Tag: aanjaneya

  • ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು: ಡಿಕೆಶಿಗೆ ಸುಧಾಕರ್ ತಿರುಗೇಟು

    ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು: ಡಿಕೆಶಿಗೆ ಸುಧಾಕರ್ ತಿರುಗೇಟು

    ಚಿಕ್ಕಬಳ್ಳಾಪುರ: ನಾನು ಆಂಜನೇಯ (Anjaneya)ನ ಭಕ್ತ ಅಂತ ಹೇಳಿಕೊಂಡರೆ ಸಾಲದು, ಆಂಜನೇಯನ ರೀತಿ ಕೆಲಸ ಮಾಡಬೇಕು ಎಂದು ಸಚಿವ ಸುಧಾಕರ್ (Dr. K Sudhakar) ಅವರು ಡಿಕೆ ಶಿವಕುಮಾರ್ (DK Shivakumar) ಅವರಿಗೆ ತಿರುಗೇಟು ನೀಡಿದ್ದಾರೆ.

    ಚಿಕ್ಕಬಳ್ಳಾಪುರದ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರದ ನಂತರ ಮಾತನಾಡಿದ ಸುಧಾಕರ್, ಹಿಂದೆಂದೂ ಕಾಣದಂತಹ ಸ್ಥಾನಗಳ ಏರಿಕೆ ಆಗಿ ಸ್ವಂತ ಬಲದಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಪರ ಅಲೆ ಇದೆ. ಮೋದಿ (Narendra Modi) ಬಂದ ಕಡೆ ಸ್ಥಾನಗಳ ಏರಿಕೆ ಆಗುತ್ತಿದೆ. ನರೇಂದ್ರ ಮೋದಿಯವರೇ ವಿಶ್ವಾಸ, ಬಿಜೆಪಿ (BJP) ಯೇ ಭರವಸೆ. ಡಬಲ್ ಇಂಜಿನ್ ಸರ್ಕಾರ ಡಬಲ್ ಸ್ಪೀಡ್ ಅಭಿವೃದ್ಧಿಗೆ ಜನರಿಗೆ ಬಿಜೆಪಿ ಒಂದೇ ಆಯ್ಕೆ ಎಂದರು.

    ಇದೇ ವೇಳೆ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಸಚಿವ ಸುಧಾಕರ್, ದೇಶದ್ರೋಹದ ಕೆಲಸ ಮಾಡಿದ್ರೆ ಅವರನ್ನು ನಿಷೇಧ ಮಾಡಬೇಕು. ದೇಶಪ್ರೇಮಿಯಾಗಿ ಒಳ್ಳೆಯ ಕೆಲಸ ಮಾಡಿದ್ರೆ ಅವರನ್ನು ಯಾಕೆ ನಿಷೇದ ಮಾಡ್ತಾರೆ. ಬಿಜೆಪಿಗೆ ಬಜರಂಗದಳಕ್ಕೂ ಹೋಲಿಕೆ ಮಾಡಲು ಆಗುತ್ತಾ..? ಪಿಎಫ್ ಐ ಉಗ್ರಗಾಮಿಗಳಿಗರ ಸಹಕಾರ ಕೊಡುವ ಸಂಘಟನೆನಾ ನಿಷೇಧ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ: ಹೆಚ್.ಡಿ.ದೇವೇಗೌಡ

    ಬಜರಂಗದಳ (Bajrangdal) ದ ಮೇಲೆ ದೇಶ ದ್ರೋಹದ ಪ್ರಕರಣಗಳಿದ್ರೆ ಹೇಳಲಿ. ಬಜರಂಗದಳ ಹಿಂದೂ ಸಂಘಟನೆ ಅನ್ನೋ ಕಾರಣಕ್ಕೆ ನಿಷೇಧ ಮಾಡ್ತೀರಾ..? ಹಾಗಾಗಿಯೇ ನೀವು ಬಹುಸಂಖ್ಯಾತ ಹಿಂದೂಗಳು ಛೀಮಾರಿ ಹಾಕಿರೋದು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನ ತಿರಸ್ಕಾರ ಮಾಡಿರೋದು. ಆಂಜನೇಯ ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯ ಮಾಡೋ ಕೆಲಸವನ್ನು ಡಿಕೆಶಿ ಮಾಡಬೇಕು ಅಂತ ಟಾಂಗ್ ನೀಡಿದ್ರು.

  • ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

    ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

    ಮುಂಬೈ: ಹನುಮನ ಜನ್ಮಸ್ಥಳ ಯಾವುದು..? ಅಂಜನಾದ್ರಿನಾ? ಅಂಜನೇರಿನಾ? ತಿರುಮಲನಾ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾಸಿಕ್‍ನಲ್ಲಿ ನಡೆಸಲಾದ ಧರ್ಮ ಸಂಸದ್‍ನಲ್ಲಿ ಭಾರೀ ಗಲಾಟೆ ನಡೆದಿದೆ.

    ಹನುಮ ಜನ್ಮಸ್ಥಳದ ವಿಚಾರದಲ್ಲಿ ಮಹಾರಾಷ್ಟ್ರ ಕ್ಯಾತೆ ತೆಗೆದಿದೆ. ಹಲವು ಸ್ವಾಮೀಜಿಗಳು, ಕಿಷ್ಕಿಂದೆಯ ಹನುಮಾನ್ ಜನ್ಮಭೂಮಿ ಕ್ಷೇತ್ರದ ಗೋವಿಂದಾನಂದ ಸ್ವಾಮೀಜಿ ವಿರುದ್ಧ ಮುಗಿಬಿದ್ದಿದ್ದಾರೆ. ಹಿಂದೆ ರಾವಣ ಸೀತೆಯನ್ನು ಹೊತ್ತೊಯ್ದಿದ್ದ, ಆದರೆ ಈಗ ನೀವು ಹನುಮಂತನ ಜನ್ಮಸ್ಥಳವನ್ನೇ ಹೈಜಾಕ್ ಮಾಡ್ತಿದ್ದೀರಿ ಅಂತಾ ಆರೋಪಿಸಿದ್ದಾರೆ. ಇದಕ್ಕೆ ಗೋವಿಂದಾನಂದ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

    ಸುಮ್ನೆ ಮಾತಾಡೋದಲ್ಲ, ದಾಖಲೆ ಕೊಡಿ ಅಂತಾ ಸವಾಲ್ ಹಾಕಿದ್ದಾರೆ. ಈ ಹಂತದಲ್ಲಿ, ಮಹಾಂತ ಸುಧೀರದಾಸರು, ಆದಿಗುರು ಶಂಕರಾಚಾರ್ಯರನ್ನು ಕಾಂಗ್ರೆಸ್ಸಿಗ ಎಂದಿದ್ದು ಕಿಷ್ಕಿಂದೆಯ ಗೋವಿಂದಾನಂದ ಸ್ವಾಮೀಜಿಯ ಆಗ್ರಹಕ್ಕೆ ಕಾರಣವಾಯ್ತು. ಕೂಡಲೇ ಕ್ಷಮೆಗೆ ಒತ್ತಾಯಿಸಿದ್ರು. ಈ ವೇಳೆ ಮಹಾಂತ ಸುಧೀರ್ ದಾಸರು, ಮೈಕ್ ಹಿಡಿದು ಹಲ್ಲೆಗೆ ಮುಂದಾದ್ರು. ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ಗೋವಿಂದಾನಂದ ಸ್ವಾಮೀಜಿ, ಸ್ವಾಮೀಜಿಗಳಿಗೆ ಅಪಮಾನ ಮಾಡ್ತೀರಾ..? ನೀವು ಈ ಧರ್ಮಸಂಸದ್‍ಗೆ ಕಳಂಕ.. ಕೂಡ್ಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದ್ರು.

    ಕೊನೆಗೆ ಉಳಿದವರು ಸಮಾಧಾನ ಮಾಡೋ ಕೆಲಸ ಮಾಡಿದ್ರು. ಆದರೆ ನಾನು ಹಲ್ಲೆ ಮಾಡಲು ಯತ್ನಿಸಿಲ್ಲ. ಅವರೇ ಹಲ್ಲೆ ಮಾಡಿದರು ಅಂತಾ ನಾಟಕ ಮಾಡಿದ್ದಾರೆ ಎಂದು ಸುಧೀರ್ ದಾಸರು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಧರ್ಮಸಂಸದ್‍ನಲ್ಲಿ ಭಾಗವಹಿಸದಂತೆ ಗೋವಿಂದಾನಂದ ಸ್ವಾಮೀಜಿಗೆ ತಡೆ ಒಡ್ಡಲು ಮಹಾರಾಷ್ಟ್ರ ಪೊಲೀಸರು ನೋಡಿದ್ರು. ನೀವು ಹನುಮನ ಜನ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿದ್ದೀರಿ. ಇದರಿಂದ ಅಂಜನೇರಿ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ನೀವು ಧರ್ಮಸಂಸದ್‍ನಲ್ಲಿ ಭಾಗವಹಿಸಬೇಡಿ. ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ರು.

    ಇದಕ್ಕೆ ಡೋಂಟ್‍ಕೇರ್ ಎಂದ ಸ್ವಾಮೀಜಿ ಧರ್ಮಸಂಸದ್‍ನಲ್ಲಿ ಪಾಲ್ಗೊಂಡ್ರು. ಆದರೆ ಅಲ್ಲೂ ಮಹಾರಾಷ್ಟ್ರದ ಸ್ವಾಮೀಜಿಗಳು ಕಿರಿಕ್ ಮಾಡಿದ್ರು. ಕೊನೆಗೆ ಸಭೆಯೂ ಅರ್ಧಕ್ಕೆ ಮೊಟಕಾಯ್ತು.

  • ಆಂಜನೇಯ ದೇಗುಲಕ್ಕೆ ಬೆಂಕಿ ಹಚ್ಚಿ ವಿಗ್ರಹ ಜಖಂ ಮಾಡಿದ ಕಿಡಿಗೇಡಿಗಳು!

    ಆಂಜನೇಯ ದೇಗುಲಕ್ಕೆ ಬೆಂಕಿ ಹಚ್ಚಿ ವಿಗ್ರಹ ಜಖಂ ಮಾಡಿದ ಕಿಡಿಗೇಡಿಗಳು!

    ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರ ಬಳಿ ಆಂಜನೇಯ ದೇಗುಲಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತಡ ರಾತ್ರಿ ನಡೆದಿದೆ.

    ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಾಸ್ ಟೋಲ್ ಬಳಿ ಇರುವ ಸರ್ಕಲ್ ಆಂಜನೇಯ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ ಕಿಡಿಗೇಡಿಗಳು ವಿಗ್ರಹವನ್ನು ಜಖಂ ಮಾಡಿ ಹೀನ ಕೃತ್ಯ ವೆಸಗಿದ್ದಾರೆ. ದೇವರ ವಿಗ್ರಹ ಹಾಗೂ ಸಂಪೂರ್ಣ ದೇವಾಲಯ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.

    ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯವನ್ನು ಖಂಡಿಸಿದ ಹಲವಾರು ಮುಖಂಡರು ಮತ್ತು ಸಂಘಟನೆಗಳು, ಈ ಘಟನೆಯನ್ನು ಪೊಲಿಸರು ಮತ್ತು ತಾಲೂಕು ಆಡಳಿತ ಗಂಭೀರವಾಗಿ ತೆಗೆದುಕೊಂಡು ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು. ಕೋಮು ಸೌರ್ಹಾದತೆಯನ್ನು ಯಾರು ಕದಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ಆಂಜನೇಯನಿಗೆ ಕಂಟಕವಾದ ನಮ್ಮ ಮೆಟ್ರೋ ಯೋಜನೆ

    ಆಂಜನೇಯನಿಗೆ ಕಂಟಕವಾದ ನಮ್ಮ ಮೆಟ್ರೋ ಯೋಜನೆ

    – 3 ಹನುಮನ ಮಂದಿರದ ಮೇಲೆ ಮೆಟ್ರೋ ಸವಾರಿ

    ಬೆಂಗಳೂರು: ಪವನ ಪುತ್ರ ಹನುಮಂತ ಭಕ್ತರಿಗೆ ದರ್ಶನ ನೀಡುತ್ತಾ ಶಾಂತವಾಗಿ ನೆಲೆಸಿದ್ದನು. ಭಕ್ತರು ಕೂಡ 150 ವರ್ಷಗಳಿಂದ ಈ ಆಂಜನೇಯನನ್ನ ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ಈ ಹನುಮಂತನಿಗೆ ಮೆಟ್ರೋ ಕಂಟಕ ಎದುರಾಗಿದೆ.

    ಬೆಂಗಳೂರಿನ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಆದಷ್ಟು ಬೇಗ ಮೆಟ್ರೋ ಟ್ರೈನ್ ಟ್ರ್ಯಾಕ್‍ಗೆ ಇಳಿಸೋ ಧಾವಂತದಲ್ಲಿ ನಮ್ಮ ಮೆಟ್ರೋ ನಿಗಮ ಇದೆ. ಆದರೆ ಮೆಟ್ರೋ ವೇಗಕ್ಕೆ ಭಜರಂಗಿ ತಡೆಯೊಡ್ಡಿದ್ದಾನೆ. ಹೀಗಾಗಿ ಆಂಜನೇಯನ ಗುಡಿಯ ಮೇಲೆಯೇ ಮೆಟ್ರೋ ಸವಾರಿ ಮಾಡಲು ತಯಾರಿ ನಡೆಸಿದೆ. ಗಾರ್ವೇಭಾವಿಪಾಳ್ಯ, ಬೊಮ್ಮನಹಳ್ಳಿ ಹಾಗೂ ರೂಪೇನ ಅಗ್ರಹಾರದಲ್ಲಿ ಮೂರು ಆಂಜನೇಯನ ಸನ್ನಿಧಿಗಳಿವೆ. ಈ ಮೂರು ಆಂಜನೇಯನ ಗುಡಿಯನ್ನ ಕೆಡವಲು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್) ಈಗ ಸ್ಕೆಚ್ ಹಾಕಿದೆ ಎಂದು ಅರ್ಚಕ ವಿಠಲ್ ರಾಜ್ ಆರೋಪಿಸಿದ್ದಾರೆ.

    ಗಾರ್ವೇಭಾವಿಪಾಳ್ಯದಲ್ಲಿರೋ ಆಂಜನೇಯನ ಗುಡಿ ಅತ್ಯಂತ ಪುರಾತನವಾಗಿದ್ದು, ಸರಿಸುಮಾರು 150 ವರ್ಷದಷ್ಟು ಹಳೆಯದು ಎನ್ನಲಾಗುತ್ತಿದೆ. ಅಲ್ಲದೆ ಈ ಹಿಂದೆ ಮೆಟ್ರೋ ಪ್ಲಾನ್ ಪ್ರಕಾರ ಗುಡಿ ತೆರವು ಮಾಡುವುದಿಲ್ಲ ಎಂದು ಮೆಟ್ರೋ ಅಭಯ ನೀಡಿತ್ತು. ಆದರೆ ಇದೀಗ ಏಕಾಏಕಿ ದೇವಸ್ಥಾನ ತೆರವಿಗೆ ಮುಂದಾಗಿರೋ ಮೆಟ್ರೋ ಕ್ರಮವನ್ನ ಭಕ್ತರು ಸೇರಿ ದೇವಸ್ಥಾನ ಆಡಳಿತ ಮಂಡಳಿ ಖಂಡಿಸಿದೆ. ಯಾವುದೇ ಕಾರಣಕ್ಕೂ ದೇವಸ್ಥಾನ ತೆರವಿಗೆ ಬಿಡೋದಿಲ್ಲ ಎಂದು ಭಕ್ತಾದಿಗಳು ಎಚ್ಚರಿಸಿದ್ದಾರೆ.

    ಒಟ್ಟಿನಲ್ಲಿ ಈ ಮಾರ್ಗದ ಟ್ರಾಫಿಕ್ ನಿಯಂತ್ರಿಸಲು ಮೆಟ್ರೋ ಅನಿವಾರ್ಯ. ಆದರೆ ಈಗ ಅನಾದಿಕಾಲದಿಂದಲೂ ಜನರು ಪೂಜಿಸಿಕೊಂಡು ಬಂದ ಗುಡಿ ತೆರವು ಮಾಡೋಕೆ ಮುಂದಾಗಿರೋದು ವಿವಾದಕ್ಕೆ ಕಾರಣವಾಗಿದೆ. ಈ ವಿವಾದದಲ್ಲಿ ಆಂಜನೇಯನ ಭಕ್ತರು ಗೆಲ್ತಾರಾ ಇಲ್ಲ, ಹನುಮನ ಗುಡಿಯ ಮೇಲೆ ಮೆಟ್ರೋ ಸವಾರಿ ಮಾಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

  • ತಡರಾತ್ರಿ ಡಿಕೆಶಿ ಆಪ್ತ ಸಹಾಯಕನಿಗೆ ಇಡಿ ಫುಲ್ ಡ್ರಿಲ್

    ತಡರಾತ್ರಿ ಡಿಕೆಶಿ ಆಪ್ತ ಸಹಾಯಕನಿಗೆ ಇಡಿ ಫುಲ್ ಡ್ರಿಲ್

    ನವದೆಹಲಿ: ಹವಾಲ ಹಣ ಸಂಬಂಧ ಡಿಕೆಶಿ ಆಪ್ತ ಸಹಾಯಕ ಆಂಜನೇಯ ಅವರನ್ನು ತಡರಾತ್ರಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

    ತಡರಾತ್ರಿ 12 ಗಂಟೆಯ ನಂತರ ಲೋಕನಾಯಕ ಭವನದ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಸುಮಾರು 4-5 ಗಂಟೆಗಳ ಕಾಲ ಆಂಜನೇಯ ಅವರನ್ನು ಇಡಿ ಅಧಿಕಾರಿಗಳು ಫುಲ್ ಡ್ರಿಲ್ ಮಾಡಿದ್ದಾರೆ. ಆಂಜನೇಯ ಈ ಹಿಂದೆ ಐಟಿ ಮುಂದೆ ಹೇಳಿಕೆ ಬದಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಂಜನೇಯ ಅವರನ್ನೇ ಇಡಿ ಅಧಿಕಾರಿಗಳು ಮೊದಲು ಟಾರ್ಗೆಟ್ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಡಿಕೆಶಿಯವರು ದೆಹಲಿಗೆ ಬಂದಾಗ ಅವರ ಎಲ್ಲಾ ವಹಿವಾಟುಗಳನ್ನು ಆಂಜನೇಯ ಅವರೇ ನೋಡಿಕೊಳ್ಳುತ್ತಿದ್ದರು. ಕರ್ನಾಟಕ ಭವನದ ಉದ್ಯೋಗಿಯಾಗಿರುವ ಆಂಜನೇಯ ಅವರು, ಬಹಳ ವರ್ಷಗಳಿಂದ ಡಿಕೆಶಿಯವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಡಿಕೆಶಿಯವರ ದೆಹಲಿಯಲ್ಲಿ ನಡೆಯುವಂತಹ ಎಲ್ಲಾ ವ್ಯವಹಾರಗಳು ಅಂಜನೇಯ ಅವರಿಗೆ ಗೊತ್ತಿತ್ತು.

    ಈ ಹಿಂದೆ ಡಿಕೆಶಿ ಮನೆ ಮೇಲೆ ಐಟಿ ದಾಳಿಯಾದ ಸಂದರ್ಭದಲ್ಲಿ ಆಂಜನೇಯ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಆಂಜನೇಯ ಅವರ ಮನೆಯಲ್ಲೂ ನಗದು ಹಣದ ಜೊತೆಗೆ ವ್ಯವಹಾರಿಕೆ ಪತ್ರಗಳೂ ಲಭಿಸಿತ್ತು. ಹೀಗಾಗಿ ಆಂಜನೇಯ ಅವರನ್ನೇ ಮೊದಲ ಟಾರ್ಗೆಟ್ ಮಾಡಲಾಗಿದೆ.

    ಒಟ್ಟಿನಲ್ಲಿ ಡಿಕೆಶಿ ಅವರ ದೆಹಲಿಯ ಎಲ್ಲಾ ವ್ಯವಹಾರಗಳು ಗೊತ್ತಿರುವುದರಿಂದ ಆಂಜನೇಯ ಅವರನ್ನು ವಿಚಾರಣೆ ನಡೆಸಿದರೆ ಮತ್ತಷ್ಟು ಸುಳಿವು, ದಾಖಲೆಗಳು ಸಿಗಬಹುದೆಂದು ಇಡಿ ಲೆಕ್ಕಾಚಾರವಾಗಿದೆ. ಹೀಗಾಗಿ ಡಿಕೆಶಿಯನ್ನು ಕಷ್ಟಡಿಗೆ ತೆಗೆದುಕೊಂಡ ಮೊದಲ ದಿನವೇ ರಾತ್ರಿ ಇಡಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.

  • ಮಹಾರಾಷ್ಟ್ರದಲ್ಲಿ ಮಳೆ ನಿಲ್ಲಲು ಆಂಜನೇಯನ ಮೊರೆ ಹೋದ ಬಾಗಲಕೋಟೆ ಗ್ರಾಮಸ್ಥರು

    ಮಹಾರಾಷ್ಟ್ರದಲ್ಲಿ ಮಳೆ ನಿಲ್ಲಲು ಆಂಜನೇಯನ ಮೊರೆ ಹೋದ ಬಾಗಲಕೋಟೆ ಗ್ರಾಮಸ್ಥರು

    ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯ ಗ್ರಾಮಸ್ಥರು ಆಂಜನೇಯನ ಮೊರೆ ಹೋಗಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮಸ್ಥರು ಮಹಾರಾಷ್ಟ್ರದಲ್ಲಿ ಮಳೆ ನಿಲ್ಲಲಿ ಎಂದು ಆಂಜನೇಯನ ಬಳಿ ಬೇಡಿಕೊಂಡಿದ್ದಾರೆ. ಮಹಾ ಮಳೆ ನಿಲ್ಲಲಿ, ಕೃಷ್ಣಾ ನದಿಯ ಪ್ರವಾಹ ತಗ್ಗಲಿ ಎಂದು ಗ್ರಾಮಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಂಜನೇಯನಿಗೆ ಕರ್ಪೂರ, ಊದುಬತ್ತಿ ಹಾಗೂ ಕಾಯಿ ಒಡೆದು ಬೇಡಿಕೊಂಡಿದ್ದಾರೆ.

    ಜಮಖಂಡಿ ತಾಲೂಕಿನ 15ಕ್ಕೂ ಹೆಚ್ವು ಹಳ್ಳಿಗಳು ಜಲಾವೃತವಾಗಿ, ಅಪಾರ ಪ್ರಮಾಣದ ಕಬ್ಬು ಬೆಳೆ ನಾಶವಾಗಿದೆ. ಜಮಖಂಡಿ ಜತ್ತ ರಾಜ್ಯ ಹೆದ್ದಾರಿ ಬಂದ್ ಆಗಿದ್ದರಿಂದ ಜನರಿಗೆ ಆತಂಕ ಎದುರಾಗಿದೆ.

    ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ರಸ್ತೆ ಸೇತುವೆ ವ್ಯಾಪ್ತಿಯಲ್ಲಿ ಸೋಮವಾರದಿಂದಲೇ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದರೂ ಜನ ನಿಷೇಧಾಜ್ಞೆಯನ್ನು ಉಲ್ಲಂಘಿಸುತ್ತಿದ್ದು, ಗುಂಪು ಗುಂಪಾಗಿ ಸೇತುವೆ ಮೇಲೆ ಸಂಚರಿಸುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ನಿಷೇಧಾಜ್ಞೆ ಇದ್ದರೂ ಜಲಾಶಯದ ಪಕ್ಕದ ನೀರಲ್ಲಿ ಸ್ಥಳೀಯರು ಈಜಾಡಿದ್ದಾರೆ.

    ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಚಿಕ್ಕಪಡಸಲಗಿ ರಸ್ತೆ ಸೇತುವೆ ಜಲಾವೃತವಾಗಲು ಒಂದೂವರೆ ಅಡಿ ಮಾತ್ರ ಬಾಕಿ ಇದೆ. ಹುಬ್ಬಳ್ಳಿ-ವಿಜಯಪುರ ರಾಜ್ಯ ಹೆದ್ದಾರಿ 34 ರ ರಸ್ತೆ ಸೇತುವೆಗೆ ತೆರೆಗಳು ರಭಸವಾಗಿ ಅಪ್ಪಳಿಸುತ್ತಿದೆ.

    ಇಷ್ಟು ಮಾತ್ರವಲ್ಲದೆ ಜಮಖಂಡಿ ತೀರದ ಕೃಷ್ಣಾ ನದಿಯಲ್ಲಿ ಹೆಚ್ಚಾದ ಪ್ರವಾಹದಿಂದಾಗಿ ಶೂರ್ಪಾಲಿ ಗ್ರಾಮದ ಪ್ರಸಿದ್ಧ ಐತಿಹಾಸಿಕ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಜಲಾವೃತವಾಗಿದೆ. ನೀರು ಹೆಚ್ಚಾದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತ ನಿರ್ಮಿಸಿದ್ದ ತಡೆಗೋಡೆ ಮೂಲಕ ನೀರು ಹರಿಯುತ್ತಿದ್ದು, ನೀರು ಇಡೀ ದೇವಸ್ಥಾನವನ್ನ ಆವರಿಸಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ನೀರಿನಿಂದಾಗಿ ಜನ ಆತಂಕಕ್ಕೀಡಾಗಿದ್ದಾರೆ.


    ಮುಧೋಳ ತಾಲೂಕಿನಲ್ಲೂ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ತಾಲೂಕಿನ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಅಂದಾಜು 10 ಅಡಿ ನೀರು ಹೆಚ್ಚಳವಾಗಿದೆ. ಪರಿಣಾಮ ನದಿ ಪಾತ್ರದ ಗ್ರಾಮಗಳಲ್ಲಿ ಜನ ಭಯಭೀತರಾಗಿದ್ದಾರೆ.

  • ಶಿರೂರುಶ್ರೀಗಳ ಹುಟ್ಟುಹಬ್ಬಕ್ಕೆ ಶಿವಮಣಿ ಡ್ರಮ್ ಬೀಟ್- ಸಂಗೀತ ಗುರುಕುಲಕ್ಕೆ ಶಂಕುಸ್ಥಾಪನೆ

    ಶಿರೂರುಶ್ರೀಗಳ ಹುಟ್ಟುಹಬ್ಬಕ್ಕೆ ಶಿವಮಣಿ ಡ್ರಮ್ ಬೀಟ್- ಸಂಗೀತ ಗುರುಕುಲಕ್ಕೆ ಶಂಕುಸ್ಥಾಪನೆ

    ಉಡುಪಿ: ಇಲ್ಲಿನ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ತನ್ನ ಜನ್ಮ ನಕ್ಷತ್ರವನ್ನು ವಿಭಿನ್ನವಾಗಿ ಆಚರಿಸಿಕೊಂಡರು. ವಿಶ್ವದ ಖ್ಯಾತ ಡ್ರಮ್ಮರ್ ಶಿವಮಣಿ ಮಠಕ್ಕೆ ಬಂದು ಸ್ವಾಮೀಜಿಯ ಜನ್ಮನಕ್ಷತ್ರದಲ್ಲಿ ಪಾಲ್ಗೊಂಡರು.

    ಉಡುಪಿಯ ಕೃಷ್ಣಮಠದ ಅಧೀನದಲ್ಲಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಧಾರ್ಮಿಕ ಕಾರ್ಯಕ್ರಮದ ಜೊತೆ ಸಾಂಸ್ಕೃತಿಕವಾಗಿಯೂ ತೊಡಗಿಸಿಕೊಂಡವರು. ಈ ಬಾರಿಯ ತನ್ನ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡರು. ಡ್ರಮ್ಸ್ ಮಾಂತ್ರಿಕ ಶಿವಮಣಿಯೇ ಮಠಕ್ಕೆ ಬಂದು ಮುಖ್ಯಪ್ರಾಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸ್ವಾಮೀಜಿಗೆ ಅಮೆರಿಕದಿಂದ ತಂದ ವಾಚನ್ನು ಗಿಫ್ಟ್ ಮಾಡಿದ್ರು. ಶಿರೂರು ಮಠದ ಆವರಣದಲ್ಲಿ ಶಿವಮಣಿಯ ನೇತೃತ್ವದಲ್ಲಿ ಆರಂಭವಾಗಲಿರುವ ಡ್ರಮ್ಸ್ ತರಬೇತಿ ಕೊಡುವ ಗುರುಕುಲಕ್ಕೆ ಅಡಿಗಲ್ಲು ಹಾಕಿದ್ದಾರೆ.

    ಮಠಕ್ಕೆ ಆಗಮಿಸಿದ ಶಿವಮಣಿ ಸುಮಾರು ಅರ್ಧಗಂಟೆಗಳ ಕಾಲ ಡ್ರಮ್ಸ್ ಬಾರಿಸಿದರು. ಭಾರತದ ಹಲವು ರಾಜ್ಯಗಳ ಬೀಟ್ಗಳನ್ನು ನುಡಿಸಿದರು. ಶಿರೂರು ಸ್ವಾಮೀಜಿ ಶಿವಮಣಿಯ ಬೀಟ್ ಗೆ ಸಾಥ್ ನೀಡಿದರು. ಸ್ವಾಮೀಜಿಗೆ ಶಿವಮಣಿ ಶುಭಕೋರಿದರು. ಆಂಜನೇಯನ ಸನ್ನಿಧಿಯಲ್ಲಿ ಕಲಾ ಪ್ರದರ್ಶನ ಮಾಡಿದ್ದು ಪುಣ್ಯದ ಕೆಲಸ ಅಂತ ಹೇಳಿದರು.

    ಡ್ರಮ್ಮರ್ ಶಿವಮಣಿ ಈ ಸಂದರ್ಭ ಮಾತನಾಡಿ, ಸ್ವಾಮೀಜಿಗೆ ಶುಭಾಷಯ. ಆಂಜನೇಯ ಸ್ವಾಮೀಜಿ ಮುಂದೆ ನಾನು ಕಾರ್ಯಕ್ರಮ ಕೊಟ್ಟದ್ದು ಬಹಳ ಖುಷಿಯಾಗಿದೆ. ಸ್ವಾಮೀಜಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಸಂಗೀತ ಗುರುಕುಲ ಸ್ವಾಮೀಜಿಯ ಕನಸು. ಅದನ್ನು ಆದಷ್ಟು ಬೇಗ ಸಾಕಾರ ಮಾಡುತ್ತೇನೆ. ನನ್ನ ಡ್ರಮ್ಮರ್ ಗಳ ತಂಡ ಇಲ್ಲೇ ಇದ್ದು ಶಾಲೆಯನ್ನು ನಡೆಸುತ್ತದೆ. ನಾನು ಕೂಡಾ ಆಗಾಗ ಬಂದು ಪಾಠ ಮಾಡುತ್ತೇನೆ. ಸಂಗೀತ ಅನ್ನೋದು ಒಂದು ಸಾಗರ. ಕಲಿತು ಮುಗಿಯುವಂತದ್ದಲ್ಲ. ಶಿರೂರಿನ ಸಂಗೀತ ಶಾಲೆಗೆ ಭೂಮಿ ಪೂಜೆ ಆಗಿದೆ. 2-3 ವರ್ಷದಲ್ಲಿ ಗುರುಕುಲ ಆರಂಭವಾಗುತ್ತದೆ. ಸ್ವಾಮೀಜಿ ಜೊತೆ ಹಲವಾರು ವರ್ಷಗಳಿಂದ ಒಡನಾಟ ಇದೆ. ಅವರು ಕೂಡಾ ಸಂಗೀತಗಾರ ಎಂಬೂದೇ ಖುಷಿ ಎಂದರು.

    ಲಕ್ಷ್ಮೀವರತೀರ್ಥ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಮನಸ್ಸಿಗೆ ಶಾಂತಿ ಮುಖ್ಯ. ಸಂಗೀತ ಶಾಂತಿಯನ್ನು ಕೊಡುತ್ತದೆ. ನನ್ನ ಜನ್ಮ ನಕ್ಷತ್ರಕ್ಕೆ ಬಂದಿರುವುದು ಬಹಳ ಖುಷಿ ಕೊಟ್ಟಿದೆ. ದೇವರಿಗೂ ಸಂಗೀತ ಬಹಳ ಇಷ್ಟ. ಹಾಡು ಹಾಡಿ, ಗಂಟೆ ಬಾರಿಸಿ ದೇವರನ್ನು ಸಂತೃಪ್ತಿಗೊಳಿಸುತ್ತೇವೆ. ಶಿವಮಣಿಗೆ ವಿಶ್ವವೇ ಮನ್ನಣೆ ಕೊಟ್ಟಿದೆ. ಅವರು ಇಲ್ಲಿ ಬಂದು ಸಂಗೀತ ಗುರುಕುಲಕ್ಕೆ ಅಡಿಗಲ್ಲು ಹಾಕಲಾಗಿದೆ. ಮುಖ್ಯಪ್ರಾಣನ ಸನ್ನಿಧಾನಕ್ಕೆ ಬಂದಿದ್ದು ನನಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.

    ಶಿರೂರು ಮಠದ ಪಿಯು ಕಾಲೇಜು, ಗೋಶಾಲೆಗೆ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಲಾಯ್ತು. ಉಡುಪಿಯ ಸಂವೇದನಾ ಫೌಂಡೇಶನ್ಗೆ ಶಿರೂರು ಮಠದ 13 ಎಕ್ರೆ ಜಮೀನನ್ನು ಕಾಡು ಬೆಳೆಸಲು ದಾನ ನೀಡಿದರು. ಈ ಜಮೀನಿನಲ್ಲಿ ಹಣ್ಣುಹಂಪಲುವಿನ ಗಿಡಗಳು, ಮರಗಳನ್ನು ಬೆಳೆಸಲಾಗುತ್ತದೆ.

    ಶಿವಮಣಿಯ ಹುಟ್ಟುಹಬ್ಬಕ್ಕೆ ಉಡುಪಿ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಶಿವಮಣಿ ಭೇಟಿಕೊಟ್ಟು ಸಂಗೀತ ಸೇವೆ ನೀಡುತ್ತಾರೆ. ಈ ಬಾರಿ ಶಿರೂರು ಸ್ವಾಮೀಜಿಯ ಹುಟ್ಟುಹಬ್ಬಕ್ಕೆ ಶಿವಮಣಿ ಬಂದರು. ಶಿರೂರು ನೂರಾರು ಮಂದಿ ಶಿವಮಣಿಯ ಡ್ರಮ್ಸ್ ವಾದನ ಕಣ್ತುಂಬಿಕೊಂಡರು.

  • ದೇಶ ಕಟ್ಟಿದ್ದು, ಬೆಳೆಸಿದ್ದು ಕಾಂಗ್ರೆಸ್, ಸರ್ಕಾರದ ಅಭಿವೃದ್ಧಿಗೆ ಜನ್ರ ಮತ: ಆಂಜನೇಯ

    ದೇಶ ಕಟ್ಟಿದ್ದು, ಬೆಳೆಸಿದ್ದು ಕಾಂಗ್ರೆಸ್, ಸರ್ಕಾರದ ಅಭಿವೃದ್ಧಿಗೆ ಜನ್ರ ಮತ: ಆಂಜನೇಯ

    ಬೆಂಗಳೂರು: ವಿಧಾನಸಭಾ ಕಲಾಪ ನಡೆಯುತ್ತಿದ್ದ ವೇಳೆಯಲ್ಲೇ ಕಾಂಗ್ರೆಸ್ ಮೇಲೆ ಸಾಕಷ್ಟು ಅಪಪ್ರಚಾರ ನಡೆಸಲಾಗಿತ್ತು. ಜನರು ಇದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ. ಜನ ಯಾವುದಕ್ಕೂ ಕಿವಿಗೊಡದೆ ಕಾಂಗ್ರೆಸ್‍ಗೆ ಮತಹಾಕಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರದ ಅಭಿವೃದ್ಧಿ ಗೆ ಮತದಾರರು ಮಣೆ ಹಾಕಿದ್ದಾರೆ ಅಂತಾ ಸಚಿವ ಆಂಜನೇಯ ಹೇಳಿದ್ದಾರೆ.

    ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಂಜನಗೂಡು, ಗುಂಡ್ಲುಪೇಟೆ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳನ್ನ ಜನರು ಒಪ್ಪಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ದೇಶ ಕಟ್ಟಿದ್ದು, ಬೆಳೆಸಿದ್ದು ಕಾಂಗ್ರೆಸ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ಬಿಜೆಪಿಯವರು ಈ ಫಲಿತಾಂಶದಿಂದ ಇದನ್ನ ಅರ್ಥ ಮಾಡಿಕೊಳ್ಳಬೇಕು ಅಂತಾ ಹೇಳಿದ್ರು.

    ಸಂಭ್ರಮಾಚರಣೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಸಿಎಂ ಮನೆ ಮುಂದೆ ಸಿಹಿ ಹಂಚಿ ಸಂಭ್ರಮಿಸಿದ್ರು. ಅಲ್ಲದೇ ಕಾವೇರಿ ನಿವಾಸದ ಮುಂದೆ ಪಟಾಕಿ ಸಿಡಿಸಿ ಗೆಲುವನ್ನು ಆಚರಿಸಲು ಮುಂದಾದಗ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಘೋಷಣೆ ಕೂಗುವ ಮೂಲಕ ಸಂತಸ ವ್ಯಕ್ತಪಡಿಸಿದ್ರು.