Tag: 70th republic day

  • ಪರೇಡ್‍ನಲ್ಲಿ ಒಂದೊಂದು ಹೆಜ್ಜೆಯೂ ಮುಖ್ಯ: ಎನ್‍ಸಿಸಿ ಮಹಿಳಾ ತಂಡದ ನಾಯಕಿ ಕನ್ನಡತಿ ಶ್ರೀಷ್ಮಾ ಹೆಗ್ಡೆ

    ಪರೇಡ್‍ನಲ್ಲಿ ಒಂದೊಂದು ಹೆಜ್ಜೆಯೂ ಮುಖ್ಯ: ಎನ್‍ಸಿಸಿ ಮಹಿಳಾ ತಂಡದ ನಾಯಕಿ ಕನ್ನಡತಿ ಶ್ರೀಷ್ಮಾ ಹೆಗ್ಡೆ

    -ಪರೇಡ್‍ಗಾಗಿ ಐಸ್ ಕ್ರೀಂ, ಚಾಕಲೇಟ್ ಬಿಟ್ಟೆ

    ನವದೆಹಲಿ : ಮೂರು ವರ್ಷದ ಕನಸು ಇಂದು ನನಾಸಾಗಿದೆ. ಜೀವನದಲ್ಲಿ ಇದು ಮರೆಯದ ದಿನ. ಪರೇಡ್ ಇಂಡಿಯಾ ಗೇಟ್ ಬಳಿ ಅಂತ್ಯವಾದಗ ಖುಷಿಗೆ ಕಣ್ಣೀರು ಬಂತು. ಹೀಗೆ ಮನದಾಳದ ಮನಸ್ಸು ಬಿಚ್ಚಿಟ್ಟಿರುವುದು ದಾವಣಗೆರೆ ಜಿಲ್ಲೆ ಹರಿಹರ ಮೂಲದ ಶ್ರೀಷ್ಮಾ ಹೆಗ್ಡೆ. 71ನೇ ಗಣರಾಜೋತ್ಸವದ ಹಿನ್ನೆಲೆ ರಾಜಪಥ್ ನಲ್ಲಿ ನಡೆದ ಎನ್‍ಸಿಸಿ ಹಿರಿಯ ಮಹಿಳಾ ಪರೇಡ್ ನೇತೃತ್ವವನ್ನ ಶ್ರೀಷ್ಮಾ ಹೆಗ್ಡೆ ವಹಿಸಿಕೊಂಡಿದ್ದರು.

    ಪಂಥ ಸಂಚಲನ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿರುವ ಶ್ರೀಷ್ಮಾ, 2017ರಲ್ಲಿ ನಡೆದ ಕಿರಿಯ ಬಾಲಕಿಯರ ಎನ್‍ಸಿಸಿ ಪರೇಡ್ ನಲ್ಲಿ ಭಾಗವಹಿಸಿದ್ದೆ. ಅಂದೇ ಹಿರಿಯರ ವಿಭಾಗದ ನೇತೃತ್ವ ವಹಿಸಿಕೊಳ್ಳುವ ಕನಸು ಕಂಡಿದೆ. ಮೂರು ವರ್ಷಗಳ ಕನಸು ಇಂದು ನನಸಾಗಿದ್ದು ಜೀವನದಲ್ಲಿ ಈ ದಿನವನ್ನು ಮರೆಯಲು ಸಾಧ್ಯವಿಲ್ಲ ಎಂದರು.

    ಕಳೆದ ಮೂರು ತಿಂಗಳಿಂದ ಇದಕ್ಕಾಗಿ ತಯಾರಿ ನಡೆಸಿಕೊಳ್ಳುತ್ತಿದ್ದು, ಐಸ್ ಕ್ರೀಂ, ಚಾಕಲೇಟ್ ಎಲ್ಲವನ್ನು ಬಿಟ್ಟಿದ್ದೇನೆ. ದೆಹಲಿಗೂ ಮುನ್ನ ನಡೆದ ಎಂಟು ತರಬೇತಿ ಪರೇಡಗಳ ನೇತೃತ್ವ ವಹಿಸಿಕೊಂಡಿದ್ದೆ ದೆಹಲಿಗೆ ಬಂದಾಗ ರಾತ್ರಿ ಎರಡು ಗಂಟೆಯಿಂದ ಬೆಳಗ್ಗೆ ಎಂಟು ಗಂಟೆವರೆಗೂ ತರಬೇತಿ ಪಡೆದಿದ್ದೇವೆ. ಸಾಕಷ್ಟು ಪರಿಶ್ರಮದ ಬಳಿಕ ಇಂದು ಯಾವುದೇ ಭಯ ಇಲ್ಲದೇ ಪರೇಡ್ ಲೀಡ್ ಮಾಡಿದೆ ಎಂದು ಖುಷಿ ವ್ಯಕ್ತಪಡಿಸಿದರು.

    ರಾಜಪಥ್ ನಲ್ಲಿ ಪರೇಡ್ ಮಾಡುವಾಗ ಇಡೀ ದೇಶವನ್ನು ಪ್ರತಿನಿಧಿಸುವ ಹೆಮ್ಮೆಯಾಗುತ್ತಿತ್ತು. ಇಡೀ ನಮ್ಮ ಟೀಂ ನನ್ನ ಅನುಸರಿಸಿಸುತ್ತೆ, ಪ್ರತಿ ಹೆಜ್ಜೆಯ ಮೇಲೂ ಗಮನವಿರಬೇಕು ಮತ್ತು ಬ್ಯಾಂಡ್ ಸೌಂಡ್ ಮೇಲೆ ಹೆಚ್ಚಿನ ಗಮನ ಹೊಂದಿರಬೇಕು. ಪರೇಡ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಅದೃಷ್ಟಶಾಲಿಗಳು ಎಂದು ಸಂಭ್ರಮಿಸಿದರು. ಬಿಎಸ್‍ಸಿ ಬಳಿಕ ವಾಯುಸೇನೆ ಸೇರುವ ಆಸೆ ಇದ್ದು ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ತಮ್ಮ ಕನಸು ಬಿಚ್ಚಿಟ್ಟರು.

  • ಗಮನ ಸೆಳೆಯಿತು ವಿಶೇಷ ಡ್ರೋಣ್ ಧ್ವಜಾರೋಹಣ

    ಗಮನ ಸೆಳೆಯಿತು ವಿಶೇಷ ಡ್ರೋಣ್ ಧ್ವಜಾರೋಹಣ

    ದಾವಣಗೆರೆ: ದೇಶಾದ್ಯಂತ ಅದ್ಧೂರಿಯಾಗಿ 70ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ವಿದ್ಯಾರ್ಥಿಯೊಬ್ಬ ತಯಾರಿಸಿದ ಡ್ರೋನ್ ಮೂಲಕ ಧ್ವಜಾರೋಹಣ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

    ಜಿಲ್ಲೆಯ ಕ್ರೀಡಾಂಗಣದಲ್ಲಿ 70ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ, ಸಚಿವ ಎಸ್.ಆರ್ ಶ್ರೀನಿವಾಸ್, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ನೇತೃತ್ವದಲ್ಲಿ ಧ್ವಜರೋಹಣ ನೆರವೇರಿತು. ಅದರಲ್ಲೂ ನಗರದ ಪುಷ್ಟ ಮಹಾಲಿಂಗಪ್ಪ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಪ್ರಧ್ಯುನ್ ತಯಾರಿಸಿದ ಡ್ರೋಣ್ ಮೂಲಕ ಧ್ವಜರೋಹಣ ಮಾಡಿದ್ದು ವಿಶೇಷವಾಗಿತ್ತು.  ಇದನ್ನೂ ಓದಿ:ಧ್ವಜಾರೋಹಣ ನಂತ್ರ ತನ್ನ ಕಾರು ಹುಡುಕಾಡಿದ ಸಚಿವ ತುಕಾರಾಂ

    ಈ ವೇಳೆ ಪೊಲೀಸ್, ಗೃಹ ರಕ್ಷಕದಳ, ಅರಣ್ಯ ಇಲಾಖೆ ಹಾಗೂ ವಿವಿಧ ಶಾಲಾ ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದರು. ಸಚಿವರ ಭಾಷಣದ ನಂತರ ವಿವಿಧ ಇಲಾಖೆಯಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ವಿವಿಧ ಶಾಲಾ ಮಕ್ಕಳು ದೇಶ ಭಕ್ತಿ ಗೀತೆಗಳಿಗೆ ನೃತ್ಯ ಮಾಡುವದರ ಮೂಲಕ ನೆರೆದವರ ಗಮನ ಸೆಳೆದರು.

    https://www.youtube.com/watch?v=7a0-2bTAZaM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 70ನೇ ಗಣರಾಜ್ಯೋತ್ಸವ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

    70ನೇ ಗಣರಾಜ್ಯೋತ್ಸವ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

    ಬೆಂಗಳೂರು: 70ನೇ ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ಧ್ವಜಾರೋಹಣ ನೆರವೇರಿಸಿದ್ರು. ಬಳಿಕ ರಾಷ್ಟ್ರಗೀತೆ, ರೈತಗೀತೆಗಳ ಗಾಯನ ನಡೆಯಿತು. ತದನಂತರ ರಾಜ್ಯಪಾಲರು ತೆರೆದ ವಾಹನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಕವಾಯತು ವೀಕ್ಷಣೆ ಮಾಡಿದ್ರು.

    ಬಳಿಕ ಹಿಂದಿಯಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲರು, ಕರ್ನಾಟಕ ಪ್ರಗತಿಯ ಮಾರ್ಗದಲ್ಲಿ ಇರಲಿದೆ. ಕೊಡಗು, ಮಲೆನಾಡು ಭಾಗದಲ್ಲಿ ಪ್ರಕೃತಿ ವಿಕೋಪವಾಗಿತ್ತು. ಕೊಡಗಿನ ಪ್ರವಾಹದ ವೇಳೆ ಕೇಂದ್ರ, ರಾಜ್ಯಗಳ ಸಂಸ್ಥೆಗಳಿಂದ ತುರ್ತು ಕಾರ್ಯಾಚರಣೆ ನಡೆದಿದೆ. ಕೊಡಗಿನಲ್ಲಿ ಹಾನಿಗೊಳಗಾದವರಿಗೆ ಸ್ಪಂದಿಸಲಾಗಿದೆ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ನಿಯಮಾನುಸಾರ 3,800 ರೂ. ನೀಡಲಾಗಿದೆ ಎಂದು ಹೇಳಿದ್ರು.

    ಬಡವರ ಬಂಧು ಯೋಜನೆಯ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಕೊಡಲಾಗಿದೆ. ಸಹಕಾರಿ ಬ್ಯಾಂಕ್ ಗಳು, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಯೋಜನೆ ಜಾರಿ ಮಾಡಲಾಗಿದೆ. 20 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಮುಖ್ಯಮಂತ್ರಿಗಳ ಮನೆ ನಿರ್ಮಾಣ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಅಂದ್ರು.

    ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. 9 ಡಿಸಿಪಿ, 19 ಎಸಿಪಿ ಸೇರಿ 1200 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. ಸುಗಮ ಸಂಚಾರಕ್ಕೆ 3 ಡಿಸಿಪಿಗಳ ನಿಯೋಜನೆ, ಸಾರ್ವಜನಿಕರಿಗೆ ಮೊಬೈಲ್ , ಕ್ಯಾಮರಾ, ಕೈಚೀಲ ನಿಷೇಧ, ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

    ಹೊರ ರಾಜ್ಯದಿಂದಲೂ ಸಾಕಷ್ಟು ಜನ ಆಗಮಿಸಿದ್ದು, ಹೀಗಾಗಿ ಪೇರೆಡ್ ಅನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರ ಪಾಸ್‍ಗಳನ್ನು ಚೆಕ್ ಮಾಡಿ ಪೊಲೀಸರು ಒಳಗಡೆ ಬಿಟ್ಟಿದ್ದಾರೆ.

    ಒಟ್ಟಿನಲ್ಲಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಸೇನೆಯ ವಿವಿಧ ವಿಭಾಗಗಳು, ಸ್ಕೌಟ್ಸ್ ಅಂಡ್ ಗೈಡ್ಸ್ , ಎನ್ ಸಿಸಿ, ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ನಂತರ ವಿವಿಧ ಶಾಲೆಗ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv