Tag: aadhar card

  • PUBLiC TV Impact – ಸೋಲಿಗ ಬಾಲಕಿಗೆ ಆಧಾರ್ ಕಾರ್ಡ್ ನೋಂದಣಿ

    PUBLiC TV Impact – ಸೋಲಿಗ ಬಾಲಕಿಗೆ ಆಧಾರ್ ಕಾರ್ಡ್ ನೋಂದಣಿ

    ಚಾಮರಾಜನಗರ: ಸೋಲಿಗ ಬಾಲಕಿ ಚೈತ್ರಗೆ 12 ವರ್ಷವಾದರೂ ಕೂಡ ಇಲ್ಲಿಯವರೆಗೂ ಕೂಡ ಆಧಾರ್ ಕಾರ್ಡ್ (Aadhar Card) ಇಲ್ಲದೇ ಸರ್ಕಾರದ ಯಾವುದೇ ಸೌಲಭ್ಯ ಸಿಕ್ಕಿರಲಿಲ್ಲ. ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಪ್ರಸಾರದ ಬಳಿಕ ಕೆಲವೇ ಘಂಟೆಗಳಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಬಾಲಕಿ ಚೈತ್ರಗೆ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಟ್ಟಿದ್ದಾರೆ.

    ಚೈತ್ರ ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು (Hanur) ತಾಲೂಕಿನ ಕೌಳೇಹಳ್ಳ ನಿವಾಸಿಯಾಗಿದ್ದು, ದಿನನಿತ್ಯ ಲೊಕ್ಕನಹಳ್ಳಿಗೆ ಕರ್ನಾಟಕ ಪಬ್ಲಿಕ್ ಶಾಲೆಯ ವ್ಯಾಸಂಗಕ್ಕಾಗಿ ಹೋಗುತ್ತಿದ್ದಳು. ದಿನಾ 30 ರೂ. ಬಸ್ ಚಾರ್ಜ್ ಕೊಟ್ಟು ಓಡಾಡುವ ಪರಿಸ್ಥಿತಿ ಇತ್ತು. ಅಲ್ಲದೇ ಸರ್ಕಾರದ ಬಹುತೇಕ ಎಲ್ಲಾ ಸೌಲಭ್ಯದಿಂದ ವಂಚಿತಳಾಗಿದ್ದಳು. ಇದನ್ನೂ ಓದಿ: ಮತ್ತೆ ಉದ್ಯೋಗಕ್ಕೆ ಮರಳಿದ ರಿಷಿ ಸುನಕ್ – 70 ಗಂಟೆ ಕೆಲ್ಸ ಮಾಡಿ ಎಂದು ನೆಟ್ಟಿಗರ ಅಪಹಾಸ್ಯ

    ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿಗೆ ಜಿಲ್ಲಾಡಳಿತ ಸ್ಪಂದಿಸಿದ್ದು, ಬಾಲಕಿ ಚೈತ್ರಗೆ ತೊಡಕಾಗಿದ್ದ ಆಧಾರ್ ಕಾರ್ಡ್ ನೋಂದಣಿಯನ್ನು ಮಾಡಿಸಲಾಗಿದೆ. ಅಲ್ಲದೇ ಶೀಘ್ರದಲ್ಲೇ ಬಾಲಕಿ ಮನೆಗೆ ಆಧಾರ್ ಕಾರ್ಡ್ ತಲುಪುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಈ ಹಿನ್ನಲೆ ಪಬ್ಲಿಕ್ ಟಿವಿಗೆ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಸಿಸಿ ರೋಡ್ ಕಮಿಷನ್ ವಿಚಾರ – ಇಬ್ಬರು ಅಧಿಕಾರಿಗಳ ಅಮಾನತು: ಪ್ರಿಯಾಂಕ್ ಖರ್ಗೆ

  • Kalaburagi | ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮಹಿಳೆಯ ಸಂಬಂಧಿಕರಿಂದ ಕಂಡಕ್ಟರ್ ಮೇಲೆ ಹಲ್ಲೆ

    Kalaburagi | ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮಹಿಳೆಯ ಸಂಬಂಧಿಕರಿಂದ ಕಂಡಕ್ಟರ್ ಮೇಲೆ ಹಲ್ಲೆ

    ಕಲಬುರಗಿ: ಆಧಾರ್ ಕಾರ್ಡ್ (Aadhar Card) ಕೇಳಿದ್ದಕ್ಕೆ ಮಹಿಳೆಯ ಸಂಬಂಧಿಕರು ಸರ್ಕಾರಿ ಬಸ್ ಕಂಡಕ್ಟರ್ (Conductor) ಮೇಲೆ ಹಲ್ಲೆ ಮಾಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

    ಕೆಕೆಆರ್‌ಟಿಸಿ (KKRTC) ಕಂಡಕ್ಟರ್ ಅರ್ಜುನ್ ಕಟ್ಟಿಮನಿ ಹಲ್ಲೆಗೆ ಒಳಗಾಗಿದ್ದಾರೆ. ಯಾದಗಿರಿಯಿಂದ ಕಲಬುರಗಿಗೆ ಬಸ್ ಬರುವಾಗ, ವಾಡಿಯ ರಾವೂರ್ ಬಳಿ ಮಹಿಳೆಯೊಬ್ಬರು ಬಸ್ ಹತ್ತಿದ್ದು, ಬೇರೆಯವರ ಆಧಾರ್ ಕಾರ್ಡ್ ತೋರಿಸಿ ಟೆಕೆಟ್ ಪಡೆಯಲು ಮುಂದಾಗಿದ್ದಾರೆ. ಇದನ್ನು ಕಂಡ ನಿರ್ವಾಹಕ ನಿಮ್ಮ ಆಧಾರ್ ಕಾರ್ಡ್ ಕೊಡಿ, ಇದು ಬೇರೆಯವರ ಆಧಾರ್ ಕಾರ್ಡ್ ಎಂದು ಹೇಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಸಾವು – ಒಂದು ತಿಂಗಳ ಅಂತರದಲ್ಲಿ 17 ಮಂದಿ ಬಲಿ

    ಈ ವೇಳೆ ಮಹಿಳೆ ತನ್ನ ಸಂಬಂಧಿಕರಿಗೆ ಕರೆ ಮಾಡಿದ್ದಾಳೆ. ವಾಡಿ ಪಟ್ಟಣ ಆಗಮಿಸುತ್ತಿದ್ದಂತೆ ಮಹಿಳೆಯ ಸಂಬಂಧಿಕರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಕೆಲಕಾಲ ಪ್ರಜ್ಞೆ ತಪ್ಪಿದ ನಿರ್ವಾಹಕ ಬಳಿಕ ಎಚ್ಚೆತ್ತುಕೊಂಡು ಬಳಿಕ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ ಡ್ಯಾಂ ಐತಿಹಾಸಿಕ ದಾಖಲೆಗೆ 1 ಅಡಿಯಷ್ಟೇ ಬಾಕಿ

  • ಹಾಸನ| ನಕಲಿ ಆಧಾರ್ ಕಾರ್ಡ್ ಹೊಂದಿದ್ದ ಮೂವರು ಬಾಂಗ್ಲಾ ಪ್ರಜೆಗಳ ಬಂಧನ

    ಹಾಸನ| ನಕಲಿ ಆಧಾರ್ ಕಾರ್ಡ್ ಹೊಂದಿದ್ದ ಮೂವರು ಬಾಂಗ್ಲಾ ಪ್ರಜೆಗಳ ಬಂಧನ

    ಹಾಸನ: ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಹಾಸನ ನಗರದಲ್ಲಿ ವಾಸವಿದ್ದ ಮೂವರು ಬಾಂಗ್ಲಾ ಪ್ರಜೆಗಳನ್ನು ಡಿಸಿಆರ್‌ಬಿ ( District Crime Record Bureau) ಪೊಲೀಸರು ಬಂಧಿಸಿದ್ದಾರೆ.

    ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಕು ಬಂಧಿತರು. ಹಾಸನ (Hassan) ನಗರದ 80 ಅಡಿ ರಸ್ತೆಯ, ಗದ್ದೆಹಳ್ಳದ, ನಾಲ್ಕನೇ ಅಡ್ಡ ರಸ್ತೆಯ ಜುಬೇರ್ ಎಂಬವನ ಮನೆಯಲ್ಲಿ ಈ ಮೂವರು ವಾಸವಿದ್ದರು. ಜುಬೇರ್ ಮನೆಯ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದರು. ಈ ಮೂವರು ಪಶ್ಚಿಮಬಂಗಾಳದ ವಿಳಾಸವಿರುವ ನಕಲಿ ಆಧಾರ್‌ಕಾರ್ಡ್ ಹೊಂದಿದ್ದರು. ಇದನ್ನೂ ಓದಿ: ಜೀವಭಯದಿಂದ ಹಿಜ್ಬುಲ್ಲಾ ಲೀಡರ್ ಇರಾನ್‌ಗೆ ಪಲಾಯನ

    ನುಸುಳುಕೋರರನ್ನು ಡಿಸಿಆರ್‌ಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೀಪಾವಳಿಗೆ ಟಿಕೆಟ್‌ ದರ ಏರಿಸಿದ್ರೆ ನೋಂದಣಿ ರದ್ದು: ಖಾಸಗಿ ಬಸ್‌ ಕಂಪನಿಗಳಿಗೆ ಸಾರಿಗೆ ಇಲಾಖೆ ಎಚ್ಚರಿಕೆ

  • ಲಾಡ್ಜ್‌ಗಳಲ್ಲಿ ತಂಗಲು ಕಲಬುರಗಿ ಯುವಕನ ಆಧಾರ್ ನಕಲು ಮಾಡಿದ್ದ ಬಾಂಬರ್; ಸ್ಫೋಟಕ ರಹಸ್ಯ ಬಯಲು

    ಲಾಡ್ಜ್‌ಗಳಲ್ಲಿ ತಂಗಲು ಕಲಬುರಗಿ ಯುವಕನ ಆಧಾರ್ ನಕಲು ಮಾಡಿದ್ದ ಬಾಂಬರ್; ಸ್ಫೋಟಕ ರಹಸ್ಯ ಬಯಲು

    ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ (Rameshwaram Cafe Blast Case) ಪಶ್ಚಿಮ ಬಂಗಾಳದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರನ ಬಗ್ಗೆ ಒಂದೊಂದೇ ರಹಸ್ಯಗಳು ಬಯಲಾಗುತ್ತಿವೆ.

    ಪಶ್ಚಿಮ ಬಂಗಾಳದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರನ್ನ ಬೆಂಗಳೂರಿಗೆ (Bengaluru) ಕರೆತರಲಾಗಿದೆ. ಕೋಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಶಂಕಿತರಾದ ಅಬ್ದುಲ್ ಮತೀನ್ ತಾಹ, ಮುಸಾವಿರ್ ಹುಸೇನ್‌ನನ್ನು ಎನ್‌ಐಎ ಪೊಲೀಸರು ಕರೆತಂದ್ದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ನಡುವೆ ಶಂಕಿತ ಉಗ್ರ ತೀರ್ಥಹಳ್ಳಿಯ ಮುಸಾವೀರ್ ಲಾಡ್ಜ್‌ಗಳಲ್ಲಿ ತಂಗೋದಕ್ಕೆ ಕಲಬುರಗಿ ನಗರದ (Kalaburagi City) ಯುವಕನೊಬ್ಬನ ಆಧಾರ್ ಕಾರ್ಡ್ (Aadhar Card) ಅನ್ನು ನಕಲು ಮಾಡಿ ಬಳಸಿದ್ದಾನೆ ಅನ್ನೋ ಸಂಗತಿ ಬೆಳಕಿಗೆ ಬಂದಿದೆ.

    ಹೌದು. ಮುಸಾವಿರ್‌ ಸಾಜೀದ್ ಹುಸೇನ್ ಕಲಬುರಗಿಯ ವರ್ಧನನಗರ ಬಡಾವಣೆಯ ಅನ್‌ಮೋಲ್ ಎಂಬ ಯುವಕನ ಆಧಾರ ಕಾರ್ಡ್ ಫೇಕ್ ಮಾಡಿಕೊಂಡು, ಈ ಕಾರ್ಡ್ ಬಳಸಿ ವಿವಿಧ ಲಾಡ್ಜ್‌ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದ. ಎನ್‌ಐಎ ತಂಡ ಆಧಾರ್ ಕಾರ್ಡ್‌ನಲ್ಲಿದ್ದ ವಿಳಾಸವನ್ನು ಪರಿಶೀಲಿಸಿದ ಬಳಿಕವೇ ಅದು ಫೇಕ್ ಎಂದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

    ಸದ್ಯ ಶಂಕಿತ ಉಗ್ರ ಕಲಬುರಗಿ ಮೂಲದ ಯುವಕನ ಆಧಾರ್ ಕಾರ್ಡನ್ನೇ ನಕಲು ಮಾಡಿದ್ದೇಕೆ? ಶಂಕಿತ ಉಗ್ರನಿಗೆ ಆ ಯುವಕನ ಸಂಪರ್ಕ ಇತ್ತಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರು ಕೆಫೆ ಬ್ಲಾಸ್ಟ್‌ ಪ್ರಕರಣ; ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ ಎನ್‌ಐಎ

    ಬಾಂಬ್ ಬ್ಲಾಸ್ಟ್ ಕೇಸಲ್ಲಿ ಬಂಧಿತರಾಗಿರುವ ಮುಜಾಮಿಲ್ ಶರೀಫ್, ಮಾಜ್ ಮಾನಿರ್ ಹೇಳಿಕೆ ಅಧರಿಸಿ ವಿಚಾರಣೆ ನಡೆಸಲಾಗುವುದು. ರಾಮೇಶ್ವರಂ ಬಾಂಬ್ ಸ್ಫೋಟ ಕೇಸಲ್ಲಿ ಯರ‍್ಯಾರ ಪಾತ್ರ ಏನಿತ್ತು? ಈ ಕೃತ್ಯದ ಹಿಂದೆ ಬೇರೆ ಯಾರೆಲ್ಲಾ ಇದ್ದಾರೆ? ರಾಮೇಶ್ವರಂ ಕೆಫೆಯಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ ಉದ್ದೇಶವೇನು? ಬೇರೆ ಎಲ್ಲೆಲ್ಲಿ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಲಾಗಿತ್ತು ಎಂಬ ಅಂಶಗಳು ಸೇರಿದಂತೆ ನಾನಾ ದೃಷ್ಟಿಕೋನದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

    ಇಂದು ಬೆಳಗ್ಗೆ 10 ಗಂಟೆಗೆ ಎನ್‌ಐಎ ವಿಶೇಷ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ. ಭದ್ರತಾ ದೃಷ್ಟಿಯಿಂದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿರುವ ಅಧಿಕಾರಿಗಳು, 14 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ – ವ್ಯಕ್ತಿ, ಆತನ ಇಬ್ಬರು ಸಹೋದರಿಯರು ದುರ್ಮರಣ

  • ಇಬ್ಬರಿಗೂ ಒಂದೇ ಆಧಾರ್‌ ಕಾರ್ಡ್‌ – ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬುರ್ಖಾಧಾರಿ ಮಹಿಳೆಯರು

    ಇಬ್ಬರಿಗೂ ಒಂದೇ ಆಧಾರ್‌ ಕಾರ್ಡ್‌ – ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬುರ್ಖಾಧಾರಿ ಮಹಿಳೆಯರು

    ಬೆಂಗಳೂರು: ಒಂದೇ ಆಧಾರ್‌ ಕಾರ್ಡ್‌ (Aadhar Card) ಬಳಸಿ ಶಕ್ತಿ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರು ರೆಡ್‌ಹ್ಯಾಂಡಾಗಿ ನಿರ್ವಾಹಕನ (Conductor) ಕೈಗೆ ಸಿಕ್ಕಿ ಬಿದ್ದಿದ್ದಾರೆ.

    ನಿರ್ವಾಹಕರು ಎಂದಿನಿಂತೆ ಟಿಕೆಟ್‌ ಕೊಡುವ ಮುನ್ನ ದಾಖಲೆ ಕೇಳಿದ್ದಾರೆ. ಈ ವೇಳೆ ಮಹಿಳೆಯರು ಆಧಾರ್‌ ಕಾರ್ಡ್‌ ತೋರಿಸಿದ್ದಾರೆ. ಇಬ್ಬರ ಕಾರ್ಡ್‌ನಲ್ಲಿ ಒಂದೇ ನಂಬರ್‌ ಇರುವುದನ್ನು ನೋಡಿ ಇದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಒಬ್ಬರು ಟಿಕೆಟ್‌ ಪಡೆದು ಪ್ರಯಾಣಿಸಿದ್ದಾರೆ.   ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – ಬೆಂಗಳೂರು, ಹೈದರಾಬಾದ್ ಬಳಿಕ ಅಹಮದಾಬಾದ್‍ನ ಎಫ್‍ಎಸ್‍ಎಲ್‍ಗೆ ಮೊಬೈಲ್ ರವಾನೆ

    ನಿರ್ವಾಹಕನೇ ಈ ವಿಡಿಯೋ ಮಾಡಿ ಯಾವ ರೀತಿ ಮಹಿಳೆಯರು ಮೋಸ ಮಾಡುತ್ತಾರೆ ಎಂದು ವಿವರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಕರ್ನಾಟಕ ರಾಜ್ಯಕ್ಕೆ ಸೇರಿದ ಮಹಿಳೆಯರು ಮಾತ್ರ ಶಕ್ತಿ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಬೇರೆ ರಾಜ್ಯದವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.

     

  • ಇನ್ನು ಮುಂದೆ ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸುವಂತಿಲ್ಲ – ಡಿ.1ರಿಂದ ಜಾರಿಯಾಗಲಿರುವ ಕಠಿಣ ನಿಯಮಗಳು ಏನು?

    ಇನ್ನು ಮುಂದೆ ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸುವಂತಿಲ್ಲ – ಡಿ.1ರಿಂದ ಜಾರಿಯಾಗಲಿರುವ ಕಠಿಣ ನಿಯಮಗಳು ಏನು?

    ನವದೆಹಲಿ: ನೀವು ಹೊಸ ಸಿಮ್‌ ಕಾರ್ಡ್‌ (Sim Card) ಖರೀದಿ ಮಾಡುತ್ತೀರಾ? ಹಾಗಾದ್ರೆ ಡಿ.1 ರಿಂದ ಕೆಲ ಕಠಿಣ ನಿಯಮಗಳನ್ನು ಪಾಲಿಸಬೇಕು. ಗ್ರಾಹಕರು ಮಾತ್ರವಲ್ಲ ಸಿಮ್‌ ವಿತರಿಸುವ ಡೀಲರ್‌ಗಳು ಸಹ ಕಠಿಣ ನಿಯಮಗಳನ್ನು ಪಾಲಿಸಲೇಬೇಕು. ನಿಯಮ ಪಾಲಿಸದೇ ಉಲ್ಲಂಘನೆ ಮಾಡಿದರೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಗಂಭೀರ ಪ್ರಕರಣವಾದಲ್ಲಿ ಜೈಲು (Jail) ಶಿಕ್ಷೆಯನ್ನು ವಿಧಿಸಲಾಗುತ್ತದೆ.

    ಬಹುತೇಕ ಸೈಬರ್ ಅಪರಾಧಗಳು ಮತ್ತು ದೇಶವಿರೋಧಿ ಕೃತ್ಯಗಳನ್ನು ಸುಳ್ಳು ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು (Mobile Sim) ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮ ಕೈಗೊಂಡಿದೆ.

    ಹೊಸ ನಿಯಮಗಳು ಏನು?
    ವ್ಯಾಪಾರಸ್ಥರು/ ಕಂಪನಿಗಳಿಗೆ ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಬಳಕೆದಾರರು ಒಂದು ಗುರುತಿನಿಂದ ಗರಿಷ್ಠ 9 ಸಿಮ್‌ಗಳನ್ನು ಮಾತ್ರ ಪಡೆಯಬಹುದು.

    ಸಿಮ್‌ ಕಾರ್ಡ್‌ ರದ್ದು/ ನಿಷ್ಕ್ರಿಯಗೊಳಿಸಿದ 90 ದಿನಗಳ ನಂತರ ಆ ಸಂಖ್ಯೆಯನ್ನು ಬೇರೆ ಗ್ರಾಹಕರಿಗೆ ನೀಡಲಾಗುತ್ತದೆ.

    ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ (Aadhar Card) ಮತ್ತು ಜನಸಂಖ್ಯಾ ಡೇಟಾವನ್ನು (Demographic Data Collection) ಸಲ್ಲಿಸಬೇಕಾಗುತ್ತದೆ.

    ನೋಂದಾಯಿಸದ ಡೀಲರ್‌ಗಳ ಮೂಲಕ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದರೆ ಹೊಸ ನಿಯಮಗಳ ಪ್ರಕಾರ ಟೆಲಿಕಾಂ ಆಪರೇಟರ್‌ಗಳಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

    ಎಲ್ಲಾ ಸಿಮ್‌ ಕಾರ್ಡ್‌ ಡೀಲರ್‌ಗಳು ಕಡ್ಡಾಯವಾಗಿ ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಸಿಮ್‌ ಕಾರ್ಡ್‌ ಡೀಲರ್‌ಗಳು ಅಥವಾ ಚಿಲ್ಲರೆ ವ್ಯಾಪಾರಿಯು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಗುರುತಿನ ಸಂಖ್ಯೆ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಅಥವಾ ಪಾಸ್‌ಪೋರ್ಟ್, ಪಾನ್‌, ಸರಕು ಮತ್ತು ಸೇವಾ ತೆರಿಗೆ ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.

    ಸಿಮ್‌ ಡೀಲರ್‌ಗಳು ನಕಲಿ ದಾಖಲೆಗಳನ್ನು ಸಲ್ಲಿಸಿದರೆ, ಟೆಲಿಕಾಂ ಆಪರೇಟರ್‌ಗಳು ಅವರ ಐಡಿಯನ್ನು ನಿರ್ಬಂಧಿಸಬೇಕು. ಅಷ್ಟೇ ಅಲ್ಲದೇ ಸಿಮ್‌ ಡೀಲರ್‌ನಿಂದ ಯಾರಿಗೆಲ್ಲ ಸಿಮ್‌ ಕಾರ್ಡ್‌ ವಿತರಣೆಯಾಗಿದೆಯೋ ಆ ಎಲ್ಲಾ ಗ್ರಾಹಕರು ಸಿಮ್‌ ಪಡೆಯಲು ನೀಡಿದ ದಾಖಲೆಗಳನ್ನು ಮರು ಪರಿಶೀಲಿಸಬೇಕಾಗುತ್ತದೆ.  ಇದನ್ನೂ ಓದಿ: ಭಾರತದಲ್ಲಿ ಐಫೋನ್‌ ಉತ್ಪಾದನೆ ವಿಸ್ತರಿಸಲು 13,337 ಕೋಟಿ ಹೂಡಿಕೆಗೆ ಫಾಕ್ಸ್‌ಕಾನ್‌ ಯೋಜನೆ 

    ನವೆಂಬರ್ 30 ರೊಳಗೆ ನೋಂದಾಯಿಸದೇ ಉಳಿಯುವ ಸಿಮ್ ಕಾರ್ಡ್ ಮಾರಾಟಗಾರರು 10 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

     

    ಅಶ್ವಿನಿ ವೈಷ್ಣವ್‌ ಹೇಳಿದ್ದೇನು?
    ಹಿಂದೆ ಸಿಮ್‌ ಕಾರ್ಡ್‌ ಬಲ್ಕ್‌ ಆಗಿ ಖರೀದಿಸಲು ಅವಕಾಶವಿತ್ತು. ಇನ್ನು ಮುಂದೆ ಇದನ್ನು ಕೊನೆಗೊಳಿಸಿ ಸರಿಯಾದ ವ್ಯಾಪಾರ ಸಂಪರ್ಕದ ನಿಬಂಧನೆಯನ್ನು ತರುತ್ತೇವೆ. ಇದರಿಂದಾಗಿ ಮೋಸದ ಕರೆಗಳನ್ನು ನಿಲ್ಲಿಸಲು ಸಹಾಯವಾಗಲಿದೆ. ದೇಶದಲ್ಲಿ 10 ಲಕ್ಷ ಸಿಮ್ ಡೀಲರ್‌ಗಳಿದ್ದು, ಅವರಿಗೆ ಪೊಲೀಸ್ ಪರಿಶೀಲನೆಗೆ ಸಾಕಷ್ಟು ಸಮಯ ನೀಡಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್‌ ಆಗಸ್ಟ್‌ನಲ್ಲಿ ತಿಳಿಸಿದ್ದರು.

    ಈ ವರ್ಷದ ಮೇ ತಿಂಗಳಲ್ಲಿ, ಪಂಜಾಬ್ ಪೊಲೀಸರು (Punjab Police) ನಕಲಿ ಗುರುತಿನ ಮೂಲಕ ಸಕ್ರಿಯಗೊಂಡ 1.8 ಲಕ್ಷ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಿದ್ದರು. ಈ ಸಿಮ್ ಕಾರ್ಡ್‌ಗಳನ್ನು ನೀಡಿದ್ದಕ್ಕಾಗಿ 17 ಜನರನ್ನು ಬಂಧಿಸಿದ್ದರು.

  • ಬ್ಯಾಂಕ್ ಖಾತೆ – ಆಧಾರ್ ಲಿಂಕ್ ಆಗದಿದ್ರೆ ಸಿಗಲ್ಲ ಕಾಸು

    ಬ್ಯಾಂಕ್ ಖಾತೆ – ಆಧಾರ್ ಲಿಂಕ್ ಆಗದಿದ್ರೆ ಸಿಗಲ್ಲ ಕಾಸು

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಟ್ಟಿನಿಂದ ಸ್ತ್ರೀ, ಬಳಿಕ ಪುರುಷ- ದಾಖಲೆಯಲ್ಲಿ ಲಿಂಗ ಬದಲಾವಣೆ ಅರ್ಜಿಗೆ ಕೋರ್ಟ್ ಹೇಳಿದ್ದೇನು?

    ಹುಟ್ಟಿನಿಂದ ಸ್ತ್ರೀ, ಬಳಿಕ ಪುರುಷ- ದಾಖಲೆಯಲ್ಲಿ ಲಿಂಗ ಬದಲಾವಣೆ ಅರ್ಜಿಗೆ ಕೋರ್ಟ್ ಹೇಳಿದ್ದೇನು?

    ಜೈಪುರ್: ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಯ ನಂತರ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗವನ್ನು ನವೀಕರಿಸಲು ದೈಹಿಕ ಶಿಕ್ಷಣದ ಶಿಕ್ಷಕನಿಗೆ (Physical Training Instructor) ರಾಜಸ್ಥಾನ ಹೈಕೋರ್ಟ್ (Rajasthan High Court) ಅನುಮತಿ ನೀಡಿದೆ. ಅಲ್ಲದೆ ಅರ್ಜಿದಾರರು ತಮ್ಮ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

    ಒಬ್ಬ ವ್ಯಕ್ತಿಯ ಲಿಂಗದ ಗುರುತನ್ನು (Gender Identity) ಆಯ್ಕೆ ಮಾಡುವ ಹಕ್ಕು ಅವರ ವ್ಯಕ್ತಿತ್ವದ ಅತ್ಯಗತ್ಯ ಭಾಗವಾಗಿದೆ. ಅಲ್ಲದೆ ಅವರ ಸ್ವ ನಿರ್ಣಯ, ಘನತೆ ಮತ್ತು ಮೂಲಭೂತ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ಎಂದು ನ್ಯಾಯಾಲಯವು ಒತ್ತಿ ಹೇಳಿದೆ. ಅಲ್ಲದೆ ವ್ಯಕ್ತಿಯ ಲೈಂಗಿಕ ದೃಷ್ಟಿಕೋನ ಅಥವಾ ಲಿಂಗದ ಗುರುತಿನ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ಮಾಡುವಂತಿಲ್ಲ. ಎಲ್ಲರಿಗೂ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಆನಂದಿಸಲು ಹಕ್ಕಿದೆ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್ ತೀರ್ಪಿನ ವೇಳೆ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ರಾಹುಲ್‌ಗಾಂಧಿ 3 ವರ್ಷ ಸಾಮಾನ್ಯ ಪಾಸ್‌ಪೋರ್ಟ್‌ ಬಳಸಲು ದೆಹಲಿ ಕೋರ್ಟ್‌ ಅನುಮತಿ

    ಏನಿದು ಪ್ರಕರಣ?: ಹುಟ್ಟಿನಿಂದ ಹೆಣ್ಣು ಎಂದು ಗುರುತಿಸಲಾಗಿದ್ದ ವ್ಯಕ್ತಿಯೊಬ್ಬರು ಮಹಿಳಾ ವರ್ಗದಲ್ಲಿ ದೈಹಿಕ ತರಬೇತಿ ಬೋಧಕರಾಗಿ ನೇಮಕಗೊಂಡಿದ್ದರು. 32 ನೇ ವಯಸ್ಸಿನಲ್ಲಿ ಲಿಂಗದ ಗುರುತಿನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ನಂತರ ಲಿಂಗ ಮರುವಿನ್ಯಾಸ ಶಸ್ತ್ರಚಿಕಿತ್ಸೆಗೆ ಒಳಗಾಗಿ ಪುರುಷರಾಗಿ ಬದಲಾದರು. ಈ ಬಗ್ಗೆ ಅವರು ವೈದ್ಯರ ದೃಢೀಕರಣವನ್ನು ಪಡೆದಿದ್ದಾರೆ. ಬಳಿಕ ಅವರು ಆಧಾರ್ ಕಾರ್ಡ್‍ನಲ್ಲಿ (Aadhar Card) ತಮ್ಮ ಹೆಸರನ್ನು ಹಾಗೂ ಲಿಂಗವನ್ನು ಕಾನೂನುಬದ್ಧವಾಗಿ ಬದಲಾಯಿಸಿದ್ದಾರೆ. ಅಲ್ಲದೆ ಅರ್ಜಿದಾರರು ಮದುವೆಯಾಗಿ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ. ಆದರೆ ಮೂರು ವರ್ಷಗಳಿಂದ ಸೇವಾ ದಾಖಲೆಯಲ್ಲಿ ಹೆಸರು ಮತ್ತು ಲಿಂಗ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಐಡಿ ಪ್ರೂಫ್ ಇಲ್ಲದೆ 2,000 ರೂ. ನೋಟು ವಿನಿಮಯ ವಿರುದ್ಧ ಮನವಿ- ದೆಹಲಿ ಹೈಕೋರ್ಟ್‌ನಿಂದ ಅರ್ಜಿ ವಜಾ

  • ಲೂಡೋ ಆಡುವಾಗ ಲವ್‌ – ಪಾಕ್‌ ಗೆಳತಿಯನ್ನು ಮದ್ವೆಯಾಗಿದ್ದ ಬೆಂಗ್ಳೂರು ಸೆಕ್ಯೂರಿಟಿ ಗಾರ್ಡ್‌ ಅರೆಸ್ಟ್‌

    ಲೂಡೋ ಆಡುವಾಗ ಲವ್‌ – ಪಾಕ್‌ ಗೆಳತಿಯನ್ನು ಮದ್ವೆಯಾಗಿದ್ದ ಬೆಂಗ್ಳೂರು ಸೆಕ್ಯೂರಿಟಿ ಗಾರ್ಡ್‌ ಅರೆಸ್ಟ್‌

    ಬೆಂಗಳೂರು: ಪಾಕಿಸ್ತಾನಿ ಗೆಳತಿಯನ್ನು ಅಕ್ರಮವಾಗಿ ಇಟ್ಟುಕೊಂಡು ಸಂಸಾರ ಮಾಡುತ್ತಿದ್ದ ವ್ಯಕ್ತಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಉತ್ತರ ಪ್ರದೇಶ ಮುಲಾಯಂ ಸಿಂಗ್ ಯಾದವ್(25) ಬಂಧಿತ ಆರೋಪಿ. ಮುಲಾಯಂ ಸಿಂಗ್‌ ಜೊತೆ ಇದ್ದ ಪಾಕಿಸ್ತಾನದ (Pakistan) ಇಕ್ರಾ ಜೀವನಿಯನ್ನು(19) ಬಂಧಿಸಿ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.

    ಲವ್‌ ಹೇಗಾಯ್ತು?
    ಮುಲಾಯಂ ಸಿಂಗ್ ಯಾದವ್ ಕಳೆದ ಏಳು ವರ್ಷಗಳಿಂದ ಬೆಂಗಳೂರಿನ (Bengaluru) ಬೇರೆ ಬೇರೆ ಕಂಪನಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ (Security Guard) ಆಗಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ಆನ್‌ಲೈನ್‌ನಲ್ಲಿ ಲೂಡೋ ಆಡುವ ಹವ್ಯಾಸವಿತ್ತು. ಈ ಆಟದ ಸಮಯದಲ್ಲೇ ಪಾಕ್‌ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

    ಗೆಳತಿ ಪಾಕಿಸ್ತಾನದಲ್ಲಿರುವ ಕಾರಣ ನೇರವಾಗಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ಅರಿತ ಆತ ಕರಾಚಿಯಿಂದ ದುಬೈಗೆ, ದುಬೈಯಿಂದ ನೇಪಾಳದ ಕಠ್ಮಂಡುಗೆ ಕರೆಸಿಕೊಂಡಿದ್ದಾನೆ. ನೇಪಾಳದಲ್ಲಿ ಇಬ್ಬರು ಮದುವೆಯಾಗಿದ್ದು ಬಳಿಕ ಕಳೆದ ಸೆಪ್ಟೆಂಬರ್‌ನಲ್ಲಿ ಬಿಹಾರದ ಗಡಿ ಪ್ರವೇಶಿಸಿ ಪಾಟ್ನಾಗೆ ಬಂದಿದ್ದಾರೆ. ಬಳಿಕ ರೈಲಿನಲ್ಲಿ ಬೆಂಗಳೂರಿಗೆ ಆಗಮಿಸಿ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ನೆಲೆಸಿದ್ದರು.

    ಕರೆಯಿಂದ ಪತ್ತೆ
    ಇಕ್ರಾ ಜೀವನಿ ಪಾಕಿಸ್ತಾನದಲ್ಲಿರುವ ತಾಯಿಗೆ ಆಗಾಗ ಸಂಪರ್ಕ ಮಾಡುತ್ತಿದ್ದಳು. ಈ ವಿಷಯ ತಿಳಿದು ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸೈನ್ಸ್ ಓದಲು ಇಷ್ಟವಿಲ್ಲ- ಕಾಲೇಜಿನಲ್ಲೇ ಪಿಯು ವಿದ್ಯಾರ್ಥಿನಿ ನೇಣಿಗೆ ಶರಣು


    ಇಕ್ರಾ ಜೀವನಿ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಎಫ್‌ಆರ್‌ಆರ್‌ಒ ಮೂಲಕ ಆಕೆಯನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಮುಲಾಯಂ ಸಿಂಗ್ ಯಾದವ್ ಮೇಲೆ ವಿದೇಶಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಮಂಗಳವಾರ ಆತನನ್ನು ಕಸ್ಟಡಿಗೆ ಪಡೆಯಲು ಪೊಲೀಸರು ತಯಾರಿ ನಡೆಸಿದ್ದಾರೆ.

    ನಕಲಿ ಆಧಾರ್‌ ಕಾರ್ಡ್‌
    ತನಿಖೆಯ ವೇಳೆ ಈಕೆ ರವಾ ಯಾದವ್‌ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ ಪಡೆದ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಆ ಹೆಸರಿನಲ್ಲೇ ಪಾಸ್‌ಪೋರ್ಟ್‌ ಪಡೆಯಲು ಅರ್ಜಿ ಹಾಕಿದ್ದಾಳೆ. ಈಗ ಈ ಆಧಾರ್‌ ಕಾರ್ಡ್‌ ಹೇಗೆ ಸಿಕ್ಕಿದೆ ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ. ಅಷ್ಟೇ ಮಧ್ಯಮ ವರ್ಗದ ಕುಟುಂಬದ ಆಕೆ ಕರಾಚಿಯಿಂದ ದುಬೈಗೆ, ದುಬೈಯಿಂದ ಕಠ್ಮಂಡುಗೆ ಬರಲು ಹೇಗೆ ಸಾಧ್ಯವಾಯಿತು? ಯಾರಾದರೂ ಸಹಾಯ ಮಾಡಿದ್ದಾರಾ ಈ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಡಿತ ಬಿಡು ಎಂದಿದ್ದಕ್ಕೆ ಮನೆಯನ್ನೇ ತೊರೆದಿದ್ದ – ಆಧಾರ್‌ಗಾಗಿ 24 ವರ್ಷಗಳ ಬಳಿಕ ವಾಪಸ್‌ ಬಂದ

    ಕುಡಿತ ಬಿಡು ಎಂದಿದ್ದಕ್ಕೆ ಮನೆಯನ್ನೇ ತೊರೆದಿದ್ದ – ಆಧಾರ್‌ಗಾಗಿ 24 ವರ್ಷಗಳ ಬಳಿಕ ವಾಪಸ್‌ ಬಂದ

    ಕೊಪ್ಪಳ: ಕುಡಿತ ಬಿಡು ಎಂದು ಮಾವ ಬದ್ಧಿಮಾತು ಹೇಳಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿ, ಆಧಾರ್‌ ಕಾರ್ಡ್‌ಗಾಗಿ (Aadhar Card) 24 ವರ್ಷಗಳ ಬಳಿಕ ಮತ್ತೆ ಮನೆಗೆ ಮರಳಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಹೌದು ಈತನ ಹೆಸರು ಗಂಗಾಧರ. ಕೊಪ್ಪಳ (Koppala) ಜಿಲ್ಲೆಯ ಕನಕಗಿರಿ ತಾಲೂಕಿನ ಚಿಕ್ಕಖೇಡ ಗ್ರಾಮದ ನಿವಾಸಿ. ಈತನಿಗೆ ಕಳೆದ 24 ವರ್ಷಗಳ ಹಿಂದೆ ಕುಡಿತ ಬಿಡು ಎಂದು ಮಾವ ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ. ಮಾವ ಬೈದ ಎಂಬ ಒಂದೇ ಕಾರಣಕ್ಕೆ ಅಂದು ಗ್ರಾಮವನ್ನೇ ಬಿಟ್ಟು ಹೋಗಿದ್ದವನು ಇದೀಗ ಮತ್ತೆ ತವರು ಸೇರಿದ್ದಾನೆ. ಇದನ್ನೂ ಓದಿ: ಯುವತಿಗೆ ಆ್ಯಸಿಡ್ ಹಾಕಿ ಜೈಲು ಸೇರಿರುವ ನಾಗನಿಗೆ ಗ್ಯಾಂಗ್ರಿನ್

    ಗಂಗಾದರ್ ಮನೆ ಬಿಟ್ಟು ಹೋಗ್ತಿದ್ದಂತೆ ಮನೆಯವರು ಈತನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಬೇಸತ್ತ ಕುಟುಂಬಸ್ಥರು ಗಂಗಾಧರ ಮೃತಪಟ್ಟಿರಬಹುದು ಎಂದು ಕೈಚೆಲ್ಲಿ ಕೂತಿದ್ರು. ಇತ್ತ ಗಂಗಾಧರ್ ಮಂಗಳೂರಿನ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಕುಟುಂಬಸ್ಥರನ್ನು ನೆನಪು ಮಾಡಿಕೊಳ್ಳದೇ 24 ವರ್ಷಗಳಿಂದ ಜೀವನ ನಡೆಸ್ತಿದ್ದ. ಮಂಗಳೂರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು ಹೋಗಿದ್ದ ವೇಳೆ ಆಧಾರ್ ಕಾರ್ಡ್ ಕೇಳಿದ್ದಾರೆ. ಆಧಾರ ಕಾರ್ಡ್ ಇಲ್ಲದೆ ಇರುವುದರಿಂದ ಚಿಕ್ಕಖೇಡ ಗ್ರಾಮಕ್ಕೆ ಒಮ್ಮೆ ಬಂದು ಹೋಗಿದ್ದ. ಆಗ ಮನೆಯವರು ಸಿಕ್ಕಿರಲಿಲ್ಲ. ಇದೀಗ ಎರಡನೇ ಬಾರಿ ಗ್ರಾಮಕ್ಕೆ ಆಗಮಿಸಿ ಮನೆ ಹುಡುಕಾಡಿ, ತವರು ಸೇರಿಕೊಂಡಿದ್ದಾನೆ.

    ಗಂಗಾಧರನಿಗೆ ಹೆಂಡತಿ ಸೇರಿದಂತೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಕ್ಕಳಿಗೆ 2 ವರ್ಷಗಳು ಆಗಿದ್ದಾಗ ಮನೆ ಬಿಟ್ಟು ಹೋಗಿದ್ದಾನೆ. ಈಗ ಮಕ್ಕಳು ದೊಡ್ಡವರಾಗಿದ್ದಾರೆ. ಮಕ್ಕಳು ತಮಗೆ ಬುದ್ದಿ ತಿಳಿದಾಗಿನಿಂದ ತಂದೆಗಾಗಿ ಹುಡುಕಾಟವನ್ನು ನಡೆಸಿ, ತಂದೆ ಬದುಕಿಲ್ಲ ಅಂದುಕೊಂಡಿದ್ರು. ಆದರೆ ಹೆಂಡತಿ ಮಾತ್ರ ಗಂಡನು ಇನ್ನೂ ಬದುಕಿದ್ದಾನೆ ಎನ್ನುವ ನಂಬಿಕೆಯಲ್ಲಿಯೇ ತಾಳಿಯನ್ನು ತೆಗೆಯದೇ ಕಾಯುತ್ತಿದ್ದಳು. 24 ವರ್ಷಗಳ ನಂತರ ಗಂಗಾಧರ ಮನೆಗೆ ಬಂದಿರುವುದು ಮಕ್ಕಳು, ಹೆಂಡತಿಯಲ್ಲಿ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಮಸ್ವರೂಪಿ ರಸ್ತೆ ಗುಂಡಿ ಅವಾಂತರ – ಬೈಕ್‌ನಿಂದ ಬಿದ್ದು ವ್ಯಕ್ತಿ ಕೋಮಾ

    Live Tv
    [brid partner=56869869 player=32851 video=960834 autoplay=true]