Tag: A.R.Krishnamurthy

  • ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿಗೆ ಮಾತೃ ವಿಯೋಗ

    ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿಗೆ ಮಾತೃ ವಿಯೋಗ

    ಚಾಮರಾಜನಗರ/ಮೈಸೂರು: ಕೇರಳದ ರಾಜ್ಯಪಾಲರಾಗಿದ್ದ ದಿವಂಗತ ಬಿ.ರಾಚಯ್ಯ ಅವರ ಪತ್ನಿ ಹಾಗೂ ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರ ತಾಯಿ ಗೌರಮ್ಮ ರಾಚಯ್ಯ (88) ನಿಧನರಾಗಿದ್ದಾರೆ.

    ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೌರಮ್ಮ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಮೃತರಿಗೆ ಶಾಸಕ ಎ.ಆರ್‌.ಕೃಷ್ಣಮೂರ್ತಿ ಸೇರಿದಂತೆ ಇಬ್ಬರು ಪುತ್ರರು ಮತ್ತು ಐವರು ಪುತ್ರಿಯರು ಇದ್ದಾರೆ.

    ಮೈಸೂರಿನ ಸರಸ್ವತಿಪುರಂನಲ್ಲಿರುವ ಅವರ ನಿವಾಸದಲ್ಲಿ ಸಂಜೆ 4:30 ರ ವರೆಗೆ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

    ಶನಿವಾರ ಬೆಳಗ್ಗೆ 11 ಗಂಟೆಗೆ ಸ್ವಗ್ರಾಮ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

  • ಚಾಮರಾಜನಗರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರದಲ್ಲಿ ‘ಕೈ’-ಕಮಲ ಫೈಟ್‌; ಯಾರಿಗೆ ಮತದಾರನ ಸಪೋರ್ಟ್‌?

    ಚಾಮರಾಜನಗರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರದಲ್ಲಿ ‘ಕೈ’-ಕಮಲ ಫೈಟ್‌; ಯಾರಿಗೆ ಮತದಾರನ ಸಪೋರ್ಟ್‌?

    ಚಾಮರಾಜನಗರ: ಚಾಮರಾಜನಗರ (Chamarajanagara) ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಕೊಳ್ಳೇಗಾಲ (Kollegala). ಗಡಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವೂ ಹೌದು. ಇದೀಗ‌ ಕೊಳ್ಳೇಗಾಲದಲ್ಲಿ ಚುನಾವಣೆ ಕಾವು‌ ರಂಗೇರಿದೆ. ಬಿಜೆಪಿ-ಕಾಂಗ್ರೆಸ್ ನಡುವೆಯೇ ನೇರಾ ಹಣಾಹಣಿಯಿದೆ. ಬಿಎಸ್‌ಪಿಯಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿರುವ ಎನ್.ಮಹೇಶ್ ವಿರುದ್ಧ ವಿರೋಧಿ ಬಣಗಳು ಒಂದಾಗಿದ್ದು, ಸೋಲಿಸುವ ಹಠ ತೊಟ್ಟಿದ್ದಾರೆ. ಆದರೆ ವಿರೋಧಿಗಳಿಗೆ ಸೆಡ್ಡು ಹೊಡೆಯುವ ಮೂಲಕ ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸಲು ತಮ್ಮದೇ ತಂತ್ರಗಾರಿಕೆ ರೂಪಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಗೆ ಮಲ್ಲಿಗೆ ಹೂವು, ಸೀರೆ ಗಿಫ್ಟ್..!

    ಕಣದಲ್ಲಿರುವ ಅಭ್ಯರ್ಥಿಗಳು
    ಬಿಜೆಪಿ – ಎನ್‌.ಮಹೇಶ್
    ಕಾಂಗ್ರೆಸ್ – ಎ.ಆರ್‌.ಕೃಷ್ಣಮೂರ್ತಿ
    ಜೆಡಿಎಸ್ – ಬಿ.ಪುಟ್ಟಸ್ವಾಮಿ

    ಈವರೆಗೆ ಗೆದ್ದ ಶಾಸಕರ ವಿವರ
    1957- ದ್ವಿಸದಸ್ಯ ಟಿ.ಪಿ.ಬೋರಯ್ಯ, ಕೆಂಪಮ್ಮ (ಎರಡು ಕಾಂಗ್ರೆಸ್)
    1962- ಬಿ.ಬಸವಯ್ಯ (ಕಾಂಗ್ರೆಸ್)
    1967- ಬಿ.ಬಸವಯ್ಯ (ಕಾಂಗ್ರೆಸ್)
    1972- ಎಂ.ಸಿದ್ದಮಾದಯ್ಯ (ಕಾಂಗ್ರೆಸ್)
    1978- ಎಂ.ಸಿದ್ದಮಾದಯ್ಯ (ಕಾಂಗ್ರೆಸ್)
    1983- ಬಿ.ಬಸವಯ್ಯ (ಜನತಾ ಪಕ್ಷ)
    1985- ಬಿ.ಬಸವಯ್ಯ (ಜನತಾ ಪಕ್ಷ)
    1989- ಎಂ.ಸಿದ್ದಮಾದಯ್ಯ (ಕಾಂಗ್ರೆಸ್)
    1994- ಎಸ್.ಜಯಣ್ಣ (ಜನತಾ ದಳ)
    1999- ಜಿ.ಎನ್.ನಂಜುಂಡಸ್ವಾಮಿ (ಕಾಂಗ್ರೆಸ್)
    2004- ಎಸ್.ಬಾಲರಾಜ್ (ಪಕ್ಷೇತರ)
    2008- ಆರ್.ಧ್ರುವನಾರಾಯಣ್ (ಕಾಂಗ್ರೆಸ್)
    2009- ಜಿ.ಎನ್.ನಂಜುಂಡಸ್ವಾಮಿ (ಬಿಜೆಪಿ- ಉಪ ಚುನಾವಣೆ)
    2013- ಎಸ್.ಜಯಣ್ಣ (ಕಾಂಗ್ರೆಸ್)
    2018- ಎನ್.ಮಹೇಶ್ (ಬಿಎಸ್‌ಪಿ)

    2018 ರ ಚುನಾವಣಾ ಫಲಿತಾಂಶ ಏನಿತ್ತು?
    ಎನ್.ಮಹೇಶ್- ಆಗ ಬಿಎಸ್‌ಪಿ, ಈಗ ಬಿಜೆಪಿ – 71,792
    ಎ.ಆರ್.ಕೃಷ್ಣಮೂರ್ತಿ- ಕಾಂಗ್ರೆಸ್- 52,338
    ಜಿ.ಎನ್.ನಂಜುಂಡಸ್ವಾಮಿ- bjp – 39,690
    ಎನ್.ಮಹೇಶ್ ಅವರು 19 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಇದನ್ನೂ ಓದಿ: ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ

    ಜಾತಿವಾರು ಲೆಕ್ಕಾಚಾರ ಏನು?
    ಕೊಳ್ಳೇಗಾಲ ಕ್ಷೇತ್ರದಲ್ಲಿ 2,16,602 ಒಟ್ಟು ಜನಸಂಖ್ಯೆ ಇದೆ. ಅವರ ಪೈಕಿ ಪುರುಷರು- 1,06,979 ಹಾಗೂ ಮಹಿಳೆಯರು – 1,09,604 ಇದ್ದಾರೆ.
    ದಲಿತರು- 65,000
    ಲಿಂಗಾಯತರು- 38,000
    ವಾಲ್ಮೀಕಿ ನಾಯಕರು- 31,000
    ಉಪ್ಪಾರ-32,000
    ಕುರುಬ- 9,000
    ದೇವಾಂಗ- 8,000
    ಅಲ್ಪಸಂಖ್ಯಾತ- 11,000

    ಬಿಜೆಪಿ ಪ್ಲಸ್‌: ಬಿಜೆಪಿ ಮತ ಬ್ಯಾಂಕ್ ಭದ್ರವಾಗಿರುವ ನಂಬಿಕೆ. ಗೆದ್ದು ಸರ್ಕಾರ ಬಂದರೆ ಸಚಿವನಾಗುವ ಅವಕಾಶ. ಕಳೆದ ಬಾರಿ ಬಿಜೆಪಿ ಸರ್ಕಾರ ಬರಲು ಮಹೇಶ್ ಕೊಡುಗೆಯೂ ಕಾರಣವೆಂಬ ನಂಬಿಕೆ.
    ಬಿಜೆಪಿ ಮೈನಸ್: ಯುವ ಸಮುದಾಯಕ್ಕೆ ಬಿಎಸ್‌ಪಿಯಿಂದ ಬಿಜೆಪಿಗೆ ಹೋಗಿರುವ ಅಸಮಾಧಾನ. ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಎದ್ದು ಸ್ಪರ್ಧೆ ಮಾಡಿರುವ ಕಿನಕಹಳ್ಳಿ ರಾಚಯ್ಯ. ಎನ್.ಮಹೇಶ್ ಸೋಲಿಸಲು ಒಗ್ಗೂಡಿರುವ ವಿರೋಧಿ ಬಣ. ಬಿಎಸ್‌ಪಿಯಿಂದಲೂ‌ ಕಾಂಗ್ರೆಸ್‌ಗೆ ಬೆಂಬಲ.

    ಕಾಂಗ್ರೆಸ್ ಪ್ಲಸ್: ಸತತ ಸೋಲಿನಿಂದ ಕಂಗೆಟ್ಟ ಎ.ಆರ್‌.ಕೃಷ್ಣಮೂರ್ತಿಗೆ ಒಂದು ಅವಕಾಶ ಕೊಡಬೇಕೆಂಬ ಚರ್ಚೆ. ಬಿಎಸ್‌ಪಿ ಅಭ್ಯರ್ಥಿ ನಾಮಪತ್ರ ವಾಪಸ್ ತೆಗೆದುಕೊಂಡು ‘ಕೈ’ಗೆ ಬೆಂಬಲ ಕೊಟ್ಟಿರುವುದು. ಎನ್.ಮಹೇಶ್ ವಿರೋಧಿ ಬಣದಿಂದ ಕೃಷ್ಣಮೂರ್ತಿ ಪರ ಕೆಲಸ.
    ಮೈನಸ್: ಹೊಸ ಮತದಾರರನ್ನು ತಲುಪದಿರುವುದು. ‘ಕೈ’ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಬಾಲರಾಜು ಬಿಜೆಪಿಗೆ ಹೋಗಿರುವುದು. ಲಿಂಗಾಯತ ಸಮುದಾಯ ಸ್ವಲ್ಪ ಅಸಮಾಧಾನವಾಗಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಯಲ್ಲಿ ಟೀ ಕುಡಿದ ಕಿಚ್ಚ ಸುದೀಪ್‌

    ಬಿಎಸ್‌ಪಿ ಹೋರಾಟದ ಮೂಲಕ ಹೆಸರುವಾಸಿಯಾಗಿದ್ದ ಎನ್.ಮಹೇಶ್ ಬದಲಾದ ರಾಜಕೀಯ ಸ್ಥಿತ್ಯಂತರದಲ್ಲಿ ಕಮಲ ಮುಡಿದಿರುವುದಿಂದ ಬಿಎಸ್‌ಪಿ, ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ. ಜೊತೆಗೆ ಎನ್.ಮಹೇಶ್ ಸೋಲಿಸುವ ಅಜೆಂಡಾ ಇಟ್ಟುಕೊಂಡು ವಿರೋಧಿ ಬಣಗಳು ಒಗ್ಗಟ್ಟಿನ ಮಂತ್ರ ಜಪಿಸಿ‌ ಕೆಲಸ ಮಾಡುತ್ತಿವೆ. ಆದರೆ ಎನ್.ಮಹೇಶ್ ಅವರು, ನನಗೆ ಬಿಜೆಪಿ, ಯಡಿಯೂರಪ್ಪ ಶ್ರೀರಕ್ಷೆಯಿದೆ ಎಂದು ಅಖಾಡ ಫೇಸ್ ಮಾಡ್ತಿದ್ದಾರೆ.