Tag: A S Patil Nadahalli

  • ಯತ್ನಾಳ್ ಪೇಪರ್ ಹುಲಿ, ಯಡಿಯೂರಪ್ಪ ಕಾಲಿನ ಧೂಳಿಗೂ ಸಮವಲ್ಲ: ಎ.ಎಸ್.ಪಾಟೀಲ್

    ಯತ್ನಾಳ್ ಪೇಪರ್ ಹುಲಿ, ಯಡಿಯೂರಪ್ಪ ಕಾಲಿನ ಧೂಳಿಗೂ ಸಮವಲ್ಲ: ಎ.ಎಸ್.ಪಾಟೀಲ್

    – ಯಡಿಯೂರಪ್ಪಗೆ ದ್ರೋಹ ಮಾಡಿದ್ರೆ ಶಾಪ ತಟ್ಟುತ್ತೆ ಎಂದ ಬಿಜೆಪಿ ಮುಖಂಡ

    ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹುಲಿ ಅಲ್ಲ ಇಲಿ. ಅವರೊಬ್ಬ ಪೇಪರ್ ಹುಲಿ ಎಂದು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ (A S Patil Nadahalli) ವಾಗ್ದಾಳಿ ನಡೆಸಿದರು.

    ಯತ್ನಾಳ್‌ರಿಂದ ಹೊಸ ಪಕ್ಷ ಸ್ಥಾಪನೆ ಘೋಷಣೆ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಮಾಧ್ಯಮಗಳು ಸೃಷ್ಟಿದ ಹುಲಿ. ಗ್ರೌಂಡ್‌ನಲ್ಲಿ ಅದು ಹುಲಿ ಅಲ್ಲ ಇಲಿ. ಯತ್ನಾಳ್‌ರನ್ನ ಉಚ್ಚಾಟನೆ ಮಾಡಿದಾಗ 2-3 ಸಾವಿರ ಜನ ಸೇರಿ ಪ್ರತಿಭಟನೆ ಮಾಡಿಲ್ಲ. ಇಬ್ಬರು ಮಾತ್ರ ರಾಜೀನಾಮೆ ಕೊಟ್ಟಿದ್ದರು. ಬೀದಿಗೆ ಇಳಿದು ಪ್ರತಿಭಟನೆ ಮಾಡಿಲ್ಲ. ಹಿಂದು ಹುಲಿ ಎಂದು ಹೇಳಿಕೊಳ್ಳುತ್ತಾರೆ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಈಗ ಸ್ವತಃ ಯತ್ನಾಳ್ ಅವರೇ ನಾನು ಹುಲಿನಾ, ಇಲಿನಾ ಅಂತ ನೋಡಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: L2: Empuraan ವಿವಾದ- ನನ್ನ ಮಗನನ್ನ ಬಲಿಪಶುವನ್ನಾಗಿ ಮಾಡಲಾಗಿದೆ: ಪೃಥ್ವಿರಾಜ್ ಸುಕುಮಾರನ್ ತಾಯಿ

    ಸ್ವಂತ ಕ್ಷೇತ್ರದಲ್ಲಿ ಯತ್ನಾಳ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ (BJP) ಲೀಡ್ ಕೊಡೋದಕ್ಕೆ ಆಗಲಿಲ್ಲ. ಇಂತಹವರು ಹೊಸ ಪಕ್ಷ ಕಟ್ಟಿ ಸಾಧನೆ ಮಾಡಲು ಸಾಧ್ಯನಾ? ಹೊಸ ವರ್ಷ ಪ್ರಾರಂಭ ಆಗಿದೆ. ಹೊಸ ಯೋಜನೆ ಬಗ್ಗೆ ಮಾತಾಡೋಣ. ವಿಜಯೇಂದ್ರ ನೇತೃತ್ವದಲ್ಲಿ, ಹಿಂದುತ್ವದ ಆಧಾರದಲ್ಲಿ ಪಕ್ಷ ಕಟ್ಟುವ ಸಂಕಲ್ಪ ಮಾಡಿದ್ದೇವೆ. ಸಂಕಲ್ಪ ಸಾಕಾರ ಮಾಡಲು ವಿಜಯೇಂದ್ರ (Vijayendra) ನೇತೃತ್ವದಲ್ಲಿ ಕೆಲಸ ಮಾಡೋಣ. ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಗೆ ಬಹುಮತ ಬರಲಿದೆ ಎಂದು ಭವಿಷ್ಯ ನುಡಿದರು.

    ಮಹಾಭಾರತದಲ್ಲಿ ಶಿಶುಪಾಲ (Shishupala) ಬರುತ್ತಾನೆ. ಶಿಶುಪಾಲ, ಶ್ರೀಕೃಷ್ಣನ ಬಗ್ಗೆ ಚುಚ್ಚಿ ಚುಚ್ಚಿ ಮಾತಾಡಿದ. ಅವನ ಅಂತ್ಯ ಹೇಗಾಯ್ತು. ಕಲಿಯುಗದ ಶಿಶುಪಾಲ ಯತ್ನಾಳ್. ಶಿಶುಪಾಲನಿಗೆ ಆದ ಶಿಕ್ಷೆಯನ್ನೇ ಜನರು ಯತ್ನಾಳ್‌ಗೆ ಕೊಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೀರತ್‌ ಮಾದರಿ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!

    2008ರಲ್ಲಿ ಅವರ ವಿರುದ್ಧ ನಾನೇ ಚುನಾವಣೆಗೆ ನಿಂತಿದ್ದೆ. ವಿದ್ಯಾರ್ಥಿ ಪರಿಷತ್, ಸಂಘದ ಪಾಠ ಕಲಿತು ಬಂದವನು ನಾನು. ಯತ್ನಾಳ್‌ನನ್ನು ಬಿಟ್ಟರೆ ಯಾರು ಇಲ್ಲ. ನಾನೇ ಇಲ್ಲಿ ಎಲ್ಲಾ ಅಂತ ಮಾತಾಡ್ತಿದ್ದರು. ಅವತ್ತು ನನ್ನ ವಿರುದ್ಧ ಯತ್ನಾಳ್ ಸೋತಿದ್ದರು ಎಂದರು.

    2023ರ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರದಲ್ಲಿ (Vijayapura) ನಾವು 7 ಜನ ಸೋತಿದ್ದೆವು. ಯತ್ನಾಳ್ ಅವರೊಬ್ಬರು ಗೆದ್ದಿದ್ದರು. ಎಂಪಿ ಚುನಾವಣೆಗೆ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಮಾಡಿದ್ದೆವು. ಯತ್ನಾಳ್ ಆ ಸಭೆಗೆ ಬಂದಿರಲಿಲ್ಲ. ಸೋತವರು ಚುನಾವಣೆ ಗೆಲ್ಲಿಸುತ್ತೇವೆ ಅಂತ ಹೇಳಿದ್ದೆವು ಅದರಂತೆ ಗೆದ್ದೆವು. ವಿಜಯಪುರದಲ್ಲಿ ಲೀಡ್ ಕೊಟ್ಟು, ಹಿಂದೂ ಹುಲಿ ಕ್ಷೇತ್ರದಲ್ಲಿ 10 ಸಾವಿರ ಲೀಡ್ ಕಾಂಗ್ರೆಸ್‌ಗೆ ಹೋಯಿತು. ಯತ್ನಾಳ್ ಹುಲಿನೂ ಅಲ್ಲ, ಇಲಿನೂ ಅಲ್ಲ. ಈಗ ಅದು ಬಿಲ ಸೇರಿಕೊಂಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗ್ಳೂರು ಸೇರಿದಂತೆ ದೇಶದ ವಿವಿಧೆಡೆ ವಕ್ಫ್‌ ಬಿಲ್‌ಗೆ ವಿರೋಧ – ಕಪ್ಪು ಪಟ್ಟಿ ಧರಿಸಿ ರಂಜಾನ್‌ ಪ್ರಾರ್ಥನೆ

    ಆದಷ್ಟು ಬೇಗ ವಿಜಯಪುರದಲ್ಲಿ ಸಮಾವೇಶ ಮಾಡಬೇಕು ಎಂದು ನಾವು ವಿಜಯೇಂದ್ರ ಅವರಲ್ಲಿ ಮನವಿ ಮಾಡುತ್ತೇವೆ. ಪಕ್ಷ ಕಟ್ಟುತ್ತೇವೆ, ಸ್ಥಳೀಯ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಯತ್ನಾಳ್ ಅವರ ಬೆದರಿಕೆ ತಂತ್ರ ನಡೆಯೋದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ವಿಜಯ್‌ ಸೇತುಪತಿಗೆ ‘ಅಪ್ಪು’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್- ಜೂನ್‌ನಿಂದ ಶೂಟಿಂಗ್‌ ಶುರು

    ಯತ್ನಾಳ್‌ಗೆ ಯಡಿಯೂರಪ್ಪ ಅವರು ರಾಜಕೀಯ ಪುನರ್ ಜನ್ಮ ಕೊಟ್ಟಿದ್ದಾರೆ. ಯತ್ನಾಳ್ ಯಾರ ವಿರುದ್ಧ ಮಾತನಾಡಿಲ್ಲ ಹೇಳಿ. ವಾಜಪೇಯಿ, ಮೋದಿ, ಜೋಶಿ, ಜಗದೀಶ್ ಶೆಟ್ಟರ್ ಎಲ್ಲರ ಬಗ್ಗೆ ಮಾತಾಡಿದ್ದರು. ಯಡಿಯೂರಪ್ಪಗೆ (Yediyurappa) ಈ ಯತ್ನಾಳ್ ಜೀವನ ಪರ್ಯಂತ ಋಣಿಯಾಗಿರಬೇಕು. 2018ರಲ್ಲಿ ಕರೆದು ಟಿಕೆಟ್ ಕೊಟ್ಟು ಗೆಲ್ಲಿಸಿದ್ದರು. ಪುಣ್ಯಾತ್ಮ ಯಡಿಯೂರಪ್ಪ ಅವರಿಗೆ ದ್ರೋಹ ಮಾಡಿದರೆ ಅದರ ಶಾಪ ತಟ್ಟುತ್ತದೆ. ಶಿಶುಪಾಲನಿಗೆ ಆದ ರೀತಿಯೇ ಯತ್ನಾಳ್‌ಗೆ ರಾಜಕೀಯ ವಧೆ ಮಾಡುವ ಕೆಲಸ ಜನರು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

  • ಎಂ.ಬಿ.ಪಾಟೀಲ್ ಹುಚ್ಚಾಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು: ಶಾಸಕ ನಡಹಳ್ಳಿ

    ಎಂ.ಬಿ.ಪಾಟೀಲ್ ಹುಚ್ಚಾಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು: ಶಾಸಕ ನಡಹಳ್ಳಿ

    ವಿಜಯಪುರ: ನನ್ನನ್ನು ಅರೆಹುಚ್ಚ ಎನ್ನುತ್ತಿರುವ ಗೃಹಸಚಿವ ಎಂ.ಬಿ.ಪಾಟೀಲ್ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕೂಡಲೇ ಅವರು ಹುಚ್ಚಾಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ತಿರುಗೇಟು ನೀಡಿದ್ದಾರೆ.

    ಜಿಲ್ಲೆಯ ಮುದ್ದೇಬಿಹಾಳದಲ್ಲಿ ಮಾತನಾಡಿದ ಶಾಸಕರು, ಎಂ.ಬಿ.ಪಾಟೀಲ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ಹೀಗಾಗಿ ರಾಜ್ಯದ ಗೃಹಮಂತ್ರಿ ಹುದ್ದೆ ನಿರ್ವಹಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಚಿಕಿತ್ಸೆ ಪಡೆಯುವವರೆಗೂ ಅವರು ಗೃಹಸಚಿವರಾಗಿ ಕಾರ್ಯನಿರ್ವಹಿಸಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ಡಿಕೆಶಿ ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಎಂ.ಬಿ.ಪಾಟೀಲ್

    ನನ್ನ ಯೋಗ್ಯತೆ ಏನು ಅಂತ ಜಿಲ್ಲೆಯ ಜನತೆಗೆ ಗೊತ್ತಿದೆ. ಎಂ.ಬಿ.ಪಾಟೀಲ್ ಹೇಳಿಕೆಯೇ ಅವರ ಯೋಗ್ಯತೆ ಏನು ಎನ್ನುವುದನ್ನು ತೋರಿಸಿಕೊಡುತ್ತದೆ. ನಾನು 3 ಬಾರಿ ಸ್ವಸಾಮರ್ಥ್ಯದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನೀವು ಅಪ್ಪ ನೆಟ್ಟ ರಾಜಕೀಯ ಆಲದ ಮರದ ಆಶ್ರಯದಲ್ಲಿ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೀರಿ. ಸ್ವಂತ ಶಕ್ತಿಯ ಮೇಲೆ ನೀವು ಆಯ್ಕೆಯಾಗಿಲ್ಲ ಎಂದು ದೂರಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀವು ಗೆದ್ದಿರುವ ರೀತಿಯೇ ಸಂಶಯಾಸ್ಪದ. ಇದಕ್ಕೆ ನಿಮ್ಮ ಎದುರು ಬಬಲೇಶ್ವರ ಮತಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರೇ ಸಾಕ್ಷಿ. ನಿಮ್ಮ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಸಿಕ್ಕಿದ್ದು ಉದಾಹರಣೆ. ನಿಮ್ಮ ಯೋಗ್ಯತೆ ಏನು ಅನ್ನೋದು, ವಿಜಯಪುರ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಹೇಳಿದರು.

    ವಿಜಯಪುರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ನಿಮ್ಮ ಹಿಂಬಾಲಕರು ಗಲಾಟೆ ನಡೆಸಿದರು. ಗಲಾಟೆ ಮಾಡಿದವರು ನನ್ನ ಹಿಂಬಾಲಕರು ಅಲ್ಲ ಅಂತ ಹೇಳಲಿಕ್ಕೆ ಆಗಲ್ಲ ಎಂದು ನೀವು ಹೇಳಿಕೆ ನೀಡಿದ್ದೀರಿ. ಹೀಗಾಗಿ ಅವರು ನಿಮ್ಮ ಹಿಂಬಾಲಕರು ಎನ್ನುವುದನ್ನು ಒಪ್ಪಿಕೊಂಡಿದ್ದೀರಿ. ರಾಜ್ಯದ ಗೃಹಸಚಿವರಾಗಿ ಹಿಂಬಾಲಕರನ್ನು ಛೂ ಬಿಟ್ಟು ವಿಪಕ್ಷದ ಶಾಸಕರೊಬ್ಬರ ವಿರುದ್ಧ ಗಲಾಟೆ ನಡೆವುದು ಸರಿಯೇ ಎಂದು ಶಾಸಕರು, ಎಂ.ಬಿ.ಪಾಟೀಲ್ ಅವರಿಗೆ ಪ್ರಶ್ನಿಸಿದ್ದಾರೆ.

  • ಈಶ್ವರಪ್ಪ ಒಬ್ಬ ಮಾಧ್ಯಮ ಎಂಟರ್‌ಟೈನ್‌ಮೆಂಟ್‌: ಎಂಬಿ ಪಾಟೀಲ್

    ಈಶ್ವರಪ್ಪ ಒಬ್ಬ ಮಾಧ್ಯಮ ಎಂಟರ್‌ಟೈನ್‌ಮೆಂಟ್‌: ಎಂಬಿ ಪಾಟೀಲ್

    ವಿಜಯಪುರ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಒಬ್ಬ ಮಾಧ್ಯಮ ಎಂಟರ್‌ಟೈನ್‌ಮೆಂಟ್‌. ಅವರ ಮಾತಿಗೆ ಹೆಚ್ಚಿನ ಕಿಮ್ಮತ್ತು ಇಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಶ್ವರಪ್ಪ ಅವರ ಮಾತಿಗೆ ಬೆಲೆ ಇಲ್ಲ. ಅವರು ಮಾಧ್ಯಮ ಎಂಟರ್‌ಟೈನ್‌ಮೆಂಟ್‌. ಅವರ ಬಗ್ಗೆ ನಾನು ಮಾತನಾಡಲ್ಲ ಎಂದರು.

    ನಾನು ನೀರಾವರಿ ಸಚಿವನಿದ್ದಾಗ ಮಾಡಿರುವ ಕೆಲಸ ಇಡೀ ಜಗತ್ತಿಗೆ ಗೊತ್ತಿದೆ. ನನ್ನ ಕೆಲಸ ಸೂರ್ಯ ಹಾಗೂ ಚಂದ್ರ ನೋಡಿದ್ದಾರೆ. ನಾನು ನನ್ನ ಲೆವಲ್ ಜನರ ಜೊತೆಗೆ ಮಾತನಾಡುತ್ತೇನೆ. ನನ್ನ ಲೆವಲ್ ಕೆಳಗೆ ಇರುವವರ ಬಗ್ಗೆ ಮಾತನಾಡಲ್ಲ. ನಾನು ಪ್ರಧಾನಿ ಮೋದಿ, ಬಿಎಸ್‍ವೈಗೆ ಉತ್ತರ ನೀಡುತ್ತೇನೆ ಎಂದು ಶಾಸಕ ಎ.ಎಸ್ ನಡಹಳ್ಳಿ ಅವರ ಕಾಲೆಳೆದರು.

    ನನ್ನ ಹಾಗೂ ನನ್ನ ತಾಯಿ ತಂದೆ ಸರ್ಟಿಫಿಕೇಟ್‍ನಲ್ಲಿ ಹಿಂದೂ ಲಿಂಗಾಯತ ಅಂತ ಇದೆ. ಉಳಿದವರು ಟಿಸಿ, ಜನ್ಮ ಸರ್ಟಿಫಿಕೇಟ್ ತೆಗೆದು ಅದರಲ್ಲಿ ಏನಿದೆ ಎಂದು ನೋಡಿಕೊಂಡು ಮಾತನಾಡಿ ಎಂದು ನಡಹಳ್ಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಇನ್ನು ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಧರ್ಮವನ್ನು ಬಳಸಿಕೊಂಡಿಲ್ಲ. ಲಿಂಗಾಯತರನ್ನು ಕೂಡ ನಾನು ಬಳಸಿಕೊಂಡಿಲ್ಲ. ಲಿಂಗಾಯತ ಧರ್ಮದ ಹೋರಾಟ ಯಾವುದೇ ಪಕ್ಷಕ್ಕೆ ಸಂಬಂಧಪಟ್ಟಿಲ್ಲ. ಲಿಂಗಾಯತ ಚುನಾವಣೆ ವಿಚಾರವಲ್ಲ. ನ್ಯಾಯಾಲಯಕ್ಕೆ ಹೋಗಬೇಕೋ, ಬೇಡವೋ ಎನ್ನುವುದನ್ನು ಜಾಗತಿಕ ಲಿಂಗಾಯತ ಮಹಾಸಭಾದವರು ತೀರ್ಮಾನ ಮಾಡುತ್ತಾರೆ. ಚುನಾವಣೆಯಲ್ಲಿ ಲಿಂಗಾಯತ ಬಗ್ಗೆ ಮಾತನಾಡುವುದಿಲ್ಲ. ಹಿಂದೆಯೂ ಮಾತನಾಡಿಲ್ಲ, ಈಗಲೂ ಮಾತನಾಡಲ್ಲ ಎಂದರು.

    ಅಲ್ಲದೆ ಲಿಂಗಾಯತ ಹೋರಾಟದಿಂದ ನಾನು ಡೌನ್ ಆಗಿಲ್ಲ. ಜನರು ನಮ್ಮ ಜೊತೆಗೆ ಇದ್ದಾಗ ಡೌನ್ ಆಗಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದದಲ್ಲಿ 28 ರಲ್ಲಿ 20 ಸೀಟ್ ಕಾಂಗ್ರೆಸ್ ಗೆಲ್ಲುವುದು ಪಕ್ಕಾ. ಅಲ್ಲದೆ ವಿಜಯಪುರ ಮೈತ್ರಿ ಅಭ್ಯರ್ಥಿ 1 ಲಕ್ಷ ಮತಗಳಿಂದ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಹುಚ್ಚುನಾಯಿಗೂ ಜನ ಮರ್ಯಾದೆ ಕೊಡ್ತಾರೆ, ನಡಹಳ್ಳಿಗೆ ಕೊಡಲ್ಲ: ಕೆಪಿಸಿಸಿ ಕಾರ್ಯದರ್ಶಿ ಟೀಕೆ

    ಹುಚ್ಚುನಾಯಿಗೂ ಜನ ಮರ್ಯಾದೆ ಕೊಡ್ತಾರೆ, ನಡಹಳ್ಳಿಗೆ ಕೊಡಲ್ಲ: ಕೆಪಿಸಿಸಿ ಕಾರ್ಯದರ್ಶಿ ಟೀಕೆ

    ವಿಜಯಪುರ: ಎ.ಎಸ್ ಪಾಟೀಲ್ ನಡಹಳ್ಳಿ ಒಬ್ಬ ಪುಟಗೋಸಿ ಶಾಸಕ, ಮಂಗನಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಹುಚ್ಚುನಾಯಿಗೂ ಜನ ಮರ್ಯಾದೆ ಕೊಡುತ್ತಾರೆ. ಆದ್ರೆ ನಡಹಳ್ಳಿಗೆ ಕೊಡಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ್ ಬಬಲೇಶ್ವರ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಶಾಸಕ ನಡಹಳ್ಳಿ ವಿರುದ್ಧ ಕಿಡಿಕಾರಿದರು. ಈ ಹಿಂದೆ ನಡಹಳ್ಳಿ ಅವರು ಕಳ್ಳ ಎತ್ತು, ಠಕ್ಕ ಎತ್ತು, ವಸೂಲಿ ಎತ್ತು ಎಂದು ಗೃಹ ಸಚಿವ ಎಂ ಬಿ ಪಾಟೀಲ್, ಆರೋಗ್ಯ ಸಚಿವ ಶೀವಾನಂದ ಪಾಟೀಲ್ ಹಾಗೂ ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ವಿರುದ್ಧ ವ್ಯಂಗ್ಯವಾಡಿದ್ದರು. ಈ ವಿಚಾರಕ್ಕೆ ಆಕ್ರೋಶಗೊಂಡಿರುವ ಕಾಂಗ್ರೆಸ್ ಮುಖಂಡರು ನಡಹಳ್ಳಿ ವಿರುದ್ಧ ವಾಕ್ಸಮರ ಮೊಳಗಿಸಿದ್ದಾರೆ. ಮನೆ ಆವರಣಕ್ಕೆ ಹುಚ್ಚು ನಾಯಿ ಬಂದರೆ ಅದಕ್ಕೂ ಜನರು ಮರ್ಯಾದೆ ಕೊಟ್ಟು ಹಚಾ.. ಹಚಾ.. ಎಂದು ಹೊರಗೆ ಓಡಿಸುತ್ತಾರೆ. ಆದ್ರೆ ದೇವರಹಿಪ್ಪರಗಿ ಜನ ನಡಹಳ್ಳಿಯನ್ನ ಹುಚ್ಚು ನಾಯಿಗಿಂತ ಕಡೆಯಾಗಿ ನಡೆಸಿಕೊಂಡಿದ್ದಾರೆ ಎಂದು ಟೀಕಿಸಿದರು.

    ಎಂ.ಬಿ ಪಾಟೀಲ್ ಕುರಿತು ಮಾತನಾಡುವ ನೈತಿಕತೆ ಶಾಸಕ ನಡಹಳ್ಳಿಗೆ ಇಲ್ಲ. ಹೆಂಡ ಕುಡಿದ ಮಂಗನಂತೆ ನಡಹಳ್ಳಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ ಎಂದು ಟಾಂಗ್ ನೀಡಿದರು.

  • ತೆನೆಯ ಹೊರೆ ಇಳಿಸಿ ಕಮಲ ಹಿಡಿದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ

    ತೆನೆಯ ಹೊರೆ ಇಳಿಸಿ ಕಮಲ ಹಿಡಿದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ

    -ಅಪ್ಪ-ಮಗ, ಅಣ್ಣ-ತಮ್ಮ ಸ್ಪರ್ಧೆ ಮಾಡ್ಬಹುದು, ಗಂಡ-ಹೆಂಡ್ತಿ ಯಾಕೆ ಸ್ಪರ್ಧಿಸಬಾರದು ಜೆಡಿಎಸ್‍ಗೆ ನಡಹಳ್ಳಿ ಪ್ರಶ್ನೆ

    ಬೆಂಗಳೂರು: ಕಾಂಗ್ರೆಸ್ ನಿಂದ ಉಚ್ಚಾಟಿತರಾಗಿ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಶಾಸಕ ನಡಹಳ್ಳಿ ಮಂಗಳವಾರ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು. ಇಂದು ಬೆಳಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪರ ನೇತೃತ್ವದಲ್ಲಿ ಎ.ಎಸ್.ಪಾಟೀಲ್ ನಡಹಳ್ಳಿ, ಪತ್ನಿ ಮಹಾದೇವಿ, ಮಧುಗಿರಿ ಕ್ಷೇತ್ರದ ಮಾಜಿ ಶಾಸಕರಾದ ಗಂಗಹನುಮಯ್ಯ, ಪಾವಗಡ ಜಿ.ಪಂ.ಸದಸ್ಯ, ಮಾಜಿ ಸಚಿವ ವೆಂಕಟರಮಣಪ್ಪ ಅವರ ಪುತ್ರ ಕುಮಾರಸ್ವಾಮಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ್ರು.

    ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಶಾಸಕ ನಡಹಳ್ಳಿ, ಅಪ್ಪ-ಮಗ, ಅಣ್ಣ-ತಮ್ಮ ಸ್ಪರ್ಧೆ ಮಾಡ್ಬಹುದು, ಗಂಡ-ಹೆಂಡ್ತಿ ಯಾಕೆ ಸ್ಪರ್ಧಿಸಬಾರದು ಅಂತಾ ಪರೋಕ್ಷವಾಗಿ ಜೆಡಿಎಸ್ ಗೆ ಪ್ರಶ್ನೆ ಮಾಡಿದ್ರು. ನಾನು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದು ನಿಜ, ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಜೊತೆಯಲ್ಲಿ ಪಕ್ಷದ ಬಲವರ್ಧನೆಗೂ ಮುಂದಾಗಿದ್ದೆ. ಆದ್ರೆ ನಾನು ಇದೂವರೆಗೂ ಜೆಡಿಎಸ್ ಸದಸ್ಯತ್ವವನ್ನು ಪಡೆದುಕೊಂಡಿರಲಿಲ್ಲ. ದೇವರ ಹಿಪ್ಪರಗಿ ಕ್ಷೇತ್ರ ನನ್ನ ತಾಯಿ. ಆ ಕ್ಷೇತ್ರ ಕಟ್ಟಿದ್ದು ನಾನು, ಅಲ್ಲಿ ಟಿಕೆಟ್ ಕೇಳುವುದಕ್ಕೆ ನನಗೆ ಹಕ್ಕಿದೆ. ಆದ್ರೆ ಕುಮಾರಸ್ವಾಮಿ ಟಿಕೆಟ್ ಹಂಚಿಕೆಯಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿದ್ರು. ಆ ಕಾರಣಕ್ಕಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದೇನೆ ಅಂತಾ ಅಂದ್ರು.

    2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಎ.ಎಸ್.ಪಾಟೀಲ್ ನಡಹಳ್ಳಿ ಎರಡು ಬಾರಿಯ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಎರಡು ಬಾರಿ ಶಾಸಕರಾಗಿದ್ದಾರೆ. 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ಆರ್.ಪಾಟೀಲ್‍ರನ್ನು 30,893 ಮತಗಳ ಅಂತರದಿಂದ ಸೋಲಿಸಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿ ಸೋಮನಗೌಡ ಪಾಟೀಲ ಅವರನ್ನು 7,916 ಮತಗಳ ಅಂತರದಿಂದ ಸೋಲಿಸುವ ಮೂಲಕ ವಿಜಯ ಪತಾಕೆಯನ್ನು ಹಾರಿಸಿದ್ರು.

    ಆದ್ರೆ ಈ ಬಾರಿ ಎ.ಎಸ್.ಪಾಟೀಲ್ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇತ್ತ ತವರು ಕ್ಷೇತ್ರದಲ್ಲಿ ಪತ್ನಿ ಮಹಾದೇವಿ ನಡಹಳ್ಳಿ ಅವರನ್ನು ಕಣ್ಣಕ್ಕಿಳಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್‍ನ ಭದ್ರತೆ ಕೋಟೆ ಅಂತಾ ಬಿಂಬಿತವಾಗಿರುವ ಮುದ್ದೇಬಿಹಾಳ ಕ್ಷೇತ್ರದಲ್ಲಿ ನಡಹಳ್ಳಿ ಕಮಲದ ರಣಕಹಳೆ ಮೊಳಗಿಸುತ್ತಾರಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿರುವ ಕಾಂಗ್ರೆಸ್‍ನ ಅಪ್ಪಾಜಿ ನಾಡಗೌಡ ನಾಲ್ಕು ಬಾರಿ ಶಾಸಕರಾಗಿದ್ದಾರೆ.