Tag: 79ನೇ ಸ್ವಾತಂತ್ರ್ಯ ದಿನಾಚರಣೆ

  • Photo Gallery | ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ – ʻಆಪರೇಷನ್ ಸಿಂಧೂರʼ ಪ್ರತಿಬಿಂಬ

    Photo Gallery | ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ – ʻಆಪರೇಷನ್ ಸಿಂಧೂರʼ ಪ್ರತಿಬಿಂಬ

    ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಇದರೊಂದಿಗೆ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಸತತ 12ನೇ ಭಾಷಣ ಮಾಡಿದರು. ‘ನಯಾ ಭಾರತ್​’ (ನವ ಭಾರತ) ಘೋಷವಾಕ್ಯದೊಂದಿಗೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಪ್ರಧಾನಿ ಮೋದಿಯವರನ್ನ ಸರ್ಕಾರಿ ಮತ್ತು ಸೇನಾಧಿಕಾರಿಗಳು ಬರಮಾಡಿಕೊಳ್ಳುವ ಮೂಲಕ ಸಮಾರಂಭ ಶುರುವಾಯಿತು. ಬಳಿಕ ಸೇನಾ ಗೌರವ ವಂದನೆ ಸ್ವೀಕಾರ ನಡೆಯಿತು. ಅಲ್ಲದೇ ಪಾಕ್‌ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಸಲುವಾಗಿ ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆಯನ್ನ ಇಲ್ಲಿ ಸ್ಮರಿಸಲಾಯಿತು. ಈ ಸಂಭ್ರಮದ ಕ್ಷಣ ಫೋಟೋದಲ್ಲಿ ಸೆರೆಯಾಗಿರುವುದನ್ನು ನೀವು ಕಾಣಬಹುದು.

  • 12 ಸ್ವಾತಂತ್ರ್ಯ ಸಂಭ್ರಮಗಳಲ್ಲಿ ಭಾಗಿ; 2014-2025ರ ವರೆಗೆ ಮೋದಿ ಪೇಟ, ವಿಭಿನ್ನ ಲುಕ್‌ ನೋಡಿ..

    12 ಸ್ವಾತಂತ್ರ್ಯ ಸಂಭ್ರಮಗಳಲ್ಲಿ ಭಾಗಿ; 2014-2025ರ ವರೆಗೆ ಮೋದಿ ಪೇಟ, ವಿಭಿನ್ನ ಲುಕ್‌ ನೋಡಿ..

    – ಪ್ರಧಾನಿ ಪೇಟಗಳ ವಿಶೇಷತೆ ಏನು?

    ನವದೆಹಲಿ: ಕೆಂಪು ಕೋಟೆಯಲ್ಲಿ ಸತತ 12 ಬಾರಿ ಸ್ವಾತಂತ್ರ್ಯೋತ್ಸವದಲ್ಲಿ ಭಾಷಣ ಮಾಡಿ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ (PM Modi) ಉಡುಗೆ-ತೊಡುಗೆ ವಿಚಾರಕ್ಕೂ ಸುದ್ದಿಯಲ್ಲಿದ್ದಾರೆ. ಪ್ರತಿ ವರ್ಷ ಅವರು ತೊಡುತ್ತಿದ್ದ ಉಡುಪು, ಧರಿಸುತ್ತಿದ್ದ ಪೇಟ ಗಮನ ಸೆಳೆದಿದೆ. ಪೇಟದ ಬಣ್ಣ ಮತ್ತು ಅದನ್ನು ಕಟ್ಟುವ ಶೈಲಿ ಅತ್ಯಂತ ಆಕರ್ಷಕ. 2014ರಿಂದ 2025 ರ ವರೆಗೆ ಪ್ರಧಾನಿ ಮೋದಿ ಅವರ ಉಡುಗೆ-ತೊಡುಗೆ ಶೈಲಿ ಬದಲಾಗುತ್ತಿದೆ. 12 ಬಾರಿಯೂ ಬಗೆ ಬಗೆಯ ಆಕರ್ಷಕ ಪೇಟಗಳನ್ನು ಧರಿಸಿದ್ದಾರೆ. ಆ ಪೇಟಗಳು ಯಾವುವು? ವಿಶೇಷತೆ ಏನು? ಎಂಬುದರ ವಿವರ ಇಲ್ಲಿದೆ.

    2014: ಈ ವರ್ಷದ ಸ್ವಾತಂತ್ರ್ಯ ದಿನದಂದು ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದರು. ಆಗ ಬಿಳಿ ಖಾದಿ ಅರ್ಧ ತೋಳಿನ ಕುರ್ತಾ ಮತ್ತು ಚೂಡಿದಾರ್ ಪೈಜಾಮ ಧರಿಸಿದ್ದರು. ಇದರ ಜೊತೆಗೆ, ಕೇಸರಿ ಬಣ್ಣದ ಜೋಧಪುರಿ ಬಂದೇಜ್ ಪೇಟವನ್ನು ಧರಿಸಿದ್ದರು.

    2015: ಪ್ರಧಾನಿ ಮೋದಿ ಕ್ರೀಮ್ ಬಣ್ಣದ ಕುರ್ತಾ, ಬಿಳಿ ಚೂಡಿದಾರ್ ಪೈಜಾಮಾ ಮತ್ತು ಖಾದಿ ಜಾಕೆಟ್ ಧರಿಸಿದ್ದರು. ಕೆಂಪು ಮತ್ತು ಹಸಿರು ಪಟ್ಟೆಗಳನ್ನು ಹೊಂದಿದ್ದ ಕಿತ್ತಳೆ ಬಣ್ಣದ ಬಂಧಾನಿ ಪೇಟವನ್ನು ಧರಿಸಿದ್ದರು.

    2016: ಕೆಂಪು, ಗುಲಾಬಿ ಮತ್ತು ಹಳದಿ ರಾಜಸ್ಥಾನಿ ಪೇಟವನ್ನು ಸರಳ ಕುರ್ತಾ ಮತ್ತು ಚೂಡಿದಾರ್ ಪೈಜಾಮಾದೊಂದಿಗೆ ಮೋದಿ ಧರಿಸಿದ್ದು ವಿಶೇಷವಾಗಿತ್ತು.

    2017: ಪ್ರಧಾನಿ ಮೋದಿ ತಮ್ಮ ಟ್ರೇಡ್‌ಮಾರ್ಕ್ ಅರ್ಧ ತೋಳಿನ ಕುರ್ತಾ ಧರಿಸಿದ್ದರು. ಪ್ರಕಾಶಮಾನವಾದ ಕೆಂಪು ಮತ್ತು ಹಳದಿ ಬಣ್ಣದ ಪೇಟವನ್ನು ಧರಿಸಿದ್ದರು. ಪೇಟದ ಹಿಂಭಾಗದಲ್ಲಿ ಉದ್ದವಾದ ಬಟ್ಟೆಯ ಜೋಡಣೆ ಇತ್ತು.

    2018: ಪೂರ್ಣ ತೋಳಿನ ಕುರ್ತಾ-ಪೈಜಾಮ ಮತ್ತು ಉಪರ್ಣ ಧರಿಸಿದ್ದರು. ಗಾಢವಾದ ಕೇಸರಿ ಮತ್ತು ಕೆಂಪು ಪೇಟವನ್ನು ಮೋದಿ ಧರಿಸಿದ್ದು ಗಮನ ಸೆಳೆದಿತ್ತು.

    2019: ಅರ್ಧ ತೋಳಿನ ಕುರ್ತಾ, ಪೈಜಾಮಾ ಮತ್ತು ಕೇಸರಿ ಬಣ್ಣದ ಅಂಚುಳ್ಳ ಮೇಲ್ಭಾಗದಲ್ಲಿ ಹಳದಿ, ಕೆಂಪು ಮತ್ತು ಹಸಿರು ಬಣ್ಣದ ಲಹರಿಯಾ ಮಾದರಿಯ ಪೇಟವನ್ನು ಪ್ರಧಾನಿ ಧರಿಸಿದ್ದರು.

    2020: ಕೇಸರಿ ಮತ್ತು ಕ್ರೀಮ್ ಬಣ್ಣದ ಪೇಟವನ್ನು ಪ್ರಧಾನಿ ಧರಿಸಿದ್ದರು. ಅದು ಅರ್ಧ ತೋಳಿನ ಕುರ್ತಾಗೆ ಮ್ಯಾಚ್‌ ಆಗಿತ್ತು. ಕೇಸರಿ ಬಾರ್ಡರ್‌ ಇದ್ದ ಬಿಳಿ ದುಪಟ್ಟಾವನ್ನು ಮೋದಿ ಧರಿಸಿದ್ದರು.

    2021: 75ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಸಾಂಪ್ರದಾಯಿಕ ಕುರ್ತಾ-ಚೂಡಿದಾರ್, ನೀಲಿ ಜಾಕೆಟ್ ಧರಿಸಿ ಕೇಸರಿ ಪೇಟದೊಂದಿಗೆ ಸ್ಟೋಲ್ ಧರಿಸಿ ಆಕರ್ಷಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.

    2022: 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ‘ಹರ್ ಘರ್ ತಿರಂಗಾ’ ಅಭಿಯಾನದ ಉತ್ಸಾಹವನ್ನು ಪ್ರತಿಬಿಂಬಿಸುವ ತ್ರಿವರ್ಣ ಧ್ವಜದ ಆಕಾರದ ಬಿಳಿ ಪೇಟವನ್ನು ಧರಿಸಿದ್ದರು. ಈ ಪೇಟವನ್ನು ಬಿಳಿ ಕುರ್ತಾ ಮತ್ತು ನೀಲಿ ಜಾಕೆಟ್‌ನೊಂದಿಗೆ ಜೋಡಿಸಲಾಗಿತ್ತು.

    2023: ಹಳದಿ ಮತ್ತು ಕೆಂಪು ಬಣ್ಣದ ಸಫಾ ಧರಿಸಿದ್ದರು, ಅದರಲ್ಲಿ ಹಲವು ಬಣ್ಣಗಳ ಪಟ್ಟೆಗಳಿದ್ದವು. ಇದರ ಜೊತೆಗೆ ಮೋದಿ ಬಿಳಿ ಕುರ್ತಾ ಮತ್ತು ಕಪ್ಪು ಜಾಕೆಟ್ ಧರಿಸಿದ್ದರು.

    2024: 78ನೇ ವಾರ್ಷಿಕೋತ್ಸವದಂದು ಪ್ರಧಾನಿ ಮೋದಿ ಅವರು ಬಿಳಿ ಕುರ್ತಾ-ಪೈಜಾಮ ಮತ್ತು ನೀಲಿ ಸದ್ರಿ ಜೊತೆಗೆ ಕೇಸರಿ, ಹಸಿರು ಮತ್ತು ಹಳದಿ ಪೇಟವನ್ನು ಧರಿಸಿದ್ದರು.

    2025: ಈ ಬಾರಿ ಪ್ರಧಾನಿ ಮೋದಿಯವರ ಲುಕ್ ತುಂಬಾ ವಿಶಿಷ್ಟವಾಗಿದೆ. ವಿಶೇಷವಾಗಿ ಪೇಟ ಕಟ್ಟುವ ಶೈಲಿ ಅದ್ಭುತವಾಗಿದೆ. ಈ ಸಲ ಪ್ರಧಾನಿ ಮೋದಿಯವರ ಪೇಟ ಕೇಸರಿ ಬಣ್ಣದ್ದಾಗಿತ್ತು. ಇದರ ಜೊತೆಗೆ, ಅವರು ಕಿತ್ತಳೆ ಬಣ್ಣದ ನೆಹರೂ ಜಾಕೆಟ್ ಮತ್ತು ಬಿಳಿ ಕುರ್ತಾ ಧರಿಸಿದ್ದರು. ಅದರೊಂದಿಗೆ ಟವಲ್ ಕೂಡ ಹಾಕಿದ್ದರು.

  • ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗಲ್ಲ: ಪಾಕ್‌ಗೆ ಪ್ರಧಾನಿ ಮೋದಿ ತಿರುಗೇಟು

    ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗಲ್ಲ: ಪಾಕ್‌ಗೆ ಪ್ರಧಾನಿ ಮೋದಿ ತಿರುಗೇಟು

    – ಭಯೋತ್ಪಾದನೆ & ಅದರ ಪೋಷಕರನ್ನು ಪ್ರತ್ಯೇಕವಾಗಿ ನೋಡಲ್ಲ ಎಂದ ಪ್ರಧಾನಿ
    – ಆಪರೇಷನ್‌‌ ಸಿಂಧೂರ ಸ್ಮರಣೆ, ನಯಾ ಭಾರತ ಬಗ್ಗೆ ಮೋದಿ ಮಾತು

    ನವದೆಹಲಿ: ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗಲ್ಲ ಎಂದು ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ತಿರುಗೇಟು ನೀಡಿದ್ದಾರೆ.

    79ನೇ ಸ್ವಾತಂತ್ರ್ಯೋತ್ಸವ (Independence Day 2025) ಹಿನ್ನೆಲೆ ಕೆಂಪು ಕೋಟೆಯಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ, ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಧರ್ಮ ಕೇಳಿ ಹತ್ಯೆ ಮಾಡಲಾಯಿತು. ಪತ್ನಿ ಎದುರು ಪತಿಯನ್ನು, ಮಗನ ಮುಂದೆ ತಂದೆಯನ್ನು ಹತ್ಯೆ ಮಾಡಲಾಯಿತು. ಇಡೀ ದೇಶದಲ್ಲಿ ಆಕ್ರೋಶ ಮಡುಗಟ್ಟಿತ್ತು. ಆಪರೇಷನ್ ಸಿಂಧೂರ ಈ ಆಕ್ರೋಶದ ಪ್ರತಿಬಿಂಬವಾಗಿತ್ತು. ನಾವು ನಮ್ಮ ಸೇನೆಗೆ ಪೂರ್ಣ ಸ್ವಾತಂತ್ರ‍್ಯ ನೀಡಿದೆವು. ದಾಳಿ, ಸಮಯ, ಗುರಿ ಎಲ್ಲವನ್ನು ನಿರ್ಧರಿಸಲು ಸ್ವಾತಂತ್ರ‍್ಯ ನೀಡಲಾಯಿತು. ಸೇನೆ ಹಿಂದೆ ಮಾಡದ ಸಾಹಸವನ್ನು ಮೊದಲ ಬಾರಿಗೆ ಮಾಡಿತು. ಪಾಕಿಸ್ತಾನದ ಒಳಗೆ ನುಗ್ಗಿ ದಾಳಿ ಮಾಡಿತು. ಪಾಕಿಸ್ತಾನದ ಆದ ನಷ್ಟ ಎಷ್ಟಿದೆ ಅಂದರೆ ನಿತ್ಯ ಹೊಸ ಮಾಹಿತಿ ಬರ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 79th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

    ನಮ್ಮ ದೇಶ ದಶಕಗಳಿಂದ ಭಯೋತ್ಪಾದನೆಯನ್ನು ಸಹಿಸಿಕೊಂಡಿದೆ. ಈಗ ನಾವು ಹೊಸ ನಿರ್ಧಾರ ತೆಗೆದುಕೊಂಡಿದ್ದೇವೆ. ಭಯೋತ್ಪಾದನೆ ಮತ್ತು ಅದರ ಪೋಷಕರನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಅವರು ಮಾನವತವಾದದ ವಿರುದ್ಧ ವ್ಯಕ್ತಿಗಳು. ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗುವುದಿಲ್ಲ. ಇಂತಹ ಬೆದರಿಕೆ ಬಹಳ ವರ್ಷಗಳಿಂದ ನೋಡಿದ್ದೇವೆ. ಇದು ಮುಂದೆ ನಡೆಯುವುದಿಲ್ಲ. ಇಂತಹದೇ ಘಟನೆ ಮುಂದುವರಿದರೆ ಮತ್ತೆ ನಮ್ಮ ಸೇನೆ ಪ್ರತಿಕ್ರಿಯೆ ನಿರ್ಧಾರ ಮಾಡಲಿದೆ. ನಾವು ಸರಿಯಾದ ಪ್ರತಿಕ್ರಿಯೆ ನೀಡಲಿದ್ದೇವೆ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಸಿಂಧೂ ಜಲ ಒಪ್ಪಂದದಿಂದ ಭಾರತಕ್ಕೆ ಅನ್ಯಾಯವಾಗಿದೆ. ಭಾರತದಲ್ಲಿ ಹರಿಯುವ ನದಿ ನಮ್ಮ ಬಳಕೆಗೆ ಸಿಗುತ್ತಿಲ್ಲ. ನಮ್ಮ ಜನರು ನೀರಿದ್ದರೂ ಬಾಯಾರಿಕೊಂಡಿದ್ದಾರೆ. ಏಕಮುಖ ನ್ಯಾಯವನ್ನು ಈ ಒಪ್ಪಂದದಲ್ಲಿ ಮಾಡಿದೆ. ಭಾರತದ ನೀರಿನ ಮೇಲಿನ ಅಧಿಕಾರ ಭಾರತ ಮತ್ತು ನಮ್ಮ ರೈತರದ್ದು. ರೈತರ ಹಿತ, ರಾಷ್ಟ್ರದ ಹಿತದ ಕಾರಣ ಈ ಒಪ್ಪಂದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸ್ವಾತಂತ್ರ‍್ಯಕ್ಕಾಗಿ ಕೋಟ್ಯಂತರ ಜನರು ಯಾವುದೇ ಆಪೇಕ್ಷೆ ಇಲ್ಲದೇ ತಮ್ಮ ಜೀವನವನ್ನು ಬಲಿದಾನ ಮಾಡಿದರು. ಗುಲಾಮಿ ಸ್ಥಿತಿಯಿಂದ ಹೊರಬರಲು ಹೋರಾಟ ಮಾಡಿದರು. ಸ್ವಾತಂತ್ರ‍್ಯದ ಬಳಿಕ ಕೋಟ್ಯಂತರ ಜನರ ಹೊಟ್ಟೆ ತುಂಬಿಸುವುದು ಕಷ್ಟವಾಗಿತ್ತು. ನಮ್ಮ ರೈತರು ದೇಶದ ಜನರ ಹೊಟ್ಟೆ ತುಂಬಿಸಿದರು. ಆತ್ಮ ನಿರ್ಭರ್ ಘೋಷಣೆ ಕೇವಲ ಆರ್ಥಿಕತೆಗೆ ಸೀಮಿತವಾಗಿಲ್ಲ. ಆತ್ಮ ನಿರ್ಭರ್ ನಮ್ಮ ಸಾಮರ್ಥ್ಯದೊಂದಿಗೆ ಸಂಪರ್ಕಿಸಿದೆ. ಆತ್ಮ ನಿರ್ಭರ್ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 79ನೇ ಸ್ವಾತಂತ್ರ‍್ಯ ದಿನ – ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿರುವ ಮೋದಿ

    ಆಪರೇಷನ್ ಸಿಂಧೂರನಲ್ಲಿ ಭಾರತದ ಶಸ್ತ್ರಾಸ್ತ್ರಗಳು ಅದ್ಭುತವಾಗಿ ಕೆಲಸ ಮಾಡಿವೆ. ಶತ್ರು ದೇಶಗಳು ಇವು ಎಂತಹ ಶಸ್ತ್ರಾಸ್ತ್ರಗಳು ಅಂತ ಗೊಂದಲಕ್ಕೆ ಒಳಗಾದರು. ಯುದ್ಧದ ಸನ್ನಿವೇಶದಲ್ಲಿ ಶಸ್ತ್ರಾಸ್ತ್ರಗಳು ದೊರೆಯುವ ಗೊಂದಲ ಆತಂಕ ಇರುತ್ತದೆ. ಆದರೆ, ಭಾರತ ತನ್ನ ಶಸ್ತ್ರಾಸ್ತ್ರಗಳನ್ನು ತಾನೇ ಉತ್ಪಾದನೆ ಮಾಡುತ್ತಿದೆ ಎಂದು ಹೇಳಿದ್ದಾರೆ.