Tag: 5G

  • ಬಿಎಸ್‌ಎನ್‌ಎಲ್‌ 4ಜಿಯಿಂದ 5ಜಿ ಸಿಮ್‌ ಕಾರ್ಡ್‌ಗೆ ಆನ್‌ಲೈನಿನಲ್ಲಿ ಅಪ್‌ಗ್ರೇಡ್‌ ಮಾಡೋದು ಹೇಗೆ?

    ಬಿಎಸ್‌ಎನ್‌ಎಲ್‌ 4ಜಿಯಿಂದ 5ಜಿ ಸಿಮ್‌ ಕಾರ್ಡ್‌ಗೆ ಆನ್‌ಲೈನಿನಲ್ಲಿ ಅಪ್‌ಗ್ರೇಡ್‌ ಮಾಡೋದು ಹೇಗೆ?

    ಬಿಎಸ್‌ಎನ್‌ಎಲ್‌ (BSNL) ಇತ್ತೀಚಿಗೆ 5ಜಿ ಸೇವೆಯನ್ನು (5G) ಆರಂಭಿಸಿದೆ. ಈಗಾಗಲೇ ಹೈದರಾಬಾದ್‌ (Hyderabad) ಮತ್ತು ದೆಹಲಿಯಲ್ಲಿ ಸೇವೆ ಆರಂಭಿಸಿದ್ದು ಶೀಘ್ರವೇ ಉಳಿದ ನಗರಗಳಲ್ಲಿ ಈ ಸೇವೆ ಆರಂಭವಾಗಲಿದೆ. ಹೀಗಾಗಿ ಇಲ್ಲಿ  3ಜಿಯಿಂದ 4ಜಿ,  4ಜಿ ಯಿಂದ  5ಜಿಗೆ ಅಪ್‌ಗ್ರೇಡ್‌ ಮಾಡುವ ವಿಧಾನವನ್ನು ತಿಳಿಸಲಾಗಿದೆ.

    ಗ್ರಾಹಕರು ಆಫ್‌ಲೈನ್‌ ಅಥವಾ ಆನ್‌ಲೈನ್‌ (Online) ಮೂಲಕ ತಮ್ಮ ಸಿಮ್‌ ಕಾರ್ಡ್‌ (Sim Card) ಅನ್ನು 5ಜಿಗೆ ಅಪ್‌ಗ್ರೇಡ್‌ ಮಾಡಬಹುದು.

    ಆಫ್‌ಲೈನ್‌ ಹೇಗೆ?
    1. ನಿಮ್ಮ ಹತ್ತಿರದ ಬಿಎಸ್‌ಎನ್‌ಎಲ್‌ ಕಚೇರಿಗೆ ಹೋಗಿ.
    2.ಕಚೇರಿಗೆ ಹೋಗುವಾಗ ಆಧಾರ್‌ ಕಾರ್ಡ್‌ ಅಥವಾ ಸರ್ಕಾರಿ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
    3. ಗ್ರಾಹಕ ಸೇವಾ ಸಿಬ್ಬಂದಿಗೆ ಅಗತ್ಯ ಕೆವೈಸಿ ಮಾಹಿತಿಗಳನ್ನು ನೀಡಿ.
    4. ನೀವು ನೀಡಿದ ವಿವರಗಳು ಹಳೆಯ ಸಿಮ್‌ ಕಾರ್ಡ್‌ಗೆ ನೀಡಿದ ವಿವರಗಳಿಗೆ ತಾಳೆಯಾದರೆ ನಿಮಗೆ ಹೊಸ ಬಿಎಸ್‌ಎನ್‌ಎಲ್‌ 5ಜಿ ಸಿಮ್‌ ಸಿಗುತ್ತದೆ.

    ಬಹಳಷ್ಟು ಗ್ರಾಹಕರು ಬಿಎಸ್‌ಎನ್‌ಎಲ್‌ ಕಚೇರಿಗೆ ಭೇಟಿ ನೀಡುತ್ತಿರುವ ಕಾರಣ ಜನಸಂದಣಿ ಹೆಚ್ಚಾಗುತ್ತಿದೆ. ಹೀಗಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಸಿಮ್‌ ಕಾರ್ಡ್‌ ಅನ್ನು 5ಜಿಗೆ ಅಪ್‌ಗ್ರೇಡ್‌ ಮಾಡಬಹುದು. ಇದನ್ನೂ ಓದಿ: ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌25 ಆಲ್ಟ್ರಾ, ಎಸ್‌24 ಆಲ್ಟ್ರಾ, ಎಸ್‌23 ಆಲ್ಟ್ರಾ ಬೆಲೆ ದಿಢೀರ್ಭಾರೀ ಇಳಿಕೆ

    ಆನ್‌ಲೈನಿನಲ್ಲಿ ಹೇಗೆ?
    1. ಬಿಎಸ್‌ಎನ್‌ಎಲ್‌ ವೆಬ್‌ಸೈಟ್‌ಗೆ ಭೇಟಿ ನೀಡಿ – ಲಿಂಕ್‌
    2. ಇಲ್ಲಿ ಎಲ್ಲಾ ವಿವರಗಳನ್ನು ತುಂಬಿಸಿ. ಮುಖ್ಯವಾಗಿ ನಿಮಗೆ ಪ್ರಿ ಪೇಯ್ಡ್‌ ಬೇಕೋ ಪೋಸ್ಟ್‌ ಪೇಯ್ಡ್‌ ಬೇಕೋ ಎಂಬುದನ್ನು ಆರಿಸಿಕೊಳ್ಳಿ.
    3. ಪರ್ಯಾಯ ಮೊಬೈಲ್‌ ನಂಬರ್‌ ನೀಡಿದ ಬಳಿ ಅದು ಯಾರದ್ದು ಎಂಬುದನ್ನು ಆಯ್ಕೆ ಮಾಡಿ.
    4.ಎಲ್ಲಾ ವಿವರಗಳನ್ನು ನೀಡಿದ ಮೇಲೆ ಸೆಂಡ್‌ ಒಟಿಪಿ ಬಟನ್‌ ಕ್ಲಿಕ್‌ ಮಾಡಿ.
    5. ಒಟಿಪಿ ಸೇರಿದಂತೆ ವಿವರಗಳನ್ನು ಟೈಪ್‌ ಮಾಡಿದ ನಂತರ ನೀವು ನೀಡಿದ ವಿಳಾಸಕ್ಕೆ ಕೆಲವೇ ದಿನಗಳಲ್ಲಿ 5ಜಿ ಸಿಮ್‌ ಕಾರ್ಡ್‌ ಬರುತ್ತದೆ.

  • ಭಾರತದಲ್ಲಿ ರಿಲಯನ್ಸ್‌ 5G ಡೇಟಾ ಕ್ರಾಂತಿ ಮಾಡುತ್ತಾ?

    ಭಾರತದಲ್ಲಿ ರಿಲಯನ್ಸ್‌ 5G ಡೇಟಾ ಕ್ರಾಂತಿ ಮಾಡುತ್ತಾ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರು, ಹೈದರಾಬಾದ್‌ನಲ್ಲೂ ಇಂದಿನಿಂದ ಜಿಯೋ ಟ್ರೂ 5G ಲಭ್ಯ

    ಬೆಂಗಳೂರು, ಹೈದರಾಬಾದ್‌ನಲ್ಲೂ ಇಂದಿನಿಂದ ಜಿಯೋ ಟ್ರೂ 5G ಲಭ್ಯ

    ಬೆಂಗಳೂರು: 1 ಜಿಬಿಪಿಎಸ್+ ವೇಗದಲ್ಲಿ ಜಿಯೋ ಟ್ರೂ 5ಜಿ (Jio True 5G) ಸೇವೆ ಬೆಂಗಳೂರು (Bengaluru) ಹಾಗೂ ಹೈದರಾಬಾದ್‌ನಲ್ಲಿ (Hyderabad) ನವೆಂಬರ್ 10ರಿಂದ ಆರಂಭವಾಗಿದೆ.

    ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ಹೀಗೆ 6 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳ ಯಶಸ್ವಿ ಬೀಟಾ ಅನಾವರಣದ ನಂತರದಲ್ಲಿ ಇದೀಗ ಜಿಯೋ (Jio) ಹೆಚ್ಚಿನ ನಗರಗಳಲ್ಲಿ ಜಿಯೋ ಟ್ರೂ 5ಜಿ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬೆಂಗಳೂರು ಮತ್ತು ಹೈದರಾಬಾದ್‌ನಲ್ಲೂ ಈಗ ಜಿಯೋ ಟ್ರೂ 5ಜಿ ದೊರೆಯುತ್ತಿದೆ. ಜಿಯೋ ಟ್ರೂ 5ಜಿಯು ಈ ಎರಡೂ ತಂತ್ರಜ್ಞಾನ ಕೇಂದ್ರಿತ ನಗರಗಳಲ್ಲಿ ಮಾನವೀಯತೆಗೆ ಸೇವೆ ಸಲ್ಲಿಸುವ ಮತ್ತು ಭಾರತೀಯರ ಜೀವನದ ಗುಣಮಟ್ಟ ಸುಧಾರಿಸುವ ಕೆಲವು ಇತ್ತೀಚಿನ ತಂತ್ರಜ್ಞಾನಗಳ ನಿಜವಾದ ಸಾಮರ್ಥ್ಯವನ್ನು ಅರಿಯುವುದಕ್ಕೆ ಸಹಾಯ ಮಾಡುತ್ತದೆ.

    ಅತ್ಯುತ್ತಮ ಗ್ರಾಹಕ ಅನುಭವ ಖಚಿತ ಮಾಡಿಕೊಳ್ಳಲು ಜಿಯೋದಿಂದ ಸುಧಾರಿತ ಟ್ರೂ 5ಜಿ ಸೇವೆಗಳನ್ನು ಹಂತ ಹಂತವಾಗಿ ಹೊರತರುತ್ತಿದೆ. ಜಿಯೋ ಟ್ರೂ 5ಜಿ ಅನುಭವವನ್ನು ಈಗಾಗಲೇ 6 ನಗರಗಳಲ್ಲಿ ಲಕ್ಷಗಟ್ಟಲೆ ಬಳಕೆದಾರರು ಪಡೆಯುತ್ತಿದ್ದಾರೆ. ಇದಕ್ಕೆ ದೊರೆಯುತ್ತಿರುವ ಪ್ರತಿಕ್ರಿಯೆ ಅತ್ಯಂತ ಧನಾತ್ಮಕವಾಗಿದೆ ಮತ್ತು ಭರವಸೆ ನೀಡುತ್ತದೆ. ಜಿಯೋ ಜಾಗತಿಕವಾಗಿ ಅತ್ಯಾಧುನಿಕ 5ಜಿ ನೆಟ್‌ವರ್ಕ್ ಅನ್ನು ರೂಪಿಸುವುದಕ್ಕೆ ಗ್ರಾಹಕರ ಒಳನೋಟಗಳು ಮತ್ತು ಪ್ರತಿಕ್ರಿಯೆಯು ಸಹಾಯ ಮಾಡುತ್ತಿದೆ.

     

    ಜಿಯೋ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 500 ಎಂಬಿಪಿಎಸ್ ನಿಂದ 1 ಜಿಬಿಪಿಎಸ್ ವರೆಗೆ ಎಲ್ಲಿಯಾದರೂ ವೇಗದ ಅನುಭವವನ್ನು ಪಡೆಯುತ್ತಿದ್ದಾರೆ ಹಾಗೂ ಅತಿ ಹೆಚ್ಚು ಪ್ರಮಾಣದಲ್ಲಿ ಡೇಟಾ ಬಳಸುತ್ತಿದ್ದಾರೆ. ಇದಕ್ಕೆ ಕಾರಣ ಆಗಿರುವುದು ಜಿಯೋ ಟ್ರೂ 5ಜಿಯ 3 ಪಟ್ಟು ಅನುಕೂಲಗಳು. ಆದ್ದರಿಂದಲೇ ಇದು ಭಾರತದಲ್ಲಿನ ಏಕೈಕ ನಿಜವಾದ 5ಜಿ ನೆಟ್‌ವರ್ಕ್ ಆಗಿದೆ.

    1. 4ಜಿ ನೆಟ್‌ವರ್ಕ್‌ನ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಸುಧಾರಿತ 5ಜಿ ನೆಟ್‌ವರ್ಕ್‌ನೊಂದಿಗೆ ಅದ್ವಿತೀಯ 5ಜಿ ಆರ್ಕಿಟೆಕ್ಚರ್.
    2. 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳಾದ್ಯಂತ 5ಜಿ ಸ್ಪೆಕ್ಟ್ರಮ್‌ನ ದೊಡ್ಡ ಮತ್ತು ಉತ್ತಮ ಮಿಶ್ರಣ.
    3. ಕ್ಯಾರಿಯರ್ ಅಗ್ರಿಗೇಷನ್ ಎಂಬ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ 5ಜಿ ಫ್ರೀಕ್ವೆನ್ಸಿಗಳನ್ನು ಏಕರೂಪದ ‘ಡೇಟಾ ಹೈವೇ’ ಆಗಿ ಯಾವುದೇ ಅಡೆತಡೆ ಇಲ್ಲದೆ ಸಂಯೋಜಿಸುತ್ತದೆ.

    ನವೆಂಬರ್ 10ರಿಂದ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತಿದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಈ ಮೂಲಕ ಪಡೆಯಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶದ ಮೊದಲ 5G ಸೇವೆ ಲಭ್ಯವಿರುವ ವಿಮಾನ ನಿಲ್ದಾಣ ಯಾವುದು ಗೊತ್ತಾ?

    ದೇಶದ ಮೊದಲ 5G ಸೇವೆ ಲಭ್ಯವಿರುವ ವಿಮಾನ ನಿಲ್ದಾಣ ಯಾವುದು ಗೊತ್ತಾ?

    ನವದೆಹಲಿ: ಅಕ್ಟೋಬರ್ 01 ರಂದು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 5G ಟೆಲಿಕಾಂ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ದೆಹಲಿ ವಿಮಾನ ನಿಲ್ದಾಣವೂ (Delhi Airport) ಸಿದ್ಧವಾಗಿದ್ದು, ದೇಶದ ಮೊದಲ 5G ಸೇವೆ ಲಭ್ಯವಿರುವ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ ಅಕ್ಟೋಬರ್ 1 ರಿಂದಲೇ 5G ಸೇವೆಗಳ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಟರ್ಮಿನಲ್ 1 ಮತ್ತು 2 ರಲ್ಲೂ ಸಿದ್ಧತೆಗಳು ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಪೂರ್ಣ ವಿಮಾನ ನಿಲ್ದಾಣವು 5G ಇಂಟರ್ನೆಟ್ ಬಳಕೆಗೆ ಮುಕ್ತವಾಗಲಿದೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಈಗಾಗಲೇ 5G ಸೆಕ್ಟ್ರಮ್ ಹರಾಜು ಪ್ರಕ್ರಿಯೆ ಅಂತ್ಯವಾಗಿದ್ದು ಜಿಯೋ, ಏರ್ಟೆಲ್, ವೊಡಾಫೋನ್ ಸೆಕ್ಟ್ರಮ್‌ಗಳನ್ನು ಖರೀದಿಸಿದೆ. ಅ.1 ರಂದು ಪ್ರಧಾನಿ ನರೇಂದ್ರ ಮೋದಿ ಹೊಸ ಸೇವೆಗೆ ಚಾಲನೆ ನೀಡಲಿದ್ದು, ಅ.12 ರೊಳಗೆ ಮಹಾನಗರಗಳಲ್ಲಿ 5G ಸೇವೆಗಳನ್ನು ನೀಡಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.

    ಮೊದಲ ಹಂತದಲ್ಲಿ ಮೆಟ್ರೋ ಸಿಟಿಗಳು, ದೊಡ್ಡ ನಗರಗಳಲ್ಲಿ 5G ಸೇವೆ ಆರಂಭವಾಗಲಿದ್ದು, ಹಂತ ಹಂತವಾಗಿ ಗ್ರಾಮೀಣ ಪ್ರದೇಶಗಳಿಗೂ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಸೇವಾ ಶುಲ್ಕದಲ್ಲಿ ಭಾರಿ ದೊಡ್ಡ ವ್ಯತ್ಯಾಸವಾಗದು ಎಂದು ಟೆಲಿಕಾಂ ಸಂಸ್ಥೆಗಳು ಮುನ್ಸೂಚನೆ ನೀಡಿವೆ. ಇದನ್ನೂ ಓದಿ: ಅ.1 ರಿಂದ ದೇಶದಲ್ಲಿ 5G ಸೇವೆ ಆರಂಭ – ಮೋದಿ ಚಾಲನೆ

    Live Tv
    [brid partner=56869869 player=32851 video=960834 autoplay=true]

  • ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಭಾರತದಲ್ಲಿ(India) ಕೊನೆಗೂ 5G ಸೇವೆ ಆರಂಭವಾಗಲಿದೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ 5G ಸ್ಪೆಕ್ಟ್ರಮ್‌(5G Spectrum) ಹರಾಜು ನಡೆಸಿದ್ದು ದೇಶದ ಪ್ರಮುಖ ಮೂರು ಟೆಲಿಕಾಂ ಕಂಪನಿಗಳು ವಿವಿಧ ಬಾಂಡ್‌ನ ಸ್ಪ್ರೆಕ್ಟಂ ಖರೀದಿಸಿದೆ. ಶೀಘ್ರವೇ 5ಜಿ ಸೇವೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಹಲವು ಪ್ರಶ್ನೆಗಳು ಏಳುವುದು ಸಹಜ. ಈ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಕೆಲ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    1. 5G ಬಂದಾಗ, 3G ಮತ್ತು 4G ಫೋನ್‌ಗಳು ಧ್ವನಿ ಕರೆ ಮತ್ತು ಡೇಟಾದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆಯೇ?
    ಹೌದು, ಅಸ್ತಿತ್ವದಲ್ಲಿರುವ ಎಲ್ಲಾ ಫೋನ್ ಧ್ವನಿ ಕರೆಗಳು ಮತ್ತು ಡೇಟಾದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಆಪರೇಟರ್‌ ತಮ್ಮ 2G ಅಥವಾ 3G ನೆಟ್‌ವರ್ಕ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದಾಗ ಮಾತ್ರ ಈ ಸೇವೆಗಳು ನಿಲ್ಲುತ್ತವೆ.

    2. ಹಾಗಾದರೆ, ಅಂತಹ ಬಳಕೆದಾರರಿಗೆ ಯಾವ ಬದಲಾವಣೆಗಳು ಕಂಡುಬರುತ್ತವೆ? ಅವರ ಸಾಧನ 4G ಆಗಿದ್ದರೂ ಡೌನ್‌ಲೋಡ್ ಮತ್ತು ಅಪ್‌ಲೋಡ್‌ ವೇಗ ಹೆಚ್ಚುತ್ತದೆಯೇ?
    ನೀವು 5G ಅನ್ನು 5G ಇರುವ ಸಾಧನದಲ್ಲಿ ಮಾತ್ರ ಅನುಭವಿಸಬಹುದು. ಈಗಾಗಲೇ ಇರುವ 4G ಸಾಧನಗಳಲ್ಲಿ 5G ಲಭ್ಯವಿರುವುದಿಲ್ಲ.


    3. 4G ನೆಟ್‌ವರ್ಕ್ ಮುಂದುವರಿಯುತ್ತದೆಯೇ?
    ಹೌದು. 4G ನೆಟ್‌ವರ್ಕ್ ಮುಂದುವರಿಯುತ್ತದೆ.

    4. 5G ಸಾಧನಗಳ ಲಭ್ಯತೆ ಹೇಗಿದೆ?
    ಉದ್ಯಮದ ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರಸ್ತುತ ಸುಮಾರು 5 ಕೋಟಿ 5G ಸಾಧನಗಳಿವೆ. ಈ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ.

    5. 5G ಮೊಬೈಲ್ ಫೋನ್‌ಗಳು ಸುಲಭವಾಗಿ ಲಭ್ಯವಿದೆಯೇ?
    ಹೌದು. 5G ಫೋನ್‌ಗಳ ಹಲವು ಮಾದರಿಗಳು ಸುಲಭವಾಗಿ ಲಭ್ಯವಿವೆ. ಆಪಲ್‌ ಐಫೋನ್‌, ಸ್ಯಾಮ್‌ಸಂಗ್‌, ಒನ್‌ಪ್ಲಸ್‌ ಇತ್ಯಾದಿ ಪ್ರಮುಖ ಬ್ರ್ಯಾಂಡ್‌ಗಳ ಸಾಧನಗಳು 5G ಫೋನ್‌ಗಳನ್ನು ಮಾರಾಟ ಮಾಡುತ್ತಿವೆ.

    6. 4G ಜಿಯೋಫೈ ರೀತಿ 5G ಯಲ್ಲೂ ಸಣ್ಣ ವೈಫೈ ಸಾಧನಗಳು ಇರುತ್ತವೆಯೇ?
    ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಿದಂತೆ, ಜಿಯೋ ಏರ್ ಫೈಬರ್ ಸಾಧನವನ್ನು ಜಿಯೋ ಹೊರತರಲಿದೆ. ಇದು ಪೋರ್ಟಬಲ್ 5G ಸಾಧನವಾಗಿದೆ.

    7. ಪ್ರಸ್ತುತ 4G ಫೋನ್‌ಗಳನ್ನು 5G ಗೆ ಅಪ್‌ಗ್ರೇಡ್ ಮಾಡಬಹುದೇ?
    ಇಲ್ಲ, ಪ್ರಸ್ತುತ 4G ಫೋನ್‌ಗಳನ್ನು 5G ಗೆ ಅಪ್‌ಗ್ರೇಡ್ ಮಾಡಲು ಸಾಧ್ಯವಿಲ್ಲ.

    8. ಬಳಕೆದಾರರು ಅಷ್ಟು ದೊಡ್ಡ ಪ್ರಮಾಣದಲ್ಲಿ ಡೇಟಾ ಬಳಕೆಯನ್ನು ಹೊಂದಿಲ್ಲದಿದ್ದರೆ, 4G ಫೋನ್ ಬಿಟ್ಟು ಹೊಸ 5G ಫೋನ್ ಖರೀದಿಸಬೇಕೆ?
    5G ಹೆಚ್ಚಿನ ವೇಗ ಮತ್ತು ಕಡಿಮೆ ಲೇಟೆನ್ಸಿಯ ವಿಶಿಷ್ಟ ಪ್ರಯೋಜನವನ್ನು ಹೊಂದಿದೆ. ಇದು ಡಿಜಿಟಲ್ ಗ್ರಾಹಕರು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಳಸಲು ಸಹಾಯ ಮಾಡುತ್ತದೆ.  ಇದನ್ನೂ ಓದಿ: ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

     

    9. 5G ಯಾರಿಗೆ ಹೆಚ್ಚು ಅನುಕೂಲ? ಯಾವ ರೀತಿಯ ಬಳಕೆಗೆ ಇದು ಹೆಚ್ಚು ಸೂಕ್ತವಾಗಿದೆ?
    5G ಯ ಅನುಕೂಗಳಿಂದ ಎಲ್ಲಾ ವಿಭಾಗದ ಗ್ರಾಹಕರು ಪ್ರಯೋಜನ ಪಡೆಯುತ್ತಾರೆ. ಮನೆಯಲ್ಲಿ 5G ಬಳಸುವ ಗ್ರಾಹಕರು ಜಿಯೋ ಏರ್ ಫೈಬರ್ ಸಾಧನ ಅಥವಾ 5G ಹ್ಯಾಂಡ್‌ಸೆಟ್ ಬಳಸಿ ಹೆಚ್ಚಿನ ವೇಗದ ಇಂಟರ್ನೆಟ್ ಪಡೆಯಬಹುದು.  ಸಾಮಾಜಿಕ ವಲಯದಲ್ಲಿ ಇದು ಕೃಷಿ, ಆರೋಗ್ಯ, ಶಿಕ್ಷಣ, ಇತ್ಯಾದಿಗಳಿಗೆ ನೆರವಾಗಬಹುದು.

    10. 5G ವಿತರಣೆ ಹೇಗೆ ನಡೆಯುತ್ತದೆ? ದೊಡ್ಡ ಟವರ್‌ಗಳ ಬದಲಿಗೆ ಸಣ್ಣ ಪೋಸ್ಟ್‌ಗಳು (ಮೈಕ್ರೋ ಸೈಟ್‌ಗಳು) ಇರುತ್ತವೆಯೇ? ಅವು ಹೇಗೆ ಕಾರ್ಯನಿರ್ವಹಿಸುತ್ತವೆ?
    ಅಸ್ತಿತ್ವದಲ್ಲಿರುವ ಟವರ್‌ಗಳಲ್ಲಿ 5G ಉಪಕರಣಗಳನ್ನು ಅಳವಡಿಸಬಹುದಾಗಿದೆ. ರಸ್ತೆ ಬದಿಗಳಲ್ಲೂ ಅಳವಡಿಸಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೀಪಾವಳಿಗೆ ಜಿಯೋ ಗಿಫ್ಟ್ – 4 ಮೆಟ್ರೋ ನಗರಗಳಲ್ಲಿ 5ಜಿ ರೋಲ್‌ಔಟ್

    ದೀಪಾವಳಿಗೆ ಜಿಯೋ ಗಿಫ್ಟ್ – 4 ಮೆಟ್ರೋ ನಗರಗಳಲ್ಲಿ 5ಜಿ ರೋಲ್‌ಔಟ್

    ಮುಂಬೈ: ರಿಲಯನ್ಸ್ ಜಿಯೋ ಸೋಮವಾರ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 5ಜಿ ಸೇವೆಯನ್ನು ದೀಪಾವಳಿ ಸಂದರ್ಭ ರೋಲ್‌ಔಟ್ ಮಾಡಲು ಪ್ರಾರಂಭಿಸುವುದಾಗಿ ಘೋಷಿಸಿದೆ.

    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಭಾರತದಲ್ಲಿ 5ಜಿ ಸೇವೆಗಳನ್ನು ಹೊರತರಲು ರಿಲಯನ್ಸ್ 2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಹೇಳಿದರು.

    ಮುಂದಿನ 2 ತಿಂಗಳಲ್ಲಿ ದೀಪಾವಳಿಯ ವೇಳೆಗೆ ಜಿಯೋ 5ಜಿ ಸೇವೆಗಳು ಪ್ರಾರಂಭವಾಗಲಿದೆ. ಮೊದಲಿಗೆ ದೇಶದ 4 ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ರೋಲ್‌ಔಟ್ ಪ್ರಾರಂಭವಾಗಿ, ಆಯ್ದ ಬಳಕೆದಾರರನ್ನು ತಲುಪಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಆಕಾಶ ಏರ್ ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ – ಸಂಸ್ಥೆಯಿಂದ ಕ್ಷಮೆ

    ಜಿಯೋ 5ಜಿ ವಿಶ್ವದ ಅತಿದೊಡ್ಡ ಹಾಗೂ ಅತ್ಯಾಧುನಿಕ ನೆಟ್‌ವರ್ಕ್ ಆಗಲಿದೆ. 2023ರ ಡಿಸೆಂಬರ್ ವೇಳೆಗೆ ಜಿಯೋ 5ಜಿ ಸೇವೆ ದೇಶದ ಎಲ್ಲಾ ಪಟ್ಟಣ, ತಾಲೂಕು, ಹಳ್ಳಿ, ದೇಶದ ಮೂಲೆ ಮೂಲೆಯನ್ನು ತಲುಪಲಿದೆ ಎಂದು ಅಂಬಾನಿ ಹೇಳಿದ್ದಾರೆ. ಇದನ್ನೂ ಓದಿ: ಕಿರಿಯ ಪುತ್ರನಿಗಾಗಿ ದುಬೈನಲ್ಲಿ ಅತ್ಯಂತ ದುಬಾರಿ ಮನೆ ಖರೀದಿಸಿದ ಮುಖೇಶ್ ಅಂಬಾನಿ

    Live Tv
    [brid partner=56869869 player=32851 video=960834 autoplay=true]

  • ಅಕ್ಟೋಬರ್‌ ಎರಡನೇ ವಾರ 5G ಸೇವೆ ಆರಂಭ – 2030ರ ಒಳಗಡೆ ಭಾರತದಲ್ಲಿ 6G: ಮೋದಿ

    ಅಕ್ಟೋಬರ್‌ ಎರಡನೇ ವಾರ 5G ಸೇವೆ ಆರಂಭ – 2030ರ ಒಳಗಡೆ ಭಾರತದಲ್ಲಿ 6G: ಮೋದಿ

    ನವದೆಹಲಿ: ದೇಶದಲ್ಲಿ 5ಜಿ ಸೇವೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ ಎರಡನೇ ವಾರದಲ್ಲಿ 5ಜಿ ಸೇವೆ ಆರಂಭಿಸುತ್ತೇವೆ. ಜೊತೆಗೆ 6ಜಿ ಸೇವೆ ಬಗ್ಗೆ ಈಗಾಗಲೇ ಕೆಲಸ ಆರಂಭವಾಗಿದ್ದು 2030ರ ಒಳಗಾಗಿ 6ಜಿ ಸೇವೆ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ರ ಗ್ರ್ಯಾಂಡ್ ಫಿನಾಲೆಯಲ್ಲಿ ಮಾತನಾಡಿದ ಮೋದಿ, ದೇಶದಲ್ಲಿ ತಂತ್ರಜ್ಞಾನಗಳ ಬೆಳವಣಿಗೆ ಸಾಕಷ್ಟು ವೇಗವಾಗಿ ನಡೆಯುತ್ತಿದೆ. ಈಗಾಗಲೇ ಡ್ರೋನ್‌ಗಳನ್ನು ಕೃಷಿ ಮತ್ತು ಆರೋಗ್ಯ ವಿಭಾಗದಲ್ಲಿ ಬಳಕೆ ಮಾಡಲಾಗುತ್ತಿದೆ. ದೇಶದಲ್ಲಿ ಗೇಮಿಂಗ್ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯಿಂದ ಯುವ ಸಮೂಹಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಫಸ್ಟ್‌ ಟೈಂ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತ

    ಯುವ ಸಮೂಹ ತಂತ್ರಜ್ಞಾನಗಳ ಸದುಪಯೋಗ ಪಡೆದುಕೊಳ್ಳಬೇಕು. ಈ ಮೂಲಕ ದೇಶದ ಪ್ರಗತಿಗೆ ಸಹಕಾರಿಯಾಗಬೇಕು. ಗ್ರಾಮೀಣ ಭಾಗಗಳಲ್ಲೂ ಕೂಡ 5ಜಿ ಸೇವೆ ಆರಂಭಕ್ಕೆ ಸರ್ಕಾರ ಸಿದ್ಧವಿದೆ. ಕಳೆದ 7-8 ವರ್ಷಗಳಿಂದ ದೇಶದಲ್ಲಿ ತಂತ್ರಜ್ಞಾನಗಳ ಉನ್ನತ ಮಟ್ಟದ ಬೆಳವಣಿಗೆ ಆಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 3 ವರ್ಷಗಳ ನಂತರ ದಲೈಲಾಮಾ ದೆಹಲಿಗೆ ಭೇಟಿ

    ಆಕ್ಟೋಬರ್‌ 12ಕ್ಕೆ 5ಜಿ ಸೇವೆ ಆರಂಭ:
    ದೇಶದಲ್ಲಿ ಅಕ್ಟೋಬರ್ 12ರಿಂದ 5ಜಿ ಸೇವೆ ಆರಂಭಗೊಳ್ಳಲಿದ್ದು, ಮುಂದಿನ ಕೆಲವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲೂ 5ಜಿ ಸೇವೆ ದೊರಕುವಂತೆ ಮಾಡುತ್ತೇವೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

    ಮೂಲಗಳ ಪ್ರಕಾರ ಮೊದಲ ಭಾಗವಾಗಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗುತ್ತಿದೆ. ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‍ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲ ಹಂತದ 5ಜಿ ಸೇವೆ ಆರಂಭವಾಗಲಿದೆ. ಈ ನಗರಗಳಲ್ಲಿ ಆಯ್ದ ಕೆಲ ಪ್ರದೇಶಗಳಲ್ಲಿ ಜನರಿಗೆ 5ಜಿ ಸೇವೆ ದೊರಕುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • No Follow Up, ಯಾವುದೇ ಕಾರಿಡಾರ್‌ ಸುತ್ತಿಲ್ಲ, 30 ವರ್ಷದಲ್ಲಿ ಇದು ಫಸ್ಟ್‌ – ಕೇಂದ್ರವನ್ನು ಹೊಗಳಿದ ಸುನಿಲ್‌ ಮಿತ್ತಲ್‌

    No Follow Up, ಯಾವುದೇ ಕಾರಿಡಾರ್‌ ಸುತ್ತಿಲ್ಲ, 30 ವರ್ಷದಲ್ಲಿ ಇದು ಫಸ್ಟ್‌ – ಕೇಂದ್ರವನ್ನು ಹೊಗಳಿದ ಸುನಿಲ್‌ ಮಿತ್ತಲ್‌

    ನವದೆಹಲಿ: ಯಾವುದೇ ಗಡಿಬಿಡಿ ಇಲ್ಲ, ಯಾವುದೇ ಫಾಲೋ ಅಪ್‌ ಇಲ್ಲ. ಯಾವುದೇ ಕಾರಿಡಾರ್ ಸುತ್ತದೇ ನಮಗೆ ಹಂಚಿಕೆ ಪತ್ರ ಸಿಕ್ಕಿದೆ. 30 ವರ್ಷದಲ್ಲಿ ಮೊದಲ ಬಾರಿಗೆ ಈ ಅನುಭವವಾಗಿದೆ ಎಂದು ಭಾರತಿ ಎಂಟರ್‌ಪ್ರೈಸಸ್‌ ಮುಖ್ಯಸ್ಥ ಸುನಿಲ್‌ ಮಿತ್ತಲ್‌ ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ.

    5G ಸ್ಪೆಕ್ಟ್ರಮ್‌ಗಾಗಿ ಮೊದಲ ಕಂತು ಪಾವತಿಸಿದ ಕೆಲವೇ ಗಂಟೆಗಳಲ್ಲಿ ಟೆಲಿಕಾಂ ಕಂಪನಿಗಳಿಗೆ ಹಂಚಿಕೆ ಪತ್ರಗಳನ್ನು ದೂರಸಂಪರ್ಕ ಸಚಿವಾಲಯ ನೀಡಿದೆ. ಕೇಂದ್ರ ಸರ್ಕಾರ ವೇಗವಾಗಿ ಹಂಚಿಕೆ ಪತ್ರ ನೀಡಿದ್ದಕ್ಕೆ ಸುನಿಲ್‌ ಮಿತ್ತಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    “ಯಾವುದೇ ಗಡಿಬಿಡಿಯಿಲ್ಲ, ಯಾವುದೇ ಫಾಲೋ ಅಪ್‌ ಇಲ್ಲ. ಯಾವುದೇ ಕಾರಿಡಾರ್‌ ಸುತ್ತಿಲ್ಲ. ದೂರಸಂಪರ್ಕ ಇಲಾಖೆಯ 30 ವರ್ಷಗಳ ವ್ಯವಹಾರದಲ್ಲಿ ಮೊದಲ ಬಾರಿಗೆ ಈ ರೀತಿಯ ಅನುಭವವಾಗಿದೆ. Ease of doing business ಅಂದ್ರೆ ಇದು. ವ್ಯವಹಾರ ಅಂದರೆ ಹೀಗಿರಬೇಕು” ಎಂದು ಶ್ಲಾಘಿಸಿದ್ದಾರೆ.

    5G ಸ್ಪೆಕ್ಟ್ರಮ್ ಖರೀದಿ ಸಂಬಂಧ ಏರ್‌ಟೆಲ್‌ ಬುಧವಾರ 8,312.4 ಕೋಟಿ ರೂ. ಪಾವತಿಸಿದೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ಕೆಲಸದಲ್ಲಿ ನಾಯಕತ್ವ. ಏನು ಬದಲಾವಣೆ! ಇದು ರಾಷ್ಟ್ರವನ್ನು ಪರಿವರ್ತಿಸುವ ಬದಲಾವಣೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಅದರ ಕನಸುಗಳಿಗೆ ಇದು ಶಕ್ತಿ ನೀಡುತ್ತದೆ ಎಂದು ಮಿತ್ತಲ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಈ ತಿಂಗಳ ಕೊನೆಯಲ್ಲಿ 5G ಸೇವೆಯನ್ನು ನೀಡಲು ಏರ್‌ಟೆಲ್‌ ಮುಂದಾಗಿದೆ. 5G ತರಂಗಾಂತರ ಹರಾಜಿನಲ್ಲಿ 43,084 ಕೋಟಿ ರೂ. ಮೌಲ್ಯದ ವಿವಿಧ ಬ್ಯಾಂಡ್‌ಗಳಲ್ಲಿ 19,867 MHz ಸ್ಪೆಕ್ಟ್ರಮ್ ಅನ್ನು ಏರ್‌ಟೆಲ್‌ ಖರೀದಿಸಿದೆ.

    ಇಂದು ಬೆಳಿಗ್ಗೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಕೂ ಮಾಡಿ, 5G ಅಪ್‌ಡೇಟ್: ಸ್ಪೆಕ್ಟ್ರಮ್ ನಿಯೋಜನೆ ಪತ್ರವನ್ನು ನೀಡಲಾಗಿದೆ. 5G ಆರಂಭಿಸಲು ಸಿದ್ಧವಾಗುವಂತೆ  ಟೆಲಿಕಾಂ ಕಂಪನಿಗಳನ್ನು ವಿನಂತಿಸಲಾಗುತ್ತಿದೆ ಎಂದಿದ್ದರು.

    Live Tv
    [brid partner=56869869 player=32851 video=960834 autoplay=true]

  • 5G ನೆಟ್‌ವರ್ಕ್ ರೋಲ್‌ಔಟ್ ಸ್ಪರ್ಧೆಯಲ್ಲಿ ಟೆಲಿಕಾಂ ದೈತ್ಯಗಳು

    5G ನೆಟ್‌ವರ್ಕ್ ರೋಲ್‌ಔಟ್ ಸ್ಪರ್ಧೆಯಲ್ಲಿ ಟೆಲಿಕಾಂ ದೈತ್ಯಗಳು

    ನವದೆಹಲಿ: 5ಜಿ ನೆಟ್‌ವರ್ಕ್ ಹರಾಜು ಪ್ರಕ್ರಿಯೆ ಮುಗಿದು ಇದೀಗ ಟೆಲಿಕಾಂ ಕಂಪನಿಗಳು ರೋಲ್‌ಔಟ್ ಸ್ಪರ್ಧೆಗೆ ಇಳಿದಿವೆ. ಈಗಾಗಲೇ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಈ ತಿಂಗಳ ಒಳಗಾಗಿಯೇ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದಾಗಿ ತಿಳಿಸಿವೆ.

    ಆಗಸ್ಟ್ 15ರಂದು ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳಲಿದ್ದು, ಜಿಯೋ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಿಹಿ ಗಳಿಗೆಯಲ್ಲೇ 5ಜಿ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    ಇದರ ನಡುವೆಯೇ ಭಾರ್ತಿ ಏರ್‌ಟೆಲ್ ಕೂಡಾ ಆಗಸ್ಟ್ ಅಂತ್ಯದ ವೇಳೆಗೆ ಭಾರತದಲ್ಲಿ 5ಜಿ ನೆಟ್‌ವರ್ಕ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಆಗಸ್ಟ್ ತಿಂಗಳಿನಲ್ಲಿಯೇ 5ಜಿ ಯೋಜನೆಯನ್ನು ಪ್ರಾರಂಭಿಸಲು ಎರಿಕ್ಸನ್, ನೋಕಿಯಾ ಹಾಗೂ ಸ್ಯಾಮ್‌ಸಂಗ್ ಕಂಪನಿಗಳೊಂದಿಗೆ 5ಜಿ ನೆಟ್‌ವರ್ಕ್ ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಏರ್‌ಟೆಲ್ ಘೋಷಿಸಿದೆ.

    ಕಳೆದ ವಾರ ಟೆಲಿಕಾಂ ಇಲಾಖೆ ನಡೆಸಿದ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ವಿಐ(ವೊಡಾಫೋನ್ ಐಡಿಯಾ), ಹಾಗೂ ಅದಾನಿ ಎಂಟರ್‌ಪ್ರೈಸಸ್‌ಗಳು ಭಾಗವಹಿಸಿದ್ದವು. ಜುಲೈ 26ರಂದು ಪ್ರಾರಂಭವಾಗಿದ್ದ ಹರಾಜು ಪ್ರಕ್ರಿಯೆ ಆಗಸ್ಟ್ 1 ರಂದು ಮುಕ್ತಾಯಗೊಂಡು, ಒಟ್ಟು ಬಿಡ್ ಮೊತ್ತ 1.5 ಲಕ್ಷ ಕೋಟಿ ರೂ. ತಲುಪಿತ್ತು. ಇದನ್ನೂ ಓದಿ: 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    ಹರಾಜಿನಲ್ಲಿ ರಿಲಯನ್ಸ್ ಜಿಯೋ 700 MHz, 800 MHz, 1800 MHz, 3300 MHz ಮತ್ತು 26 GHz ಬ್ಯಾಂಡ್‌ಗಳಲ್ಲಿ 5ಜಿ ಸ್ಪೆಕ್ಟ್ರಂ ಖರೀದಿಸಿದೆ. ಏರ್‌ಟೆಲ್, 900 MHz, 1800 MHz, 2100 MHz, 3300 MHz ಮತ್ತು 26 GHz ಸ್ಪೆಕ್ಟ್ರಂನಲ್ಲಿ 19867.8 MHz ಸ್ಪೆಕ್ಟ್ರಂ ಅನ್ನು ಬಿಡ್ ಮಾಡಿ ಖರೀದಿಸಿದೆ.

    Live Tv
    [brid partner=56869869 player=32851 video=960834 autoplay=true]

  • 5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ

    5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ

    ನವದೆಹಲಿ: ಜುಲೈ 26ರಂದು ಪ್ರಾರಂಭವಾಗಿದ್ದ ಭಾರತದ 5ಜಿ ಸ್ಪೆಕ್ಟ್ರಂ ಹರಾಜು ಸೋಮವಾರ ಮುಕ್ತಾಯಗೊಂಡಿದೆ. 1.50 ಲಕ್ಷ ಕೋಟಿ ರೂ. ಮೌಲ್ಯದ ಸ್ಪೆಕ್ಟ್ರಂ ಮಾರಾಟವಾಗಿದ್ದು, ಮುಖೇಶ್ ಅಂಬಾನಿಯವರ ಜಿಯೋ ಅಗ್ರ ಬಿಡ್ಡರ್ ಆಗಿ ಹೊರಹೊಮ್ಮಿದೆ ಎಂದು ವರದಿಗಳು ತಿಳಿಸಿವೆ.

    ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ಪ್ರತಿಸ್ಪರ್ಧಿಗಳಾಗಿ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಹಾಗೂ ಗೌತಮ್ ಅದಾನಿಯವರ ಅದಾನಿ ಎಂಟರ್‌ಪ್ರೈಸಸ್ 5ಜಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿವೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    ಕಳೆದ ಬಾರಿ 4ಜಿ ನೆಟ್‌ವರ್ಕ್ 77 ಸಾವಿರ ಕೋಟಿ ರೂ.ಗೆ ಹಾಗೂ 3ಜಿ ನೆಟ್‌ವರ್ಕ್ 50 ಕೋಟಿ ರೂ.ಗೆ ಹರಾಜಾಗಿತ್ತು. ಹೊಸ 5ಜಿ ನೆಟ್‌ವರ್ಕ್ 4ಜಿ ಗಿಂತಲೂ ದ್ವಿಗುಣ ಅಲ್ಟ್ರಾ ಹೈ ಸ್ಪೀಡ್ ಮೊಬೈಲ್ ಇಂಟರ್‌ನೆಟ್ ಸಂಪರ್ಕವನ್ನು ನೀಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಹಿಟ್ಲರ್‌ ವಾಚ್‌ ಹರಾಜು – ಮೊತ್ತ ಎಷ್ಟು ಗೊತ್ತಾ?

    ಈ ವರ್ಷದ ಅಂತ್ಯದ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆಗಳನ್ನು ನಾವು ನಿರೀಕ್ಷಿಸಬಹುದು ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]