ಬಾಲಿವುಡ್ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟು ಹಬ್ಬವನ್ನು ಕುಟುಂಬದ ಜತೆ ಇರಾ ಖಾನ್ ಆಚರಿಸಿಕೊಂಡಿದ್ರು. ಬಿಕಿನಿ ಧರಿಸಿದ ಲುಕ್‌ನಲ್ಲೇ ಕೇಕ್ ಕಟ್ ಮಾಡಿದ್ರು. ಆ ಫೋಟೋಗಳು ಸಖತ್ ಟ್ರೋಲ್ ಆಗಿತ್ತು. ಇದೀಗ ಮತ್ತಷ್ಟು ಫೋಟೋಗಳನ್ನು ಹರಿಬಿಟ್ಟು ಟ್ರೋಲಿಗರಿಗೆ ಇರಾ ಖಾನ್ ತಿರುಗೇಟು ನೀಡಿದ್ದಾರೆ.
View this post on Instagram
ಇರಾ ಖಾನ್ ಮೇ 8ರಂದು ಕುಟುಂಬದ ಜತೆ ಹಾಗೂ ಪ್ರಿಯಕರ ನೂಪರ್ ಶಿಖರೆ ಜತೆ ಬರ್ತಡೇ ಆಚರಿಸಿಕೊಂಡಿದ್ರು. ಆಮೀರ್ ಪುತ್ರಿಯ ಬಿಕಿನಿ ಅವತಾರ ನೋಡಿ ಟ್ರೋಲಿಗರು ಸಖತ್ ಟ್ರೋಲ್ ಮಾಡಿದ್ರು. ಇದೀಗ ಇರಾ ಮತ್ತಷ್ಟು ಫೋಟೊಗಳನ್ನು ಶೇರ್ ಮಾಡಿ, ನನ್ನ ಹಿಂದಿನ ಬರ್ತಡೇ ಫೋಟೋ ಆಚರಣೆಯ ಬಗ್ಗೆ ಎಲ್ಲ ಟ್ರೋಲ್‌ಗಳು ಮತ್ತ ದ್ವೇಷ ಮುಗಿದಿದ್ದರೆ, ಮತ್ತಷ್ಟು ಫೋಟೋಗಳು ಇಲ್ಲಿವೆ ನೋಡಿ ಎಂದು ಅಡಿ ಬರಹ ಕೊಟ್ಟು ಶೇರ್ ಮಾಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರಿಗೆ ಇರಾ ಸವಾಲೆಸೆದಿದ್ದಾರೆ. ಇದನ್ನೂ ಓದಿ: ರಾಗಿಣಿ ಮದುವೆಯಲ್ಲಿ ಪಾಲ್ಗೊಂಡ ರಶ್ಮಿಕಾ ಮಂದಣ್ಣ: ಫ್ಲೈಟ್ ಡಿಲೆಯಾಗಿ ಒದ್ದಾಡಿದ ನಟಿ
View this post on Instagram
ಇರಾ ಖಾನ್ ತಮ್ಮ 25ನೇ ವರ್ಷ ಹುಟ್ಟು ಹಬ್ಬವನ್ನು ಡಿಫರೆಂಟ್ ಆಗಿ ಸೆಲೆಬ್ರೇಶ್ ಮಾಡಿದ್ರು. ಸ್ವಿಮಿಂಗ್ ಪೂಲ್‌ನಿಂದ ಎದ್ದು ಬಂದ ಇರಾ ಬಿಕಿನಿಯಲ್ಲೇ ಕೇಕ್ ಕತ್ತರಿಸುತ್ತಾರೆ. ತಂದೆ ಆಮೀರ್ ಖಾನ್ ಉಪಸ್ಥಿತಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಇರಾ ಫೋಟೋಗಳನ್ನ ಟ್ರೋಲ್ ಮಾಡಿದ್ದಕ್ಕೆ ಮತ್ತಷ್ಟು ಫೋಟೋಗಳನ್ನು ಅಪ್‌ಲೋಡ್ ಮಾಡಿ ಟ್ರೋಲಿಗರಿಗೆ ಪರೋಕ್ಷವಾಗಿ ಉತ್ತರಿಸಿದ್ದಾರೆ. ಇದೀಗ ಟ್ರೋಲಿಗರಿಗೆ ಇರಾ ತಿರುಗೇಟು ನೀಡಿ, ಮತ್ತೆ ಕೆಣಕಿದ್ದಾರೆ. ಮುಂದೆ ಯಾವ ರೀತಿ ಬೆಳವಣಿಗೆ ಆಗಬಹುದು ಅಂತಾ ಕಾದು ನೋಡಬೇಕಿದೆ.


ಆಮೀರ್ ಖಾನ್ ಕೆರಿಯರ್‌ನ ಸೂಪರ್ ಹಿಟ್ `ಪಿಕೆ’ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಗೆಸ್ಟ್ ರೋಲ್ ನಲ್ಲಿ ನಟಿಸಿದ್ದರು. `ಪಿಕೆ’ ಚಿತ್ರ ಇಷ್ಟಪಟ್ಟಿದ್ದ ಅಭಿಮಾನಿಗಳು ಇವರಿಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ ಅಂತಾ ಲೆಕ್ಕಾಚಾರ ಹಾಕಿದ್ದರು. ಈಗ ಅಭಿಮಾನಿಗಳ ಅಭಿಲಾಷೆಯಂತೆ ಆಮೀರ್ ಖಾನ್ ಮತ್ತು ರಣ್‌ಬೀರ್ ಕಪೂರ್ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಹೊಸ ಪ್ರಾಜೆಕ್ಟ್‌ಗಾಗಿ ತೆರೆಯಮರೆಯಲ್ಲಿ ಜೋರಾಗಿಯೇ ತಯಾರಿ ನಡೆಯುತ್ತಿದೆ. ಈ ಹೊಸ ಚಿತ್ರವನ್ನ ಸರ್ಫರೋಶ್ ಎಂಬುವವರು ನಿರ್ಮಾಣ ಮಾಡುತ್ತಿದ್ದು, ಹೊಸ ರೀತಿಯ ಕಥೆಯನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.ಇಬ್ಬರು ಸ್ಟಾರ್‌ಗಳಿರೋ ಈ ಚಿತ್ರದಲ್ಲಿ ವಿಭಿನ್ನ ಕಂಟೆಂಟ್ ಜೊತೆ ಪವರ್‌ಫುಲ್ ಪಾತ್ರಗಳೂ ಇರಲಿದ್ದು, `ಪಿಕೆ’ ಚಿತ್ರ ನೋಡಿ ಖುಷಿಪಟ್ಟಿದ್ದ ಅಭಿಮಾನಿಗಳಿಗೆ, ನಯಾ ಪ್ರಾಜೆಕ್ಟ್‌ನಲ್ಲಿ ಆಮೀರ್ ಮತ್ತು ರಣ್‌ಬೀರ್ ಕಪೂರ್ ಜುಗಲ್‌ಬಂದಿ ಅಟ್ರ್ಯಾಕ್ಟ್ ಮಾಡಲಿದೆ. ಇದನ್ನು ಓದಿ:
ಆಮೀರ್ ಖಾನ್ ನಟನೆಯ `ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರೀ ಪ್ರೋಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಸಾಕಷ್ಟು ವಿಚಾರಗಳಿಂದ ಗಮನ ಸೆಳೆಯುತ್ತಿರೋ ಈ ಚಿತ್ರ ಆಗಸ್ಟ್ 11ಕ್ಕೆ ತೆರೆಗೆ ಬರಲು ಸಜ್ಜಾಗಿದೆ. `ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಬಳಿಕ ಆಮೀರ್ ಮತ್ತು ಆರ್‌ಕೆ ನಟನೆಯ ಚಿತ್ರ ಸೆಟ್ಟೇರಲಿದೆ.

