Tag: aanjaneya temple

  • ನಿರ್ಮಾಣ ಹಂತದ ಆಂಜನೇಯನ ದೇಗುಲದ ಮುಂದೆಯೇ ಬಂದು ಪ್ರಾಣಬಿಟ್ಟ ಕೋತಿ!

    ನಿರ್ಮಾಣ ಹಂತದ ಆಂಜನೇಯನ ದೇಗುಲದ ಮುಂದೆಯೇ ಬಂದು ಪ್ರಾಣಬಿಟ್ಟ ಕೋತಿ!

    ಬಾಗಲಕೋಟೆ: ಕೋತಿಯೊಂದು ನಿರ್ಮಾಣ ಹಂತದ ಹನುಮಾನ ದೇವಸ್ಥಾನದ ಮುಂದೆ ಬಂದು ಮೃತಪಟ್ಟ ಅಚ್ಚರಿಯ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ನಡೆದಿದೆ.

    ಇದು ಆಂಜನೇಯನ ಪವಾಡ ಎಂದ ಗ್ರಾಮಸ್ಥರು, ಮೃತ ಕರಿಮಂಗನಿಗೆ ಪೂಜೆ, ಆರತಿ ಹಾಗೂ ಉದ್ದಿನ ಕಡ್ಡಿ ಬೆಳಗಿ ಬಳಿಕ ಭಜನಾಪದದ ಮೂಲಕ ಗೌರವ ಸಲ್ಲಿಕೆ ಮಾಡಿದರು. ಅಲ್ಲದೆ ಗ್ರಾಮದ ತುಂಬಾ ಮಂಗನ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಯಿತು. ನಂತರ ದೇವಸ್ಥಾನದ ಗರ್ಭಗುಡಿ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಇದನ್ನೂ ಓದಿ: ಬೆಂಗ್ಳೂರಲ್ಲಿ ನಿಲ್ಲದ ಪ್ಲಾಸ್ಟಿಕ್ ಬಳಕೆ- ದಂಡದ ರೂಪದಲ್ಲಿ ಪಾಲಿಕೆ ಖಜಾನೆಗೆ ಹರಿದು ಬಂತು 21,48,600 ರೂ.!

    ಹನುಮಂತ ದೇವಸ್ಥಾನದ ಬಾಗಿಲು ಬಳಿಯೇ ಮಂಗ ಮೃತಪಟ್ಟಿದೆ. ಇದು ಆಂಜನೇಯನ ಶಕ್ತಿ, ಆಂಜನೇಯನ ಮಹಿಮೆ. ಬಾಡಗಿ ಪುನರ್ವಸತಿ ಕೇಂದ್ರ, ನಮ್ಮ ಊರು ಈಗ ನಿರ್ಮಾಣವಾಗುತ್ತಿದೆ. ನಮ್ಮ ಊರ ಮೇಲೆ ಆಂಜನೇಯನ ಕೃಪೆ ಇದೆ. ಹನುಮಂತ ದೇವರ ದೇವಸ್ಥಾನ ಕಟ್ಟಿಸುತ್ತಿದ್ದೇವೆ. ಆದರೆ ಇದೀಗ ಸಾಕ್ಷಾತ್ ಆಂಜನೇಯನೆ ಇಲ್ಲಿ ಐಕ್ಯವಾಗಿದ್ದಾನೆ. ನಾವು ಆರು ತಿಂಗಳ ನಂತರ ಮೂರ್ತಿ ಪ್ರತಿಷ್ಟಾಪನೆ ಮಾಡುವವರಿದ್ದೆವು. ಆದರೆ ಇದೀಗ ಸಾಕ್ಷಾತ್ ಆಂಜನೇಯನೇ ಮಂಗನ ರೂಪದಲ್ಲಿ ಬಂದಿದ್ದಾನೆ ಎಂದು ಗ್ರಾಮಸ್ಥರು ನಂಬಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು ಶ್ರೀರಾಮನವಮಿ ಆಚರಣೆ – ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ

    ರಾಜ್ಯದಲ್ಲಿಂದು ಶ್ರೀರಾಮನವಮಿ ಆಚರಣೆ – ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ

    ಬೆಂಗಳೂರು: ನಾಡಿನೆಲ್ಲೆಡೆ ಇಂದು ರಾಮನವಮಿ ಸಂಭ್ರಮ. ರಾಮ ಹುಟ್ಟಿದ ದಿನವನ್ನು ಅದ್ದೂರಿಯಾಗಿ ಆಚರಿಸಲು ಬೆಂಗಳೂರಿನಾದ್ಯಂತ ಸಿದ್ಧತೆ ಮಾಡಲಾಗಿದ್ದು, ರಥಯಾತ್ರೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ರಾಜಧಾನಿ ಎಲ್ಲೆಡೆ ಇಂದು ರಾಮ ನಾಮ ಭಜನೆ ಜಪಿಸಲಿದೆ. ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿದೆ. ಇಡೀ ದಿನ ಭಕ್ತರು ಉಪವಾಸ ಇದ್ದು ವ್ರತ ಮಾಡಿ ಪಾನಕ, ಕೋಸಂಬರಿ, ಮಜ್ಜಿಗೆ ಸೇವಿಸಿದರೆ ಶುಭ ಆಗುತ್ತೆ ಅನ್ನೋ ನಂಬಿಕೆಯಿದೆ.

    ಒಂದೆಡೆ ದೇವಾಲಯಗಳಲ್ಲಿ ಜೈ ರಾಮ ಭಜನೆ ಮೊಳಗುತ್ತಿದ್ರೇ ಮತ್ತೊಂದೆಡೆ ರಾಮನವಮಿ ಅಂಗವಾಗಿ ಬೃಹತ್ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ನಗರದ ಕೋರಮಂಗಲದ ಎರಡನೇ ಕ್ರಾಸ್ ನಿಂದ ಸಂಜೆ 4 ಗಂಟೆಯಿಂದ ಆರಂಭವಾಗಲಿದೆ. ಇನ್ನೊಂದೆಡೆ ವಿಶ್ವ ಹಿಂದೂ ಪರಿಷದ್ ಹೆಬ್ಬಾಳ ಘಟಕದಿಂದಲೂ ರಾಮರಥ ಯಾತ್ರೆ ಶೋಭಾ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ರಥಯಾತ್ರೆ ಸಂಜೆ 4 ಕ್ಕೆ ಅಶ್ವಥನಗರದಿಂದ ಆರಂಭವಾಗಿ ಸಂಜಯನಗರ ಮುಖ್ಯರಸ್ತೆಯ ಮೂಲಕ ಸಾಗಿ ಭೂಪಸಂದ್ರದಲ್ಲಿ ಕೊನೆಯಾಗುವುದು.

    ಇತ್ತ ಇಂದಿನಿಂದ 2 ದಿನಗಳ ಕಾಲ ಗಾಳಿ ಆಂಜನೇಯ, ಸ್ಯಾಟಲೈಟ್ ಬಸ್ ನಿಲ್ದಾಣದ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧವಿದೆ. 2 ದಿನಗಳ ಕಾಲ ಗಾಳಿ ಆಂಜನೇಯ ದೇಗುಲದಲ್ಲಿ ರಥೋತ್ಸವ ನಡೆಯಲಿದ್ದು, 2 ದಿನ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬೇಕಿದೆ. ಇದನ್ನೂ ಓದಿ: ಸುರ್ಜೆವಾಲ ಟ್ವೀಟ್‌ಗೆ ಯಾವುದೇ ಕಿಮ್ಮತ್ತಿಲ್ಲ : ಬೊಮ್ಮಾಯಿ

    ಪರ್ಯಾಯ ಮಾರ್ಗ ಎಲ್ಲಿ..?
    * ಮೈಸೂರು ಕಡೆ ಹೋಗುವವರು ಹೊಸಗುಡ್ಡದಹಳ್ಳಿ ಜಂಕ್ಷನ್ ಬಳಿ ಎಡ ತಿರುವು – ಟಿಂಬರ್ ಯಾರ್ಡ್ ಬಡಾವಣೆ ಮೂಲಕ – ಹೊಸಕೆರೆಹಳ್ಳಿ ರಸ್ತೆ ಮಾರ್ಗವಾಗಿ – ಮೈಸೂರು ಕಡೆ ಹೋಗಬಹುದು.
    * ಬೆಂಗಳೂರು ಕಡೆ ಬರುವವರು ಕಿಂಕೋ ಜಂಕ್ಷನ್ ಬಳಿ ಎಡ ತಿರುವು – ಮೇಲ್ಸೇತುವೆ ಮೂಲಕ ಬಾಪೂಜಿ ಜಂಕ್ಷನ್ ಮೂಲಕ ನಗರಕ್ಕೆ ಎಂಟ್ರಿ

  • ಮಗು ಪ್ರವೇಶಿಸಿ ಅಪವಿತ್ರವಾಯ್ತೆಂದು ಪೋಷಕರಿಗೆ ದೇಗುಲ ಶುದ್ಧೀಕರಣದ ಜೊತೆಗೆ 10 ಸಾವಿರ ದಂಡ!

    ಮಗು ಪ್ರವೇಶಿಸಿ ಅಪವಿತ್ರವಾಯ್ತೆಂದು ಪೋಷಕರಿಗೆ ದೇಗುಲ ಶುದ್ಧೀಕರಣದ ಜೊತೆಗೆ 10 ಸಾವಿರ ದಂಡ!

    ಕೊಪ್ಪಳ: ದಲಿತರ ಮಗು ಪ್ರವೇಶಿಸಿ ಅಪವಿತ್ರ ಆಗಿದೆ ಎಂದು ಹೇಳಿ ದೇವಸ್ಥಾನ ಶುದ್ಧೀಕರಿಸಿದ್ದಲ್ಲದೇ ಮಗುವಿನ ಪೋಷಕರಿಗೆ ದೇವಸ್ಥಾನದ ಶುದ್ಧೀಕರಣ ಹೆಸರಲ್ಲಿ 10 ಸಾವಿರ ರೂಪಾಯಿ ದಂಡ ಹಾಕಲಾಗಿದೆ.

    ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೀಯಾಪೂರ ಗ್ರಾಮದಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಚನ್ನದಾಸರ ಸಮುದಾಯದ ಮಗು ಗ್ರಾಮದ ಆಂಜನೇಯ ದೇವಸ್ಥಾನ ಪ್ರವೇಶಿಸಿದೆ. ದಲಿತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ಸವರ್ಣಿಯರು ದೇವಸ್ಥಾನ ಶುದ್ದಿಕರಿಸಿದ್ದರು. ಜೊತೆಗೆ ದೇವಸ್ಥಾನ ಶುದ್ಧೀಕರಣದ ಖರ್ಚಿಗಾಗಿ 11 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್

    ಗ್ರಾಮದ ಸವರ್ಣಿಯರು ಸಭೆ ನಡೆಸಿ ದಂಡ ವಿಧಿಸಿದ್ದರು. ಇದನ್ನು ವಿರೋಧಿಸಿ ಚನ್ನದಾಸರ ಸಮುದಾಯ ಪ್ರತಿಭಟನೆ ಮಾಡಿತ್ತು. ದೇವಸ್ಥಾನ ಪ್ರವೇಶ ಮಾಡಿರೋ ದಲಿತ ಮಗುವಿನ ಕುಟುಂಬಕ್ಕೆ ದಂಡ ವಿಧಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಜೀವಂತ ಇರಿಸಿದ್ದು ತಡವಾಗಿ ಬೆಳಕಿಗೆ ಬಂದು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಭೆ ಮಾಡಿದ್ದಾರೆ. ಗ್ರಾಮಕ್ಕೆ ಕುಷ್ಟಗಿ ತಹಶೀಲ್ದಾರ ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಭೇಟಿ ನೀಡಿ ಸಭೆ ನಡೆಸಿದ್ದಾರೆ.

  • ಇತಿಹಾಸ ಪ್ರಸಿದ್ಧ ಬಯಲು ಆಂಜನೇಯ ದೇವಾಲಯದಲ್ಲಿ ಪೂಜೆ ಪುರಸ್ಕಾರ- ಭಕ್ತರ ಸಂಖ್ಯೆ ಇಳಿಕೆ

    ಇತಿಹಾಸ ಪ್ರಸಿದ್ಧ ಬಯಲು ಆಂಜನೇಯ ದೇವಾಲಯದಲ್ಲಿ ಪೂಜೆ ಪುರಸ್ಕಾರ- ಭಕ್ತರ ಸಂಖ್ಯೆ ಇಳಿಕೆ

    ನೆಲಮಂಗಲ: ಮುಜರಾಯಿ ಇಲಾಖೆಯ ಎ ಗ್ರೇಡ್ ಶ್ರೇಣಿಯ ಗೊಲ್ಲಹಳ್ಳಿ ಬಯಲು ಆಂಜನೇಯ ದೇವಾಲಯ ಮುಕ್ತವಾಗಿದೆ.

    ಕೋವಿಡ್ 19ನಿಂದ ಇಡೀ ರಾಜ್ಯವೇ ಲಾಕ್‍ಡೌನ್ ಆಗಿ, ಇಂದಿನಿಂದ ಅನ್‍ಲಾಕ್ ಆಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೇವಾಲಯಗಳು ದರ್ಶನಕ್ಕೆ ಮುಕ್ತವಾಗಿದೆ. ನೆಲಮಂಗಲ ಗ್ರಾಮಾಂತರ ಭಾಗದ, ಮುಜರಾಯಿ ಇಲಾಖೆಯ ಎ ಗ್ರೇಡ್ ಶ್ರೇಣಿಯ ರೈಲ್ವೆ ಗೊಲ್ಲಹಳ್ಳಿ (ಬೈರಶೆಟ್ಟಿಹಳ್ಳಿ) ಇತಿಹಾಸ ಪ್ರಸಿದ್ದ ಶ್ರೀ ಬೈಲಾಂಜನೇಯ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

    ಮುಜರಾಯಿ ಇಲಾಖೆ ದೇವಾಲಯವಾದ್ದರಿಂದ ಸರ್ಕಾರದ ಯೋಜನೆಗಳಿಗೆ ಒಳಪಡುವ ಗೊಲ್ಲಹಳ್ಳಿ ಆಂಜನೇಯ ದೇವಾಲಯದ ಬೆಳಗ್ಗೆಯೇ ದೇವಾಲಯ ಆವರಣ ಸ್ವಚ್ಚತೆಯಾಗಿದೆ. ಕೋವಿಡ್ ಹಿನ್ನೆಲೆ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಇಲ್ಲ ಎಂದು ಪ್ರಧಾನ ಅರ್ಚಕರಾದ ವಸಂತ್ ಕುಮಾರ್ ಹಾಗೂ ಪಾರಪತ್ತೇದಾರ ಶ್ರೀನಿವಾಸ್ ತಿಳಿಸಿದ್ದಾರೆ.

    ಕೋವಿಡ್ ನಿಯಮ ಎಚ್ಚರಿಕೆ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಆದರೆ ಮೊದಲ ದಿನವಾದ ಇಂದು ಭಕ್ತರ ಸಂಖ್ಯೆ ಕಡೆಮೆ ಇದ್ದು ಮುಂದಿನ ದಿನಗಳಲ್ಲಿ ಭಕ್ತರು ಬರುವ ವಿಶ್ವಾಸವನ್ನ ಅರ್ಚಕರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕೆಟ್ಟವರೊಂದಿಗೆ ಒಳ್ಳೆಯವರ ಸೇರ್ಪಡೆ – ಬಿಎಸ್‍ವೈ ವಿರುದ್ಧ ಗುಡುಗಿದ ಯತ್ನಾಳ್