Tag: a r murugadoss

  • ‘ಘಜಿನಿ 2’ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ‘ಸಿಕಂದರ್’ ಡೈರೆಕ್ಟರ್

    ‘ಘಜಿನಿ 2’ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ‘ಸಿಕಂದರ್’ ಡೈರೆಕ್ಟರ್

    ಸೌತ್‌ನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ (A.R. Murugadoss) ಸದ್ಯ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಮೀರ್ ಖಾನ್ ನಟನೆಯ ‘ಘಜಿನಿ’ ಚಿತ್ರದ ಸೀಕ್ವೆಲ್ ಬರಲಿದೆಯಾ? ಎಂಬುದಕ್ಕೆ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ. ‘ಘಜಿನಿ’ ಪಾರ್ಟ್ 2 ಬರೋದಾಗಿ ಅವರು ತಿಳಿಸಿದ್ದಾರೆ.

    ಆಮೀರ್ ಖಾನ್ (Aamir Khan) ಸದ್ಯ ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಸೆಟ್‌ಗೆ ಇತ್ತೀಚೆಗೆ ಮುರುಗದಾಸ್ ಭೇಟಿ ನೀಡಿರೋದಾಗಿ ತಿಳಿಸಿದ್ದಾರೆ. ಈ ವೇಳೆ, ‘ಘಜಿನಿ 2’ (Ghajini 2) ಬಗ್ಗೆ ಮಾತುಕತೆ ನಡೆಸಿದ್ದೇವೆ. ನಮ್ಮ ಬಳಿ ಕೆಲವು ಐಡಿಯಾಗಳಿವೆ. ಮತ್ತೊಮ್ಮೆ ಮಾತುಕತೆ ನಡೆಸೋದಾಗಿ ಹೇಳಿದ್ದಾರೆ. ‘ಘಜಿನಿ 2’ ಬರಲಿದೆ ಎಂದು ಅಧಿಕೃತವಾಗಿ ನಿರ್ದೇಶಕ ತಿಳಿಸಿದ್ದಾರೆ. ಇದನ್ನೂ ಓದಿ:ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡುತ್ತೇನೆ: ಬ್ರೇಕಪ್‌ ಬಗ್ಗೆ ತಮನ್ನಾ ಮಾತು

    ಇನ್ನೂ 2008ರಲ್ಲಿ ‘ಘಜಿನಿ’ (Ghajini) ಸಿನಿಮಾ ರಿಲೀಸ್ ಆಗಿತ್ತು. ಆಮೀರ್ ಖಾನ್ ಮತ್ತು ಆಸಿನ್ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ ಸಕ್ಸಸ್ ಕಂಡಿತ್ತು. ಇದೀಗ ಹಲವು ವರ್ಷಗಳ ನಂತರ ಇದರ ಸಿಕ್ವೇಲ್ ತರಲು ಪ್ಲ್ಯಾನ್ ನಡೆಯುತ್ತಿದೆ.‌ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದ್ದು, ಈ ಸುದ್ದಿ ತಿಳಿದು ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

  • ‘ಸಿಕಂದರ್’ ಸಿನಿಮಾ ರಿಮೇಕ್ ಎಂದವರಿಗೆ ತಕ್ಕ ಉತ್ತರ ಕೊಟ್ಟ ನಿರ್ದೇಶಕ

    ‘ಸಿಕಂದರ್’ ಸಿನಿಮಾ ರಿಮೇಕ್ ಎಂದವರಿಗೆ ತಕ್ಕ ಉತ್ತರ ಕೊಟ್ಟ ನಿರ್ದೇಶಕ

    ಬಾಲಿವುಡ್‌ ನಟ  ಸಲ್ಮಾನ್ ಖಾನ್ (Salman Khan) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಕಂದರ್’ (Sikandar) ಸಿನಿಮಾದ ಟೀಸರ್ ಹಾಗೂ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದ ತುಣುಕುಗಳನ್ನು ರಿಮೇಕ್ ಎಂದು ಕಾಲೆಳೆದವರಿಗೆ ನಿರ್ದೇಶಕ ಎ.ಆರ್ ಮುರುಗದಾಸ್ ಕ್ಲ್ಯಾರಿಟಿ ನೀಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಬೆಡಗಿ ಶ್ರೀಲೀಲಾಗೆ ಮೆಗಾಸ್ಟಾರ್ ಕಡೆಯಿಂದ ಸ್ಪೆಷಲ್ ಗಿಫ್ಟ್

    ‘ಸಿಕಂದರ್’ ಸಿನಿಮಾದ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಈ ಚಿತ್ರವನ್ನ ತಮಿಳಿನ ಸರ್ಕಾರ್ ಸಿನಿಮಾಗೆ ಹೋಲಿಸಿ ಟೀಕಿಸಿದ್ದರು. ಸರ್ಕಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ಎ.ಆರ್ ಮುರುಗದಾಸ್. ಹಾಗಾಗಿ ವಿಜಯ್‌ ದಳಪತಿ ನಟನೆಯ ‘ಸರ್ಕಾರ್’ ಕಥೆಗೆ ಮಸಾಲೆ ಸೇರಿಸಿ ಕೊಂಚ ಸ್ಟೋರಿ ಚೇಂಜ್ ಮಾಡಿ ಸಿನಿಮಾ ತೋರಿಸಲು ಹೊರಟಿದ್ದಾರೆ ಎಂದು ಕುಟುಕಿದವರಿಗೆ ಎ.ಆರ್ ಮುರುಗದಾಸ್ (A.R Murugadoss) ಅವರು ‘ಸಿಕಂದರ್’ ಚಿತ್ರ ರಿವೇಕ್ ಸಿನಿಮಾ ಅಲ್ಲವೇ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ‘ಸಿಕಂದರ್’ ಸಿನಿಮಾ ಸಲ್ಮಾನ್ ಖಾನ್ ಸಲುವಾಗಿಯೇ ತಾವು ಹೊಸ ಕಥೆ ಬರೆದಿರುವುದಾಗಿ ಮುರುಗದಾಸ್ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.

    ಅಂದಹಾಗೆ, ಸಲ್ಮಾನ್ ಖಾನ್‌ಗೆ ಜೋಡಿಯಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ವರ್ಷ ಈದ್ ಹಬ್ಬದಂದು ಈ ಚಿತ್ರ ರಿಲೀಸ್ ಆಗಲಿದೆ.

  • ಸತತ ಸಿನಿಮಾಗಳ ಸೋಲು- ಸೌತ್ ನಿರ್ದೇಶಕನ ಸಿನಿಮಾದಲ್ಲಿ ಸಲ್ಮಾನ್ ಖಾನ್

    ಸತತ ಸಿನಿಮಾಗಳ ಸೋಲು- ಸೌತ್ ನಿರ್ದೇಶಕನ ಸಿನಿಮಾದಲ್ಲಿ ಸಲ್ಮಾನ್ ಖಾನ್

    ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಲಕ್ ಕೈಕೊಟ್ಟಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ನಂತರ ಸೌತ್ ಸಿನಿಮಾ ನಿರ್ದೇಶಕನ ಜೊತೆ ಸಲ್ಮಾನ್ ಖಾನ್ ಕೈಜೋಡಿಸಿದ್ದಾರೆ. ತಮಿಳಿನ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ನಟಿಸಲು ಸಲ್ಮಾನ್ ನಿರ್ಧರಿಸಿದ್ದಾರೆ.

    ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’, ಟೈಗರ್ 3 ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಹಾಗಾಗಿ ಸಲ್ಮಾನ್ ಖಾನ್ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಚಿತ್ರರಂಗದಲ್ಲಿ ದಕ್ಷಿಣದ ಸಿನಿಮಾಗಳೇ ಗೆಲ್ಲುತ್ತಿರುವ ಕಾರಣ ಸೌತ್ ಕಥೆಗಳತ್ತ ನಟ ಗಮನ ನೀಡುತ್ತಿದ್ದಾರೆ. ಇದನ್ನೂ ಓದಿ:‘ಲಾಲ್ ಸಲಾಂ’ ಸೋಲಿನ ಎಫೆಕ್ಟ್- ಲೋಕೇಶ್ ಕನಕರಾಜ್‌ಗೆ ತಲೈವಾ ವಾರ್ನಿಂಗ್

    ಧರ್ಮ ಪ್ರೊಡಕ್ಷನ್ಸ್ ‘ದಿ ಬುಲ್’ ಸಿನಿಮಾದಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಇದರ ನಡುವೆ ತಮಿಳಿನ ನಿರ್ದೇಶಕ ಎ.ಆರ್ ಮುರುಗದಾಸ್ (A.R Murugadoss) ನಿರ್ದೇಶನದಲ್ಲಿ ಸಲ್ಮಾನ್ ನಟಿಸುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಮುಂದಿನ ವರ್ಷ ಈದ್ ಹಬ್ಬದ ವೇಳೆ, ಈ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

    ಎ. ಆರ್ ಮುರುಗದಾಸ್ ತಮಿಳಿನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈಗಾಗಲೇ ತಮ್ಮದೇ ಹಿಟ್ ಕಥೆಗಳನ್ನು ಬಾಲಿವುಡ್‌ನಲ್ಲಿ ರೀಮೆಕ್ ಮಾಡಿ ಗೆದ್ದಿದ್ದಾರೆ. ಇದೀಗ ಮತ್ತೆ ಹಿಂದಿ ಚಿತ್ರರಂಗಕ್ಕೆ ಹೋಗುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನಲಾಗ್ತಿದೆ. ಸಲ್ಮಾನ್ ಚಿತ್ರಕ್ಕೆ ಸಾಜಿದ್ ನಾಡಿಯಾಡ್ವಾಲಾ ಈ ಚಿತ್ರಕ್ಕೆ ಬಂಡವಾಳ ಹೂಡುವುದಾಗಿ ಚರ್ಚೆ ನಡೀತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್‌ಗೆ ಮುರುಗದಾಸ್ ಮತ್ತೆ ಹಿಟ್ ಕೊಡ್ತಾರಾ? ಎನ್ನುವ ನಿರೀಕ್ಷೆ ಶುರುವಾಗಿದೆ.