Tag: 74th republic day

  • ಗಣರಾಜ್ಯೋತ್ಸವದಲ್ಲಿ ಗ್ರೂಪ್ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಸಾವು

    ಗಣರಾಜ್ಯೋತ್ಸವದಲ್ಲಿ ಗ್ರೂಪ್ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಸಾವು

    ರಾಯಚೂರು: ಗಣರಾಜ್ಯೋತ್ಸವ (Republic Day) ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗ್ರೂಪ್‌ ಡ್ಯಾನ್‌ ಮಾಡುವಾಗ ಕುಸಿದು ಬಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಸಾವಿಗೀಡಾಗಿರುವ ಘಟನೆ ರಾಯಚೂರು (Raichuru) ಜಿಲ್ಲೆಯಲ್ಲಿ ನಡೆದಿದೆ.

    42 ವರ್ಷ ವಯಸ್ಸಿನ ಮಹಾಂತೇಶ್ ಪೂಜಾರಿ ಮೃತ ವ್ಯಕ್ತಿ. ಜಿಲ್ಲೆಯ ಸಿಂಧನೂರು ತಾಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಆಯೋಜಿಸಲಾಗಿತ್ತು. ಈ ಹಿನ್ನೆಲೆ ಸಿಂಧನೂರು ತಾಲೂಕು ಆಸ್ಪತ್ರೆ ಸಿಬ್ಬಂದಿಯಿಂದ ನೃತ್ಯ ಪ್ರದರ್ಶನವಿತ್ತು. ಇದನ್ನೂ ಓದಿ: 74th Republic Day: ದೆಹಲಿಯ ಕರ್ತವ್ಯ ಪಥ್‌ನಲ್ಲಿ‌ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪರೇಡ್‌

    ಸಾಂದರ್ಭಿಕ ಚಿತ್ರ

    ಗ್ರೂಪ್‌ ಡ್ಯಾನ್ಸ್‌ ಮಾಡುವ ವೇಳೆ ದಿದ್ದಿಗಿ ಗ್ರಾಮದ ನಿವಾಸಿ ಮಹಾಂತೇಶ್‌ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

    ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಎಆರ್‌ಟಿ ಅಧಿಕಾರಿಯಾಗಿದ್ದ ಮಹಾಂತೇಶ್, ಮ್ಯಾಸಿವ್ ಹಾರ್ಟ್ ಅಟ್ಯಾಕ್ ಹಿನ್ನೆಲೆ ಮೃತಪಟ್ಟಿದ್ದಾರೆ. ಮಹಾಂತೇಶ್‌ ಅವರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಪ್ರಪ್ರಥಮ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 74th Republic Day: ದೆಹಲಿಯ ಕರ್ತವ್ಯ ಪಥ್‌ನಲ್ಲಿ‌ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪರೇಡ್‌

    74th Republic Day: ದೆಹಲಿಯ ಕರ್ತವ್ಯ ಪಥ್‌ನಲ್ಲಿ‌ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪರೇಡ್‌

    – ಗಮನ ಸೆಳೆದ ಸಿಆರ್‌ಪಿಎಫ್‌ ಮಹಿಳಾ ತುಕಡಿ, ಅಗ್ನಿವೀರರು
    – ಈಜಿಪ್ಟ್‌ ಸೇನಾ ತುಕಡಿ ಭಾಗಿ
    – ಆಕಾಶದಲ್ಲಿ ಚಮತ್ಕಾರ ಮಾಡಿ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು

    ನವದೆಹಲಿ: ದೇಶಾದ್ಯಂತ 74ನೇ ಗಣರಾಜ್ಯೋತ್ಸವ (74th Republic Day) ಆಚರಣೆ ಮಾಡಲಾಗುತ್ತಿದೆ. ದೆಹಲಿಯ (New Delhi) ಬ್ರಿಟಿಷರ ಕಾಲದ ರಾಜಪಥ್‌ ಹೆಸರು ಕರ್ತವ್ಯ ಪಥ್ (Kartavya Path) ಎಂದು ಬದಲಾದ ನಂತರ ಈ ಬಾರಿ ಗಣರಾಜ್ಯೋತ್ಸವ ಹೊಸತನ ಹಾಗೂ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ದೆಹಲಿಯ ಕರ್ತವ್ಯ ಪಥದಲ್ಲಿ ಹಲವು ವಿಶೇಷತೆಗಳೊಂದಿಗೆ ಅದ್ದೂರಿ ಪರೇಡ್ ನಡೆಯಿತು. ಕಣ್ಮಮನ ಸೆಳೆಯುವ ಟ್ಯಾಬ್ಲೊಗಳು, ಅತ್ಯಾಕರ್ಷಕ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.

     

    ರಾಷ್ಟ್ರಪತಿ ದ್ರೌಪದಿ ಮುರ್ಮು, ಈಜಿಪ್ಟ್‌ನಿಂದ ಬಂದಿದ್ದ ಅತಿಥಿ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಪ್ರಧಾನಿ, ನರೇಂದ್ರ ಮೋದಿ ಸಮ್ಮುಖದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಪರೇಡ್‌ಗೆ ಚಾಲನೆ ನೀಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪರೇಡ್‌ ವೀಕ್ಷಿಸಿದರು.

    ಹಲವು ಪ್ರಥಮಗಳ ವಿಶೇಷತೆ
    ಪರೇಡ್ ಹಲವು ಹೊಸತನಕ ಸಾಕ್ಷಿಯಾಗಿತ್ತು‌. ಅಗ್ನಿವೀರರು ಪಥ್ ಸಂಕಲನದಲ್ಲಿ ಭಾಗಿಯಾಗದರೆ, ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನಾ ತುಕಡಿ ಕೂಡಾ ಭಾಗಿಯಾಗಿತ್ತು. ಗುಲಾಮಿ ಮಾನಸಿಕತೆಯಿಂದ ಹೊರ ಬರುವ ಭಾಗವಾಗಿ 25 ಪೌಂಡರ್ ಗನ್‌ಗಳ ಬದಲು ಭಾರತದಲ್ಲಿ ನಿರ್ಮಿತವಾದ 105 ಎಂಎಂ ಇಂಡಿಯನ್ ಫಿಲ್ಡ್ ಗನ್‌ಗಳಿಂದ 21 ಗನ್ ಸೆಲ್ಯೂಟ್ ನೀಡಲಾಯಿತು. ಒಟ್ನಲ್ಲಿ ಈ ಬಾರಿಯ ಪರೇಡ್ ಭಾರತದ ನಾರಿ ಶಕ್ತಿ ಮತ್ತು ಆತ್ಮ ನಿರ್ಭರ್ ಭಾರತ್ ಶಕ್ತಿ ಸಂದೇಶ ಸಾರಿದರೆ, ವಿವಿಧತೆಯಲ್ಲಿ ಏಕತೆಗೊಂಡಿರುವ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿತು.

    ಪರೇಡ್ ಗೆ ಚಾಲನೆ ನೀಡುತ್ತಿದ್ದಂತೆ ಪರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇತೃತ್ವದಲ್ಲಿ ಭವ್ಯ ಪರೇಡ್ ಆರಂಭವಾಯಿತು. 75 ಶಸ್ತ್ರಸಜ್ಜಿತ ರೆಜಿಮೆಂಟ್‌ನ ಮುಖ್ಯ ಯುದ್ಧ ಟ್ಯಾಂಕ್ ಅರ್ಜುನ್‌ನ ತುಕಡಿಯು ಪರೇಡ್ ಹಾದಿಯಲ್ಲಿ ಸಾಗಿ ಬಂತು. ಇದಾದ ಬಳಿಕ 61 ಅಶ್ವಸೈನ್ಯದ ಸಮವಸ್ತ್ರದಲ್ಲಿ ಮೊದಲ ತಂಡವನ್ನು ಕ್ಯಾಪ್ಟನ್ ರೈಜಾದಾ ಶೌರ್ಯ ಬಾಲಿ ಮುನ್ನಡೆಸಿದರು.

    ಬಳಿಕ 17 ಯಾಂತ್ರೀಕೃತ ಪದಾತಿ ದಳದ NAG ಕ್ಷಿಪಣಿ ವ್ಯವಸ್ಥೆಯನ್ನು ಮುನ್ನಡೆಸಿದ ಲೆಫ್ಟಿನೆಂಟ್ ಸಿದ್ಧಾರ್ಥ ತ್ಯಾಗಿ ಅವರಿಂದ ರಾಷ್ಟ್ರಪತಿ ಮುರ್ಮು ಗೌರವ ವಂದನೆ ಸ್ವೀಕರಿಸಿದರು. ಇದಾದ ಬಳಿಕ ಹಂತ ಹಂತವಾಗಿ ಬೇರೆ ಬೇರೆ ಸೇನಾ ತುಕಡಿಗಳು ಪಥ ಸಂಚಲನ ಮಾಡಿದವು. ಲಡಾಖ್ ಸ್ಕೌಟ್ಸ್ ರೆಜಿಮೆಂಟ್‌ನ ಕ್ಯಾಪ್ಟನ್ ನವೀನ್ ಧತ್ತೇರ್ವಾಲ್ ನೇತೃತ್ವದಲ್ಲಿ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ನ ತುಕಡಿ, ಲೆಫ್ಟಿನೆಂಟ್ ಪ್ರಜ್ವಲ್ ಕಲಾ ನೇತೃತ್ವದ 861 ಮಿಸೈಲ್ ರೆಜಿಮೆಂಟ್‌ನ ಬ್ರಹ್ಮೋಸ್‌ನ ತುಕಡಿ, 27 ಏರ್ ಡಿಫೆನ್ಸ್ ಮಿಸೈಲ್ ರೆಜಿಮೆಂಟ್‌ನ ಆಕಾಶ್ ವೆಪನ್ ಸಿಸ್ಟಮ್, ಕ್ಯಾಪ್ಟನ್ ಸುನಿಲ್ ದಶರಥೆ ನೇತೃತ್ವದ ‘ಅಮೃತಸರ ಏರ್‌ಫೀಲ್ಡ್’ ಮತ್ತು 512 ಲೈಟ್ ಎಡಿ ಮಿಸೈಲ್ ರೆಜಿಮೆಂಟ್, ಭಾರತೀಯ ನೌಕಾಪಡೆಯ 80 ಸಂಗೀತಗಾರರನ್ನು ಒಳಗೊಂಡಿರುವ ಭಾರತೀಯ ನೌಕಾಪಡೆಯ ಬ್ರಾಸ್ ಬ್ಯಾಂಡ್ ಕರ್ತವ್ಯ ಪಥ್ ನಲ್ಲಿ ಪರೇಡ್‌ ನಡೆಸಿದವು.

    ಕಣ್ಮಮನ ಸೆಳೆದ ಟ್ಯಾಬ್ಲೊಗಳು
    ಈ ಬಾರಿಯ ಪರೇಡ್‌ನಲ್ಲಿ 17 ರಾಜ್ಯದ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆ ಮತ್ತು ಸಚಿವಾಲಯದ ಆರು ಟ್ಯಾಬ್ಲೊಗಳು ಸೇರಿ ಒಟ್ಟು 23 ಟ್ಯಾಬ್ಲೊಗಳು ಭಾಗಿಯಾಗಿದ್ದವು. ಜಾರ್ಖಂಡ್‌ನ ಟ್ಯಾಬ್ಲೊ ದಿಯೋಘರ್‌ನಲ್ಲಿರುವ ಪ್ರಸಿದ್ಧ ಬೈದ್ಯನಾಥ ದೇವಾಲಯ, ಗುಜರಾತ್ ʼಸ್ವಚ್ಛ-ಹಸಿರು ಶಕ್ತಿ ಸಮರ್ಥ’ ಎಂಬ ಸಂದೇಶ ಮೇಲೆ ನವೀಕರಿಸಬಹುದಾದ ಇಂಧನದ ಬಗ್ಗೆ, ಕೇರಳವು ‘ನಾರಿ ಶಕ್ತಿ’ ಮತ್ತು ಮಹಿಳಾ ಸಬಲೀಕರಣದ ಜಾನಪದ ಸಂಪ್ರದಾಯಗಳ ಟ್ಯಾಬ್ಲೊವನ್ನು ಪ್ರದರ್ಶಿಸಿದವು.

    ಪಶ್ಚಿಮ ಬಂಗಾಳದ ದುರ್ಗಾ ಪೂಜಾ, ಮಹಾರಾಷ್ಟ್ರದ ಶಕ್ತಿ ಪೀಠಗಳ ಮತ್ತು ತಮಿಳುನಾಡಿನ ಟ್ಯಾಬ್ಲೋ ಜನ ಮೆಚ್ಚುಗೆ ಪಾತ್ರವಾದರೆ, ಅಯೋಧ್ಯೆಯಲ್ಲಿ ಆಚರಿಸಲಾದ ಮೂರು ದಿನಗಳ ದೀಪೋತ್ಸವವನ್ನು ಉತ್ತರ ಪ್ರದೇಶ ಸರ್ಕಾರ ಈ ಬಾರಿ ಪ್ರದರ್ಶಿಸಿತು‌.

    ಕರ್ತವ್ಯ ಪಥ್‌ನಲ್ಲಿ ಕರ್ನಾಟಕದ ನಾರಿಶಕ್ತಿ
    ಟ್ಯಾಬ್ಲೊಗಳ ಸರಣಿಯಲ್ಲಿ ಕರ್ನಾಟಕವೂ ಈ ಬಾರಿ ತನ್ನ ಟ್ಯಾಬ್ಲೊವನ್ನು ಪ್ರದರ್ಶಿಸಿತು. ಈ ಬಾರಿ ಕರ್ನಾಟಕ ನಾರಿ ಶಕ್ತಿ ಪರಿಕಲ್ಪನೆಯಲ್ಲಿ ಟ್ಯಾಬ್ಲೊ ಪ್ರದರ್ಶಿಸಿದ್ದು, ಟ್ಯಾಬ್ಲೊದಲ್ಲಿ 2,000 ಅಧಿಕ ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ನರಸಮ್ಮ, 30,000ಕ್ಕೂ ಅಧಿಕ ಸಸಿಗಳನ್ನು ನೆಟ್ಟ ಹಾಲಕ್ಕಿ ತುಳಸಿ ಗೌಡ ಮತ್ತು 8,000 ಮರಗಳನ್ನು ಪೋಷಿಸಿದ ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಒಳಗೊಂಡಿತ್ತು. ರಾಜ್ಯದ ಟ್ಯಾಬ್ಲೊ ಜೊತೆಗೆ ಉತ್ತರ ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದರು ಹೆಜ್ಜೆ ಹಾಕಿದರು.

    ಟ್ಯಾಬ್ಲೊಗಳ ಪ್ರದರ್ಶನದ ಬಳಿಕ ಆಕಾಶದಲ್ಲಿ ಯುದ್ದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿದವು. ರಫೇಲ್ ಕಸರತ್ತು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮೇಡ್ ಇನ್ ಇಂಡಿಯಾದ ಲಘು ಯುದ್ದ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಪ್ರದರ್ಶನ ನೀಡಿದವು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 74th Republic Day: ಗಣರಾಜ್ಯೋತ್ಸವಕ್ಕೆ ಬಾಂಬ್‌ ಬೆದರಿಕೆ – ಅಹಮದಾಬಾದ್‌ನಲ್ಲಿ ನಾಲ್ವರು ಅರೆಸ್ಟ್‌

    74th Republic Day: ಗಣರಾಜ್ಯೋತ್ಸವಕ್ಕೆ ಬಾಂಬ್‌ ಬೆದರಿಕೆ – ಅಹಮದಾಬಾದ್‌ನಲ್ಲಿ ನಾಲ್ವರು ಅರೆಸ್ಟ್‌

    ಅಹಮದಾಬಾದ್: ಗಣರಾಜ್ಯೋತ್ಸವದಂದು (74th Republic Day) ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆಯ ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅಹಮದಾಬಾದ್ ಪೊಲೀಸರು (Ahmedabad Police) ಬಂಧಿಸಿದ್ದಾರೆ.

    ನಾಲ್ವರು ಆರೋಪಿಗಳ ಪೈಕಿ ಇಬ್ಬರು ಅಹಮದಾಬಾದ್‌ ಮತ್ತು ಮತ್ತಿಬ್ಬರು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಎಂಪಿ ಟಿಕೆಟ್ ಏಕೆ ನಿರೀಕ್ಷಿಸಬಾರದು- ಕಮಲ್ ಹಾಸನ್ ಪ್ರಶ್ನೆ

    ಗೀತಾ ಮಂದಿರ ಬಸ್ ನಿಲ್ದಾಣ ಮತ್ತು ಅಹಮದಾಬಾದ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬೆದರಿಕೆ ಪತ್ರ ಬಂದ ತಕ್ಷಣ ಅಹಮದಾಬಾದ್ ಕ್ರೈಂ ಬ್ರಾಂಚ್ ಕಾರ್ಯಾಚರಣೆಗೆ ಇಳಿದಿತ್ತು.

    ಬೆದರಿಕೆ ಪತ್ರವನ್ನು ಅಹಮದಾಬಾದ್ ಪೊಲೀಸ್ ಕಮಿಷನರ್ ಕಚೇರಿಗೆ ತಲುಪಿಸಲಾಗಿತ್ತು. ಪತ್ರದಲ್ಲಿ ಕೆಲವು ಸಂಖ್ಯೆಗಳನ್ನು ಸಹ ಉಲ್ಲೇಖಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: 74ನೇ ಗಣರಾಜ್ಯೋತ್ಸವಕ್ಕೆ ಕರ್ತವ್ಯಪಥ ಸಜ್ಜು- ಪರೇಡ್‍ನಲ್ಲಿ ಮಿಂಚಲಿದೆ ಕರ್ನಾಟಕ ಟ್ಯಾಬ್ಲೋ

    ಅಹಮದಾಬಾದ್ ರೈಲು ನಿಲ್ದಾಣ ಮತ್ತು ಗೀತಾ ಮಂದಿರ ಬಸ್ ನಿಲ್ದಾಣ ಹೊರತುಪಡಿಸಿ ಇತರ ಎರಡು ಸ್ಥಳಗಳನ್ನು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಚೈತನ್ಯ ಮಾಂಡ್ಲಿಕ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 74ನೇ ಗಣರಾಜ್ಯೋತ್ಸವಕ್ಕೆ ಕರ್ತವ್ಯಪಥ ಸಜ್ಜು- ಪರೇಡ್‍ನಲ್ಲಿ ಮಿಂಚಲಿದೆ ಕರ್ನಾಟಕ ಟ್ಯಾಬ್ಲೋ

    74ನೇ ಗಣರಾಜ್ಯೋತ್ಸವಕ್ಕೆ ಕರ್ತವ್ಯಪಥ ಸಜ್ಜು- ಪರೇಡ್‍ನಲ್ಲಿ ಮಿಂಚಲಿದೆ ಕರ್ನಾಟಕ ಟ್ಯಾಬ್ಲೋ

    ನವದೆಹಲಿ: ಈ ಬಾರಿಯ ಗಣರಾಜೋತ್ಸವ (74th Republic Day) ಪರೇಡ್‍ಗೆ ದೆಹಲಿಯ ಕರ್ತವ್ಯ ಪಥ್ ಸಿದ್ಧವಾಗಿದೆ. ಈಜಿಪ್ಟ್ ಅಧ್ಯಕ್ಷರು ವಿಶೇಷ ಅತಿಥಿಯಾಗಿ ಭಾಗಿಯಾಗುತ್ತಿದ್ದಾರೆ. ವಿಶೇಷವಾಗಿ ನಾರಿ ಶಕ್ತಿ ಪರಿಕಲ್ಪನೆಯಡಿಯಲ್ಲಿ ಕರ್ನಾಟಕ ತನ್ನ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಿದೆ.

    ಇಂದು ಗಣರಾಜೋತ್ಸವಕ್ಕೆ ಇಡೀ ದೇಶ ಸಜ್ಜಾಗಿದೆ. ದೆಹಲಿಯ ಕರ್ತವ್ಯಪಥ (Delhi Kartavya Path) ದಲ್ಲಿ ಆತ್ಮನಿರ್ಭರ್ ಭಾರತ ಪರೇಡ್‍ಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಬೆಳಗ್ಗೆ 9:30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 10:30ಕ್ಕೆ ಪರೇಡ್‍ಗೆ ಚಾಲನೆ ಸಿಗಲಿದೆ. ಮೇಕ್ ಇನ್ ಇಂಡಿಯಾ (Make in India) ಪರಿಕಲ್ಪನೆಯಡಿ ದೇಶಿಯ ಸೇನಾ ಆಯುಧಗಳನ್ನು ಪರೇಡ್‍ನಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಈ ಬಾರಿಯ ಗಣರಾಜೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಭಾಗಿಯಾಗುತ್ತಿದ್ದಾರೆ.

    ಕರ್ನಾಟಕ ಸೇರಿ 17 ರಾಜ್ಯಗಳ ಸ್ತಬ್ಧಚಿತ್ರಗಳು ಪರೇಡ್‍ನಲ್ಲಿ ಪ್ರದರ್ಶನಗೊಳ್ಳಲಿದೆ. ನಾರಿ ಶಕ್ತಿ ಪರಿಕಲ್ಪನೆಯಡಿಯಲ್ಲಿ ಕರ್ನಾಟಕ ತನ್ನ ಸ್ತಬ್ಧ ಚಿತ್ರಪ್ರದರ್ಶಿಸಲಿದೆ. ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ, ಹಾಲಕ್ಕಿ ತುಳಸಿಗೌಡ ಮತ್ತು ಸೂಲಗಿತ್ತಿ ನರಸಮ್ಮ ಸಾಧನೆಯನ್ನು ಟ್ಯಾಬ್ಲೋ ಮೂಲಕ ಇಡೀ ದೇಶಕ್ಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಟ್ಯಾಬ್ಲೊ (Tableau) ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸುಗ್ಗಿ, ಕೊಪ್ಪಳದ ಕುಕನೂರು ಮೂಲದ ನಂದಿ ಧ್ವಜ ಸೇರಿದಂತೆ ಭರತನಾಟ್ಯ ಕಲಾವಿದರು ಪರೇಡ್‍ನಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಮುಲಾಯಂಸಿಂಗ್ ಯಾದವ್, ಕೀರವಾಣಿ, ವಾಣಿ ಜಯರಾಂ ಸೇರಿ 106 ಮಂದಿಗೆ ಪದ್ಮ ಪ್ರಶಸ್ತಿ – ಯಾರಿಗೆ ಯಾವ ಪ್ರಶಸ್ತಿ?

    ಗಣರಾಜ್ಯೋತ್ಸವ ವಿಶೇಷತೆ: ಮೇಕ್ ಇನ್ ಇಂಡಿಯಾ, ನಾರಿಶಕ್ತಿಗೆ ಆದ್ಯತೆ ನೀಡಲಾಗಿದೆ. ಮೊದಲ ಬಾರಿ ಗನ್ ಸೆಲ್ಯೂಟ್‍ಗಾಗಿ ಸ್ವದೇಶಿ 105 ಎಂಎಂ ಗನ್ ಬಳಸಲಾಗಿದೆ. 9 ರಫೇಲ್ ಯುದ್ಧ ವಿಮಾನಗಳಿಂದ ವೈಮಾನಿಕ ಪ್ರದರ್ಶನ (ಒಟ್ಟು 44 ವಿಮಾನ) ಹಾಗೂ ಮೊದಲ ಬಾರಿ ನೌಕಾಪಡೆಯ ಐಎಲ್-38 ಸಮರ ವಿಮಾನ ಹಾರಾಟ (ಸಮುದ್ರ ವಿಚಕ್ಷಣ ವಿಮಾನ) ಮಾಡಿಸಲಾಗುತ್ತಿದೆ.

    3500 ದೇಶಿ ಡ್ರೋನ್‍ಗಳ ಶೋ, 3ಡಿ ಅನಾಮೋರ್ಫಿಕ್ ಪ್ರೊಜೆಕ್ಷನ್, ಮೊದಲ ಬಾರಿ ಮಿಲಿಟರಿ ಟ್ಯಾಟೂ ಎಂಬ ಸಶಸ್ತ್ರ ಪಡೆಯಿಂದ ನೃತ್ಯ ಆಯೋಜಿಸಲಾಗಿದೆ. ಮಹಿಳಾ ಅಧಿಕಾರಿ ನೇತೃತ್ವದಲ್ಲಿ ಡೇರ್ ಡೆವಿಲ್ಸ್ ಮೋಟಾರ್ ಸೈಕಲ್ ಕಸರತ್ತು ಇದೆ. ನೌಕಾ ಪಡೆಯ ಮಹಿಳಾ ತುಕಡಿಗೆ ಮಂಗಳೂರಿನ ದಿಶಾ ಅಮೃತ್ ನೇತೃತ್ವ ವಹಿಸಲಿದ್ದು, ಪರೇಡ್‍ನಲ್ಲಿ ಈಜಿಪ್ಟ್ ದೇಶದ ಸೇನಾ ತುಕಡಿ ಭಾಗವಹಿಸಲಿದೆ.

    ರಾಜಪಥ್‍ನಿಂದ ಕರ್ತವ್ಯ ಪಥ್ ಆಗಿ ಬದಲಾದ ಬಳಿಕ ಮೊದಲ ಗಣರಾಜೋತ್ಸವ ಇದಾಗಿದ್ದು, ವಿಶೇಷತೆಗಳಿಂದ ಕೂಡಿದೆ. ಭದ್ರತೆ ದೃಷ್ಟಿಯಿಂದ 6-7 ಸಾವಿರ ದೆಹಲಿ ಪೊಲೀಸ್ ಸೇರಿದಂತೆ ಕೇಂದ್ರದ ಮೀಸಲು ಪಡೆ ನಿಯೋಜಿಸಲಾಗಿದೆ. ಕರ್ತವ್ಯ ಪಥ್ ಸುತ್ತ 150ಕ್ಕೂ ಅಧಿಕ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k