Tag: 83

  • 36 ವರ್ಷದ ಕನಸನ್ನ ನನಸು ಮಾಡಿಕೊಂಡ ಕಿಚ್ಚ

    36 ವರ್ಷದ ಕನಸನ್ನ ನನಸು ಮಾಡಿಕೊಂಡ ಕಿಚ್ಚ

    ಬೆಂಗಳೂರು: ಚಂದನವನದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ತಮ್ಮ 36 ವರ್ಷದ ಕನಸನ್ನು ಇಂದು ನನಸು ಮಾಡಿಕೊಂಡಿದ್ದಾರೆ.

    ಎಲ್ಲರಿಗೂ ತಿಳಿದಿರುವಂತೆ ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಅದರಲ್ಲಿಯೂ ಕ್ರಿಕೆಟ್ ನಲ್ಲಿ ಕಪಿಲ್ ದೇವ್ ಎಂದರೆ ಅವರಿಗೆ ಬಹಳ ಅಚ್ಚುಮೆಚ್ಚು ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಕಿಚ್ಚ ಇನ್‍ಸ್ಟಾಗ್ರಾಮ್ ನಲ್ಲಿ ಕಪಿಲ್ ಅವರ ಜೊತೆ ಫೋಟೋವನ್ನು ಕ್ಲಿಕಿಸಿಕೊಂಡು ಆ ಫೋಟೋವನ್ನು ಶೇರ್ ಮಾಡಿದ್ದು, ನಾನು ಸುಮಾರು 36 ವರ್ಷಗಳಿಂದ ಕಾಯುತ್ತಿದ್ದ ಚಿತ್ರವಿದು. ನನ್ನ ಕನಸನ್ನು ನನಸು ಮಾಡಿದ್ದಕ್ಕೆ ಧನ್ಯವಾದ ಕಪಿಲ್ ಸರ್. ನೀವು ನಮ್ರತೆಯ ಪ್ರತಿರೂಪ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಾನು ಅತ್ತಾಗ ಕಪಿಲ್‍ದೇವ್ ಕಣ್ಣನ್ನು ಒರೆಸಿ ಎತ್ತಿಕೊಂಡಿದ್ದರು: ಸುದೀಪ್

     

    View this post on Instagram

     

    A post shared by KicchaSudeepa (@kichchasudeepa)

    ಈ ಫೋಟೋ ನೋಡಿದ ಇವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ನೀವು ನಮ್ಮ ಹೆಮ್ಮೆ ಎಂದು ಬರೆದು ಕಾಮೆಂಟ್ ಮಾಡುತ್ತಿದ್ದಾರೆ.

    ರಣವೀರ್ ನಟನೆಯ ’86’ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ ವಿತರಿಸುತ್ತಿದ್ದಾರೆ. ಈ ಹಿನ್ನೆಲೆ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ಈ ವೇಳೆ ಕಪಿಲ್ ಕುರಿತು ಮಾತನಾಡಿದ ಸುದೀಪ್, ತುಂಬಾ ವರ್ಷಗಳ ಹಿಂದೆ ನಾನು 87-88 ರಲ್ಲಿ ವೆಸ್ಟ್ ಇಂಡಿಸ್ ಜೊತೆ ಆಡುವಾಗ ಕಪಿಲ್ ಸರ್ ನೋಡೋಕೆ ಹೋಗಿದ್ದೆ. ಅಲ್ಲಿ ಅವರ ಜೊತೆ ಫೋಟೋ ಕೇಳಿದೆ. ಆದ್ರೆ ನನ್ನ ಬ್ಯಾಡ್ ಲಕ್ ಕ್ಯಾಮೆರಾ ವರ್ಕ್ ಆಗಿಲ್ಲ. ಆಗ ನಾನು ಅಳ್ತಾ ಇದ್ದೆ. ಅವಾಗ ನನ್ನ ಕಣ್ಣನ್ನು ಒರೆಸಿ ನನ್ನನ್ನು ಎತ್ತುಕೊಂಡಿದ್ದರು. ಆದರೆ ಈಗ ಇವರ ಸಿನಿಮಾ ವಿತರಣೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ ಎಂದು ಭಾವುಕರಾಗಿದ್ದರು.

    ನನಗೆ ಕಪಿಲ್ ತುಂಬಾ ಇಷ್ಟ. ಆ ದಿನ ನನಗೆ ತುಂಬಾ ವಿಶೇಷ, ನನಗೆ ಅವರು ಹೀರೋ ಆದವರು. ತುಂಬಾ ವರ್ಷ ಅವರ ಜೊತೆ ಫೋಟೋಗಾಗಿ ತುಂಬಾ ವೇಟ್ ಮಾಡಿದ್ದೀನಿ. ನಾನು ಪ್ರೀತಿ ಮಾಡುವ ಗೇಮ್, ಆಡೋಕೆ ಸಿಕ್ಕಿರೋ ಗೇಮ್ ಕ್ರಿಕೆಟ್. ಕನ್ನಡಕ್ಕೆ 83 ಸಿನಿಮಾ ಅರ್ಪಿಸುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದಿದ್ದರು. ಇದನ್ನೂ ಓದಿ: ಮತ್ತೊಮ್ಮೆ ನಾವು ಕ್ಯೂಟ್ ಜೋಡಿಗಳು ಎಂದು ತೋರಿಸಿಕೊಟ್ಟ ಯಶ್, ರಾಧಿಕಾ

    ಈ ಸುದ್ದಿಗೋಷ್ಠಿಗೆ ಕಪಿಲ್ ಅವರು ಬಂದಿದ್ದು, ಅವರ ಜೊತೆ ಫೋಟೋ ತೆಗೆಸಿಕೊಂಡು ಕಿಚ್ಚ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

  • ನಾನು ಅತ್ತಾಗ ಕಪಿಲ್‍ದೇವ್ ಕಣ್ಣನ್ನು ಒರೆಸಿ ಎತ್ತಿಕೊಂಡಿದ್ದರು: ಸುದೀಪ್

    ನಾನು ಅತ್ತಾಗ ಕಪಿಲ್‍ದೇವ್ ಕಣ್ಣನ್ನು ಒರೆಸಿ ಎತ್ತಿಕೊಂಡಿದ್ದರು: ಸುದೀಪ್

    ಬೆಂಗಳೂರು: ’83’ ಸಿನಿಮಾ ನಮ್ಮೊಂದಿಗೆ ಒಂದು ರೀತಿಯ ಭಾವನೆಯನ್ನು ಹೊಂದಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ

    ಕನ್ನಡದಲ್ಲಿ ’83’ ಸಿನಿಮಾ ಬಿಡುಗಡೆಯಾಗುವ ಹಿನ್ನೆಲೆ ಈ ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ ವಿತರಸುತ್ತಿದ್ದು, ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದನ್ನೂ ಓದಿ: ಮತ್ತೊಮ್ಮೆ ನಾವು ಕ್ಯೂಟ್ ಜೋಡಿಗಳು ಎಂದು ತೋರಿಸಿಕೊಟ್ಟ ಯಶ್, ರಾಧಿಕಾ

    ಈ ವೇಳೆ ಕಪಿಲ್ ಅವರನ್ನು ನೆನೆದ ಸುದೀಪ್, ತುಂಬಾ ವರ್ಷಗಳ ಹಿಂದೆ ನಾನು ಅಂದ್ರೆ 87-88 ರಲ್ಲಿ ವೆಸ್ಟ್ ಇಂಡಿಸ್ ಜೊತೆ ಆಡುವಾಗ ಕಪಿಲ್ ಸರ್ ನೋಡೋಕೆ ಹೋಗಿದ್ದೆ. ಅಲ್ಲಿ ಅವರ ಜೊತೆ ಫೋಟೋ ಕೇಳಿದೆ. ಆದ್ರೆ ನನ್ನ ಬ್ಯಾಡ್ ಲಕ್ ಕ್ಯಾಮೆರಾ ವರ್ಕ್ ಆಗಿಲ್ಲ. ಆಗ ನಾನು ಆಳ್ತಾ ಇದೆ. ಅವಾಗ ನನ್ನ ಕಣ್ಣನ್ನು ಒರೆಸಿ ನನ್ನನ್ನು ಎತ್ತಿಕೊಂಡಿದ್ದರು. ಆದರೆ ಈಗ ಇವರ ಸಿನಿಮಾ ವಿತರಣೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ಭಾವುಕರಾದರು.

    ನನಗೆ ಕಪಿಲ್ ತುಂಬಾ ಇಷ್ಟ. ಆ ದಿನ ನನಗೆ ತುಂಬಾ ವಿಶೇಷ, ನನಗೆ ಅವರು ಹೀರೋ ಆದವರು. ತುಂಬಾ ವರ್ಷ ಅವರ ಜೊತೆ ಫೋಟೋಗಾಗಿ ತುಂಬಾ ವೇಟ್ ಮಾಡಿದ್ದೀನಿ. ನಾನು ಪ್ರೀತಿ ಮಾಡುವ ಗೇಮ್, ಆಡೋಕೆ ಸಿಕ್ಕಿರೋ ಗೇಮ್ ಕ್ರಿಕೆಟ್. ಕನ್ನಡಕ್ಕೆ 83 ಸಿನಿಮಾ ಅರ್ಪಿಸುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದರು.

    83 ಸಿನಿಮಾದ ಟ್ರೇಲರ್ ನೋಡಿದ ಪ್ರತಿಯೊಬ್ಬರ ಮನಸ್ಸು ಬದಲಾಗುತ್ತೆ. ಬಾರಿ ಕ್ರಿಕೆಟ್ ನೋಡುವವರು ಮಾತ್ರವಲ್ಲ ಎಲ್ಲರೂ ಇದನ್ನು ಇಷ್ಟ ಪಡುತ್ತಾರೆ. ರಣವೀರ್ ನಟನೆ ಮಾತ್ರ ಅದ್ಭುತವಾಗಿ ಮೂಡಿಬಂದಿದೆ. ಅವರು ಹೇಗೆ ಇದಕ್ಕೆ ಕೆಲಸ ಮಾಡಿದ್ದಾರೆ ಎಂಬುದು ಈ ಟ್ರೇಲರ್ ನೋಡಿದರೆ ತಿಳಿಯುತ್ತೆ. ಅವರು ಇಲ್ಲಿ ಒಂದು ಡೈಲಾಗ್ ಹೇಳಿದ್ದಾರೆ ಎಂದು ರಣವೀರ್ ಅವರನ್ನು ಮತ್ತೊಮ್ಮೆ ಈ ಸಿನಿಮಾದ ಡೈಲಾಗ್ ಹೇಳಿ ಎಂದು ಕೇಳಿದರು.

    ಮೊದಲು ಸಿನಿಮಾ ಎಂದರೆ ಸಿನಿಮಾ ಅಷ್ಟೇ. ಆದರೆ ಈ ಸಿನಿಮಾ ಒಂದು ರೀತಿಯ ಭಾವನೆಯನ್ನು ಹೊಂದಿದೆ. ನಾವು 83 ಅಲ್ಲಿ ಕ್ರಿಕೆಟ್ ನಡೆಯಬೇಕಾದರೆ ಚಿಕ್ಕವರಾಗಿದ್ದೆವು. ನಮಗೂ ಕ್ರಿಕೆಟ್ ಎಂದರೆ ಏನು ಎಂದು ಗೊತ್ತಿತ್ತು. ಆದರೆ ಆಗ ನಮ್ಮ ಭಾಷೆಯಲ್ಲಿ ಕ್ರಿಕೆಟ್ ಇರಲಿಲ್ಲ. ನಮಗೆ ಆ ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ ಈ ಬಗ್ಗೆ ನಮಗೆ ಕಾಲೇಜಿಗೆ ಬಂದಾಗ ತಿಳಿಯಿತು ಎಂದರು. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ

    ನಮಗೆ ಆಟದ ಹಿಂದೆ ಏನಾಗಿತ್ತು ಎಂದು ಗೊತ್ತಿಲ್ಲ. ಆದರೆ ಆ ಪಂದ್ಯದಲ್ಲಿ ಭಾರತ ತಂಡ ಗೆದ್ದಿತ್ತು ಎಂದು ಅಷ್ಟೇ ಗೊತ್ತು. ಅದಕ್ಕೆ ಅವರು ಎಷ್ಟು ಕಷ್ಟ ಪಡುತ್ತಿದ್ದರು ಎಂಬುದು ನಮಗೆ ತಿಳಿದಿಲ್ಲ. ಆದರೆ ಈಗ ಇವರೆಲ್ಲರ ಕಷ್ಟದಿಂದ ನಮ್ಮ ಕ್ರಿಕೆಟ್ ತಂಡ ವರ್ಷಕ್ಕೆ ಕೋಟಿ ರೂ. ದುಡಿಯುತ್ತಾರೆ. ಅದಕ್ಕೆಲ್ಲ ಇವರ ಪ್ರತಿಫಲ, ಶ್ರಮವೇ ಕಾರಣ ಎಂದು ವೇದಿಕೆ ಮೇಲಿದ್ದ ಗಣ್ಯರನ್ನು ಅಭಿನಂದಿಸಿದರು.

    ಈ ಸಿನಿಮಾ ಬಾರಿ ಒಂದು ವಲ್ಡ್ ಕಪ್ ನ ಸ್ಟೋರಿಯಲ್ಲ. ಬದಲಿಗೆ ಇಡೀ ಭಾರತದ ಕ್ರಿಕೆಟ್ ತಂಡದ ಗುರಿಯೇ ಬದಲಾದ ಒಂದು ಕಥೆಯಾಗಿದೆ. ಅದನ್ನೆಲ್ಲ ಮಾಡಿದವರು ಈ ಗಣ್ಯರು. ನಾವು ಅದನ್ನೆಲ್ಲ ನೋಡಿಲ್ಲ, ಏಕೆಂದರೆ ನಾವು ಅಲ್ಲಿ ಇರಲಿಲ್ಲ. ಇವತ್ತು ನಮ್ಮ ಕ್ರಿಕೆಟ್ ತಂಡ ಅನುಭವಿಸುತ್ತಿರುವ ಸವಲತ್ತು ಎಲ್ಲ ಇವರ ಪ್ರತಿಫಲ ಎಂದು ಪ್ರಶಂಸಿದರು.

    ಈ ವೇಳೆ ರಣವೀರ್ ಬಗ್ಗೆ ಮಾತನಾಡಿದ ಅವರು, 83ರ ವಿಶ್ವಕಪ್ ಸಮಯದಲ್ಲಿ ಯಾರು ಇರಲಿಲ್ಲ. ಆದರೆ ಅದನ್ನು ಮತ್ತೆ ಈ ಸಿನಿಮಾ ಮೂಲಕ ತೋರಿಸಿದ್ದಾರೆ. ಅವರು ನಮ್ಮ ದೇಶಕ್ಕಾಗಿ ಎಷ್ಟು ಕಷ್ಟ ಪಟ್ಟರು ಎಂದು ತಿಳಿಸುವುಕ್ಕಾಗಿ ಈ ಸಿನಿಮಾವನ್ನು ತೆರೆ ಮೇಲೆ ತರಲಾಗಿದೆ. ಈ ಸಿನಿಮಾ ನಮ್ಮ ಭಾರತೀಯರು ಹೆಮ್ಮೆ ಪಡುವಂತಹ ಸಿನಿಮಾವಾಗಿದೆ ಎಂದು ಖುಷಿಪಟ್ಟರು. ಈ ಸಿನಿಮಾ ಮೂಲಕ 83 ಕ್ರಿಕೆಟ್ ಸಮಯದಲ್ಲಿ ಏನು ನಡೆದಿತ್ತು ಎಂಬುದು ನಮ್ಮ ಮುಂದೆ ಬರುತ್ತೆ. ಅದು ರಣವೀರ್ ಕ್ರಿಕೆಟರ್ ಆಗಿ ನಮ್ಮ ಮುಂದೆ ಬರುತ್ತಾರೆ. ಸಿನಿಮಾ ಮುಗಿಯುವಾಗ ರಣವೀರ್ ನಮ್ಮ ಕಣ್ಣಮುಂದೆ ಇರುತ್ತಾರೆ. ಅದಕ್ಕೆ ಇವರು ತುಂಬಾ ಶ್ರಮ ಪಟ್ಟು ಕೆಲಸ ಮಾಡಿದ್ದಾರೆಸ ಎಂದು ಅವರ ಶ್ರಮದ ಬಗ್ಗೆ ವಿವರಿಸಿದರು.

  • 83 ಸಿನಿಮಾದ ಟ್ರೇಲರ್‌ ರಿಲೀಸ್ – ಅಭಿಮಾನಿಗಳು ಫುಲ್ ಫಿದಾ

    83 ಸಿನಿಮಾದ ಟ್ರೇಲರ್‌ ರಿಲೀಸ್ – ಅಭಿಮಾನಿಗಳು ಫುಲ್ ಫಿದಾ

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 83 ಸಿನಿಮಾ ಟ್ರೇಲರ್‌ ರಿಲೀಸ್ ಆಗಿದ್ದು, ಅಭಿಮಾನಿಗಳು ಟ್ರೇಲರ್ ನೋಡಿ ಫುಲ್ ಫಿದಾ ಆಗಿದ್ದಾರೆ.

    Ranveer Singh

    ಕೊರೊನಾ ವೈರಸ್ ಕಾರಣಾಂತರದಿಂದ ಬಿಡುಗಡೆಗೆ ತಡವಾಗಿದ್ದ ಈ ಚಿತ್ರ ಕ್ರಿಸ್‍ಮಸ್ ಹಬ್ಬದಂದು ತೆರೆ ಮೇಲೆ ಬರಲಿದೆ. ಸದ್ಯ 83 ಚಿತ್ರದ ಟ್ರೇಲರ್ ಅನ್ನು ರಣ್‍ವೀರ್ ಸಿಂಗ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. 3 ನಿಮಿಷ 49 ಸೆಕೆಂಡ್ ಇರುವ ಈ ಟ್ರೇಲರ್‌ ಪ್ರೇಕ್ಷಕರನ್ನು 1983ಕ್ಕೆ ಕರೆದೊಯ್ಯುವಂತಿದ್ದು, ಭಾರತೀಯ ಕ್ರಿಕೆಟಿಗರು ವಿಶ್ವಕಪ್ ಗೆದ್ದ ಐತಿಹಾಸಿಕ ಗೆಲುವನ್ನು ನೆನಪಿಸುತ್ತದೆ. ಇದನ್ನೂ ಓದಿ: ದುಬಾರಿ ಕಾರು ಖರೀದಿಸಿದ ಸೋನು ನಿಗಂ

    ಕಪಿಲ್ ದೇವ್ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಕಾಣಿಸಿಕೊಂಡಿದ್ದು, ಟ್ರೇಲರ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದವರ ಜರ್ನಿ, ಅವರ ಹೋರಾಟ, ಗೆಲುವುಗಳು ಮತ್ತು ಸೋಲುಗಳನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಟ್ರೇಲರ್‌ನಲ್ಲಿ ಕಪಿಲ್ ದೇವ್ ಅವರ ಪತ್ನಿ ಪಾತ್ರದಲ್ಲಿ ರಣ್‍ವೀರ್ ​ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಾಂಧಿಯಂತೆ ಚರಕ ತಿರುಗಿಸಿದ ಬಾಲಿವುಡ್ ಸುಲ್ತಾನ್

     

    View this post on Instagram

     

    A post shared by Ranveer Singh (@ranveersingh)

    ಟ್ರೇಲರ್‌ ಶೇರ್ ಮಾಡಿಕೊಳ್ಳುವುದರ ಜೊತೆಗೆ ರಣ್‍ವೀರ್ ಸಿಂಗ್ ಅವರು, ಅಸಾಧ್ಯವಾಗದ್ದನ್ನು ಸಾಧ್ಯವಾಗಿಸಿದವರ ನೈಜ ಕಥೆಯ ಟ್ರೇಲರ್‌ ರಿಲೀಸ್ ಆಗಿದೆ. ಇದೇ ಡಿಸೆಂಬರ್ 24ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 3ಡಿಯಲ್ಲಿಯು ನೋಡಬಹುದು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

  • ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್

    ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್

    ಮುಂಬೈ: ಯಾರೂ ನನ್ನನ್ನು ಕೈಹಿಡಿದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದು ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಪೋಸ್ಟ್ ಮಾಡಿದ್ದಾರೆ.

    ಲೂಟೆರಾ, ಪದ್ಮಾವತ್, ಗಲ್ಲಿ ಬಾಯ್, ಬೆಲ್ಟ್ ಸಿನಿಮಾಗಳ ಮೂಲಕ ರಣವೀರ್ ಸಿಂಗ್ ಬಾಲಿವುಡ್ ನಲ್ಲಿ ಸ್ಟಾರ್ ನಟರಾಗಿದ್ದಾರೆ. ಈ ಸಿನಿಮಾಗಳ ನಂತರ ಅಭಿಮಾನಿಗಳನ್ನು ಇನ್ನೂ ರಂಜಿಸಲು ಸಿದ್ಧವಾಗುತ್ತಿರುವ ಈ ಗಲ್ಲಿಬಾಯ್ ಜಿಮ್‍ನಲ್ಲಿ ಬೆವರು ಸುರಿಸುತ್ತಿದ್ದಾರೆ. ರಣವೀರ್ ಸಿಂಗ್ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ಫೋಟೋವನ್ನು ಇನ್‍ಸ್ಟಾಗ್ರಾಮ್ ಗೆ ಹಾಕಿದ್ದು, ಯಾರೂ ನನ್ನನ್ನು ಕೈಹಿಡಿದಿಲ್ಲ, ಬ್ರಹ್ #grind #mondaymotivation ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ನಟ ವರುಣ್ ಧವನ್ ‘ಹಾಟ್’ ಸಿಂಬಲ್ ಇರುವ ಎಮೋಜಿಯನ್ನು ಹಾಕಿ ಕಾಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ:  ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

     

    View this post on Instagram

     

    A post shared by Ranveer Singh (@ranveersingh)

    ಈ ದಿನಗಳಲ್ಲಿ ರಣವೀರ್ ಉತ್ತುಂಗದಲ್ಲಿದ್ದು, ಇತ್ತೀಚೆಗೆ ಭಾರತದ ನ್ಯಾಷನಲ್ ಬ್ಯಾಸ್ಕೆಟ್ಬಾಲ್ ಅಸೋಸಿಯೇಷನ್(ಎನ್‍ಬಿಎ)ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಕುರಿತು ಎನ್‍ಬಿಎ ಅಧಿಕೃತವಾಗಿ ಫೋಷಣೆಯನ್ನು ಮಾಡಿದೆ. ಈ ಎಲ್ಲಾ ಯಶಸ್ಸು ಸುಲಭವಾಗಿ ಬರುವುದಿಲ್ಲ. ಅದಕ್ಕೆ ನನ್ನ ಪರಿಶ್ರಮ ಇರಬೇಕು ಎಂದು ಹೇಳುವ ರೀತಿ ಬರೆದು ಈ ಪೋಸ್ಟ್ ಮಾಡಿದ್ದಾರೆ.

    ಬ್ಯುಸಿಯಾಗಿರುವ ಈ ನಟ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಣವೀರ್ ನಟನೆಯ ’83’ ಚಿತ್ರ ಈ ವರ್ಷ ಕ್ರಿಸ್‍ಮಸ್‍ನಲ್ಲಿ ಬಿಡುಗಡೆಯಾಗಲಿದೆ. ತಮಿಳು ಬ್ಲಾಕ್‍ಬಸ್ಟರ್ ಹಿಟ್ ‘ಅನ್ನಿಯನ್ನ’ ಹಿಂದಿ ಸಿನಿಮಾಗೆ ರಿಮೇಕ್ ಆಗುತ್ತಿದ್ದು, ಆ ಚಿತ್ರದಲ್ಲಿ ರಣವೀರ್ ನಟಿಸುತ್ತಿದ್ದಾರೆ. ರಣವೀರ್, ಆಲಿಯಾ ಭಟ್ ಜೊತೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣ – ಐಷಾರಾಮಿ ಹಡಗಿನಲ್ಲಿ ತಗ್ಲಾಕ್ಕೊಂಡ ಬೆಂಗಳೂರಿಗರು..!

     

  • 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಮುಂಬೈ: ಪ್ರೇಮಿಗಳ ದಿನದಂದು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ರಿಲೀಸ್ ಮಾಡುವುದಾಗಿ ಎಂದು ಅಮೀರ್ ಖಾನ್ ಪ್ರೊಡಕ್ಷನ್ಸ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.

    ಅಮೀರ್ ಖಾನ್ ಪ್ರೊಡಕ್ಷನ್ಸ್ ಇನ್‍ಸ್ಟಾಗ್ರಾಮ್ ನಲ್ಲಿ, ಅಕ್ಟೋಬರ್ 22 ರಿಂದ ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಆಡಳಿತವು ಅವಕಾಶ ನೀಡಿದೆ. ಈ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ನಮ್ಮ ಸಿನಿಮಾ ರಿಲೀಸ್ ಮಾಡಲು ವಿಳಂಬವಾಗಿದೆ. ನಮ್ಮ ‘ಲಾಲ್ ಸಿಂಗ್ ಚಡ್ಡಾ’ ಈ ಕ್ರಿಸ್‍ಮಸ್‍ನಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. 2022ರ ಫೆ.14 ರಂದು ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಬರೆದು ಪೋಸ್ಟ್ ಮಾಡಿದೆ. ಇದನ್ನೂ ಓದಿ: ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

    ಅಮೀರ್ ಖಾನ್ ಪ್ರೊಡಕ್ಷನ್ಸ್ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ರಣವೀರ್ ಸಿಂಗ್ ಇನ್‍ಸ್ಟಾಗ್ರಾಮ್ ನಲ್ಲಿ, ’83’ ಸಿನಿಮಾ ಈ ಕ್ರಿಸ್‍ಮಸ್‍ನಲ್ಲಿ ಚಿತ್ರಮಂದಿರಕ್ಕೆ ಬರಲಿದೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಇವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

    ರಣವೀರ್ ನಟನೆಯ ’83’ ಸಿನಿಮಾ ಈ ಜೂನ್‍ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ತಡವಾಗಿತ್ತು. ಅದು ಅಲ್ಲದೇ ದೊಡ್ಡ ಬಾಲಿವುಡ್ ಎಷ್ಟೋ ಸಿನಿಮಾಗಳು ಓಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿ ಬಿಡುಗಡೆಯಾಯಿತು. ಅದರಲ್ಲಿ ’83’ ಸಿನಿಮಾ ಸಹ ಒಂದಾಗಬೇಕಿತ್ತು. ಆದರೆ ಚಿತ್ರತಂಡ ಲಾಕ್‍ಡೌನ್ ನಂತರ ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡುವುದಾಗಿ ತಯಾರಕರು ಅಧಿಕೃತವಾಗಿ ಘೋಷಿಸಿದ್ದರು. ಇಂದು ಆ ಮಾತಿನಂತೆ ಬಿಡುಗಡೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಹೆಬ್ಬುಲಿ ಬೆಡಗಿ

     

    View this post on Instagram

     

    A post shared by Ranveer Singh (@ranveersingh)

    ’83’ ಸಿನಿಮಾಗೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳುತ್ತಿದ್ದು, ಕ್ರಿಕೆಟರ್ ಕಪಿಲ್ ದೇವ್ ದಂತ ಕಥೆಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದು, ಇದು 1983 ರ ಭಾರತದ ಐತಿಹಾಸಿಕ ವಿಶ್ವಕಪ್ ಗೆಲುವಿನ ಕಥೆಯನ್ನು ಆಧರಿಸಿದೆ. ಕಪಿಲ್ ದೇವ್ ಅವರ ಪತ್ನಿ ರೋಮಿ ಪಾತ್ರದಲ್ಲಿ ರಣವೀರ್ ಪತ್ನಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ.

  • ರಣ್‍ವೀರ್ ಸಿಂಗ್‍ ಗೆ ಕ್ರಿಕೆಟ್ ಹೇಳಿಕೊಡಲಿದ್ದಾರೆ ಕಪಿಲ್ ದೇವ್!

    ರಣ್‍ವೀರ್ ಸಿಂಗ್‍ ಗೆ ಕ್ರಿಕೆಟ್ ಹೇಳಿಕೊಡಲಿದ್ದಾರೆ ಕಪಿಲ್ ದೇವ್!

    ಮುಂಬೈ: ರಣ್‍ವೀರ್ ಸಿಂಗ್ ಅವರಿಗೆ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಕ್ರಿಕೆಟ್ ಪಾಠವನ್ನು ಹೇಳಿಕೊಡಲಿದ್ದಾರೆ.

    ಕಬೀರ್ ಖಾನ್ ’83’ ಚಿತ್ರವನ್ನು ಮುಂದೆ ನಿರ್ದೇಶನ ಮಾಡಲಿದ್ದು, ಚಿತ್ರಕ್ಕೆ ರಣ್‍ವೀರ್ ಸಿಂಗ್ ರನ್ನು ಆಯ್ಕೆ ಮಾಡಿದ್ದಾರೆ. ಚಿತ್ರಕ್ಕಾಗಿ ರಣ್‍ವೀರ್ ಕ್ರಿಕೆಟ್ ಕಲಿಯುತಿದ್ದು, ಸ್ವತಃ ಕಪಿಲ್ ದೇವ್ ಅವರಿಗೆ ತರಬೇತಿ ನೀಡಲಿದ್ದಾರೆ.

    ಈ ಚಿತ್ರಕ್ಕಾಗಿ ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಆರಂಭದಲ್ಲಿ ಲಂಡನ್ ನಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಮುಂದಾಗಿದ್ದು, ಮೊದಲ ಶೆಡ್ಯೂಲ್ ನಲ್ಲೇ ಮುಗಿಸಲು ಸಿದ್ಧತೆ ನಡೆಸಲಾಗಿದೆ.

    ಕಪಿಲ್ ದೇವ್ ಪಾತ್ರವನ್ನು ರಣ್‍ವೀರ್ ಸಿಂಗ್ ನಿರ್ವಹಿಸಲಿದ್ದರೆ, ವಿಶ್ವಕಪ್ ಗೆಲುವಿನಲ್ಲಿ ಭಾಗಿಯಾಗಿರುವ ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್ ಹಾಗೂ ರವಿ ಶಾಸ್ತ್ರಿ ಅವರ ಪಾತ್ರಕ್ಕಾಗಿ ಚಿತ್ರತಂಡ ಕಲಾವಿದರ ಹುಡುಕಾಟ ನಡೆಸುತ್ತಿದೆ.

    ಈಗಿನ ಯುವಕರು ಕ್ರಿಕೆಟನ್ನು ಗ್ಲಾಮರಸ್ ಗೇಮ್ ಎಂದುಕೊಂಡಿದ್ದಾರೆ. ಆದರೆ ನಾವು ಅಂದುಕೊಂಡ ರೀತಿಯಲ್ಲಿ ಅದು ಇಲ್ಲ. ಕಬಿರ್ ಅವರು ನನಗೆ ಕಥೆ ಹೇಳಿದ್ದಾಗ ನಾನು ಶಾಕ್ ಆಗಿದ್ದೆ. ಬಹಳ ಕಷ್ಟಪಟ್ಟು ಕಪಿಲ್ ಅವರು ಈ ಗೆಲುವನ್ನು ಸಾಧಿಸಿದ್ದಾರೆ. ಈ ಚಿತ್ರ ಬರಿ ಕ್ರಿಕೆಟ್ ಬಗ್ಗೆ ಅಲ್ಲದೇ ಮಾನವೀಯ ಕಥೆ ಕೂಡ ಆಗಿದೆ ಎಂದು ರಣ್‍ವೀರ್ ಸಿಂಗ್ ತಿಳಿಸಿದ್ದಾರೆ.