Tag: Aakash Srivatsa

  • ‘ದೈಜಿ’ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ‘ಶಿವಾಜಿ ಸುರತ್ಕಲ್’ ಡೈರೆಕ್ಟರ್ ಟೆಂಪಲ್ ರನ್

    ‘ದೈಜಿ’ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ‘ಶಿವಾಜಿ ಸುರತ್ಕಲ್’ ಡೈರೆಕ್ಟರ್ ಟೆಂಪಲ್ ರನ್

    ‘ಶಿವಾಜಿ ಸುರತ್ಕಲ್ 2′ (Shivaji Surathkal -2)  ಸಿನಿಮಾ ಸಕ್ಸಸ್ ಬಳಿಕ ‘ದೈಜಿ’ ಚಿತ್ರವನ್ನು ನಿರ್ದೇಶಕ ಆಕಾಶ್ ಶ್ರೀವತ್ಸ (Akash Srivasta) ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕೂ ಮುನ್ನ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ನಿರ್ದೇಶಕ ಆಕಾಶ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ‌ರಮೇಶ್‌ ಅರವಿಂದ್‌ ನಟನೆಯ ‘ದೈಜಿ’ ಸಿನಿಮಾ ಸ್ಕ್ರಿಪ್ಟ್‌ ಪೂಜೆ ಇದೀಗ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜರುಗಿದೆ. ಸಿನಿಮಾ ಶೂಟಿಂಗ್‌ಗೂ ಮುನ್ನ ಚಾಮುಂಡೇಶ್ವರಿ ದೇವಿಗೆ ನಿರ್ದೇಶಕ ಆಕಾಶ್ ಶ್ರೀವತ್ಸ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಾದ ನಟಿ ಸೋನಲ್, ತರುಣ್ ಸುಧೀರ್

     

    View this post on Instagram

     

    A post shared by akash srivatsa (@akashsrivatsa)

    ಇತ್ತೀಚೆಗೆ ರಮೇಶ್ ಅರವಿಂದ್ (Ramesh Aravind) ಅವರ ‘ದೈಜಿ’ (Daiji Film) ಸಿನಿಮಾದ ಕಲರ್‌ಫುಲ್ ಪೋಸ್ಟರ್ ಅನ್ನು ರಿಲೀಸ್ ಮಾಡಿತ್ತು ಚಿತ್ರತಂಡ. ಡಿಫರೆಂಟ್ ಲುಕ್‌ನಲ್ಲಿ ನಟ ಕಾಣಿಸಿಕೊಂಡಿದ್ದರು. ಇದೀಗ ಸಿನಿಮಾ ಶೂಟಿಂಗ್ ಶುರು ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

    ಅಂದಹಾಗೆ, ಶಿವಾಜಿ ಸುರತ್ಕಲ್, ಶಿವಾಜಿ ಸುರತ್ಕಲ್-2 ಸಿನಿಮಾ ನಂತರ ಮತ್ತೆ ‘ದೈಜಿ’ ಸಿನಿಮಾಗಾಗಿ ರಮೇಶ್ ಅರವಿಂದ್ ಜೊತೆ ಆಕಾಶ್ ಶ್ರೀವತ್ಸ ಕೈಜೋಡಿಸಿದ್ದಾರೆ. 3ನೇ ಬಾರಿ ಈ ಕಾಂಬಿನೇಷನ್ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಸಖತ್‌ ಥ್ರಿಲ್ ಆಗಿದ್ದಾರೆ.

  • ತನಿಖಾಧಿಕಾರಿಯಾಗಲಿದ್ದಾರೆ ರಮೇಶ್ ಅರವಿಂದ್!

    ತನಿಖಾಧಿಕಾರಿಯಾಗಲಿದ್ದಾರೆ ರಮೇಶ್ ಅರವಿಂದ್!

    ನಟ ರಮೇಶ್ ಅರವಿಂದ್ ಈಗ ಪುರಸೊತ್ತೇ ಸಿಗದಂತೆ ನಾನಾ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶನ, ರಿಯಾಲಿಟಿ ಶೋ ಹೋಸ್ಟಿಂಗ್ ಸೇರಿದಂತೆ ಅವರು ನೆಚ್ಚಿಕೊಂಡಿರೋ ಕೆಲಸಗಳು ಒಂದೆರಡಲ್ಲ. ಆದರೂ ಕೂಡಾ ಕನ್ನಡದ ಪ್ರೇಕ್ಷಕರು ಮಾತ್ರ ಓರ್ವ ನಟರಾಗಿ ರಮೇಶ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

    ಆದರೆ ಈ ವರ್ಷದ ಕಡೆಯ ಹೊತ್ತಿಗೆಲ್ಲ ಪ್ರೇಕ್ಷಕರ ಮನದಿಂಗಿತ ಸಾಕಾರಗೊಳ್ಳೋ ಸೂಚನೆಯೊಂದು ಇದೀಗ ಸಿಕ್ಕಿದೆ. ಎಲ್ಲ ಅಂದುಕೊಂಡಂತೆಯೇ ಆದರೆ ರಮೇಶ್ ಅರವಿಂದ್ ಇನ್ವೆಸ್ಟಿಗೇಟಿವ್ ಆಫೀಸರ್ ಆಗಿ ಚಿತ್ರವೊಂದರಲ್ಲಿ ನಟಿಸಲಿದ್ದಾರೆ!

    ನಿರ್ದೇಶಕ ಆಕಾಶ್ ಶ್ರೀವತ್ಸ ರಮೇಶ್ ಅರವಿಂದ್ ಅವರನ್ನೇ ಗಮನದಲ್ಲಿಟ್ಟುಕೊಂಡು ಒಂದು ಕಥೆ ರೆಡಿ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ಖುದ್ದು ರಮೇಶ್ ಅವರೊಂದಿಗೂ ಚರ್ಚಿಸಿದ್ದಾರೆ. ರಮೇಶ್ ಕಡೆಯಿಂದಲೂ ಒಪ್ಪಿಗೆ ಸಿಕ್ಕಿದೆ. ಹಾಗಂತ ತಕ್ಷಣದಲ್ಲಿಯೇ ನಟಿಸುವಂತಾ ವಾತಾವರಣ ಈಗಿಲ್ಲ. ಈಗ ರಿಯಾಲಿಟಿ ಶೋ ಮತ್ತು ಚಿತ್ರ ನಿರ್ದೇಶನದಲ್ಲಿ ತೊಡಗಿಕೊಂಡಿರೋದರಿಂದ ಡಿಸೆಂಬರ್ ಹೊತ್ತಿಗೆಲ್ಲ ಈ ಚಿತ್ರ ಟೇಕಾಫ್ ಆಗಲಿದೆಯಂತೆ.

    ರಮೇಶ್ ಬಿಡುವಾಗುವವರೆಗೂ ನಿರ್ದೇಶಕ ಆಕಾಶ್ ಸ್ಕ್ರಿಪ್ಟ್ ವರ್ಕ್ ನಡೆಸಲಿದ್ದಾರೆ. ತಾರಾಗಣವೂ ಸೇರಿದಂತೆ ಎಲ್ಲವನ್ನೂ ರೆಡಿ ಮಾಡಿಕೊಂಡು ರಮೇಶ್ ಬಿಡುವಾದಾಕ್ಷಣವೇ ಚಿತ್ರದ ಟೈಟಲ್ ಅನಾವರಣಗೊಳಿಸಿ ಚಿತ್ರೀಕರಣಕ್ಕೆ ತೆರಳಲು ಯೋಜಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv