Tag: 70th national award

  • ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ: ರಿಷಬ್‌ ಶೆಟ್ಟಿ

    ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ: ರಿಷಬ್‌ ಶೆಟ್ಟಿ

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ (Kantara) ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ವಾಪಸ್ ಆಗಿದ್ದಾರೆ. ಅವರಿಗೆ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ. ಈ ವೇಳೆ, ಅವರು ದೈವರಾಧನೆಯ ಬಗ್ಗೆ ಮಾತನಾಡಿದ್ದಾರೆ. ದೈವದ ಆಶೀರ್ವಾದ ಇಲ್ಲದೇ ಇದ್ದರೆ ನಾವು ಹೋಗಲು ಸಾಧ್ಯವೇ ಇರಲಿಲ್ಲ ಎಂದು ರಿಷಬ್ ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಂಜು ವೆಡ್ಸ್ ಗೀತಾ 2 : ಮಂಗ್ಲಿ ಹಾಡಿಗೆ ಸೊಂಟ ಬಳುಕಿಸಿದ ರಾಗಿಣಿ


    ರಿಷಬ್ ಶೆಟ್ಟಿ ಮಾತನಾಡಿ, ನ್ಯಾಷನಲ್ ಅವಾರ್ಡ್ ನಮ್ಮ ಇಡೀ ತಂಡಕ್ಕೆ ಸಲ್ಲಬೇಕು. ಈ ಚಿತ್ರವು ದೈವದ ಬಗ್ಗೆ ಹಾಗೂ ದೈವ ನರ್ತಕರ ಸಮುದಾಯದ ಬಗ್ಗೆ ಇರುವ ಸಿನಿಮಾವಾಗಿದೆ. ನ್ಯಾಷನಲ್ ಅವಾರ್ಡ್ ಕ್ರೆಡಿಟ್ ಅನ್ನು ದೈವ ನರ್ತಕ ಸಮುದಾಯಕ್ಕೆ ಸೇರಬೇಕು. ದೈವದ ಆಶೀರ್ವಾದ ಇಲ್ಲದೇ ಇದ್ದರೆ ನಾವು ಈ ಮಟ್ಟಕ್ಕೆ ಹೋಗಲು ಸಾಧ್ಯವೇ ಇರಲಿಲ್ಲ. ದೈವದ ಆಶೀರ್ವಾದದಿಂದ ಕಾಂತಾರ ಚಿತ್ರ ಇಲ್ಲಿ ತನಕ ಬಂದಿದೆ. ಈ ಪ್ರಶಸ್ತಿಯನ್ನು ದೈವದ ಪಾದಕ್ಕೆ ಸಲ್ಲಿಸುತ್ತೇನೆ ಎಂದು ಮಾತನಾಡಿದ್ದಾರೆ. ‘ಕಾಂತಾರ’ ಸಿನಿಮಾ ಮಾಡುವಾಗ ಅವಾರ್ಡ್ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ಎಲ್ಲಾ ಅಭಿಮಾನಿಗಳ ಪ್ರೀತಿಯಿಂದ ಸಾಧ್ಯವಾಗಿದೆ ಎಂದಿದ್ದಾರೆ.

    ಈ ವೇಳೆ, ಕಾಂತಾರ ಚಾಪ್ಟರ್ 1ರ (Kantara Chapter 1) ಬಗ್ಗೆ ಮಾತನಾಡಿ, ಕಾಂತಾರ ಶೂಟಿಂಗ್ ನಡೆಯುತ್ತಿದೆ. ಆದಷ್ಟು ಬೇಗ ನಿರ್ಮಾಪಕರು ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಾರೆ. ‘ಕಾಂತಾರ 1’ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಈ ಹಿಂದೆ ‘ಕಾಂತಾರ’ ಚಿತ್ರ ನೋಡಿ ಅದೆಷ್ಟು ಹೆಮ್ಮೆಪಟ್ಟಿದ್ದೀರೋ ಚಿತ್ರದ ಪ್ರೀಕ್ವೆಲ್‌ಗೆ ಅದಕ್ಕಿಂತ ಹೆಚ್ಚು ಹೆಮ್ಮೆ ಪಡುತ್ತೀರಾ ಎಂದಿದ್ದಾರೆ.

    ‘ಕಾಂತಾರ’ ಮಂಗಳೂರಿನಲ್ಲಿ ಶುರುವಾದ ಸಿನಿಮಾ ಆಗಿದೆ. ಪ್ರಶಸ್ತಿ ತಗೊಂಡು ಇಲ್ಲಿಗೆ ಬರುವ ರೀತಿ ಆಗಿದೆ. ಇದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಇಲ್ಲಿಯೇ ಕಥೆ ಶುರುವಾಗಿದ್ದು, ಪ್ರಶಸ್ತಿಯೂ ಇಲ್ಲಿಗೆ ಬಂದಿದೆ ಎಂದಿದ್ದಾರೆ. ಕಾಂತಾರದ ಇಡೀ ತಂಡವಾಗಿ ನಾವು ಕುಂದಾಪುರದಲ್ಲಿ ನೆಲೆಸಿದ್ದೇವೆ. ಈ ಪ್ರಶಸ್ತಿಯನ್ನ ದೈವಕ್ಕೆ, ದೈವ ನರ್ತಕರಿಗೆ ಹಾಗೂ ಅಪ್ಪು ಸರ್‌ಗೆ ಸಮರ್ಪಿಸುತ್ತೇನೆ. ಯಾವ ಮೂಲದಿಂದ ಬಂದಿದ್ದೇವೋ ಅದನ್ನ ಮರೆಯಬಾರದು ಎಂದು ರಿಷಬ್ ಸ್ಮರಿಸಿದ್ದಾರೆ. ಈ ಪ್ರಶಸ್ತಿಯನ್ನ ದೈವದ ಪಾದಕ್ಕೆ ಇಟ್ಟು ನನ್ನ ಕೆಲಸ ಮುಂದುವರೆಸುತ್ತೇನೆ ಎಂದಿದ್ದಾರೆ.

  • ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ- ನಿತ್ಯಾ ಮೆನನ್ ಫಸ್ಟ್ ರಿಯಾಕ್ಷನ್

    ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ- ನಿತ್ಯಾ ಮೆನನ್ ಫಸ್ಟ್ ರಿಯಾಕ್ಷನ್

    ನ್ನಡದ ನಟಿ ನಿತ್ಯಾ ಮೆನನ್ (Nithya Menen) ಅವರು ತಮಿಳಿನ ‘ತಿರುಚಿತ್ರಂಬಲಂ’ (Thiruchitrambalam) ಎಂಬ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ (70th National Award) ಗೆದ್ದಿರುವುದಕ್ಕೆ ಇದೀಗ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಸಿಕ್ಕಿದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ. ಇದನ್ನೂ ಓದಿ:‘ಕೆಜಿಎಫ್ 2’ ನಿರ್ದೇಶಕನನ್ನು ಹಾಡಿ ಹೊಗಳಿದ ಪ್ರಭಾಸ್

    ರಾಷ್ಟ್ರ ಪ್ರಶಸ್ತಿ ಘೋಷಣೆ ಮಾಡಿರುವ ವಿಚಾರವೇ ನನಗೆ ಗೊತ್ತಿರಲಿಲ್ಲ. ನಾನು ಎಲ್ಲರಿಂದ ದೂರ ಇರಲು ಪ್ರಯತ್ನಿಸುತ್ತೇನೆ. ನನಗೆ ಅವಾರ್ಡ್ ಬರುತ್ತದೆ ಎಂದು ಊಹಿಸಿರಲಿಲ್ಲ. ನನಗೆ ಈ ವಿಚಾರ ಖುಷಿ ಕೊಟ್ಟಿದೆ ಎಂದು ನಿತ್ಯಾ ಮೆನನ್ ಸಂತಸ ಹಂಚಿಕೊಂಡಿದ್ದಾರೆ.

    ಅನೇಕರು ನನಗೆ ಕರೆ ಮಾಡಿ ಶುಭಕೋರಿದ್ದಾರೆ. ಅವರಿಗೆ ಅವಾರ್ಡ್ ಸಿಕ್ಕಿದೆ ಎಂಬ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ‘ತಿರುಚಿತ್ರಂಬಲಂ’ ಚಿತ್ರದಿಂದ ನನಗೆ ಅತ್ಯುತ್ತಮ ನಾಯಕಿ ಎಂದು ಅವಾರ್ಡ್ ಸಿಕ್ಕಿದ್ದು, ಹೆಮ್ಮೆ ತಂದಿದೆ. ನಾನು ಈ ಪ್ರಶಸ್ತಿಗೆ ಅರ್ಹ ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, 2022ರಲ್ಲಿ ತೆರೆಕಂಡ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿ ಧನುಷ್‌ಗೆ (Dhanush) ನಾಯಕಿಯಾಗಿ ನಿತ್ಯಾ ಮೆನನ್ ನಟಿಸಿದ್ದರು. ಮಿತ್ರನ್ ಆರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.

  • 70th National Award 2024 Full List: ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದ ರಿಷಬ್‌ ಶೆಟ್ಟಿ, ‘ಕೆಜಿಎಫ್‌ 2’ ಸಿನಿಮಾ

    70th National Award 2024 Full List: ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದ ರಿಷಬ್‌ ಶೆಟ್ಟಿ, ‘ಕೆಜಿಎಫ್‌ 2’ ಸಿನಿಮಾ

    ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಇಂದು (ಆ.16) 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (70th National Award) ಘೋಷಣೆಯಾಗಿದ್ದು, ಸೌತ್ ಸಿನಿಮಾರಂಗವು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ನಟ ಮತ್ತು ನಟಿ, ಅತ್ಯುತ್ತಮ ಸಿನಿಮಾ, ನಿರ್ದೇಶಕ ಸೇರಿದಂತೆ ಪ್ರಮುಖ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ. ಇದನ್ನೂ ಓದಿ:ಯಶ್, ರಿಷಬ್ ಶೆಟ್ಟಿ ಒಟ್ಟಿಗೆ ನಟಿಸುತ್ತಾರಾ? ನಿರ್ಮಾಪಕ ಹೇಳಿದ್ದೇನು?

    ಹೊಂಬಾಳೆ ಸಂಸ್ಥೆ ನಿರ್ಮಾಣದ ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’, ಮತ್ತು ‘ಕಾಂತಾರ’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿಗೆ (Rishab Shetty) ಸಿಕ್ಕಿದೆ. ಜೊತೆಗೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ‘ಕೆಜಿಎಫ್ 2’ಗೆ (KGF 2) ಸಿಕ್ಕಿದೆ.

    2024ರ ರಾಷ್ಟ್ರೀಯ ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ.

    ಅತ್ಯುತ್ತಮ ನಟ- ರಿಷಬ್ ಶೆಟ್ಟಿ (ಕಾಂತಾರ)
    ಅತ್ಯುತ್ತಮ ನಟಿ – ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್
    ಅತ್ಯುತ್ತಮ ಚಲನಚಿತ್ರ- ಆಟಂ (ಮಲಯಾಳಂ)
    ಅತ್ಯುತ್ತಮ ಜನಪ್ರಿಯ ಚಿತ್ರ- ಕಾಂತಾರ (ಕನ್ನಡ)
    ಅತ್ಯುತ್ತಮ ನಿರ್ದೇಶಕ – ಸೂರಜ್ ಬರ್ಜಾತ್ಯ
    ಅತ್ಯುತ್ತಮ ಪೋಷಕ ನಟಿ – ನೀನಾ ಗುಪ್ತಾ
    ಅತ್ಯುತ್ತಮ ಪೋಷಕ ನಟ – ಪವನ್ ರಾಜ್ ಮಲ್ಹೋತ್ರಾ
    ಅತ್ಯುತ್ತಮ ಚೊಚ್ಚಲ ಚಿತ್ರ- ಫೌಜಾ, ಪ್ರಮೋದ್ ಕುಮಾರ್
    ಅತ್ಯುತ್ತಮ ತೆಲುಗು ಚಿತ್ರ – ಕಾರ್ತಿಕೇಯ 2
    ಅತ್ಯುತ್ತಮ ತಮಿಳು ಚಿತ್ರ – ಪೊನ್ನಿಯಿನ್ ಸೆಲ್ವನ್ -ಭಾಗ 1
    ಅತ್ಯುತ್ತಮ ಪಂಜಾಬಿ ಚಿತ್ರ – ಬಾಘಿ ದಿ ಧೀ
    ಅತ್ಯುತ್ತಮ ಒಡಿಯಾ ಚಿತ್ರ – ದಮನ್
    ಅತ್ಯುತ್ತಮ ಮಲಯಾಳಂ ಚಿತ್ರ – ಸೌದಿ ವೇಲಕ್ಕ ಸಿಸಿ 225/2009 (ತರುಣ್ ಮೂರ್ತಿ)
    ಅತ್ಯುತ್ತಮ ಮರಾಠಿ ಚಿತ್ರ – ವಾಲ್ವಿ
    ಅತ್ಯುತ್ತಮ ಕನ್ನಡ ಚಿತ್ರ – ಕೆಜಿಎಫ್ ಪಾರ್ಟ್ 2
    ಅತ್ಯುತ್ತಮ ಹಿಂದಿ ಚಿತ್ರ – ಗುಲ್‌ಮೊಹರ್
    ವಿಶೇಷ ಪ್ರಶಸ್ತಿ- ಗುಲ್‌ಮೊಹರ್‌ನಲ್ಲಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್‌ನಲ್ಲಿ ಸಂಜೋಯ್ ಸಲಿಲ್ ಚೌಧರಿ
    ಅತ್ಯುತ್ತಮ ಆ್ಯಕ್ಷನ್ ನಿರ್ದೇಶನ – ಕೆಜಿಎಫ್ ಚಾಪ್ಟರ್ 2 (ಅನ್ಬರಿವ್)
    ಅತ್ಯುತ್ತಮ ನೃತ್ಯ ಸಂಯೋಜನೆ – ತಿರುಚಿತ್ರಾಂಬಲಂ
    ಅತ್ಯುತ್ತಮ ಸಾಹಿತ್ಯ – ಫೌಜಾ
    ಅತ್ಯುತ್ತಮ ಸಂಗೀತ ನಿರ್ದೇಶಕ – ಪ್ರೀತಮ್ (ಹಾಡುಗಳು), ಎ.ಆರ್.ರೆಹಮಾನ್ (ಹಿನ್ನೆಲೆ ಸಂಗೀತ)
    ಅತ್ಯುತ್ತಮ ಮೇಕಪ್ – ಅಪರಾಜಿತೋ
    ಅತ್ಯುತ್ತಮ ಕಾಸ್ಟ್ಯೂಮ್ – ನಿಕ್ಕಿ ಜೋಶಿ (ಕಛ್ ಎಕ್ಸ್‌ಪ್ರೆಸ್)
    ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ – ಅಪರಾಜಿತೋ
    ಅತ್ಯುತ್ತಮ ಸಂಕಲನ – ಆಟಂ
    ಅತ್ಯುತ್ತಮ ಸೌಂಡ್ ಡಿಸೈನ್ – ಪೊನ್ನಿಯಿನ್ ಸೆಲ್ವನ್ -ಪಾರ್ಟ್ 1
    ಅತ್ಯುತ್ತಮ ಚಿತ್ರಕಥೆ – ಆಟಂ
    ಅತ್ಯುತ್ತಮ ಸಂಭಾಷಣೆ – ಗುಲ್‌ಮೊಹರ್
    ಅತ್ಯುತ್ತಮ ಛಾಯಾಗ್ರಹಣ – ಪೊನ್ನಿಯಿನ್ ಸೆಲ್ವನ್ -ಭಾಗ 1
    ಅತ್ಯುತ್ತಮ ಗಾಯಕಿ- ಬಾಂಬೆ ಜಯಶ್ರೀ (ಚಾಯುಂ ವೆಲ್ಲಿ, ‘ಸೌದಿ ವೆಲ್ಲಕ’ ಮಲಯಾಳಂ ಸಿನಿಮಾ)
    ಅತ್ಯುತ್ತಮ ಗಾಯಕ- ಅರಿಜಿತ್ ಸಿಂಗ್ (ಕೇಸರಿಯಾ ಸಾಂಗ್ ‘ಬ್ರಹ್ಮಾಸ್ತ್ರ’ ಸಿನಿಮಾ)

  • ಡಿಫ್ರೆಂಟ್ ಕಂಟೆಂಟ್ ಚಿತ್ರ ದೇಶಕ್ಕೆ ಇಷ್ಟ ಆಗಿದೆ: ಮಾನಸಿ ಸುಧೀರ್

    ಡಿಫ್ರೆಂಟ್ ಕಂಟೆಂಟ್ ಚಿತ್ರ ದೇಶಕ್ಕೆ ಇಷ್ಟ ಆಗಿದೆ: ಮಾನಸಿ ಸುಧೀರ್

    ಉಡುಪಿ: ಡಿಫ್ರೆಂಟ್ ಕಂಟೆಂಟ್ ಚಿತ್ರ ದೇಶಕ್ಕೆ ಇಷ್ಟ ಆಗಿದೆ. ಸಿಕ್ಕಿರುವಂತ ಪ್ರಶಸ್ತಿಗಳಿಗೆ ಈಗ ಕಿರೀಟ ಸಿಕ್ಕಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಶುಭಸುದ್ದಿ ಬಂದಿದೆ ಎಂದು ಉಡುಪಿಯಲ್ಲಿ ಕಾಂತಾರ ನಟಿ ಮಾನಸಿ ಸುಧೀರ್ ಹೇಳಿಕೆ ನೀಡಿದ್ದಾರೆ.

    ಕಾಂತಾರ (Kantara) ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿ (70th National Award) ಬಂದಿರುವ ಸಂತೋಷವನ್ನು ಚಿತ್ರದ ನಾಯಕ `ಶಿವ’ನ ತಾಯಿ `ಕಮಲ’ ಪಾತ್ರಧಾರಿ ಮಾನಸಿ ಸುಧೀರ್ (Manasi Sudhir) ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಈ ಅವಾರ್ಡನ್ನು ಕನ್ನಡದ ಜನತೆ ಮತ್ತು ದೈವನರ್ತಕರಿಗೆ ಸಲ್ಲಿಸಿದ್ದಾರೆ. ಇಂದು ಬಹಳ ಖುಷಿ ಮತ್ತು ಹೆಮ್ಮೆಪಡುವ ದಿನ ಎಂದರು. ಇದನ್ನೂ ಓದಿ: ಪ್ರಶಸ್ತಿಯನ್ನು ಪುನೀತ್‌ ರಾಜ್‌ಕುಮಾರ್‌, ದೈವಕ್ಕೆ, ದೈವ ನರ್ತಕರಿಗೆ ಅರ್ಪಣೆ ಮಾಡುತ್ತೇನೆ- ರಿಷಬ್ ಶೆಟ್ಟಿ

    ಶೂಟಿಂಗ್ ದಿನಗಳನ್ನು ಮೆಲುಕುಹಾಕುತ್ತಾ ಮಾತನಾಡಿದ ಅವರು, 40 ದಿನ ಚಿತ್ರದ ಸೆಟ್ಟಿನಲ್ಲಿದ್ದೆ. ಆ ಎಲ್ಲಾ ಕ್ಷಣಗಳು ಕಣ್ಣ ಮುಂದೆ ಬಂತು. ರಿಷಬ್ ವಿಭಿನ್ನ ನಿರ್ದೇಶನ, ನಟನೆ ಮತ್ತು ಪ್ಯಾಟರ್ನ್ ಚಿತ್ರಗಳನ್ನು ಕೊಡುತ್ತಾರೆ. ರಿಷಬ್ ಶೆಟ್ಟಿ ಸಿನಿಮಾಗಳು ಮನೋರಂಜನೆಗೆ ಮೋಸಮಾಡಲ್ಲ. ಚಿತ್ರದ ಕ್ಲೈಮ್ಯಾಕ್ಸ್ ಕಣ್ಣಾರೆ ನೋಡಿದ್ದೇನೆ. ಅದೊಂದು ವಿಶೇಷ ಆಕ್ಷನ್, ವಿಶೇಷ ಅನುಭವ. ಕಾಂತಾರದ ಕೊರಿಯೋಗ್ರಫಿ, ಫೈಟ್ ನಿಜಕ್ಕೂ ಅದ್ಭುತ. ಜನರಿಂದ ಸಿಕ್ಕ ಪ್ರತಿಕ್ರಿಯೆ ಮತ್ತು ಪ್ರೀತಿ ಬಹಳ ದೊಡ್ಡದು. ದೇಶ ವಿದೇಶದಿಂದಲೂ ಈ ಚಿತ್ರಕ್ಕೆ ಮೆಚ್ಚುಗೆ ಬಂದಿದೆ. ಚಿತ್ರ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಕನೆಕ್ಟ್ ಆಗುತ್ತದೆ ಎಂದರು.  ಇದನ್ನೂ ಓದಿ: ಯಶ್, ರಿಷಬ್ ಶೆಟ್ಟಿ ಒಟ್ಟಿಗೆ ನಟಿಸುತ್ತಾರಾ? ನಿರ್ಮಾಪಕ ಹೇಳಿದ್ದೇನು?

    ಕಾಂತಾರ ಫ್ರೀಕ್ವೆಲ್ ಕುತೂಹಲದ ಬಗ್ಗೆ ನಾನೇನು ಹೇಳುವುದಿಲ್ಲ. ಕುತೂಹಲ ಯಾವತ್ತೂ ಹಾಗೆ ಇರಬೇಕು. ಸಿನಿಮಾದ ಮಾರ್ಕೆಟಿಂಗ್ ಬಹಳ ಒಳ್ಳೆಯದು. ಕಾಂತಾರ ಪ್ರೀಕ್ವೆಲ್ ಬಗ್ಗೆ ಯಾವುದೇ ಮಾತುಕತೆ ಆಗಲಿಲ್ಲ. ನಾನು ಈವರೆಗೆ ಚಿತ್ರೀಕರಣದಲ್ಲಿ ಸದ್ಯ ಭಾಗಿ ಆಗಿಲ್ಲ. ಮೊದಲ ಅಧ್ಯಾಯದಲ್ಲಿ ನನ್ನ ಜೀವನ ಆಗಿದೆ. ಬಿಫೋರ್ ಕಾಂತರಾ ಆಫ್ಟರ್ ಕಾಂತಾರ ಎಂಬಂತಾಗಿದೆ. ಕನ್ನಡ ಚಿತ್ರರಂಗದಲ್ಲಿ ನನಗೆ ಬಹಳಷ್ಟು ಅವಕಾಶಗಳು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ- ನ್ಯಾಷನಲ್‌ ಅವಾರ್ಡ್‌ ಬಂದಿದ್ದಕ್ಕೆ ಯಶ್‌ ಸಂತಸ

  • ಯಶ್, ರಿಷಬ್ ಶೆಟ್ಟಿ ಒಟ್ಟಿಗೆ ನಟಿಸುತ್ತಾರಾ? ನಿರ್ಮಾಪಕ ಹೇಳಿದ್ದೇನು?

    ಯಶ್, ರಿಷಬ್ ಶೆಟ್ಟಿ ಒಟ್ಟಿಗೆ ನಟಿಸುತ್ತಾರಾ? ನಿರ್ಮಾಪಕ ಹೇಳಿದ್ದೇನು?

    ರಮಹಾಲಕ್ಷ್ಮಿ ಹಬ್ಬದಂದು (ಆ.16) ಹೊಂಬಾಳೆ ಸಂಸ್ಥೆ ಮುಡಿಗೆ 4 ರಾಷ್ಟ್ರೀಯ  ಪ್ರಶಸ್ತಿಗಳು ಸಿಕ್ಕಿದೆ. ಈ ಖುಷಿಯ ಸಂದರ್ಭದಲ್ಲಿ ಯಶ್ (Yash) ಮತ್ತು ರಿಷಬ್ ಶೆಟ್ಟಿ (Rishab Shetty) ಜೊತೆಯಾಗಿ ನಟಿಸುವ ಕುರಿತು ಪಬ್ಲಿಕ್‌ ಟಿವಿಗೆ ನಿರ್ಮಾಪಕ ವಿಜಯ್ ಕಿರಗಂದೂರ್‌ (Vijay Kirgandur) ಫಸ್ಟ್‌ ರಿಯಾಕ್ಷನ್‌ ಕೊಟ್ಟಿದ್ದಾರೆ. ಅವರಿಬ್ಬರೂ ಓಕೆ ಅಂದರೆ ನಾನು ನಿರ್ಮಾಣ ಮಾಡಲು ಸಿದ್ಧ ಎಂದಿದ್ದಾರೆ.

    ಮೊದಲಿಗೆ ಕನ್ನಡ ನಾಡಿನ ಜನತೆಗೆ ಧನ್ಯವಾದಗಳು. ರಾಷ್ಟ್ರ ಪ್ರಶಸ್ತಿ ಕರುನಾಡಿನ ಜನತೆಗೆ ಸೇರಬೇಕಾಗಿದೆ. ‘ಕಾಂತಾರ’ ಹೊಂಬಾಳೆ ಸಂಸ್ಥೆಯಲ್ಲಿ ಮೂಡಿ ಬಂದಿರುವ ಸಿನಿಮಾ. ಈ 4 ಪ್ರಶಸ್ತಿ ಬಂದಿರೋದ್ದಕ್ಕೆ ನಮಗೆ ತುಂಬಾ ಖುಷಿ ಆಗಿದೆ. ‘ಕೆಜಿಎಫ್’, ‘ಕಾಂತಾರ’ ಚಿತ್ರಗಳು ಎರಡರಲ್ಲೂ ತುಂಬಾ ಎಫರ್ಟ್ ಇತ್ತು. ವರಮಹಾಲಕ್ಷ್ಮಿ ಹಬ್ಬದ ದಿನ ಈ ಪ್ರಶಸ್ತಿ ಬಂದಿದೆ. ಮುಂದೆ ಇನ್ನೂ ಒಳ್ಳೆಯ ಸಿನಿಮಾ ಕೊಡ್ತೀವಿ ಎಂದು ವಿಜಯ್ ಕಿರಗಂದೂರ್ ಮಾತನಾಡಿದ್ದಾರೆ.

    ಈಗ ಪ್ರಶಸ್ತಿ ಬಂದ್ಮೇಲೆ ನಮಗೆ ಮತ್ತೆ ಜವಾಬ್ದಾರಿ ಹೆಚ್ಚಾಗಿದೆ. ‘ಕಾಂತಾರ’ ಲಾಸ್ಟ್ 20 ನಿಮಿಷ ರಿಷಬ್ ಶೆಟ್ಟಿ ತುಂಬಾ ಚೆನ್ನಾಗಿ ನಟಿಸಿದ್ದಾರೆ. ‘ಕಾಂತಾರ’ ಸಿನಿಮಾ ಪೂರ್ತಿ ಎಡಿಟ್ ಆದ್ಮೇಲೆ ನಮಗೆ ಆ ವೈಬ್ರೇಶನ್ ಗೊತ್ತಾಗಿದ್ದು, ಕಾಂತಾರ ಮೊದಲ ಭಾಗಕ್ಕಿಂತ ಎರಡನೇ ಭಾಗದಲ್ಲಿ ಜಾಸ್ತಿ ನಿರೀಕ್ಷೆ ಮಾಡಬಹುದು ಎಂದಿದ್ದಾರೆ ವಿಜಯ್. ‘ಕೆಜಿಎಫ್ 2′ ಸಿನಿಮಾ ಯಶ್ ಮತ್ತು ಪ್ರಶಾಂತ್ ನೀಲ್ ಕನಸಾಗಿತ್ತು. ಈಗ ಅವರಿಬ್ಬರ ಪ್ರಯತ್ನಕ್ಕೆ ಗೆಲುವಾಗಿದೆ. ಯಶ್ ಮತ್ತು ಪ್ರಶಾಂತ್ ಸಿನಿಮಾ ಯಾವ ರೀತಿ ಮಾಡಬೇಕು ಅಂತ ತುಂಬಾ ಮಾತಾಡಿಕೊಳ್ತಿದ್ದರು. ಇಂದು ಅವರಿಂದಲೇ `ಕೆಜಿಎಫ್ 2’ ಚಿತ್ರಕ್ಕೆ ಯಶಸ್ಸು ಸಿಕ್ಕಿದೆ. ಇದೊಂದು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.

    ಯಶ್ ಮತ್ತು ರಿಷಬ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಚಿತ್ರ ನಿರ್ಮಾಣ ಮಾಡುತ್ತೀರಾ ಎಂದು ಕೇಳಾದ ಪ್ರಶ್ನೆಗೆ, ಇದು ನಟರಿಗೆ ಬಿಟ್ಟ ವಿಚಾರವಾಗಿದೆ. ಅವರಿಬ್ಬರು ಓಕೆ ಅಂದರೆ, ನಾನು ನಿರ್ಮಾಪಕನಾಗಿ ನಾನು ರೆಡಿ ಇದ್ದೇನೆ. ಅವರಿಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರ ಮಾಡಿದ್ದರೆ ನಮಗೂ ಖುಷಿ ಎಂದು ಸಂತಸದಿಂದ ಎಂದು ಹೊಂಬಾಳೆ ಸಂಸ್ಥೆ ವಿಜಯ್ ಕಿರಗಂದೂರ್ ಮಾತನಾಡಿದ್ದಾರೆ.

    ಈ ವೇಳೆ, ‘ಕೆಜಿಎಫ್ 3’ ಮುಂದಿನ ದಿನಗಳಲ್ಲಿ ಬರುತ್ತದೆ. ಮುಂಬರುವ ದಿನಗಳಲ್ಲಿ ಜನರಿಗೆ ಏನು ಬೇಕು, ಆ ತರಹದ ಚಿತ್ರಗಳನ್ನ ನಮ್ಮ ಬ್ಯಾನರ್‌ನಲ್ಲಿ ಬರುತ್ತವೆ. ಕನ್ನಡ ಸಿನಿಮಾದಲ್ಲಿ ನಾವು ಎಲ್ಲಾ ಟೆಕ್ನಾಲಜಿ ಬಳಕೆ ಮಾಡಿಕೊಂಡಿದ್ದೀವಿ. ಅಂತರಾಷ್ಟ್ರೀಯಮಟ್ಟದಲ್ಲಿ ಮತ್ತೆ ಕನ್ನಡ ಚಿತ್ರರಂಗ ಹೋಗುತ್ತದೆ.

  • ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ- ನ್ಯಾಷನಲ್‌ ಅವಾರ್ಡ್‌ ಬಂದಿದ್ದಕ್ಕೆ ಯಶ್‌ ಸಂತಸ

    ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ- ನ್ಯಾಷನಲ್‌ ಅವಾರ್ಡ್‌ ಬಂದಿದ್ದಕ್ಕೆ ಯಶ್‌ ಸಂತಸ

    ನ್ಯಾಷನಲ್‌ ಸ್ಟಾರ್‌ ಯಶ್‌ ಅವರು ‘ಕೆಜಿಎಫ್ 2’ (KGF 2) ಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿ ಬಂದಿದ್ದಕ್ಕೆ, ಇದು ನಿಜಕ್ಕೂ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ ಎಂದು ಸಂಭ್ರಮಿಸಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.


    ‘ಕೆಜಿಎಫ್ 2’ (KGF 2) ಸಿನಿಮಾಗೆ ಎರಡು ನ್ಯಾಷನಲ್ ಅವಾರ್ಡ್ ಸಿಕ್ಕ ಹಿನ್ನೆಲೆ ಯಶ್ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿ, ಇದು ನಿಜಕ್ಕೂ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ ಎಂದಿದ್ದಾರೆ. ನಟ ರಿಷಬ್ ಶೆಟ್ಟಿ, ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ಪ್ರಶಾಂತ್ ನೀಲ್‌ಗೆ ಅಭಿನಂದನೆಗಳು. ‘ಕಾಂತಾರ’ (Kantara) ಹಾಗೂ ‘ಕೆಜಿಎಫ್ 2’ಗೆ ಪ್ರಶಸ್ತಿ ಬಂದಿರುವುದು ಅರ್ಹವಾದ ಮನ್ನಣೆಯಾಗಿದೆ ಎಂದು ಯಶ್ ಸಂತಸ ವ್ಯಕ್ತಪಡಿಸಿದ್ದಾರೆ.

    ಇನ್ನೂ ಹೊಂಬಾಳೆ ಸಂಸ್ಥೆ ನಿರ್ಮಾಣದ ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’, ಮತ್ತು ‘ಕಾಂತಾರ’ (Kantara) ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿಗೆ ಸಿಕ್ಕಿದೆ. ಜೊತೆಗೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ‘ಕೆಜಿಎಫ್ 2’ಗೆ ಸಿಕ್ಕಿದೆ.