Tag: A Gentleman

  • ಜಂಟಲ್‍ಮ್ಯಾನ್ ಗಾಗಿ ಸೋನಾಕ್ಷಿಯಿಂದ ಭರ್ಜರಿ ಡ್ಯಾನ್ಸ್

    ಜಂಟಲ್‍ಮ್ಯಾನ್ ಗಾಗಿ ಸೋನಾಕ್ಷಿಯಿಂದ ಭರ್ಜರಿ ಡ್ಯಾನ್ಸ್

    ಮುಂಬೈ: ಸಿದ್ದಾರ್ಥ ಮಲ್ಹೋತ್ರಾ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ `ಎ ಜಂಟಲ್ ಮ್ಯಾನ್: ಸುಂದರ್, ಸುಶೀಲ್, ರಿಸ್ಕಿ’ ಸಿನಿಮಾಕ್ಕೆ ಸೋನಿಕ್ಷಿ ಸಿನ್ಹಾ ವಿನೂತನವಾಗಿ ಡ್ಯಾನ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ.

    ಗುರುವಾರ ಅಕ್ಷಯ್ ಕುಮಾರ್ ಸಹ ಜೆಂಟಲ್‍ಮ್ಯಾನ್ ಸಿನಿಮಾಗಾಗಿ ಪ್ರಮೋಷನ್ ಮಾಡಿದ್ದರು. ಆ್ಯಕ್ಷನ್ ಮತ್ತು ರೋಮ್ಯಾಂಟಿಕ್ ಕಥೆಯನ್ನು ಹೊಂದಿರುವ ಜೆಂಟಲ್‍ಮ್ಯಾನ್ ಚಿತ್ರದಲ್ಲಿ ಸಿದ್ದಾರ್ಥ್ ಎರಡು ವಿಭಿನ್ನ ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದಾರ್ಥ್‍ಗೆ ಜೊತೆಯಾಗಿ ಜಾಕ್ವೆಲಿನ್ ನಟಿಸಿದ್ದಾರೆ.

    ಸಿನಿಮಾದಲ್ಲಿ ಗೌರವ್ ಮತ್ತು ರಿಶಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೌರವ್ ಒಬ್ಬ ಎಂಜಿನಿಯರ್ ಆಗಿದ್ದು, ಸುಂದರವಾದ ಕುಟುಂಬದೊಂದಿಗೆ ವಾಸವಾಗಿರುತ್ತಾನೆ. ಇನ್ನೂ ರಿಶಿ ಸೀರಿಯಲ್ ಕಿಲ್ಲರ್ ಆಗಿರುತ್ತಾನೆ. ಕಾವ್ಯಾ ಪಾತ್ರದಲ್ಲಿ ಜಾಕ್ವೆಲಿನ್ ಮಿಂಚಿದ್ದಾರೆ. ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

    https://twitter.com/sonakshisinha/status/900739172830498817

    https://twitter.com/jas_QW/status/900740356224032768

    https://twitter.com/ItzEnaya_/status/900292870808125440