Tag: 70ನೇ ರಾಷ್ಟ್ರೀಯ ಪ್ರಶಸ್ತಿ

  • 70th National Film Awards: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಮಿಥುನ್ ಚಕ್ರವರ್ತಿ

    70th National Film Awards: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಮಿಥುನ್ ಚಕ್ರವರ್ತಿ

    70ನೇ ರಾಷ್ಟ್ರ ಪ್ರಶಸ್ತಿ ಸಮಾರಂಭ ಇಂದು (ಅ.8) ದೆಹಲಿಯಲ್ಲಿ ನಡೆದಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಟಿಸುತ್ತಿರುವ ಹಿರಿಯ ನಟ ಮಿಥುನ್ ಚಕ್ರವರ್ತಿಗೆ (Mithun Chakraborty) ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ:70th National Film Awards: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

    ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಹಿರಿಯ ನಟ ಮಿಥುನ್ ಚಕ್ರವರ್ತಿ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇನ್ನೂ ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’ ಮತ್ತು ಈ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅದಷ್ಟೇ ಅಲ್ಲ, ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ `ಕೆಜಿಎಫ್ 2’ಗೆ ರಾಷ್ಟ್ರ ಪ್ರಶಸ್ತಿ ದಕ್ಕಿದೆ. ಚಿತ್ರದ ನಿರ್ಮಾಣ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.

    70ನೇ ರಾಷ್ಟ್ರ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಈ ಕೆಳಗಿನಂತಿದೆ:

    ಅತ್ಯುತ್ತಮ ನಟ- ರಿಷಬ್ ಶೆಟ್ಟಿ (ಕಾಂತಾರ)
    ಅತ್ಯುತ್ತಮ ನಟಿ – ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್
    ಅತ್ಯುತ್ತಮ ಚಲನಚಿತ್ರ- ಆಟಂ (ಮಲಯಾಳಂ)
    ಅತ್ಯುತ್ತಮ ಜನಪ್ರಿಯ ಚಿತ್ರ- ಕಾಂತಾರ (ಕನ್ನಡ)
    ಅತ್ಯುತ್ತಮ ನಿರ್ದೇಶಕ – ಸೂರಜ್ ಬರ್ಜಾತ್ಯ
    ಅತ್ಯುತ್ತಮ ಪೋಷಕ ನಟಿ – ನೀನಾ ಗುಪ್ತಾ
    ಅತ್ಯುತ್ತಮ ಪೋಷಕ ನಟ – ಪವನ್ ರಾಜ್ ಮಲ್ಹೋತ್ರಾ
    ಅತ್ಯುತ್ತಮ ಚೊಚ್ಚಲ ಚಿತ್ರ- ಫೌಜಾ, ಪ್ರಮೋದ್ ಕುಮಾರ್
    ಅತ್ಯುತ್ತಮ ತೆಲುಗು ಚಿತ್ರ – ಕಾರ್ತಿಕೇಯ 2
    ಅತ್ಯುತ್ತಮ ತಮಿಳು ಚಿತ್ರ – ಪೊನ್ನಿಯಿನ್ ಸೆಲ್ವನ್ -ಭಾಗ 1
    ಅತ್ಯುತ್ತಮ ಪಂಜಾಬಿ ಚಿತ್ರ – ಬಾಘಿ ದಿ ಧೀ
    ಅತ್ಯುತ್ತಮ ಒಡಿಯಾ ಚಿತ್ರ – ದಮನ್
    ಅತ್ಯುತ್ತಮ ಮಲಯಾಳಂ ಚಿತ್ರ – ಸೌದಿ ವೇಲಕ್ಕ ಸಿಸಿ 225/2009 (ತರುಣ್ ಮೂರ್ತಿ)
    ಅತ್ಯುತ್ತಮ ಮರಾಠಿ ಚಿತ್ರ – ವಾಲ್ವಿ
    ಅತ್ಯುತ್ತಮ ಕನ್ನಡ ಚಿತ್ರ – ಕೆಜಿಎಫ್ ಪಾರ್ಟ್ 2
    ಅತ್ಯುತ್ತಮ ಹಿಂದಿ ಚಿತ್ರ – ಗುಲ್‌ಮೊಹರ್
    ವಿಶೇಷ ಪ್ರಶಸ್ತಿ- ಗುಲ್‌ಮೊಹರ್‌ನಲ್ಲಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್‌ನಲ್ಲಿ ಸಂಜೋಯ್ ಸಲಿಲ್ ಚೌಧರಿ
    ಅತ್ಯುತ್ತಮ ಆ್ಯಕ್ಷನ್ ನಿರ್ದೇಶನ – ಕೆಜಿಎಫ್ ಚಾಪ್ಟರ್ 2 (ಅನ್ಬರಿವ್)
    ಅತ್ಯುತ್ತಮ ಸಾಹಿತ್ಯ – ಫೌಜಾ
    ಅತ್ಯುತ್ತಮ ಸಂಗೀತ ನಿರ್ದೇಶಕ – ಪ್ರೀತಮ್ (ಹಾಡುಗಳು), ಎ.ಆರ್.ರೆಹಮಾನ್ (ಹಿನ್ನೆಲೆ ಸಂಗೀತ)
    ಅತ್ಯುತ್ತಮ ಮೇಕಪ್ – ಅಪರಾಜಿತೋ
    ಅತ್ಯುತ್ತಮ ಕಾಸ್ಟ್ಯೂಮ್ – ನಿಕ್ಕಿ ಜೋಶಿ (ಕಛ್ ಎಕ್ಸ್ಪ್ರೆಸ್)
    ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ – ಅಪರಾಜಿತೋ
    ಅತ್ಯುತ್ತಮ ಸಂಕಲನ – ಆಟಂ
    ಅತ್ಯುತ್ತಮ ಸೌಂಡ್ ಡಿಸೈನ್ – ಪೊನ್ನಿಯಿನ್ ಸೆಲ್ವನ್ -ಪಾರ್ಟ್ 1
    ಅತ್ಯುತ್ತಮ ಚಿತ್ರಕಥೆ – ಆಟಂ
    ಅತ್ಯುತ್ತಮ ಸಂಭಾಷಣೆ – ಗುಲ್‌ಮೊಹರ್
    ಅತ್ಯುತ್ತಮ ಛಾಯಾಗ್ರಹಣ – ಪೊನ್ನಿಯಿನ್ ಸೆಲ್ವನ್ -ಭಾಗ 1
    ಅತ್ಯುತ್ತಮ ಗಾಯಕಿ- ಬಾಂಬೆ ಜಯಶ್ರೀ (ಚಾಯುಂ ವೆಲ್ಲಿ, ಸೌದಿ ವೆಲ್ಲಕ ಮಲಯಾಳಂ ಸಿನಿಮಾ)
    ಅತ್ಯುತ್ತಮ ಗಾಯಕ- ಅರಿಜಿತ್ ಸಿಂಗ್ (ಕೇಸರಿಯಾ ಸಾಂಗ್ ‘ಬ್ರಹ್ಮಾಸ್ತ್ರ’ ಸಿನಿಮಾ)

  • 70th National Film Awards: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

    70th National Film Awards: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

    70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ (70th National Film Awards) ಇಂದು (ಅ.8) ದೆಹಲಿಯಲ್ಲಿ ನಡೆದಿದೆ. ಕನ್ನಡದ ಪ್ರತಿಭೆಗಳಾದ ರಿಷಬ್ ಶೆಟ್ಟಿ, ನಿತ್ಯಾ ಮೆನನ್ ಅವರು ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್‌ನಿಂದ ಒಂದೇ ದಿನಕ್ಕೆ ಎಲಿಮಿನೇಟ್ ಆದ ಸ್ಪರ್ಧಿ

    ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’ (Kantara) ಮತ್ತು ಈ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ (Rishab Shetty) ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅದಷ್ಟೇ ಅಲ್ಲ, ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ‘ಕೆಜಿಎಫ್ 2’ಗೆ ರಾಷ್ಟ್ರ ಪ್ರಶಸ್ತಿ ದಕ್ಕಿದ್ದು, ಚಿತ್ರದ ನಿರ್ಮಾಣ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.

    ‘ಮಧ್ಯಂತರ’ ಸಿನಿಮಾಗಾಗಿ ಬೆಸ್ಟ್ ಡೆಬ್ಯೂ ನಿರ್ದೇಶಕ ಬಸ್ತಿ ದಿನೇಶ್ ಶೆಣೈ. ಅತ್ಯುತ್ತಮ ಸಂಕಲನಕ್ಕಾಗಿ ಸುರೇಶ್ ಅರಸ್‌ಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕನ್ನಡದ ನಟಿ ನಿತ್ಯಾ ಮೆನನ್‌ಗೆ ‘ತಿರುಚಿತ್ರಂಬಲಂ’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ.

    ಈ ವೇಳೆ, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಸುನೀಲ್ ಪುರಾಣಿಕ್, ಕರಣ್ ಜೋಹರ್, ನಿಖಿಲ್ ಸಿದ್ಧಾರ್ಥ್, ಅಯಾನ್ ಮುಖರ್ಜಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

  • ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ- ನಿತ್ಯಾ ಮೆನನ್ ಫಸ್ಟ್ ರಿಯಾಕ್ಷನ್

    ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ- ನಿತ್ಯಾ ಮೆನನ್ ಫಸ್ಟ್ ರಿಯಾಕ್ಷನ್

    ನ್ನಡದ ನಟಿ ನಿತ್ಯಾ ಮೆನನ್ (Nithya Menen) ಅವರು ತಮಿಳಿನ ‘ತಿರುಚಿತ್ರಂಬಲಂ’ (Thiruchitrambalam) ಎಂಬ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ (70th National Award) ಗೆದ್ದಿರುವುದಕ್ಕೆ ಇದೀಗ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಸಿಕ್ಕಿದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ. ಇದನ್ನೂ ಓದಿ:‘ಕೆಜಿಎಫ್ 2’ ನಿರ್ದೇಶಕನನ್ನು ಹಾಡಿ ಹೊಗಳಿದ ಪ್ರಭಾಸ್

    ರಾಷ್ಟ್ರ ಪ್ರಶಸ್ತಿ ಘೋಷಣೆ ಮಾಡಿರುವ ವಿಚಾರವೇ ನನಗೆ ಗೊತ್ತಿರಲಿಲ್ಲ. ನಾನು ಎಲ್ಲರಿಂದ ದೂರ ಇರಲು ಪ್ರಯತ್ನಿಸುತ್ತೇನೆ. ನನಗೆ ಅವಾರ್ಡ್ ಬರುತ್ತದೆ ಎಂದು ಊಹಿಸಿರಲಿಲ್ಲ. ನನಗೆ ಈ ವಿಚಾರ ಖುಷಿ ಕೊಟ್ಟಿದೆ ಎಂದು ನಿತ್ಯಾ ಮೆನನ್ ಸಂತಸ ಹಂಚಿಕೊಂಡಿದ್ದಾರೆ.

    ಅನೇಕರು ನನಗೆ ಕರೆ ಮಾಡಿ ಶುಭಕೋರಿದ್ದಾರೆ. ಅವರಿಗೆ ಅವಾರ್ಡ್ ಸಿಕ್ಕಿದೆ ಎಂಬ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ‘ತಿರುಚಿತ್ರಂಬಲಂ’ ಚಿತ್ರದಿಂದ ನನಗೆ ಅತ್ಯುತ್ತಮ ನಾಯಕಿ ಎಂದು ಅವಾರ್ಡ್ ಸಿಕ್ಕಿದ್ದು, ಹೆಮ್ಮೆ ತಂದಿದೆ. ನಾನು ಈ ಪ್ರಶಸ್ತಿಗೆ ಅರ್ಹ ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, 2022ರಲ್ಲಿ ತೆರೆಕಂಡ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿ ಧನುಷ್‌ಗೆ (Dhanush) ನಾಯಕಿಯಾಗಿ ನಿತ್ಯಾ ಮೆನನ್ ನಟಿಸಿದ್ದರು. ಮಿತ್ರನ್ ಆರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.

  • ಪ್ರಶಸ್ತಿಯನ್ನು ಪುನೀತ್‌ ರಾಜ್‌ಕುಮಾರ್‌, ದೈವಕ್ಕೆ, ದೈವ ನರ್ತಕರಿಗೆ ಅರ್ಪಣೆ ಮಾಡುತ್ತೇನೆ- ರಿಷಬ್ ಶೆಟ್ಟಿ

    ಪ್ರಶಸ್ತಿಯನ್ನು ಪುನೀತ್‌ ರಾಜ್‌ಕುಮಾರ್‌, ದೈವಕ್ಕೆ, ದೈವ ನರ್ತಕರಿಗೆ ಅರ್ಪಣೆ ಮಾಡುತ್ತೇನೆ- ರಿಷಬ್ ಶೆಟ್ಟಿ

    70ನೇ ರಾಷ್ಟ್ರೀಯ ಚಲನಚಿತ್ರ (70th National Award) ಪ್ರಶಸ್ತಿಗಳು ಘೋಷಣೆ ಆಗಿದ್ದು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ (Rishab Shetty) ಅತ್ಯುತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್, ದೈವಕ್ಕೆ, ದೈವನರ್ತಕರಿಗೆ ಅರ್ಪಣೆ ಮಾಡುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:70th National Award 2024: ‘ಕಾಂತಾರ’ ಮುಡಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ

    ಮೊದಲಿನಿಂದ ನಾನು ಹೇಳಿಕೊಂಡು ಬಂದಿದ್ದೆ, ಈ ಪ್ರಶಸ್ತಿಯನ್ನ ಪುನೀತ್ ರಾಜ್‌ಕುಮಾರ್, ಕನ್ನಡದ ಜನರಿಗೆ ಮತ್ತು ದೈವನರ್ತಕರಿಗೆ ಅರ್ಪಣೆ ಮಾಡುತ್ತೇನೆ. ಹಾಗೆಯೇ ಹೊಂಬಾಳೆ ಸಂಸ್ಥೆಯ ‘ಕಾಂತಾರ’ ಚಿತ್ರ (Kantara Film) ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಹೊಂಬಾಳೆ ನಿರ್ಮಾಣ ಸಂಸ್ಥೆಗೆ 4 ಪ್ರಶಸ್ತಿಗಳು ಬಂದಿದೆ ಎಂದು ರಿಷಬ್ ಮಾತನಾಡಿದ್ದಾರೆ.

    ನಾನು ಸಹ ಅನೌನ್ಸ್‌ಮೆಂಟ್ ಮಾಡ್ತಿದ್ದನ್ನು ನೋಡುತ್ತಿದ್ದೆ, ಪ್ರಶಸ್ತಿ ಘೋಷಣೆ ಮಾಡಿದಾಗ ಖುಷಿಯಾಯಿತು. ಕನ್ನಡ ಚಿತ್ರರಂಗವು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ. ಹಾಗಾಗಿಯೇ ಇಂದು ಈ ಪ್ರಶಸ್ತಿ ಬಂದಿರೋದು. ಇಡೀ ಚಿತ್ರತಂಡದ ಎಲ್ಲ ಸದಸ್ಯರಿಗೆ ನಾನು ಥ್ಯಾಂಕ್ಸ್ ಹೇಳಬೇಕು. ಡಿಓಪಿಯಾಗಿ ಕೆಲಸ ಮಾಡಿದವರು ಮತ್ತು ಪತ್ನಿ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್‌ ಡಿಸೈನರ್ ಆಗಿದ್ದರು. ಈ ಸಕ್ಸಸ್‌ಗೆ ಅಜಿನೀಶ್ ಲೋಕನಾಥ್ ಸಂಗೀತ ಕೂಡ ಬಹಳ ಮುಖ್ಯವಾಗಿತ್ತು. ಸಿನಿಮಾದ ಎಲ್ಲಾ ನಟ- ನಟಿಯರಿಗೂ, ತಾಂತ್ರಿಕ ವರ್ಗಕ್ಕೂ ಮತ್ತು ಸಿನಿಮಾ ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ ಎಂದು ರಿಷಬ್ ಶೆಟ್ಟಿ ಮಾತನಾಡಿದ್ದಾರೆ.

    ಜನ ಸಿನಿಮಾ ಮೆಚ್ಚಿದಾಗಲೇ ಜವಾಬ್ದಾರಿ ನಮಗೆ ಹೆಚ್ಚಾಗುತ್ತದೆ. ಪ್ರಶಸ್ತಿ ಬಂದಾಗ ಇನ್ನೂ ಹೆಚ್ಚಾಗುತ್ತದೆ. ನನಗೆ ಅವಾರ್ಡ್ ಬಂದಾಗ ಮೊದಲು ವಿಶ್ ಮಾಡಿದ್ದೆ ಪತ್ನಿ ಪ್ರಗತಿ, ತುಂಬಾ ಖುಷಿಯಾಗಿದ್ದಾರೆ. ಯಶ್ ಸರ್ ಕೂಡ ಕಾಲ್ ಮಾಡಿ ವಿಶ್ ಮಾಡಿದರು. ಮಗಳು ಬಂದಾಗ ಲಕ್ಷ್ಮಿ ಬಂದಿದ್ದಳು ಅಂತ ಎಲ್ಲರೂ ಹೇಳಿದರು. ಈಗ ವರಮಹಾಲಕ್ಷ್ಮಿ ಹಬ್ಬಕ್ಕೆ ಖುಷಿ ಡಬಲ್ ಆಗಿದೆ ಎಂದಿದ್ದಾರೆ.

    ಇನ್ನೂ ಹೊಂಬಾಳೆ ಸಂಸ್ಥೆ ನಿರ್ಮಾಣದ ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’, ಮತ್ತು ‘ಕಾಂತಾರ’ (Kantara) ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿಗೆ ಸಿಕ್ಕಿದೆ. ಜೊತೆಗೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ‘ಕೆಜಿಎಫ್ 2’ಗೆ (KGF 2) ಸಿಕ್ಕಿದೆ.