Tag: Aam Admi Party

  • ದೆಹಲಿಯಲ್ಲಿ ಕರ್ನಾಟಕ ಎಎಪಿ ಮುಖಂಡರಿಂದ ಚುನಾವಣಾ ಪ್ರಚಾರ

    ದೆಹಲಿಯಲ್ಲಿ ಕರ್ನಾಟಕ ಎಎಪಿ ಮುಖಂಡರಿಂದ ಚುನಾವಣಾ ಪ್ರಚಾರ

    ನವದೆಹಲಿ: ಲೋಕಸಭೆ (Lok Sabha Elections 2024) ಆರನೇ ಹಂತದ ಮತದಾನಕ್ಕೆ ಒಂದೆರಡು ದಿನ ಬಾಕಿ ಉಳಿದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ಬಿರುಸಿನ ಪ್ರಚಾರ ನಡೆಯುತ್ತಿದೆ. ಆಪ್ ಸ್ಪರ್ಧಿಸಿರುವ ನಾಲ್ಕು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ರಾಜ್ಯದಿಂದಲೂ ಆಪ್ (AAP) ಮುಖಂಡರು ಮತ್ತು ಕಾರ್ಯಕರ್ತರು ದೆಹಲಿಗೆ ಆಗಮಿಸಿದ್ದಾರೆ.

    ಕಳೆದ 15 ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಕರ್ನಾಟಕ ಎಎಪಿ ನಾಯಕರು, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ದೆಹಲಿಯ ಮೆಟ್ರೋ ನಿಲ್ದಾಣಗಳು, ಪ್ರಮುಖ ಮಾರುಕಟ್ಟೆಗಳು ಮತ್ತು ಜನಸಂದಣಿ ಪ್ರದೇಶಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು ಅಕ್ರಮವಾಗಿ ಬಂಧಿಸಿದ್ದನ್ನು ವಿರೋಧಿಸಿ ‘ಜೈಲ್ ಕಾ ಜವಾಬ್ ವೋಟ್ ಸೆ ದೇಂಗೆ’ ಘೋಷಣೆಯಡಿ ಸಹಿ ಸಂಗ್ರಹ ಮಾಡುವ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ‌ ಮಾಡಿದ್ದಾರೆ. ಇದನ್ನೂ ಓದಿ: ಹರಿಯಾಣದಿಂದ ದೆಹಲಿಗೆ ಬರುವ ನೀರನ್ನು ಬಿಜೆಪಿ ತಡೆಯುತ್ತಿದೆ: ಅತಿಶಿ ಆರೋಪ

    ರಾಷ್ಟ್ರ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ, ರಾಜ್ಯ ಮಾಧ್ಯಮ ಸಂಚಾಲ ಜಗದೀಶ್ ವಿ ಸದಂ, ರಾಜ್ಯ ಕಾರ್ಯದರ್ಶಿಗಳಾದ ರವಿಕುಮಾರ್, ಉಷಾಮೋಹನ್, ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್, ಬೆಂಗಳೂರು ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ, ಜಗದೀಶ್ ಬಾಬು, ಪುಟ್ಟಣ್ಣ, ಮಂಜುನಾಥ್, ಮುನೇಶ್ ಕುಮಾರ್, ಅಂಜನಾ ಗೌಡ, ಮಹಾಲಕ್ಷ್ಮಿ ಸೇರಿದಂತೆ ಇನ್ನಿತರ ಮುಖಂಡರು ಮತ್ತು ಕರ್ನಾಟಕದ ಅನೇಕ ಜಿಲ್ಲೆಗಳಿಂದ ಆಗಮಿಸಿರುವ ಎಎಪಿ ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

  • ಆಪರೇಷನ್ ಕಮಲದ ಭೀತಿ – ವಿಶ್ವಾಸ ಮತಯಾಚಿಸಿದ ಸಿಎಂ ಅರವಿಂದ್ ಕೇಜ್ರಿವಾಲ್

    ಆಪರೇಷನ್ ಕಮಲದ ಭೀತಿ – ವಿಶ್ವಾಸ ಮತಯಾಚಿಸಿದ ಸಿಎಂ ಅರವಿಂದ್ ಕೇಜ್ರಿವಾಲ್

    ನವದೆಹಲಿ: ಆಮ್‌ ಆದ್ಮಿ ಪಕ್ಷದ ಶಾಸಕರ ಖರೀದಿಗೆ ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳ ನಡುವೆ ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ.

    62 ಆಪ್ ಶಾಸಕರ ಪೈಕಿ 58 ಶಾಸಕರು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಪರವಾಗಿ ಮತ ಚಲಾಯಿಸಿದ್ದಾರೆ. 70 ಸದಸ್ಯರ ಬಲ ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಎಎಪಿ 62, ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ. ಇದನ್ನೂ ಓದಿ: ನಾಗರಿಕರ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಹತ್ಯೆ

    ತಮ್ಮ ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿಯ ‘ಆಪರೇಷನ್ ಕಮಲ’ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ನಂತರ ಅರವಿಂದ್ ಕೇಜ್ರಿವಾಲ್ ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯವನ್ನು ಪ್ರಸ್ತಾಪಿಸಿದ್ದರು, ಈ ವೇಳೆ ಎಲ್ಲ ಶಾಸಕರು ಕೇಜ್ರಿವಾಲ್ ಪರ ಮತ ಚಲಾಯಿಸಿದ್ದಾರೆ.

    ವಿಶ್ವಾಸ ಮತಯಾಚನೆ ಬಳಿಕ ಮಾತನಾಡಿದ ಅವರು, ಬಿಜೆಪಿ ದೆಹಲಿಯಲ್ಲಿ ಒಬ್ಬ ಎಎಪಿ ಶಾಸಕರನ್ನೂ ಖರೀದಿಸಲು ಸಾಧ್ಯವಾಗಲಿಲ್ಲ. ನಮ್ಮಲ್ಲಿ 62 ಶಾಸಕರಿದ್ದಾರೆ. ಇಬ್ಬರು ದೇಶದಿಂದ ಹೊರಗಿದ್ದಾರೆ. ಒಬ್ಬರು ಜೈಲಿನಲ್ಲಿದ್ದಾರೆ. ನಾಲ್ಕನೇ ಸದಸ್ಯರು ಸದನದ ಸ್ಪೀಕರ್ ಆಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

    ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

    ನವದೆಹಲಿ : ಮಾರ್ಚ್ 31 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಆಮ್ ಅದ್ಮಿ ಪಂಜಾಬ್‍ನಿಂದ ಐದು ಮಂದಿ ಅಭ್ಯರ್ಥಿಗಳನ್ನು ನಾಮ ನಿರ್ದೇಶನ ಮಾಡಿದ್ದು ಇದರಲ್ಲಿ ಮಾಜಿ ಕ್ರಿಕೆಟಿಗ ಹರ್ಭಜನ್‍ಸಿಂಗ್ ಕೂಡಾ ಒಳಗೊಂಡಿದ್ದಾರೆ.

    ಹರ್ಭಜನ್ ಸಿಂಗ್ ಜೊತೆಗೆ ದೆಹಲಿಯ ಆಪ್ ಶಾಸಕ ರಾಘವ್ ಚಡ್ಡಾ, ಸಂದೀಪ್ ಪಾಟಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಕೃಷ್ಣ ಪ್ರಾಣ್ ಸ್ತನ ಕ್ಯಾನ್ಸರ್ ಕೇರ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಸಂಜೀವ್ ಅರೋರಾ ಅವರನ್ನು ಪಂಜಾಬ್‍ನಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಿಂದ 22,500 ವಿದ್ಯಾರ್ಥಿಗಳು ವಾಪಸ್- ಆಪರೇಷನ್ ಗಂಗಾ ಪೂರ್ಣ

    ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಮ್ ಅದ್ಮಿ ಗೆಲವು ಸಾಧಿಸಿರುವ ಹಿನ್ನಲೆ ಐದು ಮಂದಿ ನಾಮನಿರ್ದೇಶಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಆಪ್ ಸಂಖ್ಯೆ 3 ರಿಂದ 8ಕ್ಕೆ ಏರಿಕೆಯಾಗಲಿದೆ. ಇದನ್ನೂ ಓದಿ: ಸ್ವಂತ ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ ಲೀಲಾವತಿ

    ಹರ್ಭಜನ್ ಸಿಂಗ್ ಆಯ್ಕೆ ಹಿಂದೆ ಹಲವು ಲೆಕ್ಕಾಚಾರಗಳನ್ನು ಆಮ್ ಅದ್ಮಿ ಹಾಕಿಕೊಂಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಹರ್ಭಜನ್ ಸಿಂಗ್ ಪಂಜಾಬ್‍ನಲ್ಲಿ ಸ್ಪೋರ್ಟ್ಸ್ ಐಕಾನ್ ಆಗಲಿದ್ದಾರೆ. ಈ ಮೂಲಕ ಪಂಜಾಬ್‍ನಲ್ಲಿ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡುವುದು ಮತ್ತು ಯುವಕರನ್ನು ಪಕ್ಷದತ್ತ ಸೆಳೆಯುವ ಲೆಕ್ಕಾಚಾರ ಹೊಂದಲಾಗಿದೆ ಎಂದು ವಿಶ್ಲೇಷಿಸಲಾಗಿದೆ.