Tag: 78ನೇ ಕಾನ್‌ ಫಿಲ್ಮ್‌ ಫೆಸ್ಟಿವಲ್‌

  • ಕಾನ್ 2025: ನನಗೆ ಫಹಾದ್ ಫಾಸಿಲ್ ಆ್ಯಕ್ಟಿಂಗ್ ಇಷ್ಟ – ಆಲಿಯಾ ಭಟ್ ಗುಣಗಾನ

    ಕಾನ್ 2025: ನನಗೆ ಫಹಾದ್ ಫಾಸಿಲ್ ಆ್ಯಕ್ಟಿಂಗ್ ಇಷ್ಟ – ಆಲಿಯಾ ಭಟ್ ಗುಣಗಾನ

    ಬಾಲಿವುಡ್ ಬೆಡಗಿ ಆಲಿಯಾ ಭಟ್ (Alia Bhatt) ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival 2025) ದಕ್ಷಿಣದ ನಟನ ಬಗ್ಗೆ ನೀಡಿರುವ ಹೇಳಿಕೆವೊಂದು ವೈರಲ್ ಆಗಿದೆ. ಫಹಾದ್ ಫಾಸಿಲ್ ಅದ್ಭುತ ನಟ ಎಂದು ಕಾನ್ ಚಲನಚಿತ್ರೋತ್ಸವದ ಸಂದರ್ಶನವೊಂದರಲ್ಲಿ ನಟಿ ಕೊಂಡಾಡಿದ್ದಾರೆ. ಇದನ್ನೂ ಓದಿ:ಫ್ಯಾಮಿಲಿ ಜೊತೆ ಅಮೂಲ್ಯ ಕ್ಯೂಟ್ ಫೋಟೋಶೂಟ್

    ಈ ಕಾರ್ಯಕ್ರಮದಲ್ಲಿ ಕೆರಿಯರ್, ಫ್ಯಾಮಿಲಿಗೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಆಲಿಯಾಗೆ ಕೇಳಲಾಗಿದೆ. ಆಗ ನೆಚ್ಚಿನ ನಟ ಯಾರು ಎಂದು ಎದುರಾದ ಪ್ರಶ್ನೆಗೆ ಥಟ್ ಅಂತ ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಹೆಸರನ್ನು ನಟಿ ಹೇಳಿದ್ದಾರೆ. ನನಗೆ ಫಹಾದ್ ಅವರ ಆ್ಯಕ್ಟಿಂಗ್ ಇಷ್ಟ. ಅವರು ನಟಿಸಿರುವ ‘ಆವೇಶಂ’ ಚಿತ್ರ ನನ್ನ ನೆಚ್ಚಿನ ಸಿನಿಮಾಗಳಲ್ಲಿ ಒಂದು. ಅವರು ಅದ್ಭುತ ನಟ, ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್

    ಅದಷ್ಟೇ ಅಲ್ಲ, ಮಲಯಾಳಂ ಸಿನಿಮಾಗಳ ಬಗ್ಗೆ ಆಲಿಯಾ ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ‘ಡಾರ್ಲಿಂಗ್ಸ್’ ಎಂಬ ಸಿನಿಮಾದಲ್ಲಿ ಮಲಯಾಳಂ ನಟ ರೋಷನ್ ಮ್ಯಾಥ್ಯು ಅವರೊಂದಿಗೆ ನಟಿಸಿದ್ದೆ. ಅವರು ಅದ್ಭುತ ಪ್ರತಿಭೆ ಎಂದಿದ್ದಾರೆ. ನಟಿಯ ಮಾತು ಮಲಯಾಳಂ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ.

     

    View this post on Instagram

     

    A post shared by Alia Bhatt 💛 (@aliaabhatt)

    ಯಶ್ ರಾಜ್ ಫಿಲ್ಮ್ ನಿರ್ಮಾಣದ ‘ಆಲ್ಪಾ’ ಚಿತ್ರ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ & ವಾರ್’ ಸಿನಿಮಾದಲ್ಲೂ ಆಲಿಯಾ ನಟಿಸುತ್ತಿದ್ದಾರೆ.

  • ‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!

    ‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!

    ಬಾಲಿವುಡ್ ಬೆಡಗಿ ಐಶ್ವರ್ಯಾ ರೈ (Aishwarya Rai) ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (78th Cannes Film Festival) ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಹಣೆಗೆ ಸಿಂಧೂರವಿಟ್ಟು ಸೀರೆಯಲ್ಲಿ ಮಿಂಚಿದ್ದರು. ಬಳಿಕ ಭಗವದ್ಗೀತೆ ಶ್ಲೋಕವಿರುವ ಗೌನ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!

    ಕಾನ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಎರಡನೇ ದಿನ ರೆಡ್ ಕಾರ್ಪೆಟ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದಾರೆ. ವಿಶೇಷವಾಗಿ ನಟಿಯು ಧರಿಸಿರುವ ಉಡುಗೆಯಲ್ಲಿ ಭಗವದ್ಗೀತೆಯ ಶ್ಲೋಕ ಎಲ್ಲರ ಗಮನ ಸೆಳೆದಿದೆ. ಕಪ್ಪು ಗೌನ್ ಜೊತೆ ಧರಿಸಿದ ಶಾಲಿನ ಮೇಲೆ ಶ್ಲೋಕ ಬರೆಯಲಾಗಿದೆ. ಭಾರತೀಯ ಸಂಸ್ಕೃತಿಯನ್ನು ನಟಿ ಪ್ರತಿನಿಧಿಸಿರುವ ರೀತಿ ಕಂಡು ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಕಾನ್ 2025: ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

    ಮೊನ್ನೆ ಬಿಳಿ ಬಣ್ಣದ ಸೀರೆಯಲ್ಲಿ ನಟಿ ಕಂಗೊಳಿಸಿದ್ದರು. ಹಣೆಗೆ ಸಿಂಧೂರವಿಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಐಶ್ವರ್ಯಾ ರೈ ಮಿಂಚಿದ್ದರು. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವಾಗ ನಗುತ್ತಾ ಕೈ ಮುಗಿದು ನಟಿ ನಮಸ್ಕರಿಸಿದ್ದರು.

    78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು, 24ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಕುಡ್ಲದ ಬೆಡಗಿ ಐಶ್ವರ್ಯಾ ರೈ ಕೂಡ ಭಾಗಿಯಾಗಿದ್ದಾರೆ.

    ಐಶ್ವರ್ಯಾ ರೈ ಭಾಗಿಯಾಗ್ತಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ನಟಿ ಭಾಗಿಯಾಗಿದ್ದರು. ಮಗಳು ಆರಾಧ್ಯ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಅಮ್ಮನ ರೆಡ್ ಕಾರ್ಪೆಟ್‌ನಲ್ಲಿ ವಾಕ್ ನೋಡಿ ಖುಷಿಪಟ್ಟಿದ್ದರು.

    ಈ ಸಿನಿಮಾ ಹಬ್ಬದಲ್ಲಿ ಪ್ರಣಿತಾ ಸುಭಾಷ್, ಜಾನ್ವಿ ಕಪೂರ್, ಆದಿತಿ ರಾವ್ ಹೈದರಿ, ಕನ್ನಡದ ನಟಿ ದಿಶಾ ಮದನ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

    ಬಾಲಿವುಡ್ ಚಿತ್ರರಂಗದ ಸೌಂದರ್ಯದ ಗಣಿ ಐಶ್ವರ್ಯಾ ರೈ ಅವರು ಕಳೆದ ವರ್ಷ ತೆರೆಕಂಡ ‘ಪೊನ್ನಿಯನ್ ಸೆಲ್ವನ್ 2’ರಲ್ಲಿ ನಟಿಸಿದ್ದರು. ಇದನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿದ್ದರು.

  • ಕಾನ್ 2025: ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

    ಕಾನ್ 2025: ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

    ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ (Aishwarya Rai) ಮಿಂಚಿದ್ದಾರೆ. ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿ ಹಬ್ಬಿಸುವರಿಗೆ ನಟಿ ತಕ್ಕ ಉತ್ತರ ನೀಡಿದ್ದಾರೆ. ಇದನ್ನೂ ಓದಿ:Exclusive: ಕಾಮಿಡಿ ಕಿಲಾಡಿ ಸ್ಟಾರ್‌, ನಟ ಮಡೆನೂರು ಮನು ವಿರುದ್ಧ ರೇಪ್‌ ಕೇಸ್‌

    78ನೇ ಕಾನ್ ಫಿಲ್ಮ್ ಫೆಸ್ಟಿವಲ್ (78th Cannes Film Festival) ಮೇ 13ರಿಂದ ಆರಂಭಗೊಂಡಿದ್ದು, 24ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಖ್ಯಾತ ನಟಿ ಐಶ್ವರ್ಯಾ ರೈ ಕೂಡ ಭಾಗಿಯಾಗಿದ್ದಾರೆ.

    ಬಿಳಿ ಬಣ್ಣದ ಸೀರೆಯಲ್ಲಿ ನಟಿ ಕಂಗೊಳಿಸಿದ್ದಾರೆ. ಹಣೆಗೆ ಸಿಂಧೂರವಿಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಐಶ್ವರ್ಯಾ ಮಿಂಚಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವಾಗ ನಗುತ್ತಾ ಕೈ ಮುಗಿದು ನಟಿ ನಮಸ್ಕರಿಸಿದ್ದಾರೆ. ಇದು ಅಭಿಮಾನಿಗಳ ಗಮನ ಸೆಳೆದಿದೆ. ಅಭಿಷೇಕ್ ಬಚ್ಚನ್ ಜೊತೆಗಿನ ನಟಿಯ ದಾಂಪತ್ಯ ಸರಿಯಿಲ್ಲ ಎಂದು ಗಾಸಿಪ್ ಹಬ್ಬಿಸುವವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.

    ಈ ಕಾರ್ಯಕ್ರಮಕ್ಕೆ ಕನ್ನಡತಿ ದಿಶಾ ಮದನ್, ಪ್ರಣಿತಾ ಸುಭಾಷ್, ಜಾನ್ವಿ ಕಪೂರ್, ರುಚಿ ಗುಜ್ಜರ್, ಆದಿತಿ ರಾವ್ ಹೈದರಿ, ಮೌನಿ ರಾಯ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ಯಶ್‌ಗಿಂತ ರಾಧಿಕಾ ಸಖತ್ ಕಿಲಾಡಿ: ಸೊಸೆ ಬಗ್ಗೆ ಮಾತಾಡಿದ ನಿರ್ಮಾಪಕಿ ಪುಷ್ಪ

    ಐಶ್ವರ್ಯಾ ರೈ ಭಾಗಿಯಾಗ್ತಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ನಟಿ ಭಾಗಿಯಾಗಿದ್ದರು. ಮಗಳು ಆರಾಧ್ಯ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಅಮ್ಮನ ರೆಡ್ ಕಾರ್ಪೆಟ್‌ನಲ್ಲಿ ವಾಕ್ ನೋಡಿ ಖುಷಿಪಟ್ಟಿದ್ದರು.

    ಬಾಲಿವುಡ್‌ ಚಿತ್ರರಂಗದ ಸೌಂದರ್ಯದ ಗಣಿ ಐಶ್ವರ್ಯಾ ರೈ ಅವರು ಕಳೆದ ವರ್ಷ ತೆರೆಕಂಡ ‘ಪೊನ್ನಿಯನ್‌ ಸೆಲ್ವನ್‌ 2’ರಲ್ಲಿ ನಟಿಸಿದ್ದರು. ಇದನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿದ್ದರು.