Tag: A 25 year old woman is married to a 45 year old man

  • 45 ವರ್ಷದ ವ್ಯಕ್ತಿಯ ಜೊತೆ 25ರ ಯುವತಿ ಮದುವೆ

    45 ವರ್ಷದ ವ್ಯಕ್ತಿಯ ಜೊತೆ 25ರ ಯುವತಿ ಮದುವೆ

    ತುಮಕೂರು: 45 ವರ್ಷದ ವ್ಯಕ್ತಿಯ ಜೊತೆ 25ರ ಯುವತಿ ಮದುವೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.

    ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಮತ್ತು ಮೇಘನಾ ಅವರ ಮದುವೆ ನಡೆದಿದೆ. ಮೇಘನಾ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದು, ಈಕೆಗೆ ಬೇರೆಯವರ ಜೊತೆ ಮೊದಲೇ ಒಂದು ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪತಿ ಕಳೆದ ಎರಡು ವರ್ಷಗಳಿಂದ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಇದೆ. ಪತಿ ಎರಡು ವರ್ಷಗಳಿಂದ ಬಾರದ ಹಿನ್ನೆಲೆ ಮೇಘನಾಳೇ ಹೋಗಿ 45 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳಂತೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

    ಮೇಘನಾ ಸ್ವತಃ ಶಂಕರಣ್ಣ ಬಳಿ ಹೋಗಿ ಮದುವೆಯಾಗಿ ಅಂತಾ ಕೇಳಿಕೊಂಡಿದ್ದಾಳೆ. ಈ ವೇಳೆ ಇದುವರೆಗೂ ಮದುವೆಯಾಗದ ಶಂಕರಣ್ಣ ಯುವತಿಯನ್ನು ಒಪ್ಪಿ ಸಮೀಪದ ದೇವಾಲಯದಲ್ಲಿ ಮದುವೆಯಾಗಿದ್ದಾರೆ.

    ಮದುವೆ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಹಿರಿಯ ವ್ಯಕ್ತಿಯನ್ನು ಇಷ್ಟ ಪಟ್ಟು ಮದುವೆಯಾದರೆ ತಪ್ಪೇನು ಎಂದು ಕೆಲವರು ಪ್ರಶ್ನೆ ಮಾಡಿದರೆ ಯಾವುದೋ ಆಸೆಗಾಗಿ ಆಕೆ ಮದುವೆಯಾಗಿರಬಹುದು ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:  ಉತ್ತರಾಖಂಡ್‍ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ

    ಇಬ್ಬರು ಇಷ್ಟಪಟ್ಟು ಮದುವೆಯಾಗಿದ್ದಾರೆ. ಅದು ಅವರ ಖಾಸಗಿ ವಿಷಯ. ಈ ಮದುವೆಯನ್ನು ವಿರೋಧಿಸುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.