Tag: 5G

  • 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    ನವದೆಹಲಿ: ಭಾರತವು 5G ಮೊಬೈಲ್‌ ನೆಟ್‌ವರ್ಕ್‌ ಪ್ರಾರಂಭಕ್ಕೆ ಉತ್ಸುಕವಾಗಿದೆ. 5G ನೆಟ್‌ವರ್ಕ್‌ ಹೇಗೆ ಕೆಲಸ ಮಾಡುತ್ತದೆ, 4Gಗಿಂತ ಹೇಗೆ ಭಿನ್ನ, ತಾಂತ್ರಿಕ ಹಾಗೂ ವ್ಯವಹಾರ ಕ್ಷೇತ್ರದ ಇದರ ಪರಿಣಾಮ ಹೇಗಿರುತ್ತದೆ ಎಂಬ ಬಗ್ಗೆ ಗ್ರಾಹಕರಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    5G ಮತ್ತು 4G ವೇಗದ ವ್ಯತ್ಯಾಸ:
    5G ಹೆಚ್ಚು ವೇಗದಿಂದ ಕೂಡಿದೆ. ಡೌನ್‌ಲೋಡ್‌ಗಳು ಪ್ರತಿ ಸೆಕೆಂಡಿಗೆ 10 GB (ಗಿಗಾಬೈಟ್) ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದೆ. TRAI ಪ್ರಕಾರ ಭಾರತದಲ್ಲಿ 4G ಬಳಕೆದಾರರಿಗೆ ಪ್ರಸ್ತುತ ಸರಾಸರಿ ಡೌನ್‌ಲೋಡ್ ವೇಗಕ್ಕಿಂತ 5G 30 ಪಟ್ಟು ವೇಗವಾಗಿದೆ. ಇದು ಸುಮಾರು 21 Mbps (ಸೆಕೆಂಡಿಗೆ ಮೆಗಾಬೈಟ್‌) ಸರಾಸರಿ ವೇಗ ಹೊಂದಿದೆ.

    5G ಇಂಟರ್ನೆಟ್ ಅನ್ನು ಬಳಸಿಕೊಂಡು 5 GB ಚಲನಚಿತ್ರವನ್ನು 35 ಸೆಕೆಂಡುಗಳಲ್ಲಿ (4Gಯಲ್ಲಿ 40 ನಿಮಿಷ ಆಗುತ್ತದೆ) ಡೌನ್‌ಲೋಡ್ ಮಾಡಬಹುದು. 3G ಯಲ್ಲಿ 2 ಗಂಟೆ ಬೇಕಾಗುತ್ತದೆ. 2G ಯಲ್ಲಿ 2.8 ದಿನಗಳ ಸಮಯ ಹಿಡಿಯುತ್ತದೆ.

    5Gಯಿಂದ ಏನನ್ನು ನಿರೀಕ್ಷಿಸಬಹುದು?
    ಉತ್ತಮ ವೇಗದಲ್ಲಿ 4K ಗುಣಮಟ್ಟದ ಲೈವ್ ವೀಡಿಯೊ ಪ್ರಸಾರ, ಉತ್ತಮ ಮತ್ತು ಗುಣಮಟ್ಟದ ವೀಡಿಯೊ ಕರೆಗಳು, ಮಲ್ಟಿಮೀಡಿಯಾ ಸಂವಹನ, ವೀಡಿಯೋ ಗೇಮ್‌ ಆಡುವಾಗ ನೆಟ್‌ವರ್ಕ್‌ನಲ್ಲಿ ಹೆಚ್ಚಿನ ಸಮಸ್ಯೆ ಕಾಣಿಸುವುದಿಲ್ಲ. ಇದನ್ನೂ ಓದಿ: 5ಜಿ ಹರಾಜು – ಮೊದಲ ದಿನವೇ 1.45 ಲಕ್ಷ ಕೋಟಿ ಮೀರಿದ ಬಿಡ್ ಮೊತ್ತ

    ಉದ್ಯಮದ ಮೇಲೆ 5G ಪರಿಣಾಮ ಏನು?
    5G ರೋಲ್‌ಔಟ್ ರಿಮೋಟ್ ಡೇಟಾ ಮಾನಿಟರಿಂಗ್ ಮತ್ತು ಟೆಲಿಮೆಡಿಸಿನ್‌ನಲ್ಲಿ ಹೆಚ್ಚಿನ ಅಭಿವೃದ್ಧಿ ತರುವ ನಿರೀಕ್ಷೆಯಿದೆ. ನಿರ್ದಿಷ್ಟವಾಗಿ, ರಿಮೋಟ್ ಸರ್ಜರಿಗಳು ಮತ್ತು ರಿಮೋಟ್ ಸೆನ್ಸಿಂಗ್ ಸ್ಟೇಷನ್‌ಗಳ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುವಾಗ ಸಹಾಯಕವಾಗಿರುತ್ತದೆ.

    5G ನೆಟ್‌ವರ್ಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆಯೇ?
    5Gಯಿಂದ ಗ್ರಾಹಕರಿಗೆ ದೊಡ್ಡ ಪ್ರಯೋಜನವೆಂದರೆ ಉತ್ತಮ ನೆಟ್‌ವರ್ಕ್ ನಿರ್ವಹಣೆ. ಹೆಚ್ಚಿನ ವೇಗದ ನೆಟ್‌ವರ್ಕ್ ಸ್ವಭಾವತಃ ಹೆಚ್ಚು ಪರಿಣಾಮಕಾರಿಯಾಗಿದೆ. ಮೂರು ವಿಭಿನ್ನ ಬ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. 100MHz ಲೋವ್‌ ಬ್ಯಾಂಡ್, 2.3GHz ಮಿಡ್-ಬ್ಯಾಂಡ್ ಮತ್ತು ಹೈ ಬ್ಯಾಂಡ್. ಮಿಡ್-ಬ್ಯಾಂಡ್ ಆವರ್ತನಗಳು ಕವರೇಜ್ ಮತ್ತು ವೇಗದ ಅತ್ಯುತ್ತಮ ಸಮತೋಲನವನ್ನು ನೀಡುತ್ತವೆ. ಇದು ಬಳಕೆದಾರರಿಗೆ ಹೆಚ್ಚಿನ ಸ್ಪೆಕ್ಟ್ರಮ್ ಅನ್ನು ಮುಕ್ತಗೊಳಿಸುತ್ತದೆ. ಹೆಚ್ಚಿನ ಜನಸಂದಣಿ ಮತ್ತು ಕ್ರೀಡಾಂಗಣಗಳಲ್ಲಿಯೂ ಸಹ ಬಳಕೆದಾರರು ಉತ್ತಮ ನೆಟ್‌ವರ್ಕ್ ಸಂಪರ್ಕವನ್ನು ಹೊಂದಿದ್ದಾರೆ ಎಂಬುದನ್ನು ಇದು ಖಚಿತಪಡಿಸುತ್ತದೆ. ಇದನ್ನೂ ಓದಿ: 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    5G ಪ್ರಾರಂಭವಾದ ನಂತರ ಹೆಚ್ಚಿನ ಬಳಕೆದಾರರಿಗೆ ಸಿಗುವ ಪ್ರಯೋಜನಗಳೆಂದರೆ, ವೇಗ ಮತ್ತು ಉತ್ತಮ ನೆಟ್‌ವರ್ಕ್‌ ಸಂಪರ್ಕ. ಇದು ಮುಂದಿನ ಪೀಳಿಗೆಯ ನೆಟ್‌ವರ್ಕ್ ಕಂಪ್ಯೂಟಿಂಗ್‌ನ ಭವಿಷ್ಯದ ಬೆನ್ನೆಲುಬಾಗಿ ರೂಪುಗೊಳ್ಳುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ನಿಜವಾದ ಅನುಕೂಲತೆಯ ಪರಿಣಾಮ ಗೋಚರಿಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • 5ಜಿ ಹರಾಜು – ಮೊದಲ ದಿನವೇ 1.45 ಲಕ್ಷ ಕೋಟಿ ಮೀರಿದ ಬಿಡ್ ಮೊತ್ತ

    5ಜಿ ಹರಾಜು – ಮೊದಲ ದಿನವೇ 1.45 ಲಕ್ಷ ಕೋಟಿ ಮೀರಿದ ಬಿಡ್ ಮೊತ್ತ

    ನವದೆಹಲಿ: ಭಾರತದ ಅತ್ಯಂತ ವೇಗದ 5ಜಿ ನೆಟ್‌ವರ್ಕ್ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಮಂಗಳವಾರ ಪ್ರಾರಂಭವಾಗಿದೆ. ಮೊದಲ ದಿನವೇ ಹರಾಜಿನ 4 ಸುತ್ತುಗಳಲ್ಲಿ ಬಿಡ್ ಮೊತ್ತ 1.45 ಲಕ್ಷ ಕೋಟಿ ರೂ. ಮೀರಿದೆ.

    ಇಂದು 5ಜಿ ಹರಾಜಿನ ಮೊದಲ ದಿನವಾಗಿದ್ದು, 4 ಸುತ್ತುಗಳ ಕೊನೆಯಲ್ಲಿ ಬಿಡ್ ಮೊತ್ತ 1.45 ಲಕ್ಷ ಕೋಟಿ ರೂ. ಮೀರಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದನ್ನೂ ಓದಿ: 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    ಹರಾಜು ಪ್ರಕ್ರಿಯೆಯಲ್ಲಿ ಅದಾನಿ ಎಂಟರ್‌ಪ್ರೈಸಸ್, ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಹಾಗೂ ವಿ(ವೊಡಾಫೋನ್ ಐಡಿಯಾ) ಕಂಪನಿಗಳು ಭಾಗವಹಿಸಿವೆ. 5ನೇ ಸುತ್ತಿನ ಹರಾಜು ಬುಧವಾರ ನಡೆಯಲಿದೆ. ಇದನ್ನೂ ಓದಿ: ಭಾರತದಲ್ಲೇ ಮೊದಲು – ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ

    ಇಂದು ಪ್ರಾರಂಭವಾದ ಹರಾಜು ಪ್ರಕ್ರಿಯೆ ಆಗಸ್ಟ್ 1 ರೊಳಗೆ ಪೂರ್ಣಗೊಳಿಸಲು ಕೇಂದ್ರ ಆದೇಶಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆಗಳನ್ನು ನಾವು ನಿರೀಕ್ಷಿಸಬಹುದು ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    ನವದೆಹಲಿ: ಭಾರತದ ಅತೀ ದೊಡ್ಡ 5ಜಿ ಸ್ಪೆಕ್ಟ್ರಂ ಹರಾಜು ಮಂಗಳವಾರದಿಂದ ಆರಂಭವಾಗಲಿದ್ದು, ಇದಕ್ಕಾಗಿ ಈಗಾಗಲೇ ಕ್ಷಣಗಣನೆ ನಡೆಯುತ್ತಿದೆ. ಟೆಲಿಕಾಂ ಕಂಪನಿಗಳು ಈ ಹರಾಜಿನಲ್ಲಿ ಭಾಗವಹಿಸಲು ತಯಾರಾಗಿ ನಿಂತಿವೆ. ಆದರೆ ಈ 5ಜಿ ಯುಗದ ಉಪಯೋಗವೆಷ್ಟು ಎಂಬ ಬಗ್ಗೆ ಪ್ರತಿಯೊಬ್ಬ ಇಂಟರ್‌ನೆಟ್ ಬಳಕೆದಾರ ತಿಳಿದುಕೊಳ್ಳುವುದು ಅತ್ಯಗತ್ಯ.

    ಸರ್ಕಾರ ಹಾಗೂ ವಿವಿಧ ಉದ್ಯಮಗಳ ಪ್ರಕಾರ 5ಜಿ ನೆಟ್‌ವರ್ಕ್ ಕಳೆದ 4ಜಿ ನೆಟ್‌ವರ್ಕ್‌ಗಿಂತಲೂ 10 ಪಟ್ಟು ಹಾಗೂ 3ಜಿ ಗಿಂತಲೂ 30 ಪಟ್ಟು ಹೆಚ್ಚು ವೇಗವಾಗಿರುತ್ತದೆ. ಇದು ಇಲ್ಲಿಯವರೆಗೆ ಯಾವುದೇ ನೆಟ್‌ವರ್ಕ್ ನೀಡದ ಹಾಗೂ ಸಮಯ ವ್ಯರ್ಥವಾಗಿಸದ ಅತ್ಯುತ್ತಮ ಅನುಭವ ನೀಡಲಿದೆ.

    5G

    ಉಳಿದವುಗಳಿಗಿಂತ 5ಜಿ ಎಷ್ಟು ಸ್ಪೀಡ್?
    2ಜಿ ನೆಟ್‌ವರ್ಕ್‌ನಲ್ಲಿ ಒಂದು ವೀಡಿಯೋ ಡೌನ್‌ಲೋಡ್ ಆಗಲು 2.8 ದಿನವನ್ನೇ ತೆಗೆದುಕೊಂಡರೆ ಅದೇ ವೀಡಿಯೋ 3ಜಿಯಲ್ಲಿ ಡೌನ್‌ಲೋಡ್ ಆಗಲು 2 ಗಂಟೆ ಬೇಕಾಗುತ್ತದೆ. ಆ ವೀಡಿಯೋ 4ಜಿಯಲ್ಲಿ 40 ನಿಮಿಷದಲ್ಲಿ ಡೌನ್‌ಲೋಡ್ ಆದರೆ 5ಜಿಯಲ್ಲಿ ಕೇವಲ 35 ಸೆಕೆಂಡ್‌ನಲ್ಲಿ ಡೌನ್‌ಲೋಡ್ ಆಗುತ್ತದೆ. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಿಸಲು ಕ್ರಮ – ಸರ್ಕಾರದಿಂದಲೇ ಯುವಕ, ಯುವತಿಯರಿಗೆ ಆನ್‌ಲೈನ್ ಡೇಟಿಂಗ್ ವ್ಯವಸ್ಥೆ

    ಕೆಲವು ವರ್ಷಗಳಿಂದ ಮೊಬೈಲ್ ಫೋನ್‌ಗಳಲ್ಲಿ ವೀಡಿಯೋ ಕ್ವಾಲಿಟಿಗಳು ಹೆಚ್ಚುತ್ತಿದ್ದು, ಇದರಿಂದ 4ಜಿ ನೆಟ್‌ವರ್ಕ್ ಕೂಡಾ ಬಫರಿಂಗ್ ಆಗುತ್ತಿರುವುದು ಸಾಮಾನ್ಯವಾಗುತ್ತಿದೆ. 5ಜಿ ತಂತ್ರಜ್ಞಾನದಿಂದ ವೀಡಿಯೋ ಸ್ಟ್ರೀಮಿಂಗ್‌ನ ವೇಗ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಇದರೊಂದಿಗೆ ವರ್ಚುವಲ್ ರಿಯಾಲಿಟಿ ವೀಡಿಯೋಗಳನ್ನೂ ವೀಕ್ಷಿಸಲು ಸಹಾಯವಾಗಲಿದೆ ಎಂದು ಅಧ್ಯಯನಗಳು ತಿಳಿಸಿವೆ.

    ಜುಲೈ 26 ರಂದು 5ಜಿ ಸ್ಪೆಕ್ಟ್ರಂ ಹರಾಜು ಪ್ರಾರಂಭವಾಗಲಿದ್ದು, ಜುಲೈ ಅಂತ್ಯದಲ್ಲಿ ಮುಕ್ತಾಯವಾಗಲಿದೆ. ಈ ವರ್ಷದ ಸೆಪ್ಟೆಂಬರ್ ವೇಳೆಗೆ ರೋಲ್‌ಔಟ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ವಯಸ್ಸಿನ ಮಿತಿಯಿಂದಾಗಿ 33 ಲಕ್ಷ ಪ್ಯಾಕೇಜ್‌ನ ಅಮೆರಿಕದ ಉದ್ಯೋಗ ಕಳೆದುಕೊಂಡ 15ರ ಬಾಲಕ

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲೇ ಮೊದಲು – ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ

    ಭಾರತದಲ್ಲೇ ಮೊದಲು – ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ

    ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್)ದ ಪೈಲಟ್ ಪ್ರಾಜೆಕ್ಟ್‌ನ ಅಡಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ 5ಜಿ ನೆಟ್‌ವರ್ಕ್ ಅನ್ನು ಪರೀಕ್ಷಿಸಿದೆ. ಈ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮ ದೇಶದಲ್ಲೇ 5ಜಿ ನೆಟ್‌ವರ್ಕ್ ಪರೀಕ್ಷಿಸಿದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಹೌದು, ಬೆಂಗಳೂರಿನ ನಮ್ಮ ಮೆಟ್ರೋ 5ಜಿ ನೆಟ್‌ವರ್ಕ್ ಅನ್ನು ಪರೀಕ್ಷಿಸಿದೆ. ನಮ್ಮ ಮೆಟ್ರೋ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಇದು 4ಜಿ ನೆಟ್‌ವರ್ಕ್‌ಗಿಂತಲೂ 50 ಪಟ್ಟು ವೇಗದ ಇಂಟರ್‌ನೆಟ್ ಒದಗಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ದೇಶದಲ್ಲಿ ಮಂಕಿಪಾಕ್ಸ್ ಭೀತಿ – ಆತಂಕ ಹೆಚ್ಚಿಸಿದ ಆಫ್ರಿಕನ್ ಹಂದಿಜ್ವರ

    ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ಬೆಂಗಳೂರಿನ ಎಂಜಿ ರೋಡ್ ನಿಲ್ದಾಣದಲ್ಲಿ 200 ಮೀ. ವ್ಯಾಪ್ತಿಯಲ್ಲಿ 5ಜಿ ನೆಟ್‌ವರ್ಕ್ ಅನ್ನು ಸ್ಥಾಪಿಸಿದೆ. ಪರೀಕ್ಷೆಯಲ್ಲಿ 1.45 ಜಿಬಿಪಿಎಸ್(ಗಿಗಾಬಿಟ್ ಪರ್ ಸೆಕೆಂಡ್) ಡೌನ್‌ಲೋಡ್ ಹಾಗೂ 65 ಎಂಬಿಪಿಎಸ್(ಮೆಗಾಬಿಟ್ಸ್ ಪರ್ ಸೆಕೆಂಡ್) ಅಪ್‌ಲೋಡ್ ವೇಗವನ್ನು ಸಾಧಿಸಿದ್ದು, ಇದು 4ಜಿ ನೆಟ್‌ವರ್ಕ್‌ಗಿಂತಲೂ 50 ಪಟ್ಟು ವೇಗದ ಇಂಟರ್‌ನೆಟ್ ಒದಗಿಸಿದೆ ಎಂದು ನಮ್ಮ ಮೆಟ್ರೋ ಟ್ವೀಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ವೈದ್ಯಕೀಯ ಪರೀಕ್ಷೆ ನಡೆಸದೇ ಅಂಗವಿಕಲರ ವಿಮಾನ ಪ್ರಯಾಣವನ್ನು ರದ್ದುಗೊಳಿಸುವಂತಿಲ್ಲ: ಡಿಜಿಸಿಎ

    Live Tv
    [brid partner=56869869 player=32851 video=960834 autoplay=true]

  • 5ಜಿ ನೆಟ್‌ ಭಾರತದಲ್ಲಿ ಬೆಲೆ ಎಷ್ಟಿರಬಹುದು?

    5ಜಿ ನೆಟ್‌ ಭಾರತದಲ್ಲಿ ಬೆಲೆ ಎಷ್ಟಿರಬಹುದು?

    ನವದೆಹಲಿ: ಶೀಘ್ರವೇ 5ಜಿ ಸ್ಪೆಕ್ಟ್ರಂ ಹರಾಜು ನಡೆಯಲಿರುವ ಕಾರಣ 5ಜಿ ನೆಟ್‌ ಬೆಲೆ ಎಷ್ಟಿರಬಹುದು ಎಂಬ ಪ್ರಶ್ನೆ ಏಳುವುದು ಸಹಜ.

    4ಜಿ ಸ್ಪೀಡ್‌ಗಿಂತ 5ಜಿ ಯಲ್ಲಿ ವೇಗ ಹೆಚ್ಚಿರುವ ಕಾರಣ ನಿರೀಕ್ಷೆಯಂತೆ ಬೆಲೆ ಹೆಚ್ಚಿರಲಿದೆ. ಈಗಿನ ಬೆಲೆಗೆ ಹೋಲಿಸಿದರೆ ಶೇ.10 – 20 ರಷ್ಟು ಬೆಲೆ ಹೆಚ್ಚಳವಾಗಬಹುದು ಎಂದು ಈ ಕ್ಷೇತ್ರದ ತಜ್ಞರು ತಿಳಿಸಿದ್ದಾರೆ.

    ಡೇಟಾ ಬೆಲೆ ಏರಿಕೆಯಂತೆ 5 ಜಿ ಫೋನ್‌ ಬೆಲೆಯೂ ಏರಿಕೆಯಾಗಲಿದೆ. ಕಡಿಮೆ ಬೆಲೆಯ ಗುಣಮಟ್ಟದ 5ಜಿ ಫೋನುಗಳು 15 ಸಾವಿರ – 20 ಸಾವಿ ರೂ. ಒಳಗಡೆ ಇರಬಹುದು ಎಂದು ಮಾಧ್ಯಮ ವರದಿ ಮಾಡಿದೆ.

    ಆರಂಭಿಕ ಹಂತದಲ್ಲಿ 5ಜಿ ನೆಟ್‌ವರ್ಕ್‌ ನಗರ ಪ್ರದೇಶದಲ್ಲಿ ಲಭ್ಯವಾಗಲಿದೆ. ಹಂತ ಹಂತವಾಗಿ ಉಳಿದ ಭಾಗದಲ್ಲಿ ನೆಟ್‌ವರ್ಕ್‌ ನೀಡಲು ಟೆಲಿಕಾಂ ಕಂಪನಿಗಳು ಮುಂದಾಗಿವೆ. ಇದನ್ನೂ ಓದಿ: ಯುಪಿ ಸರ್ಕಾರಕ್ಕೆ 600 ಕೋಟಿ ಆಸ್ತಿ ದಾನ ಮಾಡಿದ ವೈದ್ಯ

    ಆದರೆ ಟೆಲಿಕಾಂ ಕಂಪನಿಗಳ ಮೂಲಗಳು ದರ ಹೆಚ್ಚಳ ಇರವುದಿಲ್ಲ ಎಂದು ಹೇಳಿವೆ. ಆರಂಭದಲ್ಲಿ 4ಜಿಯಷ್ಟೇ ದರ ಇರಲಿದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರು 5ಜಿಗೆ ಸೇರ್ಪಡೆಯಾದ ಬಳಿಕ ದರ ಹೆಚ್ಚಾಗಬಹುದು ಎಂದು ಎಂದು ಹೇಳಿವೆ.

    ವಿಶ್ವದ ಮಾರುಕಟ್ಟೆಗೆ ಹೋಲಿಸಿದರೆ ಭಾರತ ದರ ಅಗ್ಗವಿರಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಭಾರತದಲ್ಲಿ ಟೆಲಿಕಾಂ ಕಂಪನಿಗಳು 4ಜಿ/3ಜಿ ವೇಗದ ಇಂಟರ್‌ನೆಟ್‌ ಸೇವೆಯನ್ನು ನೀಡುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಟೆಲಿಕಾಂ ಸ್ಪೆಕ್ಟ್ರಂ ರೇಸ್‌ಗೆ ಇಳಿಯಲು ಮುಂದಾದ ಅದಾನಿ ಗ್ರೂಪ್

    ಟೆಲಿಕಾಂ ಸ್ಪೆಕ್ಟ್ರಂ ರೇಸ್‌ಗೆ ಇಳಿಯಲು ಮುಂದಾದ ಅದಾನಿ ಗ್ರೂಪ್

    ನವದೆಹಲಿ: ಸರ್ಕಾರದ ಮುಂಬರುವ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಶುಕ್ರವಾರ ಆಸಕ್ತಿ ತೋರಿರುವ 4 ಮುಖ್ಯ ಕಂಪನಿಗಳಲ್ಲಿ ಅದಾನಿ ಗ್ರೂಪ್ ಕೂಡಾ ಒಂದು ಎಂದು ಹೇಳಲಾಗುತ್ತಿದೆ.

    ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಸ್ಪೆಕ್ಟ್ರಂ ಹರಾಜಿನಲ್ಲಿ ಭಾಗವಹಿಸಿದ್ದೇ ಆದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ, ಸುನಿಲ್ ಮಿತ್ತಲ್‌ರ ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಲಿಮಿಟೆಡ್‌ನಂತಹ ಮುಖ್ಯ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲಿದೆ.

     

    ಟೆಲಿಕಾಂ ಇಲಾಖೆ ಶೀಘ್ರವೇ ಅತ್ಯಂತ ವೇಗದ ಇಂಟರ್‌ನೆಟ್ ಒದಗಿಸುವ 5ಜಿ ಸ್ಪೆಕ್ಟ್ರಂ ಹರಾಜನ್ನು ನಡೆಸಲಿದ್ದು, ಅದಾನಿ ಗ್ರೂಪ್ ಸ್ಪೆಕ್ಟ್ರಂ ರೇಸ್‌ಗೆ ಪ್ರವೇಶಿಸಲು ಆಸಕ್ತಿ ಹೊಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ಬಗ್ಗೆ ಅದಾನಿ ಗ್ರೂಪ್ ವಕ್ತಾರರು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇದನ್ನೂ ಓದಿ: ಟ್ವಿಟ್ಟರ್‌ ಖರೀದಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಮಸ್ಕ್‌

    ಸ್ಪೆಕ್ಟ್ರಂ ಹರಾಜಿಗೆ 4 ಕಂಪನಿಗಳು ಜುಲೈ 12ರ ಒಳಗಾಗಿ ತಮ್ಮ ಮಾಲೀಕತ್ವದ ವಿವರಗಳನ್ನು ಒದಗಿಸಬೇಕಿದೆ. ಬಳಿಕ ಬಿಡ್ ಕಂಪನಿಗಳ ಪೂರ್ವ ಅರ್ಹತೆಯನ್ನು ನೋಡಲಾಗುತ್ತದೆ. ಜುಲೈ 19ರ ಒಳಗೆ ಕಂಪನಿಗಳು ಅರ್ಜಿಗಳನ್ನು ಹಿಂತೆಗೆದುಕೊಳ್ಳುವ ಅವಕಾಶವನ್ನೂ ಹೊಂದಿರುತ್ತದೆ. ಜುಲೈ 20ರಂದು ಬಿಡ್ ಕಂಪನಿಗಳ ಹೆಸರನ್ನು. ಜುಲೈ 27 ರಿಂದ ಹರಾಜು ಪ್ರಾರಂಭವಾಗುವ ನಿರೀಕ್ಷೆಯಿದೆ.

    ಇಲ್ಲಿಯವರೆಗೆ ದೇಶದ ಶ್ರೀಮಂತ ವ್ಯಕ್ತಿಗಳಾದ ಅದಾನಿ ಮತ್ತು ಮುಕೇಶ್ ಅಂಬಾನಿ ನೇರವಾಗಿ ಪೈಪೋಟಿಗೆ ಇಳಿದಿರಲಿಲ್ಲ. ಆದಾನಿ ಪೋರ್ಟ್, ಕಲ್ಲಿದ್ದಲು, ವಿಮಾನ ನಿಲ್ದಾಣ ಇತ್ಯಾದಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದರೆ, ರಿಲಯನ್ಸ್ ಪೆಟ್ರೋಲಿಯಂ, ಟೆಲಿಕಾಂ, ಮಾಧ್ಯಮ ಇತ್ಯಾದಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲಿ 2023ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದ 5G ಸೇವೆ: ಕೇಂದ್ರ ಸಚಿವ

    ದೇಶದಲ್ಲಿ 2023ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದ 5G ಸೇವೆ: ಕೇಂದ್ರ ಸಚಿವ

    ನವದೆಹಲಿ: ಭಾರತವು 2023ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದ 5ಜಿ ಸೇವೆಗಳನ್ನು ಪಡೆಯಲಿದೆ ಎಂದು ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

    ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು 5ಜಿ ಸ್ಪೆಕ್ಟ್ರಮ್ ಹರಾಜು ಜುಲೈ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದ ಅವರು ಟೆಲಿಕಾಂ ಡಿಜಿಟಲ್ ಬಳಕೆಯ ಪ್ರಾಥಮಿಕ ಮೂಲವಾಗಿದೆ. ಟೆಲಿಕಾಂನಲ್ಲಿ ವಿಶ್ವಾಸಾರ್ಹ ಪರಿಹಾರವನ್ನು ತರಲು ಇದು ಬಹಳ ಮುಖ್ಯವಾಗಿದೆ ಎಂದರು.

    5G

    ಭಾರತವು ತನ್ನದೇ ಆದ 4ಜಿ ಸ್ಟಾಕ್‍ಗಳಾದ ರೇಡಿಯೋ ಉಪಕರಣಗಳು ಮತ್ತು ಹ್ಯಾಂಡ್‍ಸೆಟ್‍ನಂತಹದ್ದನ್ನು ಹೊಂದಿದೆ. ಇದೀಗ 5ಜಿ ಸಿದ್ಧವಾಗಿದೆ. ಇದು 4ಜಿಗಿಂತಲೂ 10ಪಟ್ಟು ವೇಗ ಮತ್ತು ಸಾಮರ್ಥ್ಯವನ್ನು ಹೊಂದಿದ್ದು, 2023ರ ಮಾರ್ಚ್‍ನಲ್ಲಿ ಇದರ ಸೇವೆ ಪಡೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಅಂತಿಮವಾಗಿ ದೂರಸಂಪರ್ಕ ಇಲಾಖೆಯ 5ಜಿ ತರಂಗಾಂತರ ಹರಾಜಿಗೆ ಅನುಮೋದನೆ ನೀಡಿದೆ. ಅದರ ಮೂಲಕ ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ 5ಜಿ ಸೇವೆಗಳನ್ನು ಒದಗಿಸಲು ಬಿಡ್‌ದಾರರಿಗೆ ಸ್ಪೆಕ್ಟ್ರಮ್ ಅನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ರಾಜ್ಯ ಪ್ರವಾಸಕ್ಕೂ ಮುನ್ನ ಬಿಜೆಪಿ ಪ್ಲಾನ್ – ರೋಡ್ ಶೋ, ಸಮಾವೇಶಕ್ಕೆ ಸಿದ್ಧತೆ

    Live Tv

  • 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    ನವದೆಹಲಿ: ಭಾರತ ಸರ್ಕಾರ ಸಾರ್ವಜನಿಕ ಉದ್ಯಮಗಳಿಗೆ 5ಜಿ ಸೇವೆಗಳನ್ನು ಒದಗಿಸಲು ತರಂಗಾಂತರ ಹರಾಜಿಗೆ ಅನುಮತಿ ನೀಡಿದೆ. ಶೀಘ್ರದಲ್ಲೇ ಹೊರಬರಲಿರುವ 5ಜಿ ಸೇವೆ 4ಜಿ ಗಿಂತಲೂ 10 ಪಟ್ಟು ವೇಗವಿರಲಿದೆ ಎಂದು ಸರ್ಕಾರ ತಿಳಿಸಿದೆ.

    20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಒಟ್ಟು 72 ಜಿಹೆಚ್‌ಝಡ್ ಸ್ಪೆಕ್ಟ್ರಮ್ ಈ ವರ್ಷದ ಜುಲೈ ಅಂತ್ಯದ ವೇಳೆಗೆ ಹರಾಜಿಗೆ ಇಡಲಾಗುತ್ತದೆ. ವಿವಿಧ ಕಡಿಮೆ(600 MHz, 700 MHz, 800 MHz, 900 MHz, 1800 MHz, 2100 MHz, 2300 MHz) ಮಧ್ಯಮ (3300 MHz) ಹಾಗೂ ಹೆಚ್ಚಿನ(26 GHz) ಆವರ್ತಗಳಲ್ಲಿ ಸ್ಪೆಕ್ಟ್ರಮ್‌ಗಾಗಿ ಹರಾಜು ನಡೆಯಲಿದೆ. ಇದನ್ನೂ ಓದಿ: ಕೊರೊನಾ ರೂಪಾಂತರ ಓಮಿಕ್ರಾನ್, ಡೆಲ್ಟಾ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪರಿಣಾಮಕಾರಿ: ICMR

    5G

    ಪ್ರಸ್ತುತ 4ಜಿ ಸೇವೆಗಳ ಮೂಲಕ ಸಾಧ್ಯವಾಗುವುದಕ್ಕಿಂತಲೂ 10 ಪಟ್ಟು ಹೆಚ್ಚಿನ ವೇಗದ ಹಾಗೂ ಸಾಮರ್ಥ್ಯದ 5ಜಿ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ರೋಲ್ ಔಟ್ ಮಾಡಲು ಟೆಲಿಕಾಂ ಸೇವಾ ಪೂರೈಕೆದಾರರು ಮಧ್ಯಮ ಹಾಗೂ ಹೆಚ್ಚಿನ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಬಳಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

    ಇದೇ ಮೊದಲ ಬಾರಿಗೆ ಯಶಸ್ವಿ ಬಿಡ್ದಾರರಿಗೆ ಮುಂಗಡ ಪಾವತಿ ಮಾಡುವ ಯಾವುದೇ ಕಡ್ಡಾಯ ಕ್ರಮವಿಲ್ಲ. ಸ್ಪೆಕ್ಟ್ರಮ್‌ಗಾಗಿ ಪಾವತಿಗಳನ್ನು 20 ಸಮಾನ ವಾರ್ಷಿಕ ಕಂತುಗಳಲ್ಲಿ ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿಸಬಹುದು. ಇದು ನಗದು ಹರಿವಿನ ಅಗತ್ಯತೆಗಳನ್ನು ಗಮನಾರ್ಹವಾಗಿ ಸರಾಗಗೊಳಿಸುವ ನಿರೀಕ್ಷೆಯಿದೆ ಮತ್ತು ಈ ವಲಯದಲ್ಲಿ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತದೆ. ಬಿಡ್ದಾರರಿಗೆ ಭವಿಷ್ಯದ ಹೊಣೆಗಾರಿಕೆಗಳಿಲ್ಲದೇ 10 ವರ್ಷಗಳ ಬಳಿಕ ಸ್ಪೆಕ್ಟ್ರಮ್ ಅನ್ನು ಒಪ್ಪಿಸುವ ಆಯ್ಕೆಯನ್ನೂ ನೀಡಲಾಗುವುದು ಎಂದು ಕೇಂದ್ರ ತಿಳಿಸಿದೆ. ಇದನ್ನೂ ಓದಿ: ಭಾರತದ ಗೋಧಿ ರಫ್ತನ್ನು 4 ತಿಂಗಳು ಅಮಾನತುಗೊಳಿಸಿದ ಯುಎಇ

    ಈ ಬ್ರಾಡ್‌ಬ್ಯಾಂಡ್ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ. 4ಜಿ ಸೇವೆ ಮೂಲಕ 2015ರಲ್ಲಿ ದೊಡ್ಡ ಮಟ್ಟದಲ್ಲಿ ಉತ್ತೇಜನ ಪಡೆದುಕೊಂಡಿದೆ. 2014ರಲ್ಲಿ 10 ಕೋಟಿ ಚಂದಾದಾರರಿದ್ದು, ಈಗ 80 ಕೋಟಿ ಚಂದಾದಾರರು ಬ್ರಾಡ್‌ಬ್ಯಾಂಡ್ ಬಳಕೆ ಮಾಡುತ್ತಿದ್ದಾರೆ. ಇದೀಗ ಹೊಸ ಯುಗದ ವ್ಯವಹಾರ ದೊಡ್ಡ ಮಟ್ಟದ ಲಾಭ ಪಡೆಯಲಿದೆ ಹಾಗೂ ಉದ್ಯಮಗಳಿಗೆ ಹೆಚ್ಚಿನ ಆದಾಯವನ್ನು ಸೃಷ್ಟಿಸುತ್ತದೆ ಎಂದಿದೆ.

    Live Tv

  • ಭಾರತದ ಸ್ಮಾರ್ಟ್ ಸಿಟಿ, 5ಜಿ ಯೋಜನೆಗೆ ಕೊಡುಗೆ ನೀಡಲು ಮುಂದಾದ ಜಪಾನ್

    ಭಾರತದ ಸ್ಮಾರ್ಟ್ ಸಿಟಿ, 5ಜಿ ಯೋಜನೆಗೆ ಕೊಡುಗೆ ನೀಡಲು ಮುಂದಾದ ಜಪಾನ್

    ಟೋಕಿಯೋ: ಭಾರತದ ಸ್ಮಾರ್ಟ್ ಸಿಟಿ ಹಾಗೂ 5ಜಿ ನೆಟ್‌ವರ್ಕ್ ಯೋಜನೆಗೆ ಜಪಾನ್ ಕೊಡುಗೆ ನೀಡುವುದಾಗಿ ಭರವಸೆ ನೀಡಿದೆ. ಈ ಮೂಲಕ ಭಾರತ-ಜಪಾನ್ ಸಹಕಾರಕ್ಕೆ ಹೊಸದೊಂದು ಆಯಾಮ ಸಿಗಲಿದೆ.

    ಸೋಮವಾರ ಟೋಕಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಮಾಹಿತಿ ಮಾಹಿತಿ ತಂತ್ರಜ್ಞಾನ ಕಂಪನಿ ಎನ್‌ಇಸಿ ಕಾರ್ಪೊರೇಶನ್ ಅಧ್ಯಕ್ಷ ನೊಬುಹಿರೊ ಎಂಡೋ ಭಾರತದಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ.

    ಸ್ಮಾರ್ಟ್ ಸಿಟಿ ದೃಷ್ಟಿಕೋನವಾಗಿ ನಾವು ಅಪ್ಲಿಕೇಶನ್‌ಗಳಂತಹ ಕೊಡುಗೆಗಳನ್ನು ನೀಡಬಹುದು ಹಾಗೂ 5ಜಿ ಯಂತಹ ಸಂವಹನ ವೇದಿಕೆಯನ್ನೂ ಒದಗಿಸಬಹುದು. ಈ ಎಲ್ಲಾ ಕ್ಷೇತ್ರಗಳಲ್ಲಿ ನಾವು ಈಗಾಗಲೇ ಪರಿಹಾರ ಹೊಂದಿದ್ದೇವೆ ಎಂದು ನೊಬುಹಿರೊ ಎಂಡೊ ಪ್ರಧಾನಿ ಮೋದಿಯೊಂದಿಗಿನ ಮಾತುಕತೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ

    ನಾವು ಅಪ್ಲಿಕೇಶನ್‌ಗಳನ್ನು ಕಾರ್ಯಗತಗೊಳಿಸಲು ಭಾರತದೊಂದಿಗೆ ಸಂವಹನ ನಡೆಸುವ ಅಗತ್ಯವಿದೆ. 5ಜಿ ವ್ಯವಸ್ಥೆಯನ್ನು ಒದಗಿಸಲು ಭದ್ರತೆ ಹಾಗೂ ಸುರಕ್ಷತೆಯನ್ನು ನಾವು ದೃಢೀಕರಿಸಬೇಕಿದೆ. ಇದಕ್ಕಾಗಿ ನಾವು ಭಾರತದ ಆಪರೇಟರ್‌ಗಳ ಸಹಯೋಗವನ್ನು ಹೊಂದಬೇಕಿದೆ ಎಂದರು.

    ನಾವು ಭಾರತದ ಸುಮಾರು 6,000 ಎಂಜಿನಿಯರ್‌ಗಳನ್ನು ಹೊಂದಿದ್ದೇವೆ. ಅವರು ನಮ್ಮೊಂದಿಗೆ ಸಾಕಷ್ಟು ನಿಕಟವಾಗಿ ಕೆಲಸ ಮಾಡುತ್ತಾರೆ. ನಾವು ಈ ಯೋಜನೆಯನ್ನು ಅವರೊಂದಿಗೆ ಮುಂದುವರಿಸಲು ಬಯಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದ ಮೊದಲ 5ಜಿ ಕರೆ ಯಶಸ್ವೀ ಪರೀಕ್ಷೆ

    ತಂತ್ರಜ್ಞಾನ ಮಾತ್ರವಲ್ಲದೇ ಇಬ್ಬರೂ ನಾಯಕರು ಕೈಗಾರಿಕಾ ಅಭಿವೃದ್ಧಿ, ತೆರಿಗೆ, ಕಾರ್ಮಿಕ ಕ್ಷೇತ್ರಗಳು ಸೇರಿದಂತೆ ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಕೈಗೊಳ್ಳಬಹುದಾದ ವಿವಿಧ ಸುಧಾರಣೆಗಳ ಕುರಿತು ಚರ್ಚಿಸಿದರು.

    ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಭೇಟಿಗೆ ಟೋಕಿಯೋಗೆ ತೆರಳಿದ್ದಾರೆ. ಮೇ 24ರಂದು ಟೋಕಿಯೋದಲ್ಲಿ ನಡೆಯಲಿರುವ 3ನೇ ಕ್ವಾಡ್ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.

  • ಭಾರತದ ಮೊದಲ 5ಜಿ ಕರೆ ಯಶಸ್ವೀ ಪರೀಕ್ಷೆ

    ಭಾರತದ ಮೊದಲ 5ಜಿ ಕರೆ ಯಶಸ್ವೀ ಪರೀಕ್ಷೆ

    ಚೆನ್ನೈ: ಭಾರತದಲ್ಲಿ ಮೊದಲ ಬಾರಿಗೆ 5ಜಿ ಆಡಿಯೋ ಹಾಗೂ ವೀಡಿಯೋ ಕರೆಗಳನ್ನು ಗುರುವಾರ ಚೆನ್ನೈನಲ್ಲಿ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಯಶಸ್ವೀ ಪರೀಕ್ಷೆ ನಡೆಸಿದರು.

    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮದ್ರಾಸ್‌ನಲ್ಲಿ ಮೊದಲ ಬಾರಿಗೆ 5ಜಿ ಕರೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಅಶ್ವಿನಿ ವೈಷ್ಣವ್, ಇಡೀ ನೆಟ್‌ವರ್ಕ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಹಾಗೂ ಅಭಿವೃದ್ಧಿಪಡಿಸಲಾಗಿದೆ ಎಂದರು.

    5G

    ಇದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಸಾಕ್ಷಾತ್ಕಾರವಾಗಿದೆ. ಭಾರತದಲ್ಲೇ ತಯಾರಾಗುವ 4ಜಿ ಹಾಗೂ 5ಜಿ ತಂತ್ರಜ್ಞಾನದ ಸ್ಟಾಕ್ ಅನ್ನು ಇತರ ದೇಶಗಳಿಗೂ ವಿತರಿಸುವುದು ಅವರ ಗುರಿಯಾಗಿದೆ. ಈ ಸಂಪೂರ್ಣ ತಂತ್ರಜ್ಞಾನದ ಯಶಸ್ಸಿನೊಂದಿಗೆ ನಾವು ಜಗತ್ತನ್ನೇ ಗೆಲ್ಲಬೇಕು ಎಂದು ವೈಷ್ಣವ್ ಹೇಳಿದರು. ಇದನ್ನೂ ಓದಿ: 2030ರ ವೇಳೆಗೆ ಭಾರತಕ್ಕೆ 6ಜಿ ನೆಟ್‌ವರ್ಕ್ – ಪ್ರಧಾನಿ ಮೋದಿ

    ದೂರಸಂಪರ್ಕ ಇಲಾಖೆ 5ಜಿ ನೆಟ್‌ವರ್ಕ್ ಹರಾಜಿನ ಬಗ್ಗೆ ಮುಂದಿನ ವಾರದಲ್ಲಿ ಅಂತಿಮ ಅನುಮೋದನೆಗೆ ಕೇಂದ್ರ ಸಚಿವ ಸಂಪುಟಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ. ಇದೇ ವರ್ಷದ ಕೊನೆಯಲ್ಲಿ ಗ್ರಾಹಕರ ಕೈಗೆ 5ಜಿ ನೆಟ್‌ವರ್ಕ್ ಲಭಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಯಾರಿಗೂ ತಿಳಿಯದೇ ವಾಟ್ಸಪ್ ಗ್ರೂಪ್‍ನಿಂದ ನಿರ್ಗಮಿಸುವುದು ಹೇಗೆ?

    ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಐಐಟಿ ಮದ್ರಾಸ್‌ನಲ್ಲಿ ದೇಶದ ಮೊದಲ 5ಜಿ ಟೆಸ್ಟ್‌ಬೆಡ್ ಅನ್ನು ಉದ್ಘಾಟಿಸಿದ್ದರು. ಇದೀಗ ಅದೇ ಕೇಂದ್ರದಲ್ಲಿ ಸಂಪರ್ಕ ಸಚಿವ ದೇಶದಲ್ಲಿ ಮೊದಲ ಬಾರಿಗೆ 5ಜಿ ಆಡಿಯೋ ಹಾಗೂ ವೀಡಿಯೋ ಕರೆಗಳನ್ನು ಪರೀಕ್ಷಿಸಿದ್ದಾರೆ.