Tag: aanand singh

  • ಸಚಿವ ಆನಂದ್ ಸಿಂಗ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಅಜಯ್ ರಾವ್!

    ಸಚಿವ ಆನಂದ್ ಸಿಂಗ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಅಜಯ್ ರಾವ್!

    ಬಳ್ಳಾರಿ: ನಟ ಅಜಯ್ ರಾವ್ ಅವರು ಅರಣ್ಯ ಸಚಿವ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಹೌದು. ವಿಜಯನಗರ ಜಿಲ್ಲೆಯಾಗುತ್ತಿರುವುದಕ್ಕೆ ನಟ ಅಜಯ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿರುವ ಆನಂದ್ ಸಿಂಗ್ ಅಚೇರಿಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಮೂಲತಃ ಹೊಸಪೇಟೆಯ ನಿವಾಸಿಯಾಗಿರುವ ಅಜಯ್ ರಾವ್, ಹೊಸಪೇಟೆ ಕೇಂದ್ರಿತ ವಿಜಯನಗರ ಜಿಲ್ಲೆ ರಚನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಜಿಲ್ಲೆ ಘೋಷಣೆಯಾಗುವ ಮೂಲಕ ವಿಜಯನಗರ ಗತವೈಭವ ಮರಳಿ ಬಂದಂತಾಗಿದೆ. ನಾನು ಕೂಡ ಹೊಸಪೇಟೆ ನಗರದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.

    ನನ್ನ ಹೂಟ್ಟೂರು ಹೊಸಪೇಟೆ ಈಗ ವಿಜಯನಗರ ಜಿಲ್ಲೆಯಾಗುತ್ತಿರುವುದು ಹೆಮ್ಮೆಯ ವಿಷಯ. ಸರ್ಕಾರ ಆದಷ್ಟು ಬೇಗ ಫೈನಲ್ ನೋಟಿಫಿಕೇಷನ್ ಸಹ ಹೊರಡಿಸಲಿ. ಫೈನಲ್ ನೋಟಿಫಿಕೇಷನ್ ಗಾಗಿ ಎದುರು ನೋಡುತ್ತಿರುವೆ. ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ನಾನು ಕೂಡ ಕೈ ಜೋಡಿಸುವೆ ಎಂದು ನಟ ಭರವಸೆ ನೀಡಿದ್ದಾರೆ.

  • ಬಳ್ಳಾರಿಯಲ್ಲಿ ಸದ್ಯ ನೋ ಲಾಕ್‍ಡೌನ್: ಆನಂದ್ ಸಿಂಗ್

    ಬಳ್ಳಾರಿಯಲ್ಲಿ ಸದ್ಯ ನೋ ಲಾಕ್‍ಡೌನ್: ಆನಂದ್ ಸಿಂಗ್

    ಬಳ್ಳಾರಿ: ಜಿಲ್ಲೆಯಲ್ಲಿ ಸದ್ಯಕ್ಕೆ ನೋ ಲಾಕ್‍ಡೌನ್. ಲಾಕ್‍ಡೌನ್ ವಿಧಿಸಲಾಗಿರುವ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಹರಡುವಿಕೆಯ ಪ್ರಮಾಣದಲ್ಲಿ ಆಗುವ ಬದಲಾವಣೆಗಳನ್ನು ಪರಿಶೀಲಿಸಲಾಗುತ್ತದೆ. ನಂತರ ನಮ್ಮಲ್ಲಿ ಅದನ್ನು ಜಾರಿಗೆ ತರಬೇಕೇ, ಬೇಡ್ವೆ ಎಂಬುದನ್ನು ಇನ್ನೊಂದು ವಾರ ಕಾದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್ ಆನಂದ್ ಸಿಂಗ್ ಹೇಳಿದ್ದಾರೆ.

    ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಕೊರೊನಾ ಸ್ಥಿತಿಗತಿ ಮತ್ತು ಸೋಂಕು ಹರಡುವಿಕೆಗೆ ಸಂಬಂಧಿಸಿದಂತೆ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬಳ್ಳಾರಿ ಜಿಲ್ಲೆಯಲ್ಲಿ ಇನ್ನೂ 15 ದಿನಗಳ ಕಾಲ ಕೊರೊನಾ ಸೋಂಕಿತರ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದರು.

    ಲಾಕ್‍ಡೌನ್ ವಿಧಿಸಿದ ಸಂದರ್ಭದಲ್ಲಿ ಜನರು ಅನುಭವಿಸಿದ ಪಾಡು ದೇವರೇ ಬಲ್ಲ ಎಂಬಂತಾಗಿತ್ತು. ಮತ್ತೆ ಪ್ರತಿನಿತ್ಯ ದುಡಿದು ತಮ್ಮ ಜೀವನ ನಡೆಸುವ ಜನರನ್ನು ಕಷ್ಟಕ್ಕೆ ತಳ್ಳಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.