Tag: 78th cannes film festival 2025

  • ಕಾನ್ 2025: ನನಗೆ ಫಹಾದ್ ಫಾಸಿಲ್ ಆ್ಯಕ್ಟಿಂಗ್ ಇಷ್ಟ – ಆಲಿಯಾ ಭಟ್ ಗುಣಗಾನ

    ಕಾನ್ 2025: ನನಗೆ ಫಹಾದ್ ಫಾಸಿಲ್ ಆ್ಯಕ್ಟಿಂಗ್ ಇಷ್ಟ – ಆಲಿಯಾ ಭಟ್ ಗುಣಗಾನ

    ಬಾಲಿವುಡ್ ಬೆಡಗಿ ಆಲಿಯಾ ಭಟ್ (Alia Bhatt) ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival 2025) ದಕ್ಷಿಣದ ನಟನ ಬಗ್ಗೆ ನೀಡಿರುವ ಹೇಳಿಕೆವೊಂದು ವೈರಲ್ ಆಗಿದೆ. ಫಹಾದ್ ಫಾಸಿಲ್ ಅದ್ಭುತ ನಟ ಎಂದು ಕಾನ್ ಚಲನಚಿತ್ರೋತ್ಸವದ ಸಂದರ್ಶನವೊಂದರಲ್ಲಿ ನಟಿ ಕೊಂಡಾಡಿದ್ದಾರೆ. ಇದನ್ನೂ ಓದಿ:ಫ್ಯಾಮಿಲಿ ಜೊತೆ ಅಮೂಲ್ಯ ಕ್ಯೂಟ್ ಫೋಟೋಶೂಟ್

    ಈ ಕಾರ್ಯಕ್ರಮದಲ್ಲಿ ಕೆರಿಯರ್, ಫ್ಯಾಮಿಲಿಗೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಆಲಿಯಾಗೆ ಕೇಳಲಾಗಿದೆ. ಆಗ ನೆಚ್ಚಿನ ನಟ ಯಾರು ಎಂದು ಎದುರಾದ ಪ್ರಶ್ನೆಗೆ ಥಟ್ ಅಂತ ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಹೆಸರನ್ನು ನಟಿ ಹೇಳಿದ್ದಾರೆ. ನನಗೆ ಫಹಾದ್ ಅವರ ಆ್ಯಕ್ಟಿಂಗ್ ಇಷ್ಟ. ಅವರು ನಟಿಸಿರುವ ‘ಆವೇಶಂ’ ಚಿತ್ರ ನನ್ನ ನೆಚ್ಚಿನ ಸಿನಿಮಾಗಳಲ್ಲಿ ಒಂದು. ಅವರು ಅದ್ಭುತ ನಟ, ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್

    ಅದಷ್ಟೇ ಅಲ್ಲ, ಮಲಯಾಳಂ ಸಿನಿಮಾಗಳ ಬಗ್ಗೆ ಆಲಿಯಾ ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ‘ಡಾರ್ಲಿಂಗ್ಸ್’ ಎಂಬ ಸಿನಿಮಾದಲ್ಲಿ ಮಲಯಾಳಂ ನಟ ರೋಷನ್ ಮ್ಯಾಥ್ಯು ಅವರೊಂದಿಗೆ ನಟಿಸಿದ್ದೆ. ಅವರು ಅದ್ಭುತ ಪ್ರತಿಭೆ ಎಂದಿದ್ದಾರೆ. ನಟಿಯ ಮಾತು ಮಲಯಾಳಂ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ.

     

    View this post on Instagram

     

    A post shared by Alia Bhatt 💛 (@aliaabhatt)

    ಯಶ್ ರಾಜ್ ಫಿಲ್ಮ್ ನಿರ್ಮಾಣದ ‘ಆಲ್ಪಾ’ ಚಿತ್ರ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ & ವಾರ್’ ಸಿನಿಮಾದಲ್ಲೂ ಆಲಿಯಾ ನಟಿಸುತ್ತಿದ್ದಾರೆ.

  • ‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!

    ‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!

    ಬಾಲಿವುಡ್ ಬೆಡಗಿ ಐಶ್ವರ್ಯಾ ರೈ (Aishwarya Rai) ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (78th Cannes Film Festival) ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಹಣೆಗೆ ಸಿಂಧೂರವಿಟ್ಟು ಸೀರೆಯಲ್ಲಿ ಮಿಂಚಿದ್ದರು. ಬಳಿಕ ಭಗವದ್ಗೀತೆ ಶ್ಲೋಕವಿರುವ ಗೌನ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!

    ಕಾನ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಎರಡನೇ ದಿನ ರೆಡ್ ಕಾರ್ಪೆಟ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದಾರೆ. ವಿಶೇಷವಾಗಿ ನಟಿಯು ಧರಿಸಿರುವ ಉಡುಗೆಯಲ್ಲಿ ಭಗವದ್ಗೀತೆಯ ಶ್ಲೋಕ ಎಲ್ಲರ ಗಮನ ಸೆಳೆದಿದೆ. ಕಪ್ಪು ಗೌನ್ ಜೊತೆ ಧರಿಸಿದ ಶಾಲಿನ ಮೇಲೆ ಶ್ಲೋಕ ಬರೆಯಲಾಗಿದೆ. ಭಾರತೀಯ ಸಂಸ್ಕೃತಿಯನ್ನು ನಟಿ ಪ್ರತಿನಿಧಿಸಿರುವ ರೀತಿ ಕಂಡು ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಕಾನ್ 2025: ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

    ಮೊನ್ನೆ ಬಿಳಿ ಬಣ್ಣದ ಸೀರೆಯಲ್ಲಿ ನಟಿ ಕಂಗೊಳಿಸಿದ್ದರು. ಹಣೆಗೆ ಸಿಂಧೂರವಿಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಐಶ್ವರ್ಯಾ ರೈ ಮಿಂಚಿದ್ದರು. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವಾಗ ನಗುತ್ತಾ ಕೈ ಮುಗಿದು ನಟಿ ನಮಸ್ಕರಿಸಿದ್ದರು.

    78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು, 24ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಕುಡ್ಲದ ಬೆಡಗಿ ಐಶ್ವರ್ಯಾ ರೈ ಕೂಡ ಭಾಗಿಯಾಗಿದ್ದಾರೆ.

    ಐಶ್ವರ್ಯಾ ರೈ ಭಾಗಿಯಾಗ್ತಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ನಟಿ ಭಾಗಿಯಾಗಿದ್ದರು. ಮಗಳು ಆರಾಧ್ಯ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಅಮ್ಮನ ರೆಡ್ ಕಾರ್ಪೆಟ್‌ನಲ್ಲಿ ವಾಕ್ ನೋಡಿ ಖುಷಿಪಟ್ಟಿದ್ದರು.

    ಈ ಸಿನಿಮಾ ಹಬ್ಬದಲ್ಲಿ ಪ್ರಣಿತಾ ಸುಭಾಷ್, ಜಾನ್ವಿ ಕಪೂರ್, ಆದಿತಿ ರಾವ್ ಹೈದರಿ, ಕನ್ನಡದ ನಟಿ ದಿಶಾ ಮದನ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

    ಬಾಲಿವುಡ್ ಚಿತ್ರರಂಗದ ಸೌಂದರ್ಯದ ಗಣಿ ಐಶ್ವರ್ಯಾ ರೈ ಅವರು ಕಳೆದ ವರ್ಷ ತೆರೆಕಂಡ ‘ಪೊನ್ನಿಯನ್ ಸೆಲ್ವನ್ 2’ರಲ್ಲಿ ನಟಿಸಿದ್ದರು. ಇದನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿದ್ದರು.

  • ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!

    ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!

    ಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನ (78th Cannes Film Festival) ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ನಟಿಯ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಈ ಸಿನಿಮಾ ಹಬ್ಬದಲ್ಲಿ ಕನ್ನಡದ ನಟಿ ಪ್ರಣಿತಾ ಸುಭಾಷ್ ಕೂಡ ಭಾಗಿಯಾಗಿದ್ದಾರೆ. ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾನ್ ಚಲನಚಿತ್ರೋತ್ಸವದಲ್ಲಿ ಮೂರು ಬಗೆಯ ಡಿಫರೆಂಟ್ ಧಿರಿಸಿನಲ್ಲಿ ಮಿಂಚಿದ್ದಾರೆ. ಬೇಬಿ ಪಿಂಕ್ ಡ್ರೆಸ್, ರೆಡ್ ಕಲರ್ ಡ್ರೆಸ್ ಮತ್ತು ಸೀರೆಯಲ್ಲಿ ಅವರು ಕಂಗೊಳಿಸಿದ್ದಾರೆ.

    ಅದರಲ್ಲೂ ಕಾನ್‌ನಲ್ಲಿ ಪಿಂಕ್ ಡ್ರೆಸ್ ಜೊತೆ ನಟಿ ಧರಿಸಿದ್ದ ದುಬಾರಿ ವಾಚ್ ಎಲ್ಲರ ಗಮನ ಸಳೆದಿದೆ. ಆ ವಾಚ್ ಬೆಲೆ 75 ಸಾವಿರದಿಂದ 1 ಲಕ್ಷ ರೂ. ಎನ್ನಲಾಗಿದೆ. ಈ ವಾಚ್ ಬೆಲೆ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ. ಇದನ್ನೂ ಓದಿ:ಬಿಗ್ ಆಫರ್ ಗಿಟ್ಟಿಸಿಕೊಂಡ ಕನ್ನಡತಿ- ಪ್ರಭಾಸ್‌ಗೆ ರುಕ್ಮಿಣಿ ವಸಂತ್ ನಾಯಕಿ?

    ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಬಗ್ಗೆ ನಟಿ ಮಾತನಾಡಿ, ಕಾನ್ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಚಿಕ್ಕ ವಯಸ್ಸಿನಲ್ಲಿ ಕಾಣುತ್ತಿದ್ದ ಕನಸು ಈಗ ನನಸಾಗಿದೆ. ಆ ಮಟ್ಟಕ್ಕೆ ಭಾರತೀಯ ಸಿನಿಮಾಗಳು ಮನ್ನಣೆ ಗಳಿಸಿವೆ ಎಂದಿದ್ದಾರೆ. ಇದನ್ನೂ ಓದಿ:ಎಲ್ಲಾ ಸಂದರ್ಭಕ್ಕೂ ನಗುವೇ ಒಳ್ಳೆಯ ಉತ್ತರ – ದರ್ಶನ್ ಭೇಟಿ ಬಳಿಕ ಪವಿತ್ರಾ ಪೋಸ್ಟ್!

    78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು, 24ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ನಟಿ ಪ್ರಣಿತಾ ಕೂಡ ಭಾಗಿಯಾಗಿದ್ದಾರೆ.

     

    View this post on Instagram

     

    A post shared by Pranita Subhash (@pranitha.insta)

    ಈ ಸಿನಿಮಾ ಹಬ್ಬದಲ್ಲಿ ಐಶ್ವರ್ಯಾ ರೈ (Aishwarya Rai), ಜಾನ್ವಿ ಕಪೂರ್, ಆದಿತಿ ರಾವ್ ಹೈದರಿ, ಕನ್ನಡದ ನಟಿ ದಿಶಾ ಮದನ್ (Disha Madan) ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

  • ಕಾನ್ ಫೆಸ್ಟಿವಲ್| ರೆಡ್ ಕಾರ್ಪೆಟ್‌ನಲ್ಲಿ ಜಾನ್ವಿ ವಾಕ್ – ‘ನನ್ನ ದೇವತೆ’ ಎಂದ ಬಾಯ್‌ಫ್ರೆಂಡ್

    ಕಾನ್ ಫೆಸ್ಟಿವಲ್| ರೆಡ್ ಕಾರ್ಪೆಟ್‌ನಲ್ಲಿ ಜಾನ್ವಿ ವಾಕ್ – ‘ನನ್ನ ದೇವತೆ’ ಎಂದ ಬಾಯ್‌ಫ್ರೆಂಡ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival) ಮಿಂಚಿದ್ದಾರೆ. ಸೌಂದರ್ಯ ಗಣಿಯಂತೆ ಕಂಗೊಳಿಸಿದ ಜಾನ್ವಿ ಕಪೂರ್‌ಗೆ ಬಾಯ್‌ಫ್ರೆಂಡ್ ಶಿಖರ್ ಪಹರಿಯಾ (Shikhar Pahariya) ನನ್ನ ದೇವತೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಅಥಿಯಾ ಗುಡ್ ಬೈ – ಅಧಿಕೃತವಾಗಿ ತಿಳಿಸಿದ ತಂದೆ ಸುನೀಲ್ ಶೆಟ್ಟಿ

    78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಜಾನ್ವಿ ಕಪೂರ್ ಅವರು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ‘ದೇವರ’ ನಟಿ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ದೇವತೆ, ನೀವು ರಾತ್ರಿಯನ್ನು ಬೆಳಗಿಸುತ್ತೀರಿ ಎಂದು ಗೆಳೆಯ ಶಿಖರ್ ಕಾಮೆಂಟ್ ಮಾಡಿದ್ದಾರೆ. ಇದು ಅಭಿಮಾನಿಗಳ ಗಮನ ಸೆಳೆದಿದೆ.

    ಸಾಕಷ್ಟು ಸಮಯದಿಂದ ಶಿಖರ್ ಪಹರಿಯಾ ಜೊತೆ ಜಾನ್ವಿ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಆದರೆ ಇದುವರೆಗೂ ಈ ಬಗ್ಗೆ ನಟಿ ಅಧಿಕೃತವಾಗಿ ತಿಳಿಸಿಲ್ಲ. ಆದರೆ ಇತ್ತೀಚಿನ ಸಮಾರಂಭವೊಂದರಲ್ಲಿ ಜಾನ್ವಿ ‘ಶಿಖು’ ಎಂದು ಹೆಸರಿರುವ ಪೆಂಡೆಂಟ್ ಅನ್ನು ಧರಿಸಿದ್ದರು. ಹೀಗಾಗಿ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಇದನ್ನೂ ಓದಿ:100 ಮಿಲಿಯನ್ ಮಿನಿಟ್ ಸ್ಟ್ರೀಮಿಂಗ್ ಕಂಡ ಜಾಜಿಯ ರೋಚಕ ಕಥೆ- Zee5ನಲ್ಲಿ ‘ಅಯ್ಯನ ಮನೆ’ ರೆಕಾರ್ಡ್

    ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು, ಮೇ 24ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಖ್ಯಾತ ನಟಿ ಜಾನ್ವಿ ಕೂಡ ಭಾಗಿಯಾಗಿದ್ದಾರೆ.

    ಈ ಕಾರ್ಯಕ್ರಮಕ್ಕೆ ಕನ್ನಡತಿ ದಿಶಾ ಮದನ್, ಪ್ರಣಿತಾ ಸುಭಾಷ್, ಐಶ್ವರ್ಯಾ ರೈ, ರುಚಿ ಗುಜ್ಜರ್, ಆದಿತಿ ರಾವ್ ಹೈದರಿ, ಮೌನಿ ರಾಯ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

  • ಕಾನ್ 2025: ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

    ಕಾನ್ 2025: ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

    ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ (Aishwarya Rai) ಮಿಂಚಿದ್ದಾರೆ. ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿ ಹಬ್ಬಿಸುವರಿಗೆ ನಟಿ ತಕ್ಕ ಉತ್ತರ ನೀಡಿದ್ದಾರೆ. ಇದನ್ನೂ ಓದಿ:Exclusive: ಕಾಮಿಡಿ ಕಿಲಾಡಿ ಸ್ಟಾರ್‌, ನಟ ಮಡೆನೂರು ಮನು ವಿರುದ್ಧ ರೇಪ್‌ ಕೇಸ್‌

    78ನೇ ಕಾನ್ ಫಿಲ್ಮ್ ಫೆಸ್ಟಿವಲ್ (78th Cannes Film Festival) ಮೇ 13ರಿಂದ ಆರಂಭಗೊಂಡಿದ್ದು, 24ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಖ್ಯಾತ ನಟಿ ಐಶ್ವರ್ಯಾ ರೈ ಕೂಡ ಭಾಗಿಯಾಗಿದ್ದಾರೆ.

    ಬಿಳಿ ಬಣ್ಣದ ಸೀರೆಯಲ್ಲಿ ನಟಿ ಕಂಗೊಳಿಸಿದ್ದಾರೆ. ಹಣೆಗೆ ಸಿಂಧೂರವಿಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಐಶ್ವರ್ಯಾ ಮಿಂಚಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವಾಗ ನಗುತ್ತಾ ಕೈ ಮುಗಿದು ನಟಿ ನಮಸ್ಕರಿಸಿದ್ದಾರೆ. ಇದು ಅಭಿಮಾನಿಗಳ ಗಮನ ಸೆಳೆದಿದೆ. ಅಭಿಷೇಕ್ ಬಚ್ಚನ್ ಜೊತೆಗಿನ ನಟಿಯ ದಾಂಪತ್ಯ ಸರಿಯಿಲ್ಲ ಎಂದು ಗಾಸಿಪ್ ಹಬ್ಬಿಸುವವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.

    ಈ ಕಾರ್ಯಕ್ರಮಕ್ಕೆ ಕನ್ನಡತಿ ದಿಶಾ ಮದನ್, ಪ್ರಣಿತಾ ಸುಭಾಷ್, ಜಾನ್ವಿ ಕಪೂರ್, ರುಚಿ ಗುಜ್ಜರ್, ಆದಿತಿ ರಾವ್ ಹೈದರಿ, ಮೌನಿ ರಾಯ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ಯಶ್‌ಗಿಂತ ರಾಧಿಕಾ ಸಖತ್ ಕಿಲಾಡಿ: ಸೊಸೆ ಬಗ್ಗೆ ಮಾತಾಡಿದ ನಿರ್ಮಾಪಕಿ ಪುಷ್ಪ

    ಐಶ್ವರ್ಯಾ ರೈ ಭಾಗಿಯಾಗ್ತಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ನಟಿ ಭಾಗಿಯಾಗಿದ್ದರು. ಮಗಳು ಆರಾಧ್ಯ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಅಮ್ಮನ ರೆಡ್ ಕಾರ್ಪೆಟ್‌ನಲ್ಲಿ ವಾಕ್ ನೋಡಿ ಖುಷಿಪಟ್ಟಿದ್ದರು.

    ಬಾಲಿವುಡ್‌ ಚಿತ್ರರಂಗದ ಸೌಂದರ್ಯದ ಗಣಿ ಐಶ್ವರ್ಯಾ ರೈ ಅವರು ಕಳೆದ ವರ್ಷ ತೆರೆಕಂಡ ‘ಪೊನ್ನಿಯನ್‌ ಸೆಲ್ವನ್‌ 2’ರಲ್ಲಿ ನಟಿಸಿದ್ದರು. ಇದನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿದ್ದರು.