ.

    ನಾವು ಮೊದಲು ಉಪಚುನಾವಣೆ ಗಮನ ಹರಿಸುತ್ತೇವೆ. ಬಳಿಕ ಮತ್ತು ನಂತರ ರಾಜ್ಯಸಭೆಯತ್ತ ಕೇಂದ್ರೀಕರಿಸುತ್ತೇವೆ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಇಂತಹ ವದಂತಿಗಳನ್ನು ಹರಡುತ್ತಿವೆ. ಇಂತಹ ವದಂತಿಗಳಾಗಿ ನಾನು ತಿರಸ್ಕರಿಸುತ್ತೇನೆ ಎಂದು ನೀಲ್ ಗರ್ಗ್ ಹೇಳಿದರು. ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ಅಂತ್ಯಕ್ರಿಯೆ – ಕೊನೆ ಕ್ಷಣದಲ್ಲಿ ಎಂಟ್ರಿ ಕೊಟ್ಟ ಪೊಲೀಸರು, ಅರೆಸ್ಟ್ ಆದ ಗಂಡ

  • ದೆಹಲಿ ವಿಧಾನಸಭೆಯಲ್ಲಿ ಗದ್ದಲ – 15 ಎಎಪಿ ಶಾಸಕರ ಅಮಾನತು

    ದೆಹಲಿ ವಿಧಾನಸಭೆಯಲ್ಲಿ ಗದ್ದಲ – 15 ಎಎಪಿ ಶಾಸಕರ ಅಮಾನತು

    ನವದೆಹಲಿ: ಮದ್ಯ ನೀತಿ ಹಗರಣದ ಕುರಿತು ಲೆಕ್ಕಪರಿಶೋಧಕರ ವರದಿಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಜೊತೆಗೆ ಗದ್ದಲದ ವೇಳೆ ಮಾಜಿ ಮುಖ್ಯಮಂತ್ರಿ ಅತಿಶಿ (ಈಗ ವಿರೋಧ ಪಕ್ಷದ ನಾಯಕಿ) ಸೇರಿದಂತೆ 15 ಮಂದಿ ಎಎಪಿ ಶಾಸಕರನ್ನು ದೆಹಲಿ ವಿಧಾನಸಭೆಯಿಂದ ಮಂಗಳವಾರ ಅಮಾನತುಗೊಳಿಸಲಾಗಿದೆ.

    ಫೆ.5 ರ ಚುನಾವಣೆಯಲ್ಲಿ ಸೋಲನ್ನು ತಪ್ಪಿಸಿಕೊಂಡ ಕೆಲವೇ ಕೆಲವು ಉನ್ನತ ವ್ಯಕ್ತಿಗಳಲ್ಲಿ ಒಬ್ಬರಾದ ಹಿರಿಯ ಎಎಪಿ ನಾಯಕ ಗೋಪಾಲ್ ರೈ ಅವರನ್ನು ಸಹ ವಿಧಾನಸಭೆಯಿಂದ ಅಮಾನತು ಮಾಡಲಾಯಿತು. ಇದನ್ನೂ ಓದಿ: AAP ಸರ್ಕಾರದಲ್ಲಿ ಹಗರಣ – ದೆಹಲಿ ವಿಧಾನಸಭೆಯಲ್ಲಿ ಇಂದು ಸರ್ಕಾರದಿಂದ ಸಿಎಜಿ ವರದಿ ಮಂಡನೆ

    ವಿಧಾನಸಭೆಯನ್ನುದ್ದೇಶಿಸಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಆರಂಭಿಕ ಭಾಷಣದ ವೇಳೆ ಗದ್ದಲ ಪ್ರಾರಂಭವಾಯಿತು. ನೂತನ ಸಿಎಂ ರೇಖಾ ಗುಪ್ತಾ ಅವರ ಕಚೇರಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಗತ್‌ಸಿಂಗ್ ಅವರ ಛಾಯಾಚಿತ್ರಗಳನ್ನು ತೆಗೆದುಹಾಕಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಎಎಪಿ ಶಾಸಕರು ‘ಜೈ ಭೀಮ್’ ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್‌ ಮತ್ತು ಭಗತ್‌ಸಿಂಗ್ ಅವರ ಛಾಯಾಚಿತ್ರಗಳನ್ನು ಹಿಡಿದು ಪ್ರತಿಭಟಿಸಿದರು. ಈ ಛಾಯಾಚಿತ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರಗಳೊಂದಿಗೆ ಬದಲಾಯಿಸಲಾಗಿದೆ ಎಂದು ಎಎಪಿ ಆರೋಪಿಸಿದೆ.

    ಸಿಎಂ ರೇಖಾ ಗುಪ್ತ ಅವರು ಇಂದು ಕಂಟ್ರೋಲರ್ ಮತ್ತು ಆಡಿಟರ್-ಜನರಲ್ (ಸಿಎಜಿ) ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಎಎಪಿ ಅವಧಿಯಲ್ಲಿ ಹಲವು ಭ್ರಷ್ಟಾಚಾರಗಳು ನಡೆದಿವೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: Maha Kumbh Mela: ಮಹಾಶಿವರಾತ್ರಿಯಂದು ಕಡೆಯ ಅಮೃತಸ್ನಾನಕ್ಕೆ ಜಿಲ್ಲಾಡಳಿತ ಸಜ್ಜು

    ಈ ಹೇಳಿಕೆಯನ್ನು ಬಿಜೆಪಿ ತಳ್ಳಿಹಾಕಿದ್ದು, ಎಎಪಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ಬಿಡುಗಡೆ ಮಾಡಿದ ಗುಪ್ತಾ ಅವರ ಕಚೇರಿಯ ವೀಡಿಯೊಗಳು, ಎಎಪಿ ಆಡಳಿತದಲ್ಲಿ ಮುಖ್ಯಮಂತ್ರಿಗಳ ಮೇಜಿನ ಹಿಂದೆ ನೇತುಹಾಕಲಾಗಿದ್ದ ಡಾ. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳನ್ನು ಪಕ್ಕದ ಗೋಡೆಗಳಿಗೆ ಸ್ಥಳಾಂತರಿಸಿ, ಮಹಾತ್ಮ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿಯವರ ಫೋಟೋಗಳನ್ನು ಅಳವಡಿಸಿರುವುದನ್ನು ತೋರಿಸಿವೆ.

    ಎಎಪಿ, ಹಲವಾರು ತಿಂಗಳುಗಳ ಕಾಲ ಜೈಲಿನಲ್ಲಿದ್ದ ಕೇಜ್ರಿವಾಲ್ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು ಈ ಆರೋಪಗಳನ್ನು ಎದುರಿಸಿದ್ದಾರೆ. ಹಲವು ಹಗರಣಗಳ ಆರೋಪಗಳ ಮಧ್ಯೆ ನಡೆದ ಚುನಾವಣೆಯಲ್ಲಿ ಎಎಪಿ ಸೋತಿತು. ಬಿಜೆಪಿ ದೆಹಲಿಯ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದುಕೊಂಡಿತು. ಕಳೆದ ಎರಡು ಚುನಾವಣೆಗಳಲ್ಲಿ ಗೆದ್ದಿದ್ದಕ್ಕಿಂತ 37 ಹೆಚ್ಚು ಸ್ಥಾನಗಳನ್ನು ಗೆದ್ದಿದೆ.