Tag: 93 year-old man

  • 93ರ ಇಳಿ ವಯಸ್ಸಿನಲ್ಲೂ ಕುಸ್ತಿ ಪಟ್ಟು ಕಲಿಸ್ತಾರೆ ಪೈಲ್ವಾನ್ ಅಜ್ಜ

    93ರ ಇಳಿ ವಯಸ್ಸಿನಲ್ಲೂ ಕುಸ್ತಿ ಪಟ್ಟು ಕಲಿಸ್ತಾರೆ ಪೈಲ್ವಾನ್ ಅಜ್ಜ

    ಚೆನ್ನೈ: ಪೈಲ್ವಾನ್ ಅಜ್ಜನೊಬ್ಬ 93ರ ಇಳಿ ವಯಸ್ಸಿನಲ್ಲೂ ಕುಸ್ತಿ ಪಟ್ಟು ಕಲಿಸುತ್ತಿದ್ದು, ಅನೇಕರಿಗೆ ಮಾದರಿಯಾಗಿದ್ದಾರೆ.

    ತಮಿಳುನಾಡಿನ ಮಧುರೈನ ಪಲಂಗನಾಥಂನ ಪೈಲ್ವಾನ್ ಪಳನಿ ಅವರು 93ರ ವಯಸ್ಸಿನಲ್ಲಿಯೂ ಹುಮ್ಮಸ್ಸಿನಿಂದ ಕುಸ್ತಿ ತರಬೇತಿ ನೀಡುತ್ತಿದ್ದಾರೆ. ಪಲಂಗನಾಥಂನಲ್ಲಿ ಕುಸ್ತಿಪಟುಗಳಿಗೆ ತರಬೇತಿ ನೀಡಲು ಅಖಾಡವನ್ನು ಸಿದ್ಧಪಡಿಸಿದ್ದಾರೆ.

    ಪಳನಿ ಅವರು ಕುಸ್ತಿಪಟುವಾಗಿದ್ದು, 1944ರಿಂದಲೂ ಕುಸ್ತಿ ಆಡುತ್ತಾ ಬಂದಿದ್ದಾರೆ. ದೈಹಿಕವಾಗಿ ಸದೃಢವಾಗಿರುವ ಅವರು ಇಳಿ ವಯಸ್ಸಿನಲ್ಲಿಯೂ ಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಯುವಕರಿಗೆ ಹಾಗೂ ಹಿರಿಯರಿಗೆ ಕುಸ್ತಿ ತರಬೇತಿ ಕೊಡುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೈಲ್ವಾನ್ ಅಜ್ಜ ಅಳನಿ, 1944ರಿಂದಲೂ ವಿದ್ಯಾರ್ಥಿಗಳಿಗೆ ಕುಸ್ತಿ ತರಬೇತಿ ನೀಡುತ್ತಿದ್ದೇನೆ. 93ರ ವಯಸ್ಸಿನಲ್ಲಿಯೂ ಫಿಟ್ ಆಗಿರಲು ಕುಸ್ತಿ ಅಭ್ಯಾಸ ಮಾಡುವ ಜೊತೆಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತೇನೆ. ಸುಮಾರು 75 ವರ್ಷಗಳಿಂದಲೂ ಕುಸ್ತಿ ತರಬೇತಿ ಕೊಡುತ್ತಿರುವೆ ಎಂದು ತಿಳಿಸಿದ್ದಾರೆ.

    ಗರಡಿ ಮನೆಯ ಅಖಾಡದಲ್ಲಿ ವ್ಯಾಯಾಮ ಮಾಡಲು ಯಾವುದೇ ಯಂತ್ರಗಳನ್ನು ಬಳಸುವುದಿಲ್ಲ. ಬದಲಾಗಿ ಕುಸ್ತಿ ಪಟ್ಟು ಕಲಿಯಲು ಬರುವ ಯುವಕರಿಗೆ ಹಾಗೂ ಹಿರಿಯರಿಗೆ ಪಳನಿ ತರಬೇತಿ ನೀಡುತ್ತಾರೆ.