Tag: Aaftab

  • ಶ್ರದ್ಧಾ ವಾಕರ್‌ ತಂದೆ ಹೃದಯಾಘಾತದಿಂದ ಸಾವು

    ಶ್ರದ್ಧಾ ವಾಕರ್‌ ತಂದೆ ಹೃದಯಾಘಾತದಿಂದ ಸಾವು

    ನವದೆಹಲಿ: ದೆಹಲಿಯ ಮೆಹ್ರೌಲಿಯಲ್ಲಿ ಲಿವ್‌-ಇನ್‌ ಸಂಗಾತಿಯಿಂದ ಬರ್ಬರವಾಗಿ ಹತ್ಯೆಯಾಗಿದ್ದ ಶ್ರದ್ಧಾ ವಾಕರ್‌ ಅವರ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ವಿಕಾಸ್ ವಾಕರ್ ಅವರು ಮಹಾರಾಷ್ಟ್ರದ ಪಾಲ್ಘರ್‌ನ ವಸೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಗಳ ಸಾವಿನ ಬಳಿಕ ಅವರು ಖಿನ್ನತೆಗೆ ಒಳಗಾಗಿದ್ದರು. ತಮ್ಮ ಮಗಳ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದರು.

    ಶ್ರದ್ಧಾ ಪ್ರಕರಣದಲ್ಲಿ ಆಫ್ತಾಬ್ ಜೈಲಿನಲ್ಲಿರುವ ಕೊಲೆ ವಿಚಾರಣೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ. ವಿಕಾಸ್ ಅವರು ತನ್ನ ಮಗನೊಂದಿಗೆ ವಸೈನಲ್ಲಿ ವಾಸಿಸುತ್ತಿದ್ದರು. ಭಾನುವಾರ ಮುಂಜಾನೆ ಅವರ ಆರೋಗ್ಯ ಹದಗೆಟ್ಟಿದೆ. ಮಗ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಾಗಲೇ ವಿಕಾಸ್‌ ಮೃತಪಟ್ಟಿದ್ದರು.

    ವಸಾಯಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ಹೃದಯಾಘಾತದಿಂದಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

    ಮಗಳಿಗೆ ನ್ಯಾಯಕ್ಕಾಗಿ 2 ವರ್ಷಗಳಿಗೂ ಹೆಚ್ಚು ಕಾಲ ಹೋರಾಡುತ್ತಿದ್ದರು. ಮೆಹ್ರೌಲಿ ಕಾಡಿನಲ್ಲಿ ಪತ್ತೆಯಾಗಿರುವ ಶ್ರದ್ಧಾ ಅವರ ಮೂಳೆಗಳ ಅವಶೇಷಗಳನ್ನು ದೆಹಲಿ ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಲಿರುವ ಕಾರಣ ಅವರ ಅಂತ್ಯಕ್ರಿಯೆ ಇನ್ನೂ ನಡೆದಿಲ್ಲ.

  • ಶ್ರದ್ಧಾ ದೇಹ ತುಂಡರಿಸಿದ್ರೂ ತಲೆಬುರುಡೆಗೆ ಹಾನಿ ಮಾಡಿಲ್ಲ- ಫ್ರಿಡ್ಜ್‌ನಲ್ಲಿಟ್ಟು ಆಗಾಗ ನೋಡ್ತಿದ್ದ ಅಫ್ತಾಬ್

    ಶ್ರದ್ಧಾ ದೇಹ ತುಂಡರಿಸಿದ್ರೂ ತಲೆಬುರುಡೆಗೆ ಹಾನಿ ಮಾಡಿಲ್ಲ- ಫ್ರಿಡ್ಜ್‌ನಲ್ಲಿಟ್ಟು ಆಗಾಗ ನೋಡ್ತಿದ್ದ ಅಫ್ತಾಬ್

    ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ (NewDelhi) ಲೀವಿಂಗ್ ರಿಲೇಶನ್ ಶಿಪ್ (Live-In Partner) ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಭಯಾನಕ ವಿಷಯಗಳು ಬಯಲಾಗುತ್ತಿವೆ. ಪಾಗಲ್ ಪ್ರೇಮಿ ಅಫ್ತಾಬ್ (Aaftab), ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕ ಆ ತಲೆ ಬುರುಡೆಯನ್ನು ತನಲ್ಲೆ ಇಟ್ಟುಕೊಂಡು ವಿಕೃತಿ ಪ್ರೀತಿಯನ್ನು ತೋರಿಸಿದ್ದ ಎಂಬುದು ಬೆಳಕಿಗೆ ಬಂದಿದೆ.

    ಡೇಟಿಂಗ್ ಆ್ಯಪ್‍ನ ಮೂಲಕ ಪರಿಚಯವಾಗಿದ್ದ ಶ್ರದ್ಧಾ ಹಾಗೂ ಅಫ್ತಾಬ್ ಇಬ್ಬರು 3 ವರ್ಷಗಳ ಕಾಲ ಲೀವಿಂಗ್ ರಿಲೇಶನ್ ಶಿಪ್‍ನಲ್ಲಿದ್ದರು. ಮದುವೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಶ್ರದ್ಧಾಳ ಕತ್ತು ಹಿಸುಕಿ ಕೊಂದಿದ್ದ ಅಫ್ತಾಬ್ ಬಳಿಕ ಆಕೆಯ ದೇಹವನ್ನು 35 ಪೀಸ್‍ಗಳಾಗಿ ಮಾಡಿದ್ದ. ಆದರೆ ಶ್ರದ್ಧಾಳ ತಲೆಯ ಭಾಗಕ್ಕೆ ಒಂದು ಸ್ವಲ್ಪವೂ ಹಾನಿಯಾಗದಂತೆ ನೋಡಿಕೊಂಡಿದ್ದ. ದೇಹವನ್ನು ತುಂಡು ತುಂಡಾಗಿ ಕತ್ತರಿಸಿದರೂ ತಲೆ ಬುರುಡೆಯನ್ನು ಫ್ರಿಡ್ಜ್‌ನಲ್ಲಿ ಹಾಗೇ ಉಳಿಸಿಕೊಂಡಿದ್ದ. ಇನ್ನೂ ಶ್ರದ್ಧಾಳ ನೆನಪಾದಾಗಲೆಲ್ಲ ಫ್ರಿಡ್ಜ್‌ನ್ನು ತೆಗೆದು ಆ ತಲೆ ಬುರುಡೆಯನ್ನು ನೋಡಿ ಅವಳೊಂದಿಗೆ ಕ್ಷಣಗಳನ್ನು ನೆನಪಿಸಿಕೊಳ್ತಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.

    ಇನ್ನೂ ಹತ್ಯೆಯ ಬಳಿಕ ಶ್ರದ್ಧಾ ತಲೆ ಭಾಗಕ್ಕೆ ಹಾನಿಯಾಗದಂತೆ ನೋಡಿಕೊಂಡಿದ್ದ ಅಫ್ತಾಬ್ ಶ್ರದ್ಧಾ ದೇಹದ ಎಲ್ಲ ಭಾಗಗಳನ್ನು ಎಸೆದ ಬಳಿಕ ಕೊನೆಯಲ್ಲಿ ಆಕೆಯ ತಲೆ ಬುರುಡೆಯನ್ನು ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಶ್ರದ್ಧಾ ಭೀಕರ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಕಿರಾತಕ

    ಘಟನೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಹಲವು ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ವಶ ಪಡಿಸಿಕೊಂಡಿರುವ ಮೂಳೆಗಳನ್ನು ಡಿಎನ್‍ಎ ಟೆಸ್ಟ್‌ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಜೊತೆಗೆ ಅಫ್ತಾಬ್ ನೀಡಿರುವ ಮಾಹಿತಿ ಆಧರಿಸಿ ತಲೆ ಬುರುಡೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ತಲೆ ಬುರುಡೆ ಸಿಕ್ಕಲ್ಲಿ ಕೇಸ್‍ಗೆ ಮತ್ತಷ್ಟು ಬಲ ಬರುವ ಹಿನ್ನಲೆಯಲ್ಲಿ ತಲೆ ಬುರುಡೆಯ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಫ್ತಾಬ್‍ನನ್ನು ನೇಣಿಗೆ ಹಾಕಿ: ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ ಶ್ರದ್ಧಾಳ ತಂದೆ

    Live Tv
    [brid partner=56869869 player=32851 video=960834 autoplay=true]