Tag: a b de villiers

  • ಎಬಿಡಿ ಜೊತೆ ʼಕಾಂತಾರʼದ ರಿಷಬ್‌ ಶೆಟ್ಟಿ

    ಎಬಿಡಿ ಜೊತೆ ʼಕಾಂತಾರʼದ ರಿಷಬ್‌ ಶೆಟ್ಟಿ

    ʼಕಾಂತಾರʼ (Kantara) ಸಿನಿಮಾ ಮೂಲಕ ಯಶಸ್ಸಿನ ಉತ್ತುಂಗದಲ್ಲಿರುವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty), ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಆಟಗಾರ ಎಬಿ ಡಿವಿಲಿಯರ್ಸ್‌ (A B De Villiers) ಜೊತೆ ಕಾಣಿಸಿಕೊಂಡಿದ್ದಾರೆ.

    ಸಿನಿಮಾದ 360 ಡಿಗ್ರಿ ಹಾಗೂ ಕ್ರಿಕೆಟ್‌ನ 360 ಡಿಗ್ರಿ ಮುಖಾಮುಖಿಯಾಗಿದ್ದಾರೆ ಎಂದು ಹೊಂಬಾಳೆ ಫಿಲ್ಸ್ಂ (Hombale Films) ಟ್ವೀಟ್ ಮಾಡಿದೆ. ಕಂಬಳದಲ್ಲಿ ಕೋಣ ಓಡಿಸುವ ಮುನ್ನ ಹೇಳುವ ʻಬಿಡಿಯಾ…ʼ ಪದವನ್ನು ರಿಷಬ್‌ ಹಾಗೂ ಎಬಿಡಿ ಒಟ್ಟಿಗೆ ಹೇಳಿ, ಒಬ್ಬರು ಕೋಣ ಓಡಿಸಿದ್ರೆ, ಮತ್ತೊಬ್ರು ಕ್ರಿಕೆಟ್ ಬ್ಯಾಟ್ ಬೀಸುವ ಪೋಸ್ಟ್ ವೈರಲ್ ಆಗಿದೆ. ಇದನ್ನೂ ಓದಿ: ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್

    ರಿಷಬ್ ಶೆಟ್ಟಿ ಕೂಡ ವೀಡಿಯೋ ಪೋಸ್ಟ್ ಮಾಡಿದ್ದು, ಇದು ಪಂದ್ಯ, ನಿಜವಾದ 360ಯನ್ನು ಭೇಟಿಯಾದೆ. ಸೂಪರ್ ಹೀರೋ ಮತ್ತೆ ತಮ್ಮ ಮೂಲಸ್ಥಾನಕ್ಕೆ ಮರಳಿದ್ದಾರೆ. ನಮ್ಮ ಬೆಂಗಳೂರು ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ. ಈ ವೀಡಿಯೋ ಮೂಲಕ ರಾಯಲ್ ಚಾಲೆಂಜರ್ಸ್‌ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

    ರಿಷಬ್‌ ಶೆಟ್ಟಿ ನಿರ್ದೇಶನದ ʼಕಾಂತಾರʼ ಸಿನಿಮಾ ದೇಶಾದ್ಯಂತ ಕಮಾಲ್‌ ಸೃಷ್ಟಿಸಿದೆ. ವಿವಿಧ ಕ್ಷೇತ್ರಗಳ ಗಣ್ಯರು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟಾರ್‌ ನಟರು, ನಿರ್ದೇಶಕರು ಸಹ ಸಿನಿಮಾವನ್ನು ಹಾಡಿ ಹೊಗಳಿಸಿದ್ದಾರೆ. ಸಿನಿಮಾವು 300 ಕೋಟಿ ರೂ. ಗಲ್ಲಾಪೆಟ್ಟಿಗೆ ಸೇರಿಸುವತ್ತ ಮುನ್ನುಗ್ಗಿದೆ. ಇದನ್ನೂ ಓದಿ: ಸಮಂತಾ ಡೆಡಿಕೇಷನ್ ಮೆಚ್ಚಿದ ಹಾಲಿವುಡ್ ಸಾಹಸ ನಿರ್ದೇಶಕ ಯಾನಿಕ್ ಬೆನ್

    Live Tv
    [brid partner=56869869 player=32851 video=960834 autoplay=true]