Tag: Aaftab Ameen Poonawala

  • ಶ್ರದ್ಧಾ ಹತ್ಯೆ ಮಾಡಿದ್ದಕ್ಕೆ ಪಶ್ಚಾತ್ತಾಪವಿದೆ – ಕೋರ್ಟ್ ಮುಂದೆ ತಪ್ಪೊಪ್ಪಿಕೊಂಡ ಅಫ್ತಾಬ್

    ಶ್ರದ್ಧಾ ಹತ್ಯೆ ಮಾಡಿದ್ದಕ್ಕೆ ಪಶ್ಚಾತ್ತಾಪವಿದೆ – ಕೋರ್ಟ್ ಮುಂದೆ ತಪ್ಪೊಪ್ಪಿಕೊಂಡ ಅಫ್ತಾಬ್

    ನವದೆಹಲಿ: ಮುಂಬೈ (Mumbai) ಮೂಲದ ಯುವತಿ ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ (Aaftab Ameen Poonawala) ಕೋರ್ಟ್ ಮುಂದೆ ಮೊದಲ ಬಾರಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸ್ (Delhi Police) ಕಸ್ಟಡಿ ವಿಸ್ತರಣೆ ವೇಳೆ ಹತ್ಯೆ ಮಾಡಿರುವುದಾಗಿ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ್ದಾನೆ.

    ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನಲೆ ಕಸ್ಟಡಿಗಾಗಿ ಸಾಕೇತ್ ಜಿಲ್ಲಾ ನ್ಯಾಯಲಯದ ಮುಂದೆ ಅಫ್ತಾಬ್ ನನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡ ಅಫ್ತಾಬ್ ಜಗಳದ ಆವೇಶದಲ್ಲಿ ಹತ್ಯೆ ಮಾಡಿದ್ದೇನೆ, ಹತ್ಯೆಯ ಮಾಡಿರುವುದಕ್ಕೆ ಪಶ್ಚಾತ್ತಾಪ ಇದೆ, ಘಟನೆಯನ್ನು ನೆನಪಿಸಿಕೊಳ್ಳಲು ಬೇಸರವಿದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಮಚ್ಚಿನಿಂದ ಹೊಡೆದು ಪತ್ನಿಯ ಕೊಲೆಗೈದ ಪಾಪಿ ಪತಿ!

    ಅಫ್ತಾಬ್ ಹೇಳಿಕೆ ಬಳಿಕ ಪೊಲೀಸರು ಕಸ್ಟಡಿ (Police Custody) ವಿಸ್ತರಣೆಗೆ ಮನವಿ ಮಾಡಿದರು. ಅಫ್ತಾಬ್ ಹೇಳಿಕೆ ಆಧರಿಸಿ ತನಿಖೆ ಮಾಡಬೇಕಿದೆ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ತನಿಖೆ ನಡೆಸಬೇಕಿದೆ. ಈ ಹಿನ್ನಲೆ ಅವಧಿ ವಿಸ್ತರಣೆ ಮಾಡಬೇಕು ಎಂದು ದೆಹಲಿ ಪೊಲೀಸರ ಪರ ವಕೀಲರು ಮನವಿ ಮಾಡಿದರು. ಮನವಿಗೆ ಸ್ಪಂಧಿಸಿದ ಕೋರ್ಟ್ ನಾಲ್ಕು ದಿನಕ್ಕೆ ಕಸ್ಟಡಿಯನ್ನು ವಿಸ್ತರಿಸಿ ಆದೇಶ ನೀಡಿದೆ. ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿದ – ಇಬ್ಬರ ಸ್ಥಿತಿ ಚಿಂತಾಜನಕ

    ಈ ನಡುವೆ ಅಫ್ತಾಬ್‌ನ ಮಂಪರು ಪರೀಕ್ಷೆ ಮಾಡಲು ಪೊಲೀಸರು ತಯಾರಿ ನಡೆಸಿದ್ದು, ಅದಕ್ಕೂ ಮೊದಲು ಫಾಲಿಗ್ರಾಫ್ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಇಂದು ಅಫ್ತಾಬ್ ಫಾಲಿಗ್ರಾಫ್ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಈ ಪರೀಕ್ಷೆಯಲ್ಲಿ ಅಫ್ತಾಬ್ ಹೇಳಿಕೆಗಳಲ್ಲಿರುವ ಸತ್ಯ ಮತ್ತು ಸುಳ್ಳುಗಳನ್ನು ಪರಿಶೀಲಿಸುವ ಪ್ರಯತ್ನ ನಡೆಯಲಿದೆ.

    ಪಾಲಿಗ್ರಾಫ್ ಪರೀಕ್ಷೆ ಎಂದರೇನು?
    ಸುಳ್ಳು ಪತ್ತೆಕಾರಕ ಪರೀಕ್ಷೆಯನ್ನು ಪಾಲಿಗ್ರಾಫ್‌ ಪರೀಕ್ಷೆ ಎಂದು ಕರೆಯಲಾಗುತ್ತದೆ. ಇದು ಮಾನವನ ದೇಹದ ಮೇಲೆ ಸೆನ್ಸಾರ್‌ಗಳನ್ನು ಸ್ಥಾಪಿಸಿ, ಅದರ ಸಹಾಯದಿಂದ, ಪ್ರಶ್ನೆಯನ್ನು ಕೇಳಿದ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ಜೈವಿಕ ಭೌತಿಕ ಬದಲಾವಣೆಗಳನ್ನು ಪತ್ತೆಹಚ್ಚಲು ಸಾಧ್ಯವಿದೆ. ಸರಳವಾಗಿ ಹೇಳುವುದಾದರೆ, ನಿರ್ದಿಷ್ಟ ಘಟನೆಯ ಬಗ್ಗೆ ಅಭ್ಯರ್ಥಿಯನ್ನು ಕೇಳಿದಾಗ, ಒಬ್ಬ ವ್ಯಕ್ತಿಯು ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಸತ್ಯ ಹೇಳುತ್ತಾನೆಯೇ ಎಂದು ಪ್ರತಿಪಾದಿಸಲು ಅನುಮತಿಸುವ ದತ್ತಾಂಶವನ್ನು ಪರದೆಯು ಪ್ರದರ್ಶಿಸುತ್ತದೆ. ಈ ಒಟ್ಟಾರೆ ಪ್ರಕ್ರಿಯೆಗೆ ಪಾಲಿಗ್ರಾಫ್‌ ಪರೀಕ್ಷೆ ಎಂದು ಹೇಳಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಶ್ರದ್ಧಾ ವಾಕರ್ ಹತ್ಯೆ ಕೇಸ್ – CBIಗೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ

    ಶ್ರದ್ಧಾ ವಾಕರ್ ಹತ್ಯೆ ಕೇಸ್ – CBIಗೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ

    ನವದೆಹಲಿ: ದೆಹಲಿಯಲ್ಲಿ ಭೀಕರವಾಗಿ ಹತ್ಯೆಯಾದ ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ (Shraddha Walker) ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್‌ಗೆ (Delhi HighCourt) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದೆ.

    ವಕೀಲ (Advocate) ಜೋಶಿನಿ ತುಲಿ (Joshini Tuli) ಈ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಲು ಮನವಿ ಮಾಡಲಾಗಿದೆ. ಇದನ್ನೂ ಓದಿ: ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ

    ಅರ್ಜಿಯಲ್ಲಿ ಏನಿದೆ?: ಶ್ರದ್ಧಾ ಹತ್ಯೆಯಾಗಿ 6 ತಿಂಗಳಾಗಿದೆ, ದೇಹದ ತುಂಡುಗಳನ್ನು ಹಲವು ಸ್ಥಳಗಳಲ್ಲಿ ಎಸೆಯಲಾಗಿದೆ. ಸಾಕ್ಷಿಗಳನ್ನು ಹುಡುಕಲು ದೆಹಲಿ ಪೊಲೀಸರ (Delhi Police) ಬಳಿ ಆಡಳಿತಾತ್ಮಕ ಅಥವಾ ಸಿಬ್ಬಂದಿ ಕೊರತೆ ಮತ್ತು ಸಾಕಷ್ಟು ತಾಂತ್ರಿಕ ಮತ್ತು ವೈಜ್ಞಾನಿಕ ಸಲಕರಣೆಗಳ ಕೊರತೆ ಇದೆ. ಈ ಹಿನ್ನಲೆ ಅವರು ಸಮರ್ಥವಾಗಿ ತನಿಖೆ ನಡೆಸಲಾಗುವುದಿಲ್ಲ. ಇದನ್ನೂ ಓದಿ: ಪೀಸ್ ಪೀಸ್ ಪ್ರೇಮಿಯ ಮತ್ತಷ್ಟು ಕ್ರೂರತೆ ಬಹಿರಂಗ- ದೆಹಲಿ ಮಾತ್ರವಲ್ಲ ಡೆಹ್ರಾಡೂನ್‍ನಲ್ಲೂ ದೇಹದ ತುಂಡು ಎಸೆತ

    ಅಲ್ಲದೇ ದೆಹಲಿ ಪೊಲೀಸರು ತನಿಖೆಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ವಿವರಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದಾರೆ. ಮಾಹಿತಿಯ ಪ್ರಕಾರ ತನಿಖೆಯ ಮುಂದುವರಿಕೆಗಾಗಿ ಆರೋಪಿಗಳನ್ನು ಐದು ವಿವಿಧ ರಾಜ್ಯಗಳಿಗೆ ಕರೆದೊಯ್ಯಲಾಗುವುದು ಎಂದು ಹೇಳಲಾಗಿದೆ. ಆದ್ದರಿಂದ ಈ ಪ್ರಕರಣವು ಅಂತರರಾಜ್ಯ ಮತ್ತು ದೆಹಲಿ ಪೊಲೀಸರ ಪ್ರಾದೇಶಿಕ ವ್ಯಾಪ್ತಿಯನ್ನು ಮೀರಿದೆ.

    ಇದು ಸೈಬರ್ ಕ್ರೈಂ (Cyber Crime) ವ್ಯಾಪ್ತಿಗೂ ಬರಲಿದೆ. ಡೇಟಿಂಗ್ ಆ್ಯಪ್‌ಗಳ (Dating App) ಸುರಕ್ಷತೆಯ ಬಗ್ಗೆಯೂ ಯೋಚಿಸಬೇಕಿದೆ. ಎಲ್ಲ ಆಯಾಮದಲ್ಲಿ ತನಿಖೆ ನಡೆಯಲು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವುದು ಸೂಕ್ತ, ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಬಗ್ಗೆ ಸೂಚನೆ ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರದ್ಧಾ ಭೀಕರ ಹತ್ಯೆ ತೆರೆಯ ಮೇಲೆ ತರಲು ಪ್ಲ್ಯಾನ್ – ಸಿನಿಮಾ ನಿರ್ಮಾಣ ಘೋಷಿಸಿದ ನಿರ್ದೇಶಕ ಮನೀಶ್ ಸಿಂಗ್

    ಶ್ರದ್ಧಾ ಭೀಕರ ಹತ್ಯೆ ತೆರೆಯ ಮೇಲೆ ತರಲು ಪ್ಲ್ಯಾನ್ – ಸಿನಿಮಾ ನಿರ್ಮಾಣ ಘೋಷಿಸಿದ ನಿರ್ದೇಶಕ ಮನೀಶ್ ಸಿಂಗ್

    ನವದೆಹಲಿ (NewDelhi): ದೆಹಲಿಯಲ್ಲಿ ನಡೆದಿರುವ ಶ್ರದ್ಧಾ ವಾಕರ್ (Shraddha Walker) ಹತ್ಯೆ ರಾಷ್ಟ್ರ ರಾಜಧಾನಿ ಜನತೆಯನ್ನ ಬೆಚ್ಚಿ ಬೀಳಿಸಿದೆ. ತನಿಖೆ ವೇಳೆ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರುತ್ತಿವೆ.

    ಅಮೆರಿಕದ `ಡೆಕ್ಸ್ಟರ್‌’ (Dexter) ವೆಬ್‌ಸೀರಿಸ್‌ನಿಂದ ಪ್ರೇರಿತನಾದ ಹಂತಕ ಅಫ್ತಾಬ್ ಅಮೀನ್ ಪೂನಾವಾಲ (Aaftab Ameen Poonawala), ಶ್ರದ್ಧಾ ವಾಕರ್‌ನನ್ನು ಹತ್ಯೆ ಮಾಡಿದ 35 ಪೀಸ್‌ಗಳಾಗಿ ಕತ್ತರಿಸಿ ವಿವಿಧ ಕಾಡುಗಳಲ್ಲಿ ಎಸೆದು ಬಂದಿದ್ದ. ಇದು ವಿಕೃತಿಗೆ ಸಾಕ್ಷಿಯಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಷ್ಟ್ರವ್ಯಾಪಿಯಾಗಿ ಆಕ್ರೋಶ ವ್ಯಕ್ತವಾಯಿತು. ದೇಶವನ್ನೇ ಬೆಚ್ಚಿ ಬೀಳಿಸಿರುವ ಮುಂಬೈಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ಟ್ವೀಟ್ ಮಾಡಿದ್ದ ಸಿನಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma), ಶ್ರದ್ಧಾಳನ್ನು ಹತ್ಯೆ ಮಾಡಿರುವ ಆರೋಪಿಗೆ ಅದಕ್ಕಿಂತ ಹೀನಾಯ ಸಾವು ಬರಲಿ ಎಂದು ಬರೆದುಕೊಂಡಿದ್ದರು. ಈ ಬೆನ್ನಲ್ಲೇ ನಿರ್ದೇಶಕರೊಬ್ಬರು ಈ ಘಟನೆ ಕುರಿತು ಸಿನಿಮಾವನ್ನೇ ನಿರ್ಮಿಸೋದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಕೇಸ್‌ನಂತೆಯೇ ಬಾಂಗ್ಲಾದಲ್ಲೂ ಭೀಕರ ಹತ್ಯೆ – ಹಿಂದೂ ಯುವತಿಯನ್ನು ಪೀಸ್ ಪೀಸ್ ಮಾಡಿದ ಹಂತಕ ಪ್ರೇಮಿ

    ಹೌದು.. ನಿರ್ದೇಶಕ ಹಾಗೂ ನಿರ್ಮಾಪಕ ಮನೀಶ್ ಸಿಂಗ್ (Manish Singh) ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ಚಲನಚಿತ್ರ ತಯಾರಿಸುವುದಾಗಿ ಹೇಳಿದ್ದಾರೆ. ಅವರೇ ಹೇಳಿರುವಂತೆ ಈಗಾಗಲೇ ಚಿತ್ರಕಥೆ ಕೆಲಸವನ್ನೂ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಚಿತ್ರದ ಕಥೆಯ ಬಗ್ಗೆ ಮಾತನಾಡಿರುವ ಮನೀಶ್ ಅವರು, ಈ ಚಿತ್ರವು ಸಂಪೂರ್ಣವಾಗಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಆಧರಿಸಿದೆ. ಅದರ ಜೊತೆಗೆ ಚಿತ್ರದಲ್ಲಿ `ಲವ್ ಜಿಹಾದ್’ (Love Jihad) ಕುರಿತು ಹೇಳಲಾಗುವುದು. ಮದುವೆಯಾಗೋದಾಗಿ ನಟಿಸಿ ಹೆಣ್ಣುಮಕ್ಕಳ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿರುವ ಜಿಹಾದಿಗಳ ಕುರಿತು ಈ ಚಿತ್ರ ಬಯಲು ಮಾಡಲಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ – ತಲೆ ಬುರುಡೆ ಸುಟ್ಟು, ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದ ಅಫ್ತಾಬ್

    ಟೈಟಲ್ ಕೂಡಾ ಫಿಕ್ಸ್: ವೃಂದಾವನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. `ಹು ಕಿಲ್ಡ್ ಶ್ರದ್ಧಾ ವಾಕರ್?’ (WHO KILLED SHRADDHA WALKER) ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಈ ಚಿತ್ರದ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ನಿರ್ಮಾಪಕರು ದೆಹಲಿಯ ಸುತ್ತಮುತ್ತಲಿನ ಕಾಡುಗಳ ವಿಡಿಯೋ ಕ್ಲಿಪ್‌ಗಳ ಮೇಲೆ ಸಂಶೋಧನೆ ಮಾಡಲು ತಂಡವನ್ನು ರಚಿಸಿದ್ದಾರೆ. ಇದರೊಂದಿಗೆ ಶೂಟಿಂಗ್‌ಗಾಗಿ ಲೊಕೇಶನ್ ಹುಡುಕಾಟವೂ ನಡೆಯುತ್ತಿದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]