Tag: Aadai

  • ಬೆತ್ತಲಾಗಿದ್ದಕ್ಕೆ ನಟಿ ಅಮಲಾ ವಿರುದ್ಧ ದೂರು ದಾಖಲು

    ಬೆತ್ತಲಾಗಿದ್ದಕ್ಕೆ ನಟಿ ಅಮಲಾ ವಿರುದ್ಧ ದೂರು ದಾಖಲು

    ಚೆನ್ನೈ: ಹೆಬ್ಬುಲಿ ಬೆಡಗಿ ನಟಿ ಅಮಲಾ ಪೌಲ್ ‘ಅದಾಯಿ’ ಚಿತ್ರದಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಅವರು ಬೆತ್ತಲಾಗಿ ನಟಿಸಿದ್ದಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ.

    ಅದಾಯಿ ಚಿತ್ರದಲ್ಲಿ ಅಮಲಾ ಪೌಲ್ ನಗ್ನತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಹಾಗೂ ತಮಿಳಿನ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅನೈತು ಮಕ್ಕಲ್ ಕಚ್ಚಿ ಸ್ಥಾಪಕಿ ರಾಜೇಶ್ವರಿ ಪ್ರಿಯಾ ಅವರು ದೂರು ದಾಖಲಿಸಿದ್ದಾರೆ. ಚಿತ್ರದ ಪೋಸ್ಟರ್ ನಲ್ಲಿ ನಗ್ನ ಫೋಟೋ ಹಾಕುವ ಮೂಲಕ ಚಿತ್ರವನ್ನು ಪ್ರಮೋಟ್ ಮಾಡಲಾಗುತ್ತಿದೆ ಎಂದು ವಿರೋಧಿಸಿದ್ದಾರೆ.

    ದೂರು ದಾಖಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜೇಶ್ವರಿ ಪ್ರಿಯಾ ಅವರು, ನಾನು ಡಿಜಿಪಿ ಅವರನ್ನು ಭೇಟಿ ಮಾಡಿ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮಕೈಗೊಳ್ಳಿ ಎಂದು ಬೇಡಿಕೆ ಇಟ್ಟಿದ್ದೇನೆ. ಚಿತ್ರದ ಪ್ರಮೋಶನ್‍ಗಾಗಿ ನಗ್ನ ಪೋಸ್ಟರ್ ಗಳನ್ನು ಬಳಸಲಾಗುತ್ತಿದೆ. ಇದರಿಂದ ಮಕ್ಕಳು ಪ್ರಭಾವಿತರಾಗುತ್ತಾರೆ ಎಂದು ಹೇಳಿದ್ದಾರೆ.

    ಬಳಿಕ ಮಾತನಾಡಿದ ಅವರು, ನಾನು ಈ ಸಿನಿಮಾ ರಿಲೀಸ್ ಆಗಲು ತಡೆಯುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ‘ಎ’ ಸರ್ಟಿಫಿಕೇಟ್ ನೀಡಿದೆ. ಆದರೆ ನಾನು ಈ ಚಿತ್ರದ ಪ್ರಚಾರದ ವಿರುದ್ಧ ಇದ್ದೇನೆ. ಈ ಚಿತ್ರದ ಟ್ರೈಲರ್ ನೋಡಿ ಯುವಕರ ಮನಸ್ಸಿನಲ್ಲಿ ನೆಗೆಟಿವ್ ಆಗಿ ಪ್ರಭಾವ ಬೀರುತ್ತದೆ ಎಂದರು.

    ಅಮಲಾ ತಮಿಳು ಸಂಸ್ಕೃತಿ ಬಗ್ಗೆ ಹೆದರುವುದಿಲ್ಲ. ಏಕೆಂದರೆ ಅವರು ಈ ರಾಜ್ಯದವರು ಅಲ್ಲ. ಅಮಲಾ ಹಣ ಹಾಗೂ ಪ್ರಸಿದ್ಧಿಗಾಗಿ ಏನೂ ಬೇಕಾದರೂ ಮಾಡುತ್ತಾರೆ ಎಂದು ರಾಜೇಶ್ವರಿ ಪ್ರಿಯಾ ನಟಿ ಅಮಲಾ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.

  • ಮಹಿಳೆಯನ್ನು ಕಿಸ್ ಮಾಡಿದ್ರೆ ತಪ್ಪೇನು – ಅಮಲಾ ಪೌಲ್ ಪ್ರಶ್ನೆ

    ಮಹಿಳೆಯನ್ನು ಕಿಸ್ ಮಾಡಿದ್ರೆ ತಪ್ಪೇನು – ಅಮಲಾ ಪೌಲ್ ಪ್ರಶ್ನೆ

    ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ತಮ್ಮ ಮುಂಬರುವ ‘ಅದಾಯಿ’ ಚಿತ್ರದಲ್ಲಿ ವಿಜೆ ರಮ್ಯಾ ಜೊತೆ ಲಿಪ್‍ಲಾಕ್ ಸೀನ್‍ನಲ್ಲಿ ನಟಿಸಿದ್ದರು. ಈ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವು ಜನರು ಅವರನ್ನು ಟೀಕಿಸಲು ಶುರು ಮಾಡಿದ್ದರು. ಈಗ ಈ ಬಗ್ಗೆ ಅಮಲಾ ಪೌಲ್ ಸ್ಪಷ್ಟನೆ ನೀಡಿದ್ದಾರೆ.

    ಇತ್ತೀಚೆಗೆ ಅಮಲಾ ಪೌಲ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರನ್ನು ಕಿಸ್ಸಿಂಗ್ ಸೀನ್ ಬಗ್ಗೆ ಪ್ರಶ್ನಿಸಲಾಯಿತು. ಆಗ ಅವರು, ಮಹಿಳೆಯನ್ನು ಕಿಸ್ ಮಾಡಿದ್ದರೆ ಏನೂ ತಪ್ಪು? ಈ ದೃಶ್ಯ ಸಹಜ ಹೊರತು ಸ್ಕ್ರಿಪ್ಟ್ ಮಾಡಲಿಲ್ಲ. ಒಮ್ಮೆ ನೀವು ಕ್ಯಾರೆಕ್ಟರ್ ನಲ್ಲಿ ಇದ್ದರೆ, ನಿಮ್ಮ ಒಳಗಿರುವ ನಟಿಯ ಪ್ರತಿಭೆಯನ್ನು ಹೊರಹಾಕಬೇಕು ಎಂದರು.

    ಬಳಿಕ ಚಿತ್ರದ ಬಗ್ಗೆ ಮಾತನಾಡಿದ ಅಮಲಾ, ಈ ಚಿತ್ರದಲ್ಲಿ ಲೈಂಗಿಕತೆ ಏನೂ ಇಲ್ಲ. ಚಿತ್ರದ ದೃಶ್ಯಗಳನ್ನು ಅರ್ಥ ಮಾಡಿಕೊಳ್ಳಲು ನೀವು ಸಿನಿಮಾ ವೀಕ್ಷಿಸಬೇಕು. ನಾನು ಪವರ್ ಫುಲ್ ಎಂದು ಭಾವಿಸಿದೆ. ಮೊದಲಿನಲ್ಲಿ ಈ ದೃಶ್ಯ ಮಾಡುವುದು ಹೇಗೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ಈ ದೃಶ್ಯ ಮಾಡಿದ ನಂತರ ನನ್ನ ದೇಹ ಆರಾಮದಾಯಕವಾಗಿತ್ತು. ಅಲ್ಲದೆ ನಾನು ಜಗತ್ತಿನ ಯಾವುದೇ ಸವಾಲನ್ನು ಎದುರಿಸಬಹುದು ಎಂದು ಅನಿಸಿತ್ತು. ಅದಾಯ್ ನನಗೆ ಶಕ್ತಿ ಹಾಗೂ ಟೀಂ ಸ್ಪಿರಿಟ್ ನೀಡಿದೆ ಎಂದು ಹೇಳಿದ್ದಾರೆ.

    ಅದಾಯಿ ಸಿನಿಮಾವನ್ನು ಒಪ್ಪಿಕೊಳ್ಳುವ ಮೊದಲು ನಾನು ನನ್ನ ತಾಯಿ ಬಳಿ ನಗ್ನ ದೃಶ್ಯದ ಬಗ್ಗೆ ಹೇಳಿದೆ. ಆಗ ನನ್ನ ತಾಯಿ, ಆ ಚಿತ್ರಕ್ಕೆ ಅಂತಹ ದೃಶ್ಯ ಬೇಕಾದರೆ ನಟಿಸು ಎಂದು ಅವರು ಹೇಳಿದ್ದರು ಎಂದು ಅಮಲಾ ಹೇಳಿದ್ದಾರೆ.

    ಅದಾಯಿ ಚಿತ್ರದಲ್ಲಿ ಅಮಲಾ ಬೋಲ್ಡ್ ಯುವ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ನಲ್ಲಿ ಅಮಲಾ ಪೌಲ್ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ನಟಿ ಅಮಲಾ, ವಿಜೆ ರಮ್ಯಾ ಅವರ ಜೊತೆ ಲಿಪ್‍ಲಾಕ್ ದೃಶ್ಯದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ `ಎ’ ಸರ್ಟಿಫಿಕೇಟ್ ದೊರೆತಿದ್ದು, ಚೆನ್ನೈ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿದೆ.

  • ವಿಜೆ ರಮ್ಯಾ ಜೊತೆ ಅಮಲಾ ಪೌಲ್ ಲಿಪ್ ಲಾಕ್

    ವಿಜೆ ರಮ್ಯಾ ಜೊತೆ ಅಮಲಾ ಪೌಲ್ ಲಿಪ್ ಲಾಕ್

    ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ವಿಜೆ ರಮ್ಯಾ ಜೊತೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸಿದ್ದು, ಈಗ ಆ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಅದಾಯಿ ಚಿತ್ರದ ಟ್ರೈಲರ್ ನಲ್ಲಿ ಅಮಲಾ ಪೌಲ್ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿ ಅಮಲಾ, ವಿಜೆ ರಮ್ಯಾ ಅವರ ಜೊತೆ ಲಿಪ್‍ಲಾಕ್ ದೃಶ್ಯದಲ್ಲಿ ನಟಿಸಿದ್ದಾರೆ. ಅದಾಯಿ ಚಿತ್ರದ ಟ್ರೈಲರ್ ಅನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಬಿಡುಗಡೆ ಮಾಡಿದ್ದಾರೆ. ಅನುರಾಗ್ ಅವರು ಈ ಟ್ರೈಲರ್ ತಮ್ಮ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ಅದಾಯಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಹೆಮ್ಮೆ ಆಗುತ್ತಿದೆ. ಈ ಸಿನಿಮಾ ನೋಡಲು ನಾನು ಕಾಯುತ್ತಿದ್ದೇನೆ. ಅದಾಯಿ ಚಿತ್ರತಂಡಕ್ಕೆ ಶುಭವಾಗಲಿ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ಹಿಂದೆ ಚಿತ್ರದ ಟೀಸರ್ ಅನ್ನು ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ಬಿಡುಗಡೆ ಮಾಡಿದ್ದರು. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.

    ಈ ಚಿತ್ರದಲ್ಲಿ ಅಮಲಾ ಬೋಲ್ಡ್ ಯುವ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ `ಎ’ ಸರ್ಟಿಫಿಕೇಟ್ ದೊರೆತಿದ್ದು, ಚೆನ್ನೈ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿದೆ. ಪ್ರದೀಪ್ ಕುಮಾರ್ ಹಾಗೂ ಬಾಂಡ್ ಓರ್ಕಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

  • ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದ ಹೆಬ್ಬುಲಿ ನಟಿ

    ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದ ಹೆಬ್ಬುಲಿ ನಟಿ

    ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ ‘ಅದಾಯಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

    ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

    ತಾಯಿ ತನ್ನ ಕಾಣೆಯಾದ ಮಗಳನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ಇಲ್ಲಿಂದ ಶುರುವಾಗುವ ಈ ಟೀಸರ್ ಕೊನೆಯಲ್ಲಿ ಪ್ರತ್ಯೇಕ ಬಹುಮಹಡಿ ಕಟ್ಟಡದಲ್ಲಿ ಅಮಲಾ ಸಂಪೂರ್ಣವಾಗಿ ನಗ್ನಳಾಗಿ ಏಳುವ ದೃಶ್ಯದೊಂದಿಗೆ ಕೊನೆ ಆಗಿದೆ.

    ಈ ಚಿತ್ರದಲ್ಲಿ ಅಮಲಾ ಬೋಲ್ಡ್ ಯುವ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ದೊರೆತಿದ್ದು, ಚೆನ್ನೈ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿದೆ. ಪ್ರದೀಪ್ ಕುಮಾರ್ ಹಾಗೂ ಬಾಂಡ್ ಓರ್ಕಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದಾಗ ನೋಡುಗರನ್ನು ಬೆಚ್ಚಿ ಬೀಳಿಸಿತ್ತು. ಫಸ್ಟ್ ಲುಕ್‍ನಲ್ಲಿ ಅಮಲಾ, ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಕಂಬವನ್ನು ಹಿಡಿದು ಸಹಾಯಕ್ಕಾಗಿ ಅಂಗಲಾಚುತ್ತಿರುವ ರೂಪದಲ್ಲಿ ಅಮಲಾ ಪೌಲ್ ಕಾಣಿಸಿಕೊಂಡಿದ್ದರು.

    ಅಲ್ಲದೆ ಅಮಲಾ ದೇಹದಲ್ಲಿ ಗಾಯಗಳಾಗಿದ್ದು, ರಕ್ತ ಕಾಣುತ್ತಿತ್ತು. ಟಾಯ್ಲೆಟ್ ನಲ್ಲಿರುವ ಪೇಪರ್ ಬಳಸಿ ಮೈಯನ್ನು ಮುಚ್ಚಿಕೊಂಡಿದ್ದರು. ಸಿನಿಮಾ ಟೈಟಲ್ ಕೆಳಗೆ ಅಹಂಕಾರ, ಕೌಶಲ್ಯ ಮತ್ತು ಧೈರ್ಯಶಾಲಿ ಎಂಬ ಪದಗಳನ್ನು ಬರೆಯಲಾಗಿತ್ತು.

    https://twitter.com/karanjohar/status/1140930156929794048?ref_src=twsrc%5Etfw%7Ctwcamp%5Etweetembed%7Ctwterm%5E1140930156929794048%7Ctwgr%5E393039363b636f6e74726f6c&ref_url=https%3A%2F%2Ftimesofindia.indiatimes.com%2Fentertainment%2Ftamil%2Fmovies%2Fnews%2Faadai-teaser-amala-paul-bares-all-after-daring-first-look%2Farticleshow%2F69841934.cms

  • ಮಾನ ಮುಚ್ಚಿಕೊಳ್ಳಲು ಟಾಯ್ಲೆಟ್ ಪೇಪರ್ ಬಳಸಿದ ಅಮಲಾ ಪೌಲ್!

    ಮಾನ ಮುಚ್ಚಿಕೊಳ್ಳಲು ಟಾಯ್ಲೆಟ್ ಪೇಪರ್ ಬಳಸಿದ ಅಮಲಾ ಪೌಲ್!

    ಬೆಂಗಳೂರು: ಕನ್ನಡ ಸೂಪರ್ ಹಿಟ್ ಹೆಬ್ಬುಲಿ ಚಿತ್ರದ ನಾಯಕಿ ಅಮಲಾ ಪೌಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಮಂಗಳವಾರ ‘ಅದಾಯಿ’ ತಮಿಳು ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ನಿರ್ದೇಶಕ ವೆಂಕಟ್ ಪ್ರಭು `ಅದಾಯಿ’ ಸಿನಿಮಾದ ಫಸ್ಟ್ ಲುಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆಗೊಳಿಸಿದ್ದು, ನೋಡುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ಪ್ರೆಟ್ಟಿ ಗರ್ಲ್ ಅಂತಾ ಕರೆಸಿಕೊಳ್ಳುವ ಅಮಲಾಪೌಲ್, ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಕಂಬವನ್ನು ಹಿಡಿದು ಸಹಾಯಕ್ಕಾಗಿ ಅಂಗಲಾಚುತ್ತಿರುವ ರೂಪದಲ್ಲಿ ಅಮಲಾ ಪೌಲ್ ಕಾಣಿಸಿಕೊಂಡಿದ್ದಾರೆ. ಅಮಲಾ ಪೌಲ್ ದೇಹದಲ್ಲಿ ಗಾಯಗಳಾಗಿದ್ದು, ರಕ್ತ ಕಾಣುತ್ತಿದೆ. ಟಾಯ್ಲೆಟ್ ನಲ್ಲಿರುವ ಪೇಪರ್ ಬಳಸಿ ಮೈಯನ್ನು ಮುಚ್ಚಿಕೊಂಡಿದ್ದಾರೆ. ಇನ್ನು ಸಿನಿಮಾ ಟೈಟಲ್ ಕೆಳಗೆ ಅಹಂಕಾರ, ಕೌಶಲ್ಯ ಮತ್ತು ಧೈರ್ಯಶಾಲಿ ಎಂಬ ಪದಗಳನ್ನು ಬರೆಯಲಾಗಿದೆ. ಆದ್ರೆ ಚಿತ್ರತಂಡ ಅಮಲಾ ಪೌಲ್ ಪಾತ್ರದ ಬಗೆಗಿನ ಮಾಹಿತಿಯನ್ನು ರಿವೀಲ್ ಮಾಡಿಲ್ಲ.

    2017ರಲ್ಲಿ ‘ಮೇಯದಾ ಮಾನ್’ ಸೂಪರ್ ಹಿಟ್ ಸಿನಿಮಾ ನೀಡಿದ್ದ ರತ್ನ ಕುಮಾರ್ ನಿರ್ದೇಶನದಲ್ಲಿ ‘ಅದಾಯಿ’ (ಬಟ್ಟೆ) ಮೂಡಿ ಬರುತ್ತಿದೆ. ಮಧು ಎಂಬ ಕಿರುಚಿತ್ರದ ಕಥೆಯನ್ನಾಧರಿಸಿ ಅದಾಯಿ ನಿರ್ಮಿಸಲಾಗುತ್ತಿದ್ದು, ವೈಭವ್, ಪ್ರಿಯಾ ಭವಾನಿ ಶಂಕರ್, ವಿವೇಕ್ ಪ್ರಸನ್ನ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರತಂಡ ಹೊಂದಿದೆ. ಸಿನಿಮಾದ ಫಸ್ಟ್ ಲುಕ್ ಹಲವು ತಾರೆಯರು ಮೆಚ್ಚಿಕೊಂಡಿದ್ದು ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಚಿತ್ರತಂಡ ಶುಭಕೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv